bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
Judges 1
Judges 1
Kannada Bible (KNCL) BSI 2016
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 2 →
1
ಯೆಹೋಶುವನು ಮರಣಹೊಂದಿದ ಬಳಿಕ ಇಸ್ರಯೇಲರು ಕಾನಾನ್ಯರೊಡನೆ ಯುದ್ಧಮಾಡಲು ತಮ್ಮಲ್ಲಿ ಯಾವ ಕುಲ ಮುಂದಾಗಿ ಹೋಗಬೇಕೆಂದು ಸರ್ವೇಶ್ವರಸ್ವಾಮಿಯನ್ನು ವಿಚಾರಿಸಿದರು.
2
“ಯೆಹೂದ ಕುಲ ಹೋಗಲಿ; ಇಗೋ, ನಾಡನ್ನು ಅವರ ಕೈಗೆ ಒಪ್ಪಿಸಿದ್ದೇನೆ,” ಎಂದರು ಸರ್ವೇಶ್ವರ.
3
ಆಗ ಯೆಹೂದಕುಲದವರು ತಮ್ಮ ಸೋದರರಾದ ಸಿಮೆಯೋನ್ಯರಿಗೆ, “ಕಾನಾನ್ಯರೊಡನೆ ಯುದ್ಧಮಾಡಲು ನೀವೂ ನಮ್ಮ ಸಂಗಡ ಸ್ವಂತಪ್ರಾಂತ್ಯಕ್ಕೆ ಬನ್ನಿ; ಅನಂತರ ನಾವೂ ನಿಮ್ಮ ಸಂಗಡ ನಿಮ್ಮ ಸ್ವಂತಪ್ರಾಂತ್ಯಕ್ಕೆ ಬರುತ್ತೇವೆ,” ಎಂದು ಹೇಳಿದರು.
4
ಅವರು ಒಪ್ಪಿ ಯೆಹೂದ ಕುಲದವರ ಜೊತೆ ಯುದ್ಧಕ್ಕೆ ಹೋದರು. ಸರ್ವೇಶ್ವರ ಕಾನಾನ್ಯರನ್ನು ಹಾಗು ಪೆರಿಜ್ಜೀಯರನ್ನು ಅವರ ಕೈವಶ ಮಾಡಲು ಅವರು ಹತ್ತುಸಾವಿರ ಶತ್ರುಗಳನ್ನು ಬೆಜೆಕಿನಲ್ಲಿ ಸೋಲಿಸಿದರು.
5
ಅದೋನೀಬೆಜೆಕನನ್ನು ಅಲ್ಲಿ ಎದುರುಗೊಂಡು ಯುದ್ಧಮಾಡಿ ಸೋಲಿಸಿದರು.
6
ಅದೋನೀಬೆಜೆಕನು ಅಲ್ಲಿಂದ ಓಡಿಹೋಗುತ್ತಿರುವಾಗ ಅವನನ್ನು ಹಿಂದಟ್ಟಿ ಹಿಡಿದು ಅವನ ಕೈಕಾಲುಗಳ ಹೆಬ್ಬೆರಳುಗಳನ್ನು ಕತ್ತರಿಸಿಬಿಟ್ಟರು.
7
ಆಗ ಅದೋನೀಬೆಜೆಕನು, “ಎಪ್ಪತ್ತು ಮಂದಿ ಅರಸರ ಕೈಕಾಲುಗಳ ಹೆಬ್ಬೆರಳುಗಳನ್ನು ನಾನು ಕತ್ತರಿಸಿದೆ; ನನ್ನ ಊಟದ ಮೇಜಿನ ಕೆಳಗೆ ಬೀಳುತ್ತಿದ್ದ ಚೂರುಪಾರುಗಳನ್ನು ಅವರು ತಿನ್ನುತ್ತಿದ್ದರು; ನಾನು ಅವರಿಗೆ ಮಾಡಿದಂತೆಯೇ ದೇವರು ನನಗೆ ಮಾಡಿದ್ದಾರೆ,” ಎಂದನು. ಅವನನ್ನು ಜೆರುಸಲೇಮಿಗೆ ಕರೆತರಲು ಅವನು ಅಲ್ಲೇ ನಿಧನನಾದನು.
8
ಯೆಹೂದ ಕುಲದವರು ಜೆರುಸಲೇಮಿನೊಡನೆ ಯುದ್ಧಮಾಡಿದರು. ಆ ಜನರನ್ನು ಕತ್ತಿಗೆ ತುತ್ತಾಗಿಸಿ ಅವರ ಪಟ್ಟಣವನ್ನು ಸುಟ್ಟುಹಾಕಿದರು.
9
ಅನಂತರ ಅವರು ಪರ್ವತಪ್ರದೇಶ, ದಕ್ಷಿಣಸೀಮೆ ಮತ್ತು ತಗ್ಗುಪ್ರದೇಶ ಇವುಗಳಿಗೆ ಹೋಗಿ ಅಲ್ಲಿದ್ದ ಕಾನಾನ್ಯರೊಡನೆ ಯುದ್ಧಮಾಡಿದರು.
10
‘ಕಿರ್ಯತರ್ಬ’ ಎಂದು ಈ ಮುಂದೆ ಹೆಸರುಗೊಂಡಿದ್ದ ಹೆಬ್ರೋನಿಗೆ ಹೋಗಿ ಅಲ್ಲಿದ್ದ ಕಾನಾನ್ಯರ ಮೇಲೆ ದಾಳಿಮಾಡಿ ಅವರಲ್ಲಿ ಶೇಷೈ, ಅಹೀಮನ್, ತಲ್ಮೈ ಎಂಬವರನ್ನು ಸೋಲಿಸಿದರು.
11
ಅಲ್ಲಿಂದ ದೆಬೀರಿನವರೆಗೆ ತೆರಳಿ ಅಲ್ಲಿಯವರ ವಿರುದ್ಧ ಯುದ್ಧಮಾಡಿದರು. ದೆಬೀರಕ್ಕೆ ಇದಕ್ಕೆ ಮುಂಚೆ ‘ಕಿರ್ಯತ್ ಸೇಫೆರ್’ ಎಂಬ ಹೆಸರಿತ್ತು.
12
ಕಿರ್ಯತ್ ಸೇಫೆರನ್ನು ಹಿಡಿದುಕೊಳ್ಳುವವನಿಗೆ ತನ್ನ ಮಗಳು ‘ಅಕ್ಷಾ’ ಎಂಬಾಕೆಯನ್ನು ಕೊಟ್ಟು ಮದುವೆ ಮಾಡುವುದಾಗಿ ಕಾಲೇಬನು ಹೇಳಿದ್ದನು.
13
ಅಂತೆಯೇ ಅವನ ತಮ್ಮನೂ ಕೆನಜನ ಮಗನೂ ಆದ ಒತ್ನೀಯೇಲನು ಅದನ್ನು ಹಿಡಿದುಕೊಂಡಾಗ ಕಾಲೇಬನು ತನ್ನ ಮಗಳು ಅಕ್ಷಾ ಎಂಬಾಕೆಯನ್ನು ಆತನಿಗೆ ಮದುವೆಮಾಡಿಕೊಟ್ಟನು.
14
ಆಕೆ ಬಂದಾಗ ತನ್ನ ತಂದೆಯ ಬಳಿ ಭೂಮಿಯನ್ನು ಕೇಳುವಂತೆ ಗಂಡನನ್ನು ಪ್ರೇರೇಪಿಸಿದಳು. ಆಕೆ ಕತ್ತೆಯಿಂದ ಇಳಿಯುವಾಗ ಕಾಲೇಬನು, “ನಿನಗೇನು ಬೇಕು,” ಎಂದು ಕೇಳಲು ಅವಳು, “ನನ್ನನ್ನು ಬೆಂಗಾಡಿಗೆ ಕೊಟ್ಟುಬಿಟ್ಟಿರಿ,
15
ಬುಗ್ಗೆಗಳಿರುವ ಭೂಮಿಯನ್ನು ದಾನವಾಗಿ ಕೊಡಿ,” ಎಂದಳು. ಕಾಲೇಬನು ಆಕೆಗೆ ಮೇಲಿನ ಹಾಗು ಕೆಳಗಿನ ಬುಗ್ಗೆಗಳನ್ನು ದಾನ ಮಾಡಿದನು.
16
ಕೇನ್ಯನೂ ಮೋಶೆಯ ಮಾವನೂ ಆದ ಹೋಬಾಬನ ವಂಶದವರು ಖರ್ಜೂರ ನಗರದಿಂದ ಹೊರಟು ಯೆಹೂದ ಕುಲದವರ ಜೊತೆಯಲ್ಲಿ ಆರಾದಿನ ದಕ್ಷಿಣದಲ್ಲಿರುವ ಯೆಹೂದ ಮರುಭೂಮಿಗೆ ಬಂದು ಅಲ್ಲಿಯ ಜನರ ಸಂಗಡ ವಾಸಮಾಡಿದರು.
17
ತರುವಾಯ ಯೆಹೂದಕುಲದವರು ತಮ್ಮ ಬಂಧುಗಳಾದ ಸಿಮೆಯೋನ್ ಕುಲದವರ ಸಂಗಡ ಹೋಗಿ ‘ಚೆಫತ್’ ಎಂಬ ಪಟ್ಟಣದಲ್ಲಿದ್ದ ಕಾನಾನ್ಯರನ್ನು ಸೋಲಿಸಿ ಆ ಪಟ್ಟಣವನ್ನು ಹಾಳುಮಾಡಿ ಅದನ್ನು ‘ಹೋರ್ಮಾ’ ಎಂದು ಕರೆದರು.
18
ಅನಂತರ ಅವರು ಗಾಜಾ, ಅಷ್ಕೆಲೋನ್, ಎಕ್ರೋನ್ ಎಂಬ ಪಟ್ಟಣಗಳನ್ನೂ ಅವುಗಳ ಮೇರೆಗಳನ್ನೂ ಸ್ವಾಧೀನಮಾಡಿಕೊಂಡರು.
19
ಸರ್ವೇಶ್ವರ ಯೆಹೂದಕುಲದವರ ಸಂಗಡ ಇದ್ದುದರಿಂದ ಅವರು ಪರ್ವತ ಪ್ರದೇಶಗಳನ್ನೆಲ್ಲಾ ಸ್ವತಂತ್ರಿಸಿಕೊಂಡರು. ಆದರೆ ತಗ್ಗಿನ ಪ್ರದೇಶಗಳಲ್ಲಿ ವಾಸಿಸುವವರಿಗೆ ಕಬ್ಬಿಣ ರಥಗಳಿದ್ದುದರಿಂದ ಅವರನ್ನು ಹೊರಗಟ್ಟಲು ಆಗಲಿಲ್ಲ.
20
ಮೋಶೆ ಆಜ್ಞಾಪಿಸಿದಂತೆ ಅವರು ಕಾಲೇಬನಿಗೆ ಹೆಬ್ರೋನ್ ಪಟ್ಟಣವನ್ನು ಕೊಟ್ಟರು; ಅವನು ಅನಾಕನ ಮೂರು ಮಂದಿ ಮಕ್ಕಳನ್ನು ಅಲ್ಲಿಂದ ಅಟ್ಟಿಬಿಟ್ಟನು.
21
ಜೆರುಸಲೇಮಿನಲ್ಲಿದ್ದ ಯೆಬೂಸಿಯರನ್ನು ಹೊರಡಿಸಲು ಬೆನ್ಯಾಮೀನ್ಯರಿಂದ ಆಗದೆಹೋಯಿತು. ಅವರು ಇಂದಿನವರೆಗೂ, ಬೆನ್ಯಾಮೀನ್ಯರ ಸಂಗಡ ಜೆರುಸಲೇಮಿನಲ್ಲೇ ವಾಸವಾಗಿ ಇದ್ದಾರೆ.
22
ಇವರ ಹಾಗೆಯೇ ಜೋಸೆಫನ ಕುಲದವರು ಹೊರಟು ಬೇತೇಲಿಗೆ ಬಂದರು. ಸರ್ವೇಶ್ವರಸ್ವಾಮಿ ಅವರೊಂದಿಗೆ ಇದ್ದರು.
23
ಅವರು ‘ಲೂಜ್’ ಎಂದು ಕರೆಯಲಾದ ಬೇತೇಲ್ ಊರನ್ನು ಸಂಚರಿಸಿ ನೋಡಲು ಗೂಢಚಾರರನ್ನು ಕಳುಹಿಸಿದರು.
24
ಇವರು ಆ ಊರೊಳಗಿಂದ ಬರುತ್ತಿದ್ದ ಒಬ್ಬ ವ್ಯಕ್ತಿಯನ್ನು ಕಂಡು, “ದಯಮಾಡಿ, ಪಟ್ಟಣದೊಳಗೆ ನುಗ್ಗಬಹುದಾದ ದಾರಿಯನ್ನು ನಮಗೆ ತೋರಿಸಿಕೊಡು; ನಾವು ನಿನಗೆ ಒಳ್ಳೆಯದನ್ನೇ ಮಾಡುತ್ತೇವೆ,” ಎಂದರು. ಅವನು ಅವರಿಗೆ ಆ ದಾರಿಯನ್ನು ತೋರಿಸಿದನು.
25
ಹೀಗೆ ಅವರು ಆ ಪಟ್ಟಣವನ್ನು ಕತ್ತಿಗೆ ತುತ್ತಾಗಿಸಿದರು. ಆದರೆ ಆ ವ್ಯಕ್ತಿಯನ್ನು ಮತ್ತು ಅವನ ಕುಟುಂಬದವರನ್ನು ಕಳುಹಿಸಿಬಿಟ್ಟರು.
26
ಅವನು ಹಿತ್ತಿಯರ ದೇಶಕ್ಕೆ ಹೋಗಿ ಒಂದು ಪಟ್ಟಣವನ್ನು ಕಟ್ಟಿಕೊಂಡು ಅದಕ್ಕೆ ‘ಲೂಜ್’ ಎಂದು ಹೆಸರಿಟ್ಟನು. ಅದಕ್ಕೆ ಇಂದಿನವರೆಗೂ ಅದೇ ಹೆಸರು ಉಳಿದಿದೆ.
27
ಮನಸ್ಸೆಕುಲದವರು ಬೇತ್ ಷೆಯಾನ್, ತಾನಾಕ್, ದೋರ್, ಇಬ್ಲೆಯಾಮ್, ಮೆಗಿದ್ದೋ ಎಂಬ ಪಟ್ಟಣಗಳನ್ನೂ ಅವುಗಳ ಗ್ರಾಮಗಳನ್ನೂ ಸ್ವಾಧೀನಮಾಡಿಕೊಳ್ಳಲಿಲ್ಲ, ಆದುದರಿಂದ ಕಾನಾನ್ಯರು ಆ ಪ್ರಾಂತ್ಯಗಳಲ್ಲೇ ವಾಸಿಸುವುದಕ್ಕೆ ನಿರ್ಧರಿಸಿಕೊಂಡರು.
28
ಇಸ್ರಯೇಲರು ಬಲಗೊಂಡ ಮೇಲೆ ಅವರನ್ನು ದಾಸತ್ವದಲ್ಲಿ ಇಟ್ಟುಕೊಂಡರೇ ಹೊರತು ಅಲ್ಲಿಂದ ಅಟ್ಟಿಬಿಡಲಿಲ್ಲ.
29
ಎಫ್ರಯಿಮ್ ಕುಲದವರು ಗೆಜೆರಿನಲ್ಲಿದ್ದ ಕಾನಾನ್ಯರನ್ನು ಹೊರಡಿಸಿಬಿಡಲಿಲ್ಲ. ಆದುದರಿಂದ ಅವರು ಅವರ ನಡುವೆಯೇ ವಾಸಿಸಿದರು.
30
ಜೆಬುಲೂನ್ ಕುಲದವರು ಕಿಟ್ರೋನ್, ನಹಲೋಲ್ ಎಂಬ ಪಟ್ಟಣಗಳ ನಿವಾಸಿಗಳನ್ನು ಅಟ್ಟಿಬಿಡಲಿಲ್ಲ. ಆದರೆ ಆ ಕಾನಾನ್ಯರು ಅವರಿಗೆ ಗುಲಾಮರಾಗಿ ಅವರ ಮಧ್ಯದಲ್ಲೇ ವಾಸಮಾಡಿದರು.
31
ಆಶೇರ್ಯ ಕುಲದವರು ಆಕ್ಕೋ, ಚೀದೋನ್, ಆಹ್ಲಾಬ್, ಅಕ್ಜೀಬ್, ಹೆಲ್ಬಾ, ರೆಹೋಬ್ ಎಂಬ ಪಟ್ಟಣಗಳನ್ನು ಸ್ವಾಧೀನಮಾಡಿಕೊಳ್ಳಲಿಲ್ಲ;
32
ಅವರು ಆ ದೇಶದ ಕಾನಾನ್ಯರನ್ನು ಹೊರಡಿಸದೆ ಅವರ ಮಧ್ಯದಲ್ಲೇ ವಾಸಮಾಡಿದರು.
33
ನಫ್ತಾಲಿ ಕುಲದವರು ಬೇತ್ ಷೆಮೆಷ್, ಬೇತನಾತ್ ಎಂಬ ಊರುಗಳನ್ನು ಸ್ವತಂತ್ರಿಸಿಕೊಳ್ಳದೆ ಅಲ್ಲಿಯ ನಿವಾಸಿಗಳಾದ ಕಾನಾನ್ಯರ ಮಧ್ಯದಲ್ಲೇ ವಾಸಮಾಡಿದರು. ಮತ್ತು ಆ ಬೇತ್ ಷೆಮೆಷ್, ಬೇತನಾತ್ ಊರುಗಳ ಜನರು ಅವರಿಗೆ ಗುಲಾಮರಾದರು.
34
ಇದಲ್ಲದೆ ಅಮೋರಿಯರು ದಾನ್ ಕುಲದವರನ್ನು ತಗ್ಗಿನ ಪ್ರದೇಶಕ್ಕೆ ಇಳಿಯಗೊಡದೆ ಹಿಂದಟ್ಟಿ ಬೆಟ್ಟಗಳಿಗೆ ಓಡಿಸಿಬಿಟ್ಟರು.
35
ಹೀಗೆ ಅಮೋರಿಯರು ಹರ್ ಹೆರೆಸ್, ಅಯ್ಯಾಲೋನ್, ಶಾಲ್ಬೀಮ್ ಎಂಬ ಊರುಗಳಲ್ಲೇ ವಾಸಿಸಲು ನಿರ್ಧಾರಮಾಡಿದರು. ಆದರೆ ಜೋಸೆಫ್ ಕುಲದವರ ಪ್ರಭಾವ ಹೆಚ್ಚಾದ ಮೇಲೆ ಅವರಿಗೆ ಗುಲಾಮರಾದರು.
36
ಅಮೋರಿಯರ ಮೇರೆಯು ಅಕ್ರಬ್ಬೀಮ್ ಕಣಿವೆಯಲ್ಲಿರುವ ಬಂಡೆಯಿಂದ ಮೇಲಕ್ಕೆ ವಿಸ್ತರಿಸಿಕೊಂಡಿದೆ.
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 2 →
All chapters:
1
2
3
4
5
6
7
8
9
10
11
12
13
14
15
16
17
18
19
20
21