bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
Judges 8
Judges 8
Kannada Bible (KNCL) BSI 2016
← Chapter 7
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 9 →
1
ಅನಂತರ ಎಫ್ರಯಿಮ್ಯರು ಗಿದ್ಯೋನನಿಗೆ, “ನೀನು ಹೀಗೇಕೆ ಮಾಡಿದೆ? ಮಿದ್ಯಾನ್ಯರೊಡನೆ ಯುದ್ಧ ಮಾಡುವುದಕ್ಕೆ ಹೊರಟಾಗ ನಮ್ಮನ್ನೇಕೆ ಕರೆಯಲಿಲ್ಲ?” ಎಂದು ಉಗ್ರ ವಾಗ್ವಾದ ಮಾಡಿದರು.
2
ಆಗ ಅವನು ಅವರಿಗೆ, “ನೀವು ಮಾಡಿದ ಕಾರ್ಯಕ್ಕೆ ಸರಿಸಮಾನ ಆದದ್ದನ್ನು ನಾನೇನು ಮಾಡಿದೆ? ಅಭೀಯಿಜೆರನವರು ಸುಗ್ಗಿಯಲ್ಲಿ ಕೂಡಿಸಿದ್ದಕ್ಕಿಂತಲೂ ಎಫ್ರಯಿಮ್ಯರು ಹಕ್ಕಲಾಯ್ದು ಕೂಡಿಸಿದ್ದು ಹೆಚ್ಚಾಗಿದೆಯಲ್ಲವೇ?
3
ದೇವರು ಮಿದ್ಯಾನ್ಯರ ನಾಯಕರಾದ ಓರೇಬ್ ಮತ್ತು ಜೇಬರನ್ನೇ ನಿಮ್ಮ ಕೈಗೆ ಒಪ್ಪಿಸಿಕೊಟ್ಟಿದ್ದಾರಲ್ಲವೆ; ಇದಕ್ಕೆ ಸರಿಸಮಾನವಾದದ್ದನ್ನು ನಾನೇನು ಮಾಡಿದ್ದೇನೆ? ಎಂದನು. ಈ ಮಾತುಗಳನ್ನು ಕೇಳಿದ ಮೇಲೆ ಅವರ ಸಿಟ್ಟಿಳಿಯಿತು.
4
ಗಿದ್ಯೋನನೂ ಅವನ ಸಂಗಡ ಇದ್ದ ಮುನ್ನೂರು ಮಂದಿಯೂ ಬಹಳ ದಣಿದಿದ್ದರು. ಆದರೂ ಹಿಂದಟ್ಟುತ್ತಾ ಜೋರ್ಡನನ್ನು ದಾಟಿ ಸುಖೋತಿಗೆ ಬಂದರು.
5
ಗಿದ್ಯೋನನು ಸುಖೋತಿನವರಿಗೆ, “ದಯವಿಟ್ಟು ನನ್ನ ಜೊತೆಯಲ್ಲಿ ಬಂದಿರುವವರಿಗೆ ಸ್ವಲ್ಪ ರೊಟ್ಟಿ ಕೊಡಿ. ಅವರು ಬಹಳ ದಣಿದಿದ್ದಾರೆ; ನಾನು ಮಿದ್ಯಾನ್ಯರ ಅರಸರಾದ ಜೆಬಹ ಮತ್ತು ಚಲ್ಮುನ್ನ ಎಂಬವರನ್ನು ಹಿಂದಟ್ಟುತ್ತಾ ಇದ್ದೇನೆ,” ಎಂದನು.
6
ಆದರೆ ಸುಖೋತಿನ ಮುಖಂಡರು ಅವನಿಗೆ, “ನಾವು ನಿನ್ನ ಸೈನಿಕರಿಗೆ ರೊಟ್ಟಿಕೊಡುವುದಕ್ಕೆ ಜೆಬಹ ಮತ್ತು ಚಲ್ಮುನ್ನ ಎಂಬರವರನ್ನು ಕೈಕಟ್ಟಿ ವಶಮಾಡಿಕೊಂಡಿದ್ದೀಯೋ?”, ಎಂದು ತಿರಸ್ಕರಿಸಿದರು.
7
ಆಗ ಗಿದ್ಯೋನನು ಅವರಿಗೆ, “ಒಳ್ಳೆಯದು, ಸರ್ವೇಶ್ವರ ಜೆಬಹ ಮತ್ತು ಚಲ್ಮುನ್ನ ಎಂಬವರನ್ನು ನನ್ನ ಕೈಗೆ ಒಪ್ಪಿಸಿಕೊಟ್ಟ ತರುವಾಯ ನಾನು ನಿಮ್ಮನ್ನು ಜಾಲಿ ಮುಳ್ಳುಗಳಿಂದಲೂ ಕಾರೆಗಿಡಗಳಿಂದಲೂ ಹೊಡಿಸುವೆನು,” ಎಂದು ಹೇಳಿದನು.
8
ಅವನು ಅಲ್ಲಿಂದ ಪೆನೂವೇಲಿಗೆ ಬಂದು ಅಲ್ಲಿನ ಜನರನ್ನು ಅದೇ ಪ್ರಕಾರ ಬಿನ್ನವಿಸಲು ಅವರೂ ಸುಖೋತಿನವರಂತೆಯೇ ತಾತ್ಸಾತ ಮಾಡಿದರು.
9
ಗಿದ್ಯೋನನು ಅವರಿಗೆ, “ನಾನು ಸುರಕ್ಷಿತವಾಗಿ ಹಿಂದಿರುಗಿ ಬಂದಾಗ ಈ ಗೋಪುರವನ್ನು ಕೆಡವಿಬಿಡುವೆನು,” ಎಂದನು.
10
ಜೆಬಹ ಮತ್ತು ಚಲ್ಮುನ್ನ ಎಂಬವರು ಸುಮಾರು ಹದಿನೈದು ಸಾವಿರ ಮಂದಿ ಸೈನಿಕರೊಡನೆ ಕರ್ಕೋರಿನಲ್ಲಿ ಇಳಿದುಕೊಂಡಿದ್ದರು. ಪೂರ್ವದೇಶದವರ ಸೈನ್ಯದಲ್ಲಿ ಲಕ್ಷದ ಇಪ್ಪತ್ತು ಸಾವಿರ ಯೋಧರು ಹತರಾಗಿ ಉಳಿದವರು ಇಷ್ಟೇ ಮಂದಿ.
11
ಗಿದ್ಯೋನನು ಕಾಡುಗೊಲ್ಲರ ಪ್ರದೇಶ ಮಾರ್ಗವಾಗಿ ನೋಬಹ, ಯೊಗ್ಬೆಹಾ ಇವುಗಳ ಪೂರ್ವದಿಕ್ಕಿಗೆ ಹೋಗಿ ನಿರ್ಭಯದಿಂದ ಇಳಿದುಕೊಂಡಿದ್ದ ಆ ಪಾಳೆಯದ ಮೇಲೆ ದಾಳಿಮಾಡಿದನು.
12
ಜೆಬಹನೂ ಚಲ್ಮುನ್ನನೂ ಓಡಿಹೋಗುವಾಗ ಅವರನ್ನು ಹಿಂದಟ್ಟಿ ಹಿಡಿದು ಅವರ ಸೈನ್ಯವನ್ನು ಚದರಿಸಿಬಿಟ್ಟನು.
13
ಯೋವಾಷನ ಮಗನಾದ ಗಿದ್ಯೋನನು ಯುದ್ಧದಿಂದ ಹೆರೆಸಿನ ಗಟ್ಟದ ಮಾರ್ಗವಾಗಿ ಹಿಂದಿರುಗಿ ಬಂದನು.
14
ಸುಖೋತಿನ ಒಬ್ಬ ಯೌವನಸ್ಥನನ್ನು ಹಿಡಿದು ಆ ಊರಿನ ಮುಖಂಡರೂ ಹಿರಿಯರೂ ಯಾರಾರೆಂದು ವಿಚಾರಿಸಿ ಎಪ್ಪತ್ತೇಳು ಮಂದಿಯ ಹೆಸರುಗಳನ್ನು ಬರೆಸಿಕೊಂಡನು.
15
ಅನಂತರ ಅವನು ಸುಖೋತಿನವರ ಬಳಿಗೆ ಹೋಗಿ ಅವರಿಗೆ, “’ದಣಿದಿರುವ ನಿನ್ನ ಸೈನಿಕರಿಗಾಗಿ ನಾವು ರೊಟ್ಟಿ ಕೊಡುವುದಕ್ಕೆ ಜೆಬಹ ಮತ್ತು ಚಲ್ಮುನ್ನ ಎಂಬವರನ್ನು ಕೈಕಟ್ಟಿ ಸ್ವಾಧೀನ ಮಾಡಿಕೊಂಡಿದ್ದೀಯೋ?,’ ಎಂದು ನನ್ನನ್ನು ನಿಂದಿಸಿದಿರಲ್ಲವೆ;
16
ನೋಡಿ, ಅವರು ಇಲ್ಲಿರುತ್ತಾರೆ” ಎಂದು ಊರಿನ ಹಿರಿಯರನ್ನೂ ಮುಖಂಡರನ್ನೂ ಜಾಲಿಮುಳ್ಳು ಹಾಗು ಕಾರೆ ಗಿಡಗಳಿಂದಲೂ ಹೊಡಿಸಿ ಸುಖೋತಿನವರಿಗೆ ಬುದ್ಧಿ ಕಲಿಸಿದನು.
17
ಮತ್ತು ಪೆನೂವೇಲಿನ ಗೋಪುರವನ್ನು ಕೆಡವಿ ಬಿಟ್ಟು ಆ ಊರಿನ ಜನರನ್ನು ಕೊಂದುಹಾಕಿದನು.
18
ಬಳಿಕ ಗಿದ್ಯೋನನು ಜೆಬಹ ಮತ್ತು ಚಲ್ಮುನ್ನ ಎಂಬವರನ್ನು, “ನೀವು ತಾಬೋರದಲ್ಲಿ ಕೊಂದು ಹಾಕಿದ ವ್ಯಕ್ತಿಗಳು ಹೇಗಿದ್ದರು?” ಎಂದು ಕೇಳಿದಾಗ ಅವರು ಅವನಿಗೆ, “ನಿನ್ನ ಹಾಗೆಯೇ ಇದ್ದರು; ಎಲ್ಲರೂ ರೂಪದಲ್ಲಿ ರಾಜಪುತ್ರರಂತಿದ್ದರು,” ಎಂದು ಉತ್ತರಕೊಟ್ಟರು.
19
ಆಗ ಅವನು, “ಅವರು ನನ್ನ ತಾಯಿಯ ಮಕ್ಕಳು; ನನ್ನ ಸಹೋದರರು; ಸರ್ವೇಶ್ವರನ ಆಣೆ, ನೀವು ಅವರನ್ನು ಉಳಿಸಿದ್ದರೆ ನಾನು ನಿಮ್ಮನ್ನು ಕೊಲ್ಲುತ್ತಿರಲಿಲ್ಲ,” ಎಂದು ಹೇಳಿ
20
ತನ್ನ ಹಿರಿಯ ಮಗನಾದ ಎತೆರನಿಗೆ, “ನೀನೆದ್ದು ಇವರನ್ನು ಕೊಂದುಹಾಕು,” ಎಂದನು. ಆದರೆ ಅವನು ಇನ್ನೂ ಹುಡುಗನಾಗಿದ್ದುದರಿಂದ ಭಯಪಟ್ಟು ಕತ್ತಿಯನ್ನು ಹಿರಿಯಲೇ ಇಲ್ಲ.
21
ಆಗ ಜೆಬಹನು ಹಾಗು ಚಲ್ಮುನ್ನನು ಗಿದ್ಯೋನನಿಗೆ, “ನೀನೇ ಎದ್ದು ಬಂದು ನಮ್ಮ ಮೇಲೆ ಬೀಳು; ಪ್ರಾಯಕ್ಕೆ ತಕ್ಕಂತೆ ಪುರುಷನಿಗೆ ಬಲವಿರುತ್ತದೆ ಅಲ್ಲವೆ?” ಎನ್ನಲು ಅವನೆದ್ದು ಜೆಬಹ ಮತ್ತು ಚಲ್ಮುನ್ನ ಎಂಬವರನ್ನು ಕೊಂದುಹಾಕಿ ಅವರ ಒಂಟೆಗಳ ಕೊರಳಲ್ಲಿದ್ದ ಅರ್ಧಚಂದ್ರಾಕಾರದ ಆಭರಣಗಳನ್ನು ತೆಗೆದುಕೊಂಡನು.
22
ತರುವಾಯ ಇಸ್ರಯೇಲರು ಗಿದ್ಯೋನನಿಗೆ, “ನೀನು ನಮ್ಮನ್ನು ಮಿದ್ಯಾನ್ಯರ ಕೈಯಿಂದ ಬಿಡಿಸಿದ್ದೀಯಲ್ಲವೇ? ನೀನೂ ನಿನ್ನ ಮಗನೂ ಮೊಮ್ಮಗನೂ ವಂಶಪಾರಂಪರ್ಯವಾಗಿ ನಮ್ಮ ಮೇಲೆ ಅರಸರಾಗಿರಬೇಕು,” ಎಂದರು.
23
ಅವನು ಅವರಿಗೆ, “ನಾನಾಗಲಿ, ನನ್ನ ಮಗನಾಗಲಿ ನಿಮ್ಮನ್ನು ಆಳುವುದಿಲ್ಲ; ಸರ್ವೇಶ್ವರನೇ ನಿಮ್ಮ ಅರಸ.
24
ಆದರೆ ನಿಮ್ಮಲ್ಲಿ ನನ್ನದೊಂದು ಬಿನ್ನಹಃ ಪ್ರತಿಯೊಬ್ಬನು ತಾನು ಕೊಳ್ಳೆಹೊಡೆದ ಮುರುವುಗಳನ್ನು ನನಗೆ ಕೊಡಲಿ,” ಎಂದನು. ಮಿದ್ಯಾನ್ಯರು ಇಷ್ಮಾಯೇಲ್ಯರಾಗಿದ್ದುದರಿಂದ ಬಂಗಾರದ ಮುರುವುಗಳನ್ನು ಹಾಕಿಕೊಳ್ಳುತ್ತಿದ್ದರು.
25
ಗಿದ್ಯೋನಿನ ಬಿನ್ನಹಕ್ಕೆ ಇಸ್ರಯೇಲರು, “ನಾವು ಸಂತೋಷದಿಂದ ಕೊಡುತ್ತೇವೆ,” ಎಂದು ಹೇಳಿ ಅಲ್ಲಿ ಒಂದು ಬಟ್ಟೆಯನ್ನು ಹಾಸಿ, ಅದರ ಮೇಲೆ ತಾವು ಕೊಳ್ಳೆಯಾಗಿ ತಂದ ಮುರುವುಗಳನ್ನು ಇಟ್ಟರು.
26
ಗಿದ್ಯೋನನಿಗೆ ಮೊದಲೇ ದೊರಕಿದ್ದ ಅರ್ಧಚಂದ್ರಾಕಾರದ ಆಭರಣ, ಕುಂಡಲ, ಮಿದ್ಯಾನ್ ರಾಜರು ಹೊದ್ದುಕೊಂಡಿದ್ದ ರಕ್ತಾಂಬರ, ಅವರ ಒಂಟೆಗಳ ಕಂಠಮಾಲೆ ಇವುಗಳ ಹೊರತಾಗಿ ಅವನು ಇಸ್ರಯೇಲರಿಂದ ಕೇಳಿ ತೆಗೆದುಕೊಂಡ ಮುರುವುಗಳ ಬಂಗಾರವೇ 20 ಕಿಲೋಗ್ರಾಂ ತೂಕವಾಗಿತ್ತು.
27
ಈ ಬಂಗಾರದಿಂದ ಗಿದ್ಯೋನನು ಒಂದು ‘ಏಫೋದ’ನ್ನು ಮಾಡಿಸಿ ಅದನ್ನು ತನ್ನ ಊರಾದ ಒಫ್ರದಲ್ಲಿಟ್ಟನು. ಅದನ್ನು ಪೂಜಿಸುತ್ತಿದ್ದುದರಿಂದ ಇಸ್ರಯೇಲರೆಲ್ಲರೂ ದೇವದ್ರೋಹಿಗಳಾದರು; ಅದು ಗಿದ್ಯೋನನಿಗೂ ಅವನ ಮನೆಯವರಿಗೂ ಒಂದು ಉರುಲು ಆಯಿತು.
28
ಮಿದ್ಯಾನ್ಯರು ಇಸ್ರಯೇಲರ ಮುಂದೆ ಬಹಳವಾಗಿ ತಗ್ಗಿಹೋದರು. ಅವರು ಮರಳಿ ತಲೆಯೆತ್ತಲಾಗಲಿಲ್ಲ. ಗಿದ್ಯೋನನ ಜೀವಮಾನದಲ್ಲಿ ನಾಲ್ವತ್ತು ವರ್ಷಗಳ ಕಾಲಪರ್ಯಂತ ದೇಶದಲ್ಲಿ ಶಾಂತಿಸಮಾಧಾನವಿತ್ತು.
29
ಯೋವಾಷನ ಮಗ ‘ಯೆರುಬ್ಬಾಳ’ನು ಹೋಗಿ ತನ್ನ ಮನೆಯಲ್ಲಿ ವಾಸವಾಗಿದ್ದನು.
30
ಗಿದ್ಯೋನನಿಗೆ ಅನೇಕ ಮಂದಿ ಹೆಂಡತಿಯರು ಇದ್ದರು. ಅವನಿಗೆ ಎಪ್ಪತ್ತು ಮಂದಿ ಗಂಡು ಮಕ್ಕಳು ಹುಟ್ಟಿದರು.
31
ಅವನಿಗೆ ಶೆಕೆಮಿನಲ್ಲಿ ಇದ್ದ ತನ್ನ ಉಪಪತ್ನಿಯಲ್ಲಿ ಇನ್ನೊಬ್ಬ ಮಗ ಹುಟ್ಟಿದನು. ಅವನಿಗೆ ಅಬೀಮೆಲೆಕನೆಂದು ಹೆಸರಿಟ್ಟನು.
32
ಯೋವಾಷನ ಮಗನಾದ ಗಿದ್ಯೋನನು ಹಣ್ಣು ಹಣ್ಣು ಮುದುಕನಾಗಿ ಮರಣಹೊಂದಲು ಅವನ ಶವವನ್ನು ಅಬೀಯೆಜೆರೀಯರ ಒಫ್ರದಲ್ಲಿದ್ದ ಒಂದು ಸಮಾಧಿಯಲ್ಲಿ ಹೂಣಿಟ್ಟರು. ಆ ಸಮಾಧಿ ಅವನ ತಂದೆ ಆದ ಯೋವಾಷನದಾಗಿತ್ತು.
33
ಗಿದ್ಯೋನನು ಸತ್ತನಂತರ ಇಸ್ರಯೇಲರು ದೇವದ್ರೋಹಿಗಳಾಗಿ ಬಾಳನ ಪ್ರತಿಮೆಗಳನ್ನು ಪೂಜಿಸಿದರು; ಬಾಳ್ ಬೆರೀತನನ್ನು ತಮ್ಮ ದೇವರನ್ನಾಗಿ ಮಾಡಿಕೊಂಡರು.
34
ಸುತ್ತಮುತ್ತಲಿನ ಶತ್ರುಗಳಿಂದ ತಮ್ಮನ್ನು ಬಿಡಿಸಿದ ದೇವರಾದ ಸರ್ವೇಶ್ವರನನ್ನು ಮರೆತುಬಿಟ್ಟರು.
35
ಯೆರುಬ್ಬಾಳನೆಂಬ ಗಿದ್ಯೋನನು ತಮಗೆ ಮಾಡಿದ ಉಪಕಾರಗಳನ್ನು ಸ್ಮರಿಸಲಿಲ್ಲ; ಅವನ ಮನೆಯವರಿಗೆ ದಯೆತೋರಿಸಲಿಲ್ಲ.
← Chapter 7
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 9 →
All chapters:
1
2
3
4
5
6
7
8
9
10
11
12
13
14
15
16
17
18
19
20
21