bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
/
1 Samuel 20
1 Samuel 20
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
← Chapter 19
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 21 →
1
ದಾವೀದನು ರಾಮದ ನಯೋತಿನಿಂದ ಓಡಿಹೋಗಿ ಯೋನಾತಾನನ ಬಳಿಗೆ ಬಂದು, ಅವನ ಮುಂದೆ, “ನಾನು ಏನು ಮಾಡಿದೆನು? ನನ್ನ ಅಕ್ರಮವೇನು? ನಿನ್ನ ತಂದೆಯು ನನ್ನ ಪ್ರಾಣವನ್ನು ಹುಡುಕುವ ಹಾಗೆ ನಾನು ಅವನಿಗೆ ಮಾಡಿದ ದ್ರೋಹವೇನು?” ಎಂದನು.
2
ಯೋನಾತಾನನು ಅವನಿಗೆ, “ಅದು ಆಗಬಾರದು. ನೀನು ಸಾಯುವುದಿಲ್ಲ; ನನ್ನ ತಂದೆಯು ನನಗೆ ತಿಳಿಸದೆ ಯಾವ ಚಿಕ್ಕ ಕಾರ್ಯವನ್ನಾದರೂ, ದೊಡ್ಡ ಕಾರ್ಯವನ್ನಾದರೂ ಮಾಡುವುದಿಲ್ಲ. ಈ ಕಾರ್ಯವನ್ನು ಯಾತಕ್ಕೆ ನನ್ನ ತಂದೆಯು ನನಗೆ ಬಚ್ಚಿಟ್ಟನು? ಹಾಗೆ ಆಗದು,” ಎಂದನು.
3
ದಾವೀದನು ಪ್ರಮಾಣಮಾಡಿ, “ನಿನ್ನ ಕಣ್ಣು ಮುಂದೆ ನನಗೆ ದಯೆ ದೊರಕಿತೆಂದು ನಿನ್ನ ತಂದೆಯು ನಿಶ್ಚಲವಾಗಿ ಬಲ್ಲನು. ಆದಕಾರಣ ಅವನು ಯೋನಾತಾನನು ವ್ಯಥೆಪಡದ ಹಾಗೆ, ‘ಅವನು ಇದನ್ನು ತಿಳಿಯಬಾರದು,’ ಎಂದು ಹೇಳುತ್ತಾನೆ. ನಿಶ್ಚಯವಾಗಿ ಯೆಹೋವ ದೇವರಾಣೆ, ನನ್ನ ಪ್ರಾಣದಾಣೆ, ನನಗೂ ಮರಣಕ್ಕೂ ಒಂದು ಹೆಜ್ಜೆ ಮಾತ್ರ ದೂರ ಇದೆ,” ಎಂದನು.
4
ಆಗ ಯೋನಾತಾನನು ದಾವೀದನಿಗೆ, “ನಿನ್ನ ಪ್ರಾಣವು ಏನೇನು ಹೇಳುತ್ತದೋ, ನಿನಗೋಸ್ಕರ ನಾನು ಅದನ್ನು ಮಾಡುವೆನು,” ಎಂದನು.
5
ದಾವೀದನು ಯೋನಾತಾನನಿಗೆ, “ನಾಳೆ ಅಮಾವಾಸ್ಯೆ, ಆದ್ದರಿಂದ ನಾನು ಅರಸನ ಸಂಗಡ ಪಂಕ್ತಿಯಲ್ಲಿ ಊಟ ಮಾಡಲೇ ಬೇಕಾಗಿರುವುದು. ನಾನು ಮೂರನೆಯ ದಿವಸದ ಸಾಯಂಕಾಲದವರೆಗೆ ಹೊಲದಲ್ಲಿ ಬಚ್ಚಿಟ್ಟುಕೊಂಡಿರಲು, ನನ್ನನ್ನು ಹೋಗಗೊಡಿಸು.
6
ನಿನ್ನ ತಂದೆಯು ನಾನು ಅಲ್ಲಿ ಇಲ್ಲದಿರುವುದನ್ನು ಕಂಡು, ಶ್ರದ್ಧೆಯಿಂದ ವಿಚಾರಿಸಿ ಅವನು ಎಲ್ಲಿ? ಎಂದು ಕೇಳಿದರೆ, ‘ದಾವೀದನು ತನ್ನ ಊರಾದ ಬೇತ್ಲೆಹೇಮಿಗೆ ಹೋಗಬೇಕೆಂದು ನನ್ನನ್ನು ಬಹಳವಾಗಿ ಬೇಡಿಕೊಂಡನು. ಏಕೆಂದರೆ ತನ್ನ ಸಮಸ್ತ ಕುಟುಂಬಕ್ಕೋಸ್ಕರ ವರುಷದ ಯಜ್ಞ ಮಾಡುತ್ತಾರೆ,’ ಎಂದು ಹೇಳು.
7
ಅದಕ್ಕೆ ಅವನು, ‘ಒಳ್ಳೆಯದು,’ ಎಂದು ಹೇಳಿದರೆ, ನಿನ್ನ ಸೇವಕನಿಗೆ ಸಮಾಧಾನವಾಗಿರುವುದು. ಅವನು ಬಹಳ ಕೋಪ ಮಾಡಿದರೆ, ಅವನಿಂದ ಕೇಡು ಸಿದ್ಧವಾಗಿದೆ ಎಂದು ತಿಳಿದುಕೋ.
8
ಆದ್ದರಿಂದ ನೀನು ನಿನ್ನ ಸೇವಕನ ಮೇಲೆ ದಯೆ ತೋರಿಸಬೇಕು. ಏಕೆಂದರೆ ಯೆಹೋವ ದೇವರ ಒಡಂಬಡಿಕೆಯನ್ನು ನಿನ್ನ ಸೇವಕನೊಂದಿಗೆ ಮಾಡಿಕೊಂಡಿದ್ದೀಯಲ್ಲಾ. ಆದರೂ ನನ್ನಲ್ಲಿ ಅಕ್ರಮವಿದ್ದರೆ, ನೀನೇ ನನ್ನನ್ನು ಕೊಂದುಹಾಕು. ನನ್ನನ್ನು ನಿನ್ನ ತಂದೆಯ ಬಳಿಗೆ ಕರೆದುಕೊಂಡು ಹೋಗುವುದು ಏಕೆ?” ಎಂದನು.
9
ಆಗ ಯೋನಾತಾನನು, “ಅದು ನಿನಗೆ ದೂರವಾಗಿರಲಿ. ಏಕೆಂದರೆ ನಿನಗೆ ನನ್ನ ತಂದೆಯಿಂದ ಕೇಡು ಸಿದ್ಧವಾಗಿದ್ದರೆ, ನಾನು ಅದನ್ನು ನಿನಗೆ ತಿಳಿಸದೆ ಇರುವೆನೋ?” ಎಂದನು.
10
ದಾವೀದನು ಯೋನಾತಾನನಿಗೆ, “ನಿನ್ನ ತಂದೆಯು ನಿನಗೆ ಕಠಿಣವಾದ ಉತ್ತರ ಹೇಳಿದರೆ, ಅದನ್ನು ನನಗೆ ತಿಳಿಸುವವರು ಯಾರು?” ಎಂದನು.
11
ಆಗ ಯೋನಾತಾನನು ದಾವೀದನಿಗೆ, “ನಾವು ಹೊಲಕ್ಕೆ ಹೋಗೋಣ ಬಾ,” ಎಂದನು. ಹಾಗೆಯೇ ಅವರಿಬ್ಬರೂ ಹೊಲಕ್ಕೆ ಹೊರಟು ಹೋದರು.
12
ಯೋನಾತಾನನು ದಾವೀದನಿಗೆ, “ಇಸ್ರಾಯೇಲರ ದೇವರಾದ ಯೆಹೋವ ದೇವರೇ, ನಾನು ನಾಳೆ ನಾಡಿದ್ದರೊಳಗೆ ನನ್ನ ತಂದೆಯನ್ನು ವಿಚಾರಿಸಲು, ದಾವೀದನ ಮೇಲೆ ದಯೆ ಇದ್ದರೆ ನಿನಗೆ ತಿಳಿಸುವ ಹಾಗೆ ಹೇಳಿಕಳುಹಿಸದೆ ಇದ್ದರೆ, ಯೆಹೋವ ದೇವರು ಯೋನಾತಾನನಿಗೆ ಅದಕ್ಕಿಂತ ಅಧಿಕವಾಗಿ ಮಾಡಲಿ.
13
ಆದರೆ ನಿನಗೆ ಕೇಡು ಮಾಡಲು ನನ್ನ ತಂದೆಗೆ ಮನಸ್ಸಾಗಿದ್ದರೆ, ಅದನ್ನು ನಿನಗೆ ತಿಳಿಸಿ ನೀನು ಸಮಾಧಾನದಿಂದ ಹೋಗುವಹಾಗೆ ನಿನ್ನನ್ನು ಕಳುಹಿಸುವೆನು. ಯೆಹೋವ ದೇವರು ನನ್ನ ತಂದೆಯ ಸಂಗಡ ಇದ್ದ ಹಾಗೆಯೇ ನಿನ್ನ ಸಂಗಡ ಇರಲಿ.
14
ಆದರೆ ನಾನು ಇನ್ನೂ ಬದುಕುತ್ತಿರುವಾಗ ನಾನು ಸಾಯದ ಹಾಗೆ ನೀನು ಯೆಹೋವ ದೇವರ ದಯೆಯನ್ನು ನನ್ನ ಮೇಲೆ ತೋರಿಸಿಬೇಕಾದದ್ದಲ್ಲದೆ,
15
ಯೆಹೋವ ದೇವರು ದಾವೀದನ ಶತ್ರುಗಳಲ್ಲಿ ಒಬ್ಬನೂ ಇಲ್ಲದ ಹಾಗೆ ಭೂಮಿಯಿಂದ ತೆಗೆದುಬಿಟ್ಟಾಗ, ಎಂದಿಗೂ ನಿನ್ನ ದಯೆಯನ್ನು ನನ್ನ ಮನೆಯಿಂದ ತೆಗೆದುಹಾಕಬಾರದು,” ಎಂದನು.
16
ಹೀಗೆಯೇ ಯೋನಾತಾನನು ದಾವೀದನ ಸಂಗಡ ಒಡಂಬಡಿಕೆಯನ್ನು ಮಾಡಿಕೊಂಡು, “ಅಗಲಿದರೆ ಯೆಹೋವ ದೇವರೇ ಶತ್ರುಗಳ ಕೈಯಿಂದ ದಾವೀದನಿಗೆ ಮುಯ್ಯಿ ತೀರಿಸಲಿ,” ಎಂದನು.
17
ಯೋನಾತಾನನು ದಾವೀದನನ್ನು ಪ್ರೀತಿಮಾಡಿದ್ದರಿಂದ, ಅವನಿಂದ ತಿರುಗಿ ಪ್ರಮಾಣ ತೆಗೆದುಕೊಂಡನು. ಅವನು ತನ್ನ ಪ್ರಾಣವನ್ನು ಪ್ರೀತಿಮಾಡಿದ ಹಾಗೆಯೇ, ಅವನನ್ನು ಪ್ರೀತಿಮಾಡಿದನು.
18
ಯೋನಾತಾನನು ದಾವೀದನಿಗೆ, “ನಾಳೆ ಅಮಾವಾಸ್ಯೆ; ನೀನು ಅಲ್ಲಿ ಇಲ್ಲದಿರುವುದರಿಂದ ನಿನ್ನ ಸ್ಥಳವು ಬರಿದಾಗಿರುವುದು.
19
ನೀನು ಮೂರು ದಿವಸ ತಡೆದ ತರುವಾಯ, ಕೆಲಸವು ನಡೆಯುತ್ತಿರುವಾಗ ನೀನು ಬಚ್ಚಿಟ್ಟುಕೊಂಡಿದ್ದ ಸ್ಥಳಕ್ಕೆ ತ್ವರೆಯಾಗಿ ತಿರುಗಿಬಂದು, ಏಜಲ್ ಎಂಬ ಕಲ್ಲಿನ ಬಳಿಯಲ್ಲಿ ಕುಳಿತಿರು.
20
ಆಗ ನಾನು ಗುರಿಯಿಟ್ಟವನ ಹಾಗೆ ಅದರ ಕಡೆಗೆ ಮೂರು ಬಾಣಗಳನ್ನು ಎಸೆಯುವೆನು.
21
ಅನಂತರ ಹುಡುಗನನ್ನು ಕಳುಹಿಸಿ, ‘ಆ ಬಾಣಗಳನ್ನು ಹುಡುಕಿಕೊಂಡು ಬಾ,’ ಎಂದು ಹೇಳುವೆನು. ‘ಆ ಬಾಣಗಳು ನಿನಗೆ ಈಚೆ ಬಿದ್ದಿವೆ, ಅವುಗಳನ್ನು ತೆಗೆದುಕೊಂಡು ಬಾ,’ ಎಂದು ನಾನು ಹುಡುಗನಿಗೆ ಹೇಳಿದರೆ, ನೀನು ಬರಬಹುದು. ಏಕೆಂದರೆ ಯೆಹೋವ ದೇವರಾಣೆ, ನಿನಗೆ ಕೇಡಿಲ್ಲದೆ ಸಮಾಧಾನವಿರುವುದು.
22
ಆದರೆ, ‘ಇಗೋ, ಬಾಣಗಳು ನಿನ್ನ ಆಚೆ ಬಿದ್ದಿವೆ,’ ಎಂದು ಹುಡುಗನಿಗೆ ಹೇಳಿದರೆ, ಹೊರಟು ಹೋಗು. ಏಕೆಂದರೆ ಯೆಹೋವ ದೇವರು ನಿನ್ನನ್ನು ದೂರ ಕಳುಹಿಸಿದರು.
23
ನಾನೂ, ನೀನೂ ಮಾತನಾಡಿಕೊಂಡ ಈ ಕಾರ್ಯಕ್ಕೆ ಯೆಹೋವ ದೇವರು ನನಗೂ, ನಿನಗೂ ಮಧ್ಯೆ ಎಂದೆಂದಿಗೂ ಸಾಕ್ಷಿಯಾಗಿರುವರು,” ಎಂದು ಹೇಳಿದನು.
24
ಹಾಗೆಯೇ ದಾವೀದನು ಹೊಲದಲ್ಲಿ ಬಚ್ಚಿಟ್ಟುಕೊಂಡಿದ್ದನು. ಅಮಾವಾಸ್ಯೆಯಾದಾಗ ಅರಸನು ಭೋಜನವನ್ನು ಮಾಡಲು ಕುಳಿತನು.
25
ಅರಸನು ಎಂದಿನಂತೆ ಗೋಡೆಯ ಬಳಿಯಲ್ಲಿ ಇರುವ ತನ್ನ ಆಸನದ ಮೇಲೆ ಕುಳಿತಾಗ, ಯೋನಾತಾನನು ಎದ್ದನು ಆದರೆ ಅಬ್ನೇರನು ಸೌಲನ ಬಳಿಯಲ್ಲಿ ಕುಳಿತನು. ದಾವೀದನು ಇರುವ ಸ್ಥಳವು ಬರಿದಾಗಿತ್ತು.
26
ಆದರೂ ಸೌಲನು ಆ ದಿವಸದಲ್ಲಿ ಅವನನ್ನು ಕುರಿತು ಏನೂ ಹೇಳದೆ, “ಅವನಿಗೆ ಏನಾದರೂ ಸಂಭವಿಸಿರಬೇಕು; ಅವನು ಅಶುಚಿಯಾಗಿರಬಹುದು; ನಿಶ್ಚಯವಾಗಿ ಅಶುಚಿಯಾಗಿದ್ದಾನೆ,” ಎಂದು ಹೇಳಿಕೊಂಡನು.
27
ಅಮಾವಾಸ್ಯೆಯ ಮಾರನೆಯ ದಿವಸದಲ್ಲಿ ಅಂದರೆ ತಿಂಗಳಿನ ಎರಡನೆಯ ದಿವಸದಲ್ಲಿ ದಾವೀದನು ಕೂಡುವ ಸ್ಥಳವು ಹಾಗೆಯೇ ಬರಿದಾಗಿತ್ತು. ಆದ್ದರಿಂದ ಸೌಲನು, “ಇಷಯನ ಮಗನು ನಿನ್ನೆಯೂ ಈ ಹೊತ್ತೂ ಭೋಜನಕ್ಕೆ ಏಕೆ ಬರಲಿಲ್ಲ?” ಎಂದು ತನ್ನ ಪುತ್ರನಾದ ಯೋನಾತಾನನನ್ನು ಕೇಳಿದನು.
28
ಯೋನಾತಾನನು ಸೌಲನಿಗೆ ಉತ್ತರವಾಗಿ, “ಬೇತ್ಲೆಹೇಮಿನವರೆಗೂ ಹೋಗಿ ಬರಲು ದಾವೀದನು ನನ್ನನ್ನು ಬಹಳವಾಗಿ ಬೇಡಿಕೊಂಡನು.
29
ಅವನು ನನಗೆ, ‘ದಯಮಾಡಿ ನನಗೆ ಅಪ್ಪಣೆಕೊಡು. ಏಕೆಂದರೆ ಊರೊಳಗೆ ನಮ್ಮ ಕುಟುಂಬಕ್ಕೆ ಯಜ್ಞ ಮಾಡುವುದಿದೆ. ನನ್ನ ಸಹೋದರರು ನನ್ನನ್ನು ಬರಲು ಹೇಳಿ ಕಳುಹಿಸಿದರು. ಈಗ ನಿನ್ನ ದೃಷ್ಟಿಯಲ್ಲಿ ನನಗೆ ದಯೆ ದೊರಕಿದರೆ, ನಾನು ಅಪ್ಪಣೆ ತೆಗೆದುಕೊಂಡು ನನ್ನ ಸಹೋದರರನ್ನು ಕಾಣುವುದಕ್ಕೆ ಹೋಗುತ್ತೇನೆ,’ ಎಂದನು. ಆದ್ದರಿಂದ ಅವನು ಅರಸನ ಮೇಜಿಗೆ ಬರಲಿಲ್ಲ,” ಎಂದನು.
30
ಆಗ ಸೌಲನು ಯೋನಾತಾನನ ಮೇಲೆ ಕೋಪಗೊಂಡು ಅವನಿಗೆ, “ವಕ್ರವಾಗಿ ಎದುರು ಬೀಳುವ ಸ್ತ್ರೀಯ ಮಗನೇ, ನಿನಗೆ ನಾಚಿಕೆಯಾಗುವ ಹಾಗೆಯೂ, ಇಷಯನ ಮಗನನ್ನು ನೀನು ಆರಿಸಿಕೊಂಡಿದ್ದೀ ಎಂದು ನಾನರಿಯೆನೋ? ಇದರಿಂದ ನಿನಗೂ ನಿನ್ನನ್ನು ಹೆತ್ತವಳಿಗೂ ಅಸಹ್ಯವಾಗುವುದು.
31
ಏಕೆಂದರೆ ಇಷಯನ ಮಗನು ಭೂಮಿಯ ಮೇಲೆ ಬದುಕುವ ದಿವಸಗಳವರೆಗೂ ನೀನಾದರೂ, ನಿನ್ನ ರಾಜ್ಯವಾದರೂ ಸ್ಥಿರವಾಗುವುದಿಲ್ಲ. ಆದ್ದರಿಂದ ಈಗ ನೀನು ಅವನನ್ನು ಕರೆಕಳುಹಿಸಿ, ನನ್ನ ಬಳಿಗೆ ತೆಗೆದುಕೊಂಡು ಬಾ. ಏಕೆಂದರೆ ಅವನು ನಿಜವಾಗಿ ಸಾಯಲೇಬೇಕು,” ಎಂದನು.
32
ಅದಕ್ಕೆ ಯೋನಾತಾನನು ತನ್ನ ತಂದೆ ಸೌಲನಿಗೆ ಉತ್ತರವಾಗಿ, “ಅವನನ್ನು ಏಕೆ ಕೊಲೆಮಾಡಬೇಕು? ಅವನು ಏನು ಮಾಡಿದನು?” ಎಂದನು.
33
ಆಗ ಸೌಲನು ಅವನನ್ನು ಹೊಡೆಯಲು ಈಟಿಯನ್ನು ಅವನ ಮೇಲೆ ಎಸೆದನು. ಆದ್ದರಿಂದ ಯೋನಾತಾನನು ತನ್ನ ತಂದೆಯು ದಾವೀದನನ್ನು ಕೊಂದುಹಾಕಲು ದೃಢಮಾಡಿದನೆಂದು ತಿಳಿದುಕೊಂಡನು.
34
ಯೋನಾತಾನನು ಕೋಪದಿಂದ ಉರಿಗೊಂಡು ಮೇಜಿನಿಂದ ಎದ್ದು ಹೋದನು. ಹಬ್ಬದ ಎರಡನೆಯ ದಿನವಾಗಿದ್ದ ಅಂದು ಅವನು ಊಟ ಮಾಡಲಿಲ್ಲ. ಏಕೆಂದರೆ ತನ್ನ ತಂದೆಯು ದಾವೀದನಿಗೆ ಅವಮಾನ ಮಾಡಿದ್ದರಿಂದ, ಅವನಿಗೋಸ್ಕರ ವ್ಯಥೆಪಟ್ಟನು.
35
ಉದಯದಲ್ಲಿ ಯೋನಾತಾನನು ದಾವೀದನಿಗೆ ನೇಮಿಸಿದ ವೇಳೆಯ ಪ್ರಕಾರವೇ ಒಬ್ಬ ಚಿಕ್ಕ ಹುಡುಗನನ್ನು ಕರೆದುಕೊಂಡು,
36
ಹೊಲಕ್ಕೆ ಹೊರಟುಹೋಗಿ ಹುಡುಗನಿಗೆ, “ನೀನು ಓಡಿಹೋಗಿ ನಾನು ಎಸೆಯುವ ಬಾಣಗಳನ್ನು ಹುಡುಕಿಕೊಂಡು ಬಾ,” ಎಂದು ಹೇಳಿ, ಆ ಹುಡುಗನು ಓಡುವಾಗ ಅವನಿಗೆ, ಆಚೆ ಹೋಗುವಹಾಗೆ ಬಾಣವನ್ನು ಎಸೆದನು.
37
ಯೋನಾತಾನನು ಎಸೆದ ಬಾಣವಿರುವ ಸ್ಥಳದವರೆಗೆ ಹುಡುಗನು ಹೋದಾಗ, “ಬಾಣವು ನಿನ್ನ ಆಚೆ ಇಲ್ಲವೋ?” ಎಂದು ಯೋನಾತಾನನು ಹುಡುಗನ ಹಿಂದೆ ಕೂಗಿದನು.
38
“ನೀನು ಆಲಸ್ಯಮಾಡದೇ ತ್ವರೆಯಾಗಿ ಹೋಗು,” ಎಂದು ಯೋನಾತಾನನು ಹುಡುಗನ ಹಿಂದೆ ಕೂಗಿ ಹೇಳಿದನು. ಹಾಗೆಯೇ ಯೋನಾತಾನನ ಹುಡುಗನು ಬಾಣಗಳನ್ನು ಕೂಡಿಸಿಕೊಂಡು, ತನ್ನ ಯಜಮಾನನ ಬಳಿಗೆ ತಂದನು.
39
ಆ ಹುಡುಗನು ಏನೂ ತಿಳಿಯದೆ ಇದ್ದನು. ಯೋನಾತಾನನೂ, ದಾವೀದನೂ ಮಾತ್ರ ಆ ಸಂಗತಿಯನ್ನು ತಿಳಿದುಕೊಂಡಿದ್ದರು.
40
ಆಗ ಯೋನಾತಾನನು ತನ್ನ ಆಯುಧಗಳನ್ನು ತನ್ನ ಹುಡುಗನಿಗೆ ಕೊಟ್ಟು ಅವನಿಗೆ, “ಅವುಗಳನ್ನು ಪಟ್ಟಣದೊಳಕ್ಕೆ ತೆಗೆದುಕೊಂಡು ಹೋಗು,” ಎಂದನು.
41
ಹುಡುಗನು ಹೋಗುತ್ತಲೇ ದಾವೀದನು ದಕ್ಷಿಣ ಕಡೆಯಿಂದ ಎದ್ದು ಬಂದು ಯೋನಾತಾನನ ಮುಂದೆ ಬೋರಲು ಬಿದ್ದು ಮೂರು ಸಾರಿ ವಂದಿಸಿದನು. ಅವರು ಒಬ್ಬರಿಗೊಬ್ಬರು ಮುದ್ದಿಟ್ಟುಕೊಂಡು, ಒಬ್ಬರನ್ನೊಬ್ಬರು ನೋಡಿ ಅತ್ತರು. ದಾವೀದನು ಬಹಳವಾಗಿ ಅತ್ತನು.
42
ಆಗ ಯೋನಾತಾನನು ದಾವೀದನಿಗೆ, “ನೀನು ಸಮಾಧಾನವಾಗಿ ಹೋಗು, ಯೆಹೋವ ದೇವರು ಎಂದೆಂದಿಗೂ ನನಗೂ, ನಿನಗೂ, ನನ್ನ ಸಂತಾನಕ್ಕೂ, ನಿನ್ನ ಸಂತಾನಕ್ಕೂ ಸಾಕ್ಷಿಯಾಗಿರಲೆಂದು ಮಧ್ಯದಲ್ಲಿ ಯೆಹೋವ ದೇವರ ಹೆಸರಿನಿಂದ ಆಣೆಯಿಟ್ಟು ನಾವಿಬ್ಬರೂ ಪ್ರಮಾಣ ಮಾಡಿಕೊಂಡೆವಲ್ಲಾ,” ಎಂದನು. ಆಗ ದಾವೀದನು ಎದ್ದು ಹೋದನು. ಯೋನಾತಾನನು ಪಟ್ಟಣಕ್ಕೆ ಹೋದನು.
← Chapter 19
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 21 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31