bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Lamentations 4
Lamentations 4
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 3
Jump to:
Chapter 1
Chapter 2
Chapter 3
Chapter 4
Chapter 5
Chapter 5 →
1
ಅಕಟಾ, ಬಂಗಾರವು ಎಷ್ಟೋ ಮಸಕಾಯಿತು! ಚೊಕ್ಕ ಚಿನ್ನವು ಕಂದಾಗಿದೆಯಲ್ಲಾ. ಪವಿತ್ರಾಲಯದ ಕಲ್ಲುಗಳು ಪ್ರತಿ ಬೀದಿಯ ಕೊನೆಯಲ್ಲಿ ರಾಶಿರಾಶಿಯಾಗಿ ಬಿದ್ದು ಬಿಟ್ಟಿವೆ.
2
ಅಯ್ಯೋ, ಅಪರಂಜಿಯಷ್ಟು ಅಮೂಲ್ಯರಾದ ಚೀಯೋನಿನ ಪ್ರಜೆಗಳು ಕುಂಬಾರನ ಕೈಕೆಲಸದ ಮಣ್ಣುಮಡಿಕೆಗಳೋ ಎಂಬಂತೆ ತಿರಸ್ಕರಿಸಲ್ಪಟ್ಟಿದ್ದಾರೆ.
3
ನರಿಗಳು ಕೂಡಾ ಮರಿಗಳಿಗೆ ಮೊಲೆಗೊಟ್ಟು ಊಡಿಸುವವಷ್ಟೆ; ನನ್ನ ಜನವೆಂಬಾಕೆಯೋ ಕಾಡಿನ ಉಷ್ಟ್ರಪಕ್ಷಿಯಷ್ಟು ಕ್ರೂರಳಾಗಿದ್ದಾಳೆ.
4
ಮೊಲೆಕೂಸಿನ ನಾಲಿಗೆಯು ದಾಹದಿಂದ ಸೇದಿಹೋಗಿದೆ. ಅನ್ನ ಬೇಕೆನ್ನುವ ಎಳೆಯ ಮಕ್ಕಳಿಗೆ ಯಾರೂ ಅನ್ನವಿಕ್ಕರು.
5
ಮೃಷ್ಟಾನ್ನವನ್ನು ಉಣ್ಣುತ್ತಿದ್ದವರು ಬೀದಿಗಳಲ್ಲಿ ದಿಕ್ಕೆಟ್ಟು ಅಲೆಯುತ್ತಾರೆ; ಚಿಕ್ಕತನದಿಂದಲೂ ಸಕಲಾತಿಯನ್ನು ಹೊದೆಯುತ್ತಿದ್ದವರಿಗೆ ತಿಪ್ಪೆಗಳನ್ನು ಅಪ್ಪಿಕೊಳ್ಳುವ ಗತಿ ಬಂತು.
6
ಯಾರ ಕೈಯೂ ಸೋಕದೆ ಕ್ಷಣಮಾತ್ರದಲ್ಲಿ ಹಾಳಾದ ಸೊದೋವಿುನ ಪಾಪಕ್ಕಿಂತಲೂ ನನ್ನ ಪ್ರಜೆಯ ಅಧರ್ಮವು ಹೆಚ್ಚಾಯಿತಲ್ಲಾ.
7
ಆ ಪ್ರಜೆಯಲ್ಲಿನ ಮಹನೀಯರು ಹಿಮಕ್ಕಿಂತ ಶುಭ್ರವಾಗಿಯೂ ಹಾಲಿಗಿಂತ ಬಿಳುಪಾಗಿಯೂ ಇದ್ದರು. ಅವರ ದೇಹದ ಬಣ್ಣವು ಹವಳವನ್ನು ಮೀರಿತ್ತು, ಅವರ ರೂಪವು ಇಂದ್ರನೀಲಮಣಿಯಷ್ಟು ಅಂದವಾಗಿತ್ತು.
8
[ಈಗ] ಅವರ ಮುಖವು ಕಟ್ಟಕರಿದಾಗಿದೆ, ಬೀದಿಗಳಲ್ಲಿ ಅವರ ಗುರುತು ಯಾರಿಗೂ ಸಿಕ್ಕದು. ಅವರ ಚರ್ಮವು ಎಲುಬುಗಳ ಮೇಲೆ ಸುಕ್ಕಿಕೊಂಡಿದೆ, ಒಣಗಿ ಕಟ್ಟಿಗೆಯಾಗಿದೆ.
9
ಹಸಿವೆಯಿಂದ ಹತರಾದವರ ಗತಿಗಿಂತಲೂ ಖಡ್ಗದಿಂದ ಹತರಾದವರ ಗತಿಯೇ ಲೇಸು; ಭೂಫಲಗಳಿಲ್ಲದೆ ಕ್ಷಾಮದ ಪೆಟ್ಟನ್ನು ತಿಂದವರು ಕ್ಷಯಿಸುತ್ತಾ ಬರುತ್ತಾರಲ್ಲಾ.
10
ಕರುಣಿಗಳಾದ ಹೆಂಗಸರು ತಮ್ಮ ಕೂಸುಗಳನ್ನು ಸ್ವಂತ ಕೈಯಿಂದ ಬೇಯಿಸಿಕೊಂಡಿದ್ದಾರೆ; ನನ್ನ ಜನರ ನಾಶನಕಾಲದಲ್ಲಿ ಮಕ್ಕಳು ತಾಯಿಗಳಿಗೆ ತಿಂಡಿಯಾದವು.
11
ಯೆಹೋವನು ತನ್ನ ರೋಷಾಗ್ನಿಯನ್ನು ಸುರಿಸಿ ತನ್ನ ಸಿಟ್ಟನ್ನು ತೀರಿಸಿದ್ದಾನೆ; ಚೀಯೋನಿನ ಅಸ್ತಿವಾರಗಳನ್ನು ನುಂಗಿಬಿಟ್ಟ ಬೆಂಕಿಯನ್ನು ಅಲ್ಲಿ ಹೊತ್ತಿಸಿದ್ದಾನೆ.
12
ವೈರಿಗಳೂ ವಿರೋಧಿಗಳೂ ಯೆರೂಸಲೇವಿುನ ಬಾಗಿಲುಗಳಲ್ಲಿ ಹೆಜ್ಜೆಯಿಡುವರೆಂದು ಭೂಪತಿನಿವಾಸಿಗಳಲ್ಲಿ ಯಾರೂ ನಂಬಿರಲಿಲ್ಲ.
13
ಚೀಯೋನಿನ ಮಧ್ಯದಲ್ಲಿ ಶಿಷ್ಟರ ರಕ್ತವನ್ನು ಸುರಿಸಿದ ಯಾಜಕಪ್ರವಾದಿಗಳ ಪಾಪದೋಷಗಳಿಂದಲೇ ಈ ಗತಿ ಬಂತು.
14
ಆಹಾ, ಆ ಯಾಜಕಪ್ರವಾದಿಗಳು ಕುರುಡರಂತೆ ಬೀದಿಗಳಲ್ಲಿ ಅಲೆಯುತ್ತಾರೆ; ರಕ್ತದಿಂದ ಹೊಲಸಾಗಿ ಹೋಗಿದ್ದಾರೆ, ಅವರ ಬಟ್ಟೆಯನ್ನು ಯಾರೂ ಮುಟ್ಟರು.
15
ಅವರನ್ನು ನೋಡುವವರು - ತೊಲಗಿರಿ, ಅಶುದ್ಧರು ನೀವು, ನಡೆಯಿರಿ, ನಡೆಯಿರಿ, ಮುಟ್ಟಬೇಡಿರಿ ಎಂದು ಕೂಗುತ್ತಾರೆ. ಅವರು ಓಡಿಹೋಗಿ ಅನ್ಯದೇಶಗಳಲ್ಲಿ ಅಲೆಯುತ್ತಿರಲು - ಇವರು ಇನ್ನು ಇಲ್ಲಿ ತಂಗಬಾರದು ಎಂದು ಆಯಾ ದೇಶಗಳವರು ಅಂದುಕೊಳ್ಳುತ್ತಾರೆ.
16
ಯೆಹೋವನ ಉಗ್ರದೃಷ್ಟಿಯು ಅವರನ್ನು ಚದರಿಸಿದೆ; ಆತನು ಇನ್ನು ಕಟಾಕ್ಷಿಸನು. ಅವರು ಯಾಜಕರಾದರೇನು, ಅವರಿಗೆ ಮರ್ಯಾದೆ ತಪ್ಪಿದೆ; ವೃದ್ಧರಾದರೇನು, ಯಾರೂ ಅವರನ್ನು ಕರುಣಿಸರು.
17
ನಮಗೆ ಬರತಕ್ಕ ಸಹಾಯವನ್ನು ವ್ಯರ್ಥವಾಗಿ ಎದುರುನೋಡಿ ನೋಡಿ ಕಣ್ಣು ಮೊಬ್ಬಾಯಿತು. ನಮ್ಮನ್ನು ಉದ್ಧರಿಸಲಾರದ ಜನಾಂಗದ ಆಗಮನವನ್ನು ನಮ್ಮ ಕೋವರದಲ್ಲಿ ಕಾದುಕೊಂಡಿದ್ದೇವಲ್ಲಾ.
18
ಶತ್ರುಗಳು ನಮ್ಮ ಹೆಜ್ಜೆಯನ್ನು ಗುರಿ ಮಾಡಿಕೊಂಡಿರುವದರಿಂದ ನಮ್ಮ ಬೀದಿಗಳಲ್ಲೇ ನಾವು ಸಂಚಾರಮಾಡದ ಹಾಗಾಯಿತು; ನಮಗೆ ಅಂತ್ಯವು ಸಮೀಪಿಸಿತು, ನಮ್ಮ ಕಾಲವು ತೀರಿತು, ಹೌದು, ನಮಗೆ ಅಂತ್ಯವು ಬಂದೇ ಬಂತು.
19
ನಮ್ಮನ್ನು ಹಿಂದಟ್ಟಿದವರು ಆಕಾಶದ ಹದ್ದುಗಳಿಗಿಂತ ವೇಗಿಗಳಾಗಿದ್ದರು; ಬೆಟ್ಟಗಳ ಮೇಲೆ ನಮ್ಮನ್ನು ಬೆನ್ನಹತ್ತಿ ಅರಣ್ಯದಲ್ಲಿ ಹೊಂಚುಹಾಕಿದರು.
20
ಯಾವನು ನಮಗೆ ಜೀವಶ್ವಾಸವೋ, ಯಾವನು ಯೆಹೋವನ ಅಭಿಷಿಕ್ತನೋ ಯಾವನನ್ನು ಆಶ್ರಯಿಸಿ ಜನಾಂಗಗಳ ಮಧ್ಯದಲ್ಲಿ ಉಳಿಯುವೆವು ಎಂದು ನಾವು ನಂಬಿಕೊಂಡಿದ್ದೆವೋ ಅವನು ಅವರ ಗುಂಡಿಗಳಲ್ಲಿ ಸಿಕ್ಕಿಬಿದ್ದನು.
21
ಊಚ್ ದೇಶದಲ್ಲಿ ವಾಸಿಸುವ ಎದೋಮೆಂಬ ಯುವತಿಯೇ, ಹರ್ಷಿಸು, ಉಲ್ಲಾಸಗೊಳ್ಳು; ಆದರೆ [ರೋಷಪಾನದ] ಪಾತ್ರೆಯು ನಿನ್ನ ಪಾಲಿಗೂ ಬರುವದು; ಅಮಲೇರಿದವಳಾಗಿ ನಿನ್ನನ್ನು ನೀನೇ ಬೆತ್ತಲೆ ಮಾಡಿಕೊಳ್ಳುವಿ.
22
ಚೀಯೋನೆಂಬ ಯುವತಿಯೇ, ನಿನ್ನ ದೋಷಫಲವೆಲ್ಲಾ ಅನುಭವಿಸಿ ತೀರಿತು, ಯೆಹೋವನು ನಿನ್ನನ್ನು ಇನ್ನು ಸೆರೆಗೆ ಒಯ್ಯನು; ಎದೋಮೆಂಬ ಯುವತಿಯೇ, ನಿನ್ನ ದೋಷದ ನಿವಿುತ್ತ ಯೆಹೋವನು ನಿನ್ನನ್ನು ದಂಡಿಸಿ ನಿನ್ನ ಪಾಪಗಳನ್ನು ಬೈಲಿಗೆ ತರುವನು.
← Chapter 3
Jump to:
Chapter 1
Chapter 2
Chapter 3
Chapter 4
Chapter 5
Chapter 5 →
All chapters:
1
2
3
4
5