bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Joel 3
Joel 3
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 2
Jump to:
Chapter 1
Chapter 2
Chapter 3
1
ಇಗೋ, ಆ ದಿನಗಳಲ್ಲಿ, ನಾನು ಯೆಹೂದದ ಮತ್ತು ಯೆರೂಸಲೇವಿುನ ದುರವಸ್ಥೆಯನ್ನು ತಪ್ಪಿಸುವ ಕಾಲದಲ್ಲಿ
2
ನಾನು ಸಕಲ ಜನಾಂಗಗಳನ್ನು ಕೂಡಿಸಿ ಯೆಹೋವನ ನ್ಯಾಯತೀರ್ಪಿನ ತಗ್ಗಿಗೆ ಬರಮಾಡಿ ಅಲ್ಲಿ ನನ್ನ ಜನರಿಗಾಗಿ, ನನ್ನ ಸ್ವಾಸ್ತ್ಯವಾದ ಇಸ್ರಾಯೇಲ್ ಪ್ರಜೆಗೋಸ್ಕರ ಅವುಗಳೊಂದಿಗೆ ವಿವಾದಮಾಡುವೆನು. ಅವು ನನ್ನ ಜನರನ್ನು ದೇಶದೇಶಗಳಿಗೆ ಚದರಿಸಿ ನನ್ನ ದೇಶವನ್ನು ಹಂಚಿಕೊಂಡಿವೆಯಷ್ಟೆ.
3
ಹೌದು, ನನ್ನ ಜನರಿಗಾಗಿ ಚೀಟುಹಾಕಿವೆ, ಸೂಳೆಗಾಗಿ ಹುಡುಗನನ್ನು ಬದಲು ಮಾಡಿವೆ, ದ್ರಾಕ್ಷಾರಸಕ್ಕೆ ಹುಡುಗಿಯನ್ನು ಬದಲು ಕೊಟ್ಟು ಪಾನಮಾಡಿವೆ.
4
ತೂರೇ, ಚೀದೋನೇ, ಫಿಲಿಷ್ಟಿಯ ರಾಷ್ಟ್ರಗಳೇ, ನನ್ನ ಗೊಡವೆ ನಿಮಗೇಕೆ? ನನಗೆ ಪ್ರತೀಕಾರಮಾಡುವಿರೋ? ಸುಮ್ಮನೆ ತಂಟೆಮಾಡುವಿರೋ? ನೀವು ಮಾಡುವ ಕೇಡನ್ನು ತ್ವರೆಯಾಗಿ, ಶೀಘ್ರವಾಗಿ ನಿಮ್ಮ ತಲೆಗೇ ತರುವೆನು.
5
ನನ್ನ ಬೆಳ್ಳಿಬಂಗಾರಗಳನ್ನು ಕಸುಕೊಂಡಿದ್ದೀರಿ, ನನ್ನ ಒಳ್ಳೊಳ್ಳೆಯ ಪ್ರಿಯವಸ್ತುಗಳನ್ನು ನಿಮ್ಮ ಸೌಧಗಳಿಗೆ ಸೂರೆಮಾಡಿಕೊಂಡು ಹೋಗಿದ್ದೀರಿ;
6
ಯೆಹೂದ್ಯರನ್ನೂ ಯೆರೂಸಲೇವಿುನವರನ್ನೂ ಅವರ ಗಡಿಯಿಂದ ದೂರ ಮಾಡಬೇಕೆಂದು ಗ್ರೀಕರಿಗೆ ಮಾರಿಬಿಟ್ಟಿದ್ದೀರಿ;
7
ಹೀಗಿರಲು ಇಗೋ, ನೀವು ಅವರನ್ನು ಮಾರಿದ ಸ್ಥಳದೊಳಗಿಂದ ಹೊರಟುಬರುವಂತೆ ನಾನು ಅವರನ್ನು ಹುರಿಗೊಳಿಸಿ ನೀವು ಮಾಡಿದ ಕೇಡನ್ನು ನಿಮ್ಮ ತಲೆಗೇ ತರುವೆನು;
8
ನಿಮ್ಮ ಗಂಡುಹೆಣ್ಣು ಮಕ್ಕಳನ್ನು ಯೆಹೂದ್ಯರಿಗೆ ಮಾರುವೆನು; ಅವರು ಅವರನ್ನು ದೂರದ ಜನಾಂಗವಾದ ಶೆಬದವರಿಗೆ ಮಾರಿಬಿಡುವರು; ಯೆಹೋವನೇ ಇದನ್ನು ನುಡಿದಿದ್ದಾನೆ.
9
ಜನಾಂಗಗಳಲ್ಲಿ ಹೀಗೆ ಪ್ರಕಟಿಸಿರಿ - [ಜನಾಂಗಗಳೇ,] ಸನ್ನದ್ಧರಾಗಿರಿ, ಶೂರರನ್ನು ಎಚ್ಚರಪಡಿಸಿರಿ, ಯೋಧರೆಲ್ಲರೂ ಕೂಡಲಿ, ಯುದ್ಧಕ್ಕೆ ಹೊರಡಲಿ.
10
ನಿಮ್ಮ ಗುಳಗಳನ್ನು ಕುಲುಮೆಗೆ ಹಾಕಿ ಕತ್ತಿಗಳನ್ನಾಗಿಯೂ ಕುಡುಗೋಲುಗಳನ್ನು ಬರ್ಜಿಗಳನ್ನಾಗಿಯೂ ಮಾಡಿರಿ; ದುರ್ಬಲನೂ ಶೂರನೆಂದುಕೊಳ್ಳಲಿ.
11
ಸುತ್ತಣ ಜನಾಂಗಗಳೇ, ತ್ವರೆಪಡಿರಿ, ನೀವೆಲ್ಲರೂ ಬನ್ನಿರಿ, ಕೂಡಿಕೊಳ್ಳಿರಿ; ಯೆಹೋವನೇ, ನಿನ್ನ ಶೂರರನ್ನು [ರಣರಂಗಕ್ಕೆ] ಇಳಿಸು.
12
ಜನಾಂಗಗಳು ಎಚ್ಚರಗೊಂಡು ಯೆಹೋವನ ನ್ಯಾಯತೀರ್ಪಿನ ತಗ್ಗಿಗೆ ಬರಲಿ; ಅಲ್ಲೇ ಸುತ್ತಣ ಜನಾಂಗಗಳಿಗೆಲ್ಲಾ ನ್ಯಾಯತೀರಿಸಲು ಆಸೀನನಾಗುವೆನು.
13
[ಯೆಹೋವನ ಶೂರರೇ,] ಕುಡುಗೋಲನ್ನು ಹಾಕಿರಿ, ಫಲವು ಪಕ್ವವಾಗಿದೆ; ಬನ್ನಿರಿ, ತುಳಿಯಿರಿ; ದ್ರಾಕ್ಷೆಯ ಆಲೆಯು ಭರ್ತಿಯಾಗಿದೆ, ತೊಟ್ಟಿಗಳು ತುಂಬಿತುಳುಕುತ್ತಿವೆ; ಜನಾಂಗಗಳ ದುಷ್ಟತನವು ವಿಪರೀತವೇ ಸರಿ.
14
ಆಹಾ, ತೀರ್ಪಿನ ತಗ್ಗಿನಲ್ಲಿ ಗುಂಪು ಗುಂಪು! ತೀರ್ಪಿನ ತಗ್ಗಿನಲ್ಲಿ ಯೆಹೋವನ ದಿನವು ಸಮೀಪಿಸಿದೆ.
15
ಸೂರ್ಯಚಂದ್ರರು ಮಂಕಾಗುತ್ತಾರೆ, ನಕ್ಷತ್ರಗಳು ಕಾಂತಿಯನ್ನು ಅಡಗಿಸಿಕೊಳ್ಳುತ್ತವೆ.
16
ಯೆಹೋವನು ಚೀಯೋನಿನಿಂದ ಗರ್ಜಿಸುತ್ತಾನೆ, ಯೆರೂಸಲೇವಿುನಿಂದ ದನಿಗೈಯುತ್ತಾನೆ; ಭೂಮ್ಯಾಕಾಶಗಳು ನಡುಗುತ್ತವೆ. ಆದರೆ ಯೆಹೋವನು ತನ್ನ ಜನರಿಗೆ ಆಶ್ರಯವೂ ಇಸ್ರಾಯೇಲ್ಯರಿಗೆ ರಕ್ಷಣದುರ್ಗವೂ ಆಗುವನು.
17
ಹೀಗೆ ನಾನು ನನ್ನ ಪರಿಶುದ್ಧ ಪರ್ವತವಾದ ಚೀಯೋನಿನಲ್ಲಿ ನೆಲೆಯಾಗಿ ನಿಮ್ಮ ದೇವರಾದ ಯೆಹೋವನಾಗಿದ್ದೇನೆ ಎಂದು ನಿಮಗೆ ದೃಢವಾಗುವದು; ಆಗ ಯೆರೂಸಲೇಮು ಪವಿತ್ರವಾಗಿರುವದು; ಮ್ಲೇಚ್ಫರು ಇನ್ನು ಅದನ್ನು ಹಾದುಹೋಗರು.
18
ಆ ಕಾಲದಲ್ಲಿ ಬೆಟ್ಟಗಳಿಂದ ದ್ರಾಕ್ಷಾರಸವು ಸುರಿಯುವದು, ಗುಡ್ಡಗಳಿಂದ ಹಾಲುಹರಿಯುವದು, ಯೆಹೂದದ ತೊರೆಗಳಲ್ಲೆಲ್ಲಾ ನೀರು ತುಂಬಿರುವದು; ಯೆಹೋವನ ಆಲಯದೊಳಗಿಂದ ಬುಗ್ಗೆಯು ಉಕ್ಕಿಬಂದು ಜಾಲಿಯ ಹಳ್ಳವನ್ನು ತಂಪುಮಾಡುವದು.
19
ಐಗುಪ್ತ್ಯರೂ ಎದೋಮ್ಯರೂ ಯೆಹೂದ್ಯರನ್ನು ಹಿಂಸಿಸಿ ಅವರ ದೇಶದಲ್ಲಿ ನಿರ್ದೋಷಿಗಳ ರಕ್ತವನ್ನು ಸುರಿಸಿದ್ದರಿಂದ ಐಗುಪ್ತವು ಹಾಳುಬೀಳುವದು, ಎದೋಮು ಬೆಗ್ಗಾಡಾಗುವದು.
20
ಆದರೆ ಯೆಹೂದವು ಸದಾ ಜನಭರಿತವಾಗಿರುವದು; ಯೆರೂಸಲೇಮು ತಲತಲಾಂತರಕ್ಕೂ ನಿವಾಸಸ್ಥಾನವಾಗಿರುವದು.
21
ಅವುಗಳಲ್ಲಿ ಹತರಾದವರನ್ನು ನಿರ್ದೋಷಿಗಳೆಂದು ನಾನು ಬಹುಕಾಲ ನಿರ್ಣಯಿಸದೆ ಬಿಟ್ಟಿದ್ದೆನು, ಇನ್ನು ನಿರ್ಣಯಿಸುವೆನು; ಯೆಹೋವನು ಚೀಯೋನಿನಲ್ಲಿ ನೆಲೆಯಾಗಿಯೇ ಇದ್ದಾನೆ.
← Chapter 2
Jump to:
Chapter 1
Chapter 2
Chapter 3
All chapters:
1
2
3