bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
2 Samuel 19
2 Samuel 19
Kannada Bible (KNCL) BSI 2016
← Chapter 18
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 20 →
1
ಅರಸನು ಅಬ್ಷಾಲೋಮನಿಗಾಗಿ ಅಳುತ್ತಾ ಗೋಳಾಡುತ್ತಾ ಇದ್ದಾನೆಂಬ ಸಮಾಚಾರ ಯೋವಾಬನಿಗೆ ಮುಟ್ಟಿತು.
2
ಅರಸನು ಮಗನಿಗಾಗಿ ಪ್ರಲಾಪಿಸುತ್ತಿದ್ದಾನೆಂಬುದು ಎಲ್ಲ ಜನರಿಗೂ ಗೊತ್ತಾಗಿ ಅವರ ಜಯಘೋಷ ಗೋಳಾಟವಾಗಿ ಮಾರ್ಪಟ್ಟಿತು.
3
ಜನರು ಆ ದಿನದ ಯುದ್ಧದಲ್ಲಿ ಸೋತು ಓಡಿಬಂದಿರುವವರೋ ಎಂಬಂತೆ, ನಾಚಿಕೆಯಿಂದ ಕಳ್ಳತನವಾಗಿ ಊರನ್ನು ಹೊಕ್ಕರು.
4
ಅರಸನು ತನ್ನ ಮುಖ ಮುಚ್ಚಿಕೊಂಡು, “ಮಗ ಅಬ್ಷಾಲೋಮನೇ, ಅಬ್ಷಾಲೋಮನೇ, ನನ್ನ ಮಗನೇ, ಮಗನೇ,” ಎಂದು ಬಹಳವಾಗಿ ಗೋಳಾಡಿದನು.
5
ಯೋವಾಬನು ಅರಸನ ಬಳಿಗೆ ಹೋಗಿ, “ನಿಮ್ಮನ್ನೂ ನಿಮ್ಮ ಗಂಡುಹೆಣ್ಣು ಮಕ್ಕಳನ್ನೂ ಹೆಂಡತಿಯರನ್ನೂ ಉಪಪತ್ನಿಯರನ್ನೂ ರಕ್ಷಿಸಿದಂಥ ನಿಮ್ಮ ಸೇವಕರನ್ನು ಈ ದಿನ ಅಪಮಾನಪಡಿಸಿದಿರಿ.
6
ನೀವು ಶತ್ರುಗಳನ್ನು ಪ್ರೀತಿಸುವವರೂ ಮಿತ್ರರನ್ನು ದ್ವೇಷಿಸುವವರೂ ಆಗಿದ್ದೀರಿ; ನೀವು ನಿಮ್ಮ ಸೇನಾಧಿಪತಿಗಳನ್ನೂ ಸೈನಿಕರನ್ನೂ ಲಕ್ಷಿಸುವವರಲ್ಲವೆಂದು ಈಗ ತೋರಿಸಿಕೊಟ್ಟಿರಿ. ಈ ದಿನ ನಾವೆಲ್ಲರೂ ಸತ್ತು ಅಬ್ಷಾಲೋಮನೊಬ್ಬನೇ ಉಳಿದಿದ್ದರೆ ನಿಮಗೆ ಸಂತೋಷವಾಗುತ್ತಿತ್ತೆಂದು ಇದರಿಂದ ತಿಳಿಯಬೇಕಷ್ಟೆ!
7
ಈಗ ಎದ್ದು ಹೋಗಿ ನಿಮ್ಮ ಸೇವಕರನ್ನು ದಯಾಭಾವದಿಂದ ಮಾತಾಡಿಸಿ, ನೀವು ಹೀಗೆ ಮಾಡದಿದ್ದರೆ ಸರ್ವೇಶ್ವರನಾಣೆ, ಸಾಯಂಕಾಲವಾಗುವಷ್ಟರಲ್ಲಿ ಎಲ್ಲರೂ ನಿಮ್ಮನ್ನು ಬಿಟ್ಟುಹೋಗುವರು. ಯೌವನಕಾಲದಿಂದ ಈವರೆಗೆ ನಿಮಗೆ ಬಂದೊದಗಿದ ಕೇಡುಗಳಲ್ಲಿ ಇದು ದೊಡ್ಡದಾಗುವುದು,” ಎಂದು ಹೇಳಿದನು.
8
ಆಗ ಅರಸನು ಎದ್ದು ಬಂದು ಊರುಬಾಗಿಲಲ್ಲಿ ಕುಳಿತುಕೊಂಡನು. “ಇಗೋ, ಅರಸರು ಊರುಬಾಗಿಲಲ್ಲಿ ಕುಳಿತುಕೊಂಡಿದ್ದಾರೆ,” ಎಂಬ ಸುದ್ದಿ ಪ್ರಜೆಗಳಿಗೆ ಮುಟ್ಟಿದಾಗ ಅವರೆಲ್ಲರೂ ಬಂದು ಅವನ ಸುತ್ತಲೂ ನೆರೆದರು.
9
ಇಸ್ರಯೇಲರೆಲ್ಲರು ತಮ್ಮ ತಮ್ಮ ನಿವಾಸಗಳಿಗೆ ಓಡಿಹೋಗಿದ್ದರು. ಇಸ್ರಯೇಲ್ ಕುಲಗಳ ಜನರೆಲ್ಲರು, “ಅರಸ ದಾವೀದನು ನಮ್ಮನ್ನು ಫಿಲಿಷ್ಟಿಯರ ಕೈಯಿಂದಲೂ ಬೇರೆ ಎಲ್ಲಾ ವೈರಿಗಳ ಕೈಯಿಂದಲೂ ತಪ್ಪಿಸಿ ಕಾಪಾಡಿದ. ಆದರೆ ಅಬ್ಷಾಲೋಮನ ಕಾರಣ ನಾಡನ್ನೇ ಬಿಟ್ಟು ಓಡಿಹೋಗುವಂತೆ ಮಾಡಿದ.
10
ಆದರೆ ನಾವು ಅಭಿಷೇಕಿಸಿದ ಅಬ್ಷಾಲೋಮನು ಯುದ್ಧದಲ್ಲಿ ಸತ್ತ. ಹೀಗಿರುವಲ್ಲಿ ಅರಸ ದಾವೀದನನ್ನು ಮರಳಿ ಕರೆದುಕೊಂಡು ಬರಬಾರದೇಕೆ? ಸುಮ್ಮನೆ ಕುಳಿತಿರುವುದೇಕೆ?” ಎಂದು ಮಾತಾಡಿಕೊಂಡರು.
11
ಇಸ್ರಯೇಲರು ಹೀಗೆ ಮಾತಾಡಿಕೊಂಡ ಸಮಾಚಾರ ದಾವೀದನಿಗೆ ಮುಟ್ಟಿತು. ಅವನು ಯಾಜಕರಾದ ಚಾದೋಕ್ ಹಾಗು ಎಬ್ಯಾತಾರರಿಗೆ, “ನೀವು ನನ್ನ ಹೆಸರಿನಲ್ಲಿ ಯೆಹೂದಕುಲದ ಹಿರಿಯರಿಗೆ, ‘ಅರಸನಾದ ನನ್ನನ್ನು ಮತ್ತೆ ಅರಮನೆಗೆ ಕರೆದುಕೊಂಡು ಹೋಗುವುದರಲ್ಲಿ ನೀವೇಕೆ ಹಿಂದುಳಿದಿರುವಿರಿ?
12
ನೀವು ನನ್ನ ರಕ್ತಸಂಬಂಧಿಗಳಾದ ಸಹೋದರರು; ಆದುದರಿಂದ ನನ್ನನ್ನು ಕರೆದುಕೊಂಡು ಹೋಗುವುದರಲ್ಲಿ ನೀವು ಹಿಂದುಳಿದಿರುವುದು ಸರಿಯಲ್ಲ’
13
ಎಂಬುದಾಗಿ ತಿಳಿಸಿರಿ. ಅದಲ್ಲದೆ ಅಮಾಸನಿಗೆ, ‘ನೀನೂ ನನ್ನ ರಕ್ತಸಂಬಂಧಿಯಾಗಿದ್ದಿ; ನಾನು ಯೋವಾಬನ ಬದಲಿಗೆ ನಿನ್ನನ್ನೇ ನಿತ್ಯಸೇನಾಪತಿಯನ್ನಾಗಿ ಮಾಡುತ್ತೇನೆ. ಹಾಗೆ ಮಾಡದಿದ್ದರೆ ಸರ್ವೇಶ್ವರ ನನಗೆ ಮಾಡಬೇಕಾದದ್ದನ್ನು ಮಾಡಲಿ,’ ಎಂಬುದಾಗಿಯೂ ತಿಳಿಸಿರಿ,” ಎಂದು ಹೇಳಿ ಕಳುಹಿಸಿದನು.
14
ಆಗ ಯೆಹೂದ್ಯರೆಲ್ಲರೂ ಏಕ ಮನಸ್ಸಿನಿಂದ ಅರಸನ ಕಡೆಗೆ ತಿರುಗಿಕೊಂಡು ಅವನಿಗೆ, ” ನೀವು ನಿಮ್ಮ ಎಲ್ಲಾ ಸೇವಕರೊಡನೆ ಮರಳಿ ಬನ್ನಿ,” ಎಂದು ಹೇಳಿಕಳುಹಿಸಿದರು.
15
ಅರಸನು ಸ್ವದೇಶಕ್ಕೆ ಹೋಗಬೇಕೆಂದು ಹೊರಟು ಜೋರ್ಡನಿಗೆ ಬಂದಾಗ ಯೆಹೂದಕುಲದವರು ಅವನನ್ನು ಸ್ವಾಗತಿಸುವುದಕ್ಕೂ ಜೋರ್ಡನ್ ನದಿಯನ್ನು ದಾಟಿಸುವುದಕ್ಕೂ ಗಿಲ್ಗಾಲಿಗೆ ಬಂದರು.
16
ಬೆನ್ಯಾಮೀನ್ ಕುಲದ ಗೇರನ ಮಗನೂ ಬಹುರೀಮಿನವನೂ ಆದ ಶಿಮ್ಮಿಯು ತವಕದಿಂದ ಬಂದು ಅರಸನಾದ ದಾವೀದನನ್ನು ಸ್ವಾಗತಿಸುವುದಕ್ಕೆ ಯೆಹೂದ ಕುಲದವರನ್ನು ಕೂಡಿಕೊಂಡನು.
17
ಅವನ ಜೊತೆಯಲ್ಲಿ ಸಾವಿರ ಮಂದಿ ಬೆನ್ಯಾಮೀನ್ಯರಿದ್ದರು. ಇದಲ್ಲದೆ ಸೌಲನ ಮನೆಯ ಸೇವಕನಾದ ಚೀಬನು ತನ್ನ ಹದಿನೈದು ಮಂದಿ ಮಕ್ಕಳನ್ನೂ ಇಪ್ಪತ್ತು ಮಂದಿ ಸೇವಕರನ್ನೂ ಕರೆದುಕೊಂಡು ಬಂದನು;
18
ಅರಸನ ಮುಂದೆಯೇ ಪೂರ್ಣಾಸಕ್ತಿಯಿಂದ ಜೋರ್ಡನ್ ನದಿಯಲ್ಲಿಳಿದು ಅರಸನ ಮನೆಯವರನ್ನು ದಾಟಿಸುವುದಕ್ಕೂ ಅವರಿಗೆ ಬೇಕಾದ ಸಹಾಯಮಾಡುವುದಕ್ಕೂ ದಡದಿಂದ ದಡಕ್ಕೆ ಹೋಗುತ್ತಾ ಬರುತ್ತಾ ಇದ್ದನು. ಅರಸನು ಜೋರ್ಡನ್ ನದಿಯನ್ನು ದಾಟಿಬಂದ ಕೂಡಲೆ ಗೇರನ ಮಗನಾದ ಶಿಮ್ಮಿಯು ಸಾಷ್ಟಾಂಗ ನಮಸ್ಕಾರ ಮಾಡಿದನು.
19
:ಒಡೆಯರು ನನ್ನನ್ನು ಅಪರಾಧಿಯೆಂದೆಣಿಸದಿರಲಿ; ನನ್ನ ಒಡೆಯರು ಜೆರುಸಲೇಮನ್ನು ಬಿಟ್ಟುಹೋಗುವಾಗ ನಾನು ಮೂರ್ಖತನದಿಂದ ಮಾಡಿದ್ದನ್ನೆಲ್ಲಾ ಅವರು ನೆನಸದಿರಲಿ, ಲಕ್ಷಿಸದಿರಲಿ.
20
ಒಡೆಯರೇ, ತಮ್ಮ ಸೇವಕನಾದ ನಾನು ಪಾಪಮಾಡಿದೆನೆಂದು ಒಪ್ಪಿಕೊಳ್ಳುತ್ತೇನೆ. ಆದುದರಿಂದಲೇ ನಾನು ಈ ದಿನ ಅರಸನನ್ನು ಸ್ವಾಗತಿಸುವುದಕ್ಕೆ ಎಲ್ಲಾ ಜೋಸೇಫ್ಯರಲ್ಲಿ ಮೊದಲಿಗನಾಗಿ ಬಂದಿದ್ದೇನೆ,” ಎಂದು ಹೇಳಿದನು.
21
ಚೆರೂಯಳ ಮಗ ಅಬೀಷೈಯು, “ಸರ್ವೇಶ್ವರನ ಅಭಿಷಿಕ್ತನನ್ನು ಶಪಿಸಿದ್ದಕ್ಕಾಗಿ ಶಿಮ್ಮಿಗೆ ಮರಣದಂಡನೆಯಾಗಬೇಕಲ್ಲವೇ?’ ಎಂದನು.
22
ಅದಕ್ಕೆ ದಾವೀದನು, “ಚೆರೂಯಳ ಮಕ್ಕಳೇ, ನನಗೆ ನಿಮ್ಮ ಗೊಡವೆಯೇ ಬೇಡ; ನೀವು ಈ ದಿನ ನನ್ನನ್ನು ಆ ಕೃತ್ಯಕ್ಕೆ ಪ್ರೇರಿಸುವವರಾಗಿದ್ದೀರಿ. ಇಂಥ ದಿನದಲ್ಲಿ ಇಸ್ರಯೇಲರಲ್ಲಿ ಒಬ್ಬನಿಗೆ ಮರಣದಂಡನೆ ಆಗುವುದು ಸರಿಯೇ? ನಾನು ಇಸ್ರಯೇಲರ ಅರಸನೆಂಬುವುದು ಈ ದಿನ ಸ್ಪಷ್ಟವಾಗಿ ಗೊತ್ತಾಯಿತು,” ಎಂದು ನುಡಿದನು.
23
ಅನಂತರ ಅರಸನು ಶಿಮ್ಮಿಗೆ, “ನಿನಗೆ ಮರಣಶಿಕ್ಷೆಯಾಗುವುದಿಲ್ಲ,” ಎಂದು ಪ್ರಮಾಣಮಾಡಿ ಹೇಳಿದನು.
24
ತರುವಾಯ ಸೌಲನ ಮೊಮ್ಮಗನಾದ ಮೆಫೀಬೋಶೆತನು ಅರಸನ ದರ್ಶನಕ್ಕೆ ಬಂದನು. ಅರಸನು ಜೆರುಸಲೇಮನ್ನು ಬಿಟ್ಟಂದಿನಿಂದ ಸುರಕ್ಷಿತನಾಗಿ ಹಿಂದಿರುಗುವವರೆಗೂ ಇವನು ತನ್ನ ಪಾದಗಳನ್ನು ತೊಳೆದುಕೊಂಡಿರಲಿಲ್ಲ; ಮೀಸೆಯನ್ನು ಕತ್ತರಿಸಿರಲಿಲ್ಲ; ಬಟ್ಟೆಗಳನ್ನು ಒಗೆಸಿಕೊಂಡಿರಲಿಲ್ಲ.
25
ಇವನು ಜೆರುಸಲೇಮಿನಿಂದ ಅರಸನ ದರ್ಶನಕ್ಕೆ ಬಂದಾಗ ಅರಸನು, “ಮೆಫೀಬೋಶೆತನೇ, ನೀನು ನನ್ನ ಸಂಗಡ ಏಕೆ ಬರಲಿಲ್ಲ?” ಎಂದು ಕೇಳಿದನು.
26
ಅವನು, “ಒಡೆಯರೇ, ಅರಸರೇ, ನನ್ನ ಸೇವಕ ನನ್ನನ್ನು ವಂಚಿಸಿದ. ಕುಂಟನಾದ ನಾನು ಅವನಿಗೆ, ‘ಕತ್ತೆಗೆ ತಡಿಹಾಕು, ನಾನು ಕುಳಿತುಕೊಂಡು ಅರಸರ ಜೊತೆಯಲ್ಲೇ ಹೋಗಬೇಕು’ ಎಂದು ಆಜ್ಞಾಪಿಸಿದೆ.
27
ಅವನು ಹಾಗೆ ಮಾಡದೆ ನನ್ನ ಒಡೆಯರಾದ ಅರಸರ ಬಳಿಗೆ ಬಂದು ನನ್ನ ವಿಷಯದಲ್ಲಿ ಚಾಡಿಹೇಳಿದ. ಅರಸರು ದೇವದೂತನ ಹಾಗಿರುತ್ತೀರಿ. ತಮಗೆ ಸರಿಕಂಡದ್ದನ್ನು ಮಾಡಿ.
28
ನನ್ನ ತಂದೆಯ ಮನೆಯವರೆಲ್ಲರೂ ಅರಸರಾದ ನನ್ನ ಒಡೆಯರ ದೃಷ್ಟಿಯಲ್ಲಿ ಮರಣಕ್ಕೆ ಪಾತ್ರರಾಗಿದ್ದರು. ಆದರೂ ತಮ್ಮ ಸೇವಕನಾದ ನನ್ನನ್ನು ಭೋಜನಕ್ಕೆ ತಮ್ಮ ಪಂಕ್ತಿಯಲ್ಲಿ ಕುಳ್ಳಿರಿಸಿಕೊಂಡಿರಿ. ಅರಸರಿಗೆ ಹೆಚ್ಚಾಗಿ ಮೊರೆ ಇಡುವುದಕ್ಕೆ ನಾನು ಯೋಗ್ಯನಲ್ಲ,” ಎಂದು ಉತ್ತರಕೊಟ್ಟನು.
29
ಆಗ ಅರಸನು, “ಹೆಚ್ಚು ಮಾತು ಏಕೆ? ಹೊಲವನ್ನು ನೀನು ಹಾಗು ಚೀಬ ಭಾಗಮಾಡಿಕೊಳ್ಳಬೇಕು. ಇದೇ ನನ್ನ ತೀರ್ಪು,” ಎಂದು ಹೇಳಿದನು.
30
ಅದಕ್ಕೆ ಮೆಫೀಬೋಶೆತನು, “ಚೀಬನು ಎಲ್ಲವನ್ನು ತಾನೇ ತೆಗೆದುಕೊಂಡರೂ ತೆಗೆದುಕೊಳ್ಳಲಿ; ನನ್ನ ಒಡೆಯರಾದ ಅರಸರು ತಮ್ಮ ಮನೆಗೆ ಸುರಕ್ಷಿತವಾಗಿ ಬಂದದ್ದೇ ಸಾಕು,” ಎಂದನು.
31
ಗಿಲ್ಯಾದ್ಯನಾದ ಬರ್ಜಿಲ್ಲೈ ಎಂಬುವನು ಅರಸನನ್ನು ಬೀಳ್ಕೊಡುವುದಕ್ಕಾಗಿ ರೋಗೆಲೀಮಿನಿಂದ ಜೋರ್ಡನಿಗೆ ಬಂದಿದ್ದನು.
32
ಇವನು ಎಂಬತ್ತು ವರ್ಷದ ಮುದುಕ. ಇವನು ಬಹು ಶ್ರೀಮಂತನಾಗಿದ್ದುದರಿಂದ ದಾವೀದನು ಮಹನಯಿಮಿನಲ್ಲಿದ್ದ ಅವಧಿಯಲ್ಲಿ ಅವನ ಜೀವನಕ್ಕೆ ಬೇಕಾದುದನ್ನು ಇವನೇ ಒದಗಿಸಿಕೊಡುತ್ತಿದ್ದನು.
33
ಅರಸನು ಆ ಬರ್ಜಿಲ್ಲೈಗೆ, “ನನ್ನ ಜೊತೆಯಲ್ಲಿ ನದಿಯ ಆಚೆಗೆ ಬಾ; ನಾನು ಜೆರುಸಲೇಮಿನಲ್ಲಿ ನಿನ್ನನ್ನು ಹತ್ತಿರವೇ ಇಟ್ಟುಕೊಂಡು ಸಾಕುತ್ತೇನೆ,” ಎಂದನು.
34
ಅದಕ್ಕೆ ಬರ್ಜಿಲ್ಲೈಯು, “ಇಷ್ಟು ವಯಸ್ಸು ಕಳೆದವನಾದ ನಾನು ಅರಸರ ಸಂಗಡ ಜೆರುಸಲೇಮಿಗೆ ಬರುವುದು ಹೇಗೆ?
35
ಈಗ ನಾನು ಎಂಬತ್ತು ವರ್ಷದವನು. ಒಳ್ಳೆಯದು ಕೆಟ್ಟದು ಇವುಗಳ ಭೇದ ನನಗಿನ್ನು ತಿಳಿಯುವುದೇ? ನಿಮ್ಮ ಸೇವಕನಾದ ನನಗೆ ಇನ್ನು ಅನ್ನಪಾನಗಳ ರುಚಿ ಗೊತ್ತಾಗುವುದೇ? ಗಾಯನ ಮಾಡುವ ಸ್ತ್ರೀಪುರುಷರ ಸ್ವರಗಳು ನನಗೆ ಕೇಳಿಸುತ್ತವೆಯೇ? ನಾನು ನನ್ನ ಒಡೆಯರಾದ ಅರಸರಿಗೆ ಸುಮ್ಮನೆ ಏಕೆ ಹೊರೆಯಾಗಿರಬೇಕು?
36
ನದಿ ದಾಟಿ ಸ್ವಲ್ಪ ದೂರಕ್ಕೆ ನಿಮ್ಮ ಸಂಗಡ ಬರುತ್ತೇನೆ. ಅರಸರಾದ ನೀವು ನನಗೇಕೆ ಇಂಥ ಉಪಕಾರ ಮಾಡಬೇಕು?
37
ದಯವಿಟ್ಟು ನಿಮ್ಮ ಸೇವಕನಾದ ನನಗೆ ಹಿಂದಿರುಗಿ ಹೋಗುವುದಕ್ಕೆ ಅಪ್ಪಣೆಯಾಗಲಿ; ನಾನು ನನ್ನ ತಂದೆತಾಯಿಗಳ ಸಮಾಧಿಯಿರುವ ಸ್ವಂತ ಊರಿಗೆ ಹೋಗಿ ಅಲ್ಲೇ ಸಾಯುವೆನು. ಇಗೋ, ಇಲ್ಲಿ ನಿಮ್ಮ ಸೇವಕನಾದ ಕಿಮ್ಹಾಮನಿರುತ್ತಾನೆ. ನನ್ನ ಒಡೆಯರಾದ ಅರಸರು ಇವನನ್ನು ಕರೆದುಕೊಂಡು ಹೋಗಿ ತಮ್ಮ ಇಷ್ಟವಿದ್ದಂತೆ ಇವನಿಗೆ ದಯೆತೋರಿಸಿ,” ಎಂದನು.
38
ಅದಕ್ಕೆ ಅರಸನು, “ಕಿಮ್ಹಾಮನು ನನ್ನ ಸಂಗಡ ಬರಲಿ; ಅವನಿಗೆ ನಿನ್ನ ಇಷ್ಟದಂತೆ ದಯೆತೋರುತ್ತೇನೆ. ಇನ್ನೂ ಏನೇನು ಮಾಡಬೇಕೆನ್ನುತ್ತೀಯೋ ಅದೆಲ್ಲವನ್ನು ಮಾಡುತ್ತೇನೆ,” ಎಂದು ಹೇಳಿದನು.
39
ಜನರೆಲ್ಲರು ನದಿ ದಾಟಿದರು. ಅರಸನು ದಾಟಿದ ಮೇಲೆ ಬರ್ಜಿಲ್ಲೈಯನ್ನು ಮುದ್ದಿಟ್ಟು ಆಶೀರ್ವದಿಸಿದನು. ಅನಂತರ ಬರ್ಜಿಲ್ಲೈಯು ತನ್ನ ಊರಿಗೆ ಮರಳಿದನು.
40
ಅರಸನು ಕಿಮ್ಹಾಮನೊಡನೆ ಗಿಲ್ಗಾಲಿಗೆ ತೆರಳಿದನು. ಎಲ್ಲ ಯೆಹೂದ್ಯರು ಹಾಗು ಇಸ್ರಯೇಲರಲ್ಲಿ ಅರ್ಧಜನರು ಅರಸನನ್ನು ಕರೆದುಕೊಂಡು ಹೋದರು.
41
ಆಗ ಇಸ್ರಯೇಲರೆಲ್ಲರು ಅರಸನ ಮುಂದೆ ಬಂದು, “ನಮ್ಮ ಸಹೋದರರಾದ ಯೆಹೂದ್ಯರು ನಮಗೆ ತಿಳಿಸದೆ ತಾವೇ ಹೋಗಿ ಅರಸರನ್ನೂ ಅವರ ಮನೆಯವರನ್ನೂ ಅವರೊಡನೆ ಇದ್ದ ಜನರನ್ನೂ ಜೋರ್ಡನ್ ನದಿದಾಟಿಸಿ ಕರೆದುಕೊಂಡು ಬಂದದ್ದೇಕೆ?” ಎಂದು ಕೇಳಿದರು.
42
ಅದಕ್ಕೆ ಯೆಹೂದ್ಯರೆಲ್ಲರು, “ಅರಸರು ನಮಗೆ ಸಮೀಪಬಂಧು; ನೀವು ಅದಕ್ಕಾಗಿ ಸಿಟ್ಟುಗೊಳ್ಳುವುದೇಕೆ? ನಾವೇನು ಅರಸರ ಖರ್ಚಿನಿಂದ ಊಟಮಾಡಿದೆವೋ? ಅವರು ನಮಗೆ ಏನಾದರೂ ಕೊಟ್ಟಿರುವರೋ?’ ಎಂದು ಉತ್ತರಕೊಟ್ಟರು.
43
ಆಗ ಇಸ್ರಯೇಲರು ಯೆಹೂದ್ಯರಿಗೆ, “ಅರಸರಲ್ಲಿ ನಮಗೆ ಹತ್ತುಪಾಲು ಉಂಟಲ್ಲವೆ? ದಾವೀದನ ವಿಷಯದಲ್ಲೂ ನಮಗೆ ಹೆಚ್ಚು ಉಂಟು. ಹೀಗಿರುವುದರಿಂದ ನೀವು ನಮ್ಮನ್ನು ತಿರಸ್ಕರಿಸಿದ್ದೇಕೆ? ನಮ್ಮ ಅರಸರನ್ನು ಕರೆದುಕೊಂಡು ಬರುವ ವಿಷಯದಲ್ಲಿ ಮೊದಲು ಮಾತಾಡಿದವರು ನಾವಲ್ಲವೇ?’ ಎಂದರು. ಇಸ್ರಯೇಲರ ವಾದಕ್ಕಿಂತ ಯೆಹೂದ್ಯರ ವಾದ ಉಗ್ರವಾಗಿತ್ತು.
← Chapter 18
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 20 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24