bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
Numbers 35
Numbers 35
Kannada Bible (KNCL) BSI 2016
← Chapter 34
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 32
Chapter 33
Chapter 34
Chapter 35
Chapter 36
Chapter 36 →
1
ಜೋರ್ಡನ್ ನದಿಯ ತೀರದಲ್ಲಿ ಜೆರಿಕೋ ನಗರದ ಹತ್ತಿರವಿರುವ ಮೋವಾಬ್ಯರ ಮೈದಾನದಲ್ಲಿ ಸರ್ವೇಶ್ವರ ಸ್ವಾಮಿ ಮೋಶೆಗೆ ಹೇಳಿದ್ದೇನೆಂದರೆ -
2
“ಇಸ್ರಯೇಲರು ತಾವು ಹೊಂದುವ ಸೊತ್ತಿನಲ್ಲಿ ಕೆಲವು ಊರುಗಳನ್ನು ಹಾಗು ಆ ಊರಿನ ಸುತ್ತಲಿನ ಭೂಮಿಯನ್ನು ಲೇವಿಯರಿಗೆ ನಿವಾಸಕ್ಕಾಗಿ ಕೊಡಬೇಕೆಂದು ಅವರಿಗೆ ಆಜ್ಞಾಪಿಸು.
3
ಆ ಊರುಗಳು ಲೇವಿಯರ ನಿವಾಸಕ್ಕೆ ಆಗುವುದು; ಅವುಗಳ ಸುತ್ತಲಿನ ಭೂಮಿಗಳು ಅವರ ದನಕುರಿ, ಪ್ರಾಣಿಪಶುಗಳ ಪ್ರಯೋಜನಕ್ಕಾಗುವುದು.
4
ಲೇವಿಯರಿಗೆ ನೀವು ಕೊಡುವ ಊರುಗಳ ಸುತ್ತಲಿನ ಭೂಮಿ ಊರಿನ ಗೋಡೆಯಿಂದ ನಾಲ್ಕು ಕಡೆಗೂ ಸಾವಿರ ಮೊಳದಷ್ಟು ವಿಸ್ತಾರವಾಗಿರಲಿ.
5
“ಊರಿನ ಹೊರಗಡೆ ನಾಲ್ಕು ದಿಕ್ಕುಗಳಲ್ಲೂ ಎರಡೆರಡು ಸಾವಿರ ಮೊಳಗಳಷ್ಟು ದೂರದಲ್ಲಿ ಎಲ್ಲೆಗಳನ್ನು ಗೊತ್ತುಮಾಡಬೇಕು. ಆ ಭೂಮಿಯ ನಡುವೆ ಊರಿರಬೇಕು. ಮಿಕ್ಕದ್ದು ಹುಲ್ಲುಗಾವಲಾಗಿರಬೇಕು.
6
ಮನುಷ್ಯಹತ್ಯೆ ಮಾಡಿದವರು ಆಶ್ರಯಕ್ಕಾಗಿ ಓಡಿಹೋಗಲು ನೀವು ನೇಮಿಸುವ ಆರು ಆಶ್ರಯನಗರಗಳನ್ನೂ ಬೇರೆ ನಾಲ್ವತ್ತೆರಡು ಪಟ್ಟಣಗಳನ್ನೂ, ಹೀಗೆ ನಾಲ್ವತ್ತೆಂಟು ಊರುಗಳನ್ನೂ
7
ಇವುಗಳ ಸುತ್ತಲಿನ ಭೂಮಿಯನ್ನೂ ಲೇವಿಯರಿಗೆ ಕೊಡಬೇಕು.
8
ಇಸ್ರಯೇಲರ ಸೊತ್ತಿನಲ್ಲಿ ಆಯಾ ಕುಲದ ಸೊತ್ತಿನ ಅಳತೆಗೆ ತಕ್ಕಹಾಗೆ, ಅಂದರೆ ಹೆಚ್ಚು ಉಳ್ಳವರಿಂದ ಹೆಚ್ಚಾಗಿಯೂ ಕಡಿಮೆ ಉಳ್ಳವರಿಂದ ಕಡಿಮೆಯಾಗಿಯೂ ಲೇವಿಯರಿಗೆ ಊರುಗಳನ್ನು ಕೊಡಿಸಬೇಕು.”
9
ಸರ್ವೇಶ್ವರ ಮೋಶೆಗೆ ಹೇಳಿದ್ದು ಇದು:
10
“ನೀನು ಇಸ್ರಯೇಲರಿಗೆ ಹೀಗೆಂದು ಆಜ್ಞಾಪಿಸು - ನೀವು ಜೋರ್ಡನ್ ನದಿಯನ್ನು ದಾಟಿ ಕಾನಾನ್ ನಾಡನ್ನು ಸೇರಿದ ನಂತರ
11
ಆಶ್ರಯಧಾಮಗಳಿಗಾಗಿ ಪಟ್ಟಣಗಳನ್ನು ನಿಗದಿಮಾಡಿರಿ. ಕೈತಪ್ಪಿ ಮತ್ತೊಬ್ಬನನ್ನು ಕೊಂದವನು ಅವುಗಳಲ್ಲಿ ಒಂದಕ್ಕೆ ಓಡಿಹೋಗಿ ಸುರಕ್ಷಿತನಾಗಿರಬಹುದು.
12
ಅಂಥವನು ಸಭೆಯವರಿಂದ ತೀರ್ಪುಹೊಂದುವುದಕ್ಕಿಂತ ಮೊದಲೇ ಹತನಾದವನ ಸಮೀಪ ಬಂಧುವಿನಿಂದ ಸಾಯದಂತೆ ಈ ಆಶ್ರಯಧಾಮಗಳು ನಿಮ್ಮಲ್ಲಿ ಇರಬೇಕು.
13
ಹೀಗೆ ಆಶ್ರಯಧಾಮಗಳಾಗಿರಲು ಜೋರ್ಡನ್ ನದಿಯ ಈಚೆಕಡೆ
14
ಮೂರು ಕಾನಾನ್ ನಾಡಿನಲ್ಲಿ ಮೂರು ಹೀಗೆ ಆರು ಪಟ್ಟಣಗಳನ್ನು ನಿಗದಿಮಾಡಬೇಕು.
15
ಕೈತಪ್ಪಿ ಮತ್ತೊಬ್ಬನನ್ನು ಕೊಂದವನು ಇಸ್ರಯೇಲನಾಗಿರಲಿ, ಪರದೇಶದವನಾಗಿರಲಿ ಅಥವಾ ನಿಮ್ಮ ಮಧ್ಯೆ ವಾಸಿಸುವವನಾಗಿರಲಿ, ಆ ಆರು ಪಟ್ಟಣಗಳೊಳಗೆ ಒಂದಕ್ಕೆ ಓಡಿಹೋಗಿ ಆಶ್ರಯಪಡೆಯಲಿ.
16
“ಆದರೆ ಒಬ್ಬನು ಕಬ್ಬಿಣದ ಆಯುಧದಿಂದ ಮತ್ತೊಬ್ಬನನ್ನು ಹೊಡೆದು ಕೊಂದರೆ ಅಂಥವನು ನರಹತ್ಯ ಮಾಡಿದವನೆಂದು ನೀವು ನಿರ್ಣಯಿಸಬೇಕು. ಅವನಿಗೆ ಮರಣಶಿಕ್ಷೆಯಾಗಬೇಕು.
17
ಒಬ್ಬನನ್ನು ಕೊಲ್ಲುವಷ್ಟು ದೊಡ್ಡ ಕಲ್ಲಿನಿಂದ ಮತ್ತೊಬ್ಬನನ್ನೂ ಹೊಡೆದುಕೊಂದರೆ ಅವನೂ ನರಹತ್ಯಗಾರನೇ; ಅಂಥವನಿಗೂ ಮರಣಶಿಕ್ಷೆಯಾಗಬೇಕು.
18
ಒಬ್ಬನನ್ನು ಕೊಲ್ಲುವಷ್ಟು ದೊಡ್ಡ ಮರದ ಆಯುಧದಿಂದ ಮತ್ತೊಬ್ಬನನ್ನು ಹೊಡೆದುಕೊಂದರೆ ಅವನೂ ನರಹತ್ಯಗಾರನೇ. ಅಂಥವನಿಗೂ ಮರಣಶಿಕ್ಷೆಯಾಗಬೇಕು.
19
ನರಹತ್ಯ ಮಾಡಿದವನನ್ನು ಕಂಡೊಡನೆ ಕೊಲ್ಲಬೇಕಾದವನು ಹತನಾದವನ ಸಮೀಪ ಬಂಧುವೇ.
20
ಒಬ್ಬನು ಮತ್ತೊಬ್ಬನನ್ನು ಹಗೆಮಾಡಿ ನೂಕುವುದರಿಂದಾಗಲಿ, ಸಮಯ ನೋಡಿ ಅವನ ಮೇಲೆ ಏನನ್ನಾದರೂ ಎಸೆಯುವುದರಿಂದಾಗಲಿ,
21
ದ್ವೇಷದಿಂದ ಕೈಯಾರೆ ಹೊಡೆಯುವುದರಿಂದಾಗಲಿ ಕೊಂದರೆ ಅವನು ಕೂಡ ನರಹತ್ಯಗಾರನೆ. ಅಂಥವನಿಗೂ ಮರಣಶಿಕ್ಷೆಯಾಗಬೇಕು. ಹತನಾದವನ ಸಮೀಪಬಂಧು ಅವನನ್ನು ಕಂಡೊಡನೆ ಕೊಲ್ಲಲಿ.
22
“ಒಬ್ಬನು ಯಾವ ದ್ವೇಷವೂ ಇಲ್ಲದೆ, ಅಕಸ್ಮಾತ್ತಾಗಿ ನೂಕುವುದರಿಂದಾಗಲಿ, ಹೊಂಚು ಕಾಯದೆ ಏನನ್ನಾದರೂ ಎಸೆಯುವುದರಿಂದಾಗಲಿ,
23
ಕೊಲ್ಲುವಷ್ಟು ದೊಡ್ಡಕಲ್ಲನ್ನು ತಿಳಿಯದೆ ಬೀಳಿಸುವುದರಿಂದಾಗಲಿ ಮತ್ತೊಬ್ಬನು ಸತ್ತರೆ ಅವನು ಆ ಮನುಷ್ಯನಿಗೆ ವೈರಿಯಾಗಿದ್ದನೆ? ಹಾನಿಮಾಡಬೇಕೆಂಬ ಅಭಿಪ್ರಾಯ ಅವನದಾಗಿತ್ತೆ? ಎಂದು ವಿಚಾರಿಸಬೇಕು.
24
ಹಾಗಿಲ್ಲದ ಪಕ್ಷದಲ್ಲಿ ಸಭೆಯವರು ಹತ್ಯ ಮಾಡಿದವನಿಗೂ ಹತವಾದವನ ಸಮೀಪಬಂಧುವಿಗೂ ಈ ವಿಚಾರಗಳಿಗನುಸಾರ ನ್ಯಾಯ ತೀರಿಸಬೇಕು; ಹತ್ಯಮಾಡಿದವನನ್ನು ಆ ಸಮೀಪಬಂಧುವಿನ ಕೈಯಿಂದ ತಪ್ಪಿಸಬೇಕು.
25
ಅವನು ಓಡಿಹೋಗಿದ್ದ ಆಶ್ರಯನಗರಕ್ಕೆ ತಿರುಗಿ ಸೇರಿಸಬೇಕು. ಪಟ್ಟಾಭಿಷೇಕ ಹೊಂದಿದ ಮಹಾಯಾಜಕನು ಜೀವದಿಂದಿರುವ ತನಕ ಅವನು ಆ ಪಟ್ಟಣದಲ್ಲೇ ವಾಸಿಸಬೇಕು.
26
“ಆ ಹತ್ಯ ಮಾಡಿದವನು ಎಂದಾದರು ತಾನು ಓಡಿಹೋಗಿದ್ದ ಆಶ್ರಯ ನಗರದ ಮೇರೆಗೆ ಹೊರಗೆ ಹೋಗಿದ್ದು
27
ಹತವಾದವನ ಸಮೀಪ ಬಂಧು ಅವನನ್ನು ಕಂಡು ಕೊಂದುಹಾಕಿದರೆ ಕೊಲೆಪಾತಕನಾಗುವುದಿಲ್ಲ.
28
ಏಕೆಂದರೆ ಮಹಾಯಾಜಕನು ಜೀವದಿಂದಿರುವ ತನಕ ಅವನು ಆಶ್ರಯನಗರದೊಳಗೇ ಇರಬೇಕಾಗಿತ್ತು. ಮಹಾಯಾಜಕನು ತೀರಿಹೋದ ನಂತರ ಅವನು ತನ್ನ ಆಸ್ತಿಪಾಸ್ತಿಯಿರುವ ಸ್ಥಳಕ್ಕೆ ಹೋಗಬಹುದು.
29
ನೀವು ಮತ್ತು ನಿಮ್ಮ ಸಂತತಿಯವರು ಈ ವಿಧಿನಿಯಮಗಳಿಗನುಸಾರ ನಿಮ್ಮ ನಿವಾಸಗಳಲ್ಲೆಲ್ಲ ನ್ಯಾಯ ತೀರಿಸಬೇಕು.
30
“ಒಬ್ಬನು ಮತ್ತೊಬ್ಬನನ್ನು ಕೊಂದಾಗ ನೀವು ಸಾಕ್ಷಿಗಳನ್ನು ವಿಚಾರಿಸಿಕೊಂಡೇ ಅವನಿಗೆ ಮರಣಶಿಕ್ಷೆ ವಿಧಿಸಬೇಕು. ಒಬ್ಬನೇ ಒಬ್ಬ ಸಾಕ್ಷಿ ಮಾತ್ರ ಇದ್ದರೆ ಮರಣಶಿಕ್ಷೆಯನ್ನು ವಿಧಿಸಕೂಡದು.
31
ಮರಣಶಿಕ್ಷೆಗೆ ಪಾತ್ರನಾದ ಕೊಲೆಗಡುಕನನ್ನು ಉಳಿಸುವುದಕ್ಕೆ ಈಡನ್ನು ತೆಗೆದುಕೊಳ್ಳಕೂಡದು. ಅವನಿಗೆ ಮರಣಶಿಕ್ಷೆ ಆಗಲೇಬೇಕು.
32
ಆಶ್ರಯನಗರಕ್ಕೆ ಓಡಿಹೋದವನಿಂದ ನೀವು ಹಣವನ್ನು ತೆಗೆದುಕೊಂಡು ಮಹಾಯಾಜಕನು ಜೀವದಿಂದಿರುವಾಗಲೇ ಸ್ವಂತ ಊರಿಗೆ ಹೋಗಬಿಡಕೂಡದು.
33
“ನೀವು ಈ ಪ್ರಕಾರ ನಡೆದುಕೊಂಡರೆ ನಿಮ್ಮ ನಾಡು ಅಪವಿತ್ರವಾಗುವುದಿಲ್ಲ. ರಕ್ತಪಾತವು ನಾಡನ್ನು ಅಪವಿತ್ರಗೊಳಿಸುತ್ತದೆ. ಅದಕ್ಕೆ ಕೊಲ್ಲಲ್ಪಟ್ಟವನ ರಕ್ತಕ್ಕಾಗಿ ಕೊಂದವನ ರಕ್ತದಿಂದಲೇ ಹೊರತು ಬೇರೆ ಪ್ರಾಯಶ್ಚಿತ್ತವಿಲ್ಲ.
34
ನೀವು ವಾಸಮಾಡುವ ನಾಡನ್ನು ಅಪವಿತ್ರ ಮಾಡಬೇಡಿ. ಸರ್ವೇಶ್ವರನೆಂಬ ನಾನೇ ಇಸ್ರಯೇಲರ ನಡುವೆ ಆ ನಾಡಿನಲ್ಲಿ ವಾಸಿಸುತ್ತೇನೆ.”
← Chapter 34
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 32
Chapter 33
Chapter 34
Chapter 35
Chapter 36
Chapter 36 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36