bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
/
Judges 19
Judges 19
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
← Chapter 18
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 20 →
1
ಇಸ್ರಾಯೇಲಿನಲ್ಲಿ ಆ ದಿವಸಗಳಲ್ಲಿ ಅರಸನಿರಲಿಲ್ಲ. ಎಫ್ರಾಯೀಮ್ ಬೆಟ್ಟದ ಒಂದು ಮೂಲೆಯಲ್ಲಿ ಒಬ್ಬ ಲೇವಿಯನು ಪ್ರವಾಸಿಯಾಗಿದ್ದನು. ಅವನು ಯೆಹೂದದ ಬೇತ್ಲೆಹೇಮಿನವಳಾದಂಥ ಸ್ತ್ರೀಯನ್ನು ಉಪಪತ್ನಿಯಾಗಿ ತೆಗೆದುಕೊಂಡಿದ್ದನು.
2
ಅವನ ಉಪಪತ್ನಿ ಅವನಿಗೆ ವಿರೋಧವಾಗಿ ಜಾರತ್ವ ಮಾಡಿ, ಅವನನ್ನು ಬಿಟ್ಟು, ಯೆಹೂದದ ಬೇತ್ಲೆಹೇಮಿನಲ್ಲಿರುವ ತನ್ನ ತಂದೆಯ ಮನೆಗೆ ಹೋಗಿ, ಅಲ್ಲಿ ನಾಲ್ಕು ತಿಂಗಳಿದ್ದಳು.
3
ಆಗ ಅವಳ ಗಂಡನು ಎದ್ದು, ಅವಳ ಸಂಗಡ ಪ್ರೀತಿಯಿಂದ ಮಾತನಾಡಿ, ಅವಳನ್ನು ತಿರುಗಿ ಕರೆತರುವುದಕ್ಕೆ ತನ್ನ ಸೇವಕನನ್ನೂ, ಎರಡು ಕತ್ತೆಗಳನ್ನೂ ತೆಗೆದುಕೊಂಡು ಅವಳ ಬಳಿಗೆ ಹೋದನು. ಅವಳು ಅವನನ್ನು ತನ್ನ ತಂದೆಯ ಮನೆಗೆ ಕರೆದುಕೊಂಡು ಹೋದಳು. ಆಕೆಯ ತಂದೆ ಅವನನ್ನು ಕಂಡಾಗ, ಸಂತೋಷದಿಂದ ಅವನನ್ನು ಸ್ವಾಗತಿಸಿದನು.
4
ಅವನ ಮಾವನು ಅಂದರೆ ಆ ಸ್ತ್ರೀಯ ತಂದೆಯು ಅವನನ್ನು ಅಲ್ಲಿರುವಂತೆ ಒತ್ತಾಯ ಮಾಡಿದನು. ಆದ್ದರಿಂದ ಅವನು ಅಲ್ಲಿ ಊಟಮಾಡುತ್ತಾ, ಕುಡಿಯುತ್ತಾ, ಮಲಗುತ್ತಾ ಮೂರು ದಿನಗಳನ್ನು ಕಳೆದನು.
5
ನಾಲ್ಕನೆಯ ದಿನ ಅವರು ಬೇಗನೆ ಎದ್ದು, ಹೊರಡಲಿಕ್ಕೆ ಸಿದ್ಧರಾದರು. ಆದರೆ ಆ ಸ್ತ್ರೀಯ ತಂದೆಯು ತನ್ನ ಅಳಿಯನಿಗೆ, “ಸ್ವಲ್ಪ ಊಟಮಾಡಿ ಚೇತರಿಸಿಕೋ, ಆಮೇಲೆ ನೀವು ಹೋಗಬಹುದು,” ಎಂದನು.
6
ಆದ್ದರಿಂದ ಅವರಿಬ್ಬರು ಊಟ ಮಾಡಲು, ಕುಡಿಯಲು ಕುಳಿತುಕೊಂಡರು. ಅನಂತರದಲ್ಲಿ ಆ ಸ್ತ್ರೀಯ ತಂದೆಯು, “ಈ ರಾತ್ರಿ ಇಲ್ಲೇ ಇದ್ದುಕೊಂಡು ಸಂತೋಷಪಡು,” ಎಂದು ಹೇಳಿದನು.
7
ಆ ಮನುಷ್ಯನು ಎದ್ದು ಹೊರಡಲು ಸಿದ್ಧನಾದಾಗ, ಅವನ ಮಾವನು ಅವನನ್ನು ಆ ರಾತ್ರಿ ಅಲ್ಲಿಯೇ ಇರುವಂತೆ ಒಪ್ಪಿಸಿದನು.
8
ಐದನೆಯ ದಿನದ ಮುಂಜಾನೆ ಅವನು ಹೊರಡಲು ಎದ್ದೇಳುವಾಗ, ಆ ಸ್ತ್ರೀಯ ತಂದೆಯು, “ವಿಶ್ರಮಿಸಿಕೋ, ಮಧ್ಯಾಹ್ನದವರೆಗೆ ಇರು,” ಎಂದನು. ಅದರಂತೆ ಅವರಿಬ್ಬರು ಒಟ್ಟಾಗಿ ಊಟಮಾಡಿದರು.
9
ಅವನೂ, ಅವನ ಉಪಪತ್ನಿಯೂ ಅವನ ಸೇವಕನೂ ಹೋಗುವುದಕ್ಕೆ ಎದ್ದಾಗ, ಅವನ ಮಾವನು ಅವನಿಗೆ, “ಇಗೋ, ಹೊತ್ತು ಹೋಗಿ ಸಂಜೆ ಆಯಿತು. ಈ ರಾತ್ರಿ ನೀನು ದಯಮಾಡಿ ಇಲ್ಲೇ ಇರು; ಹೊತ್ತು ಮುಣುಗುತ್ತಾ ಬಂತು. ನೀನು ಈ ರಾತ್ರಿ ಇಲ್ಲಿದ್ದು, ನಿನ್ನ ಗುಡಾರಕ್ಕೆ ನಾಳೆ ಬೆಳಿಗ್ಗೆ ಎದ್ದು, ನಿಮ್ಮ ಮಾರ್ಗ ಹಿಡಿದು ಹೋಗಬಹುದು,” ಎಂದನು.
10
ಆದರೆ ಆ ಮನುಷ್ಯನು ಆ ರಾತ್ರಿ ಅಲ್ಲಿರುವುದಕ್ಕೆ ಮನಸ್ಸಿಲ್ಲದೆ, ಎದ್ದು ತಡಿಕಟ್ಟಿದ ಎರಡು ಕತ್ತೆಗಳ ಮತ್ತು ತನ್ನ ಉಪಪತ್ನಿಯ ಸಂಗಡ ಹೊರಟುಹೋಗಿ, ಯೆರೂಸಲೇಮು ಎಂಬ ಯೆಬೂಸಿಗೆ ಸರಿಯಾಗಿ ಬಂದನು.
11
ಅವರು ಯೆಬೂಸಿಗೆ ಸಮೀಪಿಸಿದಾಗ, ಹೊತ್ತು ಬಹಳ ಹೋಗಿತ್ತು. ಆಗ ಸೇವಕನು ತನ್ನ ಯಜಮಾನನಿಗೆ, “ನೀನು ದಯಮಾಡಿ ಬಾ; ಈ ಯೆಬೂಸಿಯರ ಪಟ್ಟಣಕ್ಕೆ ತಿರುಗಿಕೊಂಡು, ಅಲ್ಲಿ ರಾತ್ರಿಯಲ್ಲಿ ಇಳಿದುಕೊಳ್ಳೋಣ,” ಎಂದನು.
12
ಆದರೆ ಅವನ ಯಜಮಾನನು ಅವನಿಗೆ, “ನಾವು ಇಲ್ಲಿ ಇಸ್ರಾಯೇಲರಲ್ಲದವರ ಪಟ್ಟಣದಲ್ಲಿ ತಂಗಬಾರದು; ಗಿಬೆಯ ಪಟ್ಟಣಕ್ಕೆ ಹೋಗೋಣ,” ಎಂದನು.
13
ಅವನು ಸೇವಕನಿಗೆ, “ಗಿಬೆಯದಲ್ಲಾದರೂ, ರಾಮಾದಲ್ಲಾದರೂ ಇಳಿದುಕೊಳ್ಳುವುದಕ್ಕೆ ಆ ಸ್ಥಳಗಳಲ್ಲಿ ಒಂದಕ್ಕೆ ಸೇರೋಣ ಬಾ,” ಎಂದನು.
14
ಹಾಗೆಯೇ ಅವರು ದಾಟಿಹೋದರು. ಅವರು ಬೆನ್ಯಾಮೀನನಿಗೆ ಸೇರಿದ ಗಿಬೆಯ ಊರಿನ ಸಮೀಪಕ್ಕೆ ಬಂದಾಗ ಸೂರ್ಯ ಮುಳುಗಿತ್ತು.
15
ಆದ್ದರಿಂದ ಅವರು ಗಿಬೆಯದಲ್ಲಿ ರಾತ್ರಿ ಕಳೆಯಲು ಉಳಿದರು. ಅವರು ಹೋಗಿ ಪಟ್ಟಣದ ಮಧ್ಯದಲ್ಲಿ ಕುಳಿತುಕೊಂಡರು. ಮನೆಯಲ್ಲಿ ಇಳಿದುಕೊಳ್ಳುವುದಕ್ಕೆ ಅವರನ್ನು ಯಾರೂ ಸೇರಿಸಿಕೊಳ್ಳಲಿಲ್ಲ.
16
ಆಗ ಒಬ್ಬ ಮುದುಕನು ಹೊಲದಲ್ಲಿ ತನ್ನ ಕೆಲಸಮಾಡಿ ಬರುತ್ತಿದ್ದನು. ಆ ಮನುಷ್ಯನು ಎಫ್ರಾಯೀಮ್ ಬೆಟ್ಟದ ಪ್ರದೇಶಕ್ಕೆ ಸೇರಿದವನೂ ಬೆನ್ಯಾಮೀನರ ಊರಾದ ಗಿಬೆಯದಲ್ಲಿ ಪ್ರವಾಸಿಯಾಗಿಯೂ ಇದ್ದನು.
17
ಆ ಮುದುಕನು ತನ್ನ ಕಣ್ಣೆತ್ತಿ ಆ ಪಟ್ಟಣದ ಬೀದಿಯಲ್ಲಿ ಕುಳಿತಿದ್ದ ಯಾತ್ರಿಕನನ್ನು ಕಂಡು, “ನೀನು ಎಲ್ಲಿಗೆ ಹೋಗುತ್ತೀ? ಎಲ್ಲಿಂದ ಬಂದೆ?” ಎಂದನು.
18
ಅವನು ಇವನಿಗೆ, “ನಾವು ಯೆಹೂದದ ಬೇತ್ಲೆಹೇಮಿನಿಂದ ಎಫ್ರಾಯೀಮ್ ಬೆಟ್ಟದ ಕಡೆಯಲ್ಲಿ ಹಾದು ಹೋಗುತ್ತೇವೆ. ನಾನು ಅಲ್ಲಿಯವನು. ಯೆಹೂದದ ಬೇತ್ಲೆಹೇಮಿಗೆ ಹೋಗಿದ್ದೆನು. ಈಗ ಯೆಹೋವ ದೇವರ ಮನೆಗೆ ಹೋಗುತ್ತೇನೆ. ಆದರೆ ನಮ್ಮನ್ನು ಯಾರೂ ಮನೆಗೆ ಸೇರಿಸಿಕೊಳ್ಳಲಿಲ್ಲ.
19
ಆದರೂ ನಮ್ಮ ಕತ್ತೆಗಳಿಗೆ ಮೇವೂ, ನಿನ್ನ ಸೇವಕನಾದ ನನಗೂ, ನಿನ್ನ ಸೇವಕಿಗೂ, ನಿನ್ನ ಸೇವಕನ ಸಂಗಡ ಇರುವ ಪ್ರಾಯಸ್ಥನಿಗೂ ಸಾಕಾಗುವಷ್ಟು ರೊಟ್ಟಿ ಮತ್ತು ದ್ರಾಕ್ಷಾರಸವು ಉಂಟು. ಏನೂ ಕೊರತೆ ಇಲ್ಲ,” ಎಂದನು.
20
ಆಗ ಆ ಮುದುಕನು, “ನಿನಗೆ ಶುಭವಾಗಲಿ, ನಿನ್ನ ಕೊರತೆಯೆಲ್ಲಾ ನನ್ನ ಮೇಲೆ ಇರಲಿ, ಹೇಗಾದರೂ ಬೀದಿಯೊಳಗೆ ಇಳಿದುಕೊಳ್ಳಬೇಡ,” ಎಂದು ಹೇಳಿ
21
ಅವನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ, ಕತ್ತೆಗಳಿಗೆ ಮೇವು ಹಾಕಿದನು. ಅವರು ತಮ್ಮ ಕೈಕಾಲುಗಳನ್ನು ತೊಳೆದು ತಿಂದು ಕುಡಿದರು.
22
ಅವರು ಸಂತೋಷಿಸುತ್ತಿರುವ ವೇಳೆಯಲ್ಲಿ ಆ ಪಟ್ಟಣದ ದುಷ್ಟ ಮನುಷ್ಯರಲ್ಲಿ ಕೆಲವರು ಆ ಮನೆಯನ್ನು ಸುತ್ತಿಕೊಂಡು, ಕದವನ್ನು ಬಡಿದು, ಆ ಮನೆಯ ಯಜಮಾನನಾದ ಮುದುಕನಿಗೆ, “ನಿನ್ನ ಮನೆಗೆ ಬಂದ ಆ ಮನುಷ್ಯನೊಡನೆ ನಮಗೆ ಸಂಗಮವಾಗಬೇಕು, ಹೊರಗೆ ಬಾ,” ಎಂದು ಹೇಳಿದರು.
23
ಆಗ ಮನೆಯ ಯಜಮಾನನಾದ ಆ ಮನುಷ್ಯನು ಅವರ ಬಳಿಗೆ ಹೊರಟುಹೋಗಿ, ಅವರಿಗೆ, “ಹಾಗೆ ಮಾಡಬೇಡಿರಿ. ನನ್ನ ಸಹೋದರರೇ, ದಯಮಾಡಿ ಕೆಟ್ಟತನ ಮಾಡಬೇಡಿರಿ. ಆ ಮನುಷ್ಯನು ನನ್ನ ಮನೆಯಲ್ಲಿ ಪ್ರವೇಶಿಸಿದ್ದರಿಂದ ನೀವು ಅಂಥ ಬುದ್ಧಿಹೀನತೆಯನ್ನು ಮಾಡಬೇಡಿರಿ.
24
ಕನ್ನಿಕೆಯಾದ ನನ್ನ ಮಗಳೂ, ಅವನ ಉಪಪತ್ನಿಯನ್ನೂ ಹೊರಗೆ ತರುವೆನು. ನೀವು ಅವರನ್ನು ಕುಂದಿಸಿ ನಿಮಗೆ ಸರಿಯಾಗಿ ತೋರುವ ಹಾಗೆ ಅವರಿಗೆ ಮಾಡಿರಿ, ಆ ಮನುಷ್ಯನಿಗೆ ಮಾತ್ರ ಅಂಥ ದುಷ್ಕೃತ್ಯವನ್ನು ಮಾಡಬೇಡಿರಿ,” ಎಂದನು.
25
ಆದರೆ ಆ ಮನುಷ್ಯರು ಅವನ ಮಾತನ್ನು ಕೇಳಲೊಲ್ಲದೆ ಹೋದರು. ಆದ್ದರಿಂದ ಆ ಮನುಷ್ಯನು ತನ್ನ ಉಪಪತ್ನಿಯನ್ನು ಹಿಡಿದು ಹೊರಗೆ ಅವರ ಬಳಿಯಲ್ಲಿ ತಂದು ಬಿಟ್ಟನು. ಅವರು ಅವಳನ್ನು ತೆಗೆದುಕೊಂಡು ಉದಯಕಾಲದ ಪರ್ಯಂತರ ರಾತ್ರಿಯೆಲ್ಲಾ ಕೆಡಿಸಿ, ಉದಯವಾಗುವಾಗ ಅವಳನ್ನು ಬಿಟ್ಟುಬಿಟ್ಟರು.
26
ಆ ಸ್ತ್ರೀ ಉದಯಕಾಲಕ್ಕೆ ಮುಂಚೆ ಬಂದು ಬೆಳಗಾಗುವ ಮಟ್ಟಿಗೂ ಅಲ್ಲಿ ತನ್ನ ಯಜಮಾನನು ಇರುವ ಮನೆಯ ಬಾಗಿಲ ಬಳಿಯಲ್ಲಿ ಬಿದ್ದಿದ್ದಳು.
27
ಅವಳ ಯಜಮಾನನು ಉದಯದಲ್ಲಿ ಎದ್ದು, ಮನೆಯ ಬಾಗಿಲನ್ನು ತೆರೆದು, ತನ್ನ ಮಾರ್ಗವಾಗಿ ಹೊರಡುವಾಗ, ತನ್ನ ಉಪಪತ್ನಿ ಮನೆಯ ಬಾಗಿಲ ಮುಂದೆ ತನ್ನ ಕೈಗಳನ್ನು ಹೊಸ್ತಿಲ ಮೇಲೆ ಇಟ್ಟವಳಾಗಿ ಬಿದ್ದಿದ್ದಳು.
28
ಆಗ ಅವನು ಅವಳಿಗೆ, “ಏಳು, ಹೋಗೋಣ,” ಎಂದನು. ಆದರೆ ಅವಳಿಂದ ಪ್ರತ್ಯುತ್ತರ ಬರಲಿಲ್ಲ. ಆಗ ಆ ಮನುಷ್ಯನು ಅವಳ ಶವವನ್ನು ಕತ್ತೆಯ ಮೇಲೆ ಹಾಕಿಕೊಂಡು, ತನ್ನ ಸ್ಥಳಕ್ಕೆ ಹೋದನು.
29
ಅವನು ತನ್ನ ಮನೆಗೆ ಹೋದಾಗ, ಒಂದು ಖಡ್ಗವನ್ನು ತೆಗೆದುಕೊಂಡು ತನ್ನ ಉಪಪತ್ನಿಯನ್ನು ಹಿಡಿದು ಎಲುಬುಗಳ ಸಂಗಡ ಹನ್ನೆರಡು ತುಂಡುಗಳಾಗಿ ಕಡಿದು, ಅವುಗಳನ್ನು ಇಸ್ರಾಯೇಲಿನ ಮೇರೆಗಳಿಗೆಲ್ಲಾ ಕಳುಹಿಸಿದನು.
30
ಆಗ ಅದನ್ನು ಕಂಡವರೆಲ್ಲಾ, “ಇಸ್ರಾಯೇಲರು ಈಜಿಪ್ಟಿನಿಂದ ಬಂದ ದಿವಸ ಮೊದಲ್ಗೊಂಡು ಈ ಪರ್ಯಂತರ ಇಂಥ ಕಾರ್ಯವು ಆದದ್ದೂ ಇಲ್ಲ, ಕಂಡದ್ದೂ ಇಲ್ಲ. ನೀವು ಇದರ ವಿಷಯ ಆಲೋಚಿಸಿ ಯೋಚಿಸಿರಿ. ನಾವೇನು ಮಾಡಬೇಕು ಹೇಳಿರಿ?” ಎಂದರು.
← Chapter 18
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 20 →
All chapters:
1
2
3
4
5
6
7
8
9
10
11
12
13
14
15
16
17
18
19
20
21