bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
/
1 Kings 16
1 Kings 16
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
← Chapter 15
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 17 →
1
ಬಾಷನಿಗೆ ವಿರೋಧವಾಗಿ ಹನಾನೀಯ ಮಗ ಯೇಹುವಿಗೆ ಯೆಹೋವ ದೇವರ ವಾಕ್ಯ ಬಂತು,
2
“ನಾನು ನಿನ್ನನ್ನು ಧೂಳಿನಿಂದ ಎಬ್ಬಿಸಿ, ನಿನ್ನನ್ನು ನನ್ನ ಜನರಾದ ಇಸ್ರಾಯೇಲಿನ ಮೇಲೆ ನಾಯಕನಾಗಿ ಇರಿಸಿದೆನು. ಆದರೆ ನೀನು ಯಾರೊಬ್ಬಾಮನ ಮಾರ್ಗದಲ್ಲಿ ನಡೆದು, ನನ್ನ ಜನರಾದ ಇಸ್ರಾಯೇಲರು ತಮ್ಮ ಪಾಪಗಳಿಂದ ನನಗೆ ಕೋಪವನ್ನು ಎಬ್ಬಿಸುವ ಹಾಗೆ ಅವರನ್ನು ಪಾಪಮಾಡಲು ಪ್ರೇರೇಪಿಸಿದೆ.
3
ನಾನು ಬಾಷನ ಸಂತತಿಯನ್ನೂ, ಅವನ ಮನೆಯ ಸಂತತಿಯನ್ನೂ ತೆಗೆದುಹಾಕಿ, ನಿನ್ನ ಮನೆಯನ್ನು ನೆಬಾಟನ ಮಗ ಯಾರೊಬ್ಬಾಮನ ಮನೆಯ ಹಾಗೆ ಮಾಡುವೆನು.
4
ಬಾಷನ ಕಡೆಯವರಲ್ಲಿ ಪಟ್ಟಣದೊಳಗೆ ಸಾಯುವವನನ್ನು ನಾಯಿಗಳು ತಿನ್ನುವುವು. ಅವನ ಕಡೆಯವನಲ್ಲಿ ಹೊಲದೊಳಗೆ ಸಾಯುವವನನ್ನು ಆಕಾಶದ ಪಕ್ಷಿಗಳು ತಿನ್ನುವುವು,” ಎಂಬುದೇ ಆ ವಾಕ್ಯ.
5
ಬಾಷನ ಇತರ ಕಾರ್ಯಗಳೂ, ಅವನು ಮಾಡಿದ್ದೂ, ಅವನ ಪರಾಕ್ರಮವೂ ಇಸ್ರಾಯೇಲಿನ ಅರಸುಗಳ ಪುಸ್ತಕದಲ್ಲಿ ಬರೆದಿರುತ್ತವೆ.
6
ಬಾಷನು ಮೃತನಾಗಿ ತನ್ನ ಪಿತೃಗಳ ಜೊತೆ ಸೇರಿದನು. ತಿರ್ಚದಲ್ಲಿ ಅವನ ಶವವನ್ನು ಸಮಾಧಿಮಾಡಿದರು. ಅವನ ಮಗ ಏಲನು ಅವನಿಗೆ ಬದಲಾಗಿ ಅರಸನಾದನು.
7
ಬಾಷನು ಯಾರೊಬ್ಬಾಮನ ಮನೆಯವರ ಹಾಗಿದ್ದು, ಅವರನ್ನು ಸಂಹರಿಸಿದ್ದರಿಂದ ಯೆಹೋವ ದೇವರಿಗೆ ಕೋಪವನ್ನು ಎಬ್ಬಿಸಿ, ಯೆಹೋವ ದೇವರ ಸಮ್ಮುಖದಲ್ಲಿ ತಾನು ಮಾಡಿದ ಎಲ್ಲಾ ಕೆಟ್ಟತನದ ನಿಮಿತ್ತ ಅವನಿಗೆ ವಿರೋಧವಾಗಿಯೂ, ಅವನ ಮನೆಗೆ ವಿರೋಧವಾಗಿಯೂ ಹನಾನೀಯ ಮಗನಾಗಿರುವ ಪ್ರವಾದಿ ಯೇಹುವಿನ ಮುಖಾಂತರ ಯೆಹೋವ ದೇವರ ವಾಕ್ಯ ಬಂತು.
8
ಯೆಹೂದದ ಅರಸನಾದ ಆಸನ ಇಪ್ಪತ್ತಾರನೆಯ ವರುಷದಲ್ಲಿ ಬಾಷನ ಮಗ ಏಲನು ಇಸ್ರಾಯೇಲಿನ ಮೇಲೆ ತಿರ್ಚದಲ್ಲಿ ಎರಡು ವರ್ಷ ಆಳಿದನು.
9
ಆದರೆ ತಿರ್ಚದಲ್ಲಿ ತನ್ನ ಮನೆಯ ಉಗ್ರಾಣಿಕನಾದ ಅರ್ಚನ ಮನೆಯಲ್ಲಿ ಅವನು ಕುಡಿದು ಮತ್ತನಾಗಿರುವಾಗ, ಅರ್ಧ ರಥಗಳಿಗೆ ಅಧಿಪತಿಯಾಗಿರುವ ಅವನ ಸೇವಕನಾದ ಜಿಮ್ರಿಯನು ಅವನಿಗೆ ವಿರೋಧವಾಗಿ ಒಳಸಂಚು ಮಾಡಿದನು.
10
ಜಿಮ್ರಿಯು ಒಳಗೆ ಹೋಗಿ ಯೆಹೂದದ ಅರಸನಾದ ಆಸನ ಇಪ್ಪತ್ತೇಳನೆಯ ವರ್ಷದಲ್ಲಿ, ಅವನನ್ನು ಕೆಡವಿ ಕೊಂದುಹಾಕಿ, ಅವನಿಗೆ ಬದಲಾಗಿ ಅರಸನಾದನು.
11
ಜಿಮ್ರಿಯು ಆಳಲು ಆರಂಭಿಸಿದಾಗ, ಅವನು ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಲೇ, ಬಾಷನ ಮನೆಯವರನ್ನೆಲ್ಲಾ ಸಂಹರಿಸಿ, ಅವನ ಬಂಧುಗಳಲ್ಲಿಯೂ, ಅವನ ಸ್ನೇಹಿತರಲ್ಲಿಯೂ ಒಬ್ಬ ಗಂಡಸನನ್ನೂ ಉಳಿಸಲಿಲ್ಲ.
12
ಹೀಗೆಯೇ ಬಾಷನೂ ಅವನ ಮಗ ಏಲನೂ ತಮ್ಮ ಎಲ್ಲಾ ಪಾಪಗಳಿಂದ ಇಸ್ರಾಯೇಲಿನ ದೇವರಾದ ಯೆಹೋವ ದೇವರ ಕೋಪವನ್ನು ಎಬ್ಬಿಸಿ, ತಾವು ಮಾಡಿದ ಪಾಪಗಳಿಂದಲೂ,
13
ತಾವು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ್ದರಿಂದಲೂ, ಯೆಹೋವ ದೇವರು ಪ್ರವಾದಿಯಾದ ಯೇಹುವಿನ ಮುಖಾಂತರ ಬಾಷನಿಗೆ ವಿರೋಧವಾಗಿ ಹೇಳಿದ ಆತನ ವಾಕ್ಯದ ಪ್ರಕಾರವೇ ಜಿಮ್ರಿಯು ಬಾಷನ ಮನೆಯವರನ್ನೆಲ್ಲಾ ನಾಶಮಾಡಿದನು.
14
ಏಲನ ಇತರ ಕ್ರಿಯೆಗಳೂ, ಅವನು ಮಾಡಿದ್ದೆಲ್ಲವೂ ಇಸ್ರಾಯೇಲ್ ಅರಸುಗಳ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
15
ಯೆಹೂದದ ಅರಸನಾದ ಆಸನ ಇಪ್ಪತ್ತೇಳನೆಯ ವರ್ಷದಲ್ಲಿ ಜಿಮ್ರಿಯು ತಿರ್ಚದಲ್ಲಿ ಇಸ್ರಾಯೇಲರ ಅರಸನಾಗಿ ಏಳು ದಿನ ಆಳಿದನು. ಆಗ ಇಸ್ರಾಯೇಲರು ಫಿಲಿಷ್ಟಿಯರಿಗೆ ಸಂಬಂಧಪಟ್ಟ ಗಿಬ್ಬೆತೋನಿನ ಬಳಿಯಲ್ಲಿ ದಂಡಿಳಿಸಿದ್ದರು.
16
ಜಿಮ್ರಿಯು ಒಳಸಂಚುಮಾಡಿ, ಅರಸನನ್ನು ಕೊಂದು ಹಾಕಿದ್ದಾನೆಂದು ಅಲ್ಲಿ ಇಳಿದಿರುವ ದಂಡಿನವರು ಕೇಳಿದ್ದರಿಂದ, ಇಸ್ರಾಯೇಲರೆಲ್ಲರು ಅದೇ ದಿವಸದಲ್ಲಿ ದಂಡಿನ ಅಧಿಪತಿಯಾದ ಒಮ್ರಿಯನ್ನು ಇಸ್ರಾಯೇಲಿನ ಮೇಲೆ ಅರಸನಾಗಿ ನೇಮಿಸಿದರು.
17
ಆಗ ಒಮ್ರಿಯೂ ಅವನ ಸಂಗಡ ಇಸ್ರಾಯೇಲರೆಲ್ಲರೂ ಗಿಬ್ಬೆತೋನನ್ನು ಬಿಟ್ಟು ಹೋಗಿ ತಿರ್ಚವನ್ನು ಮುತ್ತಿಗೆ ಹಾಕಿದರು.
18
ಪಟ್ಟಣವು ವಶವಾದದ್ದನ್ನು ಕಂಡಾಗ, ಜಿಮ್ರಿಯು ಅರಮನೆಯ ಅಂತಃಪುರದೊಳಗೆ ಪ್ರವೇಶಿಸಿ, ತನ್ನ ಅರಮನೆಯನ್ನು ಬೆಂಕಿಯಿಂದ ಸುಟ್ಟು ತಾನೂ ಸತ್ತನು.
19
ಅವನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ, ತಾನು ಮಾಡಿದ ಪಾಪಗಳ ನಿಮಿತ್ತವಾಗಿಯೂ, ಯಾರೊಬ್ಬಾಮನ ಮಾರ್ಗದಲ್ಲಿ ನಡೆದು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ಅವನ ಪಾಪದ ನಿಮಿತ್ತವಾಗಿಯೂ ಆಯಿತು.
20
ಜಿಮ್ರಿಯ ಇತರ ಕಾರ್ಯಗಳೂ, ಅವನು, ಮಾಡಿದ ಒಳಸಂಚೂ ಇಸ್ರಾಯೇಲಿನ ಅರಸುಗಳ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
21
ಆ ಕಾಲದಲ್ಲಿ ಇಸ್ರಾಯೇಲರೊಳಗೆ ಎರಡು ಪಕ್ಷಗಳುಂಟಾದವು, ಅರ್ಧ ಜನರು ಗೀನಾತನ ಮಗ ತಿಬ್ನಿಯನ್ನು ಅರಸನನ್ನಾಗಿ ಮಾಡಲು ಅವನ ಹಿಂದೆ ಹೋದರು, ಅರ್ಧ ಜನರು ಒಮ್ರಿಯ ಹಿಂದೆ ಹೋದರು.
22
ಆದರೆ ಒಮ್ರಿಯ ಸಮರ್ಥಕರು ಜಯಿಸಿದ್ದರಿಂದ ಗೀನಾತನ ಮಗನಾದ ತಿಬ್ನಿಯು ಸತ್ತುಹೋದನು, ಒಮ್ರಿಯು ಅರಸನಾದನು.
23
ಯೆಹೂದದ ಅರಸನಾದ ಆಸನ ಮೂವತ್ತೊಂದನೆಯ ವರ್ಷದಲ್ಲಿ, ಒಮ್ರಿಯು ಇಸ್ರಾಯೇಲಿನ ಮೇಲೆ ಆಳಲು ಆರಂಭಿಸಿ, ಹನ್ನೆರಡು ವರ್ಷ ಆಳಿದನು, ಅದರಲ್ಲಿ ಆರು ವರ್ಷ ತಿರ್ಚದಲ್ಲಿ ಆಳಿದನು.
24
ಅವನು ಶೆಮೆರ್ ಎಂಬವನಿಗೆ ಆರು ಸಾವಿರ ಬೆಳ್ಳಿ ನಾಣ್ಯಗಳನ್ನು ಕೊಟ್ಟು ಸಮಾರಿಯ ಎಂಬ ಬೆಟ್ಟವನ್ನು ಕೊಂಡುಕೊಂಡನು. ಆ ಬೆಟ್ಟದ ಮೇಲೆ ಒಂದು ಪಟ್ಟಣವನ್ನು ಕಟ್ಟಿಸಿ, ಅದಕ್ಕೆ ಆ ಜಮೀನಿನ ಯಜಮಾನನಾಗಿದ್ದ ಶೆಮೆರನ ಜ್ಞಾಪಕಾರ್ಥವಾಗಿ ತಾನು ಕಟ್ಟಿಸಿದ ಪಟ್ಟಣಕ್ಕೆ ಸಮಾರ್ಯ ಎಂದು ಹೆಸರಿಟ್ಟನು.
25
ಆದರೆ ಒಮ್ರಿಯು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ, ತನಗೆ ಮುಂಚೆ ಇದ್ದ ಎಲ್ಲರಿಗಿಂತ ಕೆಟ್ಟವನಾಗಿ ನಡೆದನು.
26
ಅವನು ನೆಬಾಟನ ಮಗ ಯಾರೊಬ್ಬಾಮನ ಸಕಲ ಮಾರ್ಗಗಳಲ್ಲಿಯೂ, ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ತಮ್ಮ ವ್ಯರ್ಥವಾದವುಗಳಿಂದ ಕೋಪವನ್ನು ಎಬ್ಬಿಸಿದ ಹಾಗೆ ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ಯಾರೊಬ್ಬಾಮನ ಪಾಪದಲ್ಲಿಯೂ ನಡೆದನು.
27
ಒಮ್ರಿಯು ಮಾಡಿದ ಇತರ ಕಾರ್ಯಗಳೂ, ಅವನು ತೋರಿಸಿದ ಪರಾಕ್ರಮವೂ, ಇಸ್ರಾಯೇಲಿನ ಅರಸುಗಳ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
28
ಒಮ್ರಿಯು ಮೃತನಾಗಿ ತನ್ನ ಪಿತೃಗಳ ಜೊತೆ ಸೇರಿದನು. ಸಮಾರ್ಯ ಪಟ್ಟಣದಲ್ಲಿ ಅವನ ಶವವನ್ನು ಸಮಾಧಿಮಾಡಿದರು. ಅವನಿಗೆ ಬದಲಾಗಿ ಅವನ ಮಗನಾದ ಅಹಾಬನು ಅರಸನಾದನು.
29
ಯೆಹೂದದ ಅರಸನಾದ ಆಸನ ಮೂವತ್ತೆಂಟನೆಯ ವರ್ಷದಲ್ಲಿ ಒಮ್ರಿಯ ಮಗ ಅಹಾಬನು ಇಸ್ರಾಯೇಲಿನ ಮೇಲೆ ಅರಸನಾಗಿ ಸಮಾರ್ಯದಲ್ಲಿ ಇಪ್ಪತ್ತೆರಡು ವರ್ಷ ಆಳಿದನು.
30
ಒಮ್ರಿಯ ಮಗ ಅಹಾಬನು ತನಗೆ ಮುಂಚೆ ಇದ್ದ ಎಲ್ಲರಿಗಿಂತ ಯೆಹೋವ ದೇವರ ಮುಂದೆ ಹೆಚ್ಚು ಕೆಟ್ಟತನ ಮಾಡಿದನು.
31
ನೆಬಾಟನ ಮಗ ಯಾರೊಬ್ಬಾಮನ ಪಾಪಗಳಲ್ಲಿ ನಡೆಯುವುದು ಅವನಿಗೆ ಅಲ್ಪವಾಗಿತ್ತು. ಅವನು ಸೀದೋನ್ಯರ ಅರಸನಾದ ಎತ್ಬಾಳನ ಮಗಳಾದ ಈಜೆಬೆಲಳನ್ನು ಮದುವೆಯಾಗಿ ಬಾಳನನ್ನು ಸೇವಿಸಿ ಅವನಿಗೆ ಅಡ್ಡಬಿದ್ದನು.
32
ಇದಲ್ಲದೆ ತಾನು ಸಮಾರ್ಯದಲ್ಲಿ ಕಟ್ಟಿಸಿದ ಬಾಳನ ಮನೆಯಲ್ಲಿ ಬಾಳನಿಗೆ ಬಲಿಪೀಠವನ್ನು ಕಟ್ಟಿಸಿದನು.
33
ಅಹಾಬನು ಅಶೇರ ವಿಗ್ರಹಸ್ತಂಭಗಳನ್ನು ನಿಲ್ಲಿಸಿದನು. ಹೀಗೆಯೇ ಅಹಾಬನು ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಕೋಪ ಉಕ್ಕುವ ಹಾಗೆ ತನಗೆ ಮುಂಚಿನ ಇಸ್ರಾಯೇಲಿನ ಅರಸುಗಳೆಲ್ಲರಿಗಿಂತ ಅಧಿಕವಾಗಿ ಕೆಟ್ಟತನ ಮಾಡಿದನು.
34
ಅವನ ದಿವಸಗಳಲ್ಲಿ ಬೇತೇಲಿನ ಹೀಯೇಲನು ಯೆರಿಕೋವನ್ನು ಕಟ್ಟಿಸಿದನು. ಯೆಹೋವ ದೇವರು ನೂನನ ಮಗನಾದ ಯೆಹೋಶುವನ ಮುಖಾಂತರ ಹೇಳಿದ್ದ ವಾಕ್ಯದ ಪ್ರಕಾರವೇ ಅವನು ಅದಕ್ಕೆ ಅಸ್ತಿವಾರವನ್ನು ಹಾಕಿದಾಗ, ತನ್ನ ಚೊಚ್ಚಲಮಗನಾದ ಅಬೀರಾಮನನ್ನೂ, ಅದರ ಬಾಗಿಲುಗಳನ್ನು ಇಟ್ಟಾಗ ತನ್ನ ಕಿರಿ ಮಗನಾದ ಸೆಗೂಬನನ್ನೂ ಕಳೆದುಕೊಂಡನು.
← Chapter 15
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 17 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22