bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
Hosea 1
Hosea 1
Kannada Bible (KNCL) BSI 2016
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 2 →
1
ಜುದೇಯ ನಾಡಿನಲ್ಲಿ ಉಜ್ಜೀಯ, ಯೋತಾಮ, ಆಹಾಜ ಮತ್ತು ಹಿಜ್ಕೀಯ ಇವರು ಅರಸರಾಗಿದ್ದಾಗ ಹಾಗೂ ಇಸ್ರಯೇಲ್ ನಾಡಿನಲ್ಲಿ ಯೋವಾಷನ ಮಗ ಯಾರೊಬ್ಬಾಮನು ಆಳುತ್ತಿದ್ದ ಕಾಲದಲ್ಲಿ, ಬೆಯೇರಿಯನ ಮಗನಾದ ಹೊಶೇಯನಿಗೆ ದೇವರು ದಯಪಾಲಿಸಿದ ಸಂದೇಶವಿದು:
2
ಸರ್ವೇಶ್ವರಸ್ವಾಮಿ ಪ್ರಥಮವಾಗಿ ಹೊಶೇಯನ ಸಂಗಡ ಮಾತನಾಡುತ್ತಾ ಆತನಿಗೆ ಹೇಳಿದ್ದೇನೆಂದರೆ: “ನೀನು ಹೋಗಿ ವ್ಯಭಿಚಾರಿಣಿಯೊಬ್ಬಳನ್ನು ಮದುವೆ ಮಾಡಿಕೊ. ಆಕೆಗೆ ವ್ಯಭಿಚಾರದಿಂದಾಗುವ ಮಕ್ಕಳನ್ನು ಸೇರಿಸಿಕೊ. ಏಕೆಂದರೆ, ನನ್ನ ಪ್ರಜೆ ನನ್ನನ್ನು ತೊರೆದುಬಿಟ್ಟು ವ್ಯಭಿಚಾರದಲ್ಲಿ ಮುಳುಗಿದೆ ಎಂಬುದಕ್ಕೆ ಇದು ನಿದರ್ಶನವಾಗಿರಲಿ.”
3
ಅಂತೆಯೇ ಹೊಶೇಯನು ದಿಬ್ಲಯಿಮನ ಮಗಳಾದ ಗೋಮೆರಳನ್ನು ಮದುವೆಯಾದನು. ಅವಳು ಗರ್ಭಿಣಿಯಾಗಿ ಅವನಿಗೆ ಒಂದು ಗಂಡುಮಗುವನ್ನು ಹೆತ್ತಳು.
4
ಆಗ ಸರ್ವೇಶ್ವರ, ಹೊಶೇಯನಿಗೆ, “ಈ ಮಗುವಿಗೆ ಜೆಸ್ರೀಲ್ ಎಂದು ಹೆಸರಿಡು. ಏಕೆಂದರೆ, ಇಸ್ರಯೇಲ್ನಲ್ಲಿ ಹರಿಸಿದ ರಕ್ತಪಾತಕ್ಕೆ ಪ್ರತಿಯಾಗಿ ಸ್ವಲ್ಪಕಾಲದಲ್ಲೆ ಯೇಹುವಿನ ಮನೆತನವನ್ನು ದಂಡಿಸುವೆನು; ಇಸ್ರಯೇಲ್ ರಾಜ್ಯವನ್ನು ಅಂತ್ಯಗೊಳಿಸುವೆನು.
5
ಅಷ್ಟೇ ಅಲ್ಲ, ಅಂದೇ ಜೆಸ್ರೀಲಿನ ಕಣಿವೆಯಲ್ಲಿ ಇಸ್ರಯೇಲಿನ ಬಿಲ್ಲುಶಕ್ತಿಯನ್ನು ಮುರಿದುಬಿಡುವೆನು,” ಎಂದರು.
6
ಗೋಮೆರಳು ಪುನಃ ಗರ್ಭಿಣಿಯಾಗಿ ಒಂದು ಹೆಣ್ಣುಮಗುವನ್ನು ಹೆತ್ತಳು. ಆಗ ಸರ್ವೇಶ್ವರ, ಹೊಶೇಯನಿಗೆ: “ಇವಳನ್ನು ‘ಲೋರುಹಾಮ’ ಎಂದು ಕರೆ. ಏಕೆಂದರೆ, ನಾನು ಇನ್ನು ಇಸ್ರಯೇಲರನ್ನು ಪ್ರೀತಿಸೆನು; ಇನ್ನು ಅವರನ್ನು ಕ್ಷಮಿಸೆನು.
7
ಆದರೆ ಯೆಹೂದ್ಯ ಮನೆತನವನ್ನು ಪ್ರೀತಿಸಿ ಉದ್ಧರಿಸುವೆನು. ಬಿಲ್ಲುಬಾಣ, ಕತ್ತಿಕಾಳಗ, ಕುದುರೆರಾಹುತರು ಇವುಗಳಿಂದಲ್ಲ, ದೇವರಾದ ಸರ್ವೇಶ್ವರನ ಶಕ್ತಿಯಿಂದಲೇ ಅವರನ್ನು ರಕ್ಷಿಸುವೆನು,” ಎಂದರು.
8
ಮಗುವು ಮೊಲೆಬಿಟ್ಟನಂತರ ಗೋಮೆರಳು ಪುನಃ ಗರ್ಭಿಣಿಯಾಗಿ ಗಂಡು ಮಗುವನ್ನು ಹೆತ್ತಳು.
9
ಆಗ ಸರ್ವೇಶ್ವರ: “ಈ ಮಗುವಿಗೆ ‘ಲೋ-ಅಮ್ಮಿ’ ಎಂದು ನಾಮಕರಣ ಮಾಡು. ಏಕೆಂದರೆ, ಇನ್ನು ನೀವು ನನ್ನ ಪ್ರಜೆಯಲ್ಲ; ನಾನು ನಿಮ್ಮ ದೇವರಲ್ಲ,” ಎಂದರು.
10
ಆದರೂ ಇಸ್ರಯೇಲ್ ಜನಾಂಗ ಅಳೆಯುವುದಕ್ಕೂ ಎಣಿಸುವುದಕ್ಕೂ ಅಸಾಧ್ಯವಾದ ಕಡಲತೀರದ ಮರಳಿನಂತಾಗುವುದು. ದೇವರು ಅವರಿಗೆ ಇಂದು, “ನೀವು ನನ್ನ ಪ್ರಜೆಯಲ್ಲ” ಎಂದಿದ್ದಾರೆ; ಆದರೂ, “ನೀವು ಜೀವಸ್ವರೂಪಿಯಾದ ದೇವರ ಮಕ್ಕಳು” ಎನಿಸಿಕೊಳ್ಳುವ ದಿನ ಬರುವುದು.
11
ಯೆಹೂದ್ಯಜನರೂ ಇಸ್ರಯೇಲಿನ ಜನರೂ ಪುನಃ ಒಂದುಗೂಡುವರು. ಒಬ್ಬನೇ ಅಧಿಪತಿಯನ್ನು ಆರಿಸಿಕೊಳ್ಳುವರು. ಅವರೆಲ್ಲರೂ ನಾನಾ ದೇಶಗಳಿಂದ ಹೊರಟುಬರುವರು. ಜೆಸ್ರೀಲಿನ ಆ ದಿನವು ಮಹತ್ತಾದುದು.
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 2 →
All chapters:
1
2
3
4
5
6
7
8
9
10
11
12
13
14