bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Esther 9
Esther 9
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 8
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 10 →
1
ಅರಸನ ಆಜ್ಞಾನಿರ್ಣಯಗಳನ್ನು ನೆರವೇರಿಸತಕ್ಕ ಹನ್ನೆರಡನೆಯ ತಿಂಗಳಾದ ಪಾಲ್ಗುನಮಾಸದ ಹದಿಮೂರನೆಯ ದಿನವು ಬಂತು. ಆ ದಿವಸದಲ್ಲಿ ಯೆಹೂದ್ಯರನ್ನು ಸ್ವಾಧೀನಮಾಡಿಕೊಳ್ಳಬಹುದೆಂದು ಅವರ ವೈರಿಗಳು ನಿರೀಕ್ಷಿಸಿಕೊಂಡಿದ್ದರು. ಆದರೆ ಅದಕ್ಕೆ ಬದಲಾಗಿ ಯೆಹೂದ್ಯರೇ ತಮ್ಮ ಹಗೆಗಳನ್ನು ಸ್ವಾಧೀನ ಮಾಡಿಕೊಂಡರು.
2
ಆದದರಿಂದ ಅರಸನಾದ ಅಹಷ್ವೇರೋಷನ ಸಮಸ್ತಸಂಸ್ಥಾನಗಳ ಆಯಾ ಪಟ್ಟಣಗಳಲ್ಲಿದ್ದ ಯೆಹೂದ್ಯರು ತಮಗೆ ಕೇಡುಬಯಸಿದವರಿಗೆ ವಿರೋಧವಾಗಿ ಕೈಯೆತ್ತುವದಕ್ಕೆ ಕೂಡಿಕೊಂಡಾಗ ಯಾರೂ ಅವರೆದುರಿನಲ್ಲಿ ನಿಲ್ಲಲಿಲ್ಲ.
3
ಅವರಿಂದ ಎಲ್ಲಾ ಜನಾಂಗದವರಿಗೆ ಭಯವುಂಟಾಗಿತ್ತು; ಇದಲ್ಲದೆ ಅರಮನೆಯಲ್ಲಿ ಮೊರ್ದೆಕೈಯ ಪ್ರಾಬಲ್ಯವು ಹೆಚ್ಚಾಗುತ್ತಾ ಬಂದಹಾಗೆಲ್ಲಾ ಅವನ ಸುದ್ದಿಯೂ ಸಕಲ ಸಂಸ್ಥಾನಗಳಲ್ಲಿಯೂ ಹಬ್ಬಿದ್ದರಿಂದ
4
ಸರ್ವಸಂಸ್ಥಾನಾಧಿಕಾರಿಗಳೂ ಉಪರಾಜರೂ ದೇಶಾಧಿಪತಿಗಳೂ ಇತರ ರಾಜೋದ್ಯೋಗಸ್ಥರೂ ಅವನಿಗೆ ಹೆದರಿ ಯೆಹೂದ್ಯರಿಗೆ ಸಹಾಯಕರಾದರು.
5
ಹೀಗೆ ಯೆಹೂದ್ಯರು ತಮ್ಮ ಎಲ್ಲಾ ವೈರಿಗಳನ್ನು ಸೋಲಿಸಿ ಕತ್ತಿಯಿಂದ ಹೊಡೆದು ಕೊಂದು ನಿರ್ನಾಮಗೊಳಿಸಿದರು; ತಮ್ಮ ಹಗೆಗಳನ್ನು ಇಷ್ಟವಿದ್ದಂತೆ ಮಾಡಿದರು.
6
ಅವರು ಶೂಷನ್ ಕೋಟೆಯಲ್ಲೇ ಐನೂರು ಮಂದಿಯನ್ನು ಕೊಂದುಬಿಟ್ಟರು.
7
ಹತರಾದವರಲ್ಲಿ ಪರ್ಷಂದಾತ, ದಲ್ಫೋನ್, ಅಸ್ಪಾತ,
8
ಪೋರಾತ, ಅದಲ್ಯ, ಅರೀದಾತ, ಪರ್ಮಷ್ಟ, ಅರೀಸೈ,
9
ಅರಿದೈ, ವೈಜಾತ ಎಂಬವರಿದ್ದರು.
10
ಇವರು ಯೆಹೂದ್ಯರನ್ನು ದ್ವೇಷಿಸುತ್ತಿದ್ದ ಹಮ್ಮೆದಾತನ ಮಗನಾದ ಹಾಮಾನನ ಹತ್ತು ಮಂದಿ ಮಕ್ಕಳು. ಇಷ್ಟು ಮಂದಿಯನ್ನು ಕೊಂದರೂ ಯೆಹೂದ್ಯರು ಸುಲಿಗೆಗೆ ಕೈಹಾಕಲಿಲ್ಲ.
11
ಆ ದಿವಸ ಶೂಷನ್ ಕೋಟೆಯಲ್ಲಿ ಹತರಾದವರ ಸಂಖ್ಯೆಯು ಅರಸನಿಗೆ ತಿಳಿದುಬಂದಾಗ
12
ಅರಸನು ಎಸ್ತೇರ್ರಾಣಿಗೆ - ಯೆಹೂದ್ಯರು ಶೂಷನ್ಕೋಟೆಯಲ್ಲೇ ಐನೂರು ಮಂದಿಯನ್ನೂ ಹಾಮಾನನ ಹತ್ತು ಮಂದಿ ಮಕ್ಕಳನ್ನೂ ಸಂಹರಿಸಿಬಿಟ್ಟಿದ್ದಾರೆ; ಉಳಿದ ರಾಜಸಂಸ್ಥಾನಗಳಲ್ಲಿ ಎಷ್ಟೋ ಮಂದಿ ಹತರಾಗಿರಬಹುದು. ನಿನ್ನ ವಿಜ್ಞಾಪನೆ ಇನ್ನು ಯಾವದಿದ್ದರೂ ನೆರವೇರುವದು, ನೀನು ಏನು ಕೇಳಿಕೊಂಡರೂ ಕೊಡುವೆನು ಎಂದು ಹೇಳಿದನು.
13
ಅದಕ್ಕೆ ಎಸ್ತೇರಳು - ಅರಸನ ಇಷ್ಟವಿದ್ದರೆ ನಾಳೆಯೂ ಇಂದಿನ ರಾಜಾಜ್ಞೆಯ ಪ್ರಕಾರ ಮಾಡುವದಕ್ಕೂ ಹಾಮಾನನ ಹತ್ತು ಮಂದಿ ಮಕ್ಕಳ ಶವಗಳನ್ನು ಗಲ್ಲಿಗೆ ಹಾಕುವದಕ್ಕೂ ಯೆಹೂದ್ಯರಿಗೆ ಅಪ್ಪಣೆಯಾಗಬೇಕು ಎಂದು ಬೇಡಿಕೊಳ್ಳಲು ಅರಸನು ಹಾಗೆ ಮಾಡುವದಕ್ಕೆ ಅಪ್ಪಣೆಕೊಟ್ಟನು.
14
ಕೂಡಲೆ ಈ ಸಂಬಂಧವಾದ ರಾಜಾಜ್ಞೆಯು ಶೂಷನ್ಕೋಟೆಯಲ್ಲಿ ಪ್ರಕಟವಾಯಿತು. ಮತ್ತು ಹಾಮಾನನ ಹತ್ತು ಮಂದಿ ಮಕ್ಕಳನ್ನು ಗಲ್ಲಿಗೆ ಹಾಕಿದರು.
15
ಶೂಷನಿನ ಯೆಹೂದ್ಯರು ಫಾಲ್ಗುನಮಾಸದ ಹದಿನಾಲ್ಕನೆಯ ದಿನದಲ್ಲೂ ಕೂಡಿಕೊಂಡು ಅಲ್ಲಿ ಮುನ್ನೂರು ಮಂದಿಯನ್ನು ಕೊಂದರು. ಆದರೆ ಕೊಳ್ಳೆಗೆ ಕೈಹಾಕಲಿಲ್ಲ.
16
ಅದೇ ಮೇರೆಗೆ ರಾಜಸಂಸ್ಥಾನಗಳಲ್ಲಿದ್ದ ಯೆಹೂದ್ಯರು ತಮ್ಮ ವಿರೋಧಿಗಳ ಕಾಟವನ್ನು ನಿಲ್ಲಿಸಿ ಪ್ರಾಣರಕ್ಷಿಸಿಕೊಳ್ಳುವದಕ್ಕಾಗಿ ಕೂಡಿಕೊಂಡು ಎದ್ದು ತಮ್ಮ ಹಗೆಗಳಲ್ಲಿ ಎಪ್ಪತ್ತೈದುಸಾವಿರ ಮಂದಿಯನ್ನು ಸಂಹರಿಸಿದರು; ಆದರೆ ಸುಲಿಗೆಮಾಡುವದಕ್ಕೆ ಕೈ ಹಾಕಲಿಲ್ಲ.
17
ಇದು ಫಾಲ್ಗುನಮಾಸದ ಹದಿಮೂರನೆಯ ದಿನದಲ್ಲಿ ನಡೆಯಿತು. ಅವರು ಹದಿನಾಲ್ಕನೆಯ ದಿನದಲ್ಲಿ ವಿಶ್ರವಿುಸಿಕೊಂಡು ಆ ದಿವಸವನ್ನು ಉತ್ಸವಭೋಜನ ದಿನವನ್ನಾಗಿ ಆಚರಿಸಿದರು.
18
ಆದರೆ ಶೂಷನಿನ ಯೆಹೂದ್ಯರು ಹದಿಮೂರನೆಯ ಮತ್ತು ಹದಿನಾಲ್ಕನೆಯ ದಿನಗಳಲ್ಲಿ [ವೈರಿಗಳನ್ನು ವಧಿಸುವದಕ್ಕೆ] ಕೂಡಿಕೊಂಡಿದ್ದದರಿಂದ ಹದಿನೈದನೆಯ ದಿನದಲ್ಲಿ ವಿಶ್ರವಿುಸಿಕೊಂಡು ಆ ದಿನವನ್ನು ಉತ್ಸವಭೋಜನದಿನವನ್ನಾಗಿ ಆಚರಿಸಿದರು.
19
ಆದದರಿಂದ ಪೌಳಿಗೋಡೆಯಿಲ್ಲದ ಹಳ್ಳಿಪಳ್ಳಿಯ ಯೆಹೂದ್ಯರು ಫಾಲ್ಗುನಮಾಸದ ಹದಿನಾಲ್ಕನೆಯ ದಿನವನ್ನೂ ನಗರಗಳ ಯೆಹೂದ್ಯರು ಹದಿನೈದನೆಯ ದಿನವನ್ನೂ ಶುಭದಿವಸವೆಂದು ಆಚರಿಸಿ ಉತ್ಸವಭೋಜನಮಾಡಿ ಒಬ್ಬರಿಗೊಬ್ಬರು ಭೋಜನಭಾಗಗಳನ್ನು ಕಳುಹಿಸುತ್ತಾರೆ.
20
ಮೊರ್ದೆಕೈಯು ಸಮೀಪದಲ್ಲಿಯೂ ದೂರದಲ್ಲಿಯೂ ಇದ್ದ ಅಹಷ್ವೇರೋಷನ ಎಲ್ಲಾ ಸಂಸ್ಥಾನಗಳ ಯೆಹೂದ್ಯರಿಗೆ ಪತ್ರಗಳ ಮುಖಾಂತರ ತಿಳಿಯಪಡಿಸಿದ ಸಂಗತಿಗಳು -
21
ಪ್ರತಿವರುಷವೂ ಫಾಲ್ಗುನಮಾಸದ ಹದಿನಾಲ್ಕನೆಯ ಮತ್ತು ಹದಿನೈದನೆಯ ದಿನಗಳನ್ನು ಉತ್ಸವದಿನಗಳನ್ನಾಗಿ ಆಚರಿಸುವದು ಶಾಶ್ವತನಿಯಮ ಎಂದೆಣಿಸಬೇಕು.
22
ಆ ದಿನಗಳಲ್ಲಿ ಯೆಹೂದ್ಯರಿಗೆ ಶತ್ರುಪೀಡೆ ತಪ್ಪಿ ವಿಶ್ರಾಂತಿಯುಂಟಾಯಿತು; ಆ ತಿಂಗಳಿನಲ್ಲಿ ಸಂತಾಪವು ಪರಿಹಾರವಾಗಿ ಅವರಿಗೆ ಸಂತೋಷವುಂಟಾಯಿತು; ದುಃಖವು ಹೋಗಿ ಸುಖಕಾಲವು ಬಂತು. ಆದದರಿಂದ ಅವರು ಆ ದಿನಗಳಲ್ಲಿ ಉತ್ಸವಭೋಜನ ಮಾಡಿ ಒಬ್ಬರಿಗೊಬ್ಬರು ಭೋಜನಭಾಗಗಳನ್ನು ಕಳುಹಿಸಿ ಬಡವರಿಗೆ ದಾನಧರ್ಮಮಾಡಬೇಕು.
23
ಯೆಹೂದ್ಯರು ಮೊರ್ದೆಕೈಯ ಪತ್ರದಲ್ಲಿ ನಿರೂಪಿತವಾದದ್ದನ್ನು ಸ್ವೀಕರಿಸಿ ಆ ವರುಷದಲ್ಲಿ ನಡೆದ ಉತ್ಸವವು ತಮ್ಮಲ್ಲಿ ವಾರ್ಷಿಕೋತ್ಸವವಾಗಬೇಕೆಂದು ಗೊತ್ತುಮಾಡಿಕೊಂಡರು.
24
ಎಲ್ಲಾ ಯೆಹೂದ್ಯರನ್ನು ದ್ವೇಷಿಸುತ್ತಿದ್ದ ಅಗಾಗನ ವಂಶದವನೂ ಹಮ್ಮೆದಾತನ ಮಗನೂ ಆದ ಹಾಮಾನನು ಯೆಹೂದ್ಯರನ್ನು ಸಂಹರಿಸಬೇಕೆಂದು ನಿರ್ಣಯಿಸಿಕೊಂಡು ಅವರನ್ನು ತಳಮಳಗೊಳಿಸಿ ಹಾಳು ಮಾಡುವದರ ವಿಷಯವಾಗಿ ಪೂರನ್ನು ಅಂದರೆ ಚೀಟನ್ನು ಹಾಕಿಸಿದನಲ್ಲಾ.
25
(ಇದು ಅರಸನ ಮುಂದೆ ಬಂದಾಗ ಅವನು - ಹಾಮಾನನು ಯೆಹೂದ್ಯರಿಗೆ ವಿರೋಧವಾಗಿ ಕಲ್ಪಿಸಿದ ಕುತಂತ್ರವು ಅವನ ತಲೆಯ ಮೇಲೆಯೇ ಬರಲಿ; ಅವನನ್ನೂ ಅವನ ಮಕ್ಕಳನ್ನೂ ಗಲ್ಲಿಗೆ ಹಾಕಬೇಕೆಂದು ಅಪ್ಪಣೆ ಮಾಡಿದನಷ್ಟೆ.)
26
ಆ ಪೂರ್ ಎಂಬ ಶಬ್ದದ ಆಧಾರದಿಂದ ಆ ದಿನಗಳಿಗೆ ಪೂರೀಮ್ ಎಂಬ ಹೆಸರಾಯಿತು. ಯೆಹೂದ್ಯರು ಆ ಪತ್ರದ ಮಾತುಗಳನ್ನೂ ಅವುಗಳ ಸಂಬಂಧವಾಗಿ ತಾವೇ ಅನುಭವಿಸಿದ್ದನ್ನೂ ತಮಗೆ ಸಂಭವಿಸಿದ್ದನ್ನೂ ಮನಸ್ಸಿಗೆ ತೆಗೆದುಕೊಂಡು -
27
ಪ್ರತಿವರುಷವೂ ಆ ಎರಡು ದಿವಸಗಳನ್ನು ಅವುಗಳ ವಿಷಯವಾದ ಶಾಸನದ ಪ್ರಕಾರ ನೇವಿುತವಾದ ಕಾಲದಲ್ಲಿ ಆಚರಿಸುವದು ತಮ್ಮಲ್ಲಿಯೂ ತಮ್ಮ ಸಂತಾನದವರಲ್ಲಿಯೂ ತಮ್ಮೊಂದಿಗೆ ಕೂಡಿಕೊಳ್ಳುವವರಲ್ಲಿಯೂ ಮೀರಕೂಡದ ಪದ್ಧತಿನಿಯಮಗಳಾಗಬೇಕೆಂದೂ
28
ಯುಗಯುಗಾಂತರಗಳಲ್ಲಿ ಎಲ್ಲಾ ಗೋತ್ರಸಂಸ್ಥಾನ ನಗರಗಳವರು ಈ ದಿನಗಳನ್ನು ನೆನಪುಮಾಡಿಕೊಂಡು ಆಚರಿಸಬೇಕೆಂದೂ ಈ ಪೂರೀಮ್ ಹಬ್ಬವು ಯೆಹೂದ್ಯರಲ್ಲಿ ಎಂದೂ ನಿಂತುಹೋಗಬಾರದು, ಅದರ ಜ್ಞಾಪಕವು ಅವರ ಸಂತಾನದವರಲ್ಲಿ ಅಳಿದುಹೋಗಲೇಬಾರದು ಎಂದೂ ಗೊತ್ತುಮಾಡಿಕೊಂಡರು.
29
ಇದಲ್ಲದೆ ಅಬೀಹೈಲನ ಮಗಳಾದ ಎಸ್ತೇರ್ರಾಣಿಯು ಅಧಿಕಾರಯುಕ್ತಳಾಗಿ ಪೂರೀಮ್ ಸಂಬಂಧವಾದ ಆ ಎರಡನೆಯ ಶಾಸನವನ್ನು ದೃಢಪಡಿಸುವದಕ್ಕೋಸ್ಕರ ಯೆಹೂದ್ಯನಾದ ಮೊರ್ದೆಕೈಯ ಸಹಾಯದಿಂದ ಪತ್ರಗಳನ್ನು ಬರೆದಳು.
30
ಅವನು ಅಹಷ್ವೇರೋಷನ ರಾಜ್ಯದ ನೂರಿಪ್ಪತ್ತೇಳು ಸಂಸ್ಥಾನಗಳಲ್ಲಿದ್ದ ಯೆಹೂದ್ಯರೆಲ್ಲರಿಗೂ ಕಳುಹಿಸಿದನು.
31
ಆಕೆಯು ದಯಾಸತ್ಯತೆಗಳುಳ್ಳ ಮಾತುಗಳಿಂದ ಆ ಪತ್ರಗಳಲ್ಲಿ - ಯೆಹೂದ್ಯರು ತಮ್ಮಲ್ಲಿಯೂ ತಮ್ಮ ಸಂತಾನದವರಲ್ಲಿಯೂ ಉಪವಾಸಪ್ರಲಾಪ ದಿನಗಳನ್ನು ಪ್ರತಿವರುಷ ತಪ್ಪದೆ ಆಚರಿಸಬೇಕೆಂದು ತಾವೇ ಗೊತ್ತುಮಾಡಿಕೊಂಡ ಪ್ರಕಾರ ಈ ಪೂರೀಮ್ ದಿನಗಳನ್ನೂ ನನ್ನ ಮತ್ತು ಯೆಹೂದ್ಯನಾದ ಮೊರ್ದೆಕೈಯ ನಿರೂಪದಂತೆ ಪ್ರತಿವರುಷ ತಪ್ಪದೆ ನೇವಿುತವಾದ ಕಾಲದಲ್ಲಿ ಆಚರಿಸಬೇಕು ಎಂದು ಬರೆದಿದ್ದಳು.
32
ಎಸ್ತೇರಳ ಆ ನಿರೂಪವು ಪೂರೀಮ್ ಹಬ್ಬವನ್ನು ಸ್ಥಾಪಿಸಿತು. ಆ ನಿರೂಪವು ಗ್ರಂಥದಲ್ಲಿ ಬರೆಯಲ್ಪಟ್ಟಿತು.
← Chapter 8
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 10 →
All chapters:
1
2
3
4
5
6
7
8
9
10