bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
/
1 Chronicles 23
1 Chronicles 23
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
← Chapter 22
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 24 →
1
ದಾವೀದನು ಮುದುಕನಾದ ಮೇಲೆ ತನ್ನ ಮಗ ಸೊಲೊಮೋನನನ್ನು ಇಸ್ರಾಯೇಲಿನ ಮೇಲೆ ಅರಸನಾಗಿ ಮಾಡಿದನು.
2
ಇದಲ್ಲದೆ ತಾನು ಇಸ್ರಾಯೇಲಿನ ಸಮಸ್ತ ಪ್ರಧಾನರನ್ನೂ ಯಾಜಕರನ್ನೂ ಲೇವಿಯರನ್ನೂ ಒಟ್ಟುಗೂಡಿಸಿ ಬರಮಾಡಿದನು.
3
ಲೇವಿಯರು ಮೂವತ್ತು ವರ್ಷ ಪ್ರಾಯದವರು ಮೊದಲುಗೊಂಡು ಎಣಿಕೆಯಾಗಿದ್ದರು. ಅವರ ಪುರುಷರ ಲೆಕ್ಕವು ಮೂವತ್ತೆಂಟು ಸಾವಿರವಾಗಿತ್ತು.
4
ದಾವೀದನು ಹೇಳಿದ್ದೇನೆಂದರೆ, “ಇವರಲ್ಲಿ ಇಪ್ಪತ್ತನಾಲ್ಕು ಸಾವಿರ ಮಂದಿ ಯೆಹೋವ ದೇವರ ಮನೆಯ ಕೆಲಸವನ್ನು ನಡಿಸುವವರಾಗಿದ್ದರು. ಮತ್ತು ಆರು ಸಾವಿರ ಮಂದಿ ಪಾರುಪತ್ಯಗಾರರೂ ನ್ಯಾಯಾಧಿಪತಿಗಳೂ ಆಗಿದ್ದರು.
5
ಇದಲ್ಲದೆ ನಾಲ್ಕು ಸಾವಿರ ಮಂದಿ ದ್ವಾರಪಾಲಕರಾಗಿದ್ದರು. ನಾಲ್ಕು ಸಾವಿರ ಮಂದಿ ಸ್ತುತಿಸುವುದಕ್ಕೆ ತಾನು ಸಿದ್ಧಮಾಡಿದ ವಾದ್ಯಗಳಿಂದ ಯೆಹೋವ ದೇವರನ್ನು ಸ್ತುತಿಸಿದರು.”
6
ಇದಲ್ಲದೆ ದಾವೀದನು ಗೇರ್ಷೋನ್ಯರು, ಕೊಹಾತ್ಯರು, ಮೆರಾರೀಯರು ಎಂಬ ಲೇವಿಯರನ್ನು ಮೂರು ವರ್ಗಗಳಾಗಿ ವಿಭಾಗಿಸಿದನು.
7
ಗೇರ್ಷೋನ್ಯರಲ್ಲಿ, ಲದ್ದಾನ್ ಮತ್ತು ಶಿಮ್ಮೀ.
8
ಲದ್ದಾನನ ಪುತ್ರರು: ಮೊದಲನೆಯವನು ಯೆಹೀಯೇಲ್, ಜೇತಾಮ್, ಯೋಯೇಲ್ ಎಂಬ ಮೂರು ಮಕ್ಕಳಿದ್ದರು.
9
ಶಿಮ್ಮೀಯ ಪುತ್ರರು: ಶೆಲೋಮೋತ್, ಹಜೀಯೇಲ್, ಹಾರಾನ್ ಎಂಬ ಮೂರು ಮಂದಿಯು. ಇವರು ಲದ್ದಾನನ ಕುಟುಂಬಗಳಲ್ಲಿ ಮುಖ್ಯಸ್ಥರಾಗಿದ್ದರು.
10
ಶಿಮ್ಮೀಯ ಪುತ್ರರು: ಯಹತ್, ಜೀನ, ಯೆಯೂಷ್, ಬೆರೀಯ ಶಿಮ್ಮನ ಈ ನಾಲ್ಕು ಮಂದಿ ಪುತ್ರರಲ್ಲಿ
11
ಯಹತನು ಮೊದಲನೆಯವನು, ಜೀಜನು ಎರಡನೆಯವನಾಗಿದ್ದನು. ಯೆಯೂಷನಿಗೂ ಬೆರೀಯನಿಗೂ ಹೆಚ್ಚು ಮಕ್ಕಳು ಇಲ್ಲದ್ದರಿಂದ ಇವರು ತಮ್ಮ ತಂದೆಯ ಮನೆಯಲ್ಲಿ ಒಂದೇ ಲೆಕ್ಕವಾಗಿ ಎಣಿಕೆಯಾಗಿದ್ದರು.
12
ಕೊಹಾತನ ಪುತ್ರರು: ಅಮ್ರಾಮ್, ಇಚ್ಹಾರ್, ಹೆಬ್ರೋನ್, ಉಜ್ಜೀಯೇಲ್ ಎಂಬ ನಾಲ್ಕು ಮಂದಿ ಮಕ್ಕಳಿದ್ದರು.
13
ಅಮ್ರಾಮನ ಪುತ್ರರು: ಆರೋನ್ ಮತ್ತು ಮೋಶೆ; ಆರೋನನನ್ನು ಮತ್ತು ಅವನ ಪುತ್ರರನ್ನು ಮಹಾಪರಿಶುದ್ಧವಾದ ವಸ್ತುಗಳನ್ನು ಪ್ರತಿಷ್ಠಿಸುವುದಕ್ಕೆ ಶಾಶ್ವತವಾಗಿ ಪ್ರತ್ಯೇಕಿಸಲಾಯಿತು. ಇವರು ಯೆಹೋವ ದೇವರ ಸನ್ನಿಧಿಯಲ್ಲಿ ಸದಾಕಾಲ ಧೂಪಹಾಕುವವರೂ, ಅವರ ಸೇವೆ ಮಾಡುವವರೂ, ಅವರ ಹೆಸರಿನಿಂದ ಜನರನ್ನು ಆಶೀರ್ವದಿಸುವವರೂ ಆಗಿದ್ದರು.
14
ದೇವರ ಮನುಷ್ಯನಾದ ಮೋಶೆಯಾದರೋ, ಅವನ ಪುತ್ರರು ಲೇವಿಯ ಗೋತ್ರದಲ್ಲಿ ಲೆಕ್ಕಿತರಾಗಿದ್ದರು.
15
ಮೋಶೆಯ ಪುತ್ರರು: ಗೇರ್ಷೋಮ್ ಮತ್ತು ಎಲೀಯೆಜೆರ್.
16
ಗೇರ್ಷೋಮನ ಪುತ್ರರಲ್ಲಿ ಶೆಬೂಯೇಲನು ಮೊದಲನೆಯವನಾಗಿದ್ದನು.
17
ಎಲೀಯೆಜೆರನ ಪುತ್ರರು: ಮೊದಲನೆಯವನಾದ ರೆಹಬ್ಯನು. ಇವನ ಹೊರತಾಗಿ ಎಲೀಯೆಜೆರನಿಗೆ ಬೇರೆ ಪುತ್ರರಿಲ್ಲ; ಆದರೆ ರೆಹಬ್ಯನ ಪುತ್ರರು ಬಹಳ ಮಂದಿ ಇದ್ದರು.
18
ಇಚ್ಹಾರನ ಪುತ್ರರಲ್ಲಿ ಶೆಲೋಮೋತನು ಮೊದಲನೆಯವನಾಗಿದ್ದನು.
19
ಹೆಬ್ರೋನನ ಪುತ್ರರಲ್ಲಿ ಯೆರೀಯ ಮೊದಲನೆಯವನೂ ಅಮರ್ಯ ಎರಡನೆಯವನು, ಯಹಜಿಯೇಲ್ ಮೂರನೆಯವನು, ಯೆಕಮ್ಮಾಮ್ ನಾಲ್ಕನೆಯವನು.
20
ಉಜ್ಜೀಯೇಲನ ಪುತ್ರರಲ್ಲಿ ಮೀಕನು ಮೊದಲನೆಯವನು, ಇಷೀಯನು ಎರಡನೆಯವನು.
21
ಮೆರಾರೀಯ ಪುತ್ರರು: ಮಹ್ಲೀ ಮತ್ತು ಮೂಷೀ. ಮಹ್ಲೀಯ ಪುತ್ರರು: ಎಲಿಯಾಜರ್ ಮತ್ತು ಕೀಷ್.
22
ಎಲಿಯಾಜರನು ಗಂಡುಮಕ್ಕಳಿಲ್ಲದೆ ಸತ್ತನು. ಅವನಿಗೆ ಪುತ್ರಿಯರು ಮಾತ್ರ ಇದ್ದರು; ಇವರು ತಮ್ಮ ಬಂಧುಗಳಾದ ಕೀಷನ ಪುತ್ರರೊಂದಿಗೆ ಮದುವೆಯಾದರು.
23
ಮೂಷೀಯ ಪುತ್ರರು: ಮಹ್ಲೀ, ಏದೆರ್, ಯೆರೇಮೋತ್ ಎಂಬ ಈ ಮೂರು ಮಂದಿ.
24
ಇವರು ತಮ್ಮ ಪಿತೃಗಳ ವಂಶದ ಪ್ರಕಾರವಾಗಿ ಲೇವಿಯ ಪುತ್ರರಾಗಿದ್ದರು. ತಮ್ಮ ಹೆಸರುಗಳಿಂದ, ಎಣಿಕೆಯಾಗಿದ್ದ ಇವರು ತಮ್ಮ ಕುಟುಂಬಗಳಲ್ಲಿ ಮುಖ್ಯಸ್ಥರಾಗಿದ್ದರು. ಇವರು ಇಪ್ಪತ್ತು ವರ್ಷ ಪ್ರಾಯದವರು ಮೊದಲುಗೊಂಡು, ಯೆಹೋವ ದೇವರ ಮನೆಯ ಸೇವೆಗೋಸ್ಕರ ಕೆಲಸಮಾಡಿದರು.
25
ದಾವೀದನು, “ಇಸ್ರಾಯೇಲಿನ ದೇವರಾದ ಯೆಹೋವ ದೇವರು, ಅವರು ಯುಗಯುಗಾಂತರಕ್ಕೂ ಯೆರೂಸಲೇಮಿನಲ್ಲಿ ವಾಸಿಸುವ ಹಾಗೆ ತಮ್ಮ ಜನರಿಗೆ ವಿಶ್ರಾಂತಿಯನ್ನು ಕೊಟ್ಟಿದ್ದಾರೆ,” ಎಂದು ಹೇಳಿ,
26
ಲೇವಿಯರನ್ನು ಕುರಿತು ಅವರು ಗುಡಾರವನ್ನೂ, ಅವರ ಸೇವೆಗೋಸ್ಕರ ಅದರ ಪಾತ್ರೆಗಳನ್ನೂ ಇನ್ನು ಮೇಲೆ ಹೊರುವ ಕೆಲಸವಿಲ್ಲವೆಂದು ಹೇಳಿದ್ದನು.
27
ಏಕೆಂದರೆ ದಾವೀದನ ಕಡೇ ಮಾತುಗಳ ಪ್ರಕಾರ, ಲೇವಿಯರು ಇಪ್ಪತ್ತು ವರ್ಷವೂ ಅದಕ್ಕೆ ಮೇಲ್ಪಟ್ಟ ಪ್ರಾಯದವರು ಮೊದಲುಗೊಂಡು ಎಣಿಕೆಯಾಗಿದ್ದರು.
28
ಅವರು ಆರೋನನ ವಂಶಸ್ಥರ ಕೈಕೆಳಗಿದ್ದುಕೊಂಡು ಯೆಹೋವ ದೇವರ ಆಲಯದ ಸೇವೆಗೋಸ್ಕರ ಅಂಗಳಗಳಲ್ಲಿಯೂ ಕೊಠಡಿಗಳಲ್ಲಿಯೂ ಸಮಸ್ತ ಪರಿಶುದ್ಧ ಸಾಮಗ್ರಿಗಳನ್ನು ಶುದ್ಧ ಮಾಡುವುದರಲ್ಲಿಯೂ,
29
ಯೆಹೋವ ದೇವರ ಮಂದಿರದ ಸೇವೆಯ ಕಾರ್ಯದಲ್ಲಿರುವ ಸಮ್ಮುಖದ ರೊಟ್ಟಿಗೋಸ್ಕರವೂ, ಅರ್ಪಣೆ ಬಲಿಯ ನಯವಾದ ಹಿಟ್ಟಿಗೋಸ್ಕರವೂ, ಹುಳಿಯಿಲ್ಲದ ರೊಟ್ಟಿಗಳಿಗೋಸ್ಕರವೂ, ಬಾಂಡ್ಲಿಯಲ್ಲಿ ಮಾಡಿದ್ದಕ್ಕೋಸ್ಕರವೂ, ಕರಿದಿದ್ದಕ್ಕೋಸ್ಕರವೂ, ಸಮಸ್ತ ವಿವಿಧ ಅಳತೆಗೋಸ್ಕರವೂ ಆರೋನನ ಮಕ್ಕಳ ಬಳಿಯಲ್ಲಿ ಅವರಿಗೆ ನೇಮಕವಾಗಿತ್ತು.
30
ಇದಲ್ಲದೆ ಉದಯಕಾಲದಲ್ಲಿಯೂ, ಸಾಯಂಕಾಲದಲ್ಲಿಯೂ ನಿಂತು, ಯೆಹೋವ ದೇವರನ್ನು ಕೊಂಡಾಡುವುದಕ್ಕೂ, ಯೆಹೋವ ದೇವರನ್ನು ಸ್ತುತಿಸುವುದಕ್ಕೂ,
31
ಯೆಹೋವ ದೇವರ ಮುಂದೆ ನಿರಂತರವಾಗಿ ಅವರಿಗೆ ಆಜ್ಞಾಪಿಸಿದ ಕಟ್ಟಳೆಯ ಪ್ರಕಾರವಾಗಿ ಸಬ್ಬತ್ ದಿನಗಳಲ್ಲಿಯೂ ಅಮಾವಾಸ್ಯೆಗಳಲ್ಲಿಯೂ ನೇಮಕವಾದ ಹಬ್ಬಗಳಲ್ಲಿಯೂ ಲೆಕ್ಕದ ಪ್ರಕಾರ ಎಲ್ಲಾ ದಹನಬಲಿಗಳನ್ನು ಅರ್ಪಿಸುವುದು.
32
ಯೆಹೋವ ದೇವರ ಮನೆಯ ಸೇವೆಯಲ್ಲಿ ದೇವದರ್ಶನ ಗುಡಾರದ ಕಾವಲನ್ನೂ, ಪರಿಶುದ್ಧ ಸ್ಥಾನದ ಕಾವಲನ್ನೂ, ತಮ್ಮ ಸಹೋದರರಾದ ಆರೋನನ ಪುತ್ರರ ಆಜ್ಞೆಯನ್ನೂ ಕೈಗೊಳ್ಳುವುದು ಅವರಿಗೆ ನೇಮಕವಾಗಿತ್ತು.
← Chapter 22
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 24 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29