bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
Song of Solomon 3
Song of Solomon 3
Kannada Bible (KNCL) BSI 2016
← Chapter 2
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 4 →
1
ನಲ್ಲೆ: ನನ್ನ ಪ್ರಾಣಕಾಂತನನ್ನು ರಾತ್ರಿಯೆಲ್ಲಾ ಹುಡುಕಿದೆ ಹಾಸಿಗೆಯ ಮೇಲೆ ಹಾತೊರೆದೆ ಹುಡುಕಿ ಹುಡುಕಿ ಸಿಗಲಾರದೆ ಬೇಸತ್ತೆ.
2
ಎದ್ದು ಊರೆಲ್ಲಾ ಅಲೆದಾಡಿದೆ ಬೀದಿಗಳಲ್ಲಿ, ಚೌಕಗಳಲ್ಲಿ ಹುಡುಕಾಡಿದೆ. ಹುಡುಕಿ ಹುಡುಕಿ ಸಿಗಲಾರದೆ ಬೇಸತ್ತೆ.
3
ಊರಲ್ಲಿ ತಿರುಗುವ ಪಹರೆಯವರ ಕೈಗೆ ಸಿಕ್ಕಿಬಿದ್ದೆ “ನನ್ನ ಪ್ರಾಣಕಾಂತನನ್ನು ಕಂಡಿರಾ?’ ಎಂದು ವಿಚಾರಿಸಿದೆ.
4
ಅವರನ್ನು ಬಿಟ್ಟ ತುಸು ಹೊತ್ತಿನಲ್ಲೆ ನನ್ನ ಪ್ರಾಣಕಾಂತನನ್ನು ಕಂಡುಕೊಂಡೆ. ತಾಯ ಮನೆಗೆ, ನನ್ನ ಹೆತ್ತವಳ ಮನೆಗೆ ಕರೆದೊಯ್ದೆ ಕೈಯ ಬಿಡದೆಯೆ ಕರೆದುಕೊಂಡು ಹೋದೆ.
5
ಜೆರುಸಲೇಮಿನ ಮಹಿಳೆಯರೇ, “ತಾನೇ ಏಳುವುದಕ್ಕೆ ಮುಂಚೆ ನನ್ನ ಪ್ರಿಯನನ್ನು ಎಚ್ಚರಿಸದಿರಿ ಆತನ ವಿಶ್ರಾಂತಿಗೆ ಭಂಗ ತರದಿರಿ” ಎಂದು ನಿಮಗೆ ವಿಧಿಸಿರುವೆನು ವನದ ಹುಲ್ಲೆ ಹರಿಣಿಗಳ ಮೇಲೆ ಆಣೆಯಿಟ್ಟು.
6
ವರ್ತಕರು ಮಾರುವ ಸಕಲ ಸುಗಂಧ ತೈಲಗಳಿಂದ ರಸಗಂಧ ಸಾಂಬ್ರಾಣಿ ಮುಂತಾದ ದ್ರವ್ಯಗಳಿಂದ ಧೂಮಸ್ತಂಭಗಳೋಪಾದಿ ಹೊರಹೊಮ್ಮುತ್ತಿರುವ ಅರಣ್ಯದ ಮಾರ್ಗವಾಗಿ ಬರುತ್ತಿರುವ ಆ ಮೆರವಣಿಗೆ ಯಾರದು?
7
ಇದೋ, ನೋಡು ಸೊಲೊಮೋನನ ಪಲ್ಲಕ್ಕಿ ಅದರ ಸುತ್ತ ಇಸ್ರಯೇಲಿನ ಶೂರರು ಅರವತ್ತು ಮಂದಿ ಯುದ್ಧಪ್ರವೀಣರಾದ ಅವರಾಗಿಹರು ಶಸ್ತ್ರಧಾರಿ ಕತ್ತಿಯ ಕಟ್ಟಿಹರು ಪ್ರತಿಯೊಬ್ಬರು ಸೊಂಟಕ್ಕೆ ಕತ್ತಲ ದುರಂತಗಳನ್ನು ಎದುರಿಸಲಿಕ್ಕೆ.
9
ಅರಸ ಸೊಲೊಮೋನನು ಮಾಡಿಸಿಕೊಂಡನು ಲೆಬನೋನಿನ ಮರದಿಂದ ಆ ಪಲ್ಲಕ್ಕಿಯನು.
10
ಸ್ತಂಭಗಳನ್ನು ಬೆಳ್ಳಿಯಿಂದ ಒರಗನ್ನು ಬಂಗಾರದಿಂದ ಅದರ ಮೆತ್ತೆಯನ್ನು ಸಕಲಾತಿಯಿಂದ ಅಲಂಕರಿಸಿಹರು ಜೆರುಸಲೇಮಿನ ಮಹಿಳೆಯರು ಪ್ರೀತಿಯಿಂದ.
11
ಸಿಯೋನಿನ ಮಹಿಳೆಯರೇ, ಹೊರಟುಬನ್ನಿ ಅರಸ ಸೊಲೊಮೋನನನ್ನು ನೋಡಬನ್ನಿ ಆತನ ವಿವಾಹಮಹೋತ್ಸವ ದಿನದಂದು ಆತನ ತಾಯಿ ತೊಡಿಸಿದ ಮುಕುಟವನ್ನು ಆತ ಧರಿಸಿರುವುದನ್ನು ನೋಡಬನ್ನಿ.
← Chapter 2
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 4 →
All chapters:
1
2
3
4
5
6
7
8