bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Zechariah 1
Zechariah 1
Kannada BSI JV (ಕನ್ನಡ ಸತ್ಯವೇದವು J.V. (BSI))
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 2 →
1
ದಾರ್ಯಾವೆಷನ ಆಳಿಕೆಯ ಎರಡನೆಯ ವರುಷದ ಎಂಟನೆಯ ತಿಂಗಳಲ್ಲಿ ಯೆಹೋವನು ಇದ್ದೋವಿನ ಮೊಮ್ಮಗನೂ ಬೆರಕ್ಯನ ಮಗನೂ ಆದ ಜೆಕರ್ಯನೆಂಬ ಪ್ರವಾದಿಗೆ ಈ ವಾಕ್ಯವನ್ನು ದಯಪಾಲಿಸಿದನು -
2
ಯೆಹೋವನು ನಿಮ್ಮ ಪಿತೃಗಳ ಮೇಲೆ ಬಹುಕೋಪಗೊಂಡಿದ್ದಾನೆ.
3
ಆದಕಾರಣ ನೀನು ನಿನ್ನ ಜನರಿಗೆ ಹೀಗೆ ಹೇಳು - ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ನನ್ನ ಕಡೆಗೆ ಪುನಃ ತಿರುಗಿರಿ; ಇದು ಸೇನಾಧೀಶ್ವರ ಯೆಹೋವನ ನುಡಿ; ನಾನು ನಿಮ್ಮ ಕಡೆಗೆ ಪುನಃ ತಿರುಗುವೆನು; ಇದು ಸೇನಾಧೀಶ್ವರ ಯೆಹೋವನ ನುಡಿ.
4
ನಿಮ್ಮ ಪಿತೃಗಳಂತಿರಬೇಡಿರಿ; ಪೂರ್ವಕಾಲದ ಪ್ರವಾದಿಗಳು ಅವರಿಗೆ - ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ನಿಮ್ಮ ದುರ್ಮಾರ್ಗ ದುಷ್ಕೃತ್ಯಗಳಿಂದ ಹಿಂದಿರುಗಿರಿ ಎಂದು ಸಾರಿದರೂ ಅವರು ನನ್ನ ಮಾತನ್ನು ಕಿವಿಗೊಟ್ಟು ಕೇಳಲಿಲ್ಲ; ಇದು ಯೆಹೋವನ ನುಡಿ.
5
ನಿಮ್ಮ ಪಿತೃಗಳು ಎಲ್ಲಿ? ಪ್ರವಾದಿಗಳು ನಿತ್ಯಜೀವಿಗಳೋ?
6
ಆದರೆ ನನ್ನ ಸೇವಕರಾದ ಪ್ರವಾದಿಗಳಿಗೆ ಆಜ್ಞಾಪಿಸಿದ ನನ್ನ ವಾಕ್ಯಗಳೂ ವಿಧಿಗಳೂ ನಿಮ್ಮ ಪಿತೃಗಳನ್ನು ಹಿಂದಟ್ಟಿ ಹಿಡಿದು ನಿತ್ಯವಾಗಿವೆಯಷ್ಟೆ; ಅವರು ತಿರುಗಿಕೊಂಡು - ಸೇನಾಧೀಶ್ವರ ಯೆಹೋವನು ನಮ್ಮ ದುರ್ಮಾರ್ಗ ದುಷ್ಕೃತ್ಯಗಳಿಗೆ ತಕ್ಕ ಹಾಗೆ ನಮಗೆ ಏನು ಮಾಡಬೇಕೆಂದು ಸಂಕಲ್ಪಿಸಿದನೋ ಅದನ್ನು ನಮಗೆ ಮಾಡಿದ್ದಾನಲ್ಲಾ ಅಂದುಕೊಂಡರು.
7
ದಾರ್ಯಾವೆಷನ ಆಳಿಕೆಯ ಎರಡನೆಯ ವರುಷದ ಹನ್ನೊಂದನೆಯ ತಿಂಗಳಿನ ಅಂದರೆ ಶೆಬಾಟ್ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಯೆಹೋವನ ವಾಕ್ಯವು ಇದ್ದೋವಿನ ಮೊಮ್ಮಗನೂ ಬೆರೆಕ್ಯನ ಮಗನೂ ಆದ ಜೆಕರ್ಯನೆಂಬ ಪ್ರವಾದಿಗೆ ಕಂಡುಬಂತು.
8
ರಾತ್ರಿಯಲ್ಲಿ ನನಗೆ ದರ್ಶನವಾಯಿತು - ಇಗೋ, ಕೆಂಪು ಕುದುರೆಯನ್ನು ಹತ್ತಿದ ಒಬ್ಬ ಪುರುಷನು ತಗ್ಗಿನಲ್ಲಿರುವ ಸುಗಂಧ ವೃಕ್ಷಗಳ ನಡುವೆ ನಿಂತಿದ್ದನು; ಅವನ ಹಿಂದೆ ಕೆಂಪು ಕಪಿಲ ಬಿಳಿ ಕುದುರೆಗಳನ್ನು ಹತ್ತಿದವರಿದ್ದರು.
9
ನನಗೆ [ಕನಸಿನ ಅರ್ಥವನ್ನು] ವಿವರಿಸುವ ದೇವದೂತನನ್ನು - ಸ್ವಾಮೀ, ಇವರು ಯಾರು ಎಂದು ನಾನು ಕೇಳಲು ಅವನು ನನಗೆ - ಇವರು ಇಂಥವರೆಂದು ನಿನಗೆ ತೋರಿಸುವೆನು ಎಂಬದಾಗಿ ಹೇಳಿದನು.
10
ಕೂಡಲೆ ಸುಗಂಧವೃಕ್ಷಗಳ ನಡುವೆ ನಿಂತಿದ್ದವನು - ಇವರು ಲೋಕಸಂಚಾರಾರ್ಥವಾಗಿ ಯೆಹೋವನಿಂದ ಕಳುಹಿಸಲ್ಪಟ್ಟವರು ಎಂದು ಉತ್ತರಕೊಟ್ಟನು.
11
ಆಗ ಅವರು ಸುಗಂಧವೃಕ್ಷಗಳ ನಡುವೆ ನಿಂತಿದ್ದ ಆ ಯೆಹೋವನ ದೂತನಿಗೆ - ನಾವು ಲೋಕದಲ್ಲಿ ಸಂಚರಿಸಿ ಬಂದಿದ್ದೇವೆ; ಇಗೋ, ಲೋಕವೆಲ್ಲಾ ನೆಮ್ಮದಿಯಾಗಿ ಸುಮ್ಮನಿದೆ ಎಂದು ಅರಿಕೆಮಾಡಿದರು.
12
ಇದನ್ನು ಕೇಳಿ ಯೆಹೋವನ ದೂತನು - ಸೇನಾಧೀಶ್ವರ ಯೆಹೋವನೇ, ನೀನು ಎಪ್ಪತ್ತು ವರುಷಗಳಿಂದ ರೋಷಗೊಂಡಿರುವ ಯೆರೂಸಲೇಮು ಮೊದಲಾದ ಯೆಹೂದದ ಪಟ್ಟಣಗಳನ್ನು ಎಷ್ಟು ಕಾಲ ಕರುಣಿಸದೆ ಇರುವಿ ಎಂದು ಬಿನ್ನವಿಸಲು
13
ನನಗೆ ವಿವರಿಸುವ ದೂತನಿಗೆ ಯೆಹೋವನು ಕರುಣೆಯ ಒಳ್ಳೆಯ ಮಾತುಗಳಿಂದ ಉತ್ತರಕೊಟ್ಟನು.
14
ಆಗ ಆ ದೂತನು ನನಗೆ ಈ ಅಪ್ಪಣೆಮಾಡಿದನು - ನೀನು ಹೀಗೆ ಸಾರು - ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ಯೆರೂಸಲೇವಿುಗೂ ಚೀಯೋನಿಗೂ ಅವಮಾನವಾಯಿತಲ್ಲಾ ಎಂದು ಬಹಳವಾಗಿ ಕುದಿಯುತ್ತೇನೆ.
15
ನೆಮ್ಮದಿಯಾಗಿರುವ ಜನಾಂಗಗಳ ಮೇಲೆ ನನಗೆ ಬಲು ಸಿಟ್ಟೇರಿದೆ; ನಾನು [ಯೆರೂಸಲೇವಿುನ ಮೇಲೆ] ಸ್ವಲ್ಪ ಮಾತ್ರ ಸಿಟ್ಟುಗೊಂಡು ಮಾಡಿಸಬೇಕೆಂದಿದ್ದ ಕೇಡಿಗಿಂತ ಅವು ಹೆಚ್ಚಾಗಿ ಮಾಡಿದವಷ್ಟೆ.
16
ಹೀಗಿರಲು ಯೆಹೋವನು ಇಂತೆನ್ನುತ್ತಾನೆ - ನಾನು ಕನಿಕರವುಳ್ಳವನಾಗಿ ಯೆರೂಸಲೇವಿುಗೆ ಹಿಂದಿರುಗಿದ್ದೇನೆ; ನನ್ನ ಆಲಯವು ಅಲ್ಲಿ ಕಟ್ಟಲ್ಪಡುವದು; ಯೆರೂಸಲೇವಿುನಲ್ಲಿ ನೂಲು ಎಳೆಯಲ್ಪಡುವದು; ಇದು ಸೇನಾಧೀಶ್ವರ ಯೆಹೋವನ ನುಡಿ.
17
ಮತ್ತೊಮ್ಮೆ ಹೀಗೆ ಸಾರು - ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ಇನ್ನು ನನ್ನ ಪಟ್ಟಣಗಳಲ್ಲಿ ಶುಭವು ತುಂಬಿ ತುಳುಕುವದು; ಯೆಹೋವನು ಇನ್ನು ಚೀಯೋನನ್ನು ಸಂತೈಸುವನು, ಯೆರೂಸಲೇಮನ್ನು ಮತ್ತೆ ತನಗಾಗಿ ಆರಿಸಿಕೊಳ್ಳುವನು.
18
ನಾನು ಕಣ್ಣೆತ್ತಿನೋಡಲು ಇಗೋ, ನಾಲ್ಕು ಕೊಂಬುಗಳು ಕಾಣಿಸಿದವು.
19
ವಿವರಿಸುವ ದೂತನನ್ನು ಕುರಿತು ಇವು ಏನು ಎಂದು ನಾನು ಕೇಳಿದ್ದಕ್ಕೆ ಅವನು - ಇವು ಯೆಹೂದ ಇಸ್ರಾಯೇಲು ಯೆರೂಸಲೇಮುಗಳನ್ನು ಚದರಿಸಿರುವ ಕೊಂಬುಗಳು ಎಂದು ಉತ್ತರಕೊಟ್ಟನು.
20
ಅನಂತರ ಯೆಹೋವನು ನನಗೆ ನಾಲ್ಕು ಮಂದಿ ಕಮ್ಮಾರರನ್ನು ತೋರಿಸಿದನು.
21
ಆಗ ನಾನು - ಇವರು ಏನು ಮಾಡುವದಕ್ಕೆ ಬಂದಿದ್ದಾರೆ ಎಂದು ಕೇಳಲು ಅವನು - ಈ ಕೊಂಬುಗಳು ಯೆಹೂದದವರಲ್ಲಿ ಯಾರೂ ತಲೆಯೆತ್ತದಂತೆ ಅವರನ್ನು ಚದರಿಸಿವೆಯಷ್ಟೆ; ಇವರಾದರೋ ಯೆಹೂದ ದೇಶದವರನ್ನು ಚದರಿಸಬೇಕೆಂದು ತಲೆಯೆತ್ತಿದ ಜನಾಂಗಗಳ ಕೊಂಬುಗಳನ್ನು ಹೆದರಿಸಿ ಕೆಡವುವದಕ್ಕೆ ಬಂದಿದ್ದಾರೆ ಎಂದು ಹೇಳಿದನು.
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 2 →
All chapters:
1
2
3
4
5
6
7
8
9
10
11
12
13
14