bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
Nehemiah 13
Nehemiah 13
Kannada Bible (KNCL) BSI 2016
← Chapter 12
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
1
ಆ ಕಾಲದಲ್ಲಿ ಜನರ ಮುಂದೆ ಮೋಶೆಯ ಧರ್ಮಶಾಸ್ತ್ರ ಪಾರಾಯಣವು ನಡೆಯುತ್ತಿತ್ತು. ಅದರಲ್ಲಿ - ಅಮ್ಮೋನಿಯರಾಗಲಿ ಮೋವಾಬ್ಯರಾಗಲಿ ದೇವರ ಸಭೆಯಲ್ಲಿ ಎಂದಿಗೂ ಸೇರಬಾರದಿತ್ತು.
2
ಏಕೆಂದರೆ ಅವರು ಇಸ್ರಯೇಲರನ್ನು ಅನ್ನಪಾನಗಳೊಡನೆ ಎದುರುಗೊಳ್ಳಲಿಲ್ಲ; ಅವರನ್ನು ಶಪಿಸುವುದಕ್ಕಾಗಿ ಬಿಳಾಮನಿಗೆ ಹಣಕೊಟ್ಟು ಅವನನ್ನು ಕರೆಸಿದ್ದರು. ನಮ್ಮ ದೇವರಾದರೋ ಅವನಿಂದ ಶಾಪವನ್ನಲ್ಲ, ಆಶೀರ್ವಾದವನ್ನೇ ಹೇಳಿಸಿದರು ಎಂಬ ಮಾತು ಬರೆದಿರುವುದಾಗಿ ಗೊತ್ತಾಯಿತು.
3
ಇಸ್ರಯೇಲರು ಈ ಧರ್ಮವಿಧಿಯನ್ನು ಕೇಳಿದೊಡನೆ ಎಲ್ಲ ಮಿಶ್ರಜಾತಿ ಅವರನ್ನು ತಮ್ಮ ಮಧ್ಯೆಯಿಂದ ಬೇರ್ಪಡಿಸಿದರು.
4
ಇದಕ್ಕಿಂತ ಮೊದಲು ಯಾಜಕ ಎಲ್ಯಾಷೀಬನು ನಮ್ಮ ದೇವಾಲಯದ ಕೊಠಡಿಗಳ ಮೇಲ್ವಿಚಾರಕನಾಗಿ ನೇಮಕಗೊಂಡಿದ್ದನು. ಇವನು ಟೋಬೀಯನ ಬೀಗನಾಗಿದ್ದುದರಿಂದ
5
ನೈವೇದ್ಯದ್ರವ್ಯ, ಧೂಪಪಾತ್ರೆ ಇವುಗಳನ್ನೂ ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳ ದಶಮಾಂಶವನ್ನೂ ಲೇವಿಯರಿಗೆ, ಗಾಯಕರಿಗೆ ಹಾಗು ದ್ವಾರಪಾಲಕರಿಗೆ ಸಲ್ಲತಕ್ಕ ಪದಾರ್ಥಗಳನ್ನೂ ಯಾಜಕರಿಗಾಗಿ ಪ್ರತ್ಯೇಕಿಸತಕ್ಕ ಪದಾರ್ಥಗಳನ್ನೂ ಇಡುವುದಕ್ಕಾಗಿ ಉಪಯೋಗಿಸುತ್ತಿದ್ದ ಕೊಠಡಿಯನ್ನು ಅವನಿಗಾಗಿ ಸಿದ್ಧಮಾಡಿಸಿಕೊಟ್ಟಿದ್ದನು.
6
ನಾನು ಬಾಬಿಲೋನಿನ ಅರಸ ಅರ್ತಷಸ್ತನ ಮೂವತ್ತೆರಡನೆಯ ವರ್ಷದಲ್ಲಿ ಅರಸನ ಬಳಿಗೆ ಹೋಗಿದ್ದೆ. ಆದುದರಿಂದ ಇದೆಲ್ಲಾ ನಡೆಯುವಾಗ ನಾನು ಜೆರುಸಲೇಮಿನಲ್ಲಿರಲಿಲ್ಲ. ಕ್ರಮೇಣ ನಾನು ಅರಸನಿಂದ ಅಪ್ಪಣೆ ಪಡೆದುಕೊಂಡು
7
ಮತ್ತೆ ಜೆರುಸಲೇಮಿಗೆ ಬಂದೆ. ಆಗ ಎಲ್ಯಾಷೀಬನು ಟೋಬೀಯನಿಗಾಗಿ ದೇವಾಲಯ ಪ್ರಾಕಾರದೊಳಗೆ ಕೊಠಡಿಯನ್ನು ಸಿದ್ಧಮಾಡಿಕೊಟ್ಟಿದ್ದನ್ನು ನೋಡಿದೆ.
8
ಈ ದುಷ್ಕೃತ್ಯದ ನಿಮಿತ್ತ ಬಹಳವಾಗಿ ವ್ಯಸನಗೊಂಡು ಟೋಬೀಯನ ಮನೆಯ ಸಾಮಾನುಗಳನ್ನು
9
ಆ ಕೊಠಡಿಯಿಂದ ಹೊರಗೆ ಹಾಕಿಸಿ ಕೊಠಡಿಯನ್ನು ಶುದ್ಧಮಾಡುವುದಕ್ಕೆ ಅಪ್ಪಣೆಕೊಟ್ಟೆ. ಅದು ಶುದ್ಧಮಾಡುವುದಕ್ಕೆ ಅಪ್ಪಣೆಕೊಟ್ಟೆ. ಅದು ಶುದ್ಧವಾದ ಮೇಲೆ ದೇವಾಲಯದ ಪಾತ್ರೆ, ನೈವೇದ್ಯದ್ರವ್ಯ, ಧೂಪ ಇವುಗಳನ್ನು ಪುನಃ ಅಲ್ಲಿಡಿಸಿದೆ.
10
ಇದಲ್ಲದೆ, ಲೇವಿಯರಿಗೆ ಸಲ್ಲತಕ್ಕ ಪಾಲುಗಳು ಅವರಿಗೆ ಸಿಕ್ಕಲಿಲ್ಲವೆಂದೂ ಆರಾಧನೆ ನಡೆಸತಕ್ಕ ಲೇವಿಯರೂ ಗಾಯಕರೂ ತಮ್ಮ ತಮ್ಮ ಆಸ್ತಿಯಿದ್ದಲ್ಲಿಗೆ ಹೋಗಿಬಿಟ್ಟರೆಂದೂ ನನಗೆ ಗೊತ್ತಾಯಿತು.
11
ಈ ಕಾರಣ ನಾನು ಅಧಿಕಾರಿಗಳನ್ನು, “ದೇವಾಲಯವನ್ನು ಅಲಕ್ಷ್ಯಮಾಡಿದ್ದೇಕೆ?\, ಎಂಬುದಾಗಿ ಪ್ರಶ್ನಿಸಿದೆ; ಬಿಟ್ಟುಹೋದವರನ್ನು ತಿರುಗಿ ಕರೆಸಿ, ಅವರನ್ನು ಅವರವರ ಉದ್ಯೋಗಗಳಲ್ಲಿರಿಸಿದೆ.
12
ಆಗ ಎಲ್ಲಾ ಯೆಹೂದ್ಯರು ತಮ್ಮ ತಮ್ಮ ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳಲ್ಲಿ ದಶಮಾಂಶವನ್ನು ತಂದು ಭಂಡಾರಗಳಲ್ಲಿ ಹಾಕಿದರು.
13
ಆಮೇಲೆ ಉಗ್ರಾಣಗಳನ್ನು ನೋಡಿಕೊಳ್ಳುವುದಕ್ಕೆ ಯಾಜಕನಾದ ಶೆಲೆಮ್ಯ, ಲೇಖಕನಾದ ಚಾದೋಕ್, ಲೇವಿಕುಲದವನಾದ ಪೆದಾಯ ಇವರನ್ನೂ ಇವರ ಸಹಾಯಕ್ಕಾಗಿ ಜಕ್ಕೂರನ ಮಗನೂ ಮತ್ತನ್ಯನ ಮೊಮ್ಮಗನೂ ಆದ ಹಾನಾನನನ್ನೂ ನೇಮಿಸಿದೆ. ಇವರೆಲ್ಲರೂ ನಂಬಿಕಸ್ತರೆಂದು ಹೆಸರುಗೊಂಡವರು. ತಮ್ಮ ಸಹೋದರರಿಗೆ ತಕ್ಕದ್ದನ್ನು ಹಂಚಿಕೊಡುವುದು ಇವರ ಕರ್ತವ್ಯವಾಗಿತ್ತು.
14
ನನ್ನ ದೇವರೇ, ಇದನ್ನು ನನ್ನ ಹಿತಕ್ಕಾಗಿ ಸ್ಮರಿಸಿಕೊಳ್ಳಿ. ನಾನು ನನ್ನ ದೇವರ ಆಲಯದ ಮತ್ತು ಅದರ ಸೇವೆಯ ಸಂಬಂಧವಾಗಿ ಮಾಡಿದ ಭಕ್ತಿಕಾರ್ಯಗಳನ್ನು ನಿಮ್ಮ ನೆನಪಿನಿಂದ ಅಳಿಸಿಬಿಡಬೇಡಿ.
15
ಆ ಕಾಲದಲ್ಲಿ, ಜನರು ಸಬ್ಬತ್ದಿನ ಜುದೇಯನಾಡಿನಲ್ಲಿ ತೊಟ್ಟಿಯೊಳಗೆ ದ್ರಾಕ್ಷಿ ತುಳಿಯುವುದನ್ನು ಕಂಡೆ; ಅಂತೆಯೇ ಕಣದ ಕಾಳನ್ನು ಕೂಡಿಸಿ ಆ ಕಾಳು, ದ್ರಾಕ್ಷಾರಸ, ದ್ರಾಕ್ಷಿ, ಅಂಜೂರದ ಹಣ್ಣು, ಈ ಮುಂತಾದವುಗಳನ್ನು ಕತ್ತೆಗಳ ಮೇಲೆ ಹೇರಿಕೊಂಡು ಆ ದಿನದಲ್ಲೇ ಜೆರುಸಲೇಮಿಗೆ ತರುವುದನ್ನು ಗಮನಿಸಿದೆ. ಅವರು ಆ ಆಹಾರ ಪದಾರ್ಥಗಳನ್ನು ಮಾರುವುದಕ್ಕೆ ಬಂದಾಗ ಅವರನ್ನು ಗದರಿಸಿದೆ.
16
ಇದಲ್ಲದೆ, ಈ ನಾಡಿನಲ್ಲಿ ವಾಸಿಸುತ್ತಿದ್ದ ಟೈರಿನವರು ಮೀನು ಮುಂತಾದ ಸರಕುಗಳನ್ನು ತಂದು ಯೆಹೂದ್ಯರಿಗೆ ಸಬ್ಬತ್ದಿನದಲ್ಲಿ ಜೆರುಸಲೇಮಿನಲ್ಲೇ ಮಾರುತ್ತಿದ್ದರು.
17
ಆಗ ನಾನು ಯೆಹೂದ ಶ್ರೀಮಂತರಿಗೆ, “ನೀವು ಮಾಡುವುದು ಎಂಥ ದುಷ್ಕೃತ್ಯ! ನೀವು ಸಬ್ಬತ್ದಿನವನ್ನು ಅಶುದ್ಧಮಾಡುತ್ತಿದ್ದೀರಿ.
18
ನಿಮ್ಮ ಪೂರ್ವಿಕರು ಹೀಗೆ ಮಾಡಿದ್ದರಿಂದಲೆ ನಮ್ಮ ದೇವರು ಎಲ್ಲಾ ಕೇಡನ್ನು ನಮ್ಮ ಮೇಲೂ ನಮ್ಮ ಪಟ್ಟಣದ ಮೇಲೂ ಬರಮಾಡಿದ್ದಾರೆ. ಹೀಗಿರಲಾಗಿ, ನೀವೂ ಸಬ್ಬತ್ದಿನವನ್ನು ಅಶುದ್ಧಮಾಡಿ ಇಸ್ರಯೇಲರ ಮೇಲಿದ್ದ ದೇವಕೋಪವನ್ನು ಹೆಚ್ಚಿಸಬೇಡಿ,” ಎಂದು ಹೇಳಿ ಅವರನ್ನು ಗದರಿಸಿದೆ.
19
ಇದಲ್ಲದೆ, “ಸಬ್ಬತ್ದಿನ ಪ್ರಾರಂಭವಾಗುವುದಕ್ಕಿಂತ ಮೊದಲು ಜೆರುಸಲೇಮಿನ ಬಾಗಿಲುಗಳಲ್ಲಿ ಕತ್ತಲಾಗುವಾಗಲೇ ಕದಗಳನ್ನು ಮುಚ್ಚಿಸಬೇಕು; ಸಬ್ಬತ್ದಿನ ಗತಿಸುವುದಕ್ಕಿಂತ ಮುಂಚೆ ಅವುಗಳನ್ನು ತೆರೆಯಬಾರದು,” ಎಂದು ಆಜ್ಞಾಪಿಸಿದೆ. ಯಾವ ಹೊರೆಯೂ ಒಳಗೆ ಬಾರದಂತೆ ನನ್ನ ಸೇವಕರಲ್ಲಿ ಕೆಲವರನ್ನು ಬಾಗಿಲುಗಳ ಬಳಿಯಲ್ಲಿ ಕಾವಲಿರಿಸಿದೆ.
20
ಆದುದರಿಂದ ವರ್ತಕರು ಹಾಗು ಎಲ್ಲ ತರದ ದಿನಸುಗಳನ್ನು ಮಾರುವುದಕ್ಕೆ ಬಂದವರು ಒಂದೆರಡು ಸಾರಿ ಜೆರುಸಲೇಮಿನ ಹೊರಗಡೆಯೇ ಇಳಿದುಕೊಂಡರು.
21
ಕಡೆಗೆ ನಾನು ಅವರನ್ನು, “ನೀವು ಗೋಡೆಯ ಹೊರಗೇಕೆ ಇಳಿದುಕೊಂಡಿದ್ದೀರಿ? ನೀವು ಮತ್ತೆ ಹೀಗೆ ಮಾಡಿದರೆ ನಿಮ್ಮನ್ನು ಸೆರೆಹಿಡಿಸುವೆನು,” ಎಂದು ಗದರಿಸಿದೆ.
22
ಅವರು ಅಂದಿನಿಂದ ಸಬ್ಬತ್ದಿನದಂದು ಪುನಃ ಬರಲಿಲ್ಲ. ಆಮೇಲೆ ನಾನು ಲೇವಿಯರಿಗೆ, “ಸಬ್ಬತ್ದಿನವನ್ನು ಪರಿಶುದ್ಧದಿನವೆಂದು ಆಚರಿಸುವ ಹಾಗೆ ನೀವು ನಿಮ್ಮನ್ನು ಶುದ್ಧಿಪಡಿಸಿಕೊಂಡು ಬಂದು ಬಾಗಿಲುಗಳನ್ನು ಕಾಯಬೇಕು,” ಎಂದು ಆಜ್ಞಾಪಿಸಿದೆ. “ನನ್ನ ದೇವರೇ, ಇದನ್ನೂ ನನ್ನ ಹಿತಕ್ಕಾಗಿ ನೆನಪುಮಾಡಿಕೊಂಡು ನಿಮ್ಮ ಮಹಾಕೃಪೆಗನುಸಾರ ನನ್ನನ್ನು ಕನಿಕರಿಸಿರಿ.”
23
ಅದೇ ಕಾಲದಲ್ಲಿ ಅಷ್ಡೋದ್, ಅಮ್ಮೋನಿಯ ಹಾಗು ಮೋವಾಬ್ ಮಹಿಳೆಯರನ್ನು ಮದುವೆಮಾಡಿಕೊಂಡ ಯೆಹೂದ್ಯರನ್ನು ಕುರಿತು ನಾನು ವಿಚಾರಮಾಡಿದೆ.
24
ಅವರ ಮಕ್ಕಳಲ್ಲಿ ಅರ್ಧಮಂದಿ ಜುದೇಯದ ಭಾಷೆಯಲ್ಲಿ ಮಾತಾಡಲರಿಯದೆ ಅಷ್ಡೋದ್ಯ ಮುಂತಾದ ಜನರ ಭಾಷೆಯನ್ನಾಡುತ್ತಾರೆ ಎಂದು ತಿಳಿಯಿತು.
25
ಕೋಪಗೊಂಡು ಅವರನ್ನು ಶಪಿಸಿದೆ; ಅವರಲ್ಲಿ ಕೆಲವರನ್ನು ಹೊಡೆದು ಅವರ ಕೂದಲುಗಳನ್ನು ಕೀಳಿಸಿದೆ.
26
“ಅಂಥ ಮಹಿಳೆಯರ ದೆಸೆ ಇಂದಲೇ ಇಸ್ರಯೇಲ್ ಅರಸ ಸೊಲೊಮೋನನು ದೋಷಿಯಾದ; ಅನೇಕಾನೇಕ ಜನಾಂಗಗಳಲ್ಲಿ ಅವನಿಗೆ ಸಮಾನನಾದ ಅರಸನಿರಲಿಲ್ಲ; ಅವನು ತನ್ನ ದೇವರಿಗೆ ವಿಶೇಷಪ್ರಿಯನು; ಆದುದರಿಂದಲೇ ದೇವರು ಅವನನ್ನು ಎಲ್ಲ ಇಸ್ರಯೇಲರ ಮೇಲೆ ಅರಸನನ್ನಾಗಿ ನೇಮಿಸಿದರು. ಆದರೂ ಅನ್ಯದೇಶದ ಮಹಿಳೆಯರು ಅವನನ್ನು ಪಾಪದಲ್ಲಿ ಬೀಳಿಸಿದರು.
27
ಹೀಗಿರಲಾಗಿ, ನೀವೂ ಅನ್ಯಮಹಿಳೆಯರನ್ನು ಮದುವೆಮಾಡಿಕೊಂಡು, ಅದೇ ಘೋರವಾದ ದುಷ್ಕೃತ್ಯವನ್ನು ನಡೆಸಿ, ದೇವರಿಗೆ ದ್ರೋಹಿಗಳಾಗುವುದನ್ನು ನಾವು ಒಪ್ಪಿಕೊಳ್ಳುವುದಿಲ್ಲ,” ಎಂದು ಅವರನ್ನು ಗದರಿಸಿದೆ.”ಅನ್ಯರ ಮಕ್ಕಳಿಗೆ ಹೆಣ್ಣು ಕೊಡಬಾರದು; ನಮಗಾಗಲಿ ನಮ್ಮ ಮಕ್ಕಳಿಗಾಗಲಿ ಅವರಿಂದ ಹೆಣ್ಣು ತರಲೂಬಾರದು” ಎಂಬ ಧರ್ಮವಿಧಿಯನ್ನು ಕೈಗೊಳ್ಳುವುದಾಗಿ ದೇವರ ಹೆಸರಿನಲ್ಲಿ ಅವರಿಂದ ಪ್ರಮಾಣ ಮಾಡಿಸಿದೆ.
28
ಮಹಾಯಾಜಕ ಎಲ್ಯಾಷೀಬನ ಮಗ ಯೋಯಾದನ ಮಕ್ಕಳಲ್ಲೊಬ್ಬನು ಹೊರೋನ್ಯನಾದ ಸನ್ಬಲ್ಲಟನಿಗೆ ಅಳಿಯನಾದುದರಿಂದ ಅವನನ್ನು ನನ್ನ ಸನ್ನಿಧಿಯಿಂದ ಓಡಿಸಿಬಿಟ್ಟೆ.
29
“ನನ್ನ ದೇವರೇ, ಅವರು ಯಾಜಕತ್ವವನ್ನೂ ಯಾಜಕರ ಮತ್ತು ಲೇವಿಯರ ಪ್ರತಿಜ್ಞೆಯನ್ನೂ ಹೊಲೆಮಾಡಿದ್ದಾರೆ; ಇದನ್ನು ನೆನಪುಮಾಡಿಕೊಳ್ಳಿ.”
30
ನಾನು ಈ ಪ್ರಕಾರ ಅನ್ಯವಾದ್ದನ್ನೆಲ್ಲಾ ತೆಗೆಸಿ, ಅವರನ್ನು ಶುದ್ದಪಡಿಸಿದೆ; ಯಾಜಕರಲ್ಲೂ ಪ್ರತಿಯೊಬ್ಬನಿಗಿದ್ದ ಕೆಲಸದ ವಿಷಯವಾಗಿ ಹಾಗು
31
ನೇಮಿತಕಾಲಗಳಲ್ಲಿ ಸಲ್ಲತಕ್ಕ ಕಾಷ್ಠದಾನದ ಮತ್ತು ಪ್ರಥಮ ಫಲದ ವಿಷಯವಾಗಿ ಕ್ರಮಗಳನ್ನು ಏರ್ಪಡಿಸಿದೆ; ನನ್ನ ದೇವರೇ, ನನ್ನ ಹಿತಕ್ಕಾಗಿ ಇದನ್ನು ನೆನಪುಮಾಡಿಕೊಳ್ಳಿ.
← Chapter 12
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
All chapters:
1
2
3
4
5
6
7
8
9
10
11
12
13