bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Esther 1
Esther 1
Kannada BSI JV (ಕನ್ನಡ ಸತ್ಯವೇದವು J.V. (BSI))
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 2 →
1
ಹಿಂದುಸ್ಥಾನ ಮೊದಲುಗೊಂಡು ಕೂಷಿನವರೆಗೂ ಇರುವ ನೂರಿಪ್ಪತ್ತೇಳು ಸಂಸ್ಥಾನಗಳನ್ನು ಆಳುತ್ತಿದ್ದ ಅಹಷ್ವೇರೋಷನ ಕಾಲದಲ್ಲಿ ನಡೆದ ಚರಿತ್ರೆ.
2
ಅಹಷ್ವೇರೋಷನು ತನ್ನ ಆಳಿಕೆಯ ಮೂರನೆಯ ವರುಷ ಶೂಷನ್ ಕೋಟೆಯಲ್ಲಿನ ತನ್ನ ರಾಜಸಿಂಹಾಸನವನ್ನೇರಿದಾಗ
3
ಎಲ್ಲಾ ಸರದಾರರಿಗೋಸ್ಕರವೂ ಪರಿವಾರದವರಿಗೋಸ್ಕರವೂ ಔತಣಮಾಡಿಸಿದನು. ಪಾರಸಿಯ ಮತ್ತು ಮೇದ್ಯ ಸೇನಾಧಿಪತಿಗಳೂ ಪ್ರಧಾನರೂ ಸಂಸ್ಥಾನಾಧಿಕಾರಿಗಳೂ ಅವನ ಸನ್ನಿಧಿಗೆ ಬಂದಿದ್ದರು.
4
ಅವನು ಅನೇಕ ದಿವಸ ಅಂದರೆ ನೂರೆಂಭತ್ತು ದಿವಸಗಳವರೆಗೂ ಅವರಿಗೆ ತನ್ನ ಘನವಾದ ರಾಜ್ಯದ ಐಶ್ವರ್ಯವನ್ನೂ ಮಹಾಮಹಿಮೆಯ ವೈಭವಗಳನ್ನೂ ತೋರಿಸಿದನು.
5
ಈ ದಿನಗಳಾದನಂತರ ಅರಸನು ಶೂಷನ್ ಕೋಟೆಯಲ್ಲಿದ್ದ ಎಲ್ಲಾ ಶ್ರೇಷ್ಠರಿಗೂ ಕನಿಷ್ಠರಿಗೂ ಅರಮನೆಯ ತೋಟದ ಬೈಲಿನಲ್ಲಿ ಏಳು ದಿನಗಳವರೆಗೂ ಔತಣಮಾಡಿಸಿದನು.
6
ಅಲ್ಲಿ ಬಿಳೀ ನೂಲಿನ ಬಟ್ಟೆಗಳೂ ನೀಲಿಬಟ್ಟೆಗಳೂ ಧೂಮ್ರವರ್ಣವುಳ್ಳ ನಾರಿನ ದಾರದಿಂದ ಸಂಗಮೀರ ಕಲ್ಲು ಕಂಬಗಳಲ್ಲಿನ ಬೆಳ್ಳಿಯ ಉಂಗುರಗಳಿಗೆ ಕಟ್ಟಲ್ಪಟ್ಟಿದ್ದವು. ಜರತಾರೆಯ ಕಸೂತಿ ಹಾಕಿರುವ ಲೋಡುಗಳು ಕೆಂಪು ಬಿಳಿ ಹಳದಿ ಕಪ್ಪು ಬಣ್ಣಗಳುಳ್ಳ ಸಂಗಮೀರ ಕಲ್ಲುಗಳಿಂದ ರಚಿತವಾದ ನೆಲಗಟ್ಟಿನ ಮೇಲೆ ಇಡಲ್ಪಟ್ಟಿದ್ದವು.
7
ಪಾನಪಾತ್ರೆಗಳು ಬಂಗಾರದವುಗಳೂ ನಾನಾ ಆಕಾರದವುಗಳೂ ಆಗಿದ್ದವು. ರಾಜದ್ರಾಕ್ಷಾರಸವು ಅರಸರ ಔದಾರ್ಯಕ್ಕೆ ತಕ್ಕಂತೆ ಧಾರಾಳವಾಗಿತ್ತು.
8
ಪಾನಮಾಡುವದರಲ್ಲಿ ಯಾರಿಗೂ ಒತ್ತಾಯಮಾಡಬಾರದೆಂದು ಕ್ರಮವಿತ್ತು. ಪ್ರತಿಯೊಬ್ಬನಿಗೆ ಅವನವನ ಇಷ್ಟದಂತೆ ಕೊಡಬೇಕೆಂದು ರಾಜನು ತನ್ನ ಎಲ್ಲಾ ಮನೆವಾರ್ತೆಯವರಿಗೆ ಆಜ್ಞಾಪಿಸಿದ್ದನು.
9
ವಷ್ಟಿರಾಣಿಯೂ ಅಹಷ್ವೇರೋಷ್ರಾಜನ ಅರಮನೆಯಲ್ಲಿ ಸ್ತ್ರೀಯರಿಗೋಸ್ಕರ ಔತಣ ಮಾಡಿಸಿದಳು.
10
ಏಳನೆಯ ದಿನದಲ್ಲಿ ಅರಸನಾದ ಅಹಷ್ವೇರೋಷನು ದ್ರಾಕ್ಷಾರಸಪಾನಮಾಡಿ ಆನಂದಲಹರಿಯಲ್ಲಿದ್ದಾಗ
11
ಬಹು ಸುಂದರಿಯಾದ ರಾಣಿಯ ಸೌಂದರ್ಯವನ್ನು ಜನರಿಗೂ ಸರದಾರರಿಗೂ ತೋರಿಸಬೇಕೆಂದು ತನ್ನ ಸಾನ್ನಿಧ್ಯಸೇವಕರಾದ ಮೆಹೂಮಾನ್, ಬಿಜೆತಾ, ಹರ್ಬೋನಾ, ಬಿಗೆತಾ, ಅಬಗೆತಾ, ಜೇತರ್, ಕರ್ಕಸ್ ಎಂಬ ಏಳು ಮಂದಿ ಕಂಚುಕಿಗಳಿಗೆ - ವಷ್ಟಿರಾಣಿಯು ರಾಜ ಮುಕುಟವನ್ನು ಧರಿಸಿಕೊಂಡು ರಾಜಸನ್ನಿಧಿಗೆ ಬರಬೇಕೆಂಬದಾಗಿ ಹೇಳಿರಿ ಎಂದು ಆಜ್ಞಾಪಿಸಿದನು.
12
ಕಂಚುಕಿಗಳು ತಿಳಿಸಿದ ರಾಜಾಜ್ಞೆಗೆ ವಷ್ಟಿರಾಣಿಯು - ಬರುವದಿಲ್ಲ ಎಂದು ಉತ್ತರಕೊಟ್ಟಳು. ಇದರಿಂದ ಅರಸನು ಬಹುಕೋಪಗೊಂಡು ರೌದ್ರಾವೇಶನಾದನು.
13
ವಿಧಿನ್ಯಾಯಗಳನ್ನು ಬಲ್ಲವರೆಲ್ಲರ ಮುಂದೆ ಅರಮನೆಯ ಸಂಗತಿಗಳನ್ನು ಇಡುವ ಪದ್ಧತಿಯಿತ್ತು.
14
ಅರಸನಾದ ಅಹಷ್ವೇರೋಷನ ಒಡ್ಡೋಲಗದಲ್ಲಿ ರಾಜಸಾನಿಧ್ಯಸೇವಕರೂ ರಾಜಸಭಾಪ್ರಧಾನರೂ ಆಗಿದ್ದ ಕರ್ಷೆನಾ, ಶೇತಾರ್, ಅದ್ಮಾತಾ, ತರ್ಷೀಷ್, ಮೆರೆಸ್, ಮರ್ಸೆನಾ, ಮೆಮೂಕಾನ್ ಎಂಬ ಏಳು ಮಂದಿ ಪಾರಸಿಯ ಮತ್ತು ಮೇದ್ಯ ಪ್ರಭುಗಳಿದ್ದರು. ಅವನು ಸಮಯೋಚಿತಜ್ಞಾನವುಳ್ಳವರಾದ ಇವರನ್ನು -
15
ಕಂಚುಕಿಗಳ ಮುಖಾಂತರ ತನಗುಂಟಾದ ರಾಜಾಜ್ಞೆಯನ್ನು ಕೈಕೊಳ್ಳದೆಹೋದ ವಷ್ಟಿರಾಣಿಗೆ ನಿಯಮದ ಪ್ರಕಾರ ಮಾಡತಕ್ಕದ್ದೇನು ಎಂದು ಕೇಳಲು ಮೆಮೂಕಾನನು ಅರಸನ ಮತ್ತು ಸರದಾರರ ಮುಂದೆ -
16
ವಷ್ಟಿರಾಣಿಯ ಅಪರಾಧವು ಅರಸನೊಬ್ಬನಿಗೇ ವಿರುದ್ಧವಾದದ್ದಲ್ಲ; ಅರಸನಾದ ಅಹಷ್ವೇರೋಷನಿಗೆ ಸೇರಿರುವ ಎಲ್ಲಾ ಸಂಸ್ಥಾನಗಳ ಸರದಾರರಿಗೂ ಜನರಿಗೂ ವಿರುದ್ಧವಾದದ್ದು.
17
ರಾಣಿಯ ನಡತೆಯು ಎಲ್ಲಾ ಸ್ತ್ರೀಯರಿಗೂ ಗೊತ್ತಾಗಿ ಅವರೂ ತಮ್ಮ ಗಂಡಂದಿರನ್ನು ತಿರಸ್ಕರಿಸುವದಕ್ಕೆ ಕಾರಣವಾಗುವದು. ಅರಸನಾದ ಅಹಷ್ವೇರೋಷನು ವಷ್ಟಿ ರಾಣಿಗೆ ಬರಬೇಕೆಂದು ಹೇಳಿಕಳುಹಿಸಿದಾಗ ಆಕೆಯು ಹೋಗಲಿಲ್ಲವಲ್ಲಾ ಅನ್ನುವರು.
18
ರಾಣಿಯ ಮಾತನ್ನು ಕೇಳಿದ ಪಾರಸಿಯ ಮತ್ತು ಮೇದ್ಯ ಕುಲೀನಸ್ತ್ರೀಯರು ಈ ಹೊತ್ತೇ ಅದನ್ನು ಅರಸನ ಎಲ್ಲಾ ಸರದಾರರಿಗೂ ಹೇಳುವರು. ಹೀಗೆ ಎಷ್ಟೋ ತಿರಸ್ಕಾರವೂ ಕೋಪವೂ ಉಂಟಾಗುವದು.
19
ಅರಸನು ಸಮ್ಮತಿಸುವದಾದರೆ ವಷ್ಟಿಯು ತಿರಿಗಿ ಅಹಷ್ವೇರೋಷ್ರಾಜನ ಸನ್ನಿಧಿಗೆ ಬರಲೇಬಾರದೆಂಬ ರಾಜಾಜ್ಞೆಯು ಪ್ರಕಟವಾಗಿ ಅದು ಎಂದಿಗೂ ರದ್ದಾಗದ ಹಾಗೆ ಪಾರಸಿಯ ಮತ್ತು ಮೇದ್ಯಶಾಸನಗಳಲ್ಲಿ ಲಿಖಿತವಾಗಲಿ; ಅರಸನು ಆಕೆಯ ಪಟ್ಟವನ್ನು ಆಕೆಗಿಂತ ಉತ್ತಮಳಾದ ಇನ್ನೊಬ್ಬಾಕೆಗೆ ಕೊಡಲಿ.
20
ಈ ರಾಜನಿರ್ಣಯವು ಬಹು ವಿಸ್ತಾರವಾದ ಅವನ ರಾಜ್ಯದಲ್ಲೆಲ್ಲಾ ಗೊತ್ತಾದಾಗ ಶ್ರೇಷ್ಠರೂ ಕನಿಷ್ಠರೂ ಆದ ಎಲ್ಲಾ ಸ್ತ್ರೀಯರು ತಮ್ಮ ಗಂಡಂದಿರಿಗೆ ಮಾನ ಸಲ್ಲಿಸುವರು ಅಂದನು.
21
ಈ ಮಾತು ಅರಸನಿಗೂ ಅವನ ಸರದಾರರಿಗೂ - ಒಳ್ಳೇದೆಂದು ಕಂಡದರಿಂದ ಅರಸನು ಮೆಮೂಕಾನನ ಮಾತಿನಂತೆಯೇ ಮಾಡಿದನು.
22
ಅವನು - ಪ್ರತಿಯೊಂದು ಕುಟುಂಬದಲ್ಲಿ ಪುರುಷನೇ ಒಡೆಯನಾಗಿದ್ದು ಅವನ ಸ್ವಜನರ ಭಾಷೆಯೇ ಉಪಯೋಗವಾಗಬೇಕೆಂಬದಾಗಿ ಎಲ್ಲಾ ರಾಜಸಂಸ್ಥಾನಗಳಲ್ಲಿ ಪತ್ರಗಳ ಮೂಲಕ ಪ್ರಕಟಿಸಿದನು. ಈ ಪತ್ರಗಳು ಆಯಾ ಸಂಸ್ಥಾನಗಳ ಬರಹಗಳಲ್ಲಿಯೂ ಆಯಾ ಜನಾಂಗಗಳ ಭಾಷೆಗಳಲ್ಲಿಯೂ ಬರೆಯಲ್ಪಟ್ಟವು.
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 2 →
All chapters:
1
2
3
4
5
6
7
8
9
10