bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
Jeremiah 51
Jeremiah 51
Kannada Bible (KNCL) BSI 2016
← Chapter 50
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 32
Chapter 33
Chapter 34
Chapter 35
Chapter 36
Chapter 37
Chapter 38
Chapter 39
Chapter 40
Chapter 41
Chapter 42
Chapter 43
Chapter 44
Chapter 45
Chapter 46
Chapter 47
Chapter 48
Chapter 49
Chapter 50
Chapter 51
Chapter 52
Chapter 52 →
1
ಸರ್ವೇಶ್ವರ ಸ್ವಾಮಿ ಹೀಗೆನ್ನುತ್ತಾರೆ: “ಇಗೋ, ನಾನು ಬಾಬಿಲೋನಿನ ಮೇಲೂ ಅದರ ಲೇಬ್ಕಾಮೈ ಪ್ರಜೆಗಳ ಮೇಲೂ ವಿನಾಶಕಾರಿಯಾದ ಗಾಳಿಬೀಸುವಂತೆ ಮಾಡುವೆನು.
2
ಅನ್ಯಜನರನ್ನು ಬಾಬಿಲೋನಿಗೆ ಕಳುಹಿಸುವೆನು. ಅವರು ಅದನ್ನು ಗಾಳಿಗೆ ತೂರಿಬಿಡುವರು. ನಿಯಮಿತ ವಿಪತ್ಕಾಲದಲ್ಲಿ ಆ ದೇಶಕ್ಕೆ ಮುತ್ತಿಗೆ ಹಾಕಿ ಅದನ್ನು ಬಟ್ಟಬರಿದು ಮಾಡುವರು.
3
ಅದರ ಧನುರ್ಧಾರಿಗಳಿಗೂ ಕವಚ ಸನ್ನದ್ಧರಿಗೂ ಬಿಲ್ಲುಬಾಣಗಳನ್ನೆಸೆಯಲು ಅವಕಾಶವಿಲ್ಲದಿರಲಿ. ಬಾಬಿಲೋನಿಯದ ಯುವಕರನ್ನು ಉಳಿಸದಿರಿ. ಅದರ ಸೈನಿಕರನ್ನೆಲ್ಲ ನಿಶ್ಶೇಷಮಾಡಿರಿ.
4
ಬಾಬಿಲೋನಿಯರು ತಮ್ಮ ದೇಶದಲ್ಲೆ ಹತರಾಗಿ ಬೀಳುವರು. ಅದರ ಬೀದಿಗಳಲ್ಲೆ ಕತ್ತಿಗೆ ತುತ್ತಾಗಿ ಮಣ್ಣುಪಾಲಾಗುವರು.
5
ಇಸ್ರಯೇಲರ ಪರಮ ಪಾವನ ಸ್ವಾಮಿಯಾದ ನನಗೆ ನನ್ನ ಜನರು ಮಾಡಿದ ಅಪರಾಧ ತಮ್ಮ ನಾಡಿನಲ್ಲಿ ತುಂಬಿದ್ದರೂ ಸೇನಾಧೀಶ್ವರ ಸರ್ವೇಶ್ವರನೆಂಬ ದೇವರಾದ ನಾನು ಇಸ್ರಯೇಲನ್ನಾಗಲಿ ಜುದೇಯವನ್ನಾಗಲಿ ತ್ಯಜಿಸಿಬಿಡಲಿಲ್ಲ.
6
ನೀವು ಬಾಬಿಲೋನಿನಿಂದ ಓಡಿಹೋಗಿ ನಿಮ್ಮ ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳಿ, ಅದಕ್ಕೆ ಉಂಟಾಗುವ ದಂಡನೆಗೆ ನೀವು ಒಳಗಾಗಬೇಡಿ. ಸರ್ವೇಶ್ವರನಾದ ನಾನು ಮುಯ್ಯಿತೀರಿಸುವ ಕಾಲಬಂದಿದೆ. ಬಾಬಿಲೋನಿಗೆ ತಕ್ಕ ಪ್ರತೀಕಾರ ಮಾಡುವೆನು.
7
ಬಾಬಿಲೋನ್ ನನ್ನ ಕೈಯಲ್ಲಿರುವ ಹೊನ್ನಿನ ಪಾನಪಾತ್ರೆ. ಲೋಕದವರೆಲ್ಲರು ಅದರಿಂದ ಕುಡಿದು ಮತ್ತರಾದರು. ರಾಷ್ಟ್ರಗಳು ಅದರಿಂದ ದ್ರಾಕ್ಷಾರಸವನ್ನು ಕುಡಿದು ಹುಚ್ಚಾದವು.
8
ಬಾಬಿಲೋನ್ ತಟ್ಟನೆ ಬಿದ್ದು ಹಾಳಾಯಿತು. ಅದಕ್ಕಾಗಿ ಗೋಳಾಡಿ. ಅದರ ನೋವನ್ನು ನೀಗಿಸಲು ಔಷಧವನ್ನು ತನ್ನಿ. ಒಂದು ವೇಳೆ ಅದು ಗುಣವಾದೀತು!
9
ಅಲ್ಲಿರುವ ಹೊರನಾಡಿಗರು, ‘ಬಾಬಿಲೋನನ್ನು ಸ್ವಸ್ಥಮಾಡಲು ನಾವು ಪ್ರಯತ್ನಿಸಿದೆವು. ಆದರೆ ಅದು ಸ್ವಸ್ಥವಾಗಲಿಲ್ಲ. ಬಾಬಿಲೋನನ್ನು ಬಿಟ್ಟು ನಾವೆಲ್ಲರು ನಮ್ಮ ನಮ್ಮ ನಾಡುಗಳಿಗೆ ಹೋಗೋಣ. ಅದು ಪಡೆಯಬೇಕಾದ ದಂಡನೆ ಆಕಾಶ ಮುಟ್ಟುವಷ್ಟು ದೊಡ್ಡದು, ಹೌದು, ಅದು ಗಗನದವರೆಗೂ ಬೆಳೆದಿದೆ,” ಎನ್ನುವರು.
10
‘ಸರ್ವೇಶ್ವರ ನಮ್ಮ ಧಾರ್ಮಿಕತೆಯನ್ನು ವ್ಯಕ್ತಪಡಿಸಿದ್ದಾರೆ. ನಮ್ಮ ದೇವರಾದ ಸರ್ವೇಶ್ವರ ನಡೆಸಿದ ಮಹತ್ಕಾರ್ಯವನ್ನು ಸಿಯೋನಿನಲ್ಲಿ ಪ್ರಕಟಿಸೋಣ ಬನ್ನಿ’ ಎಂದು ಹೇಳುವರು.”
11
ಸರ್ವೇಶ್ವರನು ಬಾಬಿಲೋನನ್ನು ಹಾಳುಮಾಡಬೇಕೆಂದು ಉದ್ದೇಶಿಸಿ, ಅದನ್ನು ಮೇದ್ಯರ ಅರಸರು ನಾಶಮಾಡುವಂತೆ ಅವರನ್ನು ಪ್ರೇರೇಪಿಸಿದ್ದಾರೆ. ಆ ನಾಶವು, ಸರ್ವೇಶ್ವರನು ತನ್ನ ಆಲಯವನ್ನು ಕೆಡವಿದವರಿಗೆ ಮಾಡಬೇಕೆಂದಿದ್ದ ಪ್ರತೀಕಾರವೇ ಆಗಿದೆ. ‘ಮೇದ್ಯರೇ, ಬಾಣಗಳನ್ನು ಮಸೆಯಿರಿ, ಯುದ್ಧಸನ್ನದ್ಧರಾಗಿರಿ;
12
ಬಾಬಿಲೋನಿನ ಕೋಟೆಗೆ ಎದುರಾಗಿ ಧ್ವಜವೆತ್ತಿರಿ. ಪಹರೆಯನ್ನು ಬಲಪಡಿಸಿರಿ. ಕಾವಲುಗಾರರನ್ನು ನಿಲ್ಲಿಸಿರಿ. ಹೊಂಚುಗಾರರನ್ನು ಗೊತ್ತುಮಾಡಿರಿ!’ ಸರ್ವೇಶ್ವರ ಸ್ವಾಮಿ ಬಾಬಿಲೋನಿನವರ ವಿಷಯದಲ್ಲಿ ನುಡಿದಿದ್ದನ್ನು ನೆನಪಿಗೆ ತಂದುಕೊಂಡು ನೆರವೇರಿಸಿದ್ದಾರೆ.
13
“ಬಹುಜಲಾಶ್ರಯಗಳ ನಡುವೆ ನಿಂತಿರುವ ನಗರಿಯೇ, ಧನಭರಿತ ಪುರಿಯೇ, ನಿನ್ನ ಅಂತ್ಯಕಾಲವು ಬಂದಿದೆ. ನೀನು ಕೊಳ್ಳೆಹೊಡೆದದ್ದು ಸಾಕಾಗಿದೆ.”
14
ಸೇನಾಧೀಶ್ವರ ಸರ್ವೇಶ್ವರ ತಮ್ಮ ಮೇಲೆ ಆಣೆಯಿಟ್ಟು ಹೇಳುವುದು ಇದು: “ಖಂಡಿತವಾಗಿ ನಾನು ಮಿಡತೆಗಳಷ್ಟು ಅಸಂಖ್ಯ ಜನರಿಂದ ನಿನ್ನನ್ನು ತುಂಬಿಸುವೆನು. ಅವರು ನಿನ್ನ ಮೇಲೆ ಜಯಘೋಷಮಾಡುವರು.”
15
ಆತ ಭೂಮಿಯನ್ನು ನಿರ್ಮಿಸಿದ ಶಕ್ತಿಯಿಂದ ಲೋಕವನ್ನು ಸ್ಥಾಪಿಸಿದ ಜ್ಞಾನದಿಂದ ಆಕಾಶಮಂಡಲವನ್ನು ಹರಡಿದ ವಿವೇಕದಿಂದ.
16
ಆತನ ಘರ್ಜನೆಗೆ ಆಕಾಶದಲ್ಲಿನ ನೀರು ಭೋರ್ಗರೆಯುತ್ತದೆ ಭುವಿಯ ಕಟ್ಟಕಡೆಯಿಂದ ಮೋಡ ಮೇಲೇರುತ್ತದೆ ಮಳೆಗೋಸ್ಕರ ಮಿಂಚು ಹೊಳೆಯುತ್ತದೆ ಆತನ ಭಂಡಾರದಿಂದ ಗಾಳಿ ಬೀಸುತ್ತದೆ.
17
ಇದರ ಮುಂದೆ ಜನರು ತಿಳುವಳಿಕೆಯಿಲ್ಲದ ಪಶುಪ್ರಾಯರು ತಾನು ಕೆತ್ತಿದ ವಿಗ್ರಹಕ್ಕಾಗಿ ಹೇಸುವನು ಪ್ರತಿಯೊಬ್ಬ ಅಕ್ಕಸಾಲಿಗನು. ಪೊಳ್ಳು, ಶ್ವಾಸವಿಲ್ಲದವುಗಳು, ಅವನು ಎರಕಹೊಯ್ದ ಪುತ್ತಳಿಗಳು.
18
ಅವು ವ್ಯರ್ಥವಾದವುಗಳು, ಹಾಸ್ಯಾಸ್ಪದ ಕೃತಿಗಳು, ದಂಡನೆಯ ಕಾಲದಲ್ಲಿ ಅಳಿದುಹೋಗುವಂಥವುಗಳು.
19
ಯಕೋಬ್ಯರಿಗೆ ಸ್ವಂತವಾದ ದೇವರು ಅವುಗಳ ಹಾಗಲ್ಲ ಆತ ಸಮಸ್ತವನ್ನು ಸೃಷ್ಟಿಸಿದಾತ ಆತನ ಸೊತ್ತು ಇಸ್ರಯೇಲ್ ವಂಶ ‘ಸೇನಾಧೀಶ್ವರ ಸರ್ವೇಶ್ವರ’ ಎಂಬುದು ಆತನ ನಾಮಧೇಯ.
20
“ಬಾಬಿಲೋನೇ, ನೀನು ನನಗೊಂದು ಯುದ್ಧಾಸ್ತ್ರ, ಒಂದು ಗದೆ. ಈ ಗದೆಯಿಂದ ರಾಷ್ಟ್ರಗಳನ್ನು ಬಡಿದುಬಿಡುವೆನು, ರಾಜ್ಯಗಳನ್ನು ಅಳಿಸಿಬಿಡುವೆನು.
21
ಈ ಗದೆಯಿಂದ ಒಡೆದುಬಿಡುವೆನು ಕುದುರೆಯನ್ನೂ ಸವಾರನನ್ನೂ,
22
ರಥವನ್ನೂ ಸಾರಥಿಯನ್ನೂ ಸ್ತ್ರೀಪುರುಷರನ್ನೂ ಬಾಲವೃದ್ಧರನ್ನೂ.
23
ಈ ಗದೆಯಿಂದ ಒಡೆದುಬಿಡುವೆನು ಕುರುಬನನ್ನೂ ಮಂದೆಯನ್ನೂ ರೈತನನ್ನೂ ನೊಗದೆತ್ತುಗಳನ್ನೂ ದೇಶಾಧಿಪತಿಗಳನ್ನೂ ನಾಡಿನೊಡೆಯರನ್ನೂ.”
24
“ಆದರೆ ಬಾಬಿಲೋನಿನವರು ಹಾಗು ಅದರ ಕಸ್ದೀಯರು ಸಿಯೋನಿನಲ್ಲಿ ಮಾಡಿದ ಎಲ್ಲ ಕೇಡಿಗೆ ಪ್ರತಿಯಾಗಿ ನಾನು ಅವರೆಲ್ಲರಿಗೆ ಆ ಸಿಯೋನಿನವರ ಕಣ್ಣೆದುರಿಗೇ ಮುಯ್ಯಿ ತೀರಿಸುವೆನು,” ಎನ್ನುತ್ತಾರೆ ಸರ್ವೇಶ್ವರ.
25
“ಲೋಕವನ್ನೆಲ್ಲಾ ನಾಶಮಾಡುವ ಎಲೈ ನಾಶಕ ಪರ್ವತವೇ, ನಾನು ನಿನಗೆ ವಿರುದ್ಧನಾಗಿದ್ದೇನೆ. ನಿನ್ನ ಮೇಲೆ ಕೈಮಾಡಿ, ನಿನ್ನನ್ನು ಬಂಡೆಯ ಮೇಲಿಂದ ಕೆಳಕ್ಕೆ ಉರುಳಿಸುವೆನು. ಸುಟ್ಟ ಬೆಟ್ಟವನ್ನಾಗಿಸುವೆನು.
26
ಮೂಲೆಗಲ್ಲಿಗಾಗಲಿ, ಅಸ್ತಿವಾರದ ಕಲ್ಲಿಗಾಗಲಿ ಯಾರೂ ನಿನ್ನಿಂದ ಕಲ್ಲನ್ನು ತೆಗೆಯರು. ನೀನು ನಿತ್ಯನಾಶಕ್ಕೆ ಗುರಿಯಾಗುವೆ,” ಎನ್ನುತ್ತಾರೆ ಸರ್ವೇಶ್ವರ.
27
“ನಾಡಿನಲ್ಲಿ ಧ್ವಜವೆತ್ತಿರಿ, ರಾಜ್ಯಗಳಲ್ಲೆಲ್ಲ ಕೊಂಬೂದಿರಿ, ರಾಷ್ಟ್ರಗಳನ್ನು ಸಜ್ಜುಮಾಡಿರಿ. ಬಾಬಿಲೋನಿನ ಮೇಲೆ ಬೀಳಲಿಕ್ಕೆ ಅರರಾಟ್, ಮಿನ್ನಿ, ಅಷ್ಕೆನಜ್ ಎಂಬ ರಾಷ್ಟ್ರಗಳನ್ನು ಕರೆದುಕೊಳ್ಳಿ. ಸೋಲಿಸಬಲ್ಲ ಸೇನಾಪತಿಯನ್ನು ನೇಮಿಸಿರಿ. ಬಿರುಸಾದ ಅಶ್ವಬಲವನ್ನು ಮಿಡತೆಗಳ ದಂಡಿನೋಪಾದಿ ಬರಮಾಡಿ.
28
ರಾಷ್ಟ್ರಗಳು, ಮೇದ್ಯರ ಅರಸರು, ಅಧಿಪತಿಗಳು, ಅಧಿಕಾರಿಗಳು, ಅವರ ಕೈಕೆಳಗಿರುವ ಎಲ್ಲ ನಾಡಿನವರು, ಇವರೆಲ್ಲರನ್ನು ಬಾಬಿಲೋನಿಗೆ ವಿರುದ್ಧ ಸಜ್ಜುಗೊಳಿಸಿರಿ.
29
ಪೊಡವಿ ನೊಂದು ನಡುಗುತ್ತಿದೆ! ಏಕೆಂದರೆ ಬಾಬಿಲೋನ್ ದೇಶ ಹಾಳುಬಿದ್ದು ನಿರ್ಜನವಾಗಲಿ ಎಂದು ಸರ್ವೇಶ್ವರ ಅದರ ವಿಷಯವಾಗಿ ಮಾಡಿಕೊಂಡಿರುವ ಸಂಕಲ್ಪ ಅಚಲವಾಗಿದೆ.
30
ಬಾಬಿಲೋನಿಯದ ಶೂರರು ಯುದ್ಧಕ್ಕೆ ಹಿಂಜರಿದು ಹೆಂಗಸರಂತೆ, ಹೇಡಿಗಳಂತೆ ತಮ್ಮ ಕೋಟೆಗಳಲ್ಲೆ ನಿಂತಿದ್ದಾರೆ. ಅದರ ಹೆಬ್ಬಾಗಿಲುಗಳು ಮುರಿದುಬಿದ್ದಿವೆ. ಅದರ ಮನೆಗೆ ಬೆಂಕಿಯಿಕ್ಕಲಾಗಿದೆ.
31
ಒಬ್ಬ ಸುದ್ದಿಗಾರ ಇನ್ನೊಬ್ಬ ಸುದ್ದಿಗಾರನತ್ತ ಓಡುತ್ತಾನೆ. ಒಬ್ಬ ದೂತ ಇನ್ನೊಬ್ಬ ದೂತನತ್ತ ದೌಡಾಯಿಸುತ್ತಾನೆ. ‘ರಾಜಧಾನಿಯನ್ನು ಎಲ್ಲಾ ಕಡೆಯಿಂದಲೂ ಆಕ್ರಮಿಸಿದ್ದಾರೆ.
32
ರೇವುಗಳನ್ನು ಹಿಡಿದಿದ್ದಾರೆ. ಹುಲ್ಲಿಗೆ ಬೆಂಕಿ ಹಚ್ಚಿದ್ದಾರೆ. ರಣವೀರರು ಭಯಭ್ರಾಂತರಾಗಿದ್ದಾರೆ’ ಎಂದು ಬಾಬಿಲೋನಿನ ಅರಸನಿಗೆ ತಿಳಿಸುತ್ತಾರೆ.
33
ಬಾಬಿಲೋನ್ ನಗರವು ತುಳಿದು ತುಳಿದು ಸರಿಮಾಡಿದ ಕಣದಂತಿದೆ. ಇಷ್ಟರಲ್ಲೆ ಕೊಯ್ಲುಕಾಲ ಅದಕ್ಕೆ ಸಂಭವಿಸಲಿದೆ; ಇದು ಇಸ್ರಯೇಲರ ದೇವರೂ ಸೇನಾಧೀಶ್ವರನೂ ಆದ ಸರ್ವೇಶ್ವರನ ನುಡಿ.”
34
ಬಾಬಿಲೋನಿಯದ ಅರಸ ನೆಬೂಕದ್ನೆಚ್ಚರನು ನನ್ನನ್ನು ಮುರಿದು ತಿಂದುಬಿಟ್ಟ ನನ್ನನ್ನು ಕುಡಿದು ಬಿಸಾಡಿದ ಪಾತ್ರೆಯನ್ನಾಗಿಸಿಬಿಟ್ಟ. ಘಟಸರ್ಪದ ಹಾಗೆ ನನ್ನನ್ನು ನುಂಗಿದ ನನ್ನ ರುಚಿಪದಾರ್ಥಗಳಿಂದ ಹೊಟ್ಟೆ ತುಂಬಿಸಿಕೊಂಡ ಮಿಕ್ಕಿದುದನ್ನೆಲ್ಲ ತೊಳೆದು ಎಸೆದುಬಿಟ್ಟ.
35
‘ನಮ್ಮ ಪ್ರಾಣವನ್ನು ಹಿಂಡಿದ ದೋಷ ಬಾಬಿಲೋನಿಗೆ ತಟ್ಟಲಿ’ ಎನ್ನುತ್ತದೆ ಸಿಯೋನ್. ‘ನಮ್ಮ ರಕ್ತವನ್ನು ಸುರಿಸಿದ ಅಪರಾಧ ಅದರ ಕಸ್ದೀಯರಿಗೆ ಬಡಿಯಲಿ!’ ಎನ್ನುತ್ತದೆ ಜೆರುಸಲೇಮ್.
36
ಸರ್ವೇಶ್ವರ ಹೀಗೆನ್ನುತ್ತಾರೆ: “ಇಗೋ, ನಾನು ನಿನ್ನ ಪರವಾಗಿ ವ್ಯಾಜ್ಯಮಾಡಿ ನಿನ್ನನ್ನು ಹಿಂಸಿಸಿದ ರಾಜ್ಯಕ್ಕೆ ಮುಯ್ಯಿತೀರಿಸುವೆನು. ಅದರ ಸರೋವರ ಬತ್ತಿಹೋಗುವಂತೆಯೂ ಅದರ ಪ್ರವಾಹ ಒಣಗಿಹೋಗುವಂತೆಯೂ ಮಾಡುವೆನು.
37
ಆಗ ಬಾಬಿಲೋನ್ ಹಾಳುದಿಬ್ಬ ಆಗುವುದು. ಗುಳ್ಳೆನರಿಗಳ ಬೀಡಾಗುವುದು. ಅದು ಭಯಭೀತಿಗೂ ಸೀಳು ಪರಿಹಾಸ್ಯಕ್ಕೂ ಆಸ್ಪದವಾಗುವುದು.
38
ಬಾಬಿಲೋನಿನವರು ಯುವಸಿಂಹಗಳಂತೆ ಒಟ್ಟಿಗೆ ಗರ್ಜಿಸುವರು, ಸಿಂಹದ ಮರಿಗಳಂತೆ ಗುರುಗುಟ್ಟುವರು.
39
ಅವರು ಹೊಟ್ಟೆಬಾಕರೇ ಸರಿ. ಅವರಿಗೆ ಔತಣವನ್ನು ಸಿದ್ಧಮಾಡುವೆನು. ತಿಂದು ಸಂಭ್ರಮಪಡುವಂತೆ ಮಾಡುವೆನು. ತಲೆಗೇರುವತನಕ ಕುಡಿಸಿ ಎಂದಿಗೂ ಎಚ್ಚರಗೊಳ್ಳದೆ ಚಿರನಿದ್ರೆಯಲ್ಲಿರುವಂತೆ ಮಾಡುವೆನು.
40
ಕುರಿ, ಟಗರು, ಹೋತಗಳ ಹಾಗೆ ಅವರನ್ನು ವಧ್ಯಸ್ಥಾನಕ್ಕೆ ಬರಮಾಡುವೆನು. ಇದು ಸರ್ವೇಶ್ವರನಾದ ನನ್ನ ನುಡಿ.”
41
ಏನು, ಶೇಷಕ್ ಶತ್ರುವಶವಾಯಿತೆ? ಲೋಕಪ್ರಸಿದ್ಧ ನಗರ ಶರಣಾಗತವಾಯಿತೆ?
42
ರಾಷ್ಟ್ರಗಳ ಕಣ್ಣಿಗೆ ಬಾಬಿಲೋನ್ ಭೀಕರವಾಗಿಬಿಟ್ಟಿದೆ, ಸಮುದ್ರವೆ ಬಾಬಿಲೋನಿಯದ ಮೇಲೆ ನುಗ್ಗಿಬಿಟ್ಟಿದೆ, ಲೆಕ್ಕವಿಲ್ಲದ ತೆರೆಗಳು ಆ ರಾಜ್ಯವನ್ನು ಮುಚ್ಚಿಬಿಟ್ಟಿವೆ.
43
ಕಾಡು, ಕಗ್ಗಾಡು, ಬೆಂಗಾಡು ಆಗಿವೆ ಅದರ ನಗರಗಳು. ಆ ದೇಶದೊಳು ಯಾರೂ ವಾಸಿಸರು, ಯಾವ ನರಪ್ರಾಣಿಯೂ ಹಾದುಹೋಗದು.
44
“ಬಾಬಿಲೋನಿಯದ ಬೇಲ್ದೇವತೆಯನ್ನು ದಂಡಿಸುವೆನು. ಅದು ನುಂಗಿದ್ದನ್ನು ಅದರ ಬಾಯಿಂದಲೇ ಕಕ್ಕಿಸುವೆನು. ಪ್ರವಾಹವಾಗಿ ಅಲ್ಲಿಗೆ ಬರುತ್ತಿದ್ದ ಸಕಲ ದೇಶೀಯರು ಇನ್ನು ಬಾರರು. ಆ ಬಾಬಿಲೋನಿನ ಪೌಳಿಗೋಡೆ ಇನ್ನು ಬಿದ್ದುಹೋಗುವುದು.
45
ನನ್ನ ಜನರೇ, ಬಾಬಿಲೋನನ್ನು ಬಿಟ್ಟು ಹೊರಡಿ. ನನ್ನ ಕೋಪಾಗ್ನಿಯಿಂದ ತಪ್ಪಿಸಿಕೊಳ್ಳಿ.
46
ನಿಮ್ಮ ಎದೆ ಕುಂದದಿರಲಿ. ನಾಡಿನಲ್ಲಿ ಕಿವಿಗೆ ಬೀಳುವ ಸುದ್ದಿ ನಿಮ್ಮನ್ನು ಹೆದರಿಸದಿರಲಿ. ಒಂದು ವರ್ಷ ಒಂದು ಸುದ್ದಿಯಾದರೆ ಮತ್ತೊಂದು ವರ್ಷ ಮತ್ತೊಂದು ಸುದ್ದಿ. ಹಿಂಸಾಚಾರ ಪ್ರಬಲವಾಗುತ್ತಿದೆ ನಾಡಿನಲ್ಲಿ. ಅಧಿಕಾರಿಗೆ ಅಧಿಕಾರಿಯೇ ವಿರೋಧಿ ಅಲ್ಲಿ.
47
ಇಗೋ ಬಾಬಿಲೋನಿಯದ ವಿಗ್ರಹಗಳನ್ನು ದಂಡಿಸುವ ದಿನಗಳು ಬರಲಿವೆ. ಆ ನಾಡೆಲ್ಲ ನಾಚಿಕೆಗೆ ಈಡಾಗುವುದು. ಅದರ ಪ್ರಜೆಗಳು ಅದರಲ್ಲೇ ಹತರಾಗಿ ಬೀಳುವರು.
48
ಆಗ ಭೂಮಿ ಆಕಾಶಗಳೂ ಅಲ್ಲಿನ ಸಮಸ್ತವೂ ಬಾಬಿಲೋನಿನ ನಾಶ ನೋಡಿ ಜಯಘೋಷಮಾಡುವುವು. ಹಾಳುಮಾಡುವರು, ಉತ್ತರದಿಂದ ಬಂದು ಹಾಳುಮಾಡುವರು.
49
ಹತರಾದ ಇಸ್ರಯೇಲರೇ, ಬಾಬಿಲೋನಿಯದ ಹಿತಕ್ಕಾಗಿ ಬಹುಜನ ಹತರಾದರು. ಅಂತೆಯೇ ಬಾಬಿಲೋನ್ ಹತವಾಗುವುದು. ಸರ್ವೇಶ್ವರನಾದ ನನ್ನ ನುಡಿ ಇದು.”
50
“ಕತ್ತಿಯಿಂದ ತಪ್ಪಿಸಿಕೊಂಡವರೇ, ಸುಮ್ಮನೆ ನಿಂತುಕೊಳ್ಳದೆ ನಡೆಯಿರಿ. ದೂರವಿರುವಾಗಲು ಸರ್ವೇಶ್ವರನನ್ನು ಸ್ಮರಿಸಿರಿ. ಜೆರುಸಲೇಮನ್ನು ಕುರಿತು ಮನಸ್ಸಾರೆ ಹಂಬಲಿಸಿರಿ.
51
‘ನಿಂದೆಯನ್ನು ಕೇಳಿ ನಾವು ಲಜ್ಜೆಗೊಂಡೆವು, ಮ್ಲೇಚ್ಛರು ಸರ್ವೇಶ್ವರನ ಪವಿತ್ರಾಲಯವನ್ನು ಪ್ರವೇಶಿಸಿದ್ದರಿಂದ ಅವಮಾನವು ನಮ್ಮ ಮುಖವನ್ನು ಆವರಿಸಿದೆ,’ ಎನ್ನುತ್ತೀರೋ?
52
ಸರ್ವೇಶ್ವರನಾದ ನಾನು ಹೇಳುವುದನ್ನು ಕೇಳಿ: “ಬರಲಿವೆ ಬಾಬಿಲೋನಿನ ವಿಗ್ರಹಗಳನ್ನು ದಂಡಿಸುವ ದಿನಗಳು. ಆಗ ಆ ದೇಶದೊಳೆಲ್ಲ ನರಳಾಡುವರು ಗಾಯಗೊಂಡವರು.
53
ಬಾಬಿಲೋನ್ ಆಕಾಶದ ತನಕ ಬೆಳೆದರೂ ಎತ್ತರವಾದ, ಬಲವಾದ ಕೋಟೆಕಟ್ಟಿ ಭದ್ರಪಡಿಸಿಕೊಂಡರೂ ನನ್ನ ಅಪ್ಪಣೆಯ ಮೇರೆಗೆ ಜನರು ಹಾಳುಮಾಡುವರು; ಅದರ ಮೇಲೆ ಬೀಳುವರು. ಸರ್ವೇಶ್ವರನಾದ ನನ್ನ ನುಡಿ ಇದು.”
54
“ಇಗೋ ಕೇಳಿಬರುತ್ತಿದೆ ಬಾಬಿಲೋನಿನಿಂದ ಕೂಗಾಟ! ಆ ಬಾಬಿಲೋನಿಯರ ದೇಶದಿಂದ ಮಹಾ ವಿನಾಶದ ಕಿರುಚಾಟ!
55
ಬಾಬಿಲೋನನ್ನು ನಾನು ಹಾಳುಮಾಡಿಬಿಡುತ್ತೇನೆ ಅದರ ಸದ್ದುಗದ್ದಲವನ್ನು ಅಡಗಿಸಿಬಿಡುತ್ತೇನೆ. ಮಹಾ ಜಲಪ್ರವಾಹಗಳು ಭೋರ್ಗರೆಯುವಂತೆ ಅಲೆ ಅಲೆಯಾಗಿ ಬಂದ ಶತ್ರುಗಳು ಘೋಷಿಸಿ ಆರ್ಭಟಿಸುತ್ತಿದ್ದಾರೆ.
56
ವಿನಾಶಕಾರನು ಬಂದೆರಗಿದ್ದಾನೆ ಬಾಬಿಲೋನಿನ ಮೇಲೆ ಅದರ ಶೂರರೋ ಸೆರೆಯಾಗಿಬಿಟ್ಟಿದ್ದಾರೆ ಅವರ ಬಿಲ್ಲುಗಳೋ ಮುರಿದುಹೋಗಿವೆ. ಸರ್ವೇಶ್ವರನು ಮುಯ್ಯಿತೀರಿಸುವ ದೇವರು ಆತ ಪ್ರತಿಕ್ರಿಯೆ ವ್ಯಕ್ತಪಡಿಸದೆ ಇರನು.
57
ಬಾಬಿಲೋನಿನ ರಾಜ್ಯಪಾಲರು, ಮಂತ್ರಿಗಳು, ಅಧಿಪತಿಗಳು, ಅಧಿಕಾರಿಗಳು, ಯೋಧರು, ಇವರೆಲ್ಲರಿಗೆ ತಲೆಗೇರುವ ತನಕ ಕುಡಿಸುವೆನು. ಅವರು ಎಂದೆಂದಿಗೂ ಎಚ್ಚರಗೊಳ್ಳದೆ ಚಿರನಿದ್ರೆ ಮಾಡುವರು ಎನ್ನುತ್ತಾರೆ ಸೇನಾಧೀಶ್ವರ ಸರ್ವೇಶ್ವರನೆಂಬ ರಾಜಾಧಿರಾಜರು.”
58
ಸೇನಾಧೀಶ್ವರ ಸರ್ವೇಶ್ವರ ಹೀಗೆನ್ನುತ್ತಾರೆ: ಬಾಬಿಲೋನಿನ ದೊಡ್ಡ ಪೌಳಿಗೋಡೆ ಪೂರ್ಣವಾಗಿ ನೆಲಸಮವಾಗುವುದು. ಅದರ ಉನ್ನತ ದ್ವಾರಗಳು ಬೆಂಕಿಯಿಂದ ಸುಟ್ಟುಹೋಗುವುವು ರಾಷ್ಟ್ರಗಳು ದುಡಿದದ್ದು ಬೆಂಕಿಗೆ ತುತ್ತಾಗುವುದು.”
59
ಮಸ್ಸೇಯನ ಮೊಮ್ಮಗನೂ ನೇರೀಯನ ಮಗನೂ ಆದ ಸೆರಾಯನು ಜುದೇಯದ ಅರಸ ಚಿದ್ಕೀಯನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ ಚಿದ್ಕೀಯನೊಡನೆ ಬಾಬಿಲೋನಿಗೆ ಪ್ರಯಾಣಮಾಡಿದನು. ಆಗ ಪ್ರವಾದಿ ಯೆರೆಮೀಯನು ಸೆರಾಯನಿಗೆ ಒಂದು ಅಪ್ಪಣೆಯನ್ನು ಕೊಟ್ಟನು.
60
ಸೆರಾಯನು ಸರಬರಾಯಿನ ಕಾರಬಾರಿ. ಯೆರೆಮೀಯನು ಬಾಬಿಲೋನಿಗೆ ಸಂಭವಿಸತಕ್ಕ ಎಲ್ಲ ಕೇಡಿನ ವಿಷಯವನ್ನು, ಅಂದರೆ ಬಾಬಿಲೋನಿನ ಸಂಬಂಧವಾಗಿ ಹಿಂದೆ ಲಿಖಿತವಾದ ಎಲ್ಲ ಸಂಗತಿಗಳನ್ನು, ಒಂದು ಗ್ರಂಥವಾಗಿ ಬರೆದು ಸೆರಾಯನಿಗೆ ಹೀಗೆಂದು ಹೇಳಿದನು:
61
“ನೋಡು, ನೀನು ಬಾಬಿಲೋನನ್ನು ತಲುಪಿದ ಮೇಲೆ ಈ ಮಾತುಗಳನ್ನೆಲ್ಲ ತಕ್ಕವರಿಗೆ ಓದಿ ಹೇಳು.
62
ಬಳಿಕ, ‘ಸರ್ವೇಶ್ವರಾ, ನೀವು ಈ ಸ್ಥಳವನ್ನು ನಿರ್ಮೂಲಮಾಡಲು ಉದ್ದೇಶಿಸಿ, ಇದು ಜನರಿಗೂ ಜಾನುವಾರುಗಳಿಗೂ ನೆಲೆಯಾಗದೆ ಸದಾಕಾಲ ಹಾಳಾಗಿಯೇ ಉಳಿಯಲಿ ಎಂದು ನುಡಿದಿದ್ದೀರಲ್ಲಾ!’ ಎಂದು ಅರಿಕೆಮಾಡು.
63
ಈ ಸುರುಳಿಯನ್ನು ಓದಿ ಮುಗಿಸಿದ ಮೇಲೆ ಇದಕ್ಕೆ ಕಲ್ಲುಕಟ್ಟಿ ಯೂಫ್ರೆಟಿಸ್ ನದಿಯ ಮಧ್ಯೆ ಎಸೆದುಬಿಡು.
64
ಆಮೇಲೆ, ‘ಸರ್ವೇಶ್ವರ ಸ್ವಾಮಿ ಬಾಬಿಲೋನಿಗೆ ಬರಮಾಡುವ ವಿಪತ್ತಿನಿಂದ ಈ ನಗರ ಹೀಗೆಯೇ ಮುಳುಗುವುದು, ಮತ್ತೆ ಏಳದು,’ ಎಂದು ಹೇಳು.” ಇಲ್ಲಿಗೆ ಯೆರೆಮೀಯನ ಪ್ರವಾದನೆ ಮುಗಿಯಿತು.
← Chapter 50
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 32
Chapter 33
Chapter 34
Chapter 35
Chapter 36
Chapter 37
Chapter 38
Chapter 39
Chapter 40
Chapter 41
Chapter 42
Chapter 43
Chapter 44
Chapter 45
Chapter 46
Chapter 47
Chapter 48
Chapter 49
Chapter 50
Chapter 51
Chapter 52
Chapter 52 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48
49
50
51
52