bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
1 Chronicles 6
1 Chronicles 6
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 5
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 7 →
1
ಲೇವಿಯ ಮಕ್ಕಳು - ಗೇರ್ಷೋನ್, ಕೆಹಾತ್, ಮೆರಾರೀ.
2
ಕೆಹಾತನ ಮಕ್ಕಳು - ಅಮ್ರಾಮ್, ಇಚ್ಹಾರ್, ಹೆಬ್ರೋನ್, ಉಜ್ಜೀಯೇಲ್.
3
ಅಮ್ರಾಮನ ಮಕ್ಕಳು - ಆರೋನ್, ಮೋಶೆ, ವಿುರ್ಯಾಮ್. ಆರೋನನ ಮಕ್ಕಳು - ನಾದಾಬ್, ಅಬೀಹೂ, ಎಲ್ಲಾಜಾರ್, ಈತಾಮಾರ್.
4
ಎಲ್ಲಾಜಾರನು ಫೀನೆಹಾಸನನ್ನು ಪಡೆದನು; ಫೀನೆಹಾಸನು ಅಬೀಷೂವನನ್ನು ಪಡೆದನು.
5
ಅಬೀಷೂವನು ಬುಕ್ಕೀಯನ್ನು ಪಡೆದನು; ಬುಕ್ಕೀಯು ಉಜ್ಜೀಯನ್ನು ಪಡೆದನು;
6
ಉಜ್ಜೀಯು ಜೆರಹ್ಯನನ್ನು ಪಡೆದನು; ಜೆರಹ್ಯನು ಮೆರಾಯೋತನನ್ನು ಪಡೆದನು;
7
ಮೆರಾಯೋತನು ಅಮರ್ಯನನ್ನು ಪಡೆದನು; ಅಮರ್ಯನು ಅಹೀಟೂಬನನ್ನು ಪಡೆದನು;
8
ಅಹೀಟೂಬನು ಚಾದೋಕನನ್ನು ಪಡೆದನು; ಚಾದೋಕನು ಅಹೀಮಾಚನನ್ನು ಪಡೆದನು;
9
ಅಹೀಮಾಚನು ಅಜರ್ಯನನ್ನು ಪಡೆದನು; ಅಜರ್ಯನು ಯೋಹಾನಾನನನ್ನು ಪಡೆದನು;
10
ಯೋಹಾನಾನನು ಅಜರ್ಯನನ್ನು ಪಡೆದನು; ಸೊಲೊಮೋನನು ಕಟ್ಟಿಸಿದ ಯೆರೂಸಲೇವಿುನ ದೇವಾಲಯದಲ್ಲಿ ಯಾಜಕಸೇವೆಮಾಡುತ್ತಿದ್ದವನು ಇವನೇ.
11
ಅಜರ್ಯನು ಅಮರ್ಯನನ್ನು ಪಡೆದನು; ಅಮರ್ಯನು ಅಹೀಟೂಬನನ್ನು ಪಡೆದನು;
12
ಅಹೀಟೂಬನು ಚಾದೋಕನನ್ನು ಪಡೆದನು; ಚಾದೋಕನು ಶಲ್ಲೂಮನನ್ನು ಪಡೆದನು;
13
ಶಲ್ಲೂಮನು ಹಿಲ್ಕೀಯನನ್ನು ಪಡೆದನು; ಹಿಲ್ಕೀಯನು ಅಜರ್ಯನನ್ನು ಪಡೆದನು;
14
ಅಜರ್ಯನು ಸೆರಾಯನನ್ನು ಪಡೆದನು; ಸೆರಾಯನು ಯೆಹೋಚಾದಾಕನನ್ನು ಪಡೆದನು.
15
ನೆಬೂಕದ್ನೆಚ್ಚರನು ಯೆಹೋವನ ಪ್ರೇರಣೆಯಿಂದ ಯೆಹೂದ್ಯರನ್ನೂ ಯೆರೂಸಲೇವಿುನವರನ್ನೂ ಸೆರೆಯೊಯ್ದಾಗ ಈ ಯೆಹೋಚಾದಾಕನೂ ಅವರೊಡನಿದ್ದನು.
16
ಲೇವಿಯ ಮಕ್ಕಳು - ಗೇರ್ಷೋಮ್, ಕೆಹಾತ್, ಮೆರಾರೀ.
17
ಗೇರ್ಷೋಮನ ಮಕ್ಕಳು - ಲಿಬ್ನೀ, ಶಿಮ್ಮೀ ಎಂಬವರು.
18
ಕೆಹಾತನ ಮಕ್ಕಳು - ಅಮ್ರಾಮ್, ಇಚ್ಹಾರ್, ಹೆಬ್ರೋನ್, ಉಜ್ಜೀಯೇಲ್ ಇವರೇ.
19
ಮೆರಾರಿಯ ಮಕ್ಕಳು - ಮಹ್ಲೀ, ಮುಷೀ; ಇವರೆಲ್ಲರೂ ಲೇವಿಗೋತ್ರಗಳ ಮೂಲ ಪುರುಷರು.
20
ಗೇರ್ಷೋಮನ [ಗೋತ್ರ] - ಗೇರ್ಷೋಮನ ಮಗನು ಲಿಬ್ನೀ; ಇವನ ಮಗನು ಯಹತ್; ಇವನ ಮಗನು ಜಿಮ್ಮ;
21
ಇವನ ಮಗನು ಯೋವಾಹ; ಇವನ ಮಗನು ಇದ್ದೋ; ಇವನ ಮಗನು ಜೆರಹ; ಇವನ ಮಗನು ಯೆವತ್ರೈ.
22
ಕೆಹಾತನ ಸಂತಾನದವರು - ಇವನ ಮಗನು ಅಮ್ಮೀನಾದಾಬ್; ಇವನ ಮಗನು ಕೋರಹ; ಇವನ ಮಗನು ಅಸ್ಸೀರ್;
23
ಇವನ ಮಗನು ಎಲ್ಕಾನ; ಇವನ ಮಗನು ಎಬ್ಯಾಸಾಫ್; ಇವನ ಮಗನು ಅಸ್ಸೀರ್;
24
ಇವನ ಮಗನು ತಹತ್; ಇವನ ಮಗನು ಊರೀಯೇಲ್; ಇವನ ಮಗನು ಉಜ್ಜೀಯ; ಇವನ ಮಗನು ಸೌಲ್.
25
ಎಲ್ಕಾನನ ಮಕ್ಕಳು - ಅಮಾಸೈ, ಅಹೀಮೋತ್, ಎಲ್ಕಾನ ಎಂಬವರು.
26
ಎಲ್ಕಾನನ ಸಂತಾನದವರು - ಇವನ ಮಗನು ಚೋಫೈ; ಇವನ ಮಗನು ನಹತ್;
27
ಇವನ ಮಗನು ಎಲೀಯಾಬ್; ಇವನ ಮಗನು ಯೆರೋಹಾಮ್; ಇವನ ಮಗನು ಎಲ್ಕಾನ;
28
ಸಮುವೇಲನ ಮಕ್ಕಳು - ಯೋವೇಲ್ ಚೊಚ್ಚಲನು; ಅಬೀಯ ಎರಡನೆಯವನು.
29
ಮೆರಾರೀ ಸಂತಾನದವರು - ಇವನ ಮಗನು ಮಹ್ಲೀ; ಇವನ ಮಗನು ಲಿಬ್ನೀ; ಇವನ ಮಗನು ಶಿಮ್ಮೀ;
30
ಇವನ ಮಗನು ಉಜ್ಜ; ಇವನ ಮಗನು ಶಿಮ್ಮಾ; ಇವನ ಮಗನು ಹಗ್ಗೀಯ; ಇವನ ಮಗನು ಅಸಾಯ.
31
ಮಂಜೂಷವು ವಿಶ್ರಾಂತಿಹೊಂದಿದ ಮೇಲೆ ದಾವೀದನಿಂದ ಯೆಹೋವನ ಆಲಯದಲ್ಲಿ ವಾದ್ಯ ಸೇವೆಗೆ ನೇವಿುಸಲ್ಪಟ್ಟವರ ಪಟ್ಟಿ.
32
ಸೊಲೊಮೋನನು ಯೆರೂಸಲೇವಿುನಲ್ಲಿ ಯೆಹೋವನ ಆಲಯವನ್ನು ಕಟ್ಟುವ ತನಕ ಅವರು ದೇವದರ್ಶನದ ಗುಡಾರವೆಂಬ ಆಲಯದ ಮುಂದೆ ತಮ್ಮ ಕ್ರಮಾನುಸಾರವಾಗಿ ವಾದ್ಯಸೇವೆಯನ್ನು ನಡಿಸುತ್ತಿದ್ದರು.
33
ದೇವಾಲಯಸೇವಕರೂ ಅವರ ವಂಶಾವಳಿಯೂ - ಕೆಹಾತ್ಯನಾದ ಹೇಮಾನನು [ಮೊದಲನೆಯವನು].
34
ಗಾಯಕನಾದ ಇವನು ಯೋವೇಲನ ಮಗನು; ಇವನು ಸಮುವೇಲನ ಮಗನು; ಇವನು ಎಲ್ಕಾನನ ಮಗನು; ಇವನು ಯೆರೋಹಾಮನ ಮಗನು; ಇವನು ಎಲೀಯೇಲನ ಮಗನು; ಇವನು ತೋಹನ ಮಗನು;
35
ಇವನು ಚೂಫನ ಮಗನು; ಇವನು ಎಲ್ಕಾನನ ಮಗನು; ಇವನು ಮಹತನ ಮಗನು; ಇವನು ಅಮಾಸೈಯ ಮಗನು;
36
ಇವನು ಎಲ್ಕಾನನ ಮಗನು; ಇವನು ಯೋವೇಲನ ಮಗನು; ಇವನು ಅಜರ್ಯನ ಮಗನು;
37
ಇವನು ಚೆಫನ್ಯನ ಮಗನು; ಇವನು ತಹತನ ಮಗನು; ಇವನು ಅಸೀರನ ಮಗನು; ಇವನು ಎಬ್ಯಾಸಾಫನ ಮಗನು; ಇವನು ಕೋರಹನ ಮಗನು;
38
ಇವನು ಇಚ್ಹಾರನ ಮಗನು; ಇವನು ಕೆಹಾತನ ಮಗನು; ಇವನು ಲೇವಿಯ ಮಗನು; ಇವನು ಇಸ್ರಾಯೇಲನ ಮಗನು.
39
ಇವನ ಬಲಗಡೆಯಲ್ಲಿ ನಿಲುತ್ತಿದ್ದ ಇವನ ಸಹೋದರನಾದ ಆಸಾಫನು [ಎರಡನೆಯವನು].
40
ಇವನು ಬೆರೆಕ್ಯನ ಮಗನು; ಇವನು ಶಿಮ್ಮನ ಮಗನು; ಇವನು ಮೀಕಾಯೇಲನ ಮಗನು; ಇವನು ಬಾಸೇಯನ ಮಗನು; ಇವನು ಮಲ್ಕೀಯನ ಮಗನು;
41
ಇವನು ಎತ್ನಿಯ ಮಗನು; ಇವನು ಜೆರಹನ ಮಗನು;
42
ಇವನು ಅದಾಯನ ಮಗನು; ಇವನು ಏತಾನನ ಮಗನು;
43
ಇವನು ಜಿಮ್ಮನ ಮಗನು; ಇವನು ಶಿಮ್ಮೀಯ ಮಗನು; ಇವನು ಯಹತನ ಮಗನು; ಇವನು ಗೇರ್ಷೋಮನ ಮಗನು; ಇವನು ಲೇವಿಯ ಮಗನು.
44
ಇವನ ಎಡಗಡೆಯಲ್ಲಿ ನಿಲ್ಲುತ್ತಿದ್ದ ಇವನ ಸಹೋದರನೂ ಮೆರಾರೀಯನೂ ಆದ ಏತಾನನು [ಮೂರನೆಯವನು]. ಇವನು ಕೀಷೀಯ ಮಗನು; ಇವನು ಅಬ್ದೀಯ ಮಗನು; ಇವನು ಮಲ್ಲೂಕನ ಮಗನು;
45
ಇವನು ಹಷಬ್ಯನ ಮಗನು; ಇವನು ಅಮಚ್ಯನ ಮಗನು; ಇವನು ಹಿಲ್ಕೀಯನ ಮಗನು.
46
ಇವನು ಅವ್ಚಿುೕಯ ಮಗನು; ಇವನು ಬಾನೀಯ ಮಗನು; ಇವನು ಶೆಮೆರನ ಮಗನು;
47
ಇವನು ಮಹ್ಲೀಯ ಮಗನು; ಇವನು ಮೂಷೀಯ ಮಗನು; ಇವನು ಮೆರಾರಿಯ ಮಗನು; ಇವನು ಲೇವಿಯ ಮಗನು.
48
ಅವರ ಸಹೋದರರಾದ ಇತರ ಲೇವಿಯರು ದೇವಾಲಯವಾಗಿರುವ ಮಂದಿರದ ಸೇವೆಗಾಗಿ ನೇವಿುಸಲ್ಪಟ್ಟರು.
49
ದೇವರ ಸೇವಕನಾದ ಮೋಶೆಯ ಎಲ್ಲಾ ಆಜ್ಞೆಗಳಿಗನುಸಾರವಾಗಿ ಆರೋನನೂ ಅವನ ಮಕ್ಕಳೂ ಇಸ್ರಾಯೇಲ್ಯರಿಗೋಸ್ಕರ ಯಜ್ಞವೇದಿ, ಧೂಪವೇದಿ ಇವುಗಳ ಮೇಲೆ ಹೋಮಮಾಡುತ್ತಾ ಧೂಪಹಾಕುತ್ತಾ ಮಹಾಪರಿಶುದ್ಧ ಸ್ಥಳದ ಎಲ್ಲಾ ಸೇವೆಯನ್ನು ಮಾಡುತ್ತಾ ದೋಷಪರಿಹಾರ ಮಾಡುತ್ತಾ ಇದ್ದರು.
50
ಆರೋನನ ಸಂತಾನದವರು - ಆರೋನನ ಮಗನು ಎಲ್ಲಾಜಾರ್; ಇವನ ಮಗನು ಫೀನೆಹಾಸ್; ಇವನ ಮಗನು ಅಬೀಷೂವ;
51
ಇವನ ಮಗನು ಬುಕ್ಕೀ; ಇವನ ಮಗನು ಉಜ್ಜೀ; ಇವನ ಮಗನು ಜೆರಹ್ಯಾಹ;
52
ಇವನ ಮಗನು ಮೆರಾಯೋತ್; ಇವನ ಮಗನು ಅಮರ್ಯ;
53
ಇವನ ಮಗನು ಅಹೀಟೂಬ್; ಇವನ ಮಗನು ಚಾದೋಕ್; ಇವನ ಮಗನು ಅಹಿಮಾಚ್.
54
ಅವರು ವಾಸಿಸತಕ್ಕ ಪ್ರಾಂತನಗರಗಳು - ಆರೋನನ ಸಂತಾನದವರಾದ ಕೆಹಾತನ ಗೋತ್ರದವರಿಗೆ ಚೀಟು ಮೊದಲು ಬಿದ್ದದರಿಂದ
55
ಇಸ್ರಾಯೇಲ್ಯರು ಅವರಿಗೆ ಯೆಹೂದ ಸೀಮೆಯ ಹೆಬ್ರೋನನ್ನೂ ಅದರ ಸುತ್ತಲಿನ ಗೋಮಾಳಗಳನ್ನೂ ಕೊಟ್ಟರು.
56
ಆದರೆ ಅದರ ಹೊಲಗಳನ್ನೂ ಅದಕ್ಕೆ ಸೇರಿದ ಗ್ರಾಮಗಳನ್ನೂ ಯೆಫುನ್ನೆಯ ಮಗನಾದ ಕಾಲೇಬನಿಗೆ ಕೊಟ್ಟರು.
57
ಆರೋನನ ವಂಶದವರಿಗೆ ಹೆಬ್ರೋನೆಂಬ ಆಶ್ರಯನಗರವನ್ನೂ
58
ಲಿಬ್ನ, ಯತ್ತೀರ್, ಎಷ್ಟೆಮೋವ, ಹೀಲೇನ್, ದೆಬೀರ್,
59
ಆಷಾನ್, ಬೇತ್ಷೆಮೆಷ್ ಎಂಬ ಗೋಮಾಳಸಹಿತವಾದ ಪಟ್ಟಣಗಳನ್ನೂ
60
ಬೆನ್ಯಾಮೀನ್ ಕುಲದಿಂದ ಗೆಬ, ಆಲೆಮೆತ್, ಅನಾತೋತ್ ಎಂಬ ಗೋಮಾಳಸಹಿತವಾದ ಪಟ್ಟಣಗಳನ್ನೂ ಕೊಟ್ಟರು. ಅವರ ಕುಟುಂಬಗಳಿಗೆ ದೊರಕಿದ ಪಟ್ಟಣಗಳು ಹದಿಮೂರು.
61
ಕೆಹಾತ್ಯರ ಉಳಿದ ಕುಟುಂಬಗಳಿಗೆ ಅರ್ಧಮನಸ್ಸೆ ಕುಲದ ಸ್ವಾಸ್ತ್ಯದಿಂದ ಹತ್ತು ಪಟ್ಟಣಗಳು ದೊರಕಿದವು.
62
ಗೇರ್ಷೋಮ್ಯರ ಕುಟುಂಬಗಳಿಗೆ ಇಸ್ಸಾಕಾರ್, ಆಶೇರ್, ನಫ್ತಾಲಿ, ಬಾಷಾನಿನಲ್ಲಿರುವ ಅರ್ಧಮನಸ್ಸೆ ಈ ಕುಲಗಳ ಸ್ವಾಸ್ತ್ಯದಿಂದ ಹದಿಮೂರು ಪಟ್ಟಣಗಳು ದೊರಕಿದವು.
63
ಮೆರಾರೀ ಕುಟುಂಬಗಳಿಗೆ ರೂಬೇನ್ ಗಾದ್ ಜೆಬುಲೂನ್ ಕುಲಗಳ ಸ್ವಾಸ್ತ್ಯದಿಂದ ಹನ್ನೆರಡು ಪಟ್ಟಣಗಳು ಚೀಟಿನಿಂದ ದೊರಕಿದವು.
64
ಇಸ್ರಾಯೇಲ್ಯರು ಲೇವಿಯರಿಗೆ ಆ ಪಟ್ಟಣಗಳನ್ನಲ್ಲದೆ ಅವುಗಳಿಗೆ ಸೇರಿದ ಗೋಮಾಳಗಳನ್ನೂ ಕೊಟ್ಟರು.
65
ಅವರು ಚೀಟುಹಾಕಿ ಯೆಹೂದ ಸಿಮೆಯೋನ್ ಬೆನ್ಯಾಮೀನ್ ಕುಲಗಳಿಂದ ಮೇಲೆ ಹೆಸರು ಹೇಳಿದ ಪಟ್ಟಣಗಳನ್ನು ಕೊಟ್ಟರು.
66
ಕೆಹಾತ್ಯರ ಕುಟುಂಬಗಳಿಗೆ ಎಫ್ರಾಯೀಮ್ಯರ ಸ್ವಾಸ್ತ್ಯದಿಂದ
67
ಎಫ್ರಾಯೀಮ್ ಬೆಟ್ಟದಲ್ಲಿರುವ ಶೆಕೆಮೆಂಬ ಆಶ್ರಯನಗರ,
68
ಗೆಜೆರ್, ಯೊಕ್ಮೆಯಾಮ್, ಬೇತ್ಹೋರೋನ್,
69
ಅಯ್ಯಾಲೋನ್, ಗತ್ರಿಮ್ಮೋನ್ ಎಂಬ ಗೋಮಾಳಸಹಿತವಾದ ಪಟ್ಟಣಗಳು ಚೀಟಿನಿಂದ ದೊರಕಿದವು.
70
ಮನಸ್ಸೆಕುಲದ ಅರ್ಧಜನರ ಸ್ವಾಸ್ತ್ಯದ ಆನೇರ್ ಬಿಳ್ಳಾಮ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳು ಕೆಹಾತ್ಯರ ಉಳಿದ ಕುಟುಂಬಗಳ ಪಾಲಿಗೆ ಬಂದವು.
71
ಗೇರ್ಷೋಮ್ಯರಿಗೆ ಮನಸ್ಸೆಕುಲದ ಅರ್ಧಜನರ ಸ್ವಾಸ್ತ್ಯದಿಂದ ಬಾಷಾನಿನ ಗೋಲಾನ್, ಅಷ್ಟಾರೋಟ್ ಎಂಬ ಗೋಮಾಳಸಹಿತವಾದ ಪಟ್ಟಣಗಳೂ
72
ಇಸ್ಸಾಕಾರ್ಯರ ಸ್ವಾಸ್ತ್ಯದಿಂದ ಕೆದೆಷ್ದಾಬೆರತ್,
73
ರಾಮೋತ್, ಆನೇಮ್ ಎಂಬ ಗೋಮಾಳಸಹಿತವಾದ ಪಟ್ಟಣಗಳೂ
74
ಆಶೇರ್ಕುಲದ ಸ್ವಾಸ್ತ್ಯದಿಂದ ಮಾಷಾಲ್, ಅಬ್ದೋನ್,
75
ಹೂಕೋಕ್, ರೆಹೋಬ್ ಎಂಬ ಗೋಮಾಳಸಹಿತವಾದ ಪಟ್ಟಣಗಳೂ
76
ನಫ್ತಾಲಿಕುಲದ ಸ್ವಾಸ್ತ್ಯದಿಂದ ಗಲಿಲಾಯದ ಕೆದೆಷ್, ಹಮ್ಮೋನ್, ಕಿರ್ಯಾತಯಿಮ್ ಎಂಬ ಗೋಮಾಳಸಹಿತವಾದ ಪಟ್ಟಣಗಳೂ ದೊರಕಿದವು.
77
ವಿುಕ್ಕ ಲೇವಿಯರಾದ ಮೆರಾರೀಯರಿಗೆ ಜೆಬುಲೂನ್ಕುಲದ ಸ್ವಾಸ್ತ್ಯದಿಂದ ರಿಮ್ಮೋನೋ, ತಾಬೋರ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳೂ
78
ಯೆರಿಕೋವಿನ ಬಳಿಯಲ್ಲಿ ಹರಿಯುವ ಯೊರ್ದನ್ನದಿಯ ಪೂರ್ವದಿಕ್ಕಿನಲ್ಲಿರುವ ಅರಣ್ಯದ
79
ಬೆಚೆರ್, ಯಹಚ, ಕೆದೇಮೋತ್, ಮೇಫಾತ್, ಎಂಬ ರೂಬೇನ್ಕುಲದ ಗೋಮಾಳಸಹಿತವಾದ ಪಟ್ಟಣಗಳೂ
80
ಗಾದ್ಕುಲದ ಸ್ವಾಸ್ತ್ಯದಿಂದ ಗಿಲ್ಯಾದಿನ ರಾಮೋತ್;
81
ಮಹನಯಿಮ್, ಹೆಷ್ಬೋನ್, ಯಗ್ಜೇರ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳೂ ದೊರಕಿದವು.
← Chapter 5
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 7 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29