bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
Ezra 6
Ezra 6
Kannada Bible (KNCL) BSI 2016
← Chapter 5
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 7 →
1
ಅರಸ ದಾರ್ಯಾವೆಷನ ಆಜ್ಞಾನುಸಾರ ಬಾಬಿಲೋನಿನ ಭಂಡಾರದಲ್ಲಿದ್ದ ಗ್ರಂಥ ಸಂಗ್ರಹದಲ್ಲಿ ಹುಡುಕಿನೋಡಿದಾಗ
2
ಮೇದ್ಯ ಸಂಸ್ಥಾನದಲ್ಲಿರುವ ಅಹ್ಮೆತಾ ರಾಜಧಾನಿಯಲ್ಲಿ ಒಂದು ಸುರುಳಿ ಸಿಕ್ಕಿತು. ಅದರಲ್ಲಿ ಹೀಗೆ ಬರೆಯಲಾಗಿತ್ತು:
3
“ಅರಸ ಸೈರಸನ ಮೊದಲನೆಯ ವರ್ಷದಲ್ಲಿ, ಅರಸ ಸೈರಸನು ಜೆರುಸಲೇಮಿನ ದೇವಾಲಯದ ಬಗ್ಗೆ ಕೊಟ್ಟ ಅಪ್ಪಣೆ ಇದು: ಬಲವಾದ ಅಸ್ತಿವಾರವನ್ನು ಹಾಕಿ, ಬಲಿಸಮರ್ಪಣೆಗಾಗಿ ಆಲಯವನ್ನು ಪುನಃ ಕಟ್ಟಬೇಕು. ಅದರ ಎತ್ತರ ಇಪ್ಪತ್ತೇಳು ಮೀಟರ್, ಅಗಲ ಇಪ್ಪತ್ತೇಳು ಮೀಟರ್ ಇರಬೇಕು.
4
ದೊಡ್ಡ ಕಲ್ಲುಗಳ ಮೂರು ವರಸೆಗಳಾದ ಮೇಲೆ, ಹೊಸ ಮರದ ಒಂದು ವರಸೆಯನ್ನು ಹಾಕಿ ಕಟ್ಟಬೇಕು. ಇದರ ವೆಚ್ಚವೆಲ್ಲಾ ರಾಜಭಂಡಾರದಿಂದ ಕೊಡಲಾಗುವುದು.
5
ಇದಲ್ಲದೆ, ನೆಬೂಕದ್ನೆಚ್ಚರನು ಜೆರುಸಲೇಮಿನ ದೇವಾಲಯದಿಂದ ಬಾಬಿಲೋನಿಗೆ ತೆಗೆದುಕೊಂಡು ಬಂದ ಬೆಳ್ಳಿಬಂಗಾರದ ದೇವಸ್ಥಾನದ ಪಾತ್ರೆಗಳನ್ನು ಹಿಂದಕ್ಕೆ ಕೊಡಬೇಕು. ಅವುಗಳನ್ನೆಲ್ಲ ಮೊದಲಿದ್ದ ಸ್ಥಳಕ್ಕೆ ಅಂದರೆ, ಜೆರುಸಲೇಮಿನ ದೇವಾಲಯಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಡಬೇಕು.”
6
ಬಳಿಕ ದಾರ್ಯಾವೆಷನು ಬರೆದು ಕಳುಹಿಸಿದ್ದೇನೆಂದರೆ, “ನದಿಯಾಚೆಯ ಪ್ರದೇಶಗಳ ಅಧಿಪತಿಯಾದ ತತ್ತೆನೈ, ಶೆತರ್ಬೋಜೆನೈಗೆ ಹಾಗು ನದಿಯಾಚೆಯಲ್ಲಿ ಇವರ ಜೊತೆಗಾರರಾದ ಅಪರ್ಸತ್ಯಾಯರು ಇವರಿಗೆ: ನೀವು ಆ ಜನರ ಗೊಡವೆಗೆ ಹೋಗಬೇಡಿ.
7
ಆ ದೇವಾಲಯವನ್ನು ಕಟ್ಟುವ ಕೆಲಸಕ್ಕೆ ಅಡ್ಡಿಮಾಡಬೇಡಿ; ಜುದೇಯದ ರಾಜ್ಯಪಾಲ ಮತ್ತು ಯೆಹೂದ್ಯರ ಹಿರಿಯರೇ ಅದನ್ನು ಅದರ ಸ್ಥಳದಲ್ಲಿ ಕಟ್ಟಲಿ.
8
ಆ ದೇವಾಲಯವನ್ನು ಕಟ್ಟುವುದಕ್ಕಾಗಿ ನೀವು ಯೆಹೂದ್ಯರ ಹಿರಿಯರಿಗೆ ರಾಜರ ಸೊತ್ತಿನಿಂದ ಅಂದರೆ, ನದಿಯಾಚೆಯ ಪ್ರಾಂತ್ಯಗಳ ತೆರಿಗೆಯಿಂದ ತಡಮಾಡದೆ ಎಲ್ಲ ವೆಚ್ಚವನ್ನು ಕೊಡಬೇಕು.
9
ಪರಲೋಕ ದೇವರಿಗೆ ದಹನಬಲಿಗಳನ್ನು ಸಮರ್ಪಿಸಲು ಬೇಕಾದ ಹೋರಿ, ಟಗರು, ಕುರಿಗಳನ್ನೂ ಗೋದಿ, ಉಪ್ಪು, ದ್ರಾಕ್ಷಾರಸ, ಎಣ್ಣೆ ಇವುಗಳನ್ನೂ ಜೆರುಸಲೇಮಿನ ಯಾಜಕರು ಹೇಳುವ ಪ್ರಕಾರ ಪ್ರತಿದಿನ ತಪ್ಪದೆ ಒದಗಿಸಿಕೊಡಬೇಕೆಂದು ಆಜ್ಞಾಪಿಸುತ್ತೇನೆ.
10
ಅವರಾದರೋ ಪರಲೋಕ ದೇವರಿಗೆ ಸುಗಂಧಹೋಮಗಳನ್ನು ಸಮರ್ಪಿಸಿ, ರಾಜನ ಮತ್ತು ರಾಜಪುತ್ರರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಮಾಡಲಿ.
11
ಈ ನನ್ನ ಆಜ್ಞೆಯನ್ನು ಯಾವನಾದರೂ ಬದಲಾಯಿಸುವುದಾದರೆ, ಅವನ ಮನೆಯಿಂದಲೇ ಒಂದು ತೊಲೆಯನ್ನು ತೆಗೆದು ಅದನ್ನು ಶೂಲವನ್ನಾಗಿ ಮಾಡಿ, ಅದಕ್ಕೆ ಅವನನ್ನು ಏರಿಸಬೇಕು; ಹಾಗು ಆ ಮನೆಯನ್ನು ತಿಪ್ಪೆಯನ್ನಾಗಿ ಮಾಡಿಬಿಡಬೇಕು. ಇದು ನನ್ನ ತೀರ್ಮಾನ.
12
ತಮ್ಮ ಹೆಸರನ್ನು ಸ್ಥಾಪಿಸುವುದಕ್ಕಾಗಿ ಆ ಸ್ಥಳವನ್ನು ಆರಿಸಿಕೊಂಡ ದೇವರು, ಈ ಆಜ್ಞೆಯನ್ನು ಬದಲಿಸುವುದಕ್ಕಾಗಲಿ, ಜೆರುಸಲೇಮಿನ ದೇವಾಲಯವನ್ನು ನಾಶಮಾಡುವುದಕ್ಕಾಗಲಿ, ಕೈಯೆತ್ತುವ ಪ್ರತಿಯೊಬ್ಬ ರಾಜನನ್ನೂ ಪ್ರತಿಯೊಂದು ಜನಾಂಗವನ್ನೂ ನಾಶಮಾಡಲಿ! ದಾರ್ಯಾವೆಷನಾದ ನಾನು ಈ ಆಜ್ಞೆಯನ್ನು ಕೊಟ್ಟಿದ್ದೇನೆ. ಇದನ್ನು ಶ್ರದ್ಧೆಯಿಂದ ಕೈಗೊಳ್ಳತಕ್ಕದ್ದು.”
13
ಅರಸ ದಾರ್ಯಾವೆಷನು, ಈ ಆಜ್ಞೆಯನ್ನು ಕೊಟ್ಟಿದ್ದರಿಂದ ನದಿಯ ಈಚೆಯ ಅಧಿಪತಿಯಾದ ತತ್ತೆನೈಯ ಹಾಗು ಶೆತರ್ಬೋಜೆನೈಯ ಮತ್ತು ಅವರ ಜೊತೆಗಾರರು ಜಾಗರೂಕರಾಗಿ ಅದನ್ನು ಪಾಲಿಸಿದರು.
14
ಯೆಹೂದ್ಯರ ಹಿರಿಯರು ಪ್ರವಾದಿ ಹಗ್ಗೈ ಹಾಗು ಇದ್ದೋವಿನ ಮಗ ಜೆಕರೀಯ ಅವರ ಪ್ರಬೋಧನೆಯಿಂದ ಪ್ರೇರಿತರಾಗಿ, ಕಟ್ಟುವ ಕೆಲಸವನ್ನು ಮುಂದುವರಿಸಿದರು. ಇಸ್ರಯೇಲ್ ದೇವರ ಆಜ್ಞಾನುಸಾರ ಪರ್ಷಿಯದ ರಾಜ ಸೈರಸನ, ದಾರ್ಯಾವೆಷ್ ಹಾಗು ಅರ್ತಷಸ್ತ ಅವರ ಅಪ್ಪಣೆಯ ಆಧಾರದಿಂದ ಕಟ್ಟಡವನ್ನು ಮುಗಿಸಿದರು.
15
ಅರಸ ದಾರ್ಯಾವೆಷನ ಆಳ್ವಿಕೆಯ ಆರನೆಯ ವರ್ಷದ ಫಾಲ್ಗುಣ ಮಾಸದ ಮೂರನೆಯ ದಿನದಲ್ಲಿ ಆಲಯವನ್ನು ಪೂರೈಸಿದರು.
16
ಯಾಜಕರು, ಲೇವಿಯರು ಹಾಗು ಸೆರೆಯಿಂದ ಹಿಂದಿರುಗಿ ಬಂದ ಬೇರೆ ಇಸ್ರಯೇಲರು ಸಂತೋಷದಿಂದ ಆ ದೇವಾಲಯದ ಪ್ರತಿಷ್ಠೆಯನ್ನು ಆಚರಿಸಿದರು.
17
ಅವರು ಆ ದೇವಾಲಯದ ಪ್ರತಿಷ್ಠೆಗಾಗಿ ನೂರು ಹೋರಿ, ಇನ್ನೂರು ಟಗರು ಹಾಗು ನಾನೂರು ಕುರಿಮರಿಗಳನ್ನು ಅರ್ಪಿಸಿದರು. ಅಲ್ಲದೆ ಇಸ್ರಯೇಲರ ದೋಷಪರಿಹಾರಾರ್ಥವಾಗಿ, ಅವರ ಕುಲಗಳ ಸಂಖ್ಯಾನುಸಾರ, ಹನ್ನೆರಡು ಹೋತಗಳನ್ನೂ ಸಮರ್ಪಿಸಿದರು.
18
ಆಮೇಲೆ ಯಾಜಕರ ಮತ್ತು ಲೇವಿಯರ ಆಯಾ ವರ್ಗಗಳನ್ನು ಮೋಶೆಯ ಧರ್ಮಶಾಸ್ತ್ರನಿಯಮದ ಪ್ರಕಾರ, ಜೆರುಸಲೇಮಿನ ದೇವರ ಸೇವೆಗೆ ನೇಮಿಸಿದರು.
19
ಸೆರೆಯಿಂದ ಬಂದವರು ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದಲ್ಲಿ ಪಾಸ್ಕವನ್ನು ಆಚರಿಸಿದರು.
20
ಯಾಜಕರು ಹಾಗು ಲೇವಿಯರು ತಮ್ಮನ್ನು ಶುದ್ಧಿಪಡಿಸಿಕೊಂಡರು. ಎಲ್ಲರೂ ಶುದ್ಧರಾದ ನಂತರ ಲೇವಿಯರು ಸೆರೆಯಿಂದ ಬಂದವರಿಗಾಗಿ, ತಮ್ಮ ಬಂಧುಗಳಾದ ಯಾಜಕರಿಗಾಗಿ ಹಾಗು ತಮಗಾಗಿ ಪಾಸ್ಕದ ಕುರಿಮರಿಗಳನ್ನು ವಧಿಸಿದರು.
21
ಸೆರೆಯಿಂದ ಬಂದ ಇಸ್ರಯೇಲರು ಮತ್ತು ಇಸ್ರಯೇಲ್ ದೇವರಾದ ಸರ್ವೇಶ್ವರನನ್ನು ಅರಸುವುದಕ್ಕಾಗಿ, ದೇಶನಿವಾಸಿಗಳ ಅಶುದ್ಧತ್ವವನ್ನು ತೊರೆದು ಇವರೊಡನೆ ಕೂಡಿಕೊಂಡ ಎಲ್ಲರು, ಪಾಸ್ಕಭೋಜನ ಮಾಡಿದರು.
22
ಇದಲ್ಲದೆ, ಆಡಂಬರದಿಂದ ಏಳು ದಿವಸಗಳವರೆಗೂ ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಆಚರಿಸಿದರು. ಏಕೆಂದರೆ, ಇಸ್ರಯೇಲ್ ದೇವರ ಆಲಯವನ್ನು ಕಟ್ಟುವುದರಲ್ಲಿ ಅಸ್ಸೀರಿಯದ ಅರಸ, ತಮಗೆ ಸಹಾಯಮಾಡುವಂತೆ ಸರ್ವೇಶ್ವರ ಅವನ ಮನಪರಿವರ್ತಿಸಿ, ಅವರಿಗೆ ಸಂತೋಷವನ್ನು ಉಂಟುಮಾಡಿದ್ದರು.
← Chapter 5
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 7 →
All chapters:
1
2
3
4
5
6
7
8
9
10