bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Joel 1
Joel 1
Kannada BSI JV (ಕನ್ನಡ ಸತ್ಯವೇದವು J.V. (BSI))
Jump to:
Chapter 1
Chapter 2
Chapter 3
Chapter 2 →
1
ಪೆತೂವೇಲನ ಮಗನಾದ ಯೋವೇಲನಿಗೆ ಯೆಹೋವನು ದಯಪಾಲಿಸಿದ ವಾಕ್ಯವು.
2
ವೃದ್ಧರೇ, ಕೇಳಿರಿ! ದೇಶನಿವಾಸಿಗಳೇ, ನೀವೆಲ್ಲರೂ ಕಿವಿಗೊಡಿರಿ! ಇಂಥ ಬಾಧೆಯು ನಿಮ್ಮ ಕಾಲದಲ್ಲಿಯಾಗಲಿ ನಿಮ್ಮ ತಂದೆಗಳ ಕಾಲದಲ್ಲಿಯಾಗಲಿ ಸಂಭವಿಸಿತ್ತೋ?
3
ಇದನ್ನು ನಿಮ್ಮ ಮಕ್ಕಳಿಗೆ ವರ್ಣಿಸಿರಿ, ಅವರು ತಮ್ಮ ಮಕ್ಕಳಿಗೆ ವಿವರಿಸಲಿ, ಅವರು ಮುಂದಿನ ತಲೆಯವರಿಗೆ ತಿಳಿಸಲಿ.
4
ಚೂರಿವಿುಡತೆ ತಿಂದು ವಿುಕ್ಕದ್ದನ್ನು ಗುಂಪುವಿುಡತೆ ತಿಂದುಬಿಟ್ಟಿತು; ಗುಂಪುವಿುಡತೆ ತಿಂದು ವಿುಕ್ಕದ್ದನ್ನು ಸಣ್ಣವಿುಡತೆ ತಿಂದುಬಿಟ್ಟಿತು; ಸಣ್ಣವಿುಡತೆ ತಿಂದು ವಿುಕ್ಕದ್ದನ್ನು ದೊಡ್ಡವಿುಡತೆ ತಿಂದುಬಿಟ್ಟಿತು.
5
ಅಮಲೇರಿದವರೇ, ಎಚ್ಚರಗೊಳ್ಳಿರಿ, ಅಳಿರಿ; ಕುಡಿಕರೇ, ಅರಚಿಕೊಳ್ಳಿರಿ; ದ್ರಾಕ್ಷಾರಸವು ನಿಮ್ಮ ಬಾಯಿಗೆ ಇನ್ನು ಬೀಳದು.
6
ಇಗೋ, ನನ್ನ ದೇಶದ ಮೇಲೆ ಅಸಂಖ್ಯಾತ ಪ್ರಬಲಸೈನ್ಯವು ಬಂದಿದೆ; ಅದರ ಹಲ್ಲುಗಳು ಸಿಂಹದ ಹಲ್ಲುಗಳೇ, ಅದರ ಕೋರೆಗಳು ಮೃಗರಾಜನ ಕೋರೆಗಳೇ.
7
ಅದು ನನ್ನ ದ್ರಾಕ್ಷೆಯ ಬಳ್ಳಿಗಳನ್ನು ಹಾಳುಮಾಡಿದೆ, ನನ್ನ ಅಂಜೂರದ ಗಿಡಗಳನ್ನು ಸಿಗಿದುಹಾಕಿದೆ, ಅವುಗಳನ್ನು ಬೋಳುಮಾಡಿ ಬಿಟ್ಟುಬಿಟ್ಟಿದೆ; ರೆಂಬೆಗಳು ಬಿಳುಪಾಗಿ ಹೋಗಿವೆ.
8
[ದೇಶವೇ,] ತನ್ನ ಯೌವನಕಾಲದ ಪತಿಯ ವಿಯೋಗದುಃಖದಿಂದ ಗೋಣಿತಟ್ಟನ್ನುಟ್ಟುಕೊಂಡು ಗೋಳಾಡುವ ಯುವತಿಯಂತೆ ಗೋಳಾಡು.
9
ಧಾನ್ಯಪಾನನೈವೇದ್ಯಗಳು ಯೆಹೋವನ ಆಲಯದಲ್ಲಿ ನಿಂತುಹೋಗಿವೆ; ಯೆಹೋವನ ಸೇವಕರಾದ ಯಾಜಕರು ದುಃಖಿಸುತ್ತಾರೆ.
10
ಹೊಲವು ಹಾಳಾಗಿದೆ, ದೇಶವು ದುಃಖಿಸುತ್ತದೆ, ಏಕಂದರೆ ಧಾನ್ಯವು ಸೂರೆಯಾಗಿದೆ, ದ್ರಾಕ್ಷಾರಸವು ತಗ್ಗಿದೆ, ಎಣ್ಣೆಯು ಕುಗ್ಗಿದೆ.
11
ರೈತರೇ, ಕಂಗೆಡಿರಿ! ತೋಟಗಾರರೇ, ಗೋಳಾಡಿರಿ! ಗೋದಿಯೂ ಜವೆಗೋದಿಯೂ ಹಾಳಾಗಿವೆ; ಹೊಲದ ಬೆಳೆಯು ನಾಶವಾಗಿದೆ.
12
ದ್ರಾಕ್ಷಾಲತೆಯು ಆಶಾಭಂಗಪಟ್ಟಿದೆ; ಅಂಜೂರದ ಗಿಡವು ಕ್ಷೀಣವಾಗಿದೆ; ದಾಳಿಂಬ, ಖರ್ಜೂರ, ಸೇಬು, ಅಂತು ಸಕಲ ವನವೃಕ್ಷಗಳು ಒಣಗಿವೆ, ಆನಂದವು ತಗ್ಗಿ ನರಜನ್ಮದವರಿಗೆ ತಪ್ಪಿಹೋಗಿದೆ.
13
ಯಾಜಕರೇ, ಗೋಣಿತಟ್ಟನ್ನು ಉಟ್ಟುಕೊಂಡು ಮೊರೆಯಿಡಿರಿ; ಯಜ್ಞವೇದಿಯ ಸೇವಕರೇ, ಗೋಳಾಡಿರಿ; ನನ್ನ ದೇವರ ದಾಸರೇ, ಬನ್ನಿರಿ, ಗೋಣಿತಟ್ಟನ್ನು ಸುತ್ತಿಕೊಂಡು ರಾತ್ರಿಯೆಲ್ಲಾ ಬಿದ್ದಿರ್ರಿ; ಧಾನ್ಯಪಾನನೈವೇದ್ಯಗಳು ನಿಮ್ಮ ದೇವರ ಆಲಯಕ್ಕೆ ಒದಗವು.
14
ಉಪವಾಸ ದಿನವನ್ನು ಏರ್ಪಡಿಸಿರಿ; ಸಂಘವನ್ನು ಕೂಡಿಸಿರಿ; ಹಿರಿಯರನ್ನೂ ಸಮಸ್ತ ದೇಶನಿವಾಸಿಗಳನ್ನೂ ನಿಮ್ಮ ದೇವರಾದ ಯೆಹೋವನ ಆಲಯಕ್ಕೆ ಬರಮಾಡಿ ಯೆಹೋವನಿಗೆ ಮೊರೆಯಿಡಿರಿ.
15
ಯೆಹೋವನ ದಿನವು ಸಮೀಪಿಸಿತು; ಅಯ್ಯೋ, ದಿನವೇ! ಅದು ಸರ್ವಶಕ್ತನಿಂದ ನಾಶನದಿನವಾಗಿಯೇ ಬರುವದು.
16
ನಮ್ಮ ಆಹಾರವು ನಮ್ಮ ಕಣ್ಣೆದುರಿಗೆ ಹಾಳಾಯಿತಲ್ಲಾ; ಹರ್ಷೋಲ್ಲಾಸಗಳು ನಮ್ಮ ದೇವರ ಆಲಯದೊಳಗಿಂದ ತೊಲಗಿದವಲ್ಲಾ!
17
ಬೀಜಗಳು ಹೆಂಟೆಗಳ ಕೆಳಗೆ ಒಣಗುತ್ತವೆ; ಹಗೇವುಗಳು ಬರಿದಾಗಿವೆ, ಕಣಜಗಳು ಬಿದ್ದುಹೋಗಿವೆ; ಧಾನ್ಯಕ್ಕೆ ಸಂಕೋಚವಾಯಿತಷ್ಟೆ.
18
ಅಯ್ಯೋ, ಪಶುಗಳು ಎಷ್ಟೋ ನರಳುತ್ತವೆ! ಮೇವಿಲ್ಲದ ಕಾರಣ ದನದ ಮಂದೆಗಳು ಭ್ರಮೆಗೊಂಡಿವೆ, ಕುರಿಯ ಹಿಂಡುಗಳು ದಂಡನೆಗೆ ಗುರಿಯಾಗಿವೆ.
19
ಯೆಹೋವಾ, ನಿನಗೆ ಮೊರೆಯಿಡುತ್ತೇನೆ; ಕಾಡಿನ ಹುಲ್ಗಾವಲನ್ನು ಕಿಚ್ಚು ನುಂಗಿಬಿಟ್ಟಿದೆಯಲ್ಲಾ; ವನವೃಕ್ಷಗಳನ್ನೆಲ್ಲಾ ಬೇಗೆಯು ಸುಟ್ಟುಹಾಕಿದೆ.
20
ಭೂಜಂತುಗಳೂ ನಿನ್ನ ಕಡೆಗೆ ತಲೆಯೆತ್ತುತ್ತವೆ; ತೊರೆಗಳು ಬತ್ತಿಹೋಗಿವೆ, ಕಾಡಿನ ಹುಲ್ಗಾವಲನ್ನು ಕಿಚ್ಚು ನುಂಗಿಬಿಟ್ಟಿದೆ.
Jump to:
Chapter 1
Chapter 2
Chapter 3
Chapter 2 →
All chapters:
1
2
3