bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Ezra 10
Ezra 10
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 9
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
1
ಎಜ್ರನು ದೇವಾಲಯದ ಮುಂದೆ ಅಡ್ಡಬಿದ್ದು ಅಳುತ್ತಾ ವಿಜ್ಞಾಪನೆಯನ್ನೂ ಪಾಪನಿವೇದನವನ್ನೂ ಮಾಡುತ್ತಿರುವಷ್ಟರಲ್ಲಿ ಇಸ್ರಾಯೇಲ್ಯರ ಗಂಡಸರೂ ಹೆಂಗಸರೂ ಮಕ್ಕಳೂ ಮಹಾಸಮೂಹವಾಗಿ ಅವನ ಬಳಿಗೆ ಬಂದು ಕೂಡಿದರು. ಅಲ್ಲಿನ ಜನರು ಬಹಳವಾಗಿ ಅಳುತ್ತಿದ್ದರು.
2
ಆಗ ಏಲಾಮ್ ಸಂತಾನದ ಯೆಹೀಯೇಲನ ಮಗನಾದ ಶೆಕನ್ಯನು ಎಜ್ರನಿಗೆ - ಇಸ್ರಾಯೇಲ್ಯರಾದ ನಾವು ಅನ್ಯಜನರಾದ ಈ ದೇಶನಿವಾಸಿಗಳಿಂದ ಹೆಣ್ಣನ್ನು ತೆಗೆದುಕೊಂಡು ನಮ್ಮ ದೇವರಿಗೆ ವಿರುದ್ಧವಾಗಿ ದ್ರೋಹಮಾಡಿದರೂ [ನಮ್ಮನ್ನು ನಾವು ತಿದ್ದಿಕೊಳ್ಳುವ] ನಿರೀಕ್ಷೆಯು ಇನ್ನೂ ಉಂಟು.
3
ಸ್ವಾವಿುಯಾದ ನೀನೂ ನಮ್ಮ ದೇವರ ಆಜ್ಞೆಯನ್ನು ಗೌರವಿಸುವವರೂ ಹೇಳಿಕೊಟ್ಟ ಬುದ್ಧಿವಾದಾನುಸಾರ ಇಂಥ ಎಲ್ಲಾ ಹೆಂಡತಿಯರನ್ನೂ ಅವರ ಮಕ್ಕಳನ್ನೂ ಕಳುಹಿಸಿಬಿಡುವದಾಗಿ ಈಗಲೇ ನಮ್ಮ ದೇವರಿಗೆ ಪ್ರತಿಜ್ಞೆಮಾಡಿ ಧರ್ಮಶಾಸ್ತ್ರಕ್ಕನುಸಾರವಾಗಿ ನಡೆಯೋಣ.
4
ಏಳು ಕಾರ್ಯವನ್ನು ವಹಿಸತಕ್ಕವನು ನೀನು; ನಾವಾದರೋ ನಿನ್ನ ಸಹಾಯಕರು, ಧೈರ್ಯದಿಂದ ಕೈಹಾಕು ಎಂದು ಹೇಳಿದನು.
5
ಆಗ ಎಜ್ರನು ಎದ್ದು ಯಾಜಕರ ಮತ್ತು ಲೇವಿಯರ ಮುಖ್ಯಸ್ಥರಿಗೂ ಎಲ್ಲಾ ಇಸ್ರಾಯೇಲ್ಯರಿಗೂ ಈ ಪ್ರಕಾರ ನಡೆಯುವದಾಗಿ ಪ್ರಮಾಣಮಾಡಬೇಕೆಂದು ಹೇಳಲು ಅವರು ಹಾಗೆಯೇ ಪ್ರಮಾಣಮಾಡಿದರು.
6
ಆಮೇಲೆ ಎಜ್ರನು ದೇವಾಲಯದ ಮುಂದಣ ಸ್ಥಳವನ್ನು ಬಿಟ್ಟು ಎದ್ದು ಎಲ್ಯಾಷೀಬನ ಮಗನಾದ ಯೆಹೋಹಾನಾನನ ಕೊಠಡಿಗೆ ಹೋಗಿ ಅಲ್ಲಿ ಸೆರೆಯಿಂದ ಬಂದವರ ನಿವಿುತ್ತ ದುಃಖಿಸುತ್ತಾ ಅನ್ನಪಾನಗಳನ್ನು ತೆಗೆದುಕೊಳ್ಳದೆ ರಾತ್ರಿಯನ್ನು ಕಳೆದನು.
7
ತರುವಾಯ ಯೆಹೂದದಲ್ಲಿಯೂ ಯೆರೂಸಲೇವಿುನಲ್ಲಿಯೂ - ಸೆರೆಯಿಂದ ಬಂದವರೆಲ್ಲರೂ ಯೆರೂಸಲೇವಿುನಲ್ಲಿ ಬಂದು ಕೂಡಬೇಕು,
8
ಪ್ರಭುಗಳ ಮತ್ತು ಹಿರಿಯರ ನಿರ್ಣಯದ ಪ್ರಕಾರ ಮೂರು ದಿವಸಗಳೊಳಗೆ ಬಾರದವನು ತನ್ನ ಎಲ್ಲಾ ಆಸ್ತಿಯನ್ನೂ ಕಳಕೊಂಡು ಸೆರೆಯಿಂದ ಬಂದವರ ಸಭೆಯಿಂದ ಬಹಿಷ್ಕೃತನಾಗುವನು ಎಂದು ಪ್ರಕಟಿಸಿದರು.
9
ಆಗ ಮೂರನೆಯ ದಿನದಲ್ಲಿ ಅಂದರೆ ಒಂಭತ್ತನೆಯ ತಿಂಗಳಿನ ಇಪ್ಪತ್ತನೆಯ ದಿನದಲ್ಲಿ ಯೆಹೂದ್ಯರ ಮತ್ತು ಬೆನ್ಯಾಮೀನ್ಯರ ಎಲ್ಲಾ ಪುರುಷರೂ ಯೆರೂಸಲೇವಿುನಲ್ಲಿ ಬಂದು ಕೂಡಿ ಆ ಸಂಗತಿಯ ನಿವಿುತ್ತವಾಗಿಯೂ ದೊಡ್ಡ ಮಳೆಯ ದೆಸೆಯಿಂದಲೂ ನಡುಗುತ್ತಾ ದೇವಾಲಯದ ಬೈಲಿನಲ್ಲಿ ಕೂತುಕೊಂಡರು.
10
ಯಾಜಕನಾದ ಎಜ್ರನು ಎದ್ದು ನಿಂತು ಅವರಿಗೆ - ನೀವು ಅನ್ಯಜನರ ಹೆಣ್ಣುಗಳನ್ನು ಮದುವೆಮಾಡಿಕೊಂಡು ಇಸ್ರಾಯೇಲ್ಯರ ಅಪರಾಧವನ್ನು ಹೆಚ್ಚಿಸಿದ್ದೀರಿ.
11
ಈಗ ನಿಮ್ಮ ಪಿತೃಗಳ ದೇವರಾದ ಯೆಹೋವನಿಗೆ ನಿಮ್ಮ ಪಾಪಗಳನ್ನು ಅರಿಕೆಮಾಡಿ ಆತನ ಚಿತ್ತಕ್ಕನುಸಾರವಾಗಿ ದೇಶನಿವಾಸಿಗಳನ್ನೂ ಅನ್ಯಜನರಿಂದ ತಂದ ಹೆಂಡತಿಯರನ್ನೂ ಬಿಟ್ಟು ಬೇರೆಯಾಗಿರಿ ಅನ್ನಲು
12
ಕೂಡಿಬಂದವರೆಲ್ಲರೂ ಗಟ್ಟಿಯಾಗಿ - ನೀನು ಹೇಳಿದಂತೆಯೇ ಮಾಡುವದು ನಮ್ಮ ಕರ್ತವ್ಯ.
13
ಆದರೆ ಕೂಡಿಬಂದವರು ಬಹು ಜನರು; ಈಗ ಮಳೆಗಾಲ; ಹೊರಗೆ ನಿಲ್ಲುವದು ಅಸಾಧ್ಯ. ಈ ಕೆಲಸವು ಒಂದೆರಡು ದಿನಗಳಲ್ಲಿ ತೀರುವಂಥದಲ್ಲ; ಈ ವಿಷಯದಲ್ಲಿ ನಮ್ಮ ಅಪರಾಧವು ದೊಡ್ಡದು.
14
ಆದದರಿಂದ ನಮ್ಮ ಪ್ರಭುಗಳು ಸರ್ವಸಮೂಹಕ್ಕೋಸ್ಕರ ಕಾರ್ಯವನ್ನು ವಹಿಸಿಕೊಳ್ಳಲಿ; ನಮ್ಮ ನಮ್ಮ ಊರುಗಳಲ್ಲಿ ಅನ್ಯಜನರ ಸ್ತ್ರೀಯರನ್ನು ಮದುವೆ ಮಾಡಿಕೊಂಡವರೆಲ್ಲರೂ ನೇವಿುತವಾದ ದಿನದಲ್ಲಿ ತಮ್ಮ ಊರಿನ ಹಿರಿಯರೊಡನೆಯೂ ನ್ಯಾಯಾಧಿಪತಿಗಳೊಡನೆಯೂ ಇಲ್ಲಿಗೆ ಬರಲಿ. ನಮ್ಮ ದೇವರು ಈ ವಿಷಯದಲ್ಲಿ ನಮ್ಮ ಮೇಲೆ ಮಾಡಿಕೊಂಡಿರುವ ಉಗ್ರಕೋಪವು ಹೀಗೆ ಪರಿಹಾರವಾಗಲಿ ಎಂದು ಉತ್ತರಕೊಟ್ಟರು.
15
ಅಸಾಹೇಲನ ಮಗನಾದ ಯೋನಾತಾನ್, ತಿಕ್ವನ ಮಗನಾದ ಯಹ್ಜೆಯ ಎಂಬವರು ಮಾತ್ರ ಈ ಅಭಿಪ್ರಾಯವನ್ನು ವಿರೋಧಿಸಿದರು; ಲೇವಿಯರಾದ ಮೆಷುಲ್ಲಾಮ್, ಶಬ್ಬೆತೈ ಎಂಬವರೂ ಇವರ ಪಕ್ಷವನ್ನು ಹಿಡಿದರು.
16
ಆದರೆ ಸೆರೆಯಿಂದ ಬಂದವರು ಮೇಲೆ ಹೇಳಿರುವದನ್ನೇ ಒಪ್ಪಿಕೊಂಡರು. ಈ ವಿಚಾರಣೆಯನ್ನು ನಡಿಸುವದಕ್ಕೆ ಯಾಜಕನಾದ ಎಜ್ರನೂ ಆಯಾ ಗೋತ್ರಗಳ ಪ್ರಧಾನಪುರುಷರೂ ಹೆಸರುಹೆಸರಾಗಿ ನೇವಿುಸಲ್ಪಟ್ಟರು. ಹತ್ತನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಇವರ ಮೊದಲನೆಯ ಕೂಟ ನಡೆಯಿತು.
17
ಅವರು ಅನ್ಯಜನರ ಸ್ತ್ರೀಯರನ್ನು ಮದುವೆ ಮಾಡಿಕೊಂಡವರ ಸಂಗತಿಯನ್ನು ಮೊದಲನೆಯ ತಿಂಗಳಿನ ಮೊದಲನೆಯ ದಿನದೊಳಗಾಗಿ ಪೂರ್ಣವಾಗಿ ವಿಚಾರಿಸಿ ತೀರಿಸಿದರು.
18
ಅನ್ಯಜನರ ಸ್ತ್ರೀಯರನ್ನು ಮದುವೆಮಾಡಿಕೊಂಡವರು ಯಾರಂದರೆ - ಯಾಜಕರಲ್ಲಿ - ಯೋಚಾದಾಕನ ಮಗ ಯೇಷೂವನ ಮತ್ತು ಅವನ ಸಹೋದರರ ಸಂತಾನದವರಾದ ಮಾಸೇಯ, ಎಲೀಯೆಜೆರ್, ಯಾರೀಬ್, ಗೆದಲ್ಯ ಎಂಬವರು.
19
ಇವರು ತಮ್ಮ ಹೆಂಡತಿಯರನ್ನು ಕಳುಹಿಸಿಬಿಡುವದಾಗಿ ಕೈ ಮುಟ್ಟಿ ಪ್ರಮಾಣಮಾಡಿ ತಾವು ಅಪರಾಧಿಗಳೆಂದು ಒಪ್ಪಿ ಪ್ರಾಯಶ್ಚಿತ್ತವಾಗಿ ಒಂದು ಟಗರನ್ನು ಸಮರ್ಪಿಸಿದರು.
20
ಇಮ್ಮೇರನ ಸಂತಾನದವರಾದ ಹನಾನೀ, ಜೆಬದ್ಯ;
21
ಹಾರೀಮನ ಸಂತಾನದವರಾದ ಮಾಸೇಯ, ಎಲೀಯ, ಶೆಮಾಯ, ಯೆಹೀಯೇಲ್, ಉಜ್ಜೀಯ;
22
ಪಷ್ಹೂರನ ಸಂತಾನದವರಾದ ಎಲ್ಯೋವೇನೈ, ಮಾಸೇಯ, ಇಷ್ಮಾಯೇಲ್, ನೆತನೇಲ್, ಯೋಜಾಬಾದ್, ಎಲ್ಲಾಸ ಇವರೂ;
23
ಲೇವಿಯರಲ್ಲಿ - ಯೋಜಾಬಾದ್, ಶಿಮ್ಮೀ, ಕೆಲೀಟ ಅನ್ನಿಸಿಕೊಳ್ಳುವ ಕೇಲಾಯ, ಪೆತಹ್ಯ, ಯೆಹೂದ, ಎಲೀಯೆಜೆರ್ ಇವರೂ;
24
ಗಾಯಕರಲ್ಲಿ - ಎಲ್ಯಾಷೀಬ್, ದ್ವಾರಪಾಲಕರಲ್ಲಿ - ಶಲ್ಲೂಮ್, ಟೆಲೆಮ್, ಊರೀ ಎಂಬವರೂ;
25
ಬೇರೆ ಇಸ್ರಾಯೇಲ್ಯರಲ್ಲಿ - ಪರೋಷ್ ಸಂತಾನದವರಾದ ರಮ್ಯಾಹ, ಇಜ್ಜೀಯ, ಮಲ್ಕೀಯ, ವಿುಯ್ಯಾವಿುನ್, ಎಲ್ಲಾಜಾರ್, ಮಲ್ಕೀಯ, ಬೆನಾಯ;
26
ಏಲಾಮ್ ಸಂತಾನದವರಾದ ಮತ್ತನ್ಯ, ಜೆಕರ್ಯ, ಯೆಹೀಯೇಲ್, ಅಬ್ದೀ, ಯೆರೇಮೋತ್, ಏಲೀಯ;
27
ಜತ್ತೂ ಸಂತಾನದವರಾದ ಎಲ್ಯೋವೇನೈ, ಎಲ್ಯಾಷೀಬ್, ಮತ್ತನ್ಯ, ಯೆರೇಮೋತ್, ಜಾಬಾದ್, ಅಜೀಜಾ;
28
ಬೇಬೈ ಸಂತಾನದವರಾದ ಯೆಹೋಹಾನಾನ್, ಹನನ್ಯ, ಜಬ್ಬೈ, ಅತ್ಲೈ;
29
ಬಾನೀ ಸಂತಾನದವರಾದ ಮೆಷುಲ್ಲಾಮ್, ಮಲ್ಲೂಕ್, ಅದಾಯ, ಯಾಷೂಬ್, ಶೆಯಾಲ್, ರಾಮೋತ್;
30
ಪಹತ್ ಮೋವಾಬ್ ಸಂತಾನದವರಾದ ಅದ್ನ, ಕೆಲಾಲ್, ಬೆನಾಯ, ಮಾಸೇಯ, ಮತ್ತನ್ಯ, ಬೆಚಲೇಲ್, ಬಿನ್ನೂಯ್, ಮನಸ್ಸೆ;
31
ಹಾರೀಮ್ ಸಂತಾನದವರಾದ ಎಲೀಯೆಜೆರ್, ಇಷ್ಷೀಯ, ಮಲ್ಕೀಯ, ಶೆಮಾಯ, ಸಿಮೆಯೋನ್,
32
ಬೆನ್ಯಾವಿುನ್, ಮಲ್ಲೂಕ್, ಶೆಮರ್ಯ;
33
ಹಾಷುಮ್ ಸಂತಾನದವರಾದ ಮತ್ತೆನೈ, ಮತ್ತತ್ತ, ಜಾಬಾದ್, ಎಲೀಫೆಲೆಟ್, ಯೆರೇಮೈ, ಮನಸ್ಸೆ, ಶಿಮ್ಮೀ;
34
ಬಾನೀ ಸಂತಾನದವರಾದ ಮಾದೈ, ಅಮ್ರಾಮ್,
35
ಊವೇಲ್, ಬೆನಾಯ, ಬೇದೆಯ, ಕೆಲೂಹು,
36
ವನ್ಯಾಹ, ಮೆರೇಮೋತ್, ಎಲ್ಯಾಷೀಬ್,
38
ಮತ್ತನ್ಯ, ಮತ್ತೆನೈ, ಯಾಸೈ, ಬಾನೀ, ಬಿನ್ನೂಯ್,
39
ಶಿಮ್ಮೀ, ಶೆಲೆಮ್ಯ, ನಾತಾನ್ ಅದಾಯ;
40
ಮಕ್ನದೆಬೈ, ಶಾಷೈ, ಶಾರೈ, ಅಜರೇಲ್,
42
ಶೆಲೆಮ್ಯ, ಶೆಮರ್ಯ, ಶಲ್ಲೂಮ್, ಅಮರ್ಯ, ಯೋಸೇಫ್;
43
ನೆಬೋ ಸಂತಾನದವರಾದ ಯೆಗೀಯೇಲ್, ಮತ್ತಿತ್ಯ, ಜಾಬಾದ್, ಜೆಬೀನ, ಯದ್ದೈ, ಯೋವೇಲ್, ಬೆನಾಯ ಇವರೂ.
44
ಇವರೆಲ್ಲರೂ ಅನ್ಯಕುಲದ ಸ್ತ್ರೀಯರನ್ನು ಮದುವೆಮಾಡಿಕೊಂಡವರು. ಕೆಲವರಿಗೆ ಆ ಸ್ತ್ರೀಯರಲ್ಲಿ ಮಕ್ಕಳು ಹುಟ್ಟಿದ್ದರು.
← Chapter 9
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
All chapters:
1
2
3
4
5
6
7
8
9
10