bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
Ezekiel 41
Ezekiel 41
Kannada Bible (KNCL) BSI 2016
← Chapter 40
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 32
Chapter 33
Chapter 34
Chapter 35
Chapter 36
Chapter 37
Chapter 38
Chapter 39
Chapter 40
Chapter 41
Chapter 42
Chapter 43
Chapter 44
Chapter 45
Chapter 46
Chapter 47
Chapter 48
Chapter 42 →
1
ಆಮೇಲೆ ಆ ಪುರುಷ ನನ್ನನ್ನು ಪರಿಶುದ್ಧಸ್ಥಳಕ್ಕೆ ತಂದು ಅದನ್ನು ಅಳೆಯಲು ಅದರ ಎದುರುಬದುರಿನ ನಿಲವುಕಂಬಗಳ ಅಗಲ ದೇವರ ಗುಡಾರದ ಅಗಲದಂತೆ ಮೂರು ಮೂರು ಮೀಟರ್,
2
ದ್ವಾರದ ಅಗಲ ಐದು ಮೀಟರು ದ್ವಾರದ ಎರಡು ಪಕ್ಕದ ಗೋಡೆಗಳ ಅಗಲ ಎರಡುವರೆ ಎರಡುವರೆ ಮೀಟರ್, ಪರಿಶುದ್ಧ ಸ್ಥಳದ ಉದ್ದ ಇಪ್ಪತ್ತು ಮೀಟರ್, ಅಗಲ ಹತ್ತು ಮೀಟರ್ ಇದ್ದವು.
3
ಆಮೇಲೆ ಆ ಪುರುಷ ಇನ್ನೂ ಮುಂದಕ್ಕೆ ಹೋಗಿ ಪರಿಶುದ್ಧ ಸ್ಥಳದ ಕೊನೆಯಲ್ಲಿ ಗರ್ಭಗೃಹವನ್ನು ಅಳೆಯಲು ದ್ವಾರದ ಒಂದೊಂದು ನಿಲವುಕಂಬದ ಅಗಲ ಒಂದೊಂದು ಮೀಟರ್, ದ್ವಾರದ ಅಗಲ ಮೂರು ಮೀಟರ್.
4
ದ್ವಾರದ ಪಕ್ಕದ ಗೋಡೆಗಳ ಅಗಲ ಮೂರುವರೆ ಮೂರುವರೆ ಮೀಟರ್, ಗರ್ಭ ಗೃಹದ ಉದ್ದ ಹತ್ತು ಮೀಟರ್, ಅಗಲ ಹತ್ತು ಮೀಟರ್ ಇದ್ದವು. ಆಗ ಅವನು ನನಗೆ, “ಇದು ಮಹಾಪರಿಶುದ್ಧ ಸ್ಥಳ,” ಎಂದು ಹೇಳಿದನು.
5
ಆಮೇಲೆ ಆ ಪುರುಷ ಅಳೆಯಲು ದೇವಸ್ಥಾನದ ಗೋಡೆಯ ಅಗಲ ಮೂರು ಮೀಟರ್. ದೇವಸ್ಥಾನದ ಸುತ್ತುಮುತ್ತಲು ಎಲ್ಲಕಡೆ ಅದರ ಪಕ್ಕಗಳಿಗೆ ಅಂಟಿಕೊಂಡಿದ್ದ ಕೊಠಡಿಗಳ ಅಗಲ ಎರಡೆರಡು ಮೀಟರ್ ಇದ್ದವು.
6
ಆ ಕೊಠಡಿಗಳು ಒಂದರ ಮೇಲೆ ಮೇಲೊಂದು ಮೂರಂತಸ್ತಾಗಿದ್ದವು. ಒಂದೊಂದು ಅಂತಸ್ತಿನಲ್ಲಿ ಮೂವತ್ತು ಮೂವತ್ತು ಕೊಠಡಿಗಳಿದ್ದವು. ದೇವಸ್ಥಾನದ ಗೋಡೆಯನ್ನು ಮೆಟ್ಟಲು ಮೆಟ್ಟಲಾಗಿ ಕಟ್ಟಲಾಗಿತ್ತು. ಗೋಡೆಯಲ್ಲಿ ತೂತಿಲ್ಲದೆ ಆ ಮೆಟ್ಟಲುಗಳೇ ಸುತ್ತಣ ಕೊಠಡಿಗಳ ತೊಲೆಗಳಿಗೆ ಆಧಾರವಾಗಿದ್ದವು.
7
ಸುತ್ತಣ ಅಂತಸ್ತುಗಳು ಮೇಲೆ ಮೇಲೆ ಹೋದಹಾಗೆಲ್ಲಾ ಆಯಾ ಕೊಠಡಿಗಳ ಅಗಲವು ಹೆಚ್ಚುತ್ತಾ ಬಂದಿತು; ಅವು ದೇವಸ್ಥಾನವನ್ನು ಸುತ್ತಿಕೊಂಡು ಮೇಲೆ ಮೇಲೆ ಹೋದಹಾಗೆಲ್ಲಾ ಅದನ್ನು ಬಿಗಿಬಿಗಿಯಾಗಿ ತಬ್ಬಿಕೊಂಡಂತೆ ಇದ್ದವು. ಹೀಗೆ ಮೇಲು ಮೇಲಿನ ಅಂತಸ್ತುಗಳು ದೇವಸ್ಥಾನದ ಕಡೆಗೆ ಅಗಲವಾಗುತ್ತಾ ಬಂದವು; ಕೆಳಗಣ ಅಂತಸ್ತಿನಿಂದ ನಡುವಣ ಅಂತಸ್ತಿನ ಮಾರ್ಗವಾಗಿ ಮೇಲಣ ಅಂತಸ್ತಿಗೆ ಹತ್ತುತ್ತಿದ್ದರು.
8
ದೇವಸ್ಥಾನದ ಸುತ್ತಮುತ್ತಲು ಒಂದು ಜಗಲಿ ಕಾಣಿಸಿತು. ಅದು ಕೊಠಡಿಗಳಿಗೆ ತಳಹದಿಯಾಗಿ ನೆಲಮಟ್ಟದಿಂದ ಮೂರು ಮೀಟರ್ ಅಳತೇ ಕೋಲಿನಷ್ಟು ಎತ್ತರವಾಗಿತ್ತು.
9
ಕೊಠಡಿಗಳ ಹೊರಗೋಡೆಯ ದಪ್ಪ ಎರಡುವರೆ ಮೀಟರಿತ್ತು.
10
ದೇವಸ್ಥಾನಕ್ಕೆ ಅಂಟಿಕೊಂಡ ಆ ಕೊಠಡಿಗಳಿಗೂ ದೀಕ್ಷಿತ ಯಾಜಕರ ಕೋಣೆಗಳಿಗೂ ನಡುವೆ ದೇವಸ್ಥಾನದ ಸುತ್ತುಮುತ್ತಲೂ ಹತ್ತು ಮೀಟರ್ ಅಂತರವಿತ್ತು.
11
ಆ ಎಲ್ಲ ಕೊಠಡಿಗಳ ಪ್ರವೇಶಕ್ಕೂ ಎರಡೇ ಬಾಗಿಲು, ಉತ್ತರ ದಕ್ಷಿಣಕ್ಕೊಂದೊಂದು. ಅವೆರಡೂ ಜಗಲಿಯ ಕಡೆಗಿದ್ದವು; ಆ ಜಗಲಿ ಎಲ್ಲ ಕಡೆ ಎರಡುವರೆ ಮೀಟರ್ ಅಗಲವಾಗಿತ್ತು.
12
ಪಶ್ಚಿಮದಲ್ಲಿ ದೀಕ್ಷಿತರ ಪ್ರಾಕಾರದ ಹಿಂದಿನ ಶಾಲೆಯ ಅಗಲ ಮೂವತ್ತೈದು ಮೀಟರ್, ಉದ್ದ ನಲವತ್ತೈದು ಮೀಟರ್, ಅದರ ಗೋಡೆಯ ದಪ್ಪ ಎರಡುವರೆ ಮೀಟರ್.
13
ಆ ಪುರುಷ ಅಳೆದಾಗ ದೇವಸ್ಥಾನದ ಉದ್ದ ಐವತ್ತು ಮೀಟರ್, ದೀಕ್ಷಿತರ ಪ್ರಾಕಾರ, ಶಾಲೆಶಾಲೆಯ ಗೋಡೆಗಳು, ಇವುಗಳ ಒಟ್ಟಗಲ ಐವತ್ತು ಮೀಟರ್.
14
ಪೂರ್ವದಲ್ಲಿನ ದೇವಸ್ಥಾನದ ಮುಖ, ದೀಕ್ಷಿತರ ಪ್ರಾಕಾರ, ಇವುಗಳ ಒಟ್ಟಗಲ ಐವತ್ತು ಮೀಟರ್ ಇದ್ದವು.
15
ಅವನು ದೀಕ್ಷಿತರ ಪ್ರಾಕಾರದ ಹಿಂದಿನ ಶಾಲೆಯನ್ನು ಆ ಪ್ರಾಕಾರದ ಕಡೆಯಲ್ಲಿ ಅಳೆಯಲು ಅದರ ಉದ್ದ ಎರಡು ಪಕ್ಕದ ಗೋಡೆಗಳ ಸಹಿತ ಐವತ್ತು ಮೀಟರಿತ್ತು.
16
ಗರ್ಭಗೃಹ, ಪ್ರಾಕಾರದಲ್ಲಿನ ದ್ವಾರಮಂಟಪಗಳು, ಹೊಸ್ತಿಲುಗಳು, ತೆರೆಯಲಾಗದ ಕಿಟಕಿಗಳು, ಹೊಸ್ತಿಲಿನ ಎದುರಿಗೆ ಮೂರಂತಸ್ತಾಗಿ ಸುತ್ತಲು ಕಟ್ಟಲಾಗಿದ್ದ ಗೋಡೆಯಟ್ಟಗಳು, ಇವುಗಳನ್ನೂ ಅಳೆದನು.
17
ನೆಲದಿಂದ ಕಿಟಕಿಗಳವರೆಗೂ ದ್ವಾರದ ಮೇಲೂ ಗರ್ಭಗೃಹದ ಮತ್ತು ಈಚಿನ ಗೃಹದ ಗೋಡೆಗೆಲ್ಲಾ ಸುತ್ತುಮುತ್ತಲು ಹಲಗೆಗಳನ್ನು ಚೌಕಚೌಕವಾಗಿ ಹೊದಿಸಲಾಗಿತ್ತು. ಕಿಟಕಿಗಳ ಪಕ್ಕಗಳಿಗೂ ಹಲಿಗೆಯ ಹೊದಿಕೆಯಿತ್ತು.
18
ಆ ಚೌಕಗಳಲ್ಲಿ ಕೆರೂಬಿಗಳೂ ಖರ್ಜೂರ ವೃಕ್ಷಗಳೂ ಚಿತ್ರಿತವಾಗಿದ್ದವು; ಎರಡೆರಡು ಕೆರೂಬಿಗಳ ನಡುವೆ ಒಂದೊಂದು ಖರ್ಜೂರ ವೃಕ್ಷ; ಒಂದೊಂದು ಕೆರೂಬಿಗೆ ಎರಡೆರಡು ಮುಖ;
19
ಖರ್ಜೂರ ವೃಕ್ಷದ ಒಂದು ಪಕ್ಕವು ಮನುಷ್ಯಮುಖಕ್ಕೆ ಎದುರು, ಇನ್ನೊಂದು ಪಕ್ಕವು ಸಿಂಹಮುಖಕ್ಕೆ ಎದುರು; ದೇವಸ್ಥಾನದ ಒಳಭಾಗವೆಲ್ಲಾ ಸುತ್ತಮುತ್ತ ಹೀಗೆ ಚಿತ್ರಮಯವಾಗಿತ್ತು.
20
ನೆಲದಿಂದ ದಾರವಂದದ ಮೇಲ್ಮಟ್ಟದ ತನಕ ಕೆರೂಬಿಗಳೂ ಖರ್ಜೂರ ವೃಕ್ಷಗಳೂ ಚಿತ್ರಿತವಾಗಿದ್ದವು.
21
ಪರಿಶುದ್ಧಸ್ಥಳದ ಈಚಿನ ಗೋಡೆಯ ಬಾಗಿಲ ಚೌಕಟ್ಟು ಚಚ್ಚೌಕವಾಗಿತ್ತು; ಮಹಾಪರಿಶುದ್ಧ ಸ್ಥಳದ ಈಚಿನ ಗೋಡೆಯ ಚೌಕಟ್ಟು ಹಾಗೆಯೇ ಇತ್ತು.
22
ಅಲ್ಲಿ ಮರದ ವೇದಿಕೆಯೊಂದಿತ್ತು: ಅದರ ಎತ್ತರ ಒಂದೂವರೆ ಮೀಟರ್, ಉದ್ದ ಒಂದು ಮೀಟರ್; ಅದರ ಮೂಲೆಗಳು, ಪೀಠ ಹಾಗು ಪಕ್ಕೆಗಳು ಮರದ್ದೇ ಆಗಿದ್ದವು. ಆ ಪುರುಷ ನನಗೆ, “ಇದು ಸರ್ವೇಶ್ವರನ ಸಮ್ಮುಖದ ಮೇಜು,” ಎಂದು ಹೇಳಿದನು.
23
ಪರಿಶುದ್ಧ ಸ್ಥಳದ ಮತ್ತು ಮಹಾಪರಿಶುದ್ಧ ಸ್ಥಳದ ಬಾಗಿಲುಗಳಿಗೆ ಎರಡೆರಡು ಕದಗಳು,
24
ಒಂದೊಂದು ಕದಕ್ಕೆ ಎರಡೆರಡು ಮಡಚುವ ಭಾಗಗಳು; ಇತ್ತಕಡೆಯ ಕದಕ್ಕೆ ಎರಡು ಭಾಗ; ಅತ್ತಕಡೆಯ ಕದಕ್ಕೆ ಎರಡು ಭಾಗ ಇದ್ದವು.
25
ಆ ಕದಗಳಲ್ಲಿ, ಅಂದರೆ ಪರಿಶುದ್ಧ ಸ್ಥಳದ ಕದಗಳಲ್ಲಿ ಕೆರೂಬಿಗಳು ಹಾಗು ಖರ್ಜೂರ ವೃಕ್ಷಗಳು ಗೋಡೆಗಳಲ್ಲಿ ಚಿತ್ರಿತವಾಗಿದ್ದ ಹಾಗೆಯೇ ಚಿತ್ರಿತವಾಗಿದ್ದವು. ದ್ವಾರಮಂಟಪದ ಹೊರಗಡೆ ಮರದ ಸೂರು ಇತ್ತು.
26
ದ್ವಾರಮಂಟಪದ ಪಕ್ಕದ ಗೋಡೆಗಳಲ್ಲಿ ತೆರೆಯಲಾಗದ ಕಿಟಕಿಗಳೂ ಚಿತ್ರಿತ ಖರ್ಜೂರ ವೃಕ್ಷಗಳೂ ಇದ್ದವು.
← Chapter 40
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 32
Chapter 33
Chapter 34
Chapter 35
Chapter 36
Chapter 37
Chapter 38
Chapter 39
Chapter 40
Chapter 41
Chapter 42
Chapter 43
Chapter 44
Chapter 45
Chapter 46
Chapter 47
Chapter 48
Chapter 42 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48