bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Acts 25
Acts 25
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 24
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 26 →
1
ಫೆಸ್ತನು ಸೀಮೆಯ ಕಾರ್ಯಭಾರವನ್ನು ವಹಿಸಿಕೊಂಡು ಮೂರು ದಿವಸಗಳ ತರುವಾಯ ಕೈಸರೈಯದಿಂದ ಯೆರೂಸಲೇವಿುಗೆ ಹೋದನು.
2
ಅಲ್ಲಿ ಮಹಾಯಾಜಕನೂ ಯೆಹೂದ್ಯರಲ್ಲಿ ಪ್ರಮುಖರೂ ಅವನಿಗೆ ಪೌಲನ ಮೇಲಣ ಫಿರಿಯಾದಿಯನ್ನು ಹೇಳಿ -
3
ನೀನು ದಯಮಾಡಿ ಅವನನ್ನು ಯೆರೂಸಲೇವಿುಗೆ ಕರತರಿಸಬೇಕೆಂದು ಪೌಲನ ಕೇಡಿಗಾಗಿ ಬಿನ್ನಹವನ್ನು ಮಾಡಿದರು. ಮಾರ್ಗದಲ್ಲಿ ಅವನನ್ನು ಕೊಲ್ಲುವದಕ್ಕಾಗಿ ಹೊಂಚುಹಾಕಿಕೊಂಡಿದ್ದರು.
4
ಫೆಸ್ತನು ಅವರಿಗೆ - ಪೌಲನು ಕೈಸರೈಯದಲ್ಲಿ ಕಾವಲೊಳಗಿದ್ದಾನೆ, ನಾನೇ ಬೇಗ ಅಲ್ಲಿಗೆ ಹೊರಟುಹೋಗಬೇಕೆಂದಿದ್ದೇನೆ;
5
ಆದಕಾರಣ ನಿಮ್ಮಲ್ಲಿ ಪ್ರಮುಖರು ನನ್ನೊಂದಿಗೆ ಬಂದು ಆ ಮನುಷ್ಯನಲ್ಲಿ ಅನುಚಿತವಾದದ್ದೇನಾದರೂ ಇದ್ದರೆ ಅವನ ಮೇಲೆ ತಪ್ಪುಹೊರಿಸಲಿ ಎಂದು ಹೇಳಿದನು.
6
ಅವನು ಅವರಲ್ಲಿ ಎಂಟು ಹತ್ತಕ್ಕಿಂತ ಹೆಚ್ಚು ದಿವಸಗಳು ನಿಲ್ಲದೆ ಕೈಸರೈಯಕ್ಕೆ ಹೋಗಿ ಮರುದಿನ ನ್ಯಾಯಸ್ಥಾನದಲ್ಲಿ ಕೂತುಕೊಂಡು ಪೌಲನನ್ನು ತರಬೇಕೆಂದು ಅಪ್ಪಣೆಮಾಡಿದನು.
7
ಅವನು ಬಂದ ಮೇಲೆ ಯೆರೂಸಲೇವಿುನಿಂದ ಬಂದಿದ್ದ ಯೆಹೂದ್ಯರು ಅವನ ಸುತ್ತಲು ನಿಂತುಕೊಂಡು ತಾವು ಸ್ಥಾಪಿಸಲಾರದ ಅನೇಕ ದೊಡ್ಡ ದೊಡ್ಡ ತಪ್ಪುಗಳನ್ನು ಹೊರಿಸುತ್ತಿರಲು
8
ಪೌಲನು - ಯೆಹೂದ್ಯರ ಧರ್ಮಶಾಸ್ತ್ರದ ವಿಷಯದಲ್ಲಾಗಲಿ ದೇವಾಲಯದ ವಿಷಯದಲ್ಲಾಗಲಿ ಚಕ್ರವರ್ತಿಯ ವಿಷಯದಲ್ಲಾಗಲಿ ನಾನು ಯಾವ ತಪ್ಪನ್ನೂ ಮಾಡಲಿಲ್ಲವೆಂದು ಪ್ರತ್ಯುತ್ತರ ಹೇಳಿದನು.
9
ಫೆಸ್ತನು ಯೆಹೂದ್ಯರ ಪ್ರೀತಿಯನ್ನು ಸಂಪಾದಿಸಿಕೊಳ್ಳಬೇಕೆಂದು ಅಪೇಕ್ಷಿಸಿ, ಪೌಲನನ್ನು - ನೀನು ಯೆರೂಸಲೇವಿುಗೆ ಹೋಗಿ ಅಲ್ಲಿ ಈ ಕಾರ್ಯಗಳ ವಿಷಯವಾಗಿ ನನ್ನ ಮುಂದೆ ವಿಚಾರಿಸಲ್ಪಡುವದಕ್ಕೆ ನಿನಗೆ ಇಷ್ಟವುಂಟೋ? ಎಂದು ಕೇಳಲು
10
ಪೌಲನು - ನಾನು ಚಕ್ರವರ್ತಿಯ ನ್ಯಾಯಸ್ಥಾನದ ಮುಂದೆ ನಿಂತಿದ್ದೇನೆ; ಇಲ್ಲಿಯೇ ನನ್ನ ವಿಚಾರಣೆಯಾಗತಕ್ಕದ್ದು. ಯೆಹೂದ್ಯರಿಗೆ ನಾನು ಅನ್ಯಾಯವೇನೂ ಮಾಡಲಿಲ್ಲ; ಅದು ನಿನಗೂ ಚೆನ್ನಾಗಿ ತಿಳಿದೇ ಇದೆ.
11
ನಾನು ಅನ್ಯಾಯ ಮಾಡಿದವನಾಗಿ ಮರಣದಂಡನೆಗೆ ಕಾರಣವಾದ ಯಾವದನ್ನಾದರೂ ನಡಿಸಿದ್ದಾದರೆ ಮರಣದಂಡನೆಯನ್ನು ಬೇಡವೆನ್ನುವದಿಲ್ಲ. ಇವರು ನನ್ನ ಮೇಲೆ ಹೊರಿಸುವ ತಪ್ಪುಗಳಲ್ಲಿ ಒಂದೂ ನಿಜವಲ್ಲದ ಮೇಲೆ ಇವರ ಮೇಲಣ ದಯೆಯಿಂದ ನನ್ನನ್ನು ಒಪ್ಪಿಸಿಕೊಡುವದಕ್ಕೆ ಒಬ್ಬರಿಗೂ ಅಧಿಕಾರವಿಲ್ಲ. ನಾನು ಚಕ್ರವರ್ತಿಯ ಎದುರಿನಲ್ಲಿ ಹೇಳಿಕೊಳ್ಳುತ್ತೇನೆ ಎನ್ನಲು
12
ಫೆಸ್ತನು ತನ್ನ ಸಭೆಯವರ ಸಂಗಡ ಆಲೋಚನೆಮಾಡಿದ ಮೇಲೆ ಪೌಲನಿಗೆ - ಚಕ್ರವರ್ತಿಯ ಎದುರಿನಲ್ಲಿ ಹೇಳಿಕೊಳ್ಳುತ್ತೇನೆ ಅಂದಿಯಲ್ಲಾ, ಚಕ್ರವರ್ತಿಯ ಬಳಿಗೆ ಹೋಗಬೇಕು ಎಂದು ಹೇಳಿದನು.
13
ಕೆಲವು ದಿವಸಗಳು ಗತಿಸಿದ ನಂತರ ಅಗ್ರಿಪ್ಪರಾಜನೂ ಬೆರ್ನಿಕೆರಾಣಿಯೂ ಫೆಸ್ತನ ದರ್ಶನಮಾಡಿಕೊಳ್ಳುವದಕ್ಕೆ ಕೈಸರೈಯಕ್ಕೆ ಬಂದರು.
14
ಅವರು ಅನೇಕ ದಿವಸ ಅಲ್ಲಿ ನಿಂತಿರಲಾಗಿ ಫೆಸ್ತನು ಪೌಲನ ಸಂಗತಿಯನ್ನು ರಾಜನಿಗೆ ತಿಳಿಸಿ ಹೇಳಿದ್ದೇನಂದರೆ - ಫೇಲಿಕ್ಸನು ಬಿಟ್ಟುಹೋದ ಒಬ್ಬ ಸೆರೆಯವನು ಇದ್ದಾನೆ.
15
ನಾನು ಯೆರೂಸಲೇವಿುನಲ್ಲಿದ್ದಾಗ ಯೆಹೂದ್ಯರ ಮಹಾಯಾಜಕರೂ ಸಭೇಹಿರಿಯರೂ ಅವನ ವಿಷಯವಾಗಿ ನನಗೆ ಫಿರ್ಯಾದಿ ಹೇಳಿ ಅವನಿಗೆ ವಿರುದ್ಧವಾಗಿ ತೀರ್ಪು ಆಗಬೇಕೆಂದು ಬೇಡಿಕೊಂಡರು.
16
ನಾನು ಅವರಿಗೆ - ಪ್ರತಿವಾದಿಯು ವಾದಿಗಳಿಗೆ ಮುಖಾಮುಖಿಯಾಗಿ ನಿಂತು ತನ್ನ ಮೇಲೆ ಆರೋಪಿಸಿದ ದೋಷವಿಷಯದಲ್ಲಿ ಪ್ರತಿವಾದಮಾಡುವದಕ್ಕೆ ಆಸ್ಪದಕೊಡದೆ ಅವನನ್ನು ಒಪ್ಪಿಸಿಬಿಡುವದು ರೋಮಾಯರ ಪದ್ಧತಿಯಲ್ಲವೆಂದು ಹೇಳಿದೆನು.
17
ಅವರು ಇಲ್ಲಿಗೆ ಕೂಡಿಬಂದಾಗ ನಾನು ಸ್ವಲ್ಪವಾದರೂ ತಡಮಾಡದೆ ಮರುದಿನವೇ ನ್ಯಾಯಸ್ಥಾನದ ಮೇಲೆ ಕೂತುಕೊಂಡು ಆ ಮನುಷ್ಯನನ್ನು ತರಬೇಕೆಂದು ಅಪ್ಪಣೆಕೊಟ್ಟೆನು.
18
ತಪ್ಪುಹೊರಿಸುವವರು ನಿಂತುಕೊಂಡು ನಾನು ಭಾವಿಸಿದ್ದ ಅಪರಾಧಗಳಲ್ಲಿ ಒಂದನ್ನಾದರೂ ಅವನ ಮೇಲೆ ಹೊರಿಸದೆ
19
ಅವರ ಮತದ ವಿಷಯದಲ್ಲಿಯೂ ಸತ್ತುಹೋದಂಥ ಯೇಸುವೆಂಬ ಒಬ್ಬನ ವಿಷಯದಲ್ಲಿಯೂ ಅವನ ಮೇಲೆ ಕೆಲವು ವಿವಾದದ ಮಾತುಗಳನ್ನು ತಂದರು. ಆ ಯೇಸು ಜೀವಿತನಾಗಿದ್ದಾನೆಂದು ಪೌಲನು ಹೇಳಿದನು.
20
ಇಂಥ ಕಾರ್ಯಗಳನ್ನು ಹೇಗೆ ವಿಚಾರಣೆಮಾಡಬೇಕೋ ನನಗೆ ತೋರದೆ - ನೀನು ಯೆರೂಸಲೇವಿುಗೆ ಹೋಗಿ ಅಲ್ಲಿ ಇವುಗಳ ವಿಷಯವಾಗಿ ವಿಚಾರಣೆಹೊಂದುವದಕ್ಕೆ ನಿನಗೆ ಮನಸ್ಸುಂಟೋ? ಎಂದು ನಾನು ಕೇಳಲು
21
ಪೌಲನು ಚಕ್ರವರ್ತಿಯ ಎದುರಿನಲ್ಲಿ ಹೇಳಿಕೊಳ್ಳುವ ಪರ್ಯಂತರ ತನ್ನನ್ನು ಕಾಯಬೇಕೆಂದು ಕೇಳಿಕೊಂಡಾಗ ನಾನು ಚಕ್ರವರ್ತಿಯ ಬಳಿಗೆ ಕಳುಹಿಸುವ ತನಕ ಅವನನ್ನು ಕಾಯುವದಕ್ಕೆ ಅಪ್ಪಣೆಕೊಟ್ಟೆನು ಎಂದು ಹೇಳಿದನು.
22
ಅದಕ್ಕೆ ಅಗ್ರಿಪ್ಪನು - ಆ ಮನುಷ್ಯನು ಹೇಳಿಕೊಳ್ಳುವದನ್ನು ಕೇಳುವದಕ್ಕೆ ನನಗೂ ಮನಸ್ಸದೆ ಎಂದು ಹೇಳಲು ಫೆಸ್ತನು - ನಾಳೆ ಕೇಳಬಹುದು ಅಂದನು.
23
ಮರುದಿನ ಅಗ್ರಿಪ್ಪರಾಜನೂ ಬೆರ್ನಿಕೆರಾಣಿಯೂ ಬಹು ಆಡಂಬರದಿಂದ ಬಂದು ಸಹಸ್ರಾಧಿಪತಿಗಳ ಮತ್ತು ಪಟ್ಟಣದ ಮುಖಂಡರ ಸಂಗಡ ಸಭಾಸ್ಥಾನದೊಳಗೆ ಸೇರಿದಾಗ ಫೆಸ್ತನು ಅಪ್ಪಣೆಕೊಡಲು ಪೌಲನನ್ನು ಕರತಂದರು.
24
ಆಗ ಫೆಸ್ತನು - ಅಗ್ರಿಪ್ಪರಾಜನೇ, ನಮ್ಮ ಸಂಗಡ ಕೂಡಿಬಂದಿರುವ ಎಲ್ಲಾ ಜನರೇ, ಈ ಮನುಷ್ಯನನ್ನು ನೋಡುತ್ತೀರಲ್ಲಾ, ಇವನ ವಿಷಯದಲ್ಲಿ ಯೆಹೂದ್ಯರೆಲ್ಲರೂ - ಇವನು ಇನ್ನು ಮೇಲೆ ಬದುಕಬಾರದೆಂದು ಕೂಗುತ್ತಾ ಯೆರೂಸಲೇವಿುನಲ್ಲಿಯೂ ಇಲ್ಲಿಯೂ ನನ್ನನ್ನು ಬೇಡಿಕೊಂಡರು.
25
ಇವನು ಮರಣದಂಡನೆಗೆ ಕಾರಣವಾದದ್ದೇನೂ ಮಾಡಲಿಲ್ಲವೆಂದು ನನಗೆ ಕಂಡುಬಂತು. ತಾನೇ ಚಕ್ರವರ್ತಿಗೆ ವಿಜ್ಞಾಪನೆಮಾಡಿಕೊಂಡದ್ದರಿಂದ ಇವನನ್ನು ಕಳುಹಿಸುವದಕ್ಕೆ ತೀರ್ಮಾನಿಸಿದೆನು.
26
ಇವನ ವಿಷಯದಲ್ಲಿ ಮಹಾಸನ್ನಿಧಾನಕ್ಕೆ ಬರೆಯುವದಕ್ಕೆ ನಿಶ್ಚಯವಾದದ್ದೇನೂ ಇಲ್ಲ. ಸೆರೆಯವನ ಮೇಲೆ ಆರೋಪಿಸಿರುವ ದೋಷಗಳನ್ನು ಸೂಚಿಸದೆ ಅವನನ್ನು ಕಳುಹಿಸುವದು ಯುಕ್ತವಲ್ಲವೆಂದು ನನಗೆ ತೋರುತ್ತದೆ.
27
ಆದದರಿಂದ ವಿಚಾರಣೆಯಾದ ಮೇಲೆ ಬರೆಯುವದಕ್ಕೆ ಏನಾದರೂ ಸಿಕ್ಕೀತೆಂದು ಇವನನ್ನು ನಿಮ್ಮ ಮುಂದೆ ಮುಖ್ಯವಾಗಿ ಅಗ್ರಿಪ್ಪರಾಜನೇ ನಿನ್ನ ಮುಂದೆ ಕರೆಯಿಸಿದ್ದೇನೆ ಅಂದನು.
← Chapter 24
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 26 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28