bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Zechariah 5
Zechariah 5
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 4
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 6 →
1
ಪುನಃ ನಾನು ಕಣ್ಣೆತ್ತಿ ನೋಡಲು ಇಗೋ, ಹಾರುತ್ತಿರುವ ಒಂದು ಸುರಳಿಯು ಕಾಣಿಸಿತು.
2
ಅವನು ನನ್ನನ್ನು - ನಿನಗೆ ಏನು ಕಾಣಿಸುತ್ತಿದೆ ಎಂದು ಕೇಳಿದ್ದಕ್ಕೆ - ಹಾರುತ್ತಿರುವ ಒಂದು ಸುರಳಿಯು ಕಾಣಿಸುತ್ತದೆ; ಅದರ ಉದ್ದ ಇಪ್ಪತ್ತು ಮೊಳ, ಅಗಲ ಹತ್ತು ಮೊಳ ಎಂದುತ್ತರ ಕೊಟ್ಟೆನು.
3
ಆಗ ಅವನು ನನಗೆ - ಇದು ದೇಶದ ಮೇಲೆಲ್ಲಾ ಹೊರಟು ಬಂದಿರುವ ಶಾಪ; ಇದಕ್ಕೆ ತಕ್ಕಂತೆ ಪ್ರತಿಯೊಬ್ಬ ಕಳ್ಳನು ದೇಶದಿಂದ ತೊಡೆಯಲ್ಪಡುವನು; ಇದಕ್ಕೆ ತಕ್ಕ ಹಾಗೆ ಪ್ರತಿಯೊಬ್ಬ ಸುಳ್ಳುಸಾಕ್ಷಿಯೂ ದೇಶದಿಂದ ತೊಡೆಯಲ್ಪಡುವನು.
4
ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ನನ್ನ ಅಪ್ಪಣೆಯಂತೆ ಇದು ಹೊರಟು ಕಳ್ಳನ ಮನೆಯೊಳಗೂ ನನ್ನ ಹೆಸರೆತ್ತಿ ಸುಳ್ಳುಸಾಕ್ಷಿ ಹೇಳುವವನ ಮನೆಯೊಳಗೂ ನುಗ್ಗಿ ನಟ್ಟನಡುವೆ ನೆಲೆಗೊಂಡು ಅದನ್ನು ಕಲ್ಲುಮರ ಸಹಿತವಾಗಿ ನಾಶಮಾಡುವದು ಎಂದು ಹೇಳಿದನು.
5
ಅನಂತರ ವಿವರಿಸುವ ದೂತನು ಹತ್ತಿರ ಬಂದು - ಕಂಡುಬರುತ್ತಿರುವ ಆ ವಸ್ತು ಏನೆಂದು ನೋಡು ಎಂಬದಾಗಿ ನನಗೆ ಹೇಳಲು ನಾನು -
6
ಏನದು ಎಂದು ಕೇಳಿದ್ದಕ್ಕೆ ಅವನು - ಕಂಡುಬರುತ್ತಿರುವ ಆ ವಸ್ತು ಒಂದು ಕೊಳಗಪಾತ್ರೆ ಎಂದು ತಿಳಿಸಿದನು. ಅಲ್ಲದೆ - ಅದು ಪೂರ್ಣದೇಶದಲ್ಲಿನ ಪಾಪಿಗಳ ಅಧರ್ಮವೇ ಅಂದನು.
7
ಇಗೋ, ತಟ್ಟೆಯಾಕಾರವಾದ ಸೀಸದ ಮುಚ್ಚಳವು ಎತ್ತಲ್ಪಡಲಾಗಿ ಆಹಾ, ಒಬ್ಬ ಹೆಂಗಸು ಕೊಳಗದೊಳಗೆ ಕೂತಿದ್ದಳು.
8
ಅವನು ಕಂಡು - ಇವಳು ಪಾಪಮೂರ್ತಿ ಎಂದು ಹೇಳಿ ಅವಳನ್ನು ಕೊಳಗದೊಳಗೆ ಅದುವಿು ಸೀಸದ ಭಾರಿ ಮುಚ್ಚಳವನ್ನು ಅದರ ಬಾಯಿಗೆ ಹಾಕಿಬಿಟ್ಟನು.
9
ನಾನು ಕಣ್ಣೆತ್ತಿನೋಡಲು ಆಹಾ, ಕೊಕ್ಕರೆಯ ರೆಕ್ಕೆಯಂತಿರುವ ರೆಕ್ಕೆಯುಳ್ಳ ಇಬ್ಬರು ಹೆಂಗಸರು ಕಂಡುಬಂದರು; ಅವರ ರೆಕ್ಕೆಗಳೊಳಗೆ ಗಾಳಿಯು ತುಂಬಿಕೊಂಡಿತ್ತು; ಅವರು ಪೀಪಾಯಿಯನ್ನು ಭೂಮ್ಯಾಕಾಶಗಳ ಅಂತರಾಳದಲ್ಲಿ ಎತ್ತಿಕೊಂಡು ಹೋದರು.
10
ಅವರು ಕೊಳಗವನ್ನು ಎಲ್ಲಿಗೆ ಹೊತ್ತುಕೊಂಡು ಹೋಗುತ್ತಾರೆ ಎಂದು ನನಗೆ ವಿವರಿಸುವ ದೇವದೂತನನ್ನು ನಾನು ಕೇಳಿದ್ದಕ್ಕೆ
11
ಅವನು ನನಗೆ - ಶಿನಾರ್ ದೇಶದಲ್ಲಿ ಅವಳಿಗೆ ಮನೆಕಟ್ಟುವದಕ್ಕಾಗಿ ಹೋಗುತ್ತಾರೆ; ಅದು ಸಿದ್ಧವಾದಾಗ ಆ ಸ್ವಂತ ಸ್ಥಳದಲ್ಲಿ ನಿಲ್ಲಿಸಲ್ಪಡುವಳು.
← Chapter 4
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 6 →
All chapters:
1
2
3
4
5
6
7
8
9
10
11
12
13
14