bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
2 Samuel 16
2 Samuel 16
Kannada Bible (KNCL) BSI 2016
← Chapter 15
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 17 →
1
ದಾವೀದನು ಗುಡ್ಡದ ತುದಿಯ ಆಚೆಗೆ ಹೋಗುವಷ್ಟರಲ್ಲಿ ಮೆಫೀಬೋಶೆತನ ಸೇವಕನಾದ ಚೀಬನು ಇನ್ನೂರು ರೊಟ್ಟಿಗಳನ್ನು, ನೂರು ಒಣಗಿದ ದ್ರಾಕ್ಷಿಗೊಂಚಲುಗಳನ್ನು, ನೂರು ಹಣ್ಣುಗಳನ್ನು ಹಾಗು ಒಂದು ಬುದ್ದಲಿ ದ್ರಾಕ್ಷಾರಸವನ್ನು ತಡಿಹಾಕಿದ ಎರಡು ಕತ್ತೆಗಳ ಮೇಲೆ ಹೇರಿಕೊಂಡು ಬಂದು ಅವನನ್ನು ಎದುರುಗೊಂಡನು.
2
ಅರಸನು ಚೀಬನನ್ನು ನೋಡಿ, “ಇವುಗಳನ್ನು ಏಕೆ ತಂದೆ?” ಎಂದು ಕೇಳಿದನು. ಅವನು, “ಕತ್ತೆಗಳನ್ನು ಅರಸರ ಮನೆಯವರು ಸವಾರಿಮಾಡಲೆಂದು, ಹಣ್ಣು ರೊಟ್ಟಿಗಳನ್ನು ಆಳುಗಳು ತಿನ್ನಲೆಂದೂ ಹಾಗು ದ್ರಾಕ್ಷಾರಸವನ್ನು ಅರಣ್ಯದಲ್ಲಿ ದಣಿದವರು ಕುಡಿಯಲೆಂದು ತಂದಿದ್ದೇನೆ,” ಎಂದು ಉತ್ತರಕೊಟ್ಟನು.
3
ಅರಸನು ಮತ್ತೆ, “ನಿನ್ನ ಯಜಮಾನನ ಮಗ ಎಲ್ಲಿದ್ದಾನೆ?” ಎಂದು ಕೇಳಲು ಅವನು, “ತನ್ನ ತಂದೆಯ ರಾಜ್ಯವನ್ನು ಇಸ್ರಯೇಲರು ಈ ದಿನ ತನಗೆ ಮರಳಿಕೊಡುವರೆಂದು ಹೇಳಿ ಅವನು ಜೆರುಸಲೇಮಿನಲ್ಲೇ ಉಳಿದುಕೊಂಡನು,” ಎಂದನು.
4
ಆಗ ಅರಸನು, “ಮೆಫೀಬೋಶೆತನ ಆಸ್ತಿಯೆಲ್ಲಾ ನಿನ್ನದೇ,” ಎಂದು ಹೇಳಿದನು. ಅವನು, “ಅರಸರೇ, ನಿಮಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ; ನನ್ನ ಒಡೆಯರೇ, ನಿಮ್ಮ ದೃಷ್ಟಿಯಲ್ಲಿ ನನಗೆ ದಯೆ ದೊರಕಲಿ!” ಎಂದನು.
5
ಅರಸನಾದ ದಾವೀದನು ಬಹುರೀಮಿಗೆ ಬಂದಾಗ ಸೌಲನ ವಂಶದವನೂ ಗೇರನ ಮಗನೂ ಆದ ಶಿಮ್ಮೀ ಎಂಬವನು ದಾವೀದನನ್ನು ಶಪಿಸುತ್ತಾ ಆ ಊರಿನಿಂದ ಹೊರಗೆ ಬಂದನು.
6
ಅವನು ದಾವೀದನ, ಅವನ ಎಲ್ಲ ಸೇವಕರ, ಎಡಬಲದಲ್ಲಿದ್ದ ಸೈನಿಕರ ಹಾಗು ಶೂರರ ಕಡೆಗೆ ಕಲ್ಲೆಸೆಯ ತೊಡಗಿದನು.
7
ಅಲ್ಲದೆ, ಅವನು ದಾವೀದನನ್ನು ಶಪಿಸುತ್ತಾ, “ನಡೆ, ಕೊಲೆಗಾರನೇ, ನೀಚನೇ, ನಡೆ; ಸೌಲನ ರಾಜ್ಯವನ್ನು ಕಬಳಿಸಿಕೊಂಡು, ಅವನ ಮನೆಯವರನ್ನು ಕೊಂದದ್ದಕ್ಕಾಗಿ ಸರ್ವೇಶ್ವರ ನಿನಗೆ ಮುಯ್ಯಿ ತೀರಿಸಿದ್ದಾರೆ.
8
ಅವರು ರಾಜ್ಯವನ್ನು ನಿನ್ನ ಮಗ ಅಬ್ಷಾಲೋಮನಿಗೆ ಕೊಟ್ಟುಬಿಟ್ಟರು. ಕೊಲೆಗಾರನೇ, ಇಗೋ, ನಿನಗೆ ಈಗ ತಕ್ಕ ಆಪತ್ತು ಬಂದಿದೆ,” ಎಂದನು.
9
ಆಗ ಚೆರೂಯಳ ಮಗ ಅಬೀಷೈಯು ಅರಸನಿಗೆ, “ಈ ಸತ್ತನಾಯಿ ಅರಸನಾದ ನನ್ನ ಒಡೆಯರನ್ನು ಶಪಿಸುವುದೇನು? ಅಪ್ಪಣೆಯಾಗಲಿ, ನಾನು ಅವನಿರುವಲ್ಲಿಗೇ ಹೋಗಿ, ಅವನ ತಲೆ ಹಾರಿಸಿಕೊಂಡು ಬರುತ್ತೇನೆ,” ಎಂದನು.
10
ಅದಕ್ಕೆ ಅರಸನು, “ಚೆರೂಯಳ ಮಕ್ಕಳೇ, ನನಗೆ ನಿಮ್ಮ ಗೊಡವೆಯೇ ಬೇಡ; ಬಿಡಿ, ಅವನು ಶಪಿಸಲಿ; ದಾವೀದನನ್ನು ಶಪಿಸೆಂದು ಸರ್ವೇಶ್ವರಸ್ವಾಮಿಯೇ ಅವನಿಗೆ ಆಜ್ಞಾಪಿಸಿದ ಮೇಲೆ ‘ನೀನು ಹೀಗೇಕೆ ಮಾಡಿದೆ’ ಎಂದು ಅವನನ್ನು ಯಾರು ಕೇಳಲಾದೀತು?” ಎಂದು ಉತ್ತರಕೊಟ್ಟನು.
11
ಇದಲ್ಲದೆ ಅವನು ಅಬೀಷೈಗೂ ತನ್ನ ಎಲ್ಲಾ ಸೇವಕರಿಗೂ, “ನೋಡಿ, ನನ್ನಿಂದ ಹುಟ್ಟಿದ ನನ್ನ ಮಗನೇ ನನ್ನ ಪ್ರಾಣವನ್ನು ತೆಗೆಯಬೇಕೆಂದಿರುವಲ್ಲಿ ಈ ಬೆನ್ಯಾಮೀನ್ಯನು ಹೀಗೆ ಮಾಡುವುದು ಯಾವ ಲೆಕ್ಕ? ಬಿಡಿ, ಅವನು ಶಪಿಸಲಿ; ಹೀಗೆ ಮಾಡಬೇಕೆಂದು ಸರ್ವೇಶ್ವರನೇ ಅವನಿಗೆ ಆಜ್ಞಾಪಿಸಿದ್ದಾರೆ.
12
ಬಹುಶಃ ಸರ್ವೇಶ್ವರ ನನ್ನ ಕಷ್ಟವನ್ನು ನೋಡಿ ಈ ದಿನ ಶಾಪಕ್ಕೆ ಬದಲಾಗಿ ನನಗೆ ಶುಭವನ್ನು ಅನುಗ್ರಹಿಸಿಯಾರು,” ಎಂದು ಹೇಳಿದನು.
13
ದಾವೀದನೂ ಅವನ ಜನರೂ ದಾರಿಹಿಡಿದು ಹೋಗುವಾಗ ಶಿಮ್ಮಿಯು ಶಪಿಸುತ್ತಾ ಕಲ್ಲುಮಣ್ಣು ತೂರುತ್ತಾ, ಗುಡ್ಡದ ಓರೆಯಲ್ಲಿ ಸಮಾನಾಂತರದಲ್ಲೇ ನಡೆಯುತ್ತಿದ್ದನು.
14
ಅರಸನೂ ಅವನ ಜೊತೆಯಲ್ಲಿ ಬಂದವರೆಲ್ಲರೂ ದಣಿದವರಾಗಿ ಜೋರ್ಡನ್ ಸ್ಥಳವನ್ನು ಸೇರಿ ಅಲ್ಲಿ ವಿಶ್ರಮಿಸಿಕೊಂಡರು.
15
ಅಷ್ಟರಲ್ಲಿ ಅಬ್ಷಾಲೋಮನು ಎಲ್ಲ ಇಸ್ರಯೇಲರೊಡನೆ ಜೆರುಸಲೇಮಿಗೆ ಬಂದನು. ಅಹೀತೋಫೆಲನೂ ಅವನ ಸಂಗಡ ಇದ್ದನು.
16
ಅರ್ಕೀಯನೂ ದಾವೀದನ ಸ್ನೇಹಿತನೂ ಆಗಿದ್ದ ಹೂಷೈಯು ಅಬ್ಷಾಲೋಮನ ಬಳಿಗೆ ಬಂದು, “ಅರಸರು ಚಿರಂಜೀವಿಯಾಗಿ ಬಾಳಲಿ! ಅರಸರು ಚಿರಂಜೀವಿಯಾಗಿ ಬಾಳಲಿ!” ಎಂದು ಘೋಷಿಸಿದನು.
17
ಅಬ್ಷಾಲೋಮನು, “ಸ್ನೇಹಿತನ ಮೇಲೆ ನಿನಗಿದ್ದ ಪ್ರೀತಿ ಇಷ್ಟೇತಾನೇ? ನೀನು ನಿನ್ನ ಸ್ನೇಹಿತನೊಡನೆ ಏಕೆ ಹೋಗಲಿಲ್ಲ?” ಎಂದನು.
18
ಅದಕ್ಕೆ ಹೂಷೈಯು, “ಹಾಗಲ್ಲ, ಸರ್ವೇಶ್ವರ, ಈ ಜನ ಹಾಗು ಇಸ್ರಯೇಲರೆಲ್ಲರು ಯಾರನ್ನು ಆರಿಸಿದ್ದಾರೋ ಅವನ ಪಕ್ಷದವನಾಗಿರುತ್ತೇನೆ ನಾನು; ಅವನ ಬಳಿಯಲ್ಲೇ ವಾಸಿಸುತ್ತೇನೆ.
19
ಇದಲ್ಲದೆ, ನಾನು ಈಗ ಸೇವೆಮಾಡಬೇಕೆಂದಿರುವುದು ರಾಜಪುತ್ರನ ಸನ್ನಿಧಿಯಲ್ಲಿ ಅಲ್ಲವೇ? ನಿಮ್ಮ ತಂದೆಯ ಸನ್ನಿಧಿಯಲ್ಲಿ ಸೇವೆಮಾಡಿದಂತೆ ನಿಮ್ಮ ಸನ್ನಿಧಿಯಲ್ಲಿ ಸೇವೆಮಾಡುವೆನು,” ಎಂದು ಉತ್ತರಕೊಟ್ಟನು.
20
ಅನಂತರ ಅಬ್ಷಾಲೋಮನು, “ನಾವು ಈಗ ಮಾಡತಕ್ಕದ್ದೇನು? ಆಲೋಚನೆಮಾಡಿ ಹೇಳು,” ಎಂಬುದಾಗಿ ಅಹೀತೋಫೆಲನನ್ನು ಕೇಳಿದನು.
21
ಅವನು, “ತಾವು ಹೋಗಿ ತಮ್ಮ ತಂದೆ ಮನೆಕಾಯುವುದಕ್ಕೆ ಬಿಟ್ಟಿರುವ ಅವನ ಉಪಪತ್ನಿಗಳೊಡನೆ ಸಂಗಮಿಸಿ. ಹೀಗೆ ಮಾಡುವುದಾದರೆ, ತಾವು ತಮ್ಮ ತಂದೆಗೆ ಅಸಹ್ಯವೈರಿಯಾದಿರೆಂದು ಎಲ್ಲ ಇಸ್ರಯೇಲರಿಗೆ ತಿಳಿಯುವುದು. ಆಗ ತಮ್ಮ ಪಕ್ಷದವರು ಹುಮ್ಮಸ್ಸುಗೊಳ್ಳುವರು,” ಎಂದು ಉತ್ತರಕೊಟ್ಟನು.
22
ಆಗ ಅಬ್ಷಾಲೋಮನಿಗಾಗಿ ಮಾಳಿಗೆಯ ಮೇಲೆ ಗುಡಾರಹಾಕಿದರು. ಅವನು ಎಲ್ಲ ಇಸ್ರಯೇಲರ ಮುಂದೆಯೇ ತನ್ನ ತಂದೆಯ ಉಪಪತ್ನಿಗಳನ್ನು ಕೂಡಿದನು.
23
ಆ ದಿನಗಳಲ್ಲಿ ಅಹೀತೋಫೆಲನ ಆಲೋಚನೆಗಳಿಗೆ ದೈವೋತ್ತರಗಳಿಗಿರುವಷ್ಟೇ ಬೆಲೆಯಿತ್ತು. ದಾವೀದನೂ ಅಬ್ಷಾಲೋಮನೂ ಅವನ ಸಲಹೆಗಳನ್ನು ಮಾನ್ಯಮಾಡುತ್ತಿದ್ದರು.
← Chapter 15
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 17 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24