bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
Exodus 39
Exodus 39
Kannada Bible (KNCL) BSI 2016
← Chapter 38
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 32
Chapter 33
Chapter 34
Chapter 35
Chapter 36
Chapter 37
Chapter 38
Chapter 39
Chapter 40
Chapter 40 →
1
ಸರ್ವೇಶ್ವರ ಸ್ವಾಮಿ ಮೋಶೆಗ ಆಜ್ಞಾಪಿಸಿದಂತೆ ಆ ನೀಲಿ, ಊದ ಹಾಗು ಕಡುಗೆಂಪುವರ್ಣಗಳುಳ್ಳ ದಾರದಿಂದ ದೇವಮಂದಿರದ ಸೇವೆಗೆ ಅಲಂಕಾರವಾದ ವಸ್ತ್ರಗಳನ್ನು ಮತ್ತು ಆರೋನನಿಗೆ ದೀಕ್ಷಾವಸ್ತ್ರಗಳನ್ನು ಮಾಡಿದರು.
2
ಮಹಾಯಾಜಕನ ‘ಏಫೋದ್’ ಎಂಬ ಕವಚವನ್ನು ಹುರಿನಾರಿನ ಬಟ್ಟೆಯಿಂದಲೂ ಮತ್ತು ನೀಲಿ, ಊದ ಹಾಗು ಕಡುಗೆಂಪುವರ್ಣಗಳುಳ್ಳ ದಾರದಿಂದಲೂ ಮಾಡಿದರು.
3
ನೀಲಿ, ಊದ ಹಾಗು ಕಡುಗೆಂಪು ವರ್ಣಗಳುಳ್ಳ ದಾರದೊಡನೆ ಮತ್ತು ನಾರಿನ ಬಟ್ಟೆಯೊಡನೆ ಕಲಾತ್ಮಕ ಕೆಲಸದವರ ಪದ್ಧತಿಯ ಮೇರೆಗೆ ಕಸೂತಿ ಕೆಲಸ ಮಾಡುವುದಕ್ಕಾಗಿ ಬಂಗಾರವನ್ನು ತಟ್ಟಿ ತಗಡುಗಳನ್ನು ಮಾಡಿ, ಸಣ್ಣ ಸಣ್ಣ ಎಳೆಗಳಾಗಿ ಕತ್ತರಿಸಿದರು
4
ಆ ಕವಚಕ್ಕೆ ಹೆಗಲಿನ ಮೇಲೆ ಎರಡು ಪಟ್ಟಿಗಳನ್ನು ಮಾಡಿದರು. ಅದರ ಎರಡು ಕೊನೆಗಳನ್ನು ಜೋಡಿಸಲಾಯಿತು.
5
ಕವಚದ ಮೇಲಿದ್ದ ಅಪೂರ್ವವಾದ ಕಸೂತಿ ನಡುಕಟ್ಟು ಕವಚಕ್ಕೆ ಅಂಗವಾಗಿದ್ದು ಅದರಂತೆಯೇ ಹುರಿನಾರಿನ ಬಟ್ಟೆಯಿಂದಲೂ, ಚಿನ್ನದ ದಾರದಿಂದಲೂ ಮತ್ತು ನೀಲಿ, ಊದ ಹಾಗು ಕಡುಗೆಂಪು ವರ್ಣಗಳುಳ್ಳ ದಾರದಿಂದಲು ತಯಾರಿಸಲಾಗಿತ್ತು. ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಮಾಡಲಾಗಿತ್ತು.
6
ಮುದ್ರಾರತ್ನವನ್ನು ಕೆತ್ತುವ ರೀತಿಯಲ್ಲಿ ಎರಡು ಗೋಮೇಧಕ ರತ್ನಗಳಲ್ಲಿ ಇಸ್ರಯೇಲರ ಹನ್ನೆರಡು ಕುಲಗಳ ಹೆಸರುಗಳನ್ನು ಕೆತ್ತಿ ಆ ರತ್ನಗಳನ್ನು ಕುಂದಣದಲ್ಲಿ ಕಟ್ಟಿದರು.
7
ಆ ಎರಡು ರತ್ನಗಳು ಇಸ್ರಯೇಲರ ಜ್ಞಾಪಕಾರ್ಥವಾದ ರತ್ನಗಳಾಗುವಂತೆ ಅವುಗಳನ್ನು ಕವಚದ ಹೆಗಲಿನ ಮೇಲಿರುವ ಪಟ್ಟಿಗಳಲ್ಲಿ ಬಿಗಿಸಿದರು. ಸರ್ವೇಶ್ವರ ಮೋಶೆಗೆ ಹಾಗೆಯೇ ಆಜ್ಞಾಪಿಸಿದ್ದರು.
8
‘ಏಫೋದ್’ ಕವಚದಂತೆಯೇ, ಚಿನ್ನದ ದಾರದಿಂದಲೂ ನೀಲಿ, ಊದ ಹಾಗು ಕಡುಗೆಂಪುವರ್ಣಗಳುಳ್ಳ ದಾರದಿಂದಲೂ ಹುರಿನಾರಿನ ಬಟ್ಟೆಯಲ್ಲಿ ಕಸೂತಿ ಕೆಲಸದಿಂದ ಕೂಡಿದ ಒಂದು ಚೀಲದಂಥ ವಕ್ಷಪದಕವನ್ನು ಮಾಡಿದರು.
9
ಅದು ಚಚ್ಚೌಕವಾಗಿತ್ತು, ಎರಡು ಪದರುಳ್ಳದಾಗಿತ್ತು; ಅದು ಒಂದು ಗೇಣುದ್ದವೂ, ಒಂದು ಗೇಣಗಲವೂ ಇತ್ತು.
10
ಅದರ ಮುಂಭಾಗದಲ್ಲಿ ನಾಲ್ಕು ಸಾಲುಗಳಾಗಿ ರತ್ನಗಳನ್ನು ಖಚಿಸಿದರು. ಮೊದಲನೆಯ ಸಾಲಿನಲ್ಲಿ ಮಾಣಿಕ್ಯ, ಪುಷ್ಯರಾಗ ಸ್ಫಟಿಕಗಳು,
11
ಎರಡನೆಯ ಸಾಲಿನಲ್ಲಿ ಕೆಂಪರಲು ನೀಲ ಪಚ್ಚೆಗಳು,
12
ಮೂರನೆಯ ಸಾಲಿನಲ್ಲಿ ಸುವರ್ಣರತ್ನ, ಗೋಮೇಧಕ ಧೂಮ್ರಮಣಿಗಳು,
13
ನಾಲ್ಕನೆಯ ಸಾಲಿನಲ್ಲಿ ಪೀತರತ್ನ, ಬೆರುಲ್ಲ, ವೈಢೂರ್ಯಗಳೂ ಚಿನ್ನದ ಜವೆಯ ಕಲ್ಲುಗಳಲ್ಲಿ ಸೇರಿಸಲಾಗಿದ್ದವು.
14
ಇಸ್ರಯೇಲರ ಕುಲಗಳ ಸಂಖ್ಯೆಯ ಪ್ರಕಾರ ಹನ್ನೆರಡು ರತ್ನಗಳಿದ್ದವು. ಮುದ್ರಾರತ್ನದಲ್ಲಿ ಕೆತ್ತುವ ರೀತಿಯಲ್ಲಿ ಒಂದೊಂದು ರತ್ನದಲ್ಲಿ ಒಂದೊಂದು ಕುಲದ ಹೆಸರನ್ನು ಕೆತ್ತಲಾಗಿತ್ತು.
15
ವಕ್ಷಪದಕದ ಮೇಲ್ಗಡೆಯಲ್ಲಿ ಹುರಿಗಳಂತಿರುವ ಚೊಕ್ಕಬಂಗಾರದ ಸರಪಣಿಗಳನ್ನು ಹೆಣಿಗೇ ಕೆಲಸದಿಂದ ಮಾಡಿದರು.
16
ಎರಡು ಚಿನ್ನದ ಜವೆಗಳನ್ನೂ ಎರಡು ಚಿನ್ನದ ಉಂಗುರಗಳನ್ನೂ ಮಾಡಿ ಆ ಉಂಗುರಗಳನ್ನು ಫಲಕದ ಎರಡು ಮೂಲೆಗಳಲ್ಲಿ ತಗಲಿಸಿದರು.
17
ಹೆಣಿಗೆ ಕೆಲಸದ ಆ ಎರಡು ಚಿನ್ನದ ಸರಪಣಿಗಳನ್ನು ಫಲಕದ ಮೂಲೆಗಳಲ್ಲಿರುವ ಉಂಗುರಗಳಿಗೆ ಸಿಕ್ಕಿಸಿದರು.
18
ಹೆಣಿಗೆ ಕೆಲಸದ ಆ ಸರಪಣಿಗಳ ಕೊನೆಗಳನ್ನು ಕವಚದ ಹೆಗಲಿನ ಪಟ್ಟಿಗಳಲ್ಲಿರುವ ಎರಡು ಜವೆಗಳ ಮುಂಭಾಗಕ್ಕೆ ಸಿಕ್ಕಿಸಿದರು.
19
ಅದಲ್ಲದೆ ಎರಡು ಚಿನ್ನದ ಉಂಗುರಗಳನ್ನು ಮಾಡಿ ಪದಕದ ಒಳಗಣ ಅಂಚಿನ ಮೂಲೆಗಳಲ್ಲಿ ಕವಚದ ಹತ್ತಿರದಲ್ಲೇ ಇಟ್ಟರು.
20
ಮತ್ತು ಬೇರೆ ಎರಡು ಚಿನ್ನದ ಉಂಗುರಗಳನ್ನು ಮಾಡಿ ಕವಚದ ಎರಡು ಹೆಗಲಿನ ಪಟ್ಟಿಗಳ ಮುಂಭಾಗದ ಕೆಳಗೆ, ಕವಚವನ್ನು ಜೋಡಿಸಿರುವ ಸ್ಥಳದ ಹತ್ತಿರ ಆ ಚಿತ್ರಕಲೆಯಿಂದ ಕೂಡಿದ ನಡುಕಟ್ಟಿನ ಮೇಲ್ಗಡೆಯಲ್ಲಿ ಇರಿಸಿದರು.
21
ಪದಕವು ವಿಚಿತ್ರವಾದ ನಡುಕಟ್ಟಿನ ಮೇಲ್ಗಡೆಯಲ್ಲಿ ಬಿಗಿಯಾಗಿರುವಂತೆಯೂ ಕವಚದಿಂದ ಕಳಚಿಬೀಳದಂತೆಯೂ ಅದರ ಉಂಗುರಗಳನ್ನು ಕವಚದ ಉಂಗುರಗಳಿಗೆ ನೀಲಿದಾರದಿಂದ ಕಟ್ಟಿದರು. ಸರ್ವೇಶ್ವರ ಮೋಶೆಗೆ ಹಾಗೆಯೇ ಆಜ್ಞಾಪಿಸಿದ್ದರು.
22
ಕವಚದ ಸಂಗಡ ತೊಟ್ಟುಕೊಳ್ಳಬೇಕಾದ ಮೇಲಂಗಿಯನ್ನು ನೀಲಿಬಣ್ಣದ ಬಟ್ಟೆಯಿಂದ ಕಸೂತಿ ಕೆಲಸದಿಂದ ಮಾಡಿದನು.
23
ತಲೆದೂರಿಸುವುದಕ್ಕೆ ಅದರಲ್ಲಿ ಸಂದು ಮಾಡಿ ಅದು ಹರಿಯದಂತೆ ಯುದ್ಧದ ಕವಚದೋಪಾದಿಯಲ್ಲಿ ಆ ಸಂದಿನ ಸುತ್ತಲು ನೇಯ್ಗೆಪಟ್ಟಿಯನ್ನು ಹಾಕಿದನು.
24
ಮೇಲಂಗಿಯ ಅಂಚಿನ ಸುತ್ತಲೂ ನೀಲ, ಊದ ಹಾಗು ಕಡುಗೆಂಪುವರ್ಣಗಳುಳ್ಳ ದಾರದಿಂದ ದಾಳಿಂಬೆ ಹಣ್ಣಿನಂತೆ ಚೆಂಡುಗಳನ್ನು ಮಾಡಿದರು.
25
ಮತ್ತು ಚೊಕ್ಕಬಂಗಾರದಿಂದ ಗೆಜ್ಜೆಗಳನ್ನು ಮಾಡಿ ಮೇಲಂಗಿಯ ಅಂಚಿನಲ್ಲಿ ದಾಳಿಂಬೆ ಚೆಂಡುಗಳ ಸಂಗಡ ಇಟ್ಟರು.
26
ಚಿನ್ನದ ಗೆಜ್ಜೆಯೂ ದಾಳಿಂಬೆಯಂತಿರುವ ಚೆಂಡೂ ಒಂದಾದ ಮೇಲೆ ಒಂದು ದೇವರ ಸೇವೆಗೋಸ್ಕರವಾದ ಆ ಮೇಲಂಗಿಯ ಅಂಚಿನ ಸುತ್ತಲೂ ಇದ್ದವು. ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಅದನ್ನು ಮಾಡಿದರು.
27
ಆರೋನನಿಗೂ ಅವನ ಮಕ್ಕಳಿಗೂ ಸಣ್ಣ ನಾರಿನಿಂದ ಹೆಣಿಗೆ ಕೆಲಸದ ರೀತಿಯಲ್ಲಿ ಅಂಗಿಗಳನ್ನೂ
28
ನಾರಿನಿಂದ ಮಹಾಯಾಜಕನ ಪೇಟವನ್ನೂ ನಾರಿನಿಂದ ಯಾಜಕರ ಅಲಂಕಾರವಾದ ಪೇಟಗಳನ್ನೂ
29
ಹುರಿನಾರಿನಿಂದ ಚಡ್ಡಿಗಳನ್ನೂ ಹುರಿನಾರಿನಿಂದಲೂ ನೀಲಿ, ಊದ ಹಾಗು ಕಡುಗೆಂಪುವರ್ಣಗಳುಳ್ಳ ದಾರದಿಂದಲೂ ಕಸೂತಿ ಕೆಲಸದ ರೀತಿಯಲ್ಲಿ ನಡುಕಟ್ಟನ್ನೂ ಮಾಡಿದರು. ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಅದನ್ನು ಮಾಡಿದರು.
30
ಮತ್ತು ಚೊಕ್ಕಬಂಗಾರದಿಂದ ಪರಿಶುದ್ಧ ಕಿರೀಟದಂಥ ಪಟ್ಟಿಯನ್ನು ಸರ್ವೇಶ್ವರನಿಗೆ ಮಾಡಿ ಮುದ್ರೆಯನ್ನು ಕೆತ್ತುವ ರೀತಿಯಲ್ಲಿ ಅದರಲ್ಲಿ - “ಸರ್ವೇಶ್ವರನಿಗೆ ಮೀಸಲು” ಎಂಬ ಲಿಪಿಯನ್ನು ಬರೆದರು.
31
ಅದನ್ನು ಪೇಟಕ್ಕೆ ಬಿಗಿಸುವುದಕ್ಕಾಗಿ ನೀಲಿದಾರವನ್ನು ಅದಕ್ಕೆ ಕಟ್ಟಿದರು. ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಅದನ್ನು ಮಾಡಿದರು.
32
ಈ ರೀತಿಯಲ್ಲಿ ದೇವದರ್ಶನದ ಗುಡಾರದ ಕೆಲಸವೆಲ್ಲಾ ಸಂಪೂರ್ತಿಯಾಯಿತು. ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಯೇಲರು ಅದನ್ನು ಮಾಡಿದ್ದರು.
33
ಆಗ ಅವರು ಆ ಗುಡಾರವನ್ನು ಮೋಶೆಯ ಬಳಿಗೆ ತೆಗೆದುಕೊಂಡು ಬಂದರು; ಡೇರೆಯನ್ನೂ ಅದಕ್ಕೆ ಸಂಬಂಧಪಟ್ಟದ್ದೆಲ್ಲವನ್ನೂ, ಅಂದರೆ ಅದರ ಕೊಂಡಿಗಳು, ಚೌಕಟ್ಟುಗಳು, ಅಗುಳಿಗಳು, ಕಂಬಗಳು, ಗದ್ದಿಗೇಕಲ್ಲುಗಳು ಇವುಗಳನ್ನೂ;
34
ಹದಮಾಡಿರುವ ಕೆಂಪುಬಣ್ಣದ ಕುರಿದೊಗಲುಗಳಿಂದುಂಟಾದ ಮೇಲ್ಹೊದಿಕೆ, ಕಡಲುಹಂದಿಯ ತೊಗಲುಗಳಿಂದುಂಟಾದ ಮೇಲ್ಹೊದಿಕೆ, (ಮಹಾಪವಿತ್ರ ಸ್ಥಾನವನ್ನು ಮರೆಮಾಡುವ ತೆರೆ) ಇವುಗಳನ್ನೂ;
35
ಆಜ್ಞಾಶಾಸನಗಳ ಮಂಜೂಷ, ಅದರ ಗದ್ದಿಗೆಗಳು, ಕೃಪಾಸನ ಇವುಗಳನ್ನೂ
36
ಮೇಜು, ಅದರ ಉಪಕರಣಗಳು, ಕಾಣಿಕೆಯ ರೊಟ್ಟಿ ಇವುಗಳನ್ನೂ;
37
ಚೊಕ್ಕ ಬಂಗಾರದ ದೀಪವೃಕ್ಷ, ಅದರ ಮೇಲಿಡಬೇಕಾದ ಹಣತೆಗಳು, ಅದರ ಉಪಕರಣಗಳು, ದೀಪಕ್ಕೆ ಬೇಕಾದ ಎಣ್ಣೆ ಇವುಗಳನ್ನೂ;
38
ಚಿನ್ನದ ಧೂಪವೇದಿಕೆ, ಅಭಿಷೇಕತೈಲ, ಸುವಾಸನೆಯುಳ್ಳ ಧೂಪ ಇವುಗಳನ್ನೂ; ಡೇರೆಯ ಬಾಗಿಲಿನ ಪರದೆಯನ್ನೂ;
39
ತಾಮ್ರದ ಬಲಿಪೀಠ, ಅದರ ತಾಮ್ರದ ಜಾಳಿಗೆ, ಅದರ ನೀರಿನ ತೊಟ್ಟಿ, ಅದರ ಪೀಠ ಇವುಗಳನ್ನೂ;
40
ಅಂಗಳದ ತೆರೆಗಳು, ಕಂಬಗಳು, ಗದ್ದಿಗೇಕಲ್ಲುಗಳು ಇವುಗಳನ್ನೂ; ಅಂಗಳದ ಬಾಗಿಲಿನ ಪರದೆ, ಅದರ ಹಗ್ಗಗಳು, ಗೂಟಗಳು ಇವುಗಳನ್ನೂ; ದೇವದರ್ಶನದ ಗುಡಾರದ ಸೇವೆಗೆ ಬೇಕಾದ ಎಲ್ಲಾ ಉಪಕರಣಗಳನ್ನೂ;
41
ದೇವಮಂದಿರದೊಳಗೆ ನಡೆಯುವ ಸೇವೆಗೋಸ್ಕರ ಬೇಕಾದ ಅಲಂಕಾರವಸ್ತ್ರ, ಅಂದರೆ ಆರೋನನಿಗೆ ಬೇಕಾದ ದೀಕ್ಷಾವಸ್ತ್ರ ಯಾಜಕಸೇವೆ ಮಾಡುವವರಾದ ಅವನ ಮಕ್ಕಳಿಗೆ ಬೇಕಾದ ವಸ್ತ್ರ ಇವುಗಳನ್ನೂ ತಂದರು.
42
ಸರ್ವೇಶ್ವರ ಆಜ್ಞಾಪಿಸಿದಂತೆಯೇ ಇಸ್ರಯೇಲರು ಆ ಕೆಲಸವನ್ನೆಲ್ಲಾ ಮಾಡಿದ್ದರು.
43
ಅವರು ಮಾಡಿದ್ದ ಕೆಲಸವನ್ನು ಮೋಶೆ ಪರೀಕ್ಷಿಸಲಾಗಿ ಕರ್ತನ ಅಪ್ಪಣೆಯಂತೆಯೇ ಅವರು ಎಲ್ಲವನ್ನು ಮಾಡಿ ಮುಗಿಸಿದರೆಂದು ತಿಳಿದುಕೊಂಡು ಅವರನ್ನು ಆಶೀರ್ವದಿಸಿದನು.
← Chapter 38
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 32
Chapter 33
Chapter 34
Chapter 35
Chapter 36
Chapter 37
Chapter 38
Chapter 39
Chapter 40
Chapter 40 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
Recommended Reading
Commentary
Exodus Commentaries
→
Devotional
Exodus Devotional Guide
→
Get This Bible
KNCL Study Bible
→