bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
1 Kings 4
1 Kings 4
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 3
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 5 →
1
ಸೊಲೊಮೋನರಾಜನು ಎಲ್ಲಾ ಇಸ್ರಾಯೇಲ್ಯರ ಮೇಲೆ ಅರಸನಾಗಿದ್ದನು.
2
ಅವನ ಮುಖ್ಯ ಉದ್ಯೋಗಸ್ಥರು - ಚಾದೋಕನ ಮಗನಾದ ಅಜರ್ಯನು ಯಾಜಕನು;
3
ಶೀಷನ ಮಕ್ಕಳಾದ ಎಲೀಹೋರೆಫ್, ಅಹೀಯಾಹು ಎಂಬವರು ಲೇಖಕರು; ಅಹೀಲೂದನ ಮಗನಾದ ಯೆಹೋಷಾಫಾಟನು ಅವನ ಮಂತ್ರಿಯು;
4
ಯೆಹೋಯಾದಾವನ ಮಗನಾದ ಬೆನಾಯನು ಸೇನಾಪತಿ; ಎಬ್ಯಾತಾರ ಚಾದೋಕರು ಯಾಜಕರು;
5
ನಾತಾನನ ಮಗನಾದ ಅಜರ್ಯನು ಪ್ರದೇಶಾಧಿಪತಿಗಳ ಮುಖ್ಯಸ್ಥನು; ನಾತಾನನ ಮಗನಾದ ಜಾಬೂದನು ಯಾಜಕನೂ ಅರಸನ ವಿುತ್ರನೂ ಆಗಿದ್ದನು;
6
ಅಹೀಷಾರನು ರಾಜಗೃಹಾಧಿಪತಿಯು; ಅಬ್ದನ ಮಗನಾದ ಅದೋನೀರಾಮನು ಬಿಟ್ಟೀ ಕೆಲಸಮಾಡಿಸುವವರ ಮುಖ್ಯಸ್ಥನು.
7
ಸೊಲೊಮೋನನು ಎಲ್ಲಾ ಇಸ್ರಾಯೇಲ್ಯರ ಮೇಲೆ ಹನ್ನೆರಡು ಮಂದಿ ಪ್ರದೇಶಾಧಿಪತಿಗಳನ್ನು ನೇವಿುಸಿದನು. ಅವರಲ್ಲಿ ಪ್ರತಿಯೊಬ್ಬನು ಒಂದೊಂದು ತಿಂಗಳು ಅರಸನಿಗೂ ಅವನ ಮನೆಯವರಿಗೂ ಬೇಕಾದ ಆಹಾರಪದಾರ್ಥಗಳನ್ನು ಪ್ರತಿವರುಷವೂ ಒದಗಿಸಿ ಕೊಡಬೇಕಾಗಿತ್ತು.
8
ಅವರು ಯಾರಂದರೆ - ಎಫ್ರಾಯೀಮ್ ಪರ್ವತಪ್ರದೇಶದಲ್ಲಿದ್ದ ಹೂರನ ಮಗನು.
9
ಮಾಕಚ್, ಶಾಲ್ಬೀಮ್, ಬೇತ್ಷೆಮೆಷ್, ಏಲೋನ್, ಬೇತ್ಹಾನಾನ್ ಎಂಬ ಊರುಗಳ ಒಡೆಯನಾದ ದೆಕೆರನ ಮಗನು.
10
ಸೋಕೋ, ಹೇಫೆರ್ ಎಂಬ ಪ್ರದೇಶಗಳಿಗೆ ಅಧಿಪತಿಯಾಗಿದ್ದು ಅರುಬ್ಬೋತಿನಲ್ಲಿ ವಾಸವಾಗಿದ್ದ ಹೆಸೆದನ ಮಗನು.
11
ದೋರ್ಗುಡ್ಡದ ಪ್ರದೇಶದಲ್ಲಿದ್ದ ಅಬೀನಾದಾಬನ ಮಗನು; ಸೊಲೊಮೋನನ ಮಗಳಾದ ಟಾಫತಳು ಇವನ ಹೆಂಡತಿಯಾಗಿದ್ದಳು.
12
ತಾಣಕ್, ಮೆಗಿದ್ದೋ, ಚಾರೆತಾನಿನ ಬಳಿಯಲ್ಲಿಯೂ ಇಜ್ರೇಲಿನ ಅಡಿಯಲ್ಲಿಯೂ ಬೇತ್ಷೆಯಾನಿನಿಂದ ಆಬೇಲ್ ಮೆಹೋಲದವರೆಗೂ ಇರುವಂಥ ಯೊಕ್ಮೆಯಾನಿನ ಆಚೆಗೆ ವಿಸ್ತರಿಸಿಕೊಂಡಿರುವಂಥ ಬೇತ್ಷೆಯಾನಿನ ಎಲ್ಲಾ ಪ್ರದೇಶ ಇವುಗಳಿಗೆ ಅಧಿಪತಿಯಾದ ಅಹೀಲೂದನ ಮಗನಾದ ಬಾಣಾ.
13
ಗಿಲ್ಯಾದಿನಲ್ಲಿ ಮನಸ್ಸೆಯ ಮಗನಾದ ಯಾಯೀರನ ಗ್ರಾಮಗಳಿಗೂ ಬಾಷಾನಿನಲ್ಲಿ ಪೌಳಿಗೋಡೆಗಳಿಂದಲೂ ಕಬ್ಬಿಣದ ಅಗುಳಿಗಳಿಂದಲೂ ಭದ್ರಮಾಡಲ್ಪಟ್ಟ ಅರುವತ್ತು ಪಟ್ಟಣಗಳಿರುವ ಅರ್ಗೋಬ್ ಪ್ರದೇಶಕ್ಕೂ ಅಧಿಪತಿಯಾಗಿದ್ದು ರಾಮೋತ್ ಗಿಲ್ಯಾದಿನಲ್ಲಿ ವಾಸವಾಗಿದ್ದ ಗೆಬೆರನ ಮಗನು.
14
ಮಹನಯಿವಿುನಲ್ಲಿದ್ದ ಇದ್ದೋವಿನ ಮಗನಾದ ಅಹೀನಾದಾಬನು.
15
ನಫ್ತಾಲಿ ಪ್ರದೇಶದಲ್ಲಿದ್ದ ಅಹೀಮಾಚನು; ಇವನು ಸೊಲೊಮೋನನ ಮಗಳಾದ ಬಾಸೆಮತಳನ್ನು ಮದುವೆಮಾಡಿ ಕೊಂಡವನು.
16
ಆಶೇರಿಗೂ ಆಲೋತಿಗೂ ಒಡೆಯನಾದ ಹೂಷೈಯ ಮಗನಾದ ಬಾಣನು.
17
ಇಸ್ಸಾಕಾರ್ ಪ್ರಾಂತದಲ್ಲಿದ್ದ ಫಾರೂಹನ ಮಗನಾದ ಯೆಹೋಷಾಫಾಟನು.
18
ಬೆನ್ಯಾಮೀನಿನಲ್ಲಿದ್ದ ಏಲನ ಮಗನಾದ ಶಿಮ್ಮೀ.
19
ಅಮೋರಿಯರ ಅರಸನಾದ ಸೀಹೋನ್, ಬಾಷಾನಿನ ಅರಸನಾದ ಓಗ್ ಇವರ ರಾಜ್ಯವಾಗಿದ್ದ ಗಿಲ್ಯಾದ್ ಪ್ರದೇಶಕ್ಕೆಲ್ಲಾ ಒಬ್ಬನೇ ಅಧಿಪತಿಯಾಗಿದ್ದ ಉರೀಯ ಮಗನಾದ ಗೆಬೆರ್ ಇವರೇ.
20
ಇಸ್ರಾಯೇಲ್ ಯೆಹೂದ್ಯರು ಸಮುದ್ರತೀರದ ಉಸುಬಿನಷ್ಟು ಅಸಂಖ್ಯರಾಗಿದ್ದರು; ಅವರು ಅನ್ನಪಾನಗಳಲ್ಲಿ ತೃಪ್ತರಾಗಿ ಸಂತೋಷದಿಂದಿದ್ದರು.
21
ಸೊಲೊಮೋನನು ಯೂಫ್ರೇಟೀಸ್ನದಿ ಮೊದಲುಗೊಂಡು ಫಿಲಿಷ್ಟಿಯರ ಮತ್ತು ಐಗುಪ್ತ್ಯರ ದೇಶಗಳವರೆಗೂ ಇರುವ ಎಲ್ಲಾ ರಾಜ್ಯಗಳವರನ್ನು ಆಳುತ್ತಿದ್ದನು. ಅವರು ಅವನ ಜೀವಮಾನದಲ್ಲೆಲ್ಲಾ ಅವನಿಗೆ ಅಧೀನರಾಗಿ ಕಪ್ಪಕೊಡುತ್ತಿದ್ದರು.
22
ಸೊಲೊಮೋನನ ಅರಮನೆಗೆ ದಿನಂಪ್ರತಿ ಬೇಕಾಗುವ ಆಹಾರಪದಾರ್ಥಗಳು - ಮೂವತ್ತು ಕೋರ್ ಗೋದಿಯ ಹಿಟ್ಟು, ಅರುವತ್ತು ಕೋರ್ ಜವೆ ಗೋದಿಯ ಹಿಟ್ಟು,
23
ಹತ್ತು ಕಟ್ಟಿ ಮೇಯಿಸಿದ ಎತ್ತುಗಳು, ಇಪ್ಪತ್ತು ಬಿಟ್ಟು ಮೇಯಿಸಿದ ಎತ್ತುಗಳು, ನೂರು ಕುರಿಗಳು; ಇವುಗಳ ಹೊರತು ದುಪ್ಪಿ, ಜಿಂಕೆ, ಸಾರಗ, ಕೊಬ್ಬಿದ ಕೋಳಿಗಳು ಇವೇ.
24
ಅವನು ಯೂಫ್ರೇಟೀಸ್ ನದಿಯ ಈಚೆಯಲ್ಲಿ ತಿಪ್ಸಹು ಮೊದಲುಗೊಂಡು ಗಾಜದವರೆಗಿರುವ ಈಚೆಯ ಎಲ್ಲಾ ಅರಸರಿಗೂ ದೊರೆಯಾಗಿದ್ದನು. ಅವನು ಸುತ್ತಣ ರಾಜರೊಡನೆ ಸಮಾಧಾನದಿಂದಿದ್ದನು.
25
ಸೊಲೊಮೋನನ ಆಳಿಕೆಯಲ್ಲೆಲ್ಲಾ ದಾನ್ಪಟ್ಟಣ ಮೊದಲುಗೊಂಡು ಬೇರ್ಷೆಬದವರೆಗಿರುವ ಸಮಸ್ತ ಇಸ್ರಾಯೇಲ್ಯರೂ ಯೆಹೂದ್ಯರೂ ತಮ್ಮತಮ್ಮ ದ್ರಾಕ್ಷಾಲತೆ ಅಂಜೂರಗಿಡ ಇವುಗಳ ನೆರಳಿನಲ್ಲಿ ವಾಸಿಸುತ್ತಾ ಸುರಕ್ಷಿತರಾಗಿದ್ದರು.
26
ಸೊಲೊಮೋನನ ಲಾಯಗಳಲ್ಲಿ ನಾಲ್ವತ್ತು ಸಾವಿರ ರಥಾಶ್ವಗಳಿಗೆ ಸ್ಥಳವಿತ್ತು; ಅವನಿಗೆ ಹನ್ನೆರಡು ಸಾವಿರ ಮಂದಿ ರಾಹುತರಿದ್ದರು.
27
ಮೇಲೆ ಕಂಡ ಪ್ರದೇಶಾಧಿಪತಿಗಳು ತಮತಮಗೆ ನೇಮಕವಾದ ತಿಂಗಳಲ್ಲಿ ಅರಸನಾದ ಸೊಲೊಮೋನನಿಗೂ ಅವನ ಪಂಕ್ತಿಯಲ್ಲಿ ಊಟಕ್ಕೆ ಕೂತುಕೊಳ್ಳುವವರೆಲ್ಲರಿಗೂ ಬೇಕಾಗುವ ಆಹಾರಪದಾರ್ಥಗಳನ್ನು ಯಾವ ಕೊರತೆಯೂ ಇಲ್ಲದೆ ಒದಗಿಸಿಕೊಡುತ್ತಿದ್ದರು.
28
ಇದಲ್ಲದೆ ಅವರು ರಥಾಶ್ವಗಳಿಗೋಸ್ಕರವೂ ಸವಾರಿಕುದುರೆಗಳಿಗೋಸ್ಕರವೂ ನೇಮಕವಾದಷ್ಟು ಜವೆಗೋದಿಯನ್ನೂ ಹುಲ್ಲನ್ನೂ ಕುದುರೆಗಳಿದ್ದ ಸ್ಥಳಕ್ಕೆ ತಂದೊಪ್ಪಿಸುತ್ತಿದ್ದರು.
29
ದೇವರು ಸೊಲೊಮೋನನಿಗೆ ಸಮುದ್ರತೀರದ ಉಸುಬಿನಷ್ಟು ಅಪರಿವಿುತವಾದ ಜ್ಞಾನವಿವೇಕಗಳನ್ನೂ ಮನೋವಿಶಾಲತೆಯನ್ನೂ ಅನುಗ್ರಹಿಸಿದನು.
30
ಅವನ ಜ್ಞಾನವು ಮೂಡಣದೇಶದವರೆಲ್ಲರ ಜ್ಞಾನಕ್ಕಿಂತಲೂ ಐಗುಪ್ತ್ಯರ ಜ್ಞಾನಕ್ಕಿಂತಲೂ ವಿುಗಿಲಾದದ್ದು.
31
ಅವನು ಜೆರಹನ ಮಗನಾದ ಏತಾನ್, ಮಾಹೋಲನ ಮಕ್ಕಳಾದ ಹೇಮಾನ್, ಕಲ್ಕೋಲ್, ದರ್ದ ಮೊದಲಾದ ಎಲ್ಲರಿಗಿಂತಲೂ ಜ್ಞಾನಿಯಾಗಿದ್ದನು. ಸುತ್ತಣ ಎಲ್ಲಾ ಜನಾಂಗಗಳಲ್ಲಿ ಅವನ ಹೆಸರು ಪ್ರಸಿದ್ಧವಾಯಿತು.
32
ಅವನ ಜ್ಞಾನೋಕ್ತಿಗಳು ಮೂರು ಸಾವಿರ; ಗೀತಗಳು ಸಾವಿರದ ಐದು.
33
ಅವನು ಲೆಬನೋನಿನ ದೇವದಾರುವೃಕ್ಷ ಮೊದಲುಗೊಂಡು ಗೋಡೆಯಲ್ಲಿ ಬೆಳೆಯುವ ಹಿಸ್ಸೋಪ್ ಗಿಡದವರೆಗಿರುವ ಎಲ್ಲಾ ವನಸ್ಪತಿಗಳನ್ನೂ ಎಲ್ಲಾ ಪಶುಪಕ್ಷಿಜಲಜಂತು ಕ್ರಿವಿುಕೀಟಗಳನ್ನೂ ಕುರಿತು ಪ್ರಸ್ತಾಪಿಸಿದನು.
34
ಎಲ್ಲಾ ಜನಾಂಗಗಳಲ್ಲಿಯೂ ಸೊಲೊಮೋನನ ಜ್ಞಾನವಿಶೇಷವನ್ನು ಕುರಿತು ಕೇಳಿದ ಭೂಪಾಲರಲ್ಲಿಯೂ ಅನೇಕರು ಅವನ ಜ್ಞಾನವಾಕ್ಯಗಳನ್ನು ಕೇಳುವದಕ್ಕೋಸ್ಕರ ಬಂದರು.
← Chapter 3
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 5 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22