bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
Luke 23
Luke 23
Kannada Bible (KNCL) BSI 2016
← Chapter 22
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 24 →
1
ಬಳಿಕ ಸಭೆಸೇರಿದ್ದವರೆಲ್ಲರೂ ಎದ್ದು ಯೇಸುಸ್ವಾಮಿಯನ್ನು ಪಿಲಾತನ ಬಳಿಗೆ ಕರೆದುತಂದರು.
2
ಅಲ್ಲಿ ಆತನ ಮುಂದೆ, “ಇವನು ರೋಮ್ ಚಕ್ರವರ್ತಿಗೆ ತೆರಿಗೆ ಕೊಡುವುದನ್ನು ನಿಷೇಧಿಸುತ್ತಾನೆ. ತಾನೇ ‘ಕ್ರಿಸ್ತ, ಒಬ್ಬ ಅರಸ,’ ಎಂದು ಹೇಳಿಕೊಳ್ಳುತ್ತಾನೆ. ಹೀಗೆ ನಮ್ಮ ಜನತೆ ದಂಗೆಯೇಳುವಂತೆ ಪ್ರಚೋದಿಸುತ್ತಾನೆ. ಇದನ್ನೆಲ್ಲಾ ನಾವು ಕಂಡುಹಿಡಿದಿದ್ದೇವೆ,” ಎಂದು ದೂರತೊಡಗಿದರು.
3
ಆಗ ಪಿಲಾತನು, “ನೀನು ಯೆಹೂದ್ಯರ ಅರಸನೋ?” ಎಂದು ಯೇಸುವನ್ನು ಪ್ರಶ್ನಿಸಿದನು. “ಅದು ನಿಮ್ಮ ಬಾಯಿಂದಲೇ ಬಂದಿದೆ,” ಎಂದು ಯೇಸು ಮರುನುಡಿದರು.
4
ಪಿಲಾತನು ಮುಖ್ಯಯಾಜಕರನ್ನೂ ಜನರ ಗುಂಪನ್ನೂ ನೋಡಿ, “ಈ ಮನುಷ್ಯರಲ್ಲಿ ಶಿಕ್ಷಾರ್ಹದೋಷ ಯಾವುದೂ ನನಗೆ ಕಾಣುವುದಿಲ್ಲ,” ಎಂದನು.
5
ಆದರೆ ಅವರು, “ಇವನು ಜುದೇಯ ನಾಡಿನಲ್ಲೆಲ್ಲಾ ಬೋಧನೆಮಾಡುತ್ತಾ ಕ್ರಾಂತಿಗೆ ಕರೆಗೊಡುತ್ತಾನೆ; ಗಲಿಲೇಯದಲ್ಲಿ ಪ್ರಾರಂಭಿಸಿ ಇಲ್ಲಿಯವರೆಗೂ ಬಂದಿದ್ದಾನೆ,” ಎಂದು ಒತ್ತಾಯಪೂರ್ವಕವಾಗಿ ಆರೋಪಿಸಿದರು.
6
ಇದನ್ನು ಕೇಳಿದಾಕ್ಷಣವೇ ಪಿಲಾತನು, “ಇವನು ಗಲಿಲೇಯದವನೋ?” ಎಂದು ವಿಚಾರಿಸಿದನು.
7
ಯೇಸುಸ್ವಾಮಿ ಹೆರೋದನ ಆಧಿಪತ್ಯಕ್ಕೆ ಒಳಪಟ್ಟವರೆಂದು ತಿಳಿದುಕೊಂಡು ಅವರನ್ನು ಆತನ ಬಳಿಗೆ ಕಳುಹಿಸಿದನು. ಹೆರೋದನು ಅದೇ ಸಮಯಕ್ಕೆ ಜೆರುಸಲೇಮಿಗೆ ಬಂದಿದ್ದನು.
8
ಯೇಸುಸ್ವಾಮಿಯನ್ನು ಕಂಡೊಡನೆ ಹೆರೋದನಿಗೆ ತುಂಬ ಸಂತೋಷವಾಯಿತು. ಆತನು ಅವರನ್ನು ಕಾಣಲು ಬಹಳ ದಿನಗಳಿಂದ ಕಾತರನಾಗಿದ್ದನು. ಏಕೆಂದರೆ ಅವರ ವಿಷಯವಾಗಿ ಈಗಾಗಲೇ ಎಷ್ಟೋ ಕೇಳಿದ್ದನು. ಅವರು ಯಾವುದಾದರೊಂದು ಪವಾಡಕಾರ್ಯ ಮಾಡುವುದನ್ನು ನೋಡಬೇಕೆಂಬ ಅಪೇಕ್ಷೆ ಆತನಿಗಿತ್ತು.
9
ಆದುದರಿಂದ ಆತನು ಯೇಸುವನ್ನು ಅನೇಕ ವಿಧವಾಗಿ ಪ್ರಶ್ನಿಸಿದನು. ಆದರೆ ಅವರು ಒಂದಕ್ಕೂ ಉತ್ತರಕೊಡಲಿಲ್ಲ.
10
ಇತ್ತ ಮುಖ್ಯಯಾಜಕರೂ ಧರ್ಮಶಾಸ್ತ್ರಿಗಳೂ ಮುಂದೆಬಂದು ಅವರ ಮೇಲೆ ಪ್ರಬಲವಾಗಿ ದೋಷಾರೋಪಣೆ ಮಾಡತೊಡಗಿದರು.
11
ಕಡೆಗೆ ಹೆರೋದನು ತನ್ನ ಸೈನಿಕರೊಡನೆ ಸೇರಿ ಯೇಸುವನ್ನು ಅಣಕಿಸಿ ಅವಮಾನಪಡಿಸಿದನು. ರಾಜವಸ್ತ್ರವನ್ನು ವೇಷಭೂಷಣವಾಗಿ ಅವರಿಗೆ ತೊಡಿಸಿ ಪಿಲಾತನ ಬಳಿಗೆ ಮರಳಿ ಕಳುಹಿಸಿಕೊಟ್ಟನು.
12
ಅದುವರೆಗೂ ಪರಸ್ಪರ ವೈರಿಗಳಾಗಿದ್ದ ಹೆರೋದನು ಮತ್ತು ಪಿಲಾತನು ಅಂದೇ ಮಿತ್ರರಾದರು.
13
ಪಿಲಾತನು ಮುಖ್ಯಯಾಜಕರನ್ನೂ ಮುಖಂಡರನ್ನೂ ಜನರನ್ನೂ ಒಟ್ಟಾಗಿ ಕರೆಯಿಸಿ,
14
“ಜನರು ದಂಗೆಯೇಳುವಂತೆ ಈ ಮನುಷ್ಯ ಪ್ರೇರೇಪಿಸುತ್ತಾನೆಂದು ಇವನನ್ನು ನನ್ನ ಬಳಿಗೆ ಕರೆತಂದಿರಲ್ಲವೇ? ಇಗೋ, ನಿಮ್ಮ ಎದುರಿಗೇ ವಿಚಾರಣೆ ಮಾಡಿದ್ದೇನೆ; ಇವನಲ್ಲಿ ನೀವು ಆರೋಪಿಸುವಂಥ ದೋಷಗಳೊಂದೂ ನಮಗೆ ಕಾಣಲಿಲ್ಲ;
15
ಹೆರೋದ ಅರಸನಿಗೂ ಕಾಣಲಿಲ್ಲ; ಎಂದೇ ಇವನನ್ನು ಮರಳಿ ನನ್ನ ಬಳಿಗೆ ಕಳುಹಿಸಿಬಿಟ್ಟಿದ್ದಾರೆ. ಮರಣದಂಡನೆಗೆ ಗುರಿಯಾಗಿಸುವ ಯಾವುದನ್ನೂ ಇವನು ಮಾಡಿಲ್ಲ ಎಂಬುದು ಸ್ಪಷ್ಟವಾಗಿದೆ.
16
ಆದ್ದರಿಂದ ಇವನನ್ನು ದಂಡಿಸಿ ಬಿಟ್ಟುಬಿಡುತ್ತೇನೆ,” ಎಂದನು.
17
(ಪಾಸ್ಕಹಬ್ಬದ ಸಂದರ್ಭದಲ್ಲಿ ಜನರು ಕೇಳಿಕೊಂಡ ಒಬ್ಬ ಸೆರೆಯಾಳನ್ನು ಪಿಲಾತನು ಬಿಡುಗಡೆ ಮಾಡಬೇಕಾಗಿತ್ತು).
18
ಆದರೆ ಅವರೆಲ್ಲರೂ, “ಇವನನ್ನು ಮುಗಿಸಿಬಿಡಿ, ಬರಬ್ಬನನ್ನು ನಮಗೆ ಬಿಡುಗಡೆಮಾಡಿ,” ಎಂದು ಒಕ್ಕೊರಲಿನಿಂದ ಬೊಬ್ಬೆಹಾಕಿದರು.
19
ನಗರದಲ್ಲಿ ದಂಗೆ ಎಬ್ಬಿಸಿದ ಹಾಗೂ ಕೊಲೆಮಾಡಿದ ಕಾರಣ ಸೆರೆಯಲ್ಲಿ ಹಾಕಲಾಗಿದ್ದ ಬರಬ್ಬನೇ ಅವನು.
20
ಪಿಲಾತನು ಯೇಸುಸ್ವಾಮಿಯನ್ನು ಬಿಡುಗಡೆ ಮಾಡಬಯಸಿ ಮತ್ತೊಮ್ಮೆ ಜನರೊಡನೆ ಮಾತನಾಡಿ ನೋಡಿದನು.
21
ಅವರಾದರೋ, “ಇವನನ್ನು ಶಿಲುಬೆಗೇರಿಸಿ, ಇವನನ್ನು ಶಿಲುಬೆಗೇರಿಸಿ,” ಎಂದು ಆರ್ಭಟಿಸತೊಡಗಿದರು.
22
ಮೂರನೆಯ ಸಾರಿ ಪಿಲಾತನು, “ಏಕೆ? ಇವನೇನು ಕೇಡುಮಾಡಿದ್ದಾನೆ? ಇವನನ್ನು ಮರಣದಂಡನೆಗೆ ಗುರಿಪಡಿಸುವಂಥ ಅಪರಾಧ ಯಾವುದೂ ನನಗೆ ಕಂಡುಬರುವುದಿಲ್ಲ. ಆದ್ದರಿಂದ ಇವನನ್ನು ದಂಡಿಸಿ ಬಿಟ್ಟುಬಿಡುತ್ತೇನೆ,” ಎಂದನು.
23
ಆದರೂ ಅವರು ಅಧಿಕಾಧಿಕವಾಗಿ ಆರ್ಭಟಿಸುತ್ತಾ ಯೇಸುವನ್ನು ಶಿಲುಬೆಗೆ ಏರಿಸಲೇ ಬೇಕೆಂದು ಕೂಗಾಡಿದರು. ಕಟ್ಟಕಡೆಗೆ ಕೂಗಾಟಕ್ಕೇ ಗೆಲುವಾಯಿತು!
24
ಆ ಜನರ ಕೋರಿಕೆಯಂತೆಯೇ ಆಗಲೆಂದು ಪಿಲಾತನು ತೀರ್ಮಾನಿಸಿದನು.
25
ಅವರು ಕೇಳಿಕೊಂಡ ಪ್ರಕಾರ ಕೊಲೆಕಲಹಗಳ ನಿಮಿತ್ತ ಸೆರೆಯಲ್ಲಿದ್ದ ಬರಬ್ಬನನ್ನು ಬಿಡುಗಡೆ ಮಾಡಿದನು. ಯೇಸುವನ್ನಾದರೋ ಅವರ ಇಚ್ಛಾನುಸಾರಕ್ಕೆ ಬಿಟ್ಟುಬಿಟ್ಟನು.
26
ಸೈನಿಕರು ಯೇಸುಸ್ವಾಮಿಯನ್ನು ಕರೆದೊಯ್ಯುವಾಗ ಸಿರೇನ್ ಪಟ್ಟಣದ ಸಿಮೋನ ಎಂಬಾತ ಹಳ್ಳಿಯ ಕಡೆಯಿಂದ ಆ ಮಾರ್ಗವಾಗಿ ಬರುತ್ತಿದ್ದನು. ಅವನನ್ನು ಹಿಡಿದು ಶಿಲುಬೆಯನ್ನು ಹೊತ್ತು ಯೇಸುವಿನ ಹಿಂದೆ ಬರುವಂತೆ ಮಾಡಿದರು.
27
ಜನರ ದೊಡ್ಡ ಗುಂಪು ಯೇಸುವಿನ ಹಿಂದೆ ಹೊರಟಿತು. ಕೆಲವು ಮಹಿಳೆಯರು ಯೇಸುವಿಗಾಗಿ ದುಃಖಪಟ್ಟು, ಎದೆಬಡಿದುಕೊಂಡು ಗೋಳಾಡುತ್ತಾ, ಹಿಂಬಾಲಿಸುತ್ತಿದ್ದರು.
28
ಯೇಸು ಅವರ ಕಡೆ ತಿರುಗಿ, “ಜೆರುಸಲೇಮಿನ ಕುವರಿಯರೇ, ನನಗಾಗಿ ಅಳಬೇಡಿ; ನಿಮಗಾಗಿ, ನಿಮ್ಮ ಮಕ್ಕಳಿಗಾಗಿ ದುಃಖಿಸಿರಿ.
29
ಕಾಲವೊಂದು ಬರುವುದು; ಆಗ ಜನರು, ‘ಬಂಜೆಯರೇ ಭಾಗ್ಯವಂತರು! ಹೆರದವಳೇ, ಹಾಲೂಡಿಸದವಳೇ ಧನ್ಯಳು!’ ಎನ್ನುವರು.
30
ಅದೇ ಸಮಯದಲ್ಲಿ ‘ಪರ್ವತಗಳೇ, ನಮ್ಮನ್ನು ತುಳಿದುಬಿಡಿ; ಗುಡ್ಡಗಳೇ, ನಮ್ಮನ್ನು ನುಂಗಿಬಿಡಿ,’ ಎಂದು ಕೂಗಿಕೊಳ್ಳುವರು.
31
ಹಸಿಮರಕ್ಕೇ ಇಷ್ಟೆಲ್ಲಾ ಮಾಡಿದರೆ ಒಣಮರಕ್ಕಾಗುವ ಗತಿಯಾದರೂ ಏನು!” ಎಂದರು.
32
ಯೇಸುವಿನ ಸಂಗಡ ಕೊಲ್ಲುವುದಕ್ಕಾಗಿ ಇಬ್ಬರು ಅಪರಾಧಿಗಳನ್ನೂ ಕೊಂಡೊಯ್ಯುತ್ತಿದ್ದರು.
33
‘ಕಪಾಲ’ ಎಂಬ ಸ್ಥಳಕ್ಕೆ ಬಂದು ಸೇರಿದ ಮೇಲೆ ಯೇಸುಸ್ವಾಮಿಯನ್ನು ಶಿಲುಬೆಗೆ ಏರಿಸಿದರು. ಆ ಇಬ್ಬರು ಅಪರಾಧಿಗಳಲ್ಲಿ ಒಬ್ಬನನ್ನು ಅವರ ಬಲಗಡೆಯಲ್ಲೂ ಮತ್ತೊಬ್ಬನನ್ನು ಎಡಗಡೆಯಲ್ಲೂ ಶಿಲುಬೆಗೇರಿಸಿದರು.
34
ಆಗ ಯೇಸು, “ಪಿತನೇ, ಇವರನ್ನು ಕ್ಷಮಿಸಿ; ತಾವೇನು ಮಾಡುತ್ತಿರುವರೆಂದು ಇವರು ಅರಿಯರು,” ಎಂದರು. ಸೈನಿಕರಾದರೋ ಯೇಸುವಿನ ಬಟ್ಟೆಗಳನ್ನು ಚೀಟುಹಾಕಿ ಹಂಚಿಕೊಂಡರು.
35
ಜನರು ನೋಡುತ್ತಾ ನಿಂತಿದ್ದರು. ಅಲ್ಲಿದ್ದ ಮುಖಂಡರು ಯೇಸುವನ್ನು ಮೂದಲಿಸುತ್ತಾ, “ಇವನು ಇತರರನ್ನು ರಕ್ಷಿಸಿದ; ಇವನು ದೇವರಿಂದಲೇ ಅಭಿಷಿಕ್ತನಾದ ಲೋಕೋದ್ಧಾರಕನು ಮತ್ತು ಅವರಿಂದಲೇ ಆಯ್ಕೆಯಾದವನು ಆಗಿದ್ದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ,” ಎಂದರು.
36
ಸೈನಿಕರು ಮುಂದೆ ಬಂದು ಹುಳಿರಸವನ್ನು ಅವರತ್ತ ಒಡ್ಡಿ,
37
“ನೀನು ಯೆಹೂದ್ಯರ ಅರಸನಾಗಿದ್ದರೆ ನಿನ್ನನ್ನು ನೀನೇ ರಕ್ಷಿಸಿಕೊ,” ಎಂದು ಅಣಕಿಸುತ್ತಿದ್ದರು.
38
ಯೇಸುವಿನ ಶಿಲುಬೆಯ ಮೇಲ್ಗಡೆ, “ಇವನು ಯೆಹೂದ್ಯರ ಅರಸ” ಎಂಬ ಲಿಖಿತವಿತ್ತು.
39
ತೂಗುಹಾಕಿದ್ದ ಅಪರಾಧಿಗಳಲ್ಲಿ ಒಬ್ಬನು, “ನೀನು ಕ್ರಿಸ್ತ, ಅಲ್ಲವೆ? ಹಾಗಾದರೆ ನಿನ್ನನ್ನು ನೀನೇ ರಕ್ಷಿಸಿಕೋ, ನಮ್ಮನ್ನೂ ರಕ್ಷಿಸು,” ಎಂದು ಹಂಗಿಸಿದನು.
40
ಆದರೆ ಮತ್ತೊಬ್ಬ ಅಪರಾಧಿ ಅವನನ್ನು ಖಂಡಿಸುತ್ತಾ, “ನಿನಗೆ ದೇವರ ಭಯಬೇಡವೇ? ನೀನು ಸಹ ಇದೇ ಶಿಕ್ಷೆಗೆ ಗುರಿಯಾಗಿರುವೆ;
41
ನಮಗೇನೋ ಶಿಕ್ಷೆ ನ್ಯಾಯವಾಗಿದೆ, ನಮ್ಮ ಕೃತ್ಯಕ್ಕೆ ತಕ್ಕ ಫಲ ಸಿಕ್ಕಿದೆ; ಇವರಾದರೋ, ನಿರಪರಾಧಿ!” ಎಂದನು.
42
ಬಳಿಕ ಅವನು, “ಸ್ವಾಮಿ ಯೇಸುವೇ, ನೀವು ರಾಜ್ಯಾಧಿಕಾರದೊಡನೆ ಬರುವಾಗ ನನ್ನನ್ನು ಜ್ಞಾಪಿಸಿಕೊಳ್ಳಿ,” ಎಂದು ಬೇಡಿಕೊಂಡನು.
43
ಅವನಿಗೆ ಯೇಸು, “ಇಂದೇ ನೀನು ನನ್ನೊಡನೆ ಪರಂಧಾಮದಲ್ಲಿರುವೆ ಎಂದು ನಿಶ್ಚಯವಾಗಿ ಹೇಳುತ್ತೇನೆ,” ಎಂದರು.
44
ಆಗ ಸುಮಾರು ನಡುಮಧ್ಯಾಹ್ನ. ಆಗಿನಿಂದ ಮೂರು ಗಂಟೆಯವರೆಗೂ ಸೂರ್ಯನು ಕಾಂತಿಹೀನನಾದನು; ನಾಡಿನಲ್ಲೆಲ್ಲಾ ಕತ್ತಲೆ ಕವಿಯಿತು.
45
ಮಹಾದೇವಾಲಯದ ತೆರೆಯು ಇಬ್ಭಾಗವಾಗಿ ಸೀಳಿಹೋಯಿತು.
46
ಯೇಸುಸ್ವಾಮಿ, “ಪಿತನೇ, ನನ್ನಾತ್ಮವನ್ನು ನಿಮ್ಮ ಕೈಗೊಪ್ಪಿಸುತ್ತೇನೆ,” ಎಂದು ಗಟ್ಟಿಯಾಗಿ ಕೂಗಿ ಪ್ರಾಣಬಿಟ್ಟರು.
47
ನಡೆದುದನ್ನು ಕಂಡ ಶತಾಧಿಪತಿ ದೇವರನ್ನು ಹೊಗಳುತ್ತಾ, “ಈ ಮನುಷ್ಯ ಖಂಡಿತವಾಗಿ ಸತ್ಪುರುಷನೇ ಸರಿ,” ಎಂದನು.
48
ಈ ದೃಶ್ಯವನ್ನು ನೋಡಲು ಕೂಡಿದ್ದ ಜನರೆಲ್ಲರು ಅಲ್ಲಿ ನಡೆದುದನ್ನು ನೋಡಿ ದುಃಖದಿಂದ ಎದೆಬಡಿದುಕೊಳ್ಳುತ್ತಾ ಹಿಂದಿರುಗಿದರು.
49
ಯೇಸುವಿನ ಪರಿಚಿತರೆಲ್ಲರು ಹಾಗೂ ಗಲಿಲೇಯದಿಂದ ಹಿಂಬಾಲಿಸಿ ಬಂದಿದ್ದ ಮಹಿಳೆಯರು ದೂರದಲ್ಲಿ ನಿಂತುಕೊಂಡು ಇದೆಲ್ಲವನ್ನು ನೋಡುತ್ತಿದ್ದರು.
50
ಅರಿಮತಾಯ ಎಂಬುದು ಜುದೇಯದ ಒಂದು ಪಟ್ಟಣ. ಜೋಸೆಫನು ಇದರ ನಿವಾಸಿ. ಇವನು ಸದ್ಗುಣಶೀಲನು, ಸತ್ಪುರುಷನು ಹಾಗೂ ದೇವರ ಸಾಮ್ರಾಜ್ಯದ ಆಗಮನವನ್ನು ನಿರೀಕ್ಷಿಸುತ್ತಿದ್ದವನು. ಯೆಹೂದ್ಯರ ನ್ಯಾಯಸಭೆಯ ಸದಸ್ಯರಲ್ಲಿ ಇವನೂ ಒಬ್ಬನು. ಆದರೂ ಅವರ ತೀರ್ಪಿಗೂ ಕೃತ್ಯಕ್ಕೂ ಇವನು ಅನುಮತಿಸಿರಲಿಲ್ಲ.
52
ಇವನು ಪಿಲಾತನ ಬಳಿಗೆ ಹೋಗಿ ಯೇಸುವಿನ ಪಾರ್ಥಿವ ಶರೀರವನ್ನು ತನಗೆ ಕೊಡಿಸಬೇಕೆಂದು ಕೇಳಿಕೊಂಡನು.
53
ತರುವಾಯ ಶರೀರವನ್ನು ಶಿಲುಬೆಯಿಂದ ಇಳಿಸಿ, ನಾರುಮಡಿವಸ್ತ್ರದಲ್ಲಿ ಸುತ್ತಿ ಸಮಾಧಿಯಲ್ಲಿ ಇಟ್ಟನು. ಬಂಡೆಯೊಂದರಲ್ಲಿ ಕೊರೆಯಲಾಗಿದ್ದ ಈ ಸಮಾಧಿಯಲ್ಲಿ ಅದುವರೆಗೆ ಯಾರನ್ನೂ ಭೂಸ್ಥಾಪನೆ ಮಾಡಿರಲಿಲ್ಲ.
54
ಅಂದು ಶುಕ್ರವಾರ - ಸಿದ್ಧತೆಯ ದಿನ. ಇನ್ನೇನು ಸಬ್ಬತ್ ಪ್ರಾರಂಭವಾಗುವುದರಲ್ಲಿತ್ತು.
55
ಗಲಿಲೇಯದಿಂದ ಯೇಸುವಿನ ಸಂಗಡ ಬಂದಿದ್ದ ಮಹಿಳೆಯರು ಜೋಸೆಫನ ಜೊತೆ ಹೋಗಿ ಸಮಾಧಿಯನ್ನೂ ಯೇಸುವಿನ ಪಾರ್ಥಿವ ಶರೀರವನ್ನು ಅದರಲ್ಲಿಟ್ಟ ರೀತಿಯನ್ನೂ ನೋಡಿಕೊಂಡರು.
56
ಅನಂತರ ಅಲ್ಲಿಂದ ಹಿಂದಿರುಗಿ ಶವಲೇಪನಕ್ಕಾಗಿ ಸುಗಂಧದ್ರವ್ಯಗಳನ್ನು ಮತ್ತು ಪರಿಮಳ ತೈಲವನ್ನು ಸಿದ್ಧಮಾಡಿಕೊಂಡರು. ಸಬ್ಬತ್ದಿನ, ಧರ್ಮನಿಯಮಾನುಸಾರ ವಿಶ್ರಮಿಸಿಕೊಂಡರು.
← Chapter 22
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 24 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24