bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Ezra 5
Ezra 5
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 4
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 6 →
1
ಆಗ ಪ್ರವಾದಿಗಳಾದ ಹಗ್ಗಾಯನೂ ಇದ್ದೋವಿನ ಮಗನಾದ ಜೆಕರ್ಯನೂ ಇಸ್ರಾಯೇಲ್ದೇವರಿಂದ ಪ್ರೇರಿತರಾಗಿ ಆತನ ಹೆಸರಿನಲ್ಲಿ ಯೆಹೂದದ ಮತ್ತು ಯೆರೂಸಲೇವಿುನ ಯೆಹೂದ್ಯರನ್ನು ಪ್ರಬೋಧಿಸಲು
2
ಶೆಯಲ್ತಿಯೇಲನ ಮಗನಾದ ಜೆರುಬ್ಬಾಬೆಲ್, ಯೋಚಾದಾಕನ ಮಗನಾದ ಯೇಷೂವ ಇವರು ಯೆರೂಸಲೇವಿುನ ದೇವಾಲಯವನ್ನು ಕಟ್ಟಿಸುವದಕ್ಕೆ ಪ್ರಾರಂಭಿಸಿದರು; ದೇವಪ್ರವಾದಿಗಳು ಅವರೊಡನಿದ್ದು ಅವರಿಗೆ ಸಹಾಯಮಾಡುತ್ತಿದ್ದರು.
3
ಆ ಸಮಯದಲ್ಲಿ ಹೊಳೆಯ ಈಚೆಯ ಪ್ರದೇಶಗಳ ಅಧಿಪತಿಯಾದ ತತ್ತೆನೈಯೂ ಶೆತರ್ಬೋಜೆನೈಯೂ ಇವರ ಜೊತೆಗಾರರೂ ಅವರ ಬಳಿಗೆ ಬಂದು ಅವರನ್ನು - ಈ ಅಸ್ತಿವಾರವನ್ನು ಸರಿಪಡಿಸಿ ಈ ಆಲಯವನ್ನು ಕಟ್ಟುವದಕ್ಕೆ ನಿಮಗೆ ಅಪ್ಪಣೆಕೊಟ್ಟವರು ಯಾರು ಎಂದು ಕೇಳಿದ ಮೇಲೆ
4
ಕಟ್ಟಡವನ್ನು ಕಟ್ಟಿಸುವವರ ಹೆಸರುಗಳಾವವೆಂದು ವಿಚಾರಿಸಿದರು.
5
ಯೆಹೂದ್ಯರ ಹಿರಿಯರು ತಮ್ಮ ದೇವರ ಕಟಾಕ್ಷಕ್ಕೆ ಪಾತ್ರರಾಗಿದ್ದದ್ದರಿಂದ ವಿಚಾರಿಸುವದಕ್ಕೆ ಬಂದವರು ಅವರಿಗೆ ಅಡ್ಡಿ ಮಾಡದೆ ತಾವು ಇದರ ವಿಷಯವಾಗಿ ದಾರ್ಯಾವೆಷನಿಗೆ ವರ್ತಮಾನ ಮುಟ್ಟಿಸಿ ಉತ್ತರವನ್ನು ಬರೆದು ಕಳುಹಿಸುವೆವೆಂದು ಹೇಳಿ ಹೋದರು.
6
ಹೊಳೆಯ ಈಚೆಯ ಪ್ರದೇಶಗಳ ಅಧಿಪತಿಯಾದ ತತ್ತೆನೈಯೂ ಶೆತರ್ಬೋಜೆನೈಯೂ ಹೊಳೆಯ ಈಚೆಯಲ್ಲಿ ಅವನ ಜೊತೆಗಾರರಾದ ಅಪರ್ಸತ್ಕಾಯರೂ ಅರಸನಾದ ದಾರ್ಯಾವೆಷನಿಗೆ ಕಳುಹಿಸಿದ ಪತ್ರದ ಪ್ರತಿಯು.
7
ಅವರು ಅರಸನಿಗೆ ಕಳುಹಿಸಿದ ಪತ್ರದಲ್ಲಿದ್ದದ್ದೇನಂದರೆ -
8
ದಾರ್ಯಾವೆಷರಾಜರಿಗೆ ಸರ್ವಥಾಕ್ಷೇಮ. ನಾವು ಯೆಹೂದಸೀಮೆಗೆ ಹೋಗಿ ಮಹೋನ್ನತದೇವರ ಆಲಯವನ್ನು ನೋಡಿದೆವೆಂಬದಾಗಿ ರಾಜರಿಗೆ ಅರಿಕೆ ಮಾಡುತ್ತೇವೆ. ಆ ಆಲಯವನ್ನು ದೊಡ್ಡ ಕಲ್ಲುಗಳಿಂದ ಕಟ್ಟುತ್ತಾ ಗೋಡೆಗಳ ಮೇಲೆ ತೊಲೆಗಳನ್ನಿಡುತ್ತಾ ಇದ್ದಾರೆ. ಈ ಕೆಲಸವು ಜಾಗರೂಕತೆಯಿಂದ ಮುಂದರಿದು ಅವರ ಕೈಯಿಂದ ಬೆಳೆಯುತ್ತದೆ.
9
ಅಲ್ಲಿನ ಹಿರಿಯರ ಹತ್ತಿರ - ಈ ಅಸ್ತಿವಾರವನ್ನು ಹಾಕಿ ಈ ಆಲಯವನ್ನು ಕಟ್ಟುವದಕ್ಕೆ ನಿಮಗೆ ಅಪ್ಪಣೆಕೊಟ್ಟವರು ಯಾರು ಎಂದು ವಿಚಾರಮಾಡಿದ್ದಲ್ಲದೆ
10
ಅವರಲ್ಲಿ ಪ್ರಧಾನರಾದವರು ಇಂಥಿಂಥವರೆಂದು ತಮಗೆ ಬರೆದು ತಿಳಿಸುವದಕ್ಕೋಸ್ಕರ ಅವರ ಹೆಸರುಗಳನ್ನು ಕೇಳಿದೆವು.
11
ಅವರು ನಮಗೆ - ನಾವು ಪರಲೋಕ ಭೂಲೋಕಗಳ ದೇವರ ಸೇವಕರು. ಅನೇಕಾನೇಕ ವರುಷಗಳ ಹಿಂದೆ ಕಟ್ಟಿದ್ದ ಆಲಯವನ್ನು ತಿರಿಗಿ ಕಟ್ಟುತ್ತಿರುತ್ತೇವೆ. ಇಸ್ರಾಯೇಲ್ಯರ ಒಬ್ಬ ಮಹಾರಾಜನು ಅದನ್ನು ಕಟ್ಟಿಸಿ ತೀರಿಸಿದ್ದನು.
12
ಆದರೆ ನಮ್ಮ ಪೂರ್ವಿಕರು ಪರಲೋಕದೇವರನ್ನು ರೇಗಿಸಿದ್ದರಿಂದ ಆತನು ಅವರನ್ನು ಬಾಬೆಲಿನ ಕಸ್ದೀಯ ರಾಜನಾದ ನೆಬೂಕದ್ನೆಚ್ಚರನ ಕೈಗೆ ಒಪ್ಪಿಸಿಕೊಟ್ಟನು. ಅವನು ಈ ಆಲಯವನ್ನು ಹಾಳುಮಾಡಿ ಜನರನ್ನು ಸೆರೆಹಿಡಿದು ಬಾಬೆಲಿಗೆ ಒಯ್ದನು.
13
ಆದರೆ ಬಾಬೆಲಿನ ಅರಸನಾದ ಕೋರೆಷನು ತನ್ನ ಆಳಿಕೆಯ ಮೊದಲನೆಯ ವರುಷದಲ್ಲಿ ಈ ದೇವಾಲಯವನ್ನು ತಿರಿಗಿ ಕಟ್ಟುವದಕ್ಕೆ ಅಪ್ಪಣೆ ಕೊಟ್ಟದ್ದಲ್ಲದೆ
14
ನೆಬೂಕದ್ನೆಚ್ಚರನು ಯೆರೂಸಲೇವಿುನ ದೇವಾಲಯದಿಂದ ತೆಗೆದುಕೊಂಡುಹೋಗಿ ಬಾಬೆಲಿನ ದೇವಾಲಯದಲ್ಲಿಟ್ಟಿದ್ದ ಬೆಳ್ಳಿಬಂಗಾರದ ದೇವಸ್ಥಾನ ಪಾತ್ರೆಗಳನ್ನು ಅಲ್ಲಿಂದ ತೆಗಿಸಿ ತಾನು ದೇಶಾಧಿಪತಿಯನ್ನಾಗಿ ನೇವಿುಸಿದ ಶೆಷ್ಬಚ್ಚರನೆಂಬವನ ವಶಕ್ಕೆ ಕೊಟ್ಟು
15
ಅವನಿಗೆ - ಈ ಸಾಮಾನುಗಳನ್ನು ಯೆರೂಸಲೇವಿುನ ದೇವಾಲಯದಲ್ಲಿಡುವದಕ್ಕೋಸ್ಕರ ತೆಗೆದುಕೊಂಡು ಹೋಗಿ ಆ ದೇವಾಲಯವನ್ನು ತಿರಿಗಿ ಅದರ ಸ್ಥಳದಲ್ಲಿ ಕಟ್ಟಿಸು ಎಂದು ಆಜ್ಞಾಪಿಸಿದನು.
16
ಆಗ ಆ ಶೆಷ್ಬಚ್ಚರನು ಬಂದು ಯೆರೂಸಲೇವಿುನ ದೇವಾಲಯದ ಅಸ್ತಿವಾರವನ್ನು ಹಾಕಿದನು. ಅಂದಿನಿಂದ ಇಂದಿನವರೆಗೂ ಕಟ್ಟುವ ಕೆಲಸವು ನಡೆಯುತ್ತಿರುತ್ತದೆ. ಇನ್ನೂ ತೀರಲಿಲ್ಲ ಎಂಬದಾಗಿ ಉತ್ತರಕೊಟ್ಟರು.
17
ಅರಸನಿಗೆ ಸರಿತೋಚುವದಾದರೆ ಯೆರೂಸಲೇವಿುನ ಈ ದೇವಾಲಯವನ್ನು ತಿರಿಗಿ ಕಟ್ಟುವದಕ್ಕೆ ಅರಸನಾದ ಕೋರೆಷನಿಂದ ಅಪ್ಪಣೆ ದೊರಕಿದ್ದು ಸತ್ಯವೋ ಎಂಬದರ ವಿಷಯವಾಗಿ ಬಾಬೆಲಿನ ರಾಜ ಭಂಡಾರದಲ್ಲಿ ಹುಡುಕಿನೋಡಲಿ. ಮತ್ತು ಈ ಸಂಗತಿಯನ್ನು ಕುರಿತು ರಾಜರ ಚಿತ್ತವೇನೆಂಬದು ನಮಗೆ ತಿಳಿಸೋಣವಾಗಲಿ ಎಂಬದೇ.
← Chapter 4
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 6 →
All chapters:
1
2
3
4
5
6
7
8
9
10