bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
2 Samuel 2
2 Samuel 2
Kannada Bible (KNCL) BSI 2016
← Chapter 1
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 3 →
1
ಅನಂತರ ದಾವೀದನು ಸರ್ವೇಶ್ವರನನ್ನು, “ನಾನು ಜುದೇಯ ನಾಡಿನ ಯಾವುದಾದರೊಂದು ಪಟ್ಟಣಕ್ಕೆ ಹೋಗಬಹುದೇ?” ಎಂದು ಕೇಳಿದನು. “ಹೋಗಬಹುದು” ಎಂದರು ಸರ್ವೇಶ್ವರ. ಅವನು ಪುನಃ, “ಯಾವ ಊರಿಗೆ ಹೋಗಲಿ?” ಎಂದು ಕೇಳಿದ್ದಕ್ಕೆ, “ಹೆಬ್ರೋನಿಗೆ ಹೋಗು,” ಎಂಬ ಉತ್ತರ ಸಿಕ್ಕಿತು.
2
ಆಗ ದಾವೀದನು ತನ್ನ ಇಬ್ಬರು ಹೆಂಡತಿಯರಾದ ಜೆಸ್ರೀಲಿನ ಅಹೀನೋವಮಳನ್ನು ಮತ್ತು ಕರ್ಮೆಲ್ಯನಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳನ್ನೂ ಕರೆದುಕೊಂಡು ಅಲ್ಲಿಗೆ ಹೋದನು.
3
ದಾವೀದನ ಜನರೂ ತಮ್ಮ ತಮ್ಮ ಕುಟುಂಬಗಳನ್ನು ಕರೆದುಕೊಂಡು ಅವನ ಜೊತೆಯಲ್ಲಿ ಹೋಗಿ ಹೆಬ್ರೋನಿಗೆ ಸೇರಿದ ಊರುಗಳಲ್ಲಿ ವಾಸಿಸಿದರು.
4
ತರುವಾಯ ಯೆಹೂದ್ಯರು ಅಲ್ಲಿಗೆ ಬಂದು ದಾವೀದನನ್ನು ಅಭಿಷೇಕಿಸಿ ತಮ್ಮ ಕುಲಕ್ಕೆ ಅರಸನನ್ನಾಗಿ ಮಾಡಿಕೊಂಡರು. ಸೌಲನ ಶವವನ್ನು ಸಮಾಧಿಮಾಡಿದವರು ಯಾಬೇಷ್ ಗಿಲ್ಯಾದಿನವರೇ ಎಂಬ ಸಂಗತಿ ದಾವೀದನಿಗೆ ತಿಳಿಯಿತು.
5
ಆಗ ಅವನು ಅವರ ಬಳಿಗೆ ದೂತರನ್ನು ಕಳುಹಿಸಿ, “ನೀವು ರಾಜನಿಷ್ಠೆಯಿಂದ ನಿಮ್ಮ ಒಡೆಯ ಸೌಲನ ಶವವನ್ನು ಸಮಾಧಿಮಾಡಿದ್ದಕ್ಕಾಗಿ ಸರ್ವೇಶ್ವರನ ಆಶೀರ್ವಾದ ನಿಮಗೆ ಲಭಿಸಲಿ!
6
ಅವರ ಅಚಲ ಪ್ರೀತಿಸತ್ಯತೆಗಳು ನಿಮ್ಮೊಂದಿಗಿರಲಿ! ಈ ಸತ್ಕಾರ್ಯಕ್ಕಾಗಿ ನಾನೂ ನಿಮಗೆ ಉಪಕಾರ ಮಾಡುವೆನು.
7
ಯೆಹೂದ್ಯರು ನನ್ನನ್ನು ಅಭಿಷೇಕಿಸಿ ತಮ್ಮ ಅರಸನನ್ನಾಗಿ ಮಾಡಿಕೊಂಡಿದ್ದಾರೆ. ಆದುದರಿಂದ ಸೌಲನು ಸತ್ತುಹೋಗಿದ್ದರೂ ನೀವು ಶೂರರಾಗಿರಿ; ನಿಮ್ಮ ಕೈಗಳು ಜೋಲುಬೀಳದಿರಲಿ,” ಎಂದು ಹೇಳಿಸಿದನು.
8
ಸೌಲನ ಸೇನಾಪತಿ ಹಾಗು ನೇರನ ಮಗನಾದ ಅಬ್ನೇರನು ಸೌಲನ ಮಗನಾದ ಈಷ್ಬೋಶೆತನನ್ನು ನದಿಯ ಆಚೆಯಲ್ಲಿರುವ ಮಹನಯಿಮಿಗೆ ಕರೆದೊಯ್ದನು.
9
ಗಿಲ್ಯಾದ್, ಆಶೇರ್, ಜೆಸ್ರೀಲ್, ಎಫ್ರಯಿಮ್, ಬೆನ್ಯಾಮೀನ್ ಇವುಗಳ ಜನರ ಮೇಲೆ ಮತ್ತು ಬೇರೆ ಎಲ್ಲ ಇಸ್ರಯೇಲರ ಮೇಲೆ ಅವನನ್ನು ಅರಸನನ್ನಾಗಿ ಮಾಡಿದನು.
10
(ಸೌಲನ ಮಗನಾದ ಈಷ್ಬೋಶೆತನಿಗೆ ಆಗ ನಾಲ್ವತ್ತು ವರ್ಷ. ಇಸ್ರಯೇಲರನ್ನು ಆತ ಎರಡು ವರ್ಷ ಆಳಿದನು).ಯೆಹೂದ್ಯರು ಮಾತ್ರ ದಾವೀದನನ್ನೇ ಹಿಂಬಾಲಿಸಿದರು.
11
ದಾವೀದನು ಹೆಬ್ರೋನಿನಲ್ಲಿ ಯೆಹೂದ್ಯರ ಅರಸನಾಗಿ ಏಳು ವರ್ಷ ಆರು ತಿಂಗಳು ರಾಜ್ಯವಾಳಿದನು.
12
ಒಂದು ದಿನ ನೇರನ ಮಗ ಅಬ್ನೇರನು ಮತ್ತು ಸೌಲನ ಮಗ ಈಷ್ಬೋಶೆತನ ಸೇವಕರು ಮಹನಯಿಮಿನಿಂದ ಹೊರಟು ಗಿಬ್ಯೋನಿಗೆ ಬಂದರು.
13
ಚೆರೂಯಳ ಮಗ ಯೋವಾಬನು ಮತ್ತು ದಾವೀದನ ಸೇವಕರು ಹೊರಟು ಅವರನ್ನು ಗಿಬ್ಯೋನಿನ ಕೆರೆಯ ಹತ್ತಿರ ಸಂಧಿಸಿದರು. ಇವರು ಕೆರೆಯ ಈಚೆ, ಅವರು ಕೆರೆಯ ಆಚೆ ಕುಳಿತುಕೊಂಡರು.
14
ಆಗ ಅಬ್ನೇರನು ಯೋವಾಬನಿಗೆ, “ಎರಡು ಕಡೆಯ ತರುಣರು ಎದ್ದುಬಂದು ನಮ್ಮ ಮುಂದೆ ದ್ವಂದ್ವಯುದ್ಧ ಮಾಡಲಿ,” ಎಂದು ಹೇಳಿದನು. ಯೋವಾಬನು ಅದಕ್ಕೆ ಒಪ್ಪಿಕೊಂಡನು.
15
ಆಗ ಸೌಲನ ಮಗ ಈಷ್ಬೋಶೆತನ ಕಡೆಯವರಾದ ಹನ್ನೆರಡು ಮಂದಿ ಬೆನ್ಯಾಮೀನ್ಯರು, ಮತ್ತು ದಾವೀದನ ಸೇವಕರಲ್ಲಿ ಹನ್ನೆರಡು ಮಂದಿ ಸಮಸಂಖ್ಯೆಯಾಗಿ ಹೊರಟು ದ್ವಂದ್ವಯುದ್ಧ ಮಾಡಿದರು.
16
ಅವರಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಎದುರಾಳಿಯ ತಲೆ ಹಿಡಿದು ಕತ್ತಿಯಿಂದ ಪಕ್ಕೆಯನ್ನು ತಿವಿದುದರಿಂದ ಎಲ್ಲರೂ ಸತ್ತುಬಿದ್ದರು. ಆದುದರಿಂದ ಗಿಬ್ಯೋನಿನಲ್ಲಿರುವ ಆ ಸ್ಥಳಕ್ಕೆ ‘ಹದಗತ್ತಿ ಕ್ಷೇತ್ರ’ ಎಂದು ಹೆಸರಾಯಿತು.
17
ಅನಂತರ ಆ ದಿವಸ ಘೋರಯುದ್ಧ ನಡೆಯಿತು. ಅಬ್ನೇರನನ್ನೂ ಇಸ್ರಯೇಲರನ್ನೂ ದಾವೀದನ ಸೇವಕರು ಸೋಲಿಸಿದರು.
18
ಚೆರೂಯಳ ಮೂರು ಮಂದಿ ಮಕ್ಕಳಾದ ಯೋವಾಬ್, ಅಬೀಷೈ, ಅಸಾಹೇಲ್ ಎಂಬುವರು ಅಲ್ಲಿಗೆ ಬಂದಿದ್ದರು. ಅಸಾಹೇಲನು ಅಡವಿಯ ಜಿಂಕೆಯಂತೆ ಚುರುಕು ಕಾಲಿನವನಾಗಿದ್ದನು.
19
ಇವನು ಎಡಕ್ಕಾದರೂ ಬಲಕ್ಕಾದರೂ ತಿರುಗದೆ ಅಬ್ನೇರನನ್ನು ಹಿಂದಟ್ಟಿದನು.
20
ಅಬ್ನೇರನು ಹಿಂದಿರುಗಿ ನೋಡಿ, “ನೀನು ಅಸಾಹೇಲನೋ?’ ಎಂದು ಕೇಳಿದ್ದಕ್ಕೆ ಅವನು, “ಹೌದು” ಎಂದು ಉತ್ತರಕೊಟ್ಟನು.
21
ಆಗ ಅಬ್ನೇರನು, “ನನ್ನನ್ನು ಬಿಟ್ಟು ಎಡಕ್ಕಾಗಲಿ ಬಲಕ್ಕಾಗಲಿ ತಿರುಗಿಕೊಂಡು ಯುವಕರಲ್ಲೊಬ್ಬನನ್ನು ಹಿಡಿದು, ಸುಲಿದುಕೋ,” ಎಂದು ಹೇಳಿದನು. ಆದರೆ ಅಸಾಹೇಲನು ಒಪ್ಪಲಿಲ್ಲ.
22
ಮತ್ತೊಮ್ಮೆ ಅಬ್ನೇರನು, “ನನ್ನನ್ನು ಬಿಟ್ಟುಹೋಗು; ನಿನ್ನನ್ನು ಕೊಲ್ಲಲು ನನ್ನನ್ನೇಕೆ ಒತ್ತಾಯಿಸುವೆ? ಹಾಗೆ ಕೊಂದರೆ ನಿನ್ನ ಅಣ್ಣನಾದ ಯೋವಾಬನಿಗೆ ಹೇಗೆ ತಾನೆ ಮುಖ ತೋರಿಸಲಿ,” ಎಂದನು.
23
ಆದರೂ ಅಸಾಹೇಲನು ಬಿಟ್ಟುಹೋಗುವುದಕ್ಕೆ ಒಪ್ಪಲಿಲ್ಲ. ಆದಕಾರಣ ಅಬ್ನೇರನು ಭರ್ಜಿಯನ್ನು ಹಿಮ್ಮುಖವಾಗಿ ಎಸೆದು ಅವನ ಹೊಟ್ಟೆಯನ್ನು ತಿವಿದನು. ಆ ಭರ್ಜಿ ಅವನ ಬೆನ್ನಿನಿಂದ ಹಾಯ್ದು ಬಂದಿತು. ಅವನು ಕೂಡಲೇ ಅಲ್ಲೇ ಬಿದ್ದು ಸತ್ತನು. ಅಸಾಹೇಲನು ಸತ್ತುಬಿದ್ದ ಸ್ಥಳಕ್ಕೆ ಬಂದವರೆಲ್ಲರೂ ಅಲ್ಲೇ ನಿಂತರು.
24
ಆದರೆ ಯೋವಾಬನೂ ಅಬೀಷೈಯೂ ಅಬ್ನೇರನನ್ನು ಹಿಂದಟ್ಟಿದರು. ಹೀಗೆ ಅವರು ‘ಅಮ್ಮಾ’ ಎಂಬ ಗುಡ್ಡಕ್ಕೆ ಬರುವಷ್ಟರಲ್ಲಿ ಸೂರ್ಯಾಸ್ತಮವಾಯಿತು. ಆ ಗುಡ್ಡ ಗಿಬ್ಯೋನ್ ಮರುಭೂಮಿ ಮಾರ್ಗದ ಬಳಿಯಲ್ಲಿರುವ ಗೀಯದ ಎದುರಿನಲ್ಲಿದೆ.
25
ಬೆನ್ಯಾಮೀನ್ಯರು ಒಂದೇ ಗುಂಪು ಆಗಿ ಕೂಡಿಕೊಂಡು ಅಬ್ನೇರನ ಬಳಿಗೆ ಬಂದು ಗುಡ್ಡದ ಮೇಲೆ ನಿಂತರು.
26
ಆಗ ಅಬ್ನೇರನು ಯೋವಾಬನನ್ನು ನೋಡಿ, “ಕತ್ತಿ ಯಾವಾಗಲೂ ತಿನ್ನುತ್ತಲೇ ಇರಬೇಕೇ? ಹಗೆತನವೇ ಇದರ ಅಂತ್ಯಫಲವೆಂದು ನಿನಗೆ ಗೊತ್ತಾಗಲಿಲ್ಲವೇ? ಸಹೋದರರನ್ನು ಹಿಂದಟ್ಟುವುದು ಸಾಕೆಂದು ನಿನ್ನ ಜನರಿಗೆ ಯಾವಾಗ ಆಜ್ಞಾಪಿಸುವೆ?” ಎಂದನು.
27
ಅದಕ್ಕೆ ಯೋವಾಬನು, “ದೇವರ ಜೀವದಾಣೆ, ಈಗ ನೀನು ಈ ಮಾತುಗಳನ್ನು ಹೇಳದಿದ್ದರೆ, ಜನರು ನಾಳೆ ಬೆಳಗಾಗುವವರೆಗೆ ತಮ್ಮ ದೇಶಬಾಂಧವರನ್ನು ಹಿಂದಟ್ಟದೆ ಬಿಡುತ್ತಿರಲಿಲ್ಲ,” ಎಂದು ಉತ್ತರಕೊಟ್ಟನು.
28
ಕೂಡಲೆ ತುತೂರಿಯನ್ನು ಊದಿಸಿದನು. ಆಗ ಜನರು ಇಸ್ರಯೆಲರನ್ನು ಹಿಂದಟ್ಟದೆ ಬಿಟ್ಟರು. ಯುದ್ಧವು ನಿಂತುಹೋಯಿತು.
29
ಅಬ್ನೇರನೂ ಅವನ ಜನರೂ ಅರಾಬಾ ಕಣಿವೆಯಲ್ಲಿ ರಾತ್ರಿಯೆಲ್ಲಾ ಪ್ರಯಾಣಮಾಡಿ ಜೋರ್ಡನ್ ನದಿದಾಟಿ ಬಿಥ್ರೋನ್ ಕಣಿವೆಯನ್ನು ಹಾಯ್ದು ಮಹನಯಿಮಿಗೆ ಸೇರಿದರು.
30
ಯೋವಾಬನು ಅಬ್ನೇರನನ್ನು ಬೆನ್ನಟ್ಟದೆ ಹಿಂದೆ ತಿರುಗಿ ಬಂದು, ಜನರನ್ನು ಕೂಡಿಸಿ ಲೆಕ್ಕಿಸಿದಾಗ ಅವರಲ್ಲಿ ದಾವೀದನ ಹತ್ತೊಂಬತ್ತು ಮಂದಿ ಯೋಧರು ಮತ್ತು ಅಸಾಹೇಲನು ಇರಲಿಲ್ಲ.
31
ಆದರೆ ದಾವೀದನ ಯೋಧರು ಅಬ್ನೇರನ ಜನರಾದ ಬೆನ್ಯಾಮೀನ್ಯರಲ್ಲಿ ಮುನ್ನೂರರ್ವತ್ತು ಮಂದಿಯನ್ನು ಕೊಂದಿದ್ದರು.
32
ಅವರು ಅಸಾಹೇಲನ ಶವವನ್ನು ತಂದು ಅದನ್ನು ಬೆತ್ಲೆಹೇಮಿನಲ್ಲಿರುವ ಅವನ ತಂದೆಯ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. ಅನಂತರ ಯೋವಾಬನೂ ಅವನ ಜನರೂ ರಾತ್ರಿಯೆಲ್ಲಾ ಪ್ರಯಾಣಮಾಡಿ ಹೆಬ್ರೋನಿಗೆ ಬಂದರು. ಆಗ ಸೂರ್ಯೋದಯವಾಗಿತ್ತು.
← Chapter 1
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 3 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
Recommended Reading
Commentary
2 Samuel Commentaries
→
Devotional
2 Samuel Devotional Guide
→
Get This Bible
KNCL Study Bible
→