bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Song of Solomon 5
Song of Solomon 5
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 4
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 6 →
1
ಪ್ರಿಯಳೇ, ವಧುವೇ, ಇಗೋ ನನ್ನ ತೋಟದೊಳಗೆ ಬಂದೆನು, ನನ್ನ ರಕ್ತಬೋಳ ಸುಗಂಧದ್ರವ್ಯಗಳನ್ನು ತೆಗೆದೆನು, ನನ್ನ ಜೇನುಕೊಡವನ್ನೂ ಜೇನುತುಪ್ಪವನ್ನೂ ತಿಂದೆನು, ನನ್ನ ದ್ರಾಕ್ಷಾರಸವನ್ನೂ ಕ್ಷೀರವನ್ನೂ ಕುಡಿದೆನು. ವಿುತ್ರರೇ, ಊಟಮಾಡಿರಿ; ಪ್ರಿಯರೇ, ಕುಡಿಯಿರಿ, ಬೇಕಾದಷ್ಟು ಪಾನಮಾಡಿರಿ.
2
ನಾನು ನಿದ್ರೆಗೊಂಡಿದ್ದರೂ ನನ್ನ ಹೃದಯವು ಎಚ್ಚರಗೊಂಡಿತ್ತು; ಇಗೋ, ಎನ್ನಿನಿಯನು ಕದ ತಟ್ಟಿ ಪ್ರಿಯಳೇ, ಕಾಂತಳೇ, ಪಾರಿವಾಳವೇ, ನಿರ್ಮಲೆಯೇ, ಬಾಗಿಲು ತೆಗೆ! ನನ್ನ ತಲೆಯ ಮೇಲೆಲ್ಲಾ ಇಬ್ಬನಿಯು ಬಿದ್ದಿದೆ, ನನ್ನ ಕೂದಲು ರಾತ್ರಿ ಬೀಳುವ ಹನಿಗಳಿಂದ ತುಂಬಿದೆ ಅಂದನು.
3
ನನ್ನ ಒಳಂಗಿಯನ್ನು ತೆಗೆದೆನಲ್ಲಾ, ಅದನ್ನು ಹೇಗೆ ಹಾಕಿಕೊಂಡೇನು? ಪಾದಗಳನ್ನು ತೊಳೆದುಕೊಂಡೆನಲ್ಲಾ, ಅವುಗಳನ್ನು ಹೇಗೆ ಕೊಳೆಮಾಡಿಕೊಳ್ಳಲಿ? [ಎಂದು ನಾನು ಅಂದುಕೊಂಡಾಗ]
4
ನನ್ನ ಕಾಂತನು ಬಾಗಿಲ ರಂಧ್ರದಲ್ಲಿ ಕೈ ನೀಡಿದನು; ಅವನಲ್ಲಿ ನನ್ನ ಕರುಳು ಮರುಗಿತು.
5
ನನ್ನ ನಲ್ಲನಿಗೆ ಕದತೆಗೆಯಬೇಕೆಂದು ಏಳಲು ಅಗುಳಿಯ ಹಿಡಿಗಳಲ್ಲಿ ನನ್ನ ಕೈಗಳಿಂದ ರಕ್ತಬೋಳವು, ನನ್ನ ಬೆರಳುಗಳಿಂದ ಅಚ್ಚರಕ್ತಬೋಳವು ಸುರಿಯಿತು.
6
ನನ್ನ ಇನಿಯನಿಗೆ ಕದತೆಗೆದೆನು; ಅಷ್ಟರಲ್ಲಿ ಅವನು ಹಿಂದಿರುಗಿ ಹೋಗಿದ್ದನು. ಆಹಾ, ಅವನು ಮಾತಾಡಿದಾಗ ನಾನು ಮೂರ್ಛೆ ಹೋಗಿದ್ದೆನಲ್ಲಾ. ಎಷ್ಟು ಹುಡುಕಿದರೂ ಸಿಕ್ಕಲಿಲ್ಲ, ಎಷ್ಟು ಕೂಗಿದರೂ ಉತ್ತರವಿಲ್ಲ.
7
ಊರಲ್ಲಿ ಸುತ್ತುತ್ತಿರುವ ಕಾವಲುಗಾರರು ನನ್ನನ್ನು ಕಂಡು ಹಿಡಿದು ಹೊಡೆದು ಗಾಯಪಡಿಸಿದರು; ಪವುಳಿಯ ಕಾವಲುಗಾರರು ಮೇಲುಹೊದಿಕೆಯನ್ನು ನನ್ನಿಂದ ಕಿತ್ತುಕೊಂಡರು.
8
ಯೆರೂಸಲೇವಿುನ ಮಹಿಳೆಯರೇ, ನೀವು ನನ್ನ ಕಾಂತನನ್ನು ಕಂಡರೆ ನಾನು ಅನುರಾಗದಿಂದ ಅಸ್ವಸ್ಥಳಾಗಿದ್ದೇನೆಂಬದನ್ನು ಅವನಿಗೆ ತಿಳಿಸಬೇಕೆಂದು ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ.
9
ಸ್ತ್ರೀರತ್ನವೇ, [ಇತರರ] ಕಾಂತರಿಗಿಂತ ನಿನ್ನ ಕಾಂತನ ಅತಿಶಯವೇನು? ನಮ್ಮಿಂದ ನೀನು ಹೀಗೆ ಪ್ರಮಾಣ ಮಾಡಿಸುವದಕ್ಕೆ [ಇತರರ] ಕಾಂತರಿಗಿಂತ ನಿನ್ನ ಕಾಂತನಲ್ಲಿ ಅತಿಶಯವೇನು?
10
ನನ್ನ ನಲ್ಲನು ಬಿಳುಪು ಕೆಂಪು ಬಣ್ಣವುಳ್ಳವನು; ಅವನು ಹತ್ತುಸಾವಿರ ಜನರಲ್ಲಿ ಧ್ವಜಪ್ರಾಯನು.
11
ಅವನ ತಲೆಯು ಚೊಕ್ಕ ಬಂಗಾರದಂತಿದೆ, ಗುಂಗುರುಗುಂಗುರಾಗಿರುವ ಅವನ ಕೂದಲು ಕಾಗೆಯಂತೆ ಕಪ್ಪಾಗಿದೆ.
12
ಅವನ ಕಣ್ಣುಗಳೋ ತುಂಬಿತುಳುಕುವ ತೊರೆಗಳ ಹತ್ತಿರ ತಂಗುತ್ತಲೂ ಕ್ಷೀರದಲ್ಲಿ ಸ್ನಾನಮಾಡುತ್ತಲೂ ಇರುವ ಪಾರಿವಾಳಗಳಂತಿವೆ.
13
ಅವನ ಕೆನ್ನೆಗಳು ಕರ್ಣಕುಂಡಲ ಗಿಡಗಳ ಪಾತಿಗಳಂತೆಯೂ ಸುಗಂಧಸಸ್ಯಗಳು ಬೆಳೆಯುವ ದಿಬ್ಬಗಳಂತೆಯೂ ಇವೆ; ಅಚ್ಚರಕ್ತಬೋಳವನ್ನು ಸುರಿಸುವ ಅವನ ತುಟಿಗಳು ಕೆಂದಾವರೆಗಳೇ.
14
ಅವನ ಕೈಗಳು ಪೀತರತ್ನಖಚಿತವಾದ ಬಂಗಾರದ ಸಲಾಕಿಗಳೋಪಾದಿಯಲ್ಲಿವೆ, ಅವನ ಮೈ ಇಂದ್ರನೀಲಮಯವಾದ ದಂತಫಲಕದ ಹಾಗಿದೆ.
15
ಅವನ ಕಾಲುಗಳು ಅಪರಂಜಿಯ ಸುಣ್ಣಪಾದಗಳ ಮೇಲಿಟ್ಟ ಚಂದ್ರಕಾಂತ ಸ್ತಂಭಗಳು; ದೇವದಾರುಗಳಷ್ಟು ರಮಣೀಯವಾದ ಅವನ ಗಾಂಭೀರ್ಯವು ಲೆಬನೋನಿಗೆ ಸಮಾನ.
16
ಅವನ ನುಡಿ ಬಹು ಇಂಪು; ಹೌದು, ಅವನು ಸರ್ವಾಂಗದಲ್ಲಿಯೂ ಮನೋಹರನು; ಯೆರೂಸಲೇವಿುನ ಸ್ತ್ರೀಯರುಗಳಿರಾ, ಇವನೇ ಎನ್ನಿನಿಯನು; ಇವನೇ ನನ್ನ ಪ್ರಿಯನು.
← Chapter 4
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 6 →
All chapters:
1
2
3
4
5
6
7
8