bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada (ERV) 1997 (ಪರಿಶುದ್ದ ಬೈಬಲ್)
/
Micah 2
Micah 2
Kannada (ERV) 1997 (ಪರಿಶುದ್ದ ಬೈಬಲ್)
← Chapter 1
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 3 →
1
ಪಾಪಮಾಡಲು ಯೋಚಿಸುವವರಿಗೆ ಸಂಕಟವು ಒದಗುವದು. ಇವರು ಹಾಸಿಗೆಯ ಮೇಲೆ ಬಿದ್ದುಕೊಂಡು ಪಾಪಮಾಡಲು ಯೋಚಿಸುತ್ತಾರೆ. ಬೆಳಿಗ್ಗೆ ಸೂರ್ಯ ಮೂಡಲು ತಾವು ಯೋಚಿಸಿದ ಪಾಪವನ್ನು ಕಾರ್ಯಗತ ಮಾಡುತ್ತಾರೆ. ಯಾಕೆ? ಯಾಕೆಂದರೆ ಅವರಿಗೆ ತಮ್ಮ ಇಷ್ಟಪ್ರಕಾರ ನಡೆದುಕೊಳ್ಳಲು ಬಲವಿದೆ.
2
ಅವರಿಗೆ ಹೊಲಗದ್ದೆಗಳು ಬೇಕು, ಅದನ್ನು ಅವರು ತೆಗೆದುಕೊಳ್ಳುವರು. ಅವರಿಗೆ ಮನೆಮಠಗಳು ಬೇಕು, ಅದನ್ನು ಅವರು ತೆಗೆದುಕೊಳ್ಳುವರು. ಒಬ್ಬನಿಗೆ ಮೋಸಮಾಡಿ ಅವನ ಮನೆಯನ್ನು ಕಿತ್ತುಕೊಳ್ಳುವರು. ಇನ್ನೊಬ್ಬನಿಗೆ ಮೋಸಮಾಡಿ ಅವನ ಹೊಲಗದ್ದೆಗಳನ್ನು ಕಿತ್ತುಕೊಳ್ಳುವರು.
3
ಅದಕ್ಕಾಗಿಯೇ ಯೆಹೋವನು ಹೀಗೆ ಹೇಳುತ್ತಾನೆ: “ನೋಡಿ, ನಾನು ಈ ಕುಟುಂಬದ ವಿರುದ್ಧವಾಗಿ ಸಂಕಟ ತರಲು ಯೋಚಿಸುತ್ತಿದ್ದೇನೆ. ನಿನ್ನನ್ನು ನೀನು ರಕ್ಷಿಸಲು ಸಾಧ್ಯವಿರುವುದಿಲ್ಲ. ಭಯಂಕರ ದಿವಸಗಳು ಬರುವದರಿಂದ ನೀನು ಉಬ್ಬಿಕೊಳ್ಳುವುದನ್ನು ನಿಲ್ಲಿಸುವೆ.
4
ಆಗ ಜನರು ನಿಮ್ಮ ಬಗ್ಗೆ ಹಾಡನ್ನು ಹಾಡುವರು. ಜನರು ಶೋಕಗೀತೆಯನ್ನು ಹಾಡುವರು. ‘ನಾವು ನಾಶವಾದೆವು! ಯೆಹೋವನು ನಮ್ಮ ದೇಶವನ್ನು ನಮ್ಮಿಂದ ತೆಗೆದುಕೊಂಡು ಇತರ ಜನರಿಗೆ ಕೊಟ್ಟನು. ಹೌದು, ಆತನು ನಮ್ಮ ಭೂಮಿಯನ್ನು ನಮ್ಮಿಂದ ತೆಗೆದುಕೊಂಡುಬಿಟ್ಟನು, ನಮ್ಮ ಗದ್ದೆಗಳನ್ನು ಯೆಹೋವನು ನಮ್ಮ ವೈರಿಗಳಿಗೆ ಪಾಲು ಮಾಡಿಕೊಟ್ಟನು.
5
ಈಗ ನಾವು ನಮ್ಮ ದೇಶವನ್ನು ಅಳತೆಮಾಡಿ ದೇವಜನರಿಗೆ ಹಂಚಲು ಆಗುವದಿಲ್ಲ.”
6
ಜನರು, “ನೀನು ನಮಗೆ ಬೋಧಿಸಬೇಡ, ಆ ಕೆಟ್ಟವಿಷಯಗಳನ್ನು ನಮಗೆ ಹೇಳಬೇಡ, ನಮಗೆ ಯಾವ ಕೆಟ್ಟ ವಿಷಯವೂ ಸಂಭವಿಸುವುದಿಲ್ಲ” ಎಂದು ಹೇಳುತ್ತಾರೆ.
7
ಆದರೆ ಯಾಕೋಬಿನ ಜನರೇ, ನಾನು ನಿಮಗೆ ಹೇಳಲೇಬೇಕು. ನಿಮ್ಮ ದುಷ್ಟತನದ ನಿಮಿತ್ತ ಯೆಹೋವನು ತನ್ನ ತಾಳ್ಮೆಯನ್ನು ಕಳೆದುಕೊಂಡಿದ್ದಾನೆ. ನೀವು ನ್ಯಾಯವಾದ ರೀತಿಯಲ್ಲಿ ಜೀವಿಸುತ್ತಿದ್ದರೆ ನಾನು ನಿಮಗೆ ಒಳ್ಳೆಯ ಸಂಗತಿಗಳನ್ನು ತಿಳಿಸುತ್ತಿದ್ದೆ.
8
ಆದರೆ ನನಗೆ ವೈರಿಯಂತೆ ಎದ್ದುನಿಂತಿರುವ ನನ್ನ ಜನರೇ, ನೀವು ಹಾದುಹೋಗುವವರ ಬಟ್ಟೆಯನ್ನು ಅವರ ಬೆನ್ನಿನ ಮೇಲಿಂದ ಕಿತ್ತುಕೊಳ್ಳುತ್ತೀರಿ. ನಿಭರ್ಯವಾಗಿ ಓಡಾಡುವ ಜನರಿಂದ ಕೈದಿಗಳೋ ಎಂಬಂತೆ ಸುಲಿದುಕೊಳ್ಳುತ್ತೀರಿ.
9
ನನ್ನ ಜನರು ಸ್ತ್ರೀಯರ ಕೈಯಿಂದ ಅಂದವಾದ ಮನೆಗಳನ್ನು ಕಿತ್ತುಕೊಂಡಿದ್ದೀರಿ; ಅವರ ಚಿಕ್ಕಮಕ್ಕಳಿಂದ ನನ್ನ ಐಶ್ವರ್ಯವನ್ನು ನಿರಂತರಕ್ಕೂ ಕಿತ್ತುಕೊಂಡಿದ್ದೀರಿ.
10
ಎದ್ದು ಈ ಸ್ಥಳವನ್ನು ಬಿಟ್ಟುಹೋಗು. ಇದು ನಿನ್ನ ವಿಶ್ರಾಂತಿಯ ಸ್ಥಳವಲ್ಲ, ಯಾಕೆಂದರೆ ನೀನು ಇದನ್ನು ಹಾಳು ಮಾಡಿರುವೆ. ನೀನು ಇದನ್ನು ಹೊಲಸು ಮಾಡಿರುವೆ, ಆದ್ದರಿಂದ ಇದು ನಾಶವಾಗುವದು; ಭಯಂಕರ ರೀತಿಯಲ್ಲಿ ಕೆಡವಲ್ಪಡುವದು.
11
ಈ ಜನರು ನನ್ನ ಮಾತುಗಳನ್ನು ಕೇಳಲು ಇಷ್ಟಪಡುವದಿಲ್ಲ. ಆದರೆ ಬೇರೊಬ್ಬನ ಸುಳ್ಳು ಮಾತುಗಳನ್ನು ಕೇಳಲು ಇಷ್ಟಪಡುವರು. ಸುಳ್ಳು ಪ್ರವಾದಿಯು ಬಂದು, “ನಿಮಗೆ ಒಳ್ಳೆಯ ಭವಿಷ್ಯವಿದೆ. ಬೇಕಾದಷ್ಟು ದ್ರಾಕ್ಷಾರಸ, ಮದ್ಯವು ನಿಮಗೆ ದೊರಕುವವು” ಎಂದು ಹೇಳಿದರೆ ಅವರು ಅವನನ್ನು ನಂಬಿ ಸ್ವೀಕರಿಸಿಕೊಳ್ಳುವರು.
12
ಯಾಕೋಬಿನ ಜನರೇ, ನಾನು ನಿಮ್ಮೆಲ್ಲರನ್ನು ಒಟ್ಟಾಗಿ ಸೇರಿಸುತ್ತೇನೆ. ಇಸ್ರೇಲಿನಲ್ಲಿ ಉಳಿದವರನ್ನೆಲ್ಲಾ ಒಟ್ಟುಗೂಡಿಸುತ್ತೇನೆ. ಹಟ್ಟಿಯೊಳಗೆ ಕುರಿಗಳನ್ನು ಸೇರಿಸುವಂತೆ, ಹುಲ್ಲುಗಾವಲಿನಲ್ಲಿ ಕುರಿಮಂದೆ ಸೇರಿಸಲ್ಪಡುವಂತೆ ನಾನು ಅವರನ್ನು ಒಟ್ಟುಗೂಡಿಸುವೆನು. ಆಗ ಆ ಸ್ಥಳವು ಜನಸಮೂಹದ ಗದ್ದಲದಿಂದ ತುಂಬಿಹೋಗುವುದು.
13
ಆಗ ಒಡೆದುಹಾಕುವವನು ಜನಗಳ ಮುಂದೆ ಮುನ್ನುಗ್ಗಿ ಹೋಗಿ, ದ್ವಾರಗಳನ್ನು ಒಡೆದುಹಾಕಿದಾಗ ಜನರು ಪಟ್ಟಣವನ್ನು ಬಿಟ್ಟುಹೋಗುವರು. ಅವರು ತಮ್ಮ ರಾಜನನ್ನೂ ಕರ್ತನನ್ನೂ ಹಿಂಬಾಲಿಸಿಕೊಂಡು ಅಲ್ಲಿಂದ ಹೋಗುವರು.
← Chapter 1
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 3 →
All chapters:
1
2
3
4
5
6
7