bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
1 Chronicles 2
1 Chronicles 2
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 1
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 3 →
1
ಇಸ್ರಾಯೇಲನ ಮಕ್ಕಳು ಯಾರಂದರೆ - ರೂಬೇನ್, ಸಿಮೆಯೋನ್, ಲೇವಿ, ಯೆಹೂದ,
2
ಇಸ್ಸಾಕಾರ್, ಜೆಬುಲೂನ್, ದಾನ್, ಯೋಸೇಫ್, ಬೆನ್ಯಾಮೀನ್, ನಫ್ತಾಲಿ, ಗಾದ್, ಆಶೇರ್, ಇವರೇ.
3
ಯೆಹೂದನಿಗೆ ಶೂನನ ಮಗಳಾದ ಕಾನಾನ್ ಸ್ತ್ರೀಯಲ್ಲಿ ಏರ್, ಓನಾನ್, ಶೇಲಾಹ ಎಂಬ ಮೂರು ಮಂದಿ ಮಕ್ಕಳು ಹುಟ್ಟಿದರು. ಯೆಹೂದನ ಚೊಚ್ಚಲ ಮಗನಾದ ಏರನು ಯೆಹೋವನ ಚಿತ್ತಕ್ಕೆ ವಿರುದ್ಧವಾಗಿ ನಡೆದದರಿಂದ ಯೆಹೋವನು ಅವನನ್ನು ಸಾಯಿಸಿದನು.
4
ಯೆಹೂದನ ಸೊಸೆಯಾದ ತಾಮಾರಳು ಅವನಿಂದ ಪೆರೆಚ್, ಜೆರಹ ಎಂಬವರನ್ನು ಹೆತ್ತಳು.
5
ಯೆಹೂದನ ಎಲ್ಲಾ ಮಕ್ಕಳು ಐದು ಮಂದಿ. ಪೆರೆಚನ ಮಕ್ಕಳು - ಹೆಚ್ರೋನ್, ಹಾಮೂಲ್.
6
ಜೆರಹನ ಮಕ್ಕಳು - ಜಿಮ್ರಿ, ಏತಾನ್, ಹೇಮಾನ್, ಕಲ್ಕೋಲ್, ದಾರ; ಒಟ್ಟು ಐದು ಮಂದಿ.
7
ಮೀಸಲಾದ ವಸ್ತುಗಳನ್ನು ಕದ್ದುಕೊಂಡು ಇಸ್ರಾಯೇಲ್ಯರನ್ನು ಆಪತ್ತಿಗೆ ಗುರಿಮಾಡಿದ ಆಕಾರನು ಕರ್ಮೀಯಿಂದ ಹುಟ್ಟಿದನು.
8
ಏತಾನನಿಂದ ಅಜರ್ಯನು ಹುಟ್ಟಿದನು.
9
ಹೆಚ್ರೋನನ ಸಂತಾನದವರು - ಅವನಿಂದ ಯೆರಹ್ಮೇಲ್, ರಾಮ್, ಕೆಲೂಬಾಯ್ ಎಂಬವರು ಹುಟ್ಟಿದರು.
10
ರಾಮನು ಅಮ್ಮೀನಾದಾಬನನ್ನು ಪಡೆದನು; ಅಮ್ಮೀನಾದಾಬನು ಯೆಹೂದಕುಲ ಪ್ರಭುವಾದ ನಹಶೋನನನ್ನು ಪಡೆದನು;
11
ನಹಶೋನನು ಸಲ್ಮನನ್ನು ಪಡೆದನು;
12
ಸಲ್ಮನು ಬೋವಜನನ್ನು ಪಡೆದನು; ಬೋವಜನು ಓಬೇದನನ್ನು ಪಡೆದನು; ಓಬೇದನು ಇಷಯನನ್ನು ಪಡೆದನು.
13
ಇಷಯನ ಚೊಚ್ಚಲಮಗನು ಎಲೀಯಾಬ್; ಮರಚಲನು ಅಬೀನಾದಾಬ್; ಮೂರನೆಯವನು ಶಿಮ್ಮ;
14
ನಾಲ್ಕನೆಯವನು ನೆತನೇಲ್;
15
ಐದನೆಯವನು ರದ್ದೈ; ಆರನೆಯವನು ಓಚೆಮ್; ಏಳನೆಯವನು ದಾವೀದ್.
16
ಚೆರೂಯ ಅಬೀಗೈಲರು ಅವರ ಸಹೋದರಿಯರು. ಅಬ್ಷೈ, ಯೋವಾಬ್, ಅಸಾಹೇಲ್ ಎಂಬ ಮೂವರು ಚೆರೂಯಳ ಮಕ್ಕಳು.
17
ಅಬೀಗೈಲಳು ಅಮಾಸನ ತಾಯಿ; ಇಷ್ಮಾಯೇಲ್ಯನಾದ ಯೆತೆರ್ ಎಂಬವನು ಅವನ ತಂದೆ.
18
ಹೆಚ್ರೋನನ ಮಗನಾದ ಕಾಲೇಬನು ತನ್ನ ಹೆಂಡತಿಯಾದ ಅಜೂಬಳಿಂದಲೂ ಯೆರ್ಯೋತಳಿಂದಲೂ [ಮಕ್ಕಳನ್ನು] ಪಡೆದನು. ಆಕೆಯಲ್ಲಿ ಅವನಿಗೆ ಹುಟ್ಟಿದ ಮಕ್ಕಳು - ಯೇಷೆರ್, ಶೋಬಾಬ್, ಅರ್ದೋನ್ ಎಂಬವರು.
19
ಅಜೂಬಳು ಸತ್ತ ಮೇಲೆ ಅವನು ಎಫ್ರಾತಳನ್ನು ತೆಗೆದುಕೊಂಡನು. ಆಕೆಯಲ್ಲಿ ಅವನಿಗೆ ಹೂರನು ಹುಟ್ಟಿದನು.
20
ಹೂರನು ಊರಿಯನ್ನು ಪಡೆದನು; ಊರಿಯು ಬೆಚಲೇಲನನ್ನು ಪಡೆದನು.
21
ಹೆಚ್ರೋನನು ಅರುವತ್ತು ವರುಷದವನಾದಾಗ ಗಿಲ್ಯಾದ್ಯರ ಮೂಲ ಪುರುಷನಾದ ಮಾಕೀರನ ಮಗಳನ್ನು ಪರಿಗ್ರಹಿಸಲು ಆಕೆಯು ಅವನಿಂದ ಸೆಗೂಬನನ್ನು ಹೆತ್ತಳು.
22
ಸೆಗೂಬನು ಯಾಯೀರನನ್ನು ಪಡೆದನು. ಇವನಿಗೆ ಗಿಲ್ಯಾದ್ ದೇಶದಲ್ಲಿ ಇಪ್ಪತ್ತಮೂರು ಪಟ್ಟಣಗಳಿದ್ದವು.
23
ಗೆಷೂರ್ಯರೂ ಅರಾಮ್ಯರೂ ಯಾಯೀರನ ಸಂತಾನದವರಿಂದ ಯಾಯೀರನ ಗ್ರಾಮಗಳನ್ನೂ ಕೆನತ್ ಪ್ರಾಂತದ ಗ್ರಾಮಗಳನ್ನೂ ಒಟ್ಟು ಅರುವತ್ತು ಸ್ಥಾನಗಳನ್ನು ಕಿತ್ತುಕೊಂಡರು. ಈ ಸ್ಥಾನಗಳವರೆಲ್ಲರೂ ಗಿಲ್ಯಾದ್ಯರ ಮೂಲ ಪುರುಷನಾದ ಮಾಕೀರನ ಗೋತ್ರದವರು.
24
ಹೆಚ್ರೋನನು ಕಾಲೇಬ್ ಎಫ್ರಾತದಲ್ಲಿ ಸತ್ತನಂತರ ಅವನ ಹೆಂಡತಿಯಾದ ಅಬೀಯ ಎಂಬಾಕೆಯು ಅಷ್ಹೂರನನ್ನು ಹೆತ್ತಳು. ಇವನು ತೆಕೋವದವರ ಮೂಲ ಪುರುಷನು.
25
ಹೆಚ್ರೋನನ ಚೊಚ್ಚಲಮಗನಾದ ಯೆರಹ್ಮೇಲನ ಮಕ್ಕಳು - ರಾಮನು ಚೊಚ್ಚಲನು; ಬೂನ, ಓರೆನ್, ಓಚೆಮ್, ಅಹೀಯ ಎಂಬವರು ಅನಂತರ ಹುಟ್ಟಿದವರು.
26
ಯೆರಹ್ಮೇಲನಿಗೆ ಅಟಾರ ಎಂಬ ಇನ್ನೊಬ್ಬ ಹೆಂಡತಿಯಿದ್ದಳು; ಈಕೆಯು ಓನಾಮನ ತಾಯಿ.
27
ಯೆರಹ್ಮೇಲನ ಚೊಚ್ಚಲಮಗನಾದ ರಾಮನ ಮಕ್ಕಳು - ಮಾಚ್, ಯಾಮೀನ್, ಏಕೆರ್ ಇವರೇ.
28
ಓನಾಮನ ಮಕ್ಕಳು - ಶಮ್ಮೈ, ಯಾದ ಎಂಬವರು. ಶಮ್ಮೈಯ ಮಕ್ಕಳು - ನಾದಾಬ್, ಅಬೀಷೂರ್; ಅಬೀಷೂರನ ಹೆಂಡತಿಯ ಹೆಸರು ಅಬೀಹೈಲ್.
29
ಈಕೆಯಲ್ಲಿ ಅವನಿಗೆ ಅಹ್ಬಾನ್, ಮೋಲೀದ್ ಎಂಬವರು ಹುಟ್ಟಿದರು.
30
ನಾದಾಬನ ಮಕ್ಕಳು - ಸೆಲೆದ್, ಅಪ್ಪಯಿಮ್ ಎಂಬವರು.
31
ಸೆಲೆದನು ಮಕ್ಕಳಿಲ್ಲದೆ ಸತ್ತನು. ಅಪ್ಪಯಿಮನ ಮಗನು ಇಷ್ಷೀ; ಇಷ್ಷೀಯ ಮಗನು ಶೇಷಾನ್; ಶೇಷಾನನ ಮಗನು ಅಹ್ಲೈ.
32
ಶಮ್ಮೈಯ ತಮ್ಮನಾದ ಯಾದನ ಮಕ್ಕಳು - ಯೆತೆರ್, ಯೋನಾತಾನ್ ಇವರೇ; ಯೆತೆರನು ಮಕ್ಕಳಿಲ್ಲದೆ ಸತ್ತನು.
33
ಯೋನಾತಾನನ ಮಕ್ಕಳು - ಪೆಲೆತ್, ಜಾಜ ಎಂಬವರು. ಇವರು ಯೆರಹ್ಮೇಲನ ಸಂತಾನದವರು.
34
ಶೇಷಾನನಿಗೆ ಹೆಣ್ಣು ಮಕ್ಕಳಿದ್ದರೇ ಹೊರತು ಗಂಡುಮಕ್ಕಳಿರಲಿಲ್ಲ; ಇದಲ್ಲದೆ ಅವನಿಗೆ ಯರ್ಹನೆಂಬ ಒಬ್ಬ ಐಗುಪ್ತ್ಯ ದಾಸನಿದ್ದನು.
35
ಶೇಷಾನನು ತನ್ನ ಮಗಳನ್ನು ದಾಸನಾದ ಯರ್ಹನಿಗೆ ಮದುವೆಮಾಡಿಕೊಟ್ಟನು.
36
ಆಕೆಯು ಅವನಿಂದ ಅತ್ತೈಯನ್ನು ಹೆತ್ತಳು. ಅತ್ತೈಯು ನಾತಾನನನ್ನು ಪಡೆದನು; ನಾತಾನನು ಜಾಬಾದನನ್ನು ಪಡೆದನು.
37
ಜಾಬಾದನು ಎಫ್ಲಾಲನನ್ನು ಪಡೆದನು; ಎಫ್ಲಾಲನು ಓಬೇದನನ್ನು ಪಡೆದನು.
38
ಓಬೇದನು ಯೇಹೂವನ್ನು ಪಡೆದನು; ಯೇಹೂವು ಅಜರ್ಯನನ್ನು ಪಡೆದನು;
39
ಅಜರ್ಯನು ಹೆಲೆಚನನ್ನು ಪಡೆದನು; ಹೆಲೆಚನು ಎಲ್ಲಾಸನನ್ನು ಪಡೆದನು.
40
ಎಲ್ಲಾಸನು ಸಿಸ್ಮೈಯನ್ನು ಪಡೆದನು; ಸಿಸ್ಮೈಯು ಶಲ್ಲೂಮನನ್ನು ಪಡೆದನು.
41
ಶಲ್ಲೂಮನು ಯೆಕಮ್ಯಾಹನನ್ನು ಪಡೆದನು; ಯೆಕಮ್ಯಾಹನು ಎಲೀಷಾಮನನ್ನು ಪಡೆದನು.
42
ಯೆರಹ್ಮೇಲನ ಸಹೋದರನಾದ ಕಾಲೇಬನ ಸಂತಾನದವರು - ಚೊಚ್ಚಲನೂ ಜೀಫ್ಯರ ಮೂಲಪುರುಷನೂ ಆದ ಮೇಷನು, ಮಾರೇಷ ವಂಶದವರು ಇವರೇ.
43
ಮಾರೇಷನು ಹೆಬ್ರೋನ್ಯರ ಮೂಲಪುರುಷನು. ಹೆಬ್ರೋನ್ಯರಿಂದ ಕೋರಹ, ತಪ್ಪೂಹ, ರೆಕೆಮ್, ಶೆಮ ಎಂಬ ಊರುಗಳವರು ಉತ್ಪತ್ತಿಯಾದರು.
44
ಶೆಮ್ಯರಿಂದ ರಹಮ್ಯರು, ರಹಮ್ಯರಿಂದ ಯೊರ್ಕೆಯಾಮ್ಯರು ಉತ್ಪತ್ತಿಯಾದರು.
45
ರೆಕೆಮನು ಶಮ್ಮೈಯನ್ನು ಪಡೆದನು. ಶಮ್ಮೈಯಿಂದ ಮಾವೋನ್ಯರು, ಮಾವೋನ್ಯರಿಂದ ಬೇತ್ಸೂರಿನವರು ಉತ್ಪತ್ತಿಯಾದರು.
46
ಕಾಲೇಬನ ಉಪಪತ್ನಿಯಾದ ಏಫಳಲ್ಲಿ ಹಾರಾನ್, ಮೋಚ, ಗಾಜೇಜ್ ಎಂಬವರು ಹುಟ್ಟಿದರು.
47
ಹಾರಾನನು ಗಾಜೇಜನನ್ನು ಪಡೆದನು. ಯಾದೈಯಳಲ್ಲಿ ರೆಗೆಮ್, ಯೋತಾಮ್, ಗೇಷಾನ್, ಪೆಲೆಟ್, ಏಫ, ಶಾಫ್ ಎಂಬವರು ಹುಟ್ಟಿದರು.
48
ಕಾಲೇಬನ ಉಪಪತ್ನಿಯಾದ ಮಾಕಳಲ್ಲಿ ಶೆಬೆರ್, ತಿರ್ಹನ ಎಂಬವರು ಹುಟ್ಟಿದರು.
49
ಇವಳಲ್ಲಿ ಮದ್ಮನ್ನದವರ ಮೂಲಪುರುಷನಾದ ಶಾಫ್, ಮಕ್ಬೇನ ಗಿಬ್ಯ ಊರುಗಳವರ ಮೂಲಪುರುಷನಾದ ಶೆವ ಇವರು ಹುಟ್ಟಿದರು.
50
ಕಾಲೇಬನ ಮಗಳು ಅಕ್ಸಾಹ ಎಂಬಾಕೆಯು. ಇವರು ಕಾಲೇಬನ ಮಕ್ಕಳು. ಎಫ್ರಾತಳ ಚೊಚ್ಚಲಮಗನಾದ ಹೂರನ ಮಕ್ಕಳು - ಕಿರ್ಯತ್ಯಾರೀಮ್ಯರ ಮೂಲಪುರುಷನಾದ ಶೋಬಾಲ್, ಬೇತ್ಲೆಹೇಮ್ಯರ ಮೂಲಪುರುಷನಾದ ಸಲ್ಮ,
51
ಬೇತ್ಗಾದೇರಿನವರ ಮೂಲಪುರುಷನಾದ ಹಾರೇಫ್ ಎಂಬವರು.
52
ಕಿರ್ಯತ್ಯಾರೀವಿುನವರ ಮೂಲಪುರುಷನಾದ ಶೋಬಾಲನ ಸಂತಾನದವರು - ಹಾರೋಯೆ, ಮಾನಹತಿಯರ ಅರ್ಧಜನರು,
53
ಕಿರ್ಯತ್ಯಾರೀಮ್ ಕುಟುಂಬಗಳವರು, ಯೆತೆರಿನವರು, ಪೂತ್ಯರು, ಶುಮಾತ್ಯರು, ವಿುಷ್ರಾಗ್ಯರು ಇವರೇ. ಇವರಿಂದ ಚೊರ್ರಾತ್ಯರೂ ಎಷ್ಟಾವೋಲ್ಯರೂ ಹೊರಟುಬಂದರು.
54
ಸಲ್ಮನಿಂದ ಬೇತ್ಲೆಹೇಮ್ ನೆಟೋಫಾ ಅಟರೋತ್ ಬೇತ್ಯೋವಾಬ್ ಊರುಗಳವರೂ ಚೊರ್ಗದಲ್ಲಿ ವಾಸಿಸುವ ಮಾನಹತಿಯರಲ್ಲಿ ಅರ್ಧಜನರೂ ಉತ್ಪತ್ತಿಯಾದರು.
55
ಯಾಬೇಚಿನಲ್ಲಿ ವಾಸಿಸುವ ಕುಲಕರಣಿ ಕುಟುಂಬದವರಾದ ತಿರ್ರಾತ್ಯರು, ಶಿಮ್ಗಾತ್ಯರು, ಸೂಕಾತ್ಯರು ಇವರು ರೇಕಾಬನ ಮನೆಯವರ ಮೂಲಪುರುಷನಾಗಿರುವ ಹಮತನಿಂದ ಉತ್ಪನ್ನರಾದ ಕೇನ್ಯರು.
← Chapter 1
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 3 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29