bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
/
1 Samuel 15
1 Samuel 15
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
← Chapter 14
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 16 →
1
ಸಮುಯೇಲನು ಸೌಲನಿಗೆ, “ಯೆಹೋವ ದೇವರು ತಮ್ಮ ಜನರಾದ ಇಸ್ರಾಯೇಲರ ಮೇಲೆ ನಿನ್ನನ್ನು ಅರಸನಾಗಿರಲು ಅಭಿಷೇಕಿಸಲು ನನ್ನನ್ನು ಕಳುಹಿಸಿದರು. ಈಗ ನೀನು ಯೆಹೋವ ದೇವರ ಮಾತುಗಳನ್ನು ಕೇಳು.
2
ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ಇಸ್ರಾಯೇಲರು ಈಜಿಪ್ಟಿನಿಂದ ಬರುವಾಗ ಅಮಾಲೇಕ್ಯರು ಅವರ ಮಾರ್ಗಕ್ಕೆ ಅಡ್ಡಗಟ್ಟಿ ತೊಂದರೆಪಡಿಸಿದರು, ಆದ್ದರಿಂದ ನಾನು ಅವರಿಗೆ ಮುಯ್ಯಿತೀರಿಸುವೆನು.
3
ಈಗ ನೀನು ಹೋಗಿ ಅಮಾಲೇಕ್ಯರನ್ನು ಹೊಡೆದು, ಅವರಿಗೆ ಉಂಟಾದದ್ದನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡಿಬಿಟ್ಟು, ಅವರನ್ನು ಕನಿಕರಿಸದೆ ಪುರುಷರನ್ನೂ, ಸ್ತ್ರೀಯರನ್ನೂ, ಚಿಕ್ಕವರನ್ನೂ, ಹಸುಗೂಸುಗಳನ್ನೂ, ದನಗಳನ್ನೂ, ಕುರಿಗಳನ್ನೂ, ಒಂಟೆಗಳನ್ನೂ, ಕತ್ತೆಗಳನ್ನೂ ಕೊಂದುಹಾಕು,’ ” ಎಂಬದು.
4
ಆಗ ಸೌಲನು ತೆಲಾಯಿಮಿನಲ್ಲಿ ಜನರನ್ನು ಕೂಡಿಸಿ, ಲೆಕ್ಕ ಮಾಡಿದನು. ಇಸ್ರಾಯೇಲರ ಕಾಲಾಳುಗಳು ಎರಡು ಲಕ್ಷ ಜನರೂ, ಯೆಹೂದನ ಮನುಷ್ಯರು ಹತ್ತು ಸಾವಿರ ಜನರೂ ಇದ್ದರು.
5
ಸೌಲನು ಅಮಾಲೇಕ್ಯರ ಪಟ್ಟಣದವರೆಗೂ ಬಂದು, ತಗ್ಗಿನಲ್ಲಿ ಹೊಂಚಿಹಾಕಿದ್ದನು.
6
ಕೇನ್ಯರಿಗೆ, “ಇಸ್ರಾಯೇಲರು ಈಜಿಪ್ಟಿನಿಂದ ಬಂದಾಗ ನೀವು ಅವರೆಲ್ಲರಿಗೆ ದಯೆ ತೋರಿಸಿದ್ದರಿಂದ, ನಾನು ನಿಮ್ಮನ್ನು ಅಮಾಲೇಕ್ಯರ ಸಂಗಡ ನಾಶಮಾಡದ ಹಾಗೆ, ನೀವು ಅವರ ಮಧ್ಯದಲ್ಲಿಂದ ಹೊರಟು ಹೋಗಿರಿ,” ಎಂದು ಹೇಳಿದನು. ಹಾಗೆಯೇ ಕೇನ್ಯರು ಅಮಾಲೇಕ್ಯರ ಮಧ್ಯದಿಂದ ಹೊರಟು ಹೋದರು.
7
ಆಗ ಸೌಲನು ಹವೀಲದಿಂದ ಈಜಿಪ್ಟಿನ ಪೂರ್ವದಿಕ್ಕಿನಲ್ಲಿರುವ ಶೂರಿಗೆ ಹೋಗುವ ಮೇರೆಯವರೆಗೂ ಇದ್ದ ಅಮಾಲೇಕ್ಯರನ್ನು ಹೊಡೆದು,
8
ಅಮಾಲೇಕ್ಯರ ಅರಸನಾದ ಅಗಾಗನನ್ನು ಜೀವಂತವಾಗಿ ಹಿಡಿದನು, ಆದರೆ ಸಮಸ್ತ ಜನರನ್ನು ಖಡ್ಗದಿಂದ ಸಂಪೂರ್ಣ ನಾಶಮಾಡಿದನು.
9
ಸೌಲನೂ, ಅವನ ಜನರೂ ಅಗಾಗನನ್ನೂ ಮೇಲ್ತರವಾದ ಕುರಿಗಳನ್ನೂ ದನಗಳನ್ನೂ ಕುರಿಮರಿಗಳನ್ನೂ, ಉತ್ತಮವಾದ ಸಮಸ್ತವನ್ನೂ ಕನಿಕರಿಸಿದರು. ಅವುಗಳನ್ನು ಸಂಪೂರ್ಣ ನಾಶಮಾಡಲು ಮನಸ್ಸಿಲ್ಲದೆ ಇದ್ದರು. ಆದರೆ ಪ್ರಯೋಜನವಿಲ್ಲದಂಥ ಹೀನವಾದವುಗಳನ್ನೆಲ್ಲಾ ಸಂಪೂರ್ಣ ನಾಶಮಾಡಿದರು.
10
ಆಗ ಯೆಹೋವ ದೇವರ ವಾಕ್ಯವು ಸಮುಯೇಲನಿಗೆ ಉಂಟಾಗಿ,
11
“ನಾನು ಸೌಲನನ್ನು ಅರಸನಾಗಿ ಮಾಡಿದ್ದರಿಂದ ದುಃಖಪಡುತ್ತೇನೆ. ಏಕೆಂದರೆ ಅವನು ನನ್ನನ್ನು ಹಿಂಬಾಲಿಸುವುದನ್ನು ಬಿಟ್ಟು, ಹಿಂದಕ್ಕೆ ಹೋದನು; ನನ್ನ ಆಜ್ಞೆಗಳನ್ನು ಈಡೇರಿಸಲಿಲ್ಲ,” ಎಂದರು. ಅದಕ್ಕೆ ಸಮುಯೇಲನು ಕೋಪಗೊಂಡು ರಾತ್ರಿಯೆಲ್ಲಾ ಯೆಹೋವ ದೇವರಿಗೆ ಮೊರೆಯಿಟ್ಟನು.
12
ಸಮುಯೇಲನು ಉದಯಕಾಲದಲ್ಲೆದ್ದು ಸೌಲನನ್ನು ಎದುರುಗೊಳ್ಳಲು ಹೋದನು. ಆಗ ಅವನಿಗೆ ಹೀಗೆ ಹೇಳಲಾಗಿತ್ತು, “ಸೌಲನು ತನ್ನ ನೆನಪಿಗಾಗಿ ಒಂದು ಸ್ಮಾರಕವನ್ನು ನಿರ್ಮಿಸಲು ಕರ್ಮೆಲಿಗೆ ಹೋಗಿದ್ದಾನೆ. ನಂತರ ಅಲ್ಲಿಂದ ಮುಂದೆ ಹೋಗಿ ಗಿಲ್ಗಾಲಿಗೆ ಹೋಗಿದ್ದಾನೆ.”
13
ಸಮುಯೇಲನು ಸೌಲನ ಬಳಿಗೆ ಬಂದಾಗ, ಸೌಲನು ಅವನಿಗೆ, “ನಿನಗೆ ಯೆಹೋವ ದೇವರ ಆಶೀರ್ವಾದವಾಗಲಿ; ನಾನು ಯೆಹೋವ ದೇವರ ಆಜ್ಞೆಯನ್ನು ಈಡೇರಿಸಿದೆನು,” ಎಂದನು.
14
ಆಗ ಸಮುಯೇಲನು ಅವನಿಗೆ, “ನನ್ನ ಕಿವಿಗಳಲ್ಲಿ ಬೀಳುವ ಆ ಕುರಿಗಳ ಶಬ್ದವೇನು? ನಾನು ಕೇಳುವ ಪಶುಗಳ ಶಬ್ದವೇನು?” ಎಂದನು.
15
ಅದಕ್ಕೆ ಸೌಲನು, “ಜನರು ಅಮಾಲೇಕ್ಯರ ಬಳಿಯಿಂದ ತೆಗೆದುಕೊಂಡು ಬಂದವುಗಳು; ಏಕೆಂದರೆ ನಿನ್ನ ದೇವರಾದ ಯೆಹೋವ ದೇವರಿಗೆ ಬಲಿಯನ್ನು ಅರ್ಪಿಸುವುದಕ್ಕೋಸ್ಕರ ಮೇಲ್ತರವಾದ ಪಶುಕುರಿಗಳನ್ನು ಉಳಿಸಿಟ್ಟು, ಮಿಕ್ಕಾದವುಗಳನ್ನೆಲ್ಲಾ ಸಂಪೂರ್ಣ ನಾಶಮಾಡಿಬಿಟ್ಟೆವು,” ಎಂದನು.
16
ಆಗ ಸಮುಯೇಲನು ಸೌಲನಿಗೆ, “ಅದಿರಲಿ, ಯೆಹೋವ ದೇವರು ಕಳೆದ ರಾತ್ರಿಯಲ್ಲಿ ನನಗೆ ಹೇಳಿದ್ದನ್ನು ನಿನಗೆ ತಿಳಿಸುವೆನು,” ಎಂದನು. ಅದಕ್ಕವನು, “ಹೇಳು,” ಎಂದನು.
17
ಆಗ ಸಮುಯೇಲನು, “ನೀನು ನಿನ್ನ ದೃಷ್ಟಿಯಲ್ಲಿ ಚಿಕ್ಕವನಾಗಿರುವಾಗಲೇ ಇಸ್ರಾಯೇಲ್ ಗೋತ್ರಗಳ ಮೇಲೆ ಯಜಮಾನನಾಗಿ ನೇಮಕವಾದಿಯಲ್ಲವೆ? ಯೆಹೋವ ದೇವರು ನಿನ್ನನ್ನು ಇಸ್ರಾಯೇಲರ ಮೇಲೆ ಅರಸನಾಗಿ ಅಭಿಷೇಕಿಸಿದರಲ್ಲವೆ?
18
ಯೆಹೋವ ದೇವರು ನಿನಗೆ, ‘ಹೋಗು ಪಾಪಿಷ್ಠರಾದ ಅಮಾಲೇಕ್ಯರನ್ನು ಸಂಪೂರ್ಣ ನಾಶಮಾಡಿ, ಅವರು ತೀರಿ ಹೋಗುವವರೆಗೂ ಅವರ ಸಂಗಡ ಯುದ್ಧಮಾಡಬೇಕು,’ ಎಂದು ಆಜ್ಞಾಪಿಸಿದರು.
19
ಹೀಗಿರುವಾಗ ನೀನು ಏಕೆ ಯೆಹೋವ ದೇವರ ಮಾತಿಗೆ ವಿಧೇಯನಾಗದೆ, ಕೊಳ್ಳೆಯ ಮೇಲೆ ಬಿದ್ದು ಯೆಹೋವ ದೇವರ ದೃಷ್ಟಿಗೆ ಕೆಟ್ಟದ್ದನ್ನು ಮಾಡಿದಿ?” ಎಂದನು.
20
ಆಗ ಸೌಲನು ಸಮುಯೇಲನಿಗೆ, “ಹೌದು, ನಾನು ಯೆಹೋವ ದೇವರ ಮಾತಿಗೆ ವಿಧೇಯನಾಗಿ ಯೆಹೋವ ದೇವರು ನನ್ನನ್ನು ಕಳುಹಿಸಿದ ಮಾರ್ಗವಾಗಿ ಹೋಗಿ, ಅಮಾಲೇಕ್ಯರ ಅರಸನಾದ ಅಗಾಗನನ್ನು ಹಿಡಿದುಕೊಂಡು ಬಂದು, ಅಮಾಲೇಕ್ಯರನ್ನು ಸಂಪೂರ್ಣ ನಾಶಮಾಡಿದೆನು.
21
ಆದರೆ ಜನರು ನಿನ್ನ ದೇವರಾದ ಯೆಹೋವ ದೇವರಿಗೆ ಗಿಲ್ಗಾಲಿನಲ್ಲಿ ಬಲಿ ಕೊಡುವುದಕ್ಕಾಗಿ ಕೊಳ್ಳೆಯಲ್ಲಿ ಸಂಪೂರ್ಣವಾಗಿ ನಾಶಮಾಡಬೇಕೆಂದಿರುವ ದನಕುರಿಗಳಲ್ಲಿ ಉತ್ತಮವಾದವುಗಳನ್ನು ಹಿಡಿದುಕೊಂಡು ಬಂದರು,” ಎಂದನು.
22
ಅದಕ್ಕೆ ಸಮುಯೇಲನು ಹೇಳಿದ್ದೇನೆಂದರೆ, “ಯೆಹೋವ ದೇವರ ವಾಕ್ಯಕ್ಕೆ ವಿಧೇಯನಾದರೆ, ಯೆಹೋವ ದೇವರಿಗೆ ಆಗುವ ಸಂತೋಷ ದಹನಬಲಿಗಳಲ್ಲಿಯೂ ಯಜ್ಞಗಳಲ್ಲಿಯೂ ಆಗುವುದೋ? ಇಗೋ, ಯಜ್ಞಕ್ಕಿಂತ ವಿಧೇಯತೆಯು, ಟಗರುಗಳ ಕೊಬ್ಬಿಗಿಂತ ಮಾತುಕೇಳುವುದೇ ಉತ್ತಮವಾಗಿರುವುದು.
23
ಏಕೆಂದರೆ ಪ್ರತಿಭಟಿಸುವುದು ಮಂತ್ರತಂತ್ರಗಳಷ್ಟು ಪಾಪವಾಗಿದೆ. ಹಟಮಾರಿತನವು ದುಷ್ಟತನಕ್ಕೂ ವಿಗ್ರಹಾರಾಧನೆಗೂ ಸಮಾನವಾಗಿದೆ. ನೀನು ಯೆಹೋವ ದೇವರ ವಾಕ್ಯವನ್ನು ಅಲಕ್ಷ್ಯಮಾಡಿದ್ದರಿಂದ ಅವರು ನಿನ್ನನ್ನು ಅರಸನಾಗಿರದ ಹಾಗೆ ತಿರಸ್ಕರಿಸಿಬಿಟ್ಟಿದ್ದಾರೆ.”
24
ಆಗ ಸೌಲನು ಸಮುಯೇಲನಿಗೆ, “ನಾನು ಯೆಹೋವ ದೇವರ ಆಜ್ಞೆಯನ್ನೂ, ನಿನ್ನ ಮಾತುಗಳನ್ನೂ ಮೀರಿದ್ದರಿಂದ ನಾನು ಪಾಪಮಾಡಿದೆನು. ನಾನು ಜನರಿಗೆ ಭಯಪಟ್ಟು ಅವರ ಮಾತನ್ನು ಕೇಳಿದೆನು.
25
ಆದ್ದರಿಂದ ಈಗ ದಯಮಾಡಿ ನನ್ನ ಪಾಪವನ್ನು ಕ್ಷಮಿಸಿ, ನಾನು ಯೆಹೋವ ದೇವರನ್ನು ಆರಾಧಿಸುವ ಹಾಗೆ ನನ್ನ ಸಂಗಡ ತಿರುಗಿ ಬಾ,” ಎಂದು ಬೇಡಿಕೊಂಡನು.
26
ಆದರೆ ಸಮುಯೇಲನು ಸೌಲನಿಗೆ, “ನಾನು ನಿನ್ನ ಸಂಗಡ ಹಿಂದಿರುಗಿ ಬರುವುದಿಲ್ಲ. ಏಕೆಂದರೆ ನೀನು ಯೆಹೋವ ದೇವರ ವಾಕ್ಯವನ್ನು ತಿರಸ್ಕರಿಸಿದ್ದೀ. ಯೆಹೋವ ದೇವರು ನಿನ್ನನ್ನು ಇಸ್ರಾಯೇಲರ ಮೇಲೆ ಅರಸನಾಗಿರದ ಹಾಗೆ ತಿರಸ್ಕಾರಮಾಡಿಬಿಟ್ಟರು,” ಎಂದು ಹೇಳಿದನು.
27
ಸಮುಯೇಲನು ಹೋಗುವುದಕ್ಕೋಸ್ಕರ ತಿರುಗಿಕೊಳ್ಳುವಾಗ ಸೌಲನು ಅವನ ವಸ್ತ್ರದ ಕೊನೆಯನ್ನು ಹಿಡಿದುಕೊಂಡನು. ಆಗ ಅದು ಹರಿದುಹೋಯಿತು.
28
ಸಮುಯೇಲನು ಅವನಿಗೆ, “ನಿನ್ನ ಬಳಿಯಿಂದ ಇಸ್ರಾಯೇಲಿನ ರಾಜ್ಯವನ್ನು ಯೆಹೋವ ದೇವರು ಈ ಹೊತ್ತು ಕಿತ್ತು, ನಿನಗಿಂತ ಒಳ್ಳೆಯವನಾಗಿರುವ ನಿನ್ನ ನೆರೆಯವನಿಗೆ ಅದನ್ನು ಕೊಟ್ಟರು.
29
ಇಸ್ರಾಯೇಲಿನ ಪ್ರತಾಪರು ಸುಳ್ಳು ಹೇಳುವವರಲ್ಲ, ಮಾತನ್ನು ಹಿಂತೆಗೆದುಕೊಳ್ಳುವವರಲ್ಲ. ಏಕೆಂದರೆ ಅವರು ಮನಸ್ಸು ಬದಲಾಯಿಸುವಂಥ ಮನುಷ್ಯರಲ್ಲ,” ಎಂದನು.
30
ಅದಕ್ಕವನು, “ನಾನು ಪಾಪವನ್ನು ಮಾಡಿದೆನು. ಆದರೆ ಈಗ ನೀನು ದಯಮಾಡಿ ನನ್ನ ಜನರ ಹಿರಿಯರ ಮುಂದೆಯೂ, ಇಸ್ರಾಯೇಲರ ಮುಂದೆಯೂ ನನ್ನನ್ನು ಘನಪಡಿಸು. ನಾನು ನಿನ್ನ ದೇವರಾದ ಯೆಹೋವ ದೇವರಿಗೆ ಆರಾಧಿಸುವ ಹಾಗೆ ನೀನು ನನ್ನ ಸಂಗಡ ಹಿಂದಿರುಗಿ ಬಾ,” ಎಂದನು.
31
ಹಾಗೆಯೇ ಸಮುಯೇಲನು ತಿರುಗಿ ಸೌಲನ ಹಿಂದೆ ಹೋದನು. ಸೌಲನು ಯೆಹೋವ ದೇವರನ್ನು ಆರಾಧಿಸಿದನು.
32
ಸಮುಯೇಲನು, “ಅಮಾಲೇಕ್ಯರ ಅರಸನಾದ ಅಗಾಗನನ್ನು ನನ್ನ ಬಳಿಗೆ ತನ್ನಿರಿ,” ಎಂದನು. ಅಗಾಗನು ಆನಂದವಾಗಿ ಅವನ ಬಳಿಗೆ ಹೋಗಿ, “ನಿಶ್ಚಯವಾಗಿ ಮರಣದ ಕಹಿ ತಪ್ಪಿಹೋಯಿತು,” ಎಂದುಕೊಂಡನು.
33
ಆದರೆ ಸಮುಯೇಲನು ಅವನಿಗೆ, “ನಿನ್ನ ಖಡ್ಗವು ಹೇಗೆ ಸ್ತ್ರೀಯರನ್ನು ಮಕ್ಕಳಿಲ್ಲದವರಾಗಿ ಮಾಡಿತೋ, ಹಾಗೆಯೇ ಸ್ತ್ರೀಯರಲ್ಲಿ ನಿನ್ನ ತಾಯಿಯು ಮಕ್ಕಳಿಲ್ಲದವಳಾಗುವಳು,” ಎಂದು ಹೇಳಿ, ಸಮುಯೇಲನು ಗಿಲ್ಗಾಲಿನಲ್ಲಿ ಯೆಹೋವ ದೇವರ ಮುಂದೆ ಅಗಾಗನಿಗೆ ಮರಣದಂಡನೆ ವಿಧಿಸಿದನು.
34
ಸಮುಯೇಲನು ರಾಮಕ್ಕೆ ಹೋದನು; ಆದರೆ ಸೌಲನು ತನ್ನ ಊರಾದ ಗಿಬೆಯದಲ್ಲಿರುವ ತನ್ನ ಮನೆಗೆ ಹೋದನು.
35
ಸಮುಯೇಲನು ತಾನು ಸಾಯುವ ದಿವಸದವರೆಗೂ ಸೌಲನನ್ನು ತಿರುಗಿ ಕಾಣಲು ಬರಲಿಲ್ಲ. ಸಮುಯೇಲನು ಅವನಿಗೋಸ್ಕರ ದುಃಖಪಟ್ಟನು. ಇದಲ್ಲದೆ ಅವನನ್ನು ಇಸ್ರಾಯೇಲಿನ ಮೇಲೆ ಅರಸನಾಗಮಾಡಿದ್ದಕ್ಕೋಸ್ಕರ ಯೆಹೋವ ದೇವರು ದುಃಖಪಟ್ಟರು.
← Chapter 14
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 16 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31