bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
/
1 Chronicles 27
1 Chronicles 27
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
← Chapter 26
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 28 →
1
ಇಸ್ರಾಯೇಲರು ತಮ್ಮ ಲೆಕ್ಕದ ಪ್ರಕಾರವಾಗಿ ಹೀಗೆಯೇ ಇದ್ದರು. ಹೇಗೆಂದರೆ, ಕುಟುಂಬಗಳ ಮುಖ್ಯಸ್ಥರೂ ಸಹಸ್ರಾಧಿಪತಿಗಳೂ, ಶತಾಧಿಪತಿಗಳೂ, ಅಧಿಪತಿಗಳೂ ವರ್ಷದ ಎಲ್ಲಾ ತಿಂಗಳುಗಳಲ್ಲಿ ಪ್ರತಿ ತಿಂಗಳು ಸರತಿಯಂತೆ ಬರುತ್ತಿದ್ದ ವರ್ಗಗಳ ಕಾರ್ಯಗಳಲ್ಲಿ ಅರಸನನ್ನು ಸೇವಿಸಿದ ಅವರ ಪಾರುಪತ್ಯಗಾರರೂ ಪ್ರತಿವರ್ಗದಲ್ಲಿ 24,000 ಮಂದಿಯಿದ್ದರು.
2
ಮೊದಲನೆಯ ತಿಂಗಳಿಗೋಸ್ಕರ ಮೊದಲನೆಯ ವರ್ಗದ ಮೇಲೆ ಜಬ್ದಿಯೇಲನ ಮಗ ಯಾಷೊಬ್ಬಾಮನು. ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು.
3
ಮೊದಲನೆಯ ತಿಂಗಳಿನ ಸೈನ್ಯದ ಸಮಸ್ತ ಅಧಿಪತಿಗಳಲ್ಲಿದ್ದ ಪ್ರಧಾನನಾದವನು ಪೆರೆಚನ ಮಕ್ಕಳಲ್ಲಿ ಒಬ್ಬನಾಗಿದ್ದನು.
4
ಎರಡನೆಯ ತಿಂಗಳಿನ ವರ್ಗದ ಮೇಲೆ ಅಹೋಹ್ಯನಾದ ದೊದಾಯಿಯು. ಅವನ ವರ್ಗದಲ್ಲಿ ಮಿಕ್ಲೋತನು ನಾಯಕನಾಗಿದ್ದನು. ಅವನ ವರ್ಗದಲ್ಲಿ 24,000 ಜನರಿದ್ದರು.
5
ಮೂರನೆಯ ತಿಂಗಳಿನ ಸೈನ್ಯದ ಮೂರನೆಯ ಅಧಿಪತಿಯು, ಯಾಜಕನಾಗಿರುವ ಯೆಹೋಯಾದಾವನ ಮಗ ಬೆನಾಯನು. ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು.
6
ಈ ಬೆನಾಯನು ಮೂವತ್ತು ಮಂದಿಯಲ್ಲಿ ಪರಾಕ್ರಮಶಾಲಿಯಾದವನಾಗಿ ಮೂವತ್ತು ಮಂದಿಯ ಮೇಲೆ ಮುಖ್ಯಸ್ಥನಾಗಿದ್ದನು. ಅವನ ವರ್ಗದಲ್ಲಿ ಅವನ ಮಗ ಅಮ್ಮೀಜಾಬಾದನು ಇದ್ದನು.
7
ನಾಲ್ಕನೆಯ ತಿಂಗಳಿನ ನಾಲ್ಕನೆಯವನು ಯೋವಾಬನ ಸಹೋದರನಾದ ಅಸಾಯೇಲನು; ಅವನ ತರುವಾಯ ಅವನ ಮಗ ಜೆಬದ್ಯನು; ಅವನ ವರ್ಗದಲ್ಲಿ 24,000 ಜನರು.
8
ಐದನೆಯ ತಿಂಗಳಿನ ಐದನೆಯ ಅಧಿಪತಿಯು ಇಜ್ರಾಹನಾದ ಶಮ್ಹೂತನು; ಅವನ ವರ್ಗದಲ್ಲಿ 24,000 ಜನರು.
9
ಆರನೆಯ ತಿಂಗಳಿನ ಆರನೆಯವನು ತೆಕೋವಿಯನಾಗಿರುವ ಇಕ್ಕೇಷನ ಮಗ ಈರನು; ಅವನ ವರ್ಗದಲ್ಲಿ 24,000 ಜನರು.
10
ಏಳನೆಯ ತಿಂಗಳಿನ ಏಳನೆಯವನು ಎಫ್ರಾಯೀಮನ ಮಕ್ಕಳಲ್ಲಿ ಒಬ್ಬನಾಗಿರುವ ಪೆಲೋನ್ಯನಾದ ಹೆಲೆಚನು; ಅವನ ವರ್ಗದಲ್ಲಿ 24,000 ಜನರು.
11
ಎಂಟನೆಯ ತಿಂಗಳಿನ ಎಂಟನೆಯವನು ಜೆರಹಿಯರಲ್ಲಿ ಒಬ್ಬನಾಗಿರುವ ಹುಷಾತ್ಯನಾದ ಸಿಬ್ಬೆಕೈ; ಅವನ ವರ್ಗದಲ್ಲಿ 24,000 ಜನರು.
12
ಒಂಬತ್ತನೆಯ ತಿಂಗಳಿನ ಒಂಬತ್ತನೆಯವನು ಬೆನ್ಯಾಮೀನ್ಯರಲ್ಲಿ ಒಬ್ಬನಾಗಿರುವ ಅನಾತೋತ್ಯನಾದ ಅಬೀಯೆಜೆರನು; ಅವನ ವರ್ಗದಲ್ಲಿ 24,000 ಜನರು.
13
ಹತ್ತನೆಯ ತಿಂಗಳಿನ ಹತ್ತನೆಯವನು ಜೆರಹಿಯರಲ್ಲಿ ಒಬ್ಬನಾಗಿರುವ ನೆಟೋಫದವನಾದ ಮಹರೈಯು ಅವನ ವರ್ಗದಲ್ಲಿ 24,000 ಜನರು.
14
ಹನ್ನೊಂದನೆಯ ತಿಂಗಳಿನ ಹನ್ನೊಂದನೆಯವನು ಎಫ್ರಾಯೀಮನ ಮಕ್ಕಳಲ್ಲಿ ಒಬ್ಬನಾಗಿರುವ ಪಿರಾತೋನ್ಯನಾದ ಬೆನಾಯನು; ಅವನ ವರ್ಗದಲ್ಲಿ 24,000 ಜನರು.
15
ಹನ್ನೆರಡನೆಯ ತಿಂಗಳಿನ ಹನ್ನೆರಡನೆಯವನು ಒತ್ನಿಯೇಲನ ಮಕ್ಕಳಲ್ಲಿ ಒಬ್ಬನಾಗಿರುವ ನೆಟೋಫದವನಾದ ಹೆಲ್ದಾಯಿಯು; ಅವನ ವರ್ಗದಲ್ಲಿ 24,000 ಜನರು.
16
ಇಸ್ರಾಯೇಲಿನ ಗೋತ್ರಗಳ ಮೇಲೆ ಇರುವ ಅಧಿಕಾರಿಗಳು ಯಾರೆಂದರೆ: ರೂಬೇನ್ಯರ ಮೇಲೆ ನಾಯಕನು, ಜಿಕ್ರಿಯ ಮಗ ಎಲೀಯೆಜೆರನು. ಸಿಮೆಯೋನ್ಯರ ಮೇಲೆ ನಾಯಕನು, ಮಾಕನ ಮಗ ಶೆಫಟ್ಯನು.
17
ಲೇವಿಯರ ಮೇಲೆ ಕೆಮುವೇಲನ ಮಗ ಹಷಬ್ಯನು. ಆರೋನ್ಯರ ಮೇಲೆ ಚಾದೋಕನು.
18
ಯೆಹೂದನಿಗೆ ದಾವೀದನ ಸಹೋದರರಲ್ಲಿ ಒಬ್ಬನಾಗಿರುವ ಎಲೀಹುವು; ಇಸ್ಸಾಕಾರನಿಗೆ ಮೀಕಾಯೇಲನ ಮಗ ಒಮ್ರಿಯು.
19
ಜೆಬುಲೂನನಿಗೆ ಓಬದ್ಯನ ಮಗ ಇಷ್ಮಾಯನು ನಫ್ತಾಲಿಯ ಗೋತ್ರಕ್ಕೆ ಅಜ್ರಿಯೇಲನ ಮಗ ಯೆರೀಮೋತನು.
20
ಎಫ್ರಾಯೀಮನ ಮಕ್ಕಳಲ್ಲಿ ಅಜಜ್ಯನ ಮಗ ಹೋಶೇಯನು; ಮನಸ್ಸೆಯ ಅರ್ಧ ಗೋತ್ರಕ್ಕೆ ಪೆದಾಯನ ಮಗ ಯೋಯೇಲನು.
21
ಗಿಲ್ಯಾದಿನಲ್ಲಿರುವ ಮನಸ್ಸೆಯ ಅರ್ಧ ಗೋತ್ರಕ್ಕೆ ಜೆಕರ್ಯನ ಮಗ ಇದ್ದೋನು; ಬೆನ್ಯಾಮೀನನ ಗೋತ್ರಕ್ಕೆ ಅಬ್ನೇರನ ಮಗ ಯಾಸೀಯೇಲನು;
22
ದಾನನ ಗೋತ್ರಕ್ಕೆ ಯೆರೋಹಾಮನ ಮಗ ಅಜರಯೇಲ್. ಇವರೇ ಇಸ್ರಾಯೇಲಿನ ಗೋತ್ರಗಳ ಪ್ರಧಾನರು.
23
ದಾವೀದನು ಇಪ್ಪತ್ತು ವರ್ಷಗಳೊಳಗೆ ಇದ್ದವರ ಲೆಕ್ಕ ತೆಗೆದುಕೊಳ್ಳಲಿಲ್ಲ. ಏಕೆಂದರೆ, “ಇಸ್ರಾಯೇಲನನ್ನು ಆಕಾಶದ ನಕ್ಷತ್ರಗಳ ಹಾಗೆ ಹೆಚ್ಚಾಗಿ ಮಾಡುವೆನು,” ಎಂದು ಯೆಹೋವ ದೇವರು ಹೇಳಿದ್ದರು.
24
ಚೆರೂಯಳ ಮಗ ಯೋವಾಬನು ಎಣಿಸಲು ಆರಂಭಿಸಿದನು. ಆದರೆ ಇಸ್ರಾಯೇಲಿಗೆ ವಿರೋಧವಾಗಿ ದೇವರ ಕೋಪಾಗ್ನಿಯು ಬಂದದ್ದರಿಂದ, ಅವನು ಪೂರ್ತಿಗೊಳಿಸಲಿಲ್ಲ. ಆ ಲೆಕ್ಕವು ಅರಸನಾದ ದಾವೀದನ ಇತಿಹಾಸಗಳ ಪುಸ್ತಕದಲ್ಲಿ ಲಿಖಿತವಾಗಲಿಲ್ಲ.
25
ಅರಸನ ಬೊಕ್ಕಸಗಳ ಮೇಲೆ ಅದೀಯೇಲನ ಮಗ ಅಜ್ಮಾವೆತನು ಇದ್ದನು. ಹೊಲಗಳಲ್ಲಿಯೂ, ಪಟ್ಟಣಗಳಲ್ಲಿಯೂ, ಗ್ರಾಮಗಳಲ್ಲಿಯೂ, ಬುರುಜುಗಳ ಮೇಲೆಯೂ ಇದ್ದ ಉಗ್ರಾಣಗಳ ಮೇಲೆ ಉಜ್ಜೀಯನ ಮಗ ಯೋನಾತಾನನು ಇದ್ದನು.
26
ಹೊಲವನ್ನು ವ್ಯವಸಾಯ ಮಾಡುವ ಕೆಲಸದವರ ಮೇಲೆ ಕೆಲೂಬನ ಮಗ ಎಜ್ರಿಯು ಇದ್ದನು.
27
ರಾಮಾ ಊರಿನ ಶಿಮ್ಮೀ ದ್ರಾಕ್ಷಿತೋಟಗಳನ್ನು ನೋಡಿಕೊಳ್ಳುತ್ತಿದ್ದನು. ದ್ರಾಕ್ಷಿ ತೋಟಗಳಲ್ಲಿರುವ ದ್ರಾಕ್ಷಾರಸದ ಉಗ್ರಾಣಗಳ ಮೇಲೆ ಶಿಪ್ಮೀಯನಾದ ಜಬ್ದೀ ಜವಾಬ್ದಾರಿಯಾಗಿದ್ದನು.
28
ತಗ್ಗಿನಲ್ಲಿರುವ ಓಲಿವ್ ಮರಗಳ ಮೇಲೆಯೂ, ಅತ್ತಿಮರಗಳ ಮೇಲೆಯೂ ಗೆದೇರ್ಯನಾದ ಬಾಳ್ ಹಾನಾನನು ಇದ್ದನು. ಎಣ್ಣೆಯ ಉಗ್ರಾಣಗಳ ಮೇಲೆ ಯೋವಾಷನು ಜವಾಬ್ದಾರಿಯಾಗಿದ್ದನು.
29
ಶಾರೋನಿನಲ್ಲಿ ಮೇಯಿಸುವ ದನಗಳ ಮೇಲೆ ಶಾರೋನಿನವನಾದ ಶಿಟ್ರೈ ಜವಾಬ್ದಾರಿಯಾಗಿದ್ದನು. ತಗ್ಗುಗಳಲ್ಲಿರುವ ದನಗಳ ಮೇಲೆ ಅಡ್ಲಾಯಿಯ ಮಗನಾದ ಶಾಫಾಟನು ಜವಾಬ್ದಾರಿಯಾಗಿದ್ದನು.
30
ಒಂಟೆಗಳ ಮೇಲೆ ಜವಾಬ್ದಾರಿಯಾಗಿದ್ದವನು ಇಷ್ಮಾಯೇಲನಾದ ಓಬೀಲ್. ಕತ್ತೆಗಳ ಮೇಲೆ ಜವಾಬ್ದಾರಿಯಾಗಿದ್ದವನು ಮೇರೊನೋತ್ಯನಾದ ಯೆಹ್ದೆಯ.
31
ಕುರಿ ಮಂದೆಗಳ ಮೇಲೆ ಜವಾಬ್ದಾರಿಯಾಗಿದ್ದವನು ಹಗ್ರೀಯನಾದ ಯಾಜೀಜ್. ಇವರೆಲ್ಲರು ಅರಸನಾದ ದಾವೀದನ ಸ್ವತ್ತಿನ ಮೇಲೆ ಪ್ರಧಾನರಾಗಿದ್ದರು.
32
ಇದಲ್ಲದೆ ದಾವೀದನ ಚಿಕ್ಕಪ್ಪನಾದ ಯೋನಾತಾನನು ಗ್ರಹಿಕೆಯು, ವಿವೇಕಿಯೂ ಆದ ಲೇಖಕನಾಗಿದ್ದನು. ಹಕ್ಮೋನಿಯ ಮಗನಾದ ಯೆಹೀಯೇಲ್ ಅರಸನ ಪುತ್ರರನ್ನು ನೋಡಿಕೊಳ್ಳುತ್ತಿದ್ದನು.
33
ಅರಸನ ಆಲೋಚನೆಗಾರನು ಅಹೀತೋಫೆಲ್; ಅರಸನ ಆಪ್ತ ಸ್ನೇಹಿತನು ಅರ್ಕಿಯನಾದ ಹೂಷೈ.
34
ಅಹೀತೋಫೆಲನ ತರುವಾಯ ಬೆನಾಯನ ಮಗನಾದ ಯೆಹೋಯಾದಾವನೂ, ಅಬಿಯಾತರನೂ ಅರಸನ ಆಲೋಚನೆಗಾರರಾಗಿದ್ದರು. ಯೋವಾಬನು ಅರಸನ ಸೈನ್ಯಾಧಿಪತಿಯಾಗಿದ್ದನು.
← Chapter 26
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 28 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29