bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
/
Judges 18
Judges 18
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
← Chapter 17
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 19 →
1
ಆ ದಿವಸಗಳಲ್ಲಿ ಇಸ್ರಾಯೇಲಿನೊಳಗೆ ಅರಸನಿರಲಿಲ್ಲ. ಆ ದಿವಸಗಳಲ್ಲಿ ದಾನನ ಗೋತ್ರದವರು ವಾಸವಾಗಿರುವುದಕ್ಕೆ ತಮಗೆ ಬಾಧ್ಯತೆಯನ್ನು ಹುಡುಕುತ್ತಿದ್ದರು. ಏಕೆಂದರೆ ಅಂದಿನವರೆಗೆ ಅವರಿಗೆ ಇಸ್ರಾಯೇಲ್ ಗೋತ್ರಗಳಲ್ಲಿ ಪೂರ್ಣವಾಗಿ ಬಾಧ್ಯತೆ ದೊರೆತಿರಲಿಲ್ಲ.
2
ದಾನರು ದೇಶವನ್ನು ಸಂಚರಿಸಿ ನೋಡಿ, ಪರಿಶೋಧಿಸುವುದಕ್ಕಾಗಿ ತಮ್ಮ ಮೇರೆಗಳಲ್ಲಿರುವ ಚೊರ್ಗದಿಂದಲೂ, ಎಷ್ಟಾವೋಲಿನಿಂದಲೂ ತಮ್ಮ ಕುಟುಂಬದಲ್ಲಿ ಪರಾಕ್ರಮಶಾಲಿಗಳಾದ ಐದು ಮಂದಿಯನ್ನು ಕರೆದು, ಅವರ ಸಂಗಡ, “ನೀವು ಹೋಗಿ ದೇಶವನ್ನು ಸಂಚರಿಸಿ ನೋಡಿರಿ,” ಎಂದು ಹೇಳಿ ಕಳುಹಿಸಿದರು. ಹಾಗೆಯೇ ಇವರು ಎಫ್ರಾಯೀಮ್ ಬೆಟ್ಟದಲ್ಲಿರುವ ಮೀಕನ ಮನೆಯ ಬಳಿಗೆ ಬಂದು ಅಲ್ಲಿ ಇಳಿದುಕೊಂಡರು.
3
ಅವರು ಮೀಕನ ಮನೆಯ ಬಳಿಯಲ್ಲಿರುವಾಗ, ಲೇವಿಯ ಯುವಕನ ಸ್ವರ ಗುರುತಿಸಿ, ಅವನ ಬಳಿಗೆ ಹೋಗಿ, “ನಿನ್ನನ್ನು ಇಲ್ಲಿಗೆ ಕರೆದುಕೊಂಡು ಬಂದವನು ಯಾರು? ಇಲ್ಲಿ ನೀನು ಏನು ಮಾಡುತ್ತೀ? ಏಕೆ ನೀನು ಇಲ್ಲಿರುವೆ?” ಎಂದರು.
4
ಅವನು ಅವರಿಗೆ, “ಮೀಕನು ನನಗೆ ಹೀಗೆ ನಡೆಸುತ್ತಾ, ನನ್ನನ್ನು ಸಂಬಳಕ್ಕೆ ಇಟ್ಟುಕೊಂಡಿದ್ದಾನೆ. ನಾನು ಅವನಿಗೆ ಯಾಜಕನಾಗಿದ್ದೇನೆ,” ಎಂದನು.
5
ಆಗ ಅವರು ಅವನಿಗೆ, “ನಾವು ಹೋಗುವ ನಮ್ಮ ಮಾರ್ಗವು ಸಫಲವಾಗುವುದೋ? ಎಂದು ತಿಳಿಯುವ ಹಾಗೆ ದಯಮಾಡಿ ದೇವರನ್ನು ಕೇಳು,” ಎಂದರು.
6
ಆ ಯಾಜಕನು, “ಸಮಾಧಾನವಾಗಿ ಹೋಗಿರಿ. ನೀವು ಹೋಗುವ ನಿಮ್ಮ ಮಾರ್ಗಕ್ಕೆ ಯೆಹೋವ ದೇವರ ಒಪ್ಪಿಗೆ ಇದೆ,” ಎಂದನು.
7
ಆಗ ಆ ಐದು ಮಂದಿಯು ಹೊರಟು ಲಯಿಷಿಗೆ ಹೋಗಿ, ಅದರಲ್ಲಿ ವಾಸಿಸಿರುವ ಆ ಜನರನ್ನು ನೋಡುವಾಗ, ಅವರು ನಿರ್ಭೀತರಾಗಿಯೂ, ಸೀದೋನ್ಯರ ಹಾಗೆ ನೆಮ್ಮದಿಯಾಗಿಯೂ, ಸುರಕ್ಷಿತವಾಗಿಯೂ ಇದ್ದರು. ಅವರಿಗೆ ಯಾವ ಕೊರತೆಯು ಇರಲಿಲ್ಲ. ಅವರು ಸಮೃದ್ಧಿಯಲ್ಲಿದ್ದರು. ಸೀದೋನ್ಯರಿಂದ ದೂರವಾಗಿ ಜೀವಿಸುತ್ತಿದ್ದರು. ಬೇರೆ ಯಾರೊಂದಿಗೂ ಸಂಬಂಧವನ್ನು ಬೆಳೆಸಿರಲಿಲ್ಲ.
8
ಅವರು ಚೊರ್ಗದಲ್ಲಿಯೂ, ಎಷ್ಟಾವೋಲಿನಲ್ಲಿಯೂ ಇರುವ ಸಹೋದರರ ಬಳಿಗೆ ತಿರುಗಿ ಬಂದರು. ಅವರ ಸಹೋದರರಾದ ದಾನರು ಅವರಿಗೆ, “ನೀವು ಯಾವ ವರ್ತಮಾನ ತಂದಿದ್ದೀರಿ?” ಎಂದರು.
9
ಅದಕ್ಕವರು, “ನಾವು ಅವರಿಗೆ ವಿರೋಧವಾಗಿ ಯುದ್ಧಮಾಡುವುದಕ್ಕೆ ಹೋಗುವಹಾಗೆ ಏಳಿರಿ; ಏಕೆಂದರೆ ನಾವು ಆ ದೇಶವನ್ನು ನೋಡಿದೆವು; ಅದು ಬಹಳ ಚೆನ್ನಾಗಿದೆ. ನೀವು ಏನನ್ನಾದರೂ ಮಾಡಲು ಹೋಗುತ್ತೀರಾ? ಆ ದೇಶದಲ್ಲಿ ಪ್ರವೇಶಿಸಿ, ಅದನ್ನು ಸ್ವಾಧೀನಮಾಡಿಕೊಳ್ಳಲು ಹೋಗುವುದಕ್ಕೆ ತಡಮಾಡಬೇಡಿರಿ.
10
ನೀವು ಅಲ್ಲಿಗೆ ತಲುಪಿದಾಗ, ಸಂಶಯಪಡದ ಜನರನ್ನು ಅಲ್ಲಿ ಕಾಣುವಿರಿ. ಅದು ವಿಸ್ತಾರವಾದ ದೇಶವಾಗಿದೆ. ದೇವರು ಅದನ್ನು ನಿಮ್ಮ ಕೈಗಳಲ್ಲಿ ಒಪ್ಪಿಸಿಕೊಟ್ಟಿದ್ದಾರೆ. ಆ ಪ್ರದೇಶದಲ್ಲಿ ಯಾವ ಕೊರತೆಯು ಇರುವುದಿಲ್ಲ,” ಎಂದರು.
11
ಆಗ ಚೊರ್ಗದಲ್ಲಿಯೂ, ಎಷ್ಟಾವೋಲಿನಲ್ಲಿಯೂ ಇರುವ ದಾನನ ಗೋತ್ರದವರಲ್ಲಿ ಆರುನೂರು ಜನರು ಯುದ್ಧಕ್ಕೆ ತಕ್ಕ ಆಯುಧಗಳನ್ನು ಕಟ್ಟಿಕೊಂಡು, ಅಲ್ಲಿಂದ ಹೊರಟುಹೋಗಿ,
12
ಯೆಹೂದದಲ್ಲಿರುವ ಕಿರ್ಯತ್ ಯಾರೀಮಿನಲ್ಲಿ ಇಳಿದುಕೊಂಡರು. ಆ ಸ್ಥಳಕ್ಕೆ ಈ ದಿನದವರೆಗೂ ಮಹನೇ ದಾನ್ ಎಂಬ ಹೆಸರಿದೆ.
13
ಅದು ಕಿರ್ಯತ್ ಯಾರೀಮಿನ ಹಿಂದೆ ಇರುವುದು. ಅಲ್ಲಿಂದ ಅವರು ಎಫ್ರಾಯೀಮ್ ಬೆಟ್ಟಕ್ಕೆ ಹೋಗಿ, ಮೀಕನ ಮನೆಯವರೆಗೆ ಬಂದರು.
14
ಆಗ ಲಯಿಷಿನ ದೇಶವನ್ನು ಸಂಚರಿಸಿ ನೋಡಿ ಬಂದ ಆ ಐದು ಮಂದಿ ಜನರು ತಮ್ಮ ಸಹೋದರರಿಗೆ ಉತ್ತರಕೊಟ್ಟು, “ಈ ಮನೆಗಳಲ್ಲಿ ಏಫೋದೂ, ಪ್ರತಿಮೆಗಳೂ, ಕೆತ್ತಿದ ವಿಗ್ರಹವೂ, ಎರಕದ ವಿಗ್ರಹವೂ ಉಂಟೆಂದು ನಿಮಗೆ ಗೊತ್ತುಂಟೋ? ನೀವು ಈಗ ಮಾಡಬೇಕಾದದ್ದೇನೆಂದು ತಿಳಿದುಕೊಳ್ಳಿರಿ,” ಎಂದರು.
15
ಅವರು ಅಲ್ಲಿಗೆ ಹೋಗಿ ಮೀಕನ ಮನೆಯಲ್ಲಿರುವ ಯುವಕನಾದ ಲೇವಿಯನ ಬಳಿಗೆ ಬಂದು ಅವನ ಕ್ಷೇಮಸಮಾಚಾರವನ್ನು ವಿಚಾರಿಸತೊಡಗಿದರು.
16
ಯುದ್ಧದ ಆಯುಧಗಳನ್ನು ಕಟ್ಟಿಕೊಂಡ ದಾನನ ಗೋತ್ರದವರಾದ ಆರುನೂರು ಮಂದಿಯು ಬಾಗಿಲ ಬಳಿಯಲ್ಲಿ ನಿಂತರು.
17
ಆದರೆ ದೇಶವನ್ನು ಸಂಚರಿಸಿ ನೋಡಿ ಬಂದ ಆ ಐದು ಮಂದಿ ಒಳಗೆ ಹೋಗಿ, ಕೆತ್ತಿದ ವಿಗ್ರಹವನ್ನೂ, ಏಫೋದನ್ನೂ, ಪ್ರತಿಮೆಗಳನ್ನೂ, ಎರಕದ ವಿಗ್ರಹವನ್ನೂ ತೆಗೆದುಕೊಂಡರು. ಆಗ ಯಾಜಕನೂ, ಯುದ್ಧದ ಆಯುಧಗಳನ್ನು ಕಟ್ಟಿಕೊಂಡ ಆರುನೂರು ಜನರೂ ಬಾಗಿಲ ಬಳಿಯಲ್ಲಿ ನಿಂತಿದ್ದರು.
18
ಅವರು ಮೀಕನ ಮನೆಗೆ ಬಂದು, ಏಫೋದನ್ನೂ, ಪ್ರತಿಮೆಗಳನ್ನೂ, ಕೆತ್ತಿದ ವಿಗ್ರಹವನ್ನೂ, ಎರಕದ ವಿಗ್ರಹವನ್ನೂ ತೆಗೆದುಕೊಂಡಾಗ, ಯಾಜಕನು ಅವರಿಗೆ, “ನೀವು ಏನು ಮಾಡುತ್ತೀರಿ?” ಎಂದನು.
19
ಅವರು ಅವನಿಗೆ, “ನೀನು ಸುಮ್ಮನೆ ಇರು; ನಿನ್ನ ಬಾಯಿ ಮುಚ್ಚಿಕೊಂಡು ನಮ್ಮ ಸಂಗಡ ಬಂದು, ನಮಗೆ ತಂದೆಯಾಗಿಯೂ, ಯಾಜಕನಾಗಿಯೂ ಇರು. ನೀನು ಒಬ್ಬನ ಮನೆಗೆ ಯಾಜಕನಾಗಿರುವುದು ಒಳ್ಳೆಯದೋ ಅಥವಾ ಇಸ್ರಾಯೇಲಿನಲ್ಲಿ ಒಂದು ಗೋತ್ರಕ್ಕೂ, ಒಂದು ಕುಟುಂಬಕ್ಕೂ ಯಾಜಕನಾಗಿರುವುದು ಒಳ್ಳೆಯದೋ?” ಎಂದರು.
20
ಆಗ ಯಾಜಕನು ಸಂತೋಷಪಟ್ಟು ಏಫೋದನ್ನೂ, ಪ್ರತಿಮೆಗಳನ್ನೂ, ಕೆತ್ತಿದ ವಿಗ್ರಹವನ್ನೂ ತೆಗೆದುಕೊಂಡು ಜನರ ಮಧ್ಯದಲ್ಲಿ ಹೋದನು.
21
ಅವರು ತಿರುಗಿಕೊಂಡು ಹೊರಟು, ಚಿಕ್ಕವರನ್ನೂ, ಸಲಕರಣೆಗಳನ್ನೂ, ಪಶುಗಳನ್ನೂ ತಮಗೆ ಮುಂದಾಗಿ ಕಳುಹಿಸಿದರು.
22
ಅವರು ಮೀಕನ ಮನೆಯಿಂದ ಸ್ವಲ್ಪ ದೂರ ಹೋದಾಗ, ಮೀಕನ ಮನೆಯ ಸುತ್ತಲೂ ನೆರೆಮನೆಗಳಲ್ಲಿ ಇರುವ ಮನುಷ್ಯರು ಕೂಡಿಕೊಂಡು ದಾನರನ್ನು ಹಿಂದಟ್ಟಿ, ಅವರನ್ನು ಕೂಗಿ ಕರೆದರು.
23
ದಾನರು ತಮ್ಮ ಮುಖ ತಿರುಗಿಸಿ ಮೀಕನಿಗೆ, “ನೀನು ಗುಂಪು ಕೂಡಿಕೊಂಡು ಬರಲು ನಿನಗೆ ಏನಾಯಿತು?” ಎಂದರು.
24
ಅವನು, “ನಾನು ಮಾಡಿಕೊಂಡ ನನ್ನ ದೇವರುಗಳನ್ನೂ, ಯಾಜಕನನ್ನೂ ತೆಗೆದುಕೊಂಡು ಹೋದಿರಿ. ಇನ್ನು ನನಗೆ ಏನಿದೆ? ನೀವು ನನ್ನನ್ನು, ‘ನಿನಗೆ ಏನಾಯಿತೆಂದು ಕೇಳುವುದೇನು?’ ಎಂದನು.”
25
ಆದರೆ ದಾನನ ಮಕ್ಕಳು ಅವನಿಗೆ, “ಕೋಪಿಷ್ಟರು ನಿನ್ನ ಮೇಲೆ ಬೀಳದ ಹಾಗೆ ನೀನು ನಿನ್ನ ಪ್ರಾಣವನ್ನೂ, ನಿನ್ನ ಮನೆಯವರ ಪ್ರಾಣವನ್ನೂ ಕಳೆದುಕೊಳ್ಳದ ಹಾಗೆ ನಿನ್ನ ಶಬ್ದ ನಮಗೆ ಕೇಳಿಸದೆ ಇರಲಿ,” ಎಂದರು.
26
ದಾನನ ಮಕ್ಕಳು ತಮ್ಮ ಮಾರ್ಗವಾಗಿ ಹೋದರು. ಆಗ ಮೀಕನು, ಅವರು ತನಗಿಂತ ಬಲಿಷ್ಠರೆಂದು ಕಂಡು, ತಿರುಗಿಕೊಂಡು ತನ್ನ ಮನೆಗೆ ಹೋದನು.
27
ಅವರು ಮೀಕನು ಮಾಡಿಕೊಂಡವುಗಳನ್ನೂ, ಅವನಿಗಿದ್ದ ಯಾಜಕನನ್ನೂ ತೆಗೆದುಕೊಂಡು ವಿಶ್ರಾಂತಿಯಿಂದಲೂ, ಭರವಸದಿಂದಲೂ ಇದ್ದ ಲಯಿಷಿನ ಜನರ ಮೇಲೆ ಬಂದು, ಅವರನ್ನು ಖಡ್ಗದಿಂದ ಹೊಡೆದು, ಆ ಪಟ್ಟಣವನ್ನು ಬೆಂಕಿಯಿಂದ ಸುಟ್ಟುಬಿಟ್ಟರು.
28
ಅದು ಸೀದೋನಿಗೆ ದೂರವಾಗಿದ್ದುದರಿಂದಲೂ, ಯಾವ ಮನುಷ್ಯನ ಸಂಗಡಲಾದರೂ ಅವರಿಗೆ ಕೆಲಸವಿಲ್ಲದ್ದರಿಂದಲೂ ಅವರನ್ನು ಕಾಪಾಡಲು ಯಾರೂ ಇರಲಿಲ್ಲ. ಆ ಪಟ್ಟಣವು ಬೇತ್ರೆಹೋಬಿಗೆ ಸಮೀಪವಾದ ತಗ್ಗಿನಲ್ಲಿ ಇತ್ತು. ಈ ಪಟ್ಟಣವನ್ನು ದಾನ್ಯರು ಪುನಃ ಕಟ್ಟಿಸಿ ಅದರಲ್ಲಿ ವಾಸಿಸಿದರು.
29
ಮೊದಲು ಆ ಪಟ್ಟಣಕ್ಕೆ ಲಯಿಷೆಂಬ ಹೆಸರಿತ್ತು. ಈಗ ದಾನ್ಯರು ಆ ಪಟ್ಟಣಕ್ಕೆ ಇಸ್ರಾಯೇಲನಿಗೆ ಹುಟ್ಟಿದ ತಮ್ಮ ಮೂಲಪುರುಷನಾದ ದಾನನ ಹೆಸರಿನ ಪ್ರಕಾರ ದಾನ್ ಎಂದು ಹೆಸರಿಟ್ಟರು.
30
ಅಲ್ಲಿ ದಾನ್ಯರು ಕೆತ್ತಿದ ವಿಗ್ರಹವನ್ನು ತಮಗಾಗಿ ಸ್ಥಾಪಿಸಿಕೊಂಡರು. ಇಸ್ರಾಯೇಲರು ಸೆರೆಯಾಗಿ ಹೋಗುವವರೆಗೆ ಮೋಶೆಯ ಮೊಮ್ಮಗನೂ, ಗೇರ್ಷೋಮನ ಮಗನೂ ಆದ ಯೋನಾತಾನನೂ ಅವನ ವಂಶದವರೂ ಅವನ ಮಕ್ಕಳೂ ದಾನನ ಗೋತ್ರದವರಿಗೆ ಯಾಜಕರಾಗಿದ್ದರು.
31
ದೇವರ ಮನೆ ಶೀಲೋವಿನಲ್ಲಿ ಇರುವ ಮಟ್ಟಿಗೂ, ಅವರು ಮೀಕನು ಮಾಡಿದ ವಿಗ್ರಹವನ್ನು ಇಟ್ಟುಕೊಂಡಿದ್ದರು.
← Chapter 17
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 19 →
All chapters:
1
2
3
4
5
6
7
8
9
10
11
12
13
14
15
16
17
18
19
20
21