bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
1 Kings 2
1 Kings 2
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 1
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 3 →
1
ದಾವೀದನ ಅವಸಾನಕಾಲವು ಸಮೀಪಿಸಿದಾಗ ಅವನು ತನ್ನ ಮಗನಾದ ಸೊಲೊಮೋನನಿಗೆ ಆಜ್ಞಾಪಿಸಿದ್ದೇನಂದರೆ -
2
ಭೂಲೋಕದವರೆಲ್ಲರೂ ಹೋಗುವ ದಾರಿಯನ್ನು ನಾನೂ ಈಗ ಹಿಡಿಯಬೇಕು; ನೀನು ಧೈರ್ಯದಿಂದಿರು, ನಿನ್ನ ಪೌರುಷವನ್ನು ತೋರಿಸು.
3
ನಿನ್ನ ದೇವರಾದ ಯೆಹೋವನ ಕಟ್ಟಳೆಯನ್ನು ಕೈಕೊಂಡು ಆತನ ಮಾರ್ಗದಲ್ಲೇ ನಡೆದುಕೋ; ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವ ಆತನ ಆಜ್ಞಾನಿಯಮ ವಿಧಿನಿರ್ಣಯಗಳನ್ನು ಪಾಲಿಸು. ಹೀಗೆ ಮಾಡುವದಾದರೆ ನೀನು ಯಾವದನ್ನು ಮಾಡಿದರೂ ಎಲ್ಲಿಗೆ ಹೋದರೂ ಕೃತಾರ್ಥನಾಗುವಿ.
4
ಮತ್ತು ಯೆಹೋವನು - ನಿನ್ನ ಸಂತಾನದವರು ನಂಬಿಗಸ್ತರಾಗಿ ಪೂರ್ಣಮನಸ್ಸಿನಿಂದಲೂ ಪೂರ್ಣಪ್ರಾಣದಿಂದಲೂ ನನಗೆ ನಡೆದುಕೊಳ್ಳುವದರಲ್ಲಿ ಜಾಗರೂಕರಾಗಿರುವದಾದರೆ ಅವರು ತಪ್ಪದೆ ಇಸ್ರಾಯೇಲ್ ಸಿಂಹಾಸನದ ಮೇಲೆ ಕೂತುಕೊಳ್ಳುವರು ಎಂಬದಾಗಿ ತಾನು ನನಗೆ ಮಾಡಿದ ವಾಗ್ದಾನವನ್ನು ಸ್ಥಿರಪಡಿಸುವನು.
5
ಚೆರೂಯಳ ಮಗನಾದ ಯೋವಾಬನು ನನಗೆ ಮಾಡಿರುವದನ್ನು ಬಲ್ಲೆಯಲ್ಲಾ; ಅವನು ಇಬ್ಬರು ಇಸ್ರಾಯೇಲ್ ಸೇನಾಪತಿಗಳಾದ ನೇರನ ಮಗ ಅಬ್ನೇರನನ್ನೂ ಯೆತೆರನ ಮಗ ಅಮಾಸನನ್ನೂ ಕೊಂದುಹಾಕಿದನು. ಯುದ್ಧಕಾಲದಲ್ಲಿಯೋ ಎಂಬಂತೆ ಸಮಾಧಾನಕಾಲದಲ್ಲಿಯೂ ರಕ್ತ ಸುರಿಸಿ ಅದನ್ನು ತನ್ನ ನಡುಕಟ್ಟಿಗೂ ಪಾದರಕ್ಷೆಗಳಿಗೂ ಹಚ್ಚಿಕೊಂಡನು.
6
ಅವನಿಗೇನು ಮಾಡಬೇಕೆಂಬದು ಬುದ್ಧಿವಂತನಾದ ನಿನಗೆ ಗೊತ್ತುಂಟಲ್ಲಾ; ಅವನ ಮುದಿ ತಲೆಯು ಸಮಾಧಿಯನ್ನು ಸಮಾಧಾನದಿಂದ ಸೇರದಂತೆ ಮಾಡು.
7
ಆದರೆ ನೀನು ಗಿಲ್ಯಾದ್ಯನಾದ ಬರ್ಜಿಲ್ಲೈಯ ಮಕ್ಕಳಿಗೆ ಉಪಕಾರಮಾಡಬೇಕು; ಅವರು ನಿತ್ಯವೂ ನಿನ್ನ ಪಂಕ್ತಿಯಲ್ಲಿ ಊಟಮಾಡುತ್ತಿರಬೇಕು. ಯಾಕಂದರೆ ನಾನು ನಿನ್ನ ಸಹೋದರನಾದ ಅಬ್ಷಾಲೋಮನ ಬಳಿಯಿಂದ ಓಡಿಹೋದಾಗ ಅವರು ನನ್ನನ್ನು ಉಪಚರಿಸಿದರು.
8
ಬೆನ್ಯಾಮೀನ್ಯನಾದ ಗೇರನ ಮಗನೂ ಬಹುರೀಮ್ ಊರಿನವನೂ ಆದ ಶಿಮ್ಮಿಯು ನಿನ್ನ ಬಳಿಯಲ್ಲಿರುತ್ತಾನಲ್ಲಾ; ನಾನು ಮಹನಯಿವಿುಗೆ ಹೋದಾಗ ಅವನು ನನ್ನನ್ನು ಬಹುಕ್ರೂರವಾಗಿ ಶಪಿಸಿದನು; ಅವನು ನನ್ನನ್ನು ಎದುರುಗೊಳ್ಳುವದಕ್ಕೆ ಯೊರ್ದನಿಗೆ ಬಂದಾಗ ನಾನು ಅವನಿಗೆ - ನಿನ್ನನ್ನು ಕೊಲ್ಲುವದಿಲ್ಲ ಎಂಬದಾಗಿ ಯೆಹೋವನ ಹೆಸರಿನಲ್ಲಿ ಪ್ರಮಾಣ ಮಾಡಿದೆನು.
9
ನೀನಾದರೋ ಅವನನ್ನು ಶಿಕ್ಷಿಸದೆ ಬಿಡಬೇಡ; ನೀನು ಬುದ್ಧಿವಂತನಲ್ಲವೋ! ಅವನ ಮುದಿ ತಲೆಯು ರಕ್ತಮಯವಾಗಿ ಸಮಾಧಿ ಸೇರುವಂತೆ ಏನು ಮಾಡಬೇಕೆಂಬದು ನಿನಗೆ ಗೊತ್ತಿರುವದು ಎಂಬದೇ.
10
ಅನಂತರ ದಾವೀದನು ಪಿತೃಗಳ ಬಳಿಗೆ ಸೇರಿದನು. ಅವನ ಶವವನ್ನು ದಾವೀದ ನಗರದಲ್ಲಿ ಸಮಾಧಿಮಾಡಿದರು.
11
ದಾವೀದನು ಇಸ್ರಾಯೇಲ್ಯರನ್ನು ಆಳಿದ್ದು ನಾಲ್ವತ್ತು ವರುಷ. ಹೇಗಂದರೆ - ಹೆಬ್ರೋನಿನಲ್ಲಿ ಏಳು ವರುಷ, ಯೆರೂಸಲೇವಿುನಲ್ಲಿ ಮೂವತ್ತ ಮೂರು ವರುಷ ಆಳಿದನು.
12
ಸೊಲೊಮೋನನು ತನ್ನ ತಂದೆಯಾದ ದಾವೀದನ ಸಿಂಹಾಸನವನ್ನು ಏರಿದನು. ಅವನ ರಾಜ್ಯವು ಬಹಳವಾಗಿ ಬಲಗೊಂಡಿತು.
13
ಹಗ್ಗೀತಳ ಮಗನಾದ ಅದೋನೀಯನು ಸೊಲೊಮೋನನ ತಾಯಿಯಾದ ಬತ್ಷೆಬೆಯ ದರ್ಶನಕ್ಕೆ ಬಂದನು. ಆಕೆಯು ಅವನನ್ನು - ನೀನು ಸಮಾಧಾನದಿಂದ ಬಂದಿರುತ್ತೀಯೋ ಎಂದು ಕೇಳಲು ಅವನು - ಹೌದು, ಸಮಾಧಾನದಿಂದ ಬಂದೆನು ಎಂದನು.
14
ಆಮೇಲೆ ಅವನು - ನಿನಗೊಂದು ಮಾತು ಹೇಳಬೇಕೆಂದು ಬಂದಿದ್ದೇನೆ ಅನ್ನಲು ಆಕೆಯು - ಹೇಳು ಅಂದಳು.
15
ಆಗ ಅವನು - ರಾಜ್ಯವು ನನಗೆ ಬರಬೇಕಾಗಿತ್ತು; ನಾನೇ ಅರಸನಾಗುವೆನೆಂದು ಇಸ್ರಾಯೇಲ್ಯರೆಲ್ಲರೂ ಎದುರು ನೋಡುತ್ತಿದ್ದರೆಂದು ನೀನು ಬಲ್ಲೆಯಷ್ಟೆ; ಆದರೆ ಅದು ತಪ್ಪಿ ನನ್ನ ತಮ್ಮನಿಗೆ ಹೋಯಿತು. ಅದು ಯೆಹೋವನಿಂದಲೇ ಅವನಿಗೆ ದೊರಕಿತು.
16
ಅದಿರಲಿ, ಒಂದು ಬಿನ್ನಹವಿದೆ; ಅದನ್ನು ತಿರಸ್ಕರಿಸಬೇಡ ಎನ್ನಲು ಆಕೆಯು - ಅದೇನು, ಹೇಳು ಅಂದಾಗ
17
ಅವನು - ದಯವಿಟ್ಟು ಶೂನೇಮ್ಯಳಾದ ಅಬೀಷಗ್ ಎಂಬಾಕೆಯನ್ನು ನನಗೆ ಹೆಂಡತಿಯನ್ನಾಗಿ ಕೊಡಬೇಕೆಂದು ಅರಸನಾದ ಸೊಲೊಮೋನನಿಗೆ ಹೇಳು; ಅವನು ನಿನ್ನ ಮಾತನ್ನು ತಳ್ಳುವದಿಲ್ಲ ಅಂದನು.
18
ಬತ್ಷೆಬೆಯು - ಒಳ್ಳೇದು, ನಾನು ನಿನಗೋಸ್ಕರ ಸನ್ನಿಧಿಯಲ್ಲಿ ಅರಿಕೆಮಾಡುತ್ತೇನೆ ಎಂದು ಹೇಳಿದಳು.
19
ಆಕೆಯು ಅದೋನೀಯನಿಗಾಗಿ ಮಾತಾಡುವದಕ್ಕೋಸ್ಕರ ಅರಸನಾದ ಸೊಲೊಮೋನನ ಬಳಿಗೆ ಬರುತ್ತಿರುವಾಗ ಅರಸನು ಎದ್ದುಹೋಗಿ ಆಕೆಯನ್ನು ಎದುರುಗೊಂಡು ನಮಸ್ಕರಿಸಿದನು. ಅನಂತರ ತಾನು ಸಿಂಹಾಸನದ ಮೇಲೆ ಕೂತು ರಾಜಮಾತೆಗೋಸ್ಕರ ಒಂದು ಆಸನವನ್ನು ತರಿಸಲು ಆಕೆಯು ಅವನ ಬಲಗಡೆಯಲ್ಲಿ ಕೂತುಕೊಂಡು -
20
ಒಂದು ಸಣ್ಣ ಬಿನ್ನಹ ಉಂಟು, ಅದನ್ನು ತಿರಸ್ಕರಿಸಬೇಡ ಎಂದು ಹೇಳಿದಳು. ಅರಸನು - ನನ್ನ ತಾಯಿಯೇ, ಏನು ಬೇಕು, ಕೇಳು; ನಾನು ಆಗದು ಅನ್ನುವದಿಲ್ಲ ಎಂದನ್ನಲು
21
ಆಕೆಯು - ಶೂನೇಮ್ಯಳಾದ ಅಬೀಷಗ್ ಎಂಬಾಕೆಯು ನಿನ್ನ ಅಣ್ಣನಾದ ಅದೋನೀಯನಿಗೆ ಹೆಂಡತಿಯಾಗಿ ಕೊಡಲ್ಪಡಲಿ ಅಂದಳು.
22
ಆಗ ಅರಸನಾದ ಸೊಲೊಮೋನನು ತನ್ನ ತಾಯಿಗೆ - ಅದೋನೀಯನಿಗೋಸ್ಕರ ಶೂನೇಮ್ಯಳಾದ ಅಬೀಷಗ್ ಎಂಬಾಕೆಯನ್ನು ಮಾತ್ರ ಕೇಳುವದೇಕೆ? ಅವನಿಗೆ ರಾಜ್ಯವನ್ನೂ ಕೊಡಬೇಕೆಂದು ಕೇಳು; ಅವನು ನನ್ನ ಅಣ್ಣನಲ್ಲವೇ; ಯಾಜಕನಾದ ಎಬ್ಯಾತಾರನೂ ಚೆರೂಯಳ ಮಗನಾದ ಯೋವಾಬನೂ ಅವನ ಪಕ್ಷದವರಾಗಿದ್ದಾರೆ ಎಂದು ಉತ್ತರಕೊಟ್ಟನು.
23
ಇದಲ್ಲದೆ ಅರಸನಾದ ಸೊಲೊಮೋನನು - ಯೆಹೋವನಾಣೆ, ಅದೋನೀಯನ ಈ ಮಾತಿಗೋಸ್ಕರ ನಾನು ಅವನನ್ನು ಮರಣಕ್ಕೆ ಪಾತ್ರನೆಂದು ಎಣಿಸದಿದ್ದರೆ ದೇವರು ನನಗೆ ಬೇಕಾದದ್ದನ್ನು ಮಾಡಲಿ.
24
ನನ್ನ ತಂದೆಯಾದ ದಾವೀದನ ಸಿಂಹಾಸನದ ಮೇಲೆ ನನ್ನನ್ನು ಕುಳ್ಳಿರಿಸಿ ಬಲಪಡಿಸಿ ತಾನು ವಾಗ್ದಾನಮಾಡಿದಂತೆ ನನಗೆ ಮನೆಯನ್ನು ಕಟ್ಟಿದ ಯೆಹೋವನಾಣೆ, ಅದೋನೀಯನು ಈಹೊತ್ತೇ ಸಾಯಬೇಕು ಎಂದು ಹೇಳಿ
25
ಯೆಹೋಯಾದಾವನ ಮಗನಾದ ಬೆನಾಯನಿಗೆ ಆಜ್ಞಾಪಿಸಿದದರಿಂದ ಅವನು ಹೋಗಿ ಅವನನ್ನು ಹೊಡೆದು ಕೊಂದುಹಾಕಿದನು.
26
ತರುವಾಯ ಅರಸನು ಯಾಜಕನಾದ ಎಬ್ಯಾತಾರನಿಗೆ - ನೀನು ಅಣತೋತಿನಲ್ಲಿರುವ ನಿನ್ನ ಸ್ವಾಸ್ತ್ಯಕ್ಕೆ ಹೋಗು; ನೀನು ಮರಣಕ್ಕೆ ಪಾತ್ರನು. ಆದರೆ ನೀನು ಕರ್ತನಾದ ಯೆಹೋವನ ಮಂಜೂಷವನ್ನು ಹೊತ್ತುಕೊಂಡು ನನ್ನ ತಂದೆಯಾದ ದಾವೀದನೊಡನೆ ಸಂಚರಿಸುತ್ತಾ ಅವನ ಎಲ್ಲಾ ಕಷ್ಟಗಳಲ್ಲಿ ಪಾಲುಗಾರನಾಗಿದ್ದದರಿಂದ
27
ಈಹೊತ್ತು ನಿನ್ನನ್ನು ಕೊಲ್ಲಿಸುವದಿಲ್ಲ ಎಂದು ಹೇಳಿ ಅವನನ್ನು ಯೆಹೋವನ ಯಾಜಕೋದ್ಯೋಗದಿಂದ ತಳ್ಳಿಬಿಟ್ಟನು. ಹೀಗೆ ಯೆಹೋವನು ಶೀಲೋವಿನಲ್ಲಿದ್ದ ಏಲಿಯ ಮನೆಯನ್ನು ಕುರಿತು ಹೇಳಿದ ಮಾತು ನೆರವೇರಿತು.
28
ಈ ವರ್ತಮಾನವು ಯೋವಾಬನಿಗೆ ಮುಟ್ಟಿದ ಕೂಡಲೆ ಅವನು ಯೆಹೋವನ ಗುಡಾರಕ್ಕೆ ಓಡಿಹೋಗಿ ಯಜ್ಞವೇದಿಯ ಕೊಂಬುಗಳನ್ನು ಹಿಡಿದನು. (ಅವನು ಅಬ್ಷಾಲೋಮನ ಪಕ್ಷವನ್ನು ಹಿಡಿಯದಿದ್ದರೂ ಅದೋನೀಯನ ಪಕ್ಷವನ್ನು ಹಿಡಿದಿದ್ದನು.)
29
ಯೋವಾಬನು ಯೆಹೋವನ ಗುಡಾರಕ್ಕೆ ಓಡಿಹೋಗಿ ಯಜ್ಞವೇದಿಯ ಹತ್ತಿರ ಇದ್ದಾನೆ ಎಂಬ ಸುದ್ದಿಯು ಅರಸನಾದ ಸೊಲೊಮೋನನಿಗೆ ತಲುಪಿದಾಗ ಅವನು ಯೆಹೋಯಾದಾವನ ಮಗನಾದ ಬೆನಾಯನಿಗೆ - ಹೋಗಿ ಅವನ ಮೇಲೆ ಬೀಳು ಎಂದು ಆಜ್ಞಾಪಿಸಿದನು.
30
ಬೆನಾಯನು ಯೆಹೋವನ ಗುಡಾರಕ್ಕೆ ಹೋಗಿ ಯೋವಾಬನಿಗೆ - ಅರಸನು ನಿನಗೆ ಹೊರಗೆ ಬರಬೇಕೆಂದು ಆಜ್ಞಾಪಿಸುತ್ತಾನೆ ಎಂದು ಹೇಳಲು ಅವನು - ಬರುವದಿಲ್ಲ, ನಾನು ಇಲ್ಲಿಯೇ ಸಾಯುತ್ತೇನೆ ಎಂದು ಉತ್ತರ ಕೊಟ್ಟನು. ಬೆನಾಯನು ಅರಸನ ಬಳಿಗೆ ಹೋಗಿ ಯೋವಾಬನು ಅಂದದ್ದನ್ನು ತಿಳಿಸಲು
31
ಅರಸನು ಅವನಿಗೆ - ಅವನು ಹೇಳಿದಂತೆ ಮಾಡು; ಅವನನ್ನು ಕೊಂದು ಅವನ ಶವವನ್ನು ಸಮಾಧಿಮಾಡು. ಯೋವಾಬನು ನಿಷ್ಕಾರಣವಾಗಿ ರಕ್ತಸುರಿಸಿದದರಿಂದ ನನಗೂ ನನ್ನ ತಂದೆಯ ಮನೆಯವರಿಗೂ ಹತ್ತಿರುವ ದೋಷವನ್ನು ಈ ಪ್ರಕಾರ ಪರಿಹರಿಸು.
32
ಯೆಹೋವನು ಈ ರಕ್ತಾಪರಾಧವನ್ನು ಅವನ ತಲೆಯ ಮೇಲೆಯೇ ಬರಮಾಡಲಿ. ಅವನು ನನ್ನ ತಂದೆಯಾದ ದಾವೀದನಿಗೆ ತಿಳಿಯದೆ ತನಗಿಂತ ಉತ್ತಮರೂ ನೀತಿವಂತರೂ ಆದ ಇಬ್ಬರು ಮನುಷ್ಯರನ್ನು ಅಂದರೆ ಇಸ್ರಾಯೇಲ್ ಸೇನಾಪತಿಯೂ ನೇರನ ಮಗನೂ ಆದ ಅಬ್ನೇರನನ್ನೂ ಯೆಹೂದಸೇನಾಪತಿಯೂ ಯೆತೆರೆನ ಮಗನೂ ಆದ ಅಮಾಸನನ್ನೂ ಕೊಂದನಲ್ಲಾ.
33
ಈ ಇಬ್ಬರನ್ನೂ ವಧಿಸಿದ ಪಾಪವು ಯೋವಾಬನ ತಲೆಯ ಮೇಲೆಯೂ ಅವನ ಸಂತಾನದವರ ತಲೆಯ ಮೇಲೆಯೂ ಇರಲಿ. ಆದರೆ ದಾವೀದನಿಗೂ ಅವನ ಸಿಂಹಾಸನ ಕುಟುಂಬ ಸಂತಾನಗಳಿಗೂ ಯೆಹೋವನಿಂದ ನಿತ್ಯ ಸೌಭಾಗ್ಯವು ದೊರಕಲಿ ಅಂದನು.
34
ಯೆಹೋಯಾದಾವನ ಮಗನಾದ ಬೆನಾಯನು ಹೋಗಿ ಯೋವಾಬನನ್ನು ಕೊಂದನು. ಅವನ ಶವಕ್ಕೆ ಅರಣ್ಯದಲ್ಲಿರುವ ಅವನ ಮನೆಯ ನಿವೇಶನದಲ್ಲಿ ಸಮಾಧಿಯಾಯಿತು.
35
ಅರಸನು ಯೋವಾಬನಿಗೆ ಬದಲಾಗಿ ಯೆಹೋಯಾದಾವನ ಮಗನಾದ ಬೆನಾಯನನ್ನು ಸೈನ್ಯಾಧಿಪತಿಯನ್ನಾಗಿಯೂ ಎಬ್ಯಾತಾರನಿಗೆ ಬದಲಾಗಿ ಚಾದೋಕನನ್ನು ಯಾಜಕನನ್ನಾಗಿಯೂ ನೇವಿುಸಿದನು.
36
ತರುವಾಯ ಅರಸನು ಶಿಮ್ಮಿಯನ್ನು ಕರಿಸಿ ಅವನಿಗೆ - ನೀನು ಒಂದು ಮನೆಯನ್ನು ಕಟ್ಟಿಸಿಕೊಂಡು ಯೆರೂಸಲೇವಿುನಲ್ಲೇ ವಾಸಿಸಬೇಕು. ಇದನ್ನು ಬಿಟ್ಟು ಎಲ್ಲಿಗೂ ಹೋಗಬಾರದು.
37
ನೀನು ಇದನ್ನು ಬಿಟ್ಟು ಕಿದ್ರೋನ್ಹಳ್ಳದ ಆಚೆಗೆ ಹೋದಿಯಾದರೆ ಅದೇ ದಿವಸದಲ್ಲಿ ನಿನಗೆ ಮರಣಶಿಕ್ಷೆಯಾಗುವದೆಂದು ತಿಳಿದುಕೋ; ಮತ್ತು ಆ ರಕ್ತಾಪರಾಧವು ನಿನ್ನ ತಲೆಯ ಮೇಲೆಯೇ ಇರುವದು ಎಂದು ಹೇಳಿದನು.
38
ಅದಕ್ಕೆ ಶಿಮ್ಮಿಯು - ಒಳ್ಳೇದು; ನನ್ನ ಒಡೆಯನೂ ಅರಸನೂ ಆದ ನೀನು ಹೇಳಿದಂತೆಯೇ ಸೇವಕನಾದ ನಾನು ಮಾಡುವೆನು ಎಂದು ಉತ್ತರಕೊಟ್ಟು ಬಹುದಿನಗಳವರೆಗೂ ಯೆರೂಸಲೇವಿುನಲ್ಲೆ ವಾಸಿಸುತ್ತಿದ್ದನು.
39
ಮೂರು ವರುಷಗಳಾದನಂತರ ಶಿಮ್ಮಿಯ ಇಬ್ಬರು ದಾಸರು ಗತ್ ಊರಿನ ಅರಸನೂ ಮಾಕನ ಮಗನೂ ಆದ ಆಕೀಷನ ಬಳಿಗೆ ಓಡಿಹೋದರು.
40
ದಾಸರು ಗತ್ ಊರಿನಲ್ಲಿರುವದು ಶಿಮ್ಮಿಗೆ ಗೊತ್ತಾದಾಗ ಅವನು ಕತ್ತೆಗೆ ತಡಿಹಾಕಿಸಿ ತನ್ನ ದಾಸರನ್ನು ಹುಡುಕುವದಕ್ಕೋಸ್ಕರ ಗತ್ ಊರಿನ ಅರಸನಾದ ಆಕೀಷನ ಬಳಿಗೆ ಹೊರಟುಹೋಗಿ ಅವರನ್ನು ಗತ್ ಊರಿನಿಂದ ಹಿಡಿದುಕೊಂಡು ಬಂದನು.
41
ಶಿಮ್ಮಿಯು ಯೆರೂಸಲೇವಿುನಿಂದ ಗತ್ ಊರಿಗೆ ಹೋಗಿ ಬಂದದ್ದು ಅರಸನಾದ ಸೊಲೊಮೋನನಿಗೆ ತಿಳಿದುಬಂದಾಗ ಅವನು ಅವನನ್ನು ಕರಿಸಿ ಅವನಿಗೆ -
42
ನೀನು ಈ ಊರನ್ನು ಬಿಟ್ಟು ಎಲ್ಲಿಗಾದರೂ ಹೋದರೆ ಅದೇ ದಿನದಲ್ಲಿ ನಿನಗೆ ಮರಣಶಿಕ್ಷೆಯಾಗುವದೆಂದು ಖಂಡಿತವಾಗಿ ಹೇಳಿ ಯೆಹೋವನ ಹೆಸರಿನಲ್ಲಿ ನಿನ್ನಿಂದ ಪ್ರಮಾಣತೆಗೆದುಕೊಂಡೆನಲ್ಲವೋ?
43
ಆಗ ನೀನು - ಒಳ್ಳೇದು, ಹಾಗೆಯೇ ಮಾಡುತ್ತೇನೆ ಎಂದು ಹೇಳಿದಿಯಲ್ಲಾ. ಹಾಗಾದರೆ ಯೆಹೋವನ ಹೆಸರಿನಲ್ಲಿ ನೀನು ಮಾಡಿದ ಪ್ರಮಾಣವನ್ನೂ ನಾನು ನಿನಗೆ ಕೊಟ್ಟ ಅಪ್ಪಣೆಯನ್ನೂ ಯಾಕೆ ಕೈಕೊಳ್ಳಲಿಲ್ಲ ಅಂದನು.
44
ಇದಲ್ಲದೆ ಅರಸನು ಅವನಿಗೆ - ನೀನು ನನ್ನ ತಂದೆಯಾದ ದಾವೀದನಿಗೆ ವಿರೋಧವಾಗಿ ಮಾಡಿದ ಪಾಪಕ್ಕೆ ಮನವೇ ಸಾಕ್ಷಿ; ಯೆಹೋವನು ಅದರ ಫಲವನ್ನು ನಿನ್ನ ತಲೆಯ ಮೇಲೆ ಬರಮಾಡುವನು.
45
ಆದರೆ ಸೊಲೊಮೋನ ರಾಜನಿಗೆ ಆಶೀರ್ವಾದವಾಗಲಿ; ದಾವೀದನ ಸಿಂಹಾಸನವು ಯೆಹೋವನ ಸನ್ನಿಧಿಯಲ್ಲಿ ಸದಾಕಾಲವೂ ಇರಲಿ ಎಂದು ಹೇಳಿ
46
ಯೆಹೋಯಾದಾವನ ಮಗನಾದ ಬೆನಾಯನಿಗೆ ಅವನನ್ನು ಸಂಹರಿಸೆಂದು ಆಜ್ಞಾಪಿಸಲು ಇವನು ಹೊರಗೆ ಹೋಗಿ ಅವನ ಮೇಲೆ ಬಿದ್ದು ಅವನನ್ನು ಕೊಂದುಹಾಕಿದನು. ಹೀಗೆ ಸೊಲೊಮೋನನ ರಾಜ್ಯಾಧಿಕಾರವು ಸ್ಥಿರವಾಯಿತು.
← Chapter 1
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 3 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22