bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
/
1 Samuel 16
1 Samuel 16
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
← Chapter 15
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 17 →
1
ಯೆಹೋವ ದೇವರು ಸಮುಯೇಲನಿಗೆ, “ಇಸ್ರಾಯೇಲಿನ ಅರಸನಾಗಿರದ ಹಾಗೆ ನಾನು ಅಲಕ್ಷ್ಯಮಾಡಿದ ಸೌಲನಿಗೋಸ್ಕರ ನೀನು ಎಷ್ಟರವರೆಗೆ ದುಃಖವುಳ್ಳವನಾಗಿರುವೆ? ನೀನು ನಿನ್ನ ಕೊಂಬನ್ನು ತೈಲದಿಂದ ತುಂಬಿಸಿಕೊಂಡು ಬಾ. ಬೇತ್ಲೆಹೇಮಿನವನಾದ ಇಷಯನ ಬಳಿಗೆ ನಿನ್ನನ್ನು ಕಳುಹಿಸುವೆನು. ಏಕೆಂದರೆ ಅವನ ಮಕ್ಕಳಲ್ಲಿ ನಾನು ಒಬ್ಬನನ್ನು ಅರಸನಾಗಿ ಆಯ್ದುಕೊಂಡೆನು,” ಎಂದರು.
2
ಆಗ ಸಮುಯೇಲನು, “ನಾನು ಹೋಗುವುದು ಹೇಗೆ? ಸೌಲನು ಅದನ್ನು ಕೇಳಿದರೆ, ನನ್ನನ್ನು ಕೊಂದುಹಾಕುವನು,” ಎಂದನು. ಅದಕ್ಕೆ ಯೆಹೋವ ದೇವರು, “ನೀನು ಒಂದು ಕಡಸನ್ನು ನಿನ್ನ ಸಂಗಡ ತೆಗೆದುಕೊಂಡುಹೋಗಿ, ‘ನಾನು ಯೆಹೋವ ದೇವರಿಗಾಗಿ ಯಜ್ಞಮಾಡುವುದಕ್ಕೆ ಬಂದೆನು,’ ಎಂದು ಹೇಳಿ,
3
ಇಷಯನನ್ನು ಯಜ್ಞವನ್ನು ಅರ್ಪಿಸುವುದಕ್ಕೆ ಕರೆಯಬೇಕು; ಆಗ ನೀನು ಮಾಡಬೇಕಾದದ್ದನ್ನು ನಾನು ನಿನಗೆ ತಿಳಿಸುವೆನು. ನಾನು ನಿನಗೆ ಯಾರನ್ನು ತೋರಿಸುತ್ತೇನೋ, ಅವನನ್ನು ನೀನು ನನಗೋಸ್ಕರ ಅಭಿಷೇಕಿಸಬೇಕು,” ಎಂದರು.
4
ಯೆಹೋವ ದೇವರು ಹೇಳಿದ ಪ್ರಕಾರ ಸಮುಯೇಲನು ಮಾಡಿ, ಬೇತ್ಲೆಹೇಮಿಗೆ ಬಂದನು. ಆಗ ಊರಿನ ಹಿರಿಯರು ಅವನ ಬರುವಿಕೆಯನ್ನು ಕಂಡು ನಡುಗಿ, ಅವನಿಗೆ, “ಸಮಾಧಾನವಾಗಿ ಬಂದೆಯೋ?” ಎಂದರು.
5
ಅದಕ್ಕವನು, “ಸಮಾಧಾನವೇ, ಯೆಹೋವ ದೇವರಿಗೆ ಬಲಿಯನ್ನು ಅರ್ಪಿಸ ಬಂದೆನು. ನೀವು ನಿಮ್ಮನ್ನು ಪರಿಶುದ್ಧ ಮಾಡಿಕೊಂಡು ನನ್ನ ಸಂಗಡ ಯಜ್ಞಮಾಡುವುದಕ್ಕೆ ಬನ್ನಿರಿ,” ಎಂದನು. ಇಷಯನನ್ನೂ, ಅವನ ಮಕ್ಕಳನ್ನೂ ಶುದ್ಧಮಾಡಿ, ಅವರನ್ನು ಯಜ್ಞಮಾಡುವುದಕ್ಕೆ ಕರೆದನು.
6
ಅವರು ಬಂದಾಗ, ಅವನು ಎಲೀಯಾಬನನ್ನು ಕಂಡು, “ನಿಶ್ಚಯವಾಗಿ ಯೆಹೋವ ದೇವರ ಅಭಿಷಿಕ್ತನು ಅವರ ಮುಂದೆ ಇದ್ದಾನೆ,” ಎಂದುಕೊಂಡನು.
7
ಆದರೆ ಯೆಹೋವ ದೇವರು ಸಮುಯೇಲನಿಗೆ, “ನೀನು ಅವನ ರೂಪವನ್ನೂ, ಅವನ ದೇಹದ ಎತ್ತರವನ್ನೂ ದೃಷ್ಟಿಸಬೇಡ. ಏಕೆಂದರೆ ಅವನನ್ನು ನಾನು ತಿರಸ್ಕರಿಸಿದೆನು; ಏಕೆಂದರೆ ಯೆಹೋವ ದೇವರು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ಮಾತ್ರ ನೋಡದೆ, ಹೃದಯವನ್ನೇ ನೋಡುವರು,” ಎಂದನು.
8
ಆಗ ಇಷಯನು ಅಬೀನಾದಾಬನನ್ನು ಕರೆದು ಅವನನ್ನು ಸಮುಯೇಲನ ಮುಂದೆ ಬರಮಾಡಿದನು. ಆದರೆ ಅವನು ಇವನನ್ನು, “ಯೆಹೋವ ದೇವರು ಆರಿಸಿಕೊಳ್ಳಲಿಲ್ಲ,” ಎಂದನು.
9
ಇಷಯನು ಶಮ್ಮನನ್ನು ಬರಮಾಡಿದನು; ಆದರೆ ಅವನು, “ಇವನನ್ನು ಯೆಹೋವ ದೇವರು ಆಯ್ದುಕೊಳ್ಳಲಿಲ್ಲ,” ಎಂದನು.
10
ಅನಂತರ ಇಷಯನು ತನ್ನ ಏಳುಮಂದಿ ಪುತ್ರರನ್ನು ಸಮುಯೇಲನ ಮುಂದೆ ಬರಮಾಡಿದನು. ಆದರೆ ಸಮುಯೇಲನು ಇಷಯನಿಗೆ, “ಯೆಹೋವ ದೇವರು ಇವರಲ್ಲಿ ಒಬ್ಬನನ್ನಾದರೂ ಆಯ್ದುಕೊಳ್ಳಲಿಲ್ಲ,” ಎಂದನು.
11
ಸಮುಯೇಲನು, “ನಿನಗಿರುವ ಮಕ್ಕಳು ಇಷ್ಟೇನೋ?” ಎಂದು ಇಷಯನನ್ನು ಕೇಳಿದನು. ಅದಕ್ಕವನು, “ಇವರೆಲ್ಲರಿಗಿಂತಲೂ ಚಿಕ್ಕವನೊಬ್ಬನು ಉಳಿದಿದ್ದಾನೆ. ಅವನು ಕುರಿಗಳನ್ನು ಕಾಯುತ್ತಾ ಇದ್ದಾನೆ,” ಎಂದನು. ಆಗ ಸಮುಯೇಲನು ಇಷಯನಿಗೆ, “ಅವನನ್ನು ಕರೆಕಳುಹಿಸು. ಏಕೆಂದರೆ ಅವನು ಇಲ್ಲಿಗೆ ಬರುವವರೆಗೆ ನಾವು ಕುಳಿತುಕೊಳ್ಳಬಾರದು,” ಎಂದನು.
12
ಆಗ ಇಷಯನು ಅವನನ್ನು ಕರೆಯಕಳುಹಿಸಿದನು. ಅವನು ಕೆಂಪಾದ ಮೈಬಣ್ಣದವನಾಗಿಯೂ, ಸುಂದರ ಮುಖವುಳ್ಳವನಾಗಿಯೂ, ನೋಟಕ್ಕೆ ಚೆಲುವಿಕೆಯುಳ್ಳವನಾಗಿಯೂ ಇದ್ದನು. ಆಗ ಯೆಹೋವ ದೇವರು ಸಮುಯೇಲನಿಗೆ, “ನೀನೆದ್ದು ಇವನನ್ನು ಅಭಿಷೇಕಿಸು. ಇವನು ಅವನೇ,” ಎಂದರು.
13
ಸಮುಯೇಲನು ಎಣ್ಣೆ ಇರುವ ಕೊಂಬನ್ನು ತೆಗೆದುಕೊಂಡು, ಅವನನ್ನು ಅವನ ಸಹೋದರರ ಮಧ್ಯದಲ್ಲಿ ಅಭಿಷೇಕ ಮಾಡಿದನು. ಆ ದಿವಸದಲ್ಲೇ ಯೆಹೋವ ದೇವರ ಆತ್ಮರು ಕೂಡಲೆ ದಾವೀದನ ಮೇಲೆ ಇಳಿದು ಬಂದರು. ಅನಂತರ ಸಮುಯೇಲನು ಎದ್ದು ರಾಮಕ್ಕೆ ಹೋದನು.
14
ಯೆಹೋವ ದೇವರ ಆತ್ಮರು ಸೌಲನನ್ನು ಬಿಟ್ಟುಹೋಗಲು, ದೇವರಿಂದ ಬಂದ ದುರಾತ್ಮವು ಅವನನ್ನು ಪೀಡಿಸಿತು.
15
ಆಗ ಸೌಲನ ಸೇವಕರು ಅವನಿಗೆ, “ಇಗೋ, ದೇವರಿಂದ ಬಂದ ದುರಾತ್ಮವು ನಿನ್ನನ್ನು ಹೆದರಿಸುತ್ತದೆ.
16
ಕಿನ್ನರಿಯನ್ನು ಬಾರಿಸಲು ನಿಪುಣನಾದ ಒಬ್ಬನನ್ನು ಹುಡುಕುವ ಹಾಗೆ ನಮ್ಮ ಒಡೆಯನಾದ ನೀನು ನಿನ್ನ ಸನ್ನಿಧಿಯಲ್ಲಿರುವ ನಿನ್ನ ಸೇವಕರಿಗೆ ಹೇಳಬೇಕು. ದೇವರಿಂದ ಬಂದ ದುರಾತ್ಮವು ನಿನ್ನ ಮೇಲೆ ಬಂದಿರುವಾಗ, ಅವನು ತನ್ನ ಕೈಯಿಂದ ವಾದ್ಯ ಬಾರಿಸಿದರೆ, ನಿನಗೆ ಒಳ್ಳೆಯದಾಗಿರುವುದು,” ಎಂದರು.
17
ಸೌಲನು ತನ್ನ ಸೇವಕರಿಗೆ, “ವಾದ್ಯ ಚೆನ್ನಾಗಿ ಬಾರಿಸಬಲ್ಲವನಾದ ಒಬ್ಬನನ್ನು ನನಗೋಸ್ಕರ ನೋಡಿ ನನ್ನ ಬಳಿಗೆ ಕರೆದುಕೊಂಡು ಬನ್ನಿರಿ,” ಎಂದನು.
18
ಆಗ ಸೇವಕರಲ್ಲಿ ಒಬ್ಬನು ಅವನಿಗೆ ಉತ್ತರವಾಗಿ, “ವಾದ್ಯ ಬಾರಿಸಲು ನಿಪುಣನಾದಂಥ ಬೇತ್ಲೆಹೇಮಿನವನಾದ ಇಷಯನ ಮಗನನ್ನು ಕಂಡೆನು. ಅವನು ಧೈರ್ಯಶಾಲಿಯೂ, ಪರಾಕ್ರಮಶಾಲಿಯೂ, ರಣಶೂರನೂ, ವಾಕ್ಚತುರನೂ, ಸುಂದರನೂ ಆಗಿದ್ದಾನೆ. ಇದಲ್ಲದೆ ಯೆಹೋವ ದೇವರು ಅವನ ಸಂಗಡ ಇದ್ದಾರೆ,” ಎಂದನು.
19
ಆದಕಾರಣ ಸೌಲನು ಇಷಯನ ಬಳಿಗೆ ದೂತರನ್ನು ಕಳುಹಿಸಿ, “ಕುರಿಗಳ ಬಳಿಯಲ್ಲಿ ಇರುವ ನಿನ್ನ ಪುತ್ರನಾದ ದಾವೀದನನ್ನು ನನ್ನ ಬಳಿಗೆ ಕಳುಹಿಸು,” ಎಂದನು.
20
ಆಗ ಇಷಯನು ರೊಟ್ಟಿಯನ್ನೂ, ಒಂದು ಬುದ್ದಲಿ ದ್ರಾಕ್ಷಾರಸವನ್ನೂ, ಒಂದು ಮೇಕೆಯ ಮರಿಯನ್ನೂ ಕತ್ತೆಯ ಮೇಲೆ ಹೇರಿ, ತನ್ನ ಮಗನಾದ ದಾವೀದನ ಮೂಲಕ ಸೌಲನಿಗೆ ಕಳುಹಿಸಿದನು.
21
ಹಾಗೆಯೇ ದಾವೀದನು ಸೌಲನ ಬಳಿಗೆ ಬಂದು ಅವನ ಸೇವಕನಾದನು. ಸೌಲನು ಇವನನ್ನು ಬಹಳವಾಗಿ ಮೆಚ್ಚಿದನು. ಅವನನ್ನು ತನ್ನ ಆಯುಧ ಹೊರುವವರಲ್ಲಿ ಒಬ್ಬನನ್ನಾಗಿ ನೇಮಿಸಿಕೊಂಡನು.
22
ಸೌಲನು ಇಷಯನ ಬಳಿಗೆ ಮನುಷ್ಯನನ್ನು ಕಳುಹಿಸಿ, “ದಾವೀದನು ನನ್ನ ಸಮ್ಮುಖದಲ್ಲಿ ಸೇವೆಮಾಡಲಿ. ಏಕೆಂದರೆ ನಾನು ದಾವೀದನನ್ನು ಮೆಚ್ಚಿದ್ದೇನೆ,” ಎಂದನು.
23
ಹಾಗೆಯೇ ದೇವರಿಂದ ಬಂದ ದುರಾತ್ಮವು ಸೌಲನ ಮೇಲೆ ಬಂದಾಗ, ದಾವೀದನು ಕಿನ್ನರಿಯನ್ನು ತೆಗೆದುಕೊಂಡು, ತನ್ನ ಕೈಯಿಂದ ಬಾರಿಸುವನು. ಅದರಿಂದ ಸೌಲನು ಉಪಶಮನ ಹೊಂದಿ ಚೆನ್ನಾಗಿರುವನು; ದುರಾತ್ಮವು ಅವನನ್ನು ಬಿಟ್ಟು ಹೋಗುವುದು.
← Chapter 15
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 17 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31