bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Esther 2
Esther 2
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 1
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 3 →
1
ಇದಾದನಂತರ ಅರಸನಾದ ಅಹಷ್ವೇರೋಷನು ಕೋಪವನ್ನು ಬಿಟ್ಟು ವಷ್ಟಿಯನ್ನೂ ಆಕೆ ಮಾಡಿದ್ದನ್ನೂ ಆಕೆಯ ವಿಷಯವಾದ ತೀರ್ಪನ್ನೂ ನೆನಪುಮಾಡಿಕೊಳ್ಳುತ್ತಿರಲು
2
ಅವನ ಸೇವೆಮಾಡುತ್ತಿರುವ ರಾಜಪರಿವಾರದವರು ಅವನಿಗೆ ಅರಸನಿಗೋಸ್ಕರ ಸುಂದರಿಯರಾದ ಕನ್ಯೆಯರನ್ನು ಹುಡುಕುವದಕ್ಕೆ ಅಪ್ಪಣೆಮಾಡಬೇಕು.
3
ಅರಸನು ತನ್ನ ರಾಜ್ಯದ ಎಲ್ಲಾ ಸಂಸ್ಥಾನಗಳಿಗೆ ಕಾರಭಾರಿಗಳನ್ನು ಕಳುಹಿಸಬೇಕು; ಅವರು ಸುಂದರಿಯರಾದ ಎಲ್ಲಾ ಕನ್ಯೆಯರನ್ನು ಶೂಷನ್ ಕೋಟೆಯ ಅಂತಃಪುರದಲ್ಲಿ ಕೂಡಿಸಿ ಅಂತಃಪುರಪಾಲಕನೂ ರಾಜ ಕಂಚುಕಿಯೂ ಆದ ಹೇಗೈಯ ವಶಕ್ಕೆ ಕೊಡಲಿ; ಅವನು ಅವರಿಗೆ ಕಾಂತಿಯನ್ನು ಹೆಚ್ಚಿಸುವ ಲೇಪನ ದ್ರವ್ಯಗಳನ್ನು ಹಂಚಲಿ.
4
ಮತ್ತು ಅರಸನಿಗೆ ಇಷ್ಟಳಾಗಿ ಕಾಣುವ ಕನ್ಯೆಯು ವಷ್ಟಿಗೆ ಬದಲಾಗಿ ರಾಣಿಯಾಗಲಿ ಎಂದು ಹೇಳಿದರು. ಅರಸನು ಈ ಅಭಿಪ್ರಾಯಕ್ಕೆ ಸಮ್ಮತಿಸಿ ಅದರಂತೆಯೇ ಮಾಡಿದನು.
5
ಶೂಷನ್ ಕೋಟೆಯಲ್ಲಿ ಮೊರ್ದೆಕೈ ಎಂಬೊಬ್ಬ ಯೆಹೂದಿ ಮನುಷ್ಯನು ವಾಸಿಸುತ್ತಿದ್ದನು. ಇವನು ಬೆನ್ಯಾಮೀನ್ಕುಲದ ಕೀಷನ ಮರಿಮಗನೂ ಶಿಮ್ಗೀಯ ಮೊಮ್ಮಗನೂ ಯಾಯೀರನ ಮಗನೂ ಆಗಿದ್ದನು.
6
ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನಿಂದ ಯೆಹೂದರಾಜನಾದ ಯೆಹೋಯಾಕೀನನೊಡನೆ ಸೆರೆಯೊಯ್ಯಲ್ಪಟ್ಟವರಲ್ಲಿ ಇವನೊಬ್ಬನು.
7
ಇವನು ಎಸ್ತೇರಳೆಂಬ ಹೆಸರನ್ನು ಪಡೆದ ಹದೆಸ್ಸಾ ಎಂಬ ತನ್ನ ಚಿಕ್ಕಪ್ಪನ ಅನಾಥಳಾದ ಮಗಳನ್ನು ತಂದೆ ತಾಯಿಗಳು ಸತ್ತಂದಿನಿಂದ ಪುತ್ರಿಯನ್ನಾಗಿ ಸ್ವೀಕರಿಸಿ ಸಾಕುತ್ತಿದ್ದನು. ಈಕೆಯು ರೂಪವತಿಯೂ ಲಾವಣ್ಯವತಿಯೂ ಆಗಿದ್ದಳು.
8
ಅರಸನ ನಿರ್ಣಯವೂ ಆಜ್ಞೆಯೂ ಪ್ರಕಟಿಸಲ್ಪಟ್ಟು [ಕಾರಭಾರಿಗಳು] ಅನೇಕಾನೇಕ ಕನ್ಯೆಯರನ್ನು ಕೂಡಿಸಿ ಶೂಷನ್ ಕೋಟೆಯಲ್ಲಿ ಹೇಗೈಯ ವಶಕ್ಕೆ ಒಪ್ಪಿಸಿದಾಗ ಎಸ್ತೇರಳೂ ಅರಮನೆಗೆ ತರಲ್ಪಟ್ಟು ಅಂತಃಪುರಪಾಲಕನಾದ ಹೇಗೈಯ ಪರಾಂಬರಿಕೆಯಲ್ಲಿದ್ದಳು.
9
ಹೇಗೈಯು ಆಕೆಯನ್ನು ಮೆಚ್ಚಿ ತನ್ನ ದಯೆಗೆ ಪಾತ್ರಳಾದ ಆಕೆಗೋಸ್ಕರ ತಕ್ಕ ಲೇಪನ ದ್ರವ್ಯಗಳನ್ನೂ ಭೋಜನಾಂಶವನ್ನೂ ಆರಿಸಿದ ಏಳು ಮಂದಿ ಸೇವಕಿಯರನ್ನೂ ಅರಮನೆಯಿಂದ ಬೇಗನೆ ಏರ್ಪಡಿಸಿ ಆಕೆಯನ್ನೂ ಆಕೆಯ ಸೇವಕಿಯರನ್ನೂ ಅಂತಃಪುರದ ಉತ್ತಮಭಾಗದಲ್ಲಿರಿಸಿದನು.
10
ಎಸ್ತೇರಳು ತಾನು ಇಂಥ ಜನಾಂಗದವಳು, ಇಂಥ ಕುಲದವಳು ಎಂಬದನ್ನು ತೋರ್ಪಡಿಸಿಕೊಳ್ಳಲಿಲ್ಲ; ಮೊರ್ದೆಕೈಯು ಹೀಗೆ ಅಪ್ಪಣೆಕೊಟ್ಟಿದ್ದನು.
11
ಅವನು ಆಕೆಯ ಈಗಿನ ಸ್ಥಿತಿಯನ್ನೂ ಮುಂದಿನ ಗತಿಯನ್ನೂ ವಿಚಾರಿಸುವದಕ್ಕಾಗಿ ಪ್ರತಿದಿನವೂ ಅಂತಃಪುರದ ಪ್ರಾಕಾರದ ಮುಂದೆ ತಿರುಗಾಡುತ್ತಿದ್ದನು.
12
ಕನ್ಯೆಯರ ಲೇಪನಕಾಲವು ಪೂರೈಸುವದಕ್ಕೆ ಗಂಧರಸಪ್ರಯೋಗದಲ್ಲಿ ಆರು ತಿಂಗಳೂ ಪರಿಮಳ ದ್ರವ್ಯ ಕಾಂತಿವರ್ಧಕ ದ್ರವ್ಯಗಳ ಪ್ರಯೋಗದಲ್ಲಿ ಆರು ತಿಂಗಳೂ ಅಂತೂ ಹನ್ನೆರಡು ತಿಂಗಳು ಕಳೆದವು. ಈ ಕಾಲ ಮುಗಿದನಂತರ ರಾಜಸ್ತ್ರೀಯರ ವಿಷಯವಾದ ನಿಯಮದ ಮೇರೆಗೆ ತನ್ನನ್ನು ಸಿದ್ಧಪಡಿಸಿಕೊಂಡ ಪ್ರತಿಯೊಬ್ಬ ಕನ್ಯೆಯು ಅರಸನಾದ ಅಹಷ್ವೇರೋಷನ ಬಳಿಗೆ ಹೋಗುವಳು.
13
ಅರಸನ ಬಳಿಗೆ ಹೋಗುವ ಸರತಿ ಯಾವಾಕೆಗೆ ಬರುವದೋ ಆಕೆಯು ಅಂತಃಪುರದಿಂದ ಅರಮನೆಗೆ ತೆಗೆದುಕೊಂಡು ಹೋಗುವದಕ್ಕೋಸ್ಕರ ಏನು ಕೇಳಿದರೂ ಕೊಡಲ್ಪಡುವದು.
14
ಆಕೆಯು ಅಲ್ಲಿಗೆ ಸಾಯಂಕಾಲ ಹೋದವಳು [ಮರುದಿನ] ಬೆಳಿಗ್ಗೆ ಅರಸನ ಉಪಪತ್ನಿಗಳ ಪಾಲಕನಾದ ಶವಷ್ಗಜನೆಂಬ ರಾಜಕಂಚುಕಿಯ ವಶದಲ್ಲಿದ್ದ ಎರಡನೆಯ ಅಂತಃಪುರಕ್ಕೆ ಬರುವಳು. ಅರಸನು ಅವಳನ್ನು ಮೆಚ್ಚಿ ಹೆಸರು ಹೇಳಿ ಕರಿಸಿದರೆ ಹೊರತಾಗಿ ಒಬ್ಬಳೂ ಅರಸನ ಬಳಿಗೆ ತಿರಿಗಿ ಹೋಗುವ ಹಾಗಿರಲಿಲ್ಲ.
15
ಅರಸನ ಬಳಿಗೆ ಹೋಗುವದಕ್ಕೆ ಮೊರ್ದೆಕೈಯ ದತ್ತಪುತ್ರಿಯೂ ಅವನ ಚಿಕ್ಕಪ್ಪನಾದ ಅಬೀಹೈಲನ ಮಗಳೂ ಆದ ಎಸ್ತೇರಳ ಸರತಿ ಬಂದಾಗ ಅಂತಃಪುರ ಪಾಲಕನಾದ ಹೇಗೈ ಎಂಬ ರಾಜಕಂಚುಕಿಯು ನೇವಿುಸಿದ್ದನ್ನೇ ಹೊರತು ಆಕೆ ಬೇರೇನೂ ಕೇಳಲಿಲ್ಲ. ನೋಡುವವರೆಲ್ಲರೂ ಆಕೆಯನ್ನು ಮೆಚ್ಚುತ್ತಿದ್ದರು.
16
ಅರಸನಾದ ಅಹಷ್ವೇರೋಷನ ಬಳಿಗೆ ಅವನ ಆಳಿಕೆಯ ಏಳನೆಯ ವರುಷದ ಹತ್ತನೆಯ ತಿಂಗಳಾದ ಪುಷ್ಯ ಮಾಸದಲ್ಲಿ ಆಕೆಯನ್ನು ರಾಜಗೃಹಕ್ಕೆ ಕರತಂದರು. ಅರಸನು ಎಲ್ಲಾ ಸ್ತ್ರೀಯರಲ್ಲಿ ಎಸ್ತೇರಳನ್ನು ಮೆಚ್ಚಿದನು.
17
ಎಲ್ಲಾ ಕನ್ಯೆಯರಲ್ಲಿ ಆಕೆಯು ಅವನ ದಯೆಗೂ ಪ್ರೀತಿಗೂ ಪಾತ್ರಳಾದದರಿಂದ ಅವನು ರಾಜಮುಕುಟವನ್ನು ಆಕೆಯ ತಲೆಯ ಮೇಲಿಟ್ಟು ಆಕೆಯನ್ನು ವಷ್ಟಿಗೆ ಬದಲಾಗಿ ರಾಣಿಯನ್ನಾಗಿ ಮಾಡಿಕೊಂಡು
18
ತನ್ನ ಎಲ್ಲಾ ಸರದಾರರಿಗೂ ಪರಿವಾರದವರಿಗೂ ಎಸ್ತೇರಳ ಔತಣವೆಂದು ದೊಡ್ಡ ಔತಣವನ್ನು ಮಾಡಿಸಿ ಎಲ್ಲಾ ಸಂಸ್ಥಾನಗಳಲ್ಲಿಯೂ ಸೆರೆಯವರನ್ನು ಬಿಡಿಸಿ ರಾಜರಿಗೆ ತಕ್ಕಂತೆ ಉದಾರವಾಗಿ ದಾನಧರ್ಮಗಳನ್ನು ಮಾಡಿದನು.
19
ಕನ್ಯೆಯರು ಎರಡನೆಯ ಸಾರಿ ಕೂಡಿಸಲ್ಪಡುತ್ತಿರುವಾಗ ಮೊರ್ದೆಕೈಯು ಅರಮನೆಯ ಹೆಬ್ಬಾಗಲಲ್ಲಿ ಕೂತುಕೊಂಡಿದ್ದನು.
20
ಎಸ್ತೇರಳಾದರೋ ಮೊರ್ದೆಕೈಯ ಪರಾಂಬರಿಕೆಯಲ್ಲಿದ್ದ ದಿನಗಳಲ್ಲಿ ಹೇಗೋ ಹಾಗೆ ಈಗಲೂ ಅವನ ಆಜ್ಞೆಯನ್ನು ಅನುಸರಿಸುವವಳಾಗಿ ತಾನು ಇಂಥ ಕುಲದವಳು, ಇಂಥ ಜನಾಂಗದವಳು ಎಂಬದನ್ನು ತೋರ್ಪಡಿಸಲಿಲ್ಲ.
21
ಆ ದಿನಗಳಲ್ಲಿ ಮೊರ್ದೆಕೈಯು ಅರಮನೆಯ ಹೆಬ್ಬಾಗಲಿನಲ್ಲಿ ಕೂತುಕೊಂಡಿದ್ದಾಗ ಅರಮನೆಯ ದ್ವಾರಪಾಲಕರಾದ ಬಿಗೆತಾನ್ ತೆರೆಷ್ ಎಂಬ ಇಬ್ಬರು ರಾಜಕಂಚುಕಿಯರು ಕೋಪವುಳ್ಳವರಾಗಿ ಅರಸನಾದ ಅಹಷ್ವೇರೋಷನಿಗೆ ವಿರೋಧವಾಗಿ ಕೈಯೆತ್ತಬೇಕೆಂದು ಒಳಸಂಚುಮಾಡಿದರು.
22
ಈ ಸಂಗತಿಯು ಮೊರ್ದೆಕೈಗೆ ಗೊತ್ತಾದಾಗ ಅವನು ಅದನ್ನು ಎಸ್ತೇರ್ರಾಣಿಗೆ ತಿಳಿಸಿದನು. ಆಕೆಯು ಅವನ ಹೆಸರನ್ನು ಅರಸನಿಗೆ ಹೇಳಿ ಆ ಸಂಗತಿಯನ್ನು ತಿಳಿಸಿದಳು.
23
ಈ ವಿಷಯವು ವಿಚಾರಣೆಗೆ ಬಂದಾಗ ಅದು ನಿಜವೆಂದು ಸ್ಥಾಪನೆಯಾದದರಿಂದ ಆ ಇಬ್ಬರನ್ನೂ ಗಲ್ಲಿಗೆ ಹಾಕಿದರು. ಆ ಸಂಗತಿಯು ರಾಜನ ದಿನಚರ್ಯಪುಸ್ತಕದಲ್ಲಿ ಬರೆಯಲ್ಪಟ್ಟಿತು.
← Chapter 1
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 3 →
All chapters:
1
2
3
4
5
6
7
8
9
10