bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Acts 18
Acts 18
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 17
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 19 →
1
ಇದಾದ ಮೇಲೆ ಪೌಲನು ಅಥೇನೆಯನ್ನು ಬಿಟ್ಟು ಕೊರಿಂಥಕ್ಕೆ ಹೋದನು.
2
ಪೊಂತದಲ್ಲಿ ಹುಟ್ಟಿದ ಅಕ್ವಿಲನೆಂಬ ಒಬ್ಬ ಯೆಹೂದ್ಯನನ್ನು ಅಲ್ಲಿ ಕಂಡನು. ಯೆಹೂದ್ಯರೆಲ್ಲರೂ ರೋಮಾಪುರವನ್ನು ಬಿಟ್ಟುಹೋಗಬೇಕೆಂದು ಕ್ಲೌದಿಯ ಚಕ್ರವರ್ತಿಯು ವಿಧಿಸಿದ ಕಾರಣ ಅಕ್ವಿಲನೂ ಅವನ ಹೆಂಡತಿಯಾದ ಪ್ರಿಸ್ಕಿಲ್ಲಳೂ ಕೆಲವು ದಿವಸಗಳ ಮುಂಚೆ ಇತಾಲ್ಯ ದೇಶದಿಂದ ಅಲ್ಲಿಗೆ ಬಂದಿದ್ದರು.
3
ಪೌಲನು ಅವರ ಮನೆಗೆ ಹೋಗಿ ತಾನೂ ಅವರೂ ಒಂದೇ ಕಸಬಿನವರಾಗಿದ್ದದರಿಂದ ಅವರಲ್ಲಿದ್ದು ಅವರೊಂದಿಗೆ ಕೆಲಸಮಾಡುತ್ತಿದ್ದನು; ಗುಡಾರ ಮಾಡುವದು ಅವರ ಕಸಬಾಗಿತ್ತು.
4
ಅವನು ಪ್ರತಿ ಸಬ್ಬತ್ ದಿನವೂ ಸಭಾಮಂದಿರದಲ್ಲಿ ಚರ್ಚಿಸಿ ಯೆಹೂದ್ಯರನ್ನೂ ಗ್ರೀಕರನ್ನೂ ಒಡಂಬಡಿಸುತ್ತಿದ್ದನು.
5
ಸೀಲನೂ ತಿಮೊಥೆಯನೂ ಮಕೆದೋನ್ಯದಿಂದ ಬಂದಾಗ ಪೌಲನು ದೇವರ ವಾಕ್ಯವನ್ನು ಬೋಧಿಸುವದರಲ್ಲಿ ಅತ್ಯಾಸಕ್ತಿಯುಳ್ಳವನಾಗಿ ಯೇಸುವೇ ಬರಬೇಕಾದ ಕ್ರಿಸ್ತನೆಂದು ಯೆಹೂದ್ಯರಿಗೆ ಖಂಡಿತವಾಗಿ ಸಾಕ್ಷಿ ಹೇಳಿದನು.
6
ಅವರು ಎದುರಿಸಿ ದೂಷಿಸಲಾಗಿ ಅವನು ತನ್ನ ವಸ್ತ್ರಗಳನ್ನು ಝಾಡಿಸಿ ಅವರಿಗೆ - ನಿಮ್ಮ ನಾಶನಕ್ಕೆ ನೀವೇ ಹೊಣೆ. ನಾನು ಇಂದಿನಿಂದ ಶುದ್ಧಮನಸ್ಸುಳ್ಳವನಾಗಿ ಅನ್ಯಜನರ ಬಳಿಗೆ ಹೋಗುತ್ತೇನೆ ಎಂದು ಹೇಳಿ
7
ಆ ಸ್ಥಳವನ್ನು ಬಿಟ್ಟು ದೇವರಿಗೆ ಭಯಪಡುವವನಾಗಿದ್ದ ತೀತಯುಸ್ತನೆಂಬವನ ಮನೆಗೆ ಹೋದನು. ಅವನ ಮನೆ ಸಭಾಮಂದಿರದ ಮಗ್ಗುಲಲ್ಲೇ ಇತ್ತು.
8
ಸಭಾಮಂದಿರದ ಅಧ್ಯಕ್ಷನಾದ ಕ್ರಿಸ್ಪನು ತನ್ನ ಮನೆಯವರೆಲ್ಲರ ಸಹಿತ ಕರ್ತನಲ್ಲಿ ನಂಬಿಕೆಯಿಟ್ಟನು. ಮತ್ತು ಕೊರಿಂಥದವರಲ್ಲಿ ಅನೇಕರು ಕೇಳಿ ನಂಬಿ ದೀಕ್ಷಾಸ್ನಾನ ಮಾಡಿಸಿಕೊಂಡರು.
9
ಇದಲ್ಲದೆ ಕರ್ತನು ರಾತ್ರಿಕಾಲದಲ್ಲಿ ಪೌಲನಿಗೆ ದರ್ಶನಕೊಟ್ಟು - ನೀನು ಹೆದರಬೇಡ; ಸುಮ್ಮನಿರದೆ ಮಾತಾಡುತ್ತಲೇ ಇರು,
10
ನಾನೇ ನಿನ್ನೊಂದಿಗಿದ್ದೇನೆ; ಯಾರೂ ನಿನ್ನ ಮೇಲೆ ಬಿದ್ದು ಕೇಡು ಮಾಡುವದಿಲ್ಲ; ಈ ಪಟ್ಟಣದಲ್ಲಿ ನನಗೆ ಬಹಳ ಮಂದಿ ಇದ್ದಾರೆ ಎಂದು ಹೇಳಿದನು.
11
ಅವನು ಒಂದು ವರುಷ ಆರು ತಿಂಗಳು ಅಲ್ಲೇ ಇದ್ದುಕೊಂಡು ಆ ಜನರಿಗೆ ದೇವರ ವಾಕ್ಯವನ್ನು ಉಪದೇಶಮಾಡುತ್ತಿದ್ದನು.
12
ಗಲ್ಲಿಯೋನನು ಅಖಾಯದ ಅಧಿಪತಿಯಾಗಿರಲು ಯೆಹೂದ್ಯರು ಒಗ್ಗಟ್ಟಾಗಿ ಪೌಲನ ಮೇಲೆ ಬಿದ್ದು ಅವನನ್ನು ನ್ಯಾಯಸ್ಥಾನದ ಮುಂದೆ ಹಿಡಿತಂದು -
13
ಇವನು ದೇವರನ್ನು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿ ಪೂಜಿಸುವದಕ್ಕೆ ಜನರನ್ನು ಒಡಂಬಡಿಸುತ್ತಾನೆಂದು ದೂರು ಹೇಳಿದರು.
14
ಪೌಲನು ಪ್ರತಿವಾದ ಮಾಡಬೇಕೆಂದಿದ್ದಾಗ ಗಲ್ಲಿಯೋನನು ಯೆಹೂದ್ಯರಿಗೆ - ಎಲೈ ಯೆಹೂದ್ಯರೇ, ಅನ್ಯಾಯವು ದುಷ್ಕಾರ್ಯವು ಇಂಥದೇನಾದರೂ ಇದ್ದ ಪಕ್ಷಕ್ಕೆ ನಾನು ನಿಮ್ಮ ಮಾತನ್ನು ಸಹನದಿಂದ ಕೇಳುವದು ನ್ಯಾಯವೇ.
15
ಆದರೆ ನೀವು ಮಾಡುವ ವಿವಾದವು ಬೋಧನೆಯನ್ನೂ ಹೆಸರುಗಳನ್ನೂ ನಿಮ್ಮ ಧರ್ಮಶಾಸ್ತ್ರವನ್ನೂ ಕುರಿತದ್ದಾಗಿರುವದರಿಂದ ಅವುಗಳನ್ನು ನೀವೇ ನೋಡಿಕೊಳ್ಳಿರಿ. ಇಂಥ ವಿಷಯಗಳನ್ನು ವಿಚಾರಣೆಮಾಡುವದಕ್ಕೆ ನನಗಂತೂ ಮನಸ್ಸಿಲ್ಲ ಎಂದು ಹೇಳಿ
16
ಅವರನ್ನು ನ್ಯಾಯಸ್ಥಾನದ ಎದುರಿನಿಂದ ಹೊರಡಿಸಿಬಿಟ್ಟನು.
17
ಆಗ ಜನರೆಲ್ಲರು ಸಭಾಮಂದಿರದ ಅಧ್ಯಕ್ಷನಾದ ಸೋಸ್ಥೆನನನ್ನು ಹಿಡಿದುಕೊಂಡು ನ್ಯಾಯಸ್ಥಾನದ ಮುಂದೆಯೇ ಹೊಡೆದರು. ಗಲ್ಲಿಯೋನನು ಅವುಗಳಲ್ಲಿ ಒಂದನ್ನೂ ಲಕ್ಷ್ಯಕ್ಕೆ ತರಲಿಲ್ಲ.
18
ಪೌಲನು ಇನ್ನು ಅನೇಕ ದಿವಸ ಅಲ್ಲಿದ್ದ ಮೇಲೆ ಸಹೋದರರಿಂದ ಅಪ್ಪಣೆ ತೆಗೆದುಕೊಂಡು ತನಗೆ ದೀಕ್ಷೆ ಇದ್ದದರಿಂದ ಕೆಂಖ್ರೆಯದಲ್ಲಿ ಕ್ಷೌರಮಾಡಿಸಿಕೊಂಡು ಹಡಗನ್ನು ಹತ್ತಿ ಸಿರಿಯಕ್ಕೆ ಹೊರಟನು. ಪ್ರಿಸ್ಕಿಲ್ಲಳೂ ಅಕ್ವಿಲನೂ ಅವನ ಸಂಗಡ ಹೊರಟರು.
19
ಎಫೆಸಕ್ಕೆ ಬಂದಾಗ ಅವರನ್ನು ಅಲ್ಲೇ ಬಿಟ್ಟನು. ತಾನು ಸಭಾಮಂದಿರದೊಳಕ್ಕೆ ಹೋಗಿ ಯೆಹೂದ್ಯರ ಸಂಗಡ ವಾದಿಸಿದನು.
20
ಅವರು ಅವನನ್ನು ಇನ್ನೂ ಕೆಲವು ಕಾಲ ಇರಬೇಕೆಂದು ಕೇಳಿಕೊಂಡಾಗ ಅವನು ಒಪ್ಪದೆ -
21
ದೇವರ ಚಿತ್ತವಾದರೆ ತಿರಿಗಿ ನಿಮ್ಮ ಬಳಿಗೆ ಬರುತ್ತೇನೆಂದು ಹೇಳಿ ಅವರ ಅಪ್ಪಣೆ ತೆಗೆದುಕೊಂಡು ಹೋದನು. ಆಮೇಲೆ ಎಫೆಸದಿಂದ ಸಮುದ್ರಪ್ರಯಾಣ ಮಾಡಿ
22
ಕೈಸರೈಯದಲ್ಲಿ ಇಳಿದು ಯೆರೂಸಲೇವಿುಗೆ ಹೋಗಿ ಸಭೆಯನ್ನು ವಂದಿಸಿ ಅಂತಿಯೋಕ್ಯಕ್ಕೆ ಬಂದನು.
23
ಪೌಲನು ಅಂತಿಯೋಕ್ಯದಲ್ಲಿ ಕೆಲವು ಕಾಲ ಇದ್ದು ತಿರಿಗಿ ಹೊರಟು ಕ್ರಮವಾಗಿ ಗಲಾತ್ಯ ಸೀಮೆಯಲ್ಲಿಯೂ ಫ್ರೂಗ್ಯದಲ್ಲಿಯೂ ಸಂಚಾರಮಾಡುತ್ತಾ ಶಿಷ್ಯರೆಲ್ಲರನ್ನು ದೃಢಪಡಿಸಿದನು.
24
ಅಷ್ಟರೊಳಗೆ ಅಲೆಕ್ಸಾಂದ್ರಿಯದಲ್ಲಿ ಹುಟ್ಟಿದ ಅಪೊಲ್ಲೋಸನೆಂಬ ಒಬ್ಬ ಯೆಹೂದ್ಯನು ಎಫೆಸಕ್ಕೆ ಬಂದನು. ಅವನು ವಾಕ್ಚಾತುರ್ಯವುಳ್ಳವನು, ಶಾಸ್ತ್ರಗಳಲ್ಲಿ ಪ್ರವೀಣನು.
25
ಅವನು ಕರ್ತನ ಮಾರ್ಗದ ವಿಷಯದಲ್ಲಿ ಉಪದೇಶ ಹೊಂದಿದವನಾಗಿದ್ದನು; ಮತ್ತು ಆಸಕ್ತ ಮನಸ್ಸುಳ್ಳವನಾಗಿದ್ದು ಯೋಹಾನನು ಮಾಡಿಸಿದ ದೀಕ್ಷಾಸ್ನಾನವನ್ನು ಮಾತ್ರ ಬಲ್ಲವನಾದಾಗ್ಯೂ ಯೇಸುವಿನ ಸಂಗತಿಗಳನ್ನು ಸೂಕ್ಷ್ಮವಾಗಿ ಹೇಳಿ ಉಪದೇಶಿಸಿದನು.
26
ಅವನು ಸಭಾಮಂದಿರದಲ್ಲಿ ಧೈರ್ಯದಿಂದ ಮಾತಾಡುವದಕ್ಕೆ ಪ್ರಾರಂಭಿಸಿದನು. ಅವನ ಮಾತುಗಳನ್ನು ಪ್ರಿಸ್ಕಿಲ್ಲಳೂ ಅಕ್ವಿಲನೂ ಕೇಳಿ ಅವನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ದೇವರ ಮಾರ್ಗವನ್ನು ಅವನಿಗೆ ಇನ್ನೂ ಸೂಕ್ಷ್ಮವಾಗಿ ವಿವರಿಸಿದರು.
27
ಆಮೇಲೆ ಅಖಾಯಕ್ಕೆ ಹೋಗಬೇಕೆಂದು ಅವನಿಗೆ ಮನಸ್ಸಾದಾಗ ಸಹೋದರರು ಅವನನ್ನು ಪ್ರೋತ್ಸಾಹಗೊಳಿಸಿ ಅಲ್ಲಿದ್ದ ಶಿಷ್ಯರಿಗೆ ಇವನನ್ನು ಸೇರಿಸಿಕೊಳ್ಳಬೇಕೆಂದು ಪತ್ರಿಕೆಯನ್ನು ಬರೆದುಕೊಟ್ಟರು.
28
ಅವನು ಹೋಗಿ ಯೇಸುವೇ ಕ್ರಿಸ್ತನೆಂದು ಶಾಸ್ತ್ರಾಧಾರದಿಂದ ತೋರಿಸಿಕೊಟ್ಟು ಎಲ್ಲರ ಮುಂದೆ ಬಲವಾಗಿ ಯೆಹೂದ್ಯರನ್ನು ಖಂಡಿಸಿ ದೇವರ ಕೃಪೆಯಿಂದ ನಂಬಿದ್ದವರಿಗೆ ಬಹಳ ಸಹಾಯಮಾಡಿದನು.
← Chapter 17
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 19 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28