bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Song of Solomon 8
Song of Solomon 8
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 7
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
1
ನೀನು ನನ್ನ ತಾಯಿಯ ಸ್ತನ್ಯವನ್ನು ಕುಡಿದ ನನ್ನ ಅಣ್ಣನ ಹಾಗಿದ್ದರೆ ಎಷ್ಟೋ ಚೆನ್ನಾಗಿತ್ತು! ನಾನು ನಿನ್ನನ್ನು ಹೊರಗೆ ಕಂಡು ಮುದ್ದಿಟ್ಟರೂ ಯಾರೂ ಹೀನೈಸುತ್ತಿರಲಿಲ್ಲ.
2
ನಿನ್ನನ್ನು ನನ್ನ ತಾಯಿಯ ಮನೆಗೆ ಕರೆದುಕೊಂಡು ಹೋಗುತ್ತಿದ್ದೆನು, ಅಲ್ಲಿ ನೀನು ನನಗೆ ಉಪದೇಶಮಾಡಬಹುದಾಗಿತ್ತು; ದ್ರಾಕ್ಷೆಯ ವಿುಶ್ರಪಾನಕವನ್ನು, ನನ್ನ ದಾಳಿಂಬರದ ಸವಿರಸವನ್ನು, ನಿನಗೆ ಕುಡಿಸುತ್ತಿದ್ದೆನು.
3
ಆಗ ನಿನ್ನ ಎಡಗೈ ನನಗೆ ತಲೆಗಿಂಬಾಗಿ ಬಲಗೈ ನನ್ನನ್ನು ತಬ್ಬುತ್ತಿತ್ತು.
4
ಯೆರೂಸಲೇವಿುನ ಸ್ತ್ರೀಯರೇ, ಉಚಿತಕಾಲಕ್ಕೆ ಮುಂಚೆ ಪ್ರೀತಿಯನ್ನು ಹುಟ್ಟಿಸಿ ಬೆಳೆಯಿಸಬಾರದೆಂದು ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ.
5
ನಲ್ಲನನ್ನು ಒರಗಿಕೊಂಡು ಅಡವಿಯಿಂದ ಬರುವ ಇವಳು ಯಾರು? ಆ ಸೇಬುಮರದ ಕೆಳಗೆ ನಿನ್ನನ್ನು ಎಬ್ಬಿಸಿದೆನಲ್ಲಾ! ಇಗೋ, ಅಲ್ಲಿ ನಿನ್ನ ತಾಯಿಯು ನಿನ್ನನ್ನು ಹೆತ್ತಳು, ಅಲ್ಲೇ ಪ್ರಸವವೇದನೆ ಪಟ್ಟು, ನಿನ್ನನ್ನು ಪಡೆದಳು!
6
ನಿನ್ನ ಹೃದಯದ ಮೇಲೆ, ನಿನ್ನ ಕೈಯಲ್ಲಿ, ನನ್ನನ್ನು ಮುದ್ರೆಯನ್ನಾಗಿ ಧರಿಸಿಕೋ. ಪ್ರೀತಿಯು ಮರಣದಷ್ಟು ಬಲವಾಗಿದೆ, [ಪ್ರೀತಿದ್ರೋಹದಿಂದ ಹುಟ್ಟುವ] ಮತ್ಸರವು ಪಾತಾಳದಷ್ಟು ಕ್ರೂರ, ಅದರ ಜ್ವಾಲೆಯು ಬೆಂಕಿಯ ಉರಿ, ಅದು ಯೆಹೋವನ ರೋಷಾಗ್ನಿಯು.
7
ಜಲದ ರಾಶಿಗಳೂ ಪ್ರೀತಿಯನ್ನು ನಂದಿಸಲಾರವು. ಪ್ರವಾಹಗಳಿಗೂ ಅದನ್ನು ಮುಣುಗಿಸಲು ಶಕ್ತಿಯಿಲ್ಲ. ಒಬ್ಬನು ತನ್ನ ಮನೆಮಾರನ್ನೆಲ್ಲಾ ಕೊಟ್ಟು ಪ್ರೀತಿಯನ್ನು ಪಡೆಯಲು ಯತ್ನಿಸಿದರೆ ಕೇವಲ ತಿರಸ್ಕಾರಕ್ಕೆ ಗುರಿಯಾಗುವನು.
8
ಸ್ತನಬಾರದ ತಂಗಿಯು ನಮಗುಂಟು; ಅವಳನ್ನು ಕೇಳತಕ್ಕ ಸಮಯದಲ್ಲಿ ಅವಳ ಹಿತಕ್ಕೆ ಏನು ಮಾಡೋಣ?
9
ಅವಳು ಕೋಟೆಯಾದರೆ ಅದರ ಮೇಲೆ ಬೆಳ್ಳಿಯ ಬುರುಜನ್ನು ಕಟ್ಟುವೆವು, ಬಾಗಿಲಾದರೆ ದೇವದಾರು ಹಲಿಗೆಗಳಿಂದ ಭದ್ರಪಡಿಸುವೆವು.
10
ನಾನು ಕೋಟೆ; ನನ್ನ ಸ್ತನಗಳು ಅದರ ಬುರುಜುಗಳು, ಹೀಗಿದ್ದು ಸೊಲೊಮೋನನ ದೃಷ್ಟಿಯಲ್ಲಿ [ಜಯಶಾಲಿನಿಯಾಗಿ] ಸಮಾಧಾನ ಹೊಂದಿದೆನು.
11
ಸೊಲೊಮೋನನು ನೋಡಿಕೊಳ್ಳುವವರಿಗೆ ಬಾಲ್ಹಾಮೋನಿನಲ್ಲಿ ಇದ್ದ ತನ್ನ ತೋಟವನ್ನು ಕೊಟ್ಟನು, ಅದರ ಫಲದಿಂದ ಯಾರಾದರೂ ಸಾವಿರ ರೂಪಾಯಿಯನ್ನು ಪಡೆಯಬಹುದು.
12
ಸೊಲೊಮೋನನೇ, ಆ ಸಾವಿರ ರೂಪಾಯಿ ನಿನಗಿರಲಿ, ಫಲವನ್ನು ನೋಡಿಕೊಳ್ಳುವವರಿಗೆ ಇನ್ನೂರು ರೂಪಾಯಿ ಸೇರಲಿ; ನನ್ನದೇ ಆಗಿರುವ ನನ್ನ ತೋಟವು ನನ್ನ ವಶದಲ್ಲಿಯೇ ಇದೆ.
13
ಉದ್ಯಾನವಾಸಿನಿಯೇ, ಗೆಳೆಯರು ನಿನ್ನ ದನಿ ಕೇಳಬೇಕೆಂದಿದ್ದಾರೆ; ನನಗೆ ಕೇಳಿಸಲಿ.
14
ಎನ್ನಿನಿಯನೇ, ತ್ವರೆಪಡು, ಸುಗಂಧಸಸ್ಯಪರ್ವತಗಳಲ್ಲಿ ಜಿಂಕೆಯಂತೆಯೂ ಪ್ರಾಯದ ಎರಳೆಯಂತೆಯೂ ಇರು.
← Chapter 7
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
All chapters:
1
2
3
4
5
6
7
8