bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
Numbers 29
Numbers 29
Kannada Bible (KNCL) BSI 2016
← Chapter 28
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 32
Chapter 33
Chapter 34
Chapter 35
Chapter 36
Chapter 30 →
1
‘ಏಳನೆಯ ತಿಂಗಳಿನ ಮೊದಲನೆಯ ದಿನ ನೀವು ಯಾವ ದುಡಿಮೆಯನ್ನೂ ಮಾಡದೆ ದೇವಾರಾಧನೆಗಾಗಿ ಸಭೆ ಸೇರಬೇಕು. ಅದು ನಿಮಗೆ ಕೊಂಬೂದುವ ದಿನ.
2
ಅಂದು ನೀವು ಸರ್ವೇಶ್ವರನಿಗೇ ಸುಗಂಧಕರವಾದ ಒಂದು ಹೋರಿ ದಹನಬಲಿಗಾಗಿ ಕಳಂಕರಹಿತವಾದ ಒಂದು ಹೋರಿ, ಒಂದು ಟಗರು ಮತ್ತು ವರ್ಷದ ಏಳು ಕುರಿಗಳನ್ನು ಹಾಗು
3
ಧಾನ್ಯನೈವೇದ್ಯಕ್ಕಾಗಿ ಆ ಒಂದು ಹೋರಿಗೆ ಒಂಬತ್ತು ಸೇರು
4
ಟಗರಿಗೆ ಆರು ಸೇರು, ಒಂದೊಂದು ಕುರಿಗೆ ಮೂರು ಸೇರು ಹೀಗೆ ಎಣ್ಣೆಬೆರೆಸಿದ ಗೋದಿಹಿಟ್ಟನ್ನು ಮತ್ತು
5
ಪಾಪಪರಿಹಾರಕ ಬಲಿಗಾಗಿ ಒಂದು ಹೋತವನ್ನು ಸಮರ್ಪಿಸಬೇಕು.
6
ಅಮಾವಾಸ್ಯೆಯಲ್ಲೂ ಪ್ರತಿದಿನವೂ ಸಲ್ಲಿಸುವ ದಹನಬಲಿಗಳ ಹಾಗು ಅವುಗಳಿಗೆ ಸಂಬಂಧಿಸಿದ ಧಾನ್ಯ-ಪಾನ ನೈವೇದ್ಯಗಳ ಜೊತೆಗೆ ಮೇಲೆ ಹೇಳಿದ ಬಲಿಗಳನ್ನು ಕೂಡ ಸಮರ್ಪಿಸಬೇಕು. ಅವು ಸರ್ವೇಶ್ವರನಿಗೆ ಸುಗಂಧಕರವಾದ ದಹನಬಲಿಯಾಗಿರುವುವು.
7
‘ಉಪವಾಸ ಆಚರಣೆಯ ಏಳನೆಯ ತಿಂಗಳಿನ ಹತ್ತನೆಯ ದಿನ ನೀವು ಯಾವ ದುಡಿಮೆಯನ್ನು ಮಾಡದೆ ದೇವಾರಾಧನೆಗಾಗಿ ಸಭೆ ಕೂಡಬೇಕು.
8
ಸರ್ವೇಶ್ವರನಿಗೆ ಸುಗಂಧಕರವಾದ ದಹನಬಲಿಗಾಗಿ ಕಳಂಕರಹಿತವಾದ ಒಂದು ಹೋರಿ, ಒಂದು ಟಗರು, ವರ್ಷದ ಏಳು ಕುರಿ ಇವುಗಳನ್ನು ಹಾಗು
9
ಧಾನ್ಯನೈವೇದ್ಯಕ್ಕಾಗಿ ಹೋರಿಗೆ ಒಂಬತ್ತು ಸೇರು,
10
ಟಗರಿಗೆ ಆರು ಸೇರು, ಕುರಿಯೊಂದಕ್ಕೆ ಮೂರು ಸೇರು ಈ ಮೇರೆಗೆ ಎಣ್ಣೆಬೆರೆಸಿದ ಗೋದಿಹಿಟ್ಟನ್ನು ಮತ್ತು
11
ಪಾಪ ಪರಿಹಾರಕ ಬಲಿಗಾಗಿ ಒಂದು ಹೋತವನ್ನು ತಂದು ಸಮರ್ಪಿಸಬೇಕು. ಆ ದಿನಕ್ಕೆ ನೇಮಕವಾದ ಪಾಪ ಪರಿಹಾರಕ ಬಲಿ, ದೈನಿಕ ದಹನಬಲಿ ಇದರ ಧಾನ್ಯ-ಪಾನ ದ್ರವ್ಯ ನೈವೇದ್ಯ ಇವುಗಳ ಸಮೇತ ಮೇಲೆ ಹೇಳಿದ ಬಲಿಗಳನ್ನು ಕೂಡ ಸಮರ್ಪಿಸಬೇಕು.
12
‘ಏಳನೆಯ ತಿಂಗಳಿನ ಹದಿನಾಲ್ಕನೆಯ ದಿನ ದೇವಾರಾಧನೆಗಾಗಿ ಸಭೆ ಕೂಡಬೇಕು. ನೀವು ಆ ದಿನದಂದು ಯಾವ ದುಡಿಮೆಯನ್ನೂ ಮಾಡಕೂಡದು. ಆ ದಿನ ಮೊದಲುಗೊಂಡು ಏಳು ದಿನಗಳವರೆಗೆ ಸರ್ವೇಶ್ವರನಿಗೆ ಹಬ್ಬವನ್ನು ಆಚರಿಸಬೇಕು.
13
ಆ ದಿನದಲ್ಲಿ ದೈನಿಕ ದಹನಬಲಿಯನ್ನೂ ಅದಕ್ಕೆ ಸಂಬಂಧಿಸಿದ ಧಾನ್ಯ-ಪಾನ ನೈವೇದ್ಯಗಳನ್ನೂ ಅರ್ಪಿಸಬೇಕು. ಅವುಗಳ ಸುಗಂಧಕರವಾದ ದಹನಬಲಿಗಾಗಿ ಕಳಂಕರಹಿತ ಆದ ಹದಿಮೂರು ಹೋರಿಗಳನ್ನು, ಎರಡು ಟಗರುಗಳನ್ನು, ವರ್ಷದ ಹದಿನಾಲ್ಕು ಕುರಿಗಳನ್ನು ಸಮರ್ಪಿಸಬೇಕು.
14
ಧಾನ್ಯನೈವೇದ್ಯಕ್ಕಾಗಿ ಪ್ರತಿ ಒಂದು ಹೋರಿಗೆ ಒಂಬತ್ತು ಸೇರು,
15
ಟಗರಿಗೆ ಆರು ಸೇರು, ಹಾಗು ಕುರಿಗೆ ಮೂರು ಸೇರು ಹೀಗೆ ಎಣ್ಣೆಬೆರೆಸಿದ ಗೋದಿಹಿಟ್ಟನ್ನು ಒಪ್ಪಿಸಬೇಕು;
16
ಅಂತೆಯೇ ಪಾಪ ಪರಿಹಾರಕ ಬಲಿಗಾಗಿ ಒಂದು ಹೋತವನ್ನು ತಂದು ಸಮರ್ಪಿಸಬೇಕು.
17
ಆ ಹಬ್ಬದ ಎರಡನೆಯ ದಿನದಲ್ಲಿ ದೈನಿಕ ದಹನಬಲಿಯನ್ನೂ ಅದಕ್ಕೆ ಸಂಬಂಧಿಸಿದ ಧಾನ್ಯ ಹಾಗು ಪಾನಾರ್ಪಣೆಗಳ ಜೊತೆಗೆ ಕಳಂಕರಹಿತವಾದ ಹನ್ನೆರಡು ಹೋರಿ, ಎರಡು ಟಗರು, ವರ್ಷದ ಹದಿನಾಲ್ಕು ಕುರಿಗಳು ಇವುಗಳನ್ನು ಸಮರ್ಪಿಸಬೇಕು.
18
ಆ ಪ್ರಾಣಿಗಳಲ್ಲಿ ಪ್ರತಿಯೊಂದಕ್ಕೆ ಸಂಬಂಧಿಸಿದ ಪ್ರಕಾರ ಧಾನ್ಯ ಹಾಗು ಪಾನಗಳನ್ನು ಒಪ್ಪಿಸಬೇಕು.
19
ಪಾಪ ಪರಿಹಾರಕಬಲಿಗಾಗಿ ಒಂದು ಹೋತವನ್ನು ಕೂಡ ಅರ್ಪಿಸಬೇಕು.
20
‘ಮೂರನೆಯ ದಿನ, ದೈನಿಕ ದಹನಬಲಿಯನ್ನು, ಅದಕ್ಕೆ ಸಂಬಂಧಿಸಿದ ಧಾನ್ಯ-ಪಾನದ್ರವ್ಯಗಳ ಜೊತೆಗೆ ಕಳಂಕರಹಿತವಾದ ಹನ್ನೊಂದು ಹೋರಿ, ಎರಡು ಟಗರು ಹಾಗು ವರ್ಷದ ಹದಿನಾಲ್ಕು ಕುರಿ ಇವುಗಳನ್ನು ಸಮರ್ಪಿಸಬೇಕು.
21
ನೈವೇದ್ಯಕ್ಕಾಗಿ ಆ ಪ್ರಾಣಿಗಳಲ್ಲಿ ಪ್ರತಿಯೊಂದಕ್ಕೆ ಸಂಬಂಧಿಸಿದ ಧಾನ್ಯಪಾನಗಳನ್ನು ಒಪ್ಪಿಸಬೇಕು;-
22
ಅಂತೆಯೇ ಪಾಪ ಪರಿಹಾರಕ ಬಲಿಗಾಗಿ ಒಂದು ಹೋತವನ್ನೂ ಅರ್ಪಿಸಬೇಕು.
23
‘ನಾಲ್ಕನೆಯ ದಿನ, ದೈನಿಕ ದಹನಬಲಿಯನ್ನೂ ಅದಕ್ಕೆ ಸಂಬಂಧವಾದ ಧಾನ್ಯ ಹಾಗು ಪಾನಾರ್ಪಣೆಗಳ ಜೊತೆ ಕಳಂಕರಹಿತವಾದ ಹತ್ತು ಹೋರಿ, ಎರಡು ಟಗರು, ವರ್ಷದ ಹದಿನಾಲ್ಕು ಕುರಿಗಳು, ಇವುಗಳನ್ನು ಸಮರ್ಪಿಸಬೇಕು.
24
ನೈವೇದ್ಯಕ್ಕಾಗಿ ಪ್ರಾಣಿಗಳಲ್ಲಿ ಪ್ರತಿಯೊಂದಕ್ಕೆ ಸಂಬಂಧವಾದ ಧಾನ್ಯ ಹಾಗು ಪಾನದ್ರವ್ಯಗಳನ್ನು ಒಪ್ಪಿಸಬೇಕು;
25
ಪಾಪಪರಿಹಾರಕ ಬಲಿಗಾಗಿ ಒಂದು ಹೋತವನ್ನೂ ಅರ್ಪಿಸಬೇಕು.
26
‘ಐದನೆಯ ದಿನ, ದೈನಿಕ ದಹನಬಲಿಯನ್ನು, ಅದಕ್ಕೆ ಸಂಬಂಧಿಸಿದ ಧಾನ್ಯ ಹಾಗು ಪಾನಾರ್ಪಣೆಗಳ ಜೊತೆಗೆ ಕಳಂಕರಹಿತವಾದ ಒಂಬತ್ತು ಹೋರಿ, ಎರಡು ಟಗರು, ವರ್ಷದ ಹದಿನಾಲ್ಕು ಕುರಿಗಳನ್ನು ಅರ್ಪಿಸಬೇಕು;
27
ನೈವೇದ್ಯಕ್ಕಾಗಿ ಈ ಪ್ರಾಣಿಗಳಲ್ಲಿ ಪ್ರತಿಯೊಂದಕ್ಕೆ ಸಂಬಂಧವಾದ ಧಾನ್ಯ ಹಾಗು ಪಾನದ್ರವ್ಯಗಳನ್ನು ಒಪ್ಪಿಸಬೇಕು.
28
ಪಾಪಪರಿಹಾರಕ ಬಲಿಗಾಗಿ ಒಂದು ಹೋತವನ್ನು ಸಮರ್ಪಿಸಬೇಕು.
29
‘ಆರನೆಯ ದಿನ, ದೈನಿಕ ದಹನಬಲಿಯನ್ನೂ ಅದಕ್ಕೆ ಸಂಬಂಧಿಸಿದ ಧಾನ್ಯ ಹಾಗು ಪಾನರ್ಪಣೆಗಳ ಜೊತೆಗೆ ಕಳಂಕರಹಿತವಾದ ಎಂಟು ಹೋರಿ, ಎರಡು ಟಗರು, ವರ್ಷದ ಹದಿನಾಲ್ಕು ಕುರಿಗಳನ್ನೂ ಸಮರ್ಪಿಸಬೇಕು.
30
ನೈವೇದ್ಯಕ್ಕಾಗಿ ಆ ಪ್ರಾಣಿಗಳಲ್ಲಿ ಪ್ರತಿಯೊಂದಕ್ಕೆ ನೇಮಕವಾದ ಪ್ರಕಾರ ಧಾನ್ಯ ಹಾಗು ಪಾನಾರ್ಪಣೆಗಳನ್ನು ಒಪ್ಪಿಸಬೇಕು.
31
ಪಾಪಪರಿಹಾರಕ ಬಲಿಗಾಗಿ ಒಂದು ಹೋತವನ್ನು ಅರ್ಪಿಸಬೇಕು.
32
‘ಏಳನೆಯ ದಿನ, ದೈನಿಕ ದಹನಬಲಿಯನ್ನೂ ಅದಕ್ಕೆ ಸಂಬಂಧಿಸಿದ ಧಾನ್ಯ ಹಾಗು ಪಾನಾರ್ಪಣೆಗಳ ಜೊತೆಗೆ ಕಳಂಕರಹಿತವಾದ ಏಳು ಹೋರಿ, ಎರಡು ಟಗರು, ವರ್ಷದ ಹದಿನಾಲ್ಕು ಕುರಿಗಳನ್ನು ಸಮರ್ಪಿಸಬೇಕು.
33
ನೈವೇದ್ಯಕ್ಕಾಗಿ ಈ ಪ್ರಾಣಿಗಳಲ್ಲಿ ಪ್ರತಿಯೊಂದಕ್ಕೆ ನೇಮಕವಾದ ಪ್ರಕಾರ ಧಾನ್ಯ ಹಾಗು ಪಾನಾರ್ಪಣೆಗಳನ್ನು ಒಪ್ಪಿಸಬೇಕು.
34
ಪಾಪಪರಿಹಾರಕ ಬಲಿಗಾಗಿ ಒಂದು ಹೋತವನ್ನೂ ಅರ್ಪಿಸಬೇಕು.
35
‘ಎಂಟನೆಯ ದಿನ, ದೇವಾರಾಧನೆಗೆ ಸಭೆಕೂಡಬೇಕು. ಅಂದು ಯಾವ ದುಡಿಮೆಯನ್ನೂ ಮಾಡಕೂಡದು.
36
ದೈನಿಕ ದಹನಬಲಿಯನ್ನೂ ಅದಕ್ಕೆ ಸಂಬಂಧಿಸಿದ ಧಾನ್ಯ ಹಾಗು ಪಾನಾರ್ಪಣೆಗಳನ್ನೂ ಅರ್ಪಿಸಬೇಕು. ಅವುಗಳ ಜೊತೆಗೆ ಸರ್ವೇಶ್ವರನಿಗೆ ಸುಗಂಧಕರ ದಹನಬಲಿಗಾಗಿ ಕಳಂಕರಹಿತವಾದ ಒಂದು ಹೋರಿ, ಒಂದು ಟಗರು, ವರ್ಷದ ಏಳು ಕುರಿಗಳನ್ನು ಸಮರ್ಪಿಸಬೇಕು.
37
ನೈವೇದ್ಯಕ್ಕಾಗಿ ಈ ಪ್ರಾಣಿಗಳಲ್ಲಿ ಪ್ರತಿ ಒಂದಕ್ಕೆ ನೇಮಕವಾದ ಪ್ರಕಾರ ಧಾನ್ಯ ಹಾಗು ಪಾನಾರ್ಪಣೆಗಳನ್ನು ಒಪ್ಪಿಸಬೇಕು.
38
ಪಾಪಪರಿಹಾರಕ ಬಲಿಗಾಗಿ ಒಂದು ಹೋತವನ್ನೂ ಸಮರ್ಪಿಸಬೇಕು.
39
‘ನೀವು ಕಾಣಿಕೆಯಾಗಿ ಆಗಲಿ, ಹರಕೆಯನ್ನು ತೀರಿಸುವುದಕ್ಕಾಗಿ ಆಗಲಿ ಮಾಡುವ ದಹನಬಲಿ, ಧಾನ್ಯನೈವೇದ್ಯ, ಪಾನಾರ್ಪಣೆ, ಸಮಾಧಾನಬಲಿ ಇವುಗಳನ್ನು ಮಾತ್ರವಲ್ಲದೆ ಹಬ್ಬದ ದಿನಗಳಲ್ಲಿ ಮೇಲೆ ಸೂಚಿಸಿರುವ ಬಲಿಗಳನ್ನು ಹೆಚ್ಚಾಗಿ ಮಾಡಬೇಕು’.”
40
ಸರ್ವೇಶ್ವರಸ್ವಾಮಿ ಕೊಟ್ಟ ಈ ಎಲ್ಲ ಆಜ್ಞೆಗಳನ್ನು ಮೋಶೆ ಇಸ್ರಯೇಲರಿಗೆ ತಿಳಿಸಿದನು.
← Chapter 28
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 32
Chapter 33
Chapter 34
Chapter 35
Chapter 36
Chapter 30 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36