bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Song of Solomon 1
Song of Solomon 1
Kannada BSI JV (ಕನ್ನಡ ಸತ್ಯವೇದವು J.V. (BSI))
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 2 →
1
ಪರಮ ಗೀತವು; ಸೊಲೊಮೋನನು ರಚಿಸಿದ್ದು.
2
ಬಾಯ ಮುದ್ದುಗಳಿಂದ ನನ್ನನ್ನು ಮುದ್ದಿಸಲಿ; ನಿನ್ನ ಲಾಲನೆಯು ದ್ರಾಕ್ಷಾರಸಕ್ಕಿಂತಲೂ ಮೇಲು.
3
ನಿನ್ನ ತೈಲವು ಸುಗಂಧ; ನಿನ್ನ ಹೆಸರು ಸುರಿದ ತೈಲದ ಸುಗಂಧದಂತೆ ವ್ಯಾಪಿಸಿರುವದರಿಂದ ತರುಣಿಯರು ನಿನ್ನನ್ನು ಪ್ರೀತಿಸುವರು.
4
ನನ್ನನ್ನು ತುಸು ಎಳೆ; ನಿನ್ನ ಹಿಂದೆ ಓಡಿ ಬರುವೆವು; ರಾಜನು ನನ್ನನ್ನು ಅಂತಃಪುರಕ್ಕೆ ಬರಮಾಡಿದ್ದಾನೆ; ನಿನ್ನಲ್ಲಿ ಹರ್ಷಿಸಿ ಉಲ್ಲಾಸಿಸುವೆವು, ದ್ರಾಕ್ಷಾರಸಕ್ಕಿಂತಲೂ ನಿನ್ನ ಲಾಲನೆಯನ್ನು ಹೆಚ್ಚಾಗಿ ಕೊಂಡಾಡುವೆವು; ನಿನ್ನನ್ನು ಯಥಾರ್ಥವಾಗಿ ಪ್ರೀತಿಸುವರು.
5
ಯೆರೂಸಲೇವಿುನ ನಾರಿಯರೇ, ನಾನು ಕೇದಾರಿನ ಗುಡಾರಗಳಂತೆ ಕಪ್ಪಾಗಿದ್ದರೂ ಸೊಲೊಮೋನನ ಪರದೆಗಳಂತೆ ಚಂದವುಳ್ಳವಳು.
6
ಸೂರ್ಯನ ದೃಷ್ಟಿಗೆ ಬಿದ್ದು ಕಪ್ಪಾಗಿರುವದರಿಂದ ನನ್ನನ್ನು ದಿಟ್ಟಿಸಿ ನೋಡಬೇಡಿರಿ. ನನ್ನ ಸಹೋದರರು ನನ್ನ ಮೇಲೆ ಉರಿಗೊಂಡು ತೋಟಗಳನ್ನು ಕಾಯುವದಕ್ಕೆ ಹಾಕಿದರು; ನನ್ನ ತೋಟವನ್ನೋ ನಾನು ಕಾಯಲಿಲ್ಲ.
7
ನನ್ನ ಪ್ರಾಣಪ್ರಿಯನೇ, [ಮಂದೆಯನ್ನು] ಎಲ್ಲಿ ಮೇಯಿಸುತ್ತೀ, ಮಧ್ಯಾಹ್ನಕ್ಕೆ ಎಲ್ಲಿ ಮಲಗಿಸುತ್ತೀ? ನನಗೆ ತಿಳಿಸು. ನಾನು ಏಕೆ ನಿನ್ನ ಒಡನಾಡಿಗಳ ಮಂದೆಗಳ ಹತ್ತಿರ ಮುಸುಕಿನವಳಂತಿರಬೇಕು?
8
ನಾರೀಮಣಿಯೇ, ನಿನಗೆ ಗೊತ್ತಿಲ್ಲವಾದರೆ ಹಿಂಡಿನ ಹೆಜ್ಜೆಯ ಜಾಡನ್ನು ಹಿಡಿದು ಹೋಗಿ ಕುರುಬರ ಗುಡಾರಗಳ ಬಳಿಯಲ್ಲಿ ನಿನ್ನ ಮೇಕೆಮರಿಗಳನ್ನು ಮೇಯಿಸು.
9
ಪ್ರಿಯಳೇ, ನಿನ್ನನ್ನು ಫರೋಹನ ರಥಗಳ ಕುದುರೆಗೆ ಹೋಲಿಸಿದ್ದೇನೆ.
10
ನಿನ್ನ ಕೆನ್ನೆಗಳು ಜಡೆಗಳಿಂದಲೂ ನಿನ್ನ ಕಂಠವು ಹಾರಗಳಿಂದಲೂ ಎಷ್ಟೋ ಅಂದವಾಗಿವೆ!
11
ನಾವು ನಿನಗೆ ಬೆಳ್ಳಿಯ ತಿರುಪಿನ ಜಡೆ ಬಂಗಾರಗಳನ್ನು ಮಾಡಿಸುವೆವು.
12
ರಾಜನು ಅತ್ತ ಓಲಗದಲ್ಲಿದ್ದಾಗ ನನ್ನ ಜಟಾಮಾಂಸಿಯು ಇತ್ತ ಪರಿಮಳವನ್ನು ಬೀರುತ್ತಿತ್ತು.
13
ಎನ್ನಿನಿಯನು ನನ್ನ ಸ್ತನಗಳ ಮಧ್ಯದಲ್ಲಿನ ರಕ್ತಬೋಳದ ಚೀಲ;
14
ನನ್ನ ನಲ್ಲನು ನನ್ನ ಭಾಗಕ್ಕೆ ಏನ್ಗೆದಿಯ ತೋಟಗಳ ಗೋರಂಟೆಯ ಪೂಗೊಂಚಲು.
15
ಆಹಾ, ನನ್ನ ಪ್ರಿಯಳೇ, ನೀನು ಎಷ್ಟು ಚೆಲುವೆ! ಆಹಾ, ನೀನು ಎಷ್ಟು ಸುಂದರಿ! ನಿನ್ನ ನೇತ್ರಗಳು ಪಾರಿವಾಳಗಳಂತಿವೆ.
16
ಆಹಾ, ಎನ್ನಿನಿಯನೇ, ನೀನು ಎಷ್ಟು ಸುಂದರ, ಎಷ್ಟು ರಮ್ಯ! ಚಿಗುರುಗಳು ನಮ್ಮ ಮಂಚ,
17
ನಮ್ಮ ಮನೆಯ ತೊಲೆಗಳು ದೇವದಾರು ವೃಕ್ಷಗಳು, ಜಂತೆಗಳು ತುರಾಯಿ ಮರಗಳು.
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 2 →
All chapters:
1
2
3
4
5
6
7
8