bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
Ezekiel 23
Ezekiel 23
Kannada Bible (KNCL) BSI 2016
← Chapter 22
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 32
Chapter 33
Chapter 34
Chapter 35
Chapter 36
Chapter 37
Chapter 38
Chapter 39
Chapter 40
Chapter 41
Chapter 42
Chapter 43
Chapter 44
Chapter 45
Chapter 46
Chapter 47
Chapter 48
Chapter 24 →
1
ಸರ್ವೇಶ್ವರ ಮತ್ತೊಂದು ವಾಣಿಯನ್ನು ನನಗೆ ದಯಪಾಲಿಸಿದರು:
2
“ನರಪುತ್ರನೇ, ಒಬ್ಬ ತಾಯಿಯ ಮಕ್ಕಳಾದ ಇಬ್ಬರು ಹೆಂಗಸರಿದ್ದರು.
3
ಅವರು ಈಜಿಪ್ಟಿನಲ್ಲಿ ಸೂಳೆತನ ಮಾಡುತ್ತಿದ್ದರು. ಬಾಲ್ಯದಲ್ಲಿ ವೇಶ್ಯೆಯರಾಗಿ ನಡೆಯುತ್ತಿದ್ದರು. ಅಲ್ಲಿನ ಪುರುಷರು ಅವರ ಸ್ತನಗಳನ್ನು ಹಿಸುಕಿದರು, ಎಳೆಯ ತೊಟ್ಟುಗಳನ್ನು ಸವರಿಸಿದರು.
4
ಹಿರಿಯಳ ಹೆಸರು ಒಹೊಲ, ಕಿರಿಯವಳ ಹೆಸರು ಒಹೊಲೀಬ. ಅವರು ನನ್ನವರಾಗಿ ಗಂಡು ಹೆಣ್ಣು ಮಕ್ಕಳನ್ನು ಹೆತ್ತರು. ಒಹೊಲ ಸಮಾರಿಯವನ್ನೂ, ಒಹೊಲೀಬ ಜೆರುಸಲೇಮನ್ನೂ ಸೂಚಿಸುವ ಹೆಸರುಗಳು.
5
ಒಹೊಲಳು ನನ್ನವಳಾಗಿದ್ದರೂ ಹಾದರ ನಡೆಸಿ
6
ತನ್ನ ಮಿಂಡರನ್ನು ಅಂದರೆ, ಯೋಧರು, ನೀಲಾಂಬರರು, ಅಶ್ವಾರೂಢರು, ನಾಯಕ-ಉಪನಾಯಕರು ಎಲ್ಲ ಮನೋಹರ ಯುವಕರೂ ಆದ ಅಸ್ಸೀರಿಯರನ್ನು ಮೋಹಿಸಿ ಅವರಿಗೆ
7
ತನ್ನನ್ನು ಸೂಳೆಯಾಗಿ ಒಪ್ಪಿಸಿಕೊಂಡಳು; ಇವರೆಲ್ಲರು ಅಸ್ಸೀರಿಯದಲ್ಲಿನ ಗಣ್ಯವ್ಯಕ್ತಿಗಳು; ಅವಳು ಯಾರನ್ನು ಮೋಹಿಸಿದಳೋ ಅವರ ವಿಗ್ರಹಗಳಿಂದ ತನ್ನನ್ನೇ ಹೊಲಸುಮಾಡಿಕೊಂಡಳು.
8
ಅವಳು ಈಜಿಪ್ಟಿನಲ್ಲಿ ಇದ್ದಂದಿನಿಂದಲೂ ತನ್ನ ಸೂಳೆತನವನ್ನು ಬಿಡಲಿಲ್ಲ; ಬಾಲ್ಯದಲ್ಲಿಯೇ ಅಲ್ಲಿಯವರು ಅವಳೊಂದಿಗೆ ಮಲಗಿ, ಅವಳ ಎಳೆಯ ತೊಟ್ಟುಗಳನ್ನು ನಸುಕಿ, ಅವಳ ಸಂಗಡ ಸೂಳೆಗಾರಿಕೆಯನ್ನು ಹೆಚ್ಚೆಚ್ಚಾಗಿ ಮಾಡಿದರು.
9
ಆದಕಾರಣ ನಾನು ಅವಳನ್ನು ಅವಳ ಮಿಂಡರ ಕೈಗೆ ಅಂದರೆ, ಅವಳು ಮೋಹಿಸಿದ ಅಸ್ಸೀರಿಯರ ಕೈಗೆ ಒಪ್ಪಿಸಿದೆ.
10
ಇವರು ಅವಳನ್ನು ಅವಮಾನಪಡಿಸಿ, ಅವಳ ಗಂಡು ಹೆಣ್ಣು ಮಕ್ಕಳನ್ನು ಎತ್ತಿಕೊಂಡು ಹೋಗಿ, ಅವಳನ್ನು ಖಡ್ಗದಿಂದ ಸಂಹರಿಸಿದರು. ನ್ಯಾಯನಿರ್ಣಯವಾಗುವಾಗ ಹೆಂಗಸರಲ್ಲಿ ಅವಳಿಗೆ ಕೆಟ್ಟ ಹೆಸರು ಬಂದಿತು.
11
“ಅವಳ ತಂಗಿಯಾದ ಒಹೊಲೀಬಳು ಇದನ್ನು ನೋಡಿಯೂ ಅವಳಿಗಿಂತ ಅಧಿಕವಾಗಿ ಮೋಹಗೊಂಡು, ಅಕ್ಕನ ಹಾದರಕ್ಕಿಂತ ಹೆಚ್ಚಾಗಿ ಹಾದರವನ್ನು ನಡೆಸಿ ಅವಳನ್ನು ಮೀರುವಷ್ಟು ಕೆಟ್ಟವಳಾದಳು.
12
ಇವಳು ನಾಯಕ-ಉಪನಾಯಕರೂ ಯೋಧರೂ ವಿಚಿತ್ರ ವಸ್ತ್ರಧಾರಿಗಳೂ ಅಶ್ವಾರೂಢರೂ ಎಲ್ಲ ಮನೋಹರ ಯುವಕರೂ ಆದ ಅಸ್ಸೀರಿಯರನ್ನು ಮೋಹಿಸಿದಳು.
13
ಇವಳೂ ಅಪವಿತ್ರಳಾದುದ್ದನ್ನು ಕಂಡೆನು. ಇಬ್ಬರೂ ಒಂದೇ ಮಾರ್ಗವನ್ನು ಹಿಡಿದಿದ್ದರು.
14
“ಇವಳು ತನ್ನ ಸೂಳೆತನವನ್ನು ಇನ್ನೂ ಹೆಚ್ಚಿಸಿದಳು; ಬಾಬಿಲೋನಿಯರ ಚಿತ್ರಗಳನ್ನು ಅಂದರೆ, ಸೊಂಟಕ್ಕೆ ನಡುಕಟ್ಟನ್ನು ಕಟ್ಟಿ, ತಲೆಗೆ ಚುಂಗಿನ ರುಮಾಲನ್ನು ಧರಿಸಿ, ನೋಟಕ್ಕೆ ಸರದಾರರಂತಿದ್ದ ಆ ಬಾಬಿಲೋನಿನ ಕಸ್ದೀಯರ ಆಕಾರಗಳನ್ನು ಗೋಡೆಯಲ್ಲಿ ಕಿರಮಂಜಿಯಿಂದ ಚಿತ್ರಿಸಿರುವುದನ್ನು ನೋಡಿದ ಕೂಡಲೆ ಇವಳು ಮೋಹಗೊಳ್ಳುತ್ತಿದ್ದಳು.
16
ಬಾಬಿಲೋನಿಯಾದ ಆ ವ್ಯಕ್ತಿಗಳ ಬಳಿಗೆ ದೂತರನ್ನು ಕಳುಹಿಸುತ್ತಿದ್ದಳು.
17
ಆ ಬಾಬಿಲೋನಿನವರು ಇವಳ ರತಿಮಂಚವನ್ನೇರಿ ತಮ್ಮ ಕಾಮತೃಷೆಯಿಂದ ಇವಳನ್ನು ಕೆಡಿಸಿದರು; ಇವಳು ಅವರಿಂದ ಎಷ್ಟು ಅಶುದ್ಧಳಾದಳೆಂದರೆ ಇವಳಿಗೇ ಅವರ ಬಗ್ಗೆ ಜಿಗುಪ್ಸೆ ಹುಟ್ಟಿತು.
18
ಇವಳು ಮುಚ್ಚುಮರೆಯಿಲ್ಲದೆ ಹಾದರಮಾಡಿ ತನ್ನ ಮಾನವನ್ನೇ ಕೆಡಿಸಿಕೊಂಡಾಗ ನನ್ನ ಅನುರಾಗ, ಮೊದಲು ಇವಳ ಅಕ್ಕನಿಂದ ದೂರವಾದ ಹಾಗೆ, ಇವಳಿಂದಲೂ ದೂರವಾಯಿತು.
19
ಆದರೂ ಇವಳು ತಾನು ಈಜಿಪ್ಟ್ ದೇಶದಲ್ಲಿ ಸೂಳೆಯಾಗಿದ್ದ ತನ್ನ ತಾರುಣ್ಯವನ್ನು ನೆನಪುಮಾಡಿಕೊಂಡು ತನ್ನ ಸೂಳೆತನವನ್ನು ಇನ್ನೂ ಹೆಚ್ಚಿಸಿದಳು.
20
ಕತ್ತೆಗಳಂತೆ ಬೆದೆಯುಳ್ಳವರು, ಕುದುರೆಗಳಂತೆ ದಾಟುವವರು ಆದ ಕಸ್ದೀಯ ಮಿಂಡರನ್ನು ಮೋಹಿಸಿದಳು.
21
ಒಹೊಲೀಬಳೇ, ನಿನ್ನ ಪುಟ್ಟ ಮೊಲೆಗಳಿಗೆ ಆಸೆಬಿದ್ದ ಈಜಿಪ್ಟ್ರಿಂದ ತೊಟ್ಟುಗಳನ್ನು ಚಿವುಟಿಸಿಕೊಂಡ ನಿನ್ನ ತಾರುಣ್ಯದ ಕಾಮವನ್ನು ನೀನು ನೆನಪಿಗೆ ತಂದುಕೊಂಡು ಆ ಮಿಂಡರನ್ನು ಮೋಹಿಸಿದೆಯಲ್ಲವೆ?”
22
ಹೀಗಿರಲು, ಒಹೊಲೀಬಳೇ, ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - “ಇಗೋ, ಯಾವ ಮಿಂಡರಿಂದ ನಿನ್ನ ಆಸೆ ತೊಲಗಿತೋ ಆ ಮಿಂಡರನ್ನು ಅಂದರೆ, ಮನೋಹರ ಯುವಕರು, ಎಲ್ಲ ನಾಯಕ ಉಪನಾಯಕರು, ಪ್ರಭುಪ್ರಧಾನರು, ಅಶ್ವಾರೂಢರು ಆದ ಬಾಬಿಲೋನಿನವರು,
23
ಸಮಸ್ತ ಕಸ್ದೀಯರು, ಪಕೋದಿನವರು, ಷೋಯದವರು, ಕೋಯದವರು, ಇವರನ್ನೂ ಇವರೊಂದಿಗೆ ಅಸ್ಸೀರಿಯರೆಲ್ಲರನ್ನೂ ನಾನು ನಿನಗೆ ವಿರುದ್ಧ ಎಬ್ಬಿಸಿ, ಎಲ್ಲ ಕಡೆಯಿಂದಲೂ ನಿನ್ನ ಮೇಲೆ ಬೀಳುವಂತೆ ಮಾಡುವೆನು.
24
ಅವರು ಆಯುಧ, ರಥ, ಸರಕುಗಾಡಿ, ಜನಾಂಗಗಳ ಸಮೂಹ, ಇವುಗಳೊಂದಿಗೆ ನಿನ್ನ ಮೇಲೆ ಬೀಳುವರು; ಗುರಾಣಿ, ಖೇಡ್ಯ, ಶಿರಸ್ತ್ರಾಣ, ಇವುಗಳನ್ನು ಧರಿಸಿ, ನಿನಗೆ ವಿರುದ್ಧ ಸುತ್ತುಮುತ್ತಲು ವ್ಯೂಹ ಕಟ್ಟುವರು. ನ್ಯಾಯತೀರಿಸುವ ಅಧಿಕಾರವನ್ನು ನಾನು ಅವರಿಗೆ ಕೊಡುವೆನು; ಅವರು ತಮ್ಮ ನ್ಯಾಯಾನುಸಾರ ತೀರ್ಪುನೀಡಿ ನಿನ್ನನ್ನು ದಂಡಿಸುವರು.
25
ನಾನು ನನ್ನ ರೋಷವನ್ನು ನಿನ್ನ ಮೇಲೆ ಸುರಿಯಲು ಅವರು ನಿನ್ನಲ್ಲಿ ಕೋಪ ತೀರಿಸಿಕೊಳ್ಳುವರು; ನಿನ್ನ ಮೂಗುಕಿವಿಗಳನ್ನು ಕತ್ತರಿಸಿಬಿಡುವರು; ನಿನ್ನಲ್ಲಿ ಉಳಿದವರು ಖಡ್ಗಕ್ಕೆ ತುತ್ತಾಗುವರು; ನಿನ್ನ ಗಂಡು ಹೆಣ್ಣು ಮಕ್ಕಳನ್ನು ಅಪಹರಿಸುವರು; ನಿನ್ನ ಜನಶೇಷವು ಅಗ್ನಿಗೆ ಆಹುತಿಯಾಗುವುದು.
26
ನಿನ್ನ ವಸ್ತ್ರಗಳನ್ನು ಸೆಳೆದು, ನಿನ್ನ ಚಂದದ ಒಡವೆಗಳನ್ನು ಕಳಚಿಬಿಡುವರು.
27
ಹೀಗೆ ನಾನು ನಿನ್ನ ಲಂಪಟತನವನ್ನೂ ನೀನು ಈಜಿಪ್ಟಿನಲ್ಲಿ ಇದ್ದಂದಿನಿಂದ ನಡೆದುಬಂದ ನಿನ್ನ ಸೂಳೆತನವನ್ನೂ ನಿನ್ನಿಂದ ತೊಲಗಿಸುವೆನು. ಆಮೇಲೆ ನೀನು ಅವರ ಕಡೆಗೆ ಇನ್ನು ಕಣ್ಣೆತ್ತದೆ ಈಜಿಪ್ಟನ್ನು ನೆನಪಿಗೆ ತಂದುಕೊಳ್ಳಲಾರೆ.”
28
ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - “ಇಗೋ, ನೀನು ಯಾರನ್ನು ಹಗೆಮಾಡುತ್ತೀಯೋ ಯಾರ ಬಗ್ಗೆ ಅಸಹ್ಯಪಡುತ್ತಿಯೋ
29
ಅವರ ಕೈಗೆ ನಿನ್ನನ್ನು ನಾನು ಒಪ್ಪಿಸುವೆನು. ಅವರು ನಿನ್ನಲ್ಲಿ ಹಗೆ ತೀರಿಸಿಕೊಳ್ಳುವರು. ನೀನು ದುಡಿದದ್ದನ್ನೆಲ್ಲಾ ಅಪಹರಿಸಿ, ನಿನ್ನನ್ನು ಬಟ್ಟಬರಿದುಮಾಡಿ ಬಿಟ್ಟುಬಿಡುವರು; ಹೀಗೆ ನಾಚಿಕೆಗೀಡಾದ ನಿನ್ನ ಹಾದರವು, ಹೌದು, ನಿನ್ನ ಲಂಪಟತನ ಹಾಗು ಸೂಳೆತನ ಬಯಲಿಗೆ ಬರುವುವು.
30
ಈ ವಿಪತ್ತುಗಳು ನಿನಗೆ ಸಂಭವಿಸುವುದಕ್ಕೆ, ನೀನು ಜನಾಂಗಗಳನ್ನು ಮೋಹಿಸಿ ಅವರ ವಿಗ್ರಹಗಳಿಂದ ನಿನ್ನನ್ನೇ ಹೊಲಸುಮಾಡಿಕೊಂಡಿದ್ದೇ ಕಾರಣ.
31
ನೀನು ನಿನ್ನ ಅಕ್ಕನ ಹಾದಿಯಲ್ಲೆ ನಡೆದುಕೊಂಡದ್ದರಿಂದ ಅವಳು ಕುಡಿದ ಪಾತ್ರೆಯನ್ನೇ ನಿನ್ನ ಕೈಗೆ ಕೊಡುವೆನು.”
32
ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - “ಆಳವೂ ಅಗಲವೂ ಬಹಳ ಹಿಡಿಯುವುದೂ ಆದ ನಿನ್ನ ಅಕ್ಕನ ಪಾತ್ರೆಯಲ್ಲೇ ನೀನೂ ಕುಡಿದು ಹಾಸ್ಯಕ್ಕೂ ಕುಚೋದ್ಯಕ್ಕೂ ಗುರಿಯಾಗುವೆ. ಸಮಾರಿಯಳೆಂಬ ನಿನ್ನ ಅಕ್ಕನು ಕುಡಿದ ಬೆಚ್ಚುಬೆರಗಿನಾ ಕೊಡದಿಂದಲೇ
33
ನೀನೂ ಕುಡಿದು, ಕುಡಿದು ಪೂರಾ ಅಮಲೇರಿ ದುಃಖಭರಿತಳಾಗುವೆ. ಅದರಲ್ಲಿ ಒಂದು ತೊಟ್ಟನ್ನೂ ಉಳಿಸದೆ ಕುಡಿಯುವೆ.
34
ಅದರ ಬೋಕಿಗಳನ್ನು ಕಚ್ಚಿ, ನೆಕ್ಕಿ, ನಿನ್ನ ಮೊಲೆಗಳನ್ನು ಬಗೆದುಕೊಳ್ಳುವೆ. ಇದು ನನ್ನ ಅಪ್ಪಣೆ ಎಂಬುದೇ ಸರ್ವೇಶ್ವರನಾದ ದೇವರ ನುಡಿ.
35
ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ. ‘ನೀನು ನನ್ನನ್ನು ಮರೆತು, ನನಗೆ ಬೆನ್ನುಮಾಡಿದ್ದರಿಂದ ನಿನ್ನ ಲಂಪಟತನದ ಮತ್ತು ಸೂಳೆತನದ ಫಲವನ್ನು ಅನುಭವಿಸಬೇಕು.’
36
ಸರ್ವೇಶ್ವರ ನನಗೆ ಹೀಗೆ ಹೇಳಿದರು: “ನರಪುತ್ರನೇ, ಒಹೊಲಳಿಗೂ ಒಹೊಲೀಬಳಿಗೂ ನ್ಯಾಯತೀರಿಸಲು ನಿನ್ನ ಮನಸ್ಸು ಸ್ಥಿರವಾಗಿದೆಯೇ? ಹಾಗಾದರೆ ಅವರ ದುರಾಚಾರಗಳನ್ನು ಅವರಿಗೆ ತಿಳಿಸು.
37
ಅವರು ವ್ಯಭಿಚಾರಿಣಿಯರು, ಅವರ ಕೈ ರಕ್ತಸಿಕ್ತವಾಗಿದೆ, ತಮ್ಮ ವಿಗ್ರಹಗಳಿಂದ ವ್ಯಭಿಚಾರ ಮಾಡಿದ್ದಾರೆ, ನನಗೆ ಹೆತ್ತ ತಮ್ಮ ಗಂಡುಮಕ್ಕಳನ್ನು ಆ ವಿಗ್ರಹಗಳಿಗೆ ಬಲಿಯಾಗಿ ಆಹುತಿಕೊಟ್ಟಿದ್ದಾರೆ.
38
ಇದಲ್ಲದೆ, ನನಗೆ ಈ ಅಪರಾಧವನ್ನು ನಡೆಸಿದ್ದಾರೆ: ಆಹುತಿಕೊಟ್ಟ ದಿನದಲ್ಲೇ ನನ್ನ ಪವಿತ್ರಾಲಯವನ್ನು ಅಪವಿತ್ರಪಡಿಸಿ, ನಾನು ನೇಮಿಸಿದ ಸಬ್ಬತ್ ದಿನವನ್ನು ಅಶುದ್ಧ ಮಾಡಿದರು.
39
ತಮ್ಮ ಮಕ್ಕಳನ್ನು ಕೊಂದು, ತಮ್ಮ ವಿಗ್ರಹಗಳಿಗೆ ಅರ್ಪಿಸಿದ ದಿನದಲ್ಲೇ ನನ್ನ ಪವಿತ್ರಾಲಯವನ್ನು ಸೇರಿ ಅಪವಿತ್ರಮಾಡಿದರು; ಹೌದು, ನನ್ನ ಮಂದಿರದ ನಟ್ಟನಡುವೆ ಇದನ್ನು ನಡೆಸಿದರು.
40
“ಇಷ್ಟರಲ್ಲಿ ದೂತನನ್ನು ಕಳುಹಿಸಿ ಪುರುಷರನ್ನು ದೂರದಿಂದ ಕರೆಯಿಸಿಕೊಂಡರು. ಇಗೋ, ಅವರೂ ಬಂದರು. ಎಲೌ ಹೆಂಗಸೇ, ಅವರಿಗಾಗಿ ನೀನು ಸ್ನಾನಮಾಡಿ, ಕಣ್ಣಿಗೆ ಕಾಡಿಗೆ ಹಚ್ಚಿ,
41
ನಿನ್ನನ್ನು ಆಭರಣಗಳಿಂದ ಸಿಂಗರಿಸಿಕೊಂಡು ವೈಭವದ ಮಂಚದ ಮೇಲೆ ಕೂತಿರುವೆ. ಅದರ ಮುಂದೆ ಔತಣಕ್ಕೆ ಸಿದ್ಧವಾಗಿದ್ದ ಮೇಜಿನ ಮೇಲೆ ನನ್ನ ಧೂಪತೈಲಗಳನ್ನು ಇಟ್ಟಿರುವೆ.
42
ಅಲ್ಲಿ ವಿನೋದ ಪ್ರಿಯರ ದೊಡ್ಡ ಗುಂಪಿನವರ ಕಳಕಳವಾಯಿತು; ಅರಣ್ಯದಿಂದ ಕರೆಯಿಸಿಕೊಂಡ ಕುಡುಕರು ನಾಡಾಡಿಗರೊಂದಿಗೆ ಸೇರಿ ಅಸ್ಸೀರಿಯರಿಬ್ಬರ ಕೈಗೆ ಕಡಗವನ್ನು ತೊಡಿಸಿ, ಅವರ ತಲೆಗೆ ಸುಂದರ ಕಿರೀಟವನ್ನಿಟ್ಟರು.
43
ಆಗ ನಾನು - ‘ಆಹಾ, ಕಳೆಗುಂದಿದವಳಿಗೆ ಇನ್ನೂ ವ್ಯಭಿಚಾರವೇ! ಇವರು ಅವಳೊಂದಿಗೆ ಅವಳು ಇವರೊಂದಿಗೆ ಜಾರತನ ಮಾಡುತ್ತಾರಲ್ಲಾ’ ಎಂದುಕೊಂಡೆ.
44
ಸೂಳೆಯನ್ನು ಸೇರುವ ಹಾಗೆ ಈ ಜನರು ಅವಳನ್ನು ಸೇರಿದರು; ಹೌದು, ಕೆಟ್ಟಹೆಂಗಸರಾದ ಒಹೊಲಳನ್ನೂ ಒಹೊಲೀಬಳನ್ನೂ ಸೇರಿದರು.
45
ಸದ್ಧರ್ಮಿಗಳು ಅವರಿಗೆ ನ್ಯಾಯತೀರಿಸಿ ವ್ಯಭಿಚಾರಿಣಿಯರಿಗೂ ರಕ್ತಹರಿಸುವ ಹೆಂಗಸರಿಗೂ ತಕ್ಕ ದಂಡನೆಯನ್ನು ವಿಧಿಸುವರು; ಅವರು ವ್ಯಭಿಚಾರಿಣಿಯರು, ಅವರ ಕೈ ರಕ್ತಸಿಕ್ತವಾಗಿದೆ.”
46
ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - “ನಾನು ಈ ಹೆಂಗಸರ ದಂಡನೆಗಾಗಿ ಸಭೆಯನ್ನು ಸೇರಿಸುವೆನು. ಇವರನ್ನು ಸೂರೆಗೆ ಒಳಗಾಗಿಸಿ ಎಲ್ಲರಿಗೂ ಭಯಾಸ್ಪದವಾಗುವಂತೆ ಮಾಡುವೆನು.
47
ಸಭೆಯವರು ಇವರ ಮೇಲೆ ಕಲ್ಲುತೂರಿ, ಕತ್ತಿಗಳಿಂದ ಸಂಹರಿಸಿ, ಇವರ ಗಂಡುಹೆಣ್ಣು ಮಕ್ಕಳನ್ನು ಕೊಂದು, ಇವರ ಮನೆಗಳನ್ನು ಬೆಂಕಿಯಿಂದ ಸುಟ್ಟುಬಿಡುವರು.
48
ಹೀಗೆ ನಾನು ನಾಡಿನೊಳಗಿಂದ ಲಂಪಟತನವನ್ನು ತೊಲಗಿಸುವೆನು; ಇದರಿಂದ ಸಮಸ್ತ ಮಹಿಳೆಯರಿಗೂ ನಿಮ್ಮ ಲಂಪಟತನವನ್ನೂ ಅನುಸರಿಸಬಾರದೆಂಬ ಬುದ್ಧಿ ಬರುವುದು.
49
ನಿಮ್ಮ ಲಂಪಟತನದ ಫಲವನ್ನು ನಿಮಗೇ ತಿನ್ನಿಸುವರು; ನಿಮ್ಮ ವಿಗ್ರಹಗಳಿಂದಾದ ನಿಮ್ಮ ಪಾಪದ ಫಲವನ್ನು ನೀವು ಅನುಭವಿಸಿ, ನಾನೇ ಸರ್ವೇಶ್ವರನಾದ ದೇವರು ಎಂದು ತಿಳಿದುಕೊಳ್ಳುವಿರಿ.”
← Chapter 22
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 32
Chapter 33
Chapter 34
Chapter 35
Chapter 36
Chapter 37
Chapter 38
Chapter 39
Chapter 40
Chapter 41
Chapter 42
Chapter 43
Chapter 44
Chapter 45
Chapter 46
Chapter 47
Chapter 48
Chapter 24 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48