bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
/
1 Kings 11
1 Kings 11
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
← Chapter 10
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 12 →
1
ಅರಸನಾದ ಸೊಲೊಮೋನನು ಫರೋಹನ ಮಗಳನ್ನಲ್ಲದೆ ಮೋವಾಬ್ಯರ, ಅಮ್ಮೋನ್ಯರ, ಎದೋಮ್ಯರ, ಸೀದೋನ್ಯರ, ಹಿತ್ತಿಯರ ಸ್ತ್ರೀಯರನ್ನೂ ಪ್ರೀತಿಮಾಡಿದನು.
2
ಈ ಜನಾಂಗಗಳನ್ನು ಕುರಿತು ಯೆಹೋವ ದೇವರು ಇಸ್ರಾಯೇಲರಿಗೆ, “ನೀವು ಅವರ ಬಳಿಗೆ ಪ್ರವೇಶಿಸಬಾರದು. ಅವರು ನಿಶ್ಚಯವಾಗಿ ನಿಮ್ಮ ಹೃದಯವನ್ನು ತಮ್ಮ ದೇವರುಗಳ ಕಡೆಗೆ ತಿರುಗಿಸುವರು,” ಎಂದು ಹೇಳಿದ್ದರು. ಆದರೆ ಸೊಲೊಮೋನನು ಪ್ರೀತಿಯಲ್ಲಿ ಇವರನ್ನು ಅಂಟಿಕೊಂಡನು.
3
ಅವನಿಗೆ ರಾಜಪುತ್ರಿಯರಾದ ಏಳು ನೂರು ಮಂದಿ ಪತ್ನಿಯರೂ, ಮುನ್ನೂರು ಮಂದಿ ಉಪಪತ್ನಿಯರೂ ಇದ್ದರು. ಅವನ ಪತ್ನಿಯರು ಅವನನ್ನು ದಾರಿ ತಪ್ಪಿಸಿದರು.
4
ಸೊಲೊಮೋನನು ಮುದುಕನಾದ ಕಾಲದಲ್ಲಿ ಅವನ ಪತ್ನಿಯರು ಅನ್ಯದೇವರುಗಳ ಕಡೆಗೆ ಅವನ ಹೃದಯವನ್ನು ತಿರುಗಿಸಿದರು. ಅವನ ಹೃದಯವು ತನ್ನ ತಂದೆ ದಾವೀದನ ಹೃದಯದ ಹಾಗೆ ತನ್ನ ದೇವರಾದ ಯೆಹೋವ ದೇವರ ಸಂಗಡ ಪರಿಪೂರ್ಣವಾಗಿ ಇರಲಿಲ್ಲ.
5
ಸೊಲೊಮೋನನು ಸೀದೋನ್ಯರ ದೇವತೆಯಾದ ಅಷ್ಟೋರೆತಳನ್ನೂ, ಅಮ್ಮೋನ್ಯರ ಅಸಹ್ಯಕರವಾದ ಮಿಲ್ಕೋಮನ್ನೂ ಹಿಂಬಾಲಿಸಿದನು.
6
ಸೊಲೊಮೋನನು ತನ್ನ ತಂದೆ ದಾವೀದನ ಹಾಗೆ ಯೆಹೋವ ದೇವರನ್ನು ಪೂರ್ಣವಾಗಿ ಹಿಂಬಾಲಿಸದೆ ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು.
7
ಆಗ ಸೊಲೊಮೋನನು ಮೋವಾಬಿನ ಅಸಹ್ಯಕರವಾದ ಕೆಮೋಷಿಗೋಸ್ಕರವೂ, ಅಮ್ಮೋನ್ಯರ ಅಸಹ್ಯಕರವಾದ ಮೋಲೆಕನಿಗೋಸ್ಕರವೂ ಯೆರೂಸಲೇಮಿನ ಪೂರ್ವದಲ್ಲಿರುವ ಬೆಟ್ಟದಲ್ಲಿ ಎತ್ತರವಾದ ಸ್ಥಳವನ್ನು ಕಟ್ಟಿಸಿದನು.
8
ಇದೇ ಪ್ರಕಾರ ತಮ್ಮ ದೇವರುಗಳಿಗೆ ಧೂಪವನ್ನು ಸುಟ್ಟು, ಬಲಿಗಳನ್ನು ಅರ್ಪಿಸುವ ತನ್ನ ಅನ್ಯಜಾತಿಯ ಸಮಸ್ತ ಪತ್ನಿಯರಿಗೋಸ್ಕರವೂ ಕಟ್ಟಿಸಿದನು.
9
ಇಸ್ರಾಯೇಲಿನ ದೇವರಾದ ಯೆಹೋವ ದೇವರು ಸೊಲೊಮೋನನಿಗೆ ಎರಡು ಸಾರಿ ಪ್ರತ್ಯಕ್ಷರಾಗಿದ್ದರೂ, ಅವನ ಹೃದಯವು ದೇವರಿಂದ ತಿರುಗಿ ಹೋದುದರಿಂದ, ಅವನ ಮೇಲೆ ಕೋಪಿಸಿಕೊಂಡಿದ್ದರು.
10
ಅನ್ಯದೇವರುಗಳ ಹಿಂದೆ ಹೋಗಬಾರದೆಂದು ಅವರು ಇದನ್ನು ಕುರಿತು ಅವನಿಗೆ ಆಜ್ಞಾಪಿಸಿದ್ದರೂ, ಅವನು, ಯೆಹೋವ ದೇವರು ಆಜ್ಞಾಪಿಸಿದ್ದನ್ನು ಕೈಗೊಳ್ಳದೆ ಹೋದನು.
11
ಆದಕಾರಣ ಯೆಹೋವ ದೇವರು ಸೊಲೊಮೋನನಿಗೆ, “ನೀನು ಹೀಗೆ ನಡೆದು ನಾನು ನಿನಗೆ ಆಜ್ಞಾಪಿಸಿದ ನನ್ನ ಒಡಂಬಡಿಕೆಯನ್ನೂ, ನನ್ನ ಕಟ್ಟಳೆಗಳನ್ನೂ ಕೈಗೊಳ್ಳದೆ ಹೋದುದರಿಂದ ನಿಶ್ಚಯವಾಗಿ ನಾನು ರಾಜ್ಯವನ್ನು ನಿನ್ನಿಂದ ಕಸಿದುಕೊಂಡು ಅದನ್ನು ನಿನ್ನ ಸೇವಕನಿಗೆ ಕೊಡುವೆನು.
12
ಆದರೆ ನಿನ್ನ ತಂದೆ ದಾವೀದನಿಗೋಸ್ಕರ ನಿನ್ನ ಕಾಲದಲ್ಲಿ ನಾನು ಇದನ್ನು ಮಾಡದೆ ನಿನ್ನ ಮಗನ ಕೈಯೊಳಗಿಂದ ಅದನ್ನು ಕಸಿದುಕೊಳ್ಳುವೆನು.
13
ಇದಲ್ಲದೆ ರಾಜ್ಯವನ್ನೆಲ್ಲಾ ನಾನು ಕಸಿದುಕೊಳ್ಳದೆ ನನ್ನ ಸೇವಕನಾದ ದಾವೀದನಿಗೋಸ್ಕರವಾಗಿಯೂ, ನಾನು ಆಯ್ದುಕೊಂಡ ಯೆರೂಸಲೇಮಿಗೋಸ್ಕರವೂ ನಿನ್ನ ಮಗನಿಗೆ ಒಂದು ಗೋತ್ರವನ್ನು ಕೊಡುವೆನು,” ಎಂದರು.
14
ಆಗ ಯೆಹೋವ ದೇವರು ಎದೋಮ್ಯನಾದ ಹದದನನ್ನು ಸೊಲೊಮೋನನಿಗೆ ಎದುರಾಳಿಯಾಗಿ ಎಬ್ಬಿಸಿದರು.
15
ದಾವೀದನು ಎದೋಮಿನಲ್ಲಿರುವಾಗ ಸೇನಾಧಿಪತಿಯಾದ ಯೋವಾಬನು ಎದೋಮಿನ ಗಂಡಸರೆಲ್ಲರನ್ನು ಕೊಂದುಹಾಕಿದನು. ತರುವಾಯ ಇಸ್ರಾಯೇಲರಲ್ಲಿ ಹತರಾದವರನ್ನು ಸಮಾಧಿಮಾಡಲು ಹೋದನು.
16
ಯೋವಾಬನು ಎದೋಮಿನಲ್ಲಿರುವ ಗಂಡಸರೆಲ್ಲರನ್ನು ಸಂಹರಿಸುವವರೆಗೂ ಇಸ್ರಾಯೇಲಿನ ಸಮಸ್ತ ಸೈನ್ಯದ ಸಂಗಡ ಅಲ್ಲಿ ಆರು ತಿಂಗಳು ಇದ್ದನು.
17
ಆದರೆ ಆ ಸಮಯದಲ್ಲಿ ಇನ್ನೂ ಬಾಲಕನಾದ ಹದಾದನು ತನ್ನ ತಂದೆಯ ಕೆಲವು ಸೇವಕರಾದ ಎದೋಮ್ಯರ ಸಂಗಡ ಈಜಿಪ್ಟಿಗೆ ಓಡಿಹೋಗಬೇಕೆಂದು ಹೊರಟನು.
18
ಮಿದ್ಯಾನನ್ನು ಬಿಟ್ಟು ಪಾರಾನಿಗೆ ಬಂದು ಅಲ್ಲಿಂದ ಮನುಷ್ಯರನ್ನು ತೆಗೆದುಕೊಂಡು ಈಜಿಪ್ಟಿನಲ್ಲಿ ಪ್ರವೇಶಿಸಿ ಈಜಿಪ್ಟಿನ ಅರಸನಾದ ಫರೋಹನ ಬಳಿಗೆ ಬಂದರು. ಫರೋಹನು ಹದದನಿಗೆ ಮನೆಯನ್ನು, ಆಹಾರವನ್ನು ಮತ್ತು ಭೂಮಿಯನ್ನು ಕೊಟ್ಟನು.
19
ಇದಲ್ಲದೆ ಫರೋಹನು ಹದದನನ್ನು ಬಹಳವಾಗಿ ಮೆಚ್ಚಿಕೊಂಡನು. ಫರೋಹನು ತನ್ನ ಹೆಂಡತಿಯೂ ರಾಣಿಯೂ ಆದ ತಪ್ನೆಸ್ ಎಂಬವಳ ಸಹೋದರಿಯನ್ನು ಅವನಿಗೆ ಮದುವೆ ಮಾಡಿಕೊಟ್ಟನು.
20
ತಪ್ನೆಸ್ ಸಹೋದರಿಯು ಅವನಿಗೆ ಗೆನುಬತ್ ಎಂಬ ಮಗನನ್ನು ಹೆತ್ತಳು. ತಪ್ನೆಸ್ ಇವನನ್ನು ಫರೋಹನ ಮನೆಯಲ್ಲಿ ಬೆಳೆಸಿದಳು. ಗೆನುಬತನು ಫರೋಹನ ಮನೆಯಲ್ಲಿ ಫರೋಹನ ಮಕ್ಕಳ ಸಂಗಡ ಇದ್ದನು.
21
ಆದರೆ ದಾವೀದನು ಮರಣ ಹೊಂದಿದನೆಂದೂ, ಸೇನಾಧಿಪತಿಯಾದ ಯೋವಾಬನು ಸತ್ತು ಹೋದನೆಂದೂ, ಹದದನು ಈಜಿಪ್ಟಿನಲ್ಲಿ ಕೇಳಿದಾಗ, ಹದದನು ಫರೋಹನಿಗೆ, “ನಾನು ನನ್ನ ದೇಶಕ್ಕೆ ಹೋಗುವಹಾಗೆ ನನ್ನನ್ನು ಕಳುಹಿಸು,” ಎಂದನು.
22
ಫರೋಹನು ಅವನಿಗೆ, “ನೀನು ನಿನ್ನ ದೇಶಕ್ಕೆ ಹೋಗಬೇಕೆನ್ನುವ ಹಾಗೆ ನಿನಗೆ ನನ್ನ ಸಂಗಡ ಇರುವಾಗ ಏನು ಕೊರತೆಯಾಯಿತು?” ಎಂದು ಕೇಳಿದನು. ಅವನು, “ಏನೂ ಇಲ್ಲ, ಆದರೆ ನಾನು ಅಲ್ಲಿಗೆ ಹೋಗಲು ಅಪ್ಪಣೆಯಾಗಬೇಕು,” ಎಂದನು.
23
ಇದಲ್ಲದೆ ದೇವರು ಮತ್ತೊಬ್ಬ ಶತ್ರುವನ್ನು ಸೊಲೊಮೋನನ ಮೇಲೆ ಎಬ್ಬಿಸಿದರು. ಅವನು ಚೋಬದ ಅರಸನಾದ ತನ್ನ ಯಜಮಾನನಾಗಿರುವ ಹದದೆಜೆರನನ್ನು ಬಿಟ್ಟು ಓಡಿ ಹೋದ ಎಲ್ಯಾದಾವನ ಮಗನಾದ ರೆಜೋನನು.
24
ದಾವೀದನು ಚೋಬದ ಜನರನ್ನು ಸಂಹರಿಸುವಾಗ ಇವನು ಜನರನ್ನು ತನ್ನ ಬಳಿಯಲ್ಲಿ ಕೂಡಿಸಿಕೊಂಡು ಒಂದು ಗುಂಪಿಗೆ ಅಧಿಪತಿಯಾಗಿ ಅವರ ಸಂಗಡ ದಮಸ್ಕಕ್ಕೆ ಹೋಗಿ ಅಲ್ಲಿ ವಾಸಿಸಿ, ಅರಸನಾದನು.
25
ಹದದನು ಮಾಡಿದ ಕೇಡಿಗೆ ಹೊರತಾಗಿ ಇವನು ಸೊಲೊಮೋನನ ದಿವಸಗಳಲ್ಲೆಲ್ಲಾ ಇಸ್ರಾಯೇಲಿಗೆ ಶತ್ರುವಾಗಿದ್ದನು. ಅವನು ಇಸ್ರಾಯೇಲನ್ನು ಹಗೆಮಾಡಿ, ಅರಾಮ್ ದೇಶವನ್ನು ಆಳುತ್ತಾ ಇದ್ದನು.
26
ಇದಲ್ಲದೆ, ಅರಸನಾದ ಸೊಲೊಮೋನನಿಗೆ ವಿರೋಧವಾಗಿ ದಂಗೆ ಎದ್ದವರಲ್ಲಿ ಅವನ ಸೇವಕನೂ ಚರೇದ ಪಟ್ಟಣದ ಎಫ್ರಾಯೀಮ್ಯನಾದ ನೆಬಾಟನ ಮಗ ಯಾರೊಬ್ಬಾಮನು ಇದ್ದನು, ಚೆರೂಯಳೆಂಬ ವಿಧವೆಯು ಅವನ ತಾಯಿಯು.
27
ಅವನು ಅರಸನಿಗೆ ವಿರೋಧವಾಗಿ ದಂಗೆಯೆದ್ದ ಕಾರಣವೇನೆಂದರೆ, ಸೊಲೊಮೋನನು ಮಿಲ್ಲೋ ಕೋಟೆಯನ್ನು ಕಟ್ಟಿಸಿ, ತನ್ನ ತಂದೆಯಾದ ದಾವೀದನ ಪಟ್ಟಣದಲ್ಲಿ ಬಿದ್ದುಹೋದವುಗಳನ್ನು ಕಟ್ಟಿಸುತ್ತಿರುವಾಗ,
28
ಯಾರೊಬ್ಬಾಮನು ಪರಾಕ್ರಮಶಾಲಿಯಾಗಿರುವುದರಿಂದ ಸೊಲೊಮೋನನು ಈ ಪ್ರಾಯಸ್ಥನು ಕೆಲಸಮಾಡತಕ್ಕವನೆಂದು ಕಂಡು, ಯೋಸೇಫನ ಗೋತ್ರದ ಸಮಸ್ತ ಆಳುಗಳ ಮೇಲೆ ಅವನನ್ನು ಅಧಿಪತಿಯಾಗಿಟ್ಟನು.
29
ಆ ಕಾಲದಲ್ಲಿ, ಯಾರೊಬ್ಬಾಮನು ಯೆರೂಸಲೇಮಿನೊಳಗಿಂದ ಹೊರಟು ಹೋಗುವಾಗ, ಶೀಲೋವಿನವನಾದ ಅಹೀಯನೆಂಬ ಪ್ರವಾದಿಯು ಅವನನ್ನು ಹಾದಿಯಲ್ಲಿ ಕಂಡನು. ಅವನು ಹೊಸ ಕಂಬಳಿಯನ್ನು ಹೊದ್ದುಕೊಂಡಿದ್ದನು. ಅವರಿಬ್ಬರೂ ಹೊಲದಲ್ಲಿ ಒಂಟಿಯಾಗಿದ್ದರು.
30
ಆಗ ಅಹೀಯನು ತನ್ನ ಮೇಲೆ ಇರುವ ಹೊಸ ಕಂಬಳಿಯನ್ನು ತೆಗೆದುಕೊಂಡು ಅದನ್ನು ಹನ್ನೆರಡು ತುಂಡುಗಳಾಗಿ ಹರಿದು,
31
ಯಾರೊಬ್ಬಾಮನಿಗೆ ಈ ಹತ್ತು ತುಂಡುಗಳನ್ನು ನೀನು ತೆಗೆದುಕೋ. ಇಸ್ರಾಯೇಲಿನ ದೇವರಾದ ಯೆಹೋವ ದೇವರು, “ಇಗೋ, ನಾನು ಸೊಲೊಮೋನನ ಕೈಯಿಂದ ರಾಜ್ಯವನ್ನು ಹರಿದು ತೆಗೆದುಕೊಂಡು, ಹತ್ತು ಗೋತ್ರಗಳನ್ನು ನಿನಗೆ ಕೊಡುವೆನು.
32
ಆದರೆ, ನನ್ನ ಸೇವಕ ದಾವೀದನಿಗೋಸ್ಕರವೂ, ಇಸ್ರಾಯೇಲಿನ ಸಮಸ್ತ ಗೋತ್ರಗಳಿಂದ ನಾನು ಆಯ್ದುಕೊಂಡ ಪಟ್ಟಣವಾದ ಯೆರೂಸಲೇಮಿಗೋಸ್ಕರವೂ ಅವನಿಗೆ ಒಂದು ಗೋತ್ರ ಇರುವುದು.
33
ಏಕೆಂದರೆ ಅವನ ತಂದೆಯಾದ ದಾವೀದನ ಹಾಗೆ ನನ್ನ ಕಟ್ಟಳೆಗಳನ್ನೂ, ನನ್ನ ನ್ಯಾಯಗಳನ್ನೂ ಕೈಗೊಳ್ಳುವುದಕ್ಕೂ, ನನ್ನ ದೃಷ್ಟಿಗೆ ಮೆಚ್ಚಿಕೆಯಾದದ್ದನ್ನು ಮಾಡುವುದಕ್ಕೂ, ಸೊಲೊಮೋನನೂ ಅವನ ಮನೆಯವರೂ ನನ್ನ ಮಾರ್ಗಗಳಲ್ಲಿ ನಡೆಯದೆ, ನನ್ನನ್ನು ಬಿಟ್ಟು ಸೀದೋನ್ಯರ ದೇವತೆಯಾದ ಅಷ್ಟೋರೆತಳನ್ನೂ, ಮೋವಾಬ್ಯರ ದೇವರಾದ ಕೆಮೋಷನ್ನೂ, ಅಮ್ಮೋನಿಯರ ದೇವರಾದ ಮಿಲ್ಕೋಮನ್ನೂ ಆರಾಧಿಸಿದ್ದಾರೆ.
34
“ ‘ಆದರೂ ನನ್ನ ಆಜ್ಞೆಗಳನ್ನೂ, ನನ್ನ ತೀರ್ಪುಗಳನ್ನೂ ಕೈಗೊಂಡದ್ದರಿಂದ, ನಾನು ಆಯ್ದು ತೆಗೆದುಕೊಂಡ ನನ್ನ ಸೇವಕನಾದ ದಾವೀದನಿಗೋಸ್ಕರ ನಾನು ಅವನ ಕೈಯಿಂದ ರಾಜ್ಯವನ್ನೆಲ್ಲಾ ತೆಗೆದುಕೊಳ್ಳದೆ, ಅವನ ಜೀವಮಾನದ ಸಕಲ ದಿವಸಗಳಲ್ಲಿ ಅವನನ್ನು ಪ್ರಭುವಾಗಿ ಇರಿಸುವೆನು.
35
ಆದರೆ ನಾನು ಅವನ ಮಗನ ಕೈಯಿಂದ ರಾಜ್ಯವನ್ನು ತೆಗೆದುಕೊಂಡು, ಅದರಲ್ಲಿ ಹತ್ತು ಗೋತ್ರಗಳನ್ನು ನಿನಗೆ ಕೊಡುವೆನು.
36
ಅಲ್ಲಿ ನನ್ನ ಹೆಸರನ್ನಿಡಲು ನಾನು ಆದುಕೊಂಡ ಪಟ್ಟಣವಾದ ಯೆರೂಸಲೇಮಿನಲ್ಲಿ ನನ್ನ ಮುಂದೆ ನನ್ನ ಸೇವಕನಾದ ದಾವೀದನಿಗೆ ಎಂದಿಗೂ ಬೆಳಕು ಆರಿಹೋಗದ ಹಾಗೆ, ಅವನ ಮಗನಿಗೆ ಒಂದು ಗೋತ್ರವನ್ನು ಕೊಡುವೆನು.
37
ಇದಲ್ಲದೆ ನಾನು ನಿನ್ನನ್ನು ತೆಗೆದುಕೊಂಡು, ನಿನ್ನ ಪ್ರಾಣವು ಇಚ್ಛಿಸುವುದೆಲ್ಲಾದರಲ್ಲಿ ಅರಸುತನವನ್ನು ನಡೆಸಿ, ಇಸ್ರಾಯೇಲಿನ ಮೇಲೆ ಅರಸನಾಗಿರುವಿ.
38
ನಾನು ನಿನಗೆ ಆಜ್ಞಾಪಿಸಿದ್ದೆಲ್ಲಾ ನೀನು ಕೇಳಿ, ನನ್ನ ಮಾರ್ಗಗಳಲ್ಲಿ ನಡೆದು, ನನ್ನ ಸೇವಕನಾದ ದಾವೀದನು ಮಾಡಿದ ಹಾಗೆ, ನನ್ನ ತೀರ್ಪುಗಳನ್ನೂ, ನನ್ನ ಆಜ್ಞೆಗಳನ್ನೂ ಕೈಗೊಂಡು, ನನ್ನ ದೃಷ್ಟಿಗೆ ಯಥಾರ್ಥವಾದದ್ದನ್ನು ಮಾಡಿದರೆ, ನಾನು ನಿನ್ನ ಸಂಗಡ ಇದ್ದು ದಾವೀದನ ಸಂತಾನದಂತೆ ನಿನ್ನ ಸಂತಾನವನ್ನೂ ಸ್ಥಿರಪಡಿಸಿ, ಇಸ್ರಾಯೇಲನ್ನು ನಿನಗೆ ಕೊಡುವೆನು.
39
ಇದಕ್ಕೋಸ್ಕರ ದಾವೀದನ ಸಂತತಿಯನ್ನು ಬಾಧಿಸುವೆನು, ಆದರೆ ನಿರಂತರವಾಗಿ ಅಲ್ಲ,’ ” ಎಂದು ಅಹೀಯನು ಹೇಳಿದನು.
40
ಇದರ ನಿಮಿತ್ತ ಸೊಲೊಮೋನನು ಯಾರೊಬ್ಬಾಮನನ್ನು ಕೊಲ್ಲಲು ಹುಡುಕಿದನು. ಆದ್ದರಿಂದ ಯಾರೊಬ್ಬಾಮನು ಎದ್ದು, ಈಜಿಪ್ಟಿನ ಅರಸನಾದ ಶೀಶಕನ ಬಳಿಗೆ ಈಜಿಪ್ಟಿಗೆ ಓಡಿಹೋಗಿ, ಸೊಲೊಮೋನನು ಸಾಯುವವರೆಗೂ ಅಲ್ಲಿ ಇದ್ದನು.
41
ಸೊಲೊಮೋನನ ಉಳಿದ ಕ್ರಿಯೆಗಳನ್ನು, ಅವನು ಮಾಡಿದ ಸಾಧನೆಗಳನ್ನು ಮತ್ತು ಅವನ ಜ್ಞಾನವನ್ನು ಕುರಿತು ಸೊಲೊಮೋನನ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತದೆ.
42
ಹೀಗೆ ಸೊಲೊಮೋನನು ಯೆರೂಸಲೇಮಿನಲ್ಲಿ ಸಮಸ್ತ ಇಸ್ರಾಯೇಲಿನ ಮೇಲೆ ನಾಲ್ವತ್ತು ವರ್ಷಗಳು ಆಳಿದನು.
43
ಸೊಲೊಮೋನನು ಮೃತನಾಗಿ ತನ್ನ ಪಿತೃಗಳ ಬಳಿಗೆ ಸೇರಿದನು. ಅವನ ಶವವನ್ನು ಅವನ ತಂದೆ ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು. ಅವನ ಮಗ ರೆಹಬ್ಬಾಮನು ಅವನಿಗೆ ಬದಲಾಗಿ ಅರಸನಾದನು.
← Chapter 10
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 12 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22