bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
Song of Solomon 8
Song of Solomon 8
Kannada Bible (KNCL) BSI 2016
← Chapter 7
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
1
ನಲ್ಲೆ: ನನ್ನ ಸಹೋದರನು, ನನ್ನ ತಾಯಿಯ ಹಾಲ ಕುಡಿದವನು ನೀನಾಗಿದ್ದರೆ ಚೆನ್ನಾಗಿರುತ್ತಿತ್ತಲ್ಲಾ! ಆಗ ನಿನ್ನನ್ನು ಕಂಡು ಹೊರಗಡೆಯೆ ಮುದ್ದಿಸಬಹುದಿತ್ತಲ್ಲಾ ಯಾರು ನನ್ನನ್ನಾಗ ನಿಂದಿಸುತ್ತಿರಲಿಲ್ಲವಲ್ಲಾ!
2
ಆಗ ನಿನ್ನನ್ನು ಕರೆದುಕೊಂಡು ಹೋಗುತ್ತಿದ್ದೆ ನನ್ನನ್ನು ಹೆತ್ತ ತಾಯಿಯ ಮನೆಗೆ ಅಲ್ಲೆ ಉಪದೇಶ ಮಾಡಬಹುದಾಗಿತ್ತು ನೀನು ನನಗೆ ದ್ರಾಕ್ಷಿಯ ಮಿಶ್ರಪಾನಕವನ್ನು ನಾ ಕೊಡುತ್ತಿದ್ದೆ ನಿನಗೆ ದಾಳಿಂಬೆ ರಸವನ್ನು ಕುಡಿಸುತ್ತಿದ್ದೆ ನಿನಗೆ.
3
ನನಗೆ ತಲೆದಿಂಬಾಗಲಿ ನಿನ್ನ ಎಡಗೈ ನನ್ನನ್ನು ತಬ್ಬಿಕೊಳ್ಳಲಿ ನಿನ್ನ ಬಲಗೈ.
4
“ಜೆರುಸಲೇಮಿನ ಮಹಿಳೆಯರೇ, ತಾನೇ ಏಳುವುದಕ್ಕೆ ಮುಂಚೆ ನನ್ನ ಪ್ರಿಯನನ್ನು ಎಚ್ಚರಿಸದಿರಿ ಅವನ ವಿಶ್ರಾಂತಿಗೆ ಭಂಗ ತರದಿರಿ” ಎಂದು ನಾನು ನಿಮಗೆ ಆಣೆಯಿಟ್ಟು ಹೇಳುತ್ತೇನೆ. ಮಹಿಳೆಯರು:
5
ನಲ್ಲನನ್ನು ಒರಗಿಕೊಂಡು ಅಡವಿಯಿಂದ ಬರುವ ಈಕೆ ಯಾರು? ನಲ್ಲೆ: ಎಬ್ಬಿಸಿದೆ ನಿನ್ನನ್ನು ಸೇಬುಮರದ ಅಡಿಯಲಿ ನಿನ್ನ ತಾಯಿ ಪ್ರಸವವೇದನೆಯಿಂದ ಹಡೆದಾ ಸ್ಥಳದಲಿ ನಿನ್ನನ್ನು ಆಕೆ ಗರ್ಭಧರಿಸಿದಾ ಜಾಗದಲಿ.
6
ನಿನ್ನ ವೃಕ್ಷದಲಿ, ನಿನ್ನ ಹಸ್ತಗಳಲಿ ಧರಿಸಿಕೊ ನನ್ನನ್ನು ಪ್ರೇಮ ಮುದ್ರೆಯಾಗಿ. ಪ್ರೀತಿ ಮೃತ್ಯುವಿನಷ್ಟು ಶಕ್ತಿಶಾಲಿ! ಮತ್ಸರ ಪಾತಾಳದಷ್ಟು ಕ್ರೂರಿ ಅದರ ಜ್ವಾಲೆ ಬೆಂಕಿಯ ಉರಿ ಧಗಧಗಿಸುವ ಕೋಪಾಗ್ನಿ.
7
ನಂದಿಸಲಾರವು ಪ್ರೀತಿಯನ್ನು ಜಲರಾಶಿಗಳು ಮುಳುಗಿಸಲಾರವು ಅದನು ಪ್ರವಾಹಗಳು. ಪ್ರೀತಿಯನು ಗಳಿಸಲು ಮನೆಮಾರುಗಳ ಮಾರಿದರೂ ತಿರಸ್ಕಾರವೆ ಅಂಥವನಿಗೆ ಸಿಗುವುದು. ಸೋದರರು:
8
ಇನ್ನೂ ಸ್ತನ ಬಾರದ ತಂಗಿ ನಮಗಿದ್ದಾಳೆ ನಾವೇನು ಮಾಡೋಣ ಅವಳನ್ನು ವರಿಸಲು ಬಂದರೆ?
9
ಅವಳೊಂದು ಕೋಟೆಯಾದರೆ ಕಟ್ಟುವೆವು ಬುರುಜನ್ನು ಬೆಳ್ಳಿಯಿಂದ. ಅವಳೊಂದು ಬಾಗಿಲಾದರೆ ಭದ್ರಪಡಿಸುವೆವು ದೇವದಾರು ಮರಗಳಿಂದ. ನಲ್ಲೆ:
10
ನಾನೊಂದು ಕೋಟೆ, ನನ್ನ ಸ್ತನಗಳೇ ಬುರುಜುಗಳು ಆತನ ದೃಷ್ಟಿಯಲ್ಲಿ ನಾ ಹೊಂದುವೆನು ಶಾಂತಿಯನು ನಲ್ಲೆ:
11
ಸೊಲೊಮೋನನಿಗಿತ್ತು ಬಾಲ್ಹಾಮೋನಿನಲ್ಲಿ ಒಂದು ದ್ರಾಕ್ಷಾತೋಟ ಅದನು ಗುತ್ತಿಗೆಗೆ ಕೊಡಲು ಮೇಲ್ವಿಚಾರಕರಿಗೆ ವಹಿಸಿದ. ಪ್ರತಿಯೊಬ್ಬ ಗುತ್ತಿಗೆಗಾರ ತೆರಬೇಕಾಗಿತ್ತು ಸಾವಿರ ಬೆಳ್ಳಿನಾಣ್ಯ.
12
ಸೊಲೊಮೋನನೇ, ಆ ಸಾವಿರ ಬೆಳ್ಳಿನಾಣ್ಯ ನಿನಗೇ ಇರಲಿ ಮೇಲ್ವಿಚಾರಕರಿಗೆ ಇನ್ನೂರು ನಾಣ್ಯ ಸೇರಲಿ. ಆದರೆ ನನ್ನ ದ್ರಾಕ್ಷಾತೋಟ ನನ್ನ ವಶದಲೇ ಇರಲಿ.
13
ತೋಟಗಳಲಿ ವಾಸವಾಗಿರುವವಳೇ, ನನಗೆ ಕೇಳಮಾಡು ನಿನ್ನ ದನಿ ಗೆಳೆಯರು ಕಾದಿದ್ದಾರೆ ಅದಕ್ಕಾಗಿ. ನಲ್ಲೆ:
14
ಸುಗಂಧಸಸ್ಯ ಪರ್ವತದಿಂದಲೆ ಜಿಂಕೆಯಂತೆ, ಪ್ರಾಯದ ಹುಲ್ಲೆಯಂತೆ ತ್ವರೆಮಾಡಿ ಬಾ ನನ್ನಿನಿಯನೇ.
← Chapter 7
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
All chapters:
1
2
3
4
5
6
7
8