bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
2 Kings 14
2 Kings 14
Kannada Bible (KNCL) BSI 2016
← Chapter 13
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 15 →
1
ಇಸ್ರಯೇಲರ ಅರಸನಾದ ಯೆಹೋವಾಹಾಜನ ಮಗ ಯೋವಾಷನ ಆಳ್ವಿಕೆಯ ಎರಡನೆಯ ವರ್ಷದಲ್ಲಿ ಜುದೇಯದ ಅರಸನಾದ ಯೆಹೋವಾಷನ ಮಗ ಅಮಚ್ಯ ಎಂಬವನು ಅರಸನಾದನು.
2
ಪಟ್ಟಕ್ಕೆ ಬಂದಾಗ ಇವನಿಗೆ ಇಪ್ಪತ್ತೈದು ವರ್ಷ ವಯಸ್ಸು. ಇವನು ಜೆರುಸಲೇಮಿನಲ್ಲಿ ಇಪ್ಪತ್ತೊಂಬತ್ತು ವರ್ಷ ಆಳಿದನು. ಜೆರುಸಲೇಮಿನವಳಾದ ಯೆಹೋವದ್ದೀನ್ ಎಂಬಾಕೆ ಇವನ ತಾಯಿ.
3
ಇವನು ತನ್ನ ತಂದೆ ಯೆಹೋವಾಷನ ಸನ್ಮಾರ್ಗದಲ್ಲಿ ತಪ್ಪದೆ ನಡೆದು ಸರ್ವೇಶ್ವರನ ದೃಷ್ಟಿಯಲ್ಲಿ ಒಳ್ಳೆಯವನಾದನು. ಆದರೂ ತನ್ನ ಪೂರ್ವಜ ದಾವೀದನಷ್ಟು ಉತ್ತಮನಾಗಿರಲಿಲ್ಲ.
4
ಇವನ ಕಾಲದಲ್ಲೂ ಪೂಜಾಸ್ಥಳಗಳು ಹಾಗೆಯೇ ಇದ್ದವು. ಜನರು ಅವುಗಳಲ್ಲಿ ಬಲಿಗಳನ್ನೂ ಧೂಪಗಳನ್ನೂ ಅರ್ಪಿಸುತ್ತಿದ್ದರು.
5
ಇವನು ರಾಜ್ಯವನ್ನು ಭದ್ರಪಡಿಸಿಕೊಂಡ ಕೂಡಲೆ ತನ್ನ ತಂದೆಯನ್ನು ಕೊಂದ ಉದ್ಯೋಗಸ್ಥರಿಗೆ ಮರಣ ವಿಧಿಸಿದನು.
6
ಆದರೆ, “ಮಕ್ಕಳು ಮಾಡಿದ ಪಾಪಕ್ಕೆ ತಂದೆಗಾಗಲಿ, ತಂದೆ ಮಾಡಿದ ಪಾಪದ ನಿಮಿತ್ತ ಮಕ್ಕಳಿಗಾಗಲಿ ಮರಣಶಿಕ್ಷೆಯಾಗಬಾರದು; ಪ್ರತಿಯೊಬ್ಬನೂ ತನ್ನ ಪಾಪಫಲವನ್ನು ತಾನೇ ಅನುಭವಿಸಬೇಕು,” ಎಂಬುದಾಗಿ ಮೋಶೆಯ ಧರ್ಮಶಾಸ್ತ್ರದಲ್ಲಿರುವ ಸರ್ವೇಶ್ವರನ ಆಜ್ಞೆಯನ್ನು ನೆನಪುಮಾಡಿಕೊಂಡು ಅವರ ಮಕ್ಕಳನ್ನು ಕೊಲ್ಲಿಸಲಿಲ್ಲ.
7
ಇದಲ್ಲದೆ, ಉಪ್ಪಿನ ಕಣಿವೆಯಲ್ಲಿ ಎದೋಮ್ಯರ ಹತ್ತು ಸಾವಿರ ಮಂದಿ ಸೈನಿಕರನ್ನು ಸದೆಬಡಿದು ಅವರಿಂದ ‘ಸೆಲ’ ದುರ್ಗವನ್ನು ಕಿತ್ತುಕೊಂಡು ಅದಕ್ಕೆ ಯೊಕ್ತೆಯೇಲ್ ಎಂಬ ಹೆಸರಿಟ್ಟನು. ಅದಕ್ಕೆ ಇಂದಿನವರೆಗೂ ಇದೇ ಹೆಸರಿರುತ್ತದೆ.
8
ಅನಂತರ ಅಮಚ್ಯನು ಯೇಹುವಿನ ಮೊಮ್ಮಗನೂ ಯೆಹೋವಾಹಾಜನ ಮಗನೂ ಇಸ್ರಯೇಲರ ಅರಸನೂ ಆದ ಯೋವಾಷನ ಬಳಿಗೆ ದೂತರನ್ನು ಕಳುಹಿಸಿದನು. ಅವನಿಗೆ, “ನಾವು ಒಬ್ಬರನ್ನೊಬ್ಬರು ಎದುರುಗೊಳ್ಳೋಣ ಬಾ,” ಎಂದು ಹೇಳಿಸಿದನು.
9
ಆಗ ಇಸ್ರಯೇಲರ ಅರಸನಾದ ಯೋವಾಷ ಜುದೇಯದ ಅರಸನಾದ ಅಮಚ್ಯನಿಗೆ, “ಲೆಬನೋನಿನ ಮುಳ್ಳುಗಿಡವು ಅಲ್ಲಿನ ದೇವದಾರು ಮರಕ್ಕೆ, ‘ನನ್ನ ಮಗನಿಗೆ ನಿನ್ನ ಮಗಳನ್ನು ಕೊಡು,’ ಎಂದು ಹೇಳಿಕಳುಹಿಸಿತು. ತುಸು ಹೊತ್ತಾದ ಮೇಲೆ ಲೆಬನೋನಿನ ಒಂದು ಕಾಡುಮೃಗ ಅಲ್ಲಿಂದ ಹಾದುಹೋಗುತ್ತಿರುವಾಗ ಆ ಮುಳ್ಳುಗಿಡವನ್ನು ತುಳಿದುಬಿಟ್ಟಿತು.
10
ನೀನು ಎದೋಮ್ಯರನ್ನು ಸೋಲಿಸಿದ್ದರಿಂದ ಬಹಳವಾಗಿ ಉಬ್ಬಿಕೊಂಡಿರುವೆ; ಆ ಕೀರ್ತಿ ಸಾಕೆಂದು ನೆನಸಿ ಸುಮ್ಮನೆ ಮನೆಯಲ್ಲೇ ಕುಳಿತುಕೋ. ನನ್ನನ್ನು ಕೆಣಕಿ ನಿನ್ನ ಮೇಲೆಯೂ ನಿನ್ನ ರಾಜ್ಯದ ಮೇಲೆಯೂ ಏಕೆ ಕೇಡನ್ನು ಬರಮಾಡಿಕೊಳ್ಳುವೆ?” ಎಂದು ಉತ್ತರಕೊಟ್ಟು ಕಳುಹಿಸಿದನು.
11
ಅಮಚ್ಯನು ಇದನ್ನು ಲಕ್ಷಿಸಲಿಲ್ಲವಾದುದರಿಂದ ಇಸ್ರಯೇಲರ ಅರಸನಾದ ಯೋವಾಷನು ಯುದ್ಧಕ್ಕೆ ಹೊರಟನು; ಅವರು ಜುದೇಯ ಪ್ರಾಂತ್ಯದ ಬೇತ್ಷೆಮೆಷಿನಲ್ಲಿ ಒಬ್ಬರನ್ನೊಬ್ಬರು ಎದುರುಗೊಂಡರು.
12
ಯೆಹೂದ್ಯರು ಇಸ್ರಯೇಲರಿಂದ ಸೋಲು ಸವಿದು ತಮ್ಮ ತಮ್ಮ ನಿವಾಸಗಳಿಗೆ ಓಡಿಹೋದರು.
13
ಇಸ್ರಯೇಲರ ಅರಸ ಯೋವಾಷನು, ಅಹಜ್ಯನ ಮೊಮ್ಮಗನೂ ಯೆಹೋವಾಷನ ಮಗನೂ ಜುದೇಯದ ಅರಸನೂ ಆದ ಅಮತ್ಯನನ್ನು, ಬೇತ್ಷೆಮೆಷಿನಲ್ಲಿ ಹಿಡಿದು, ಅವನನ್ನು ಜೆರುಸಲೇಮಿಗೆ ಕರೆದುಕೊಂಡುಬಂದು, ಎಫ್ರಯಿಮ್ ಬಾಗಿಲಿಗೂ ಮೂಲೆಯ ಬಾಗಿಲಿಗೂ ಮಧ್ಯದಲ್ಲಿದ್ದ ಜೆರುಸಲೇಮಿನ ನಾನೂರು ಮೊಳ ಗೋಡೆಯನ್ನು ಕೆಡವಿಬಿಟ್ಟನು.
14
ಇದಲ್ಲದೆ, ಅವನು ಸರ್ವೇಶ್ವರನ ಆಲಯದ ಮತ್ತು ಅರಮನೆಯ ಭಂಡಾರಗಳಲ್ಲಿ ಸಿಕ್ಕಿದ ಎಲ್ಲಾ ಬೆಳ್ಳಿ ಬಂಗಾರವನ್ನೂ ಪಾತ್ರೆಗಳನ್ನೂ ತೆಗೆದುಕೊಂಡು, ಕೆಲವರನ್ನು ಒತ್ತೆಯಾಳುಗಳಾಗಿ ಸೆರೆಹಿಡಿದು, ಸಮಾರಿಯಕ್ಕೆ ಹಿಂದಿರುಗಿದನು.
15
ಯೋವಾಷನ ಉಳಿದ ಚರಿತ್ರೆ, ಅವನ ಶೂರಕೃತ್ಯಗಳ ಮತ್ತು ಜುದೇಯದ ರಾಜನಾದ ಅಮಚ್ಯನೊಡನೆ ನಡೆಸಿದ ಯುದ್ಧದ ವಿವರ, ಇವು ಇಸ್ರಯೇಲ್ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಬರೆದಿರುತ್ತವೆ.
16
ಅವನು ನಿಧನನಾಗಿ ಪಿತೃಗಳ ಬಳಿ ಸೇರಲು ಅವನ ಶವವನ್ನು ಸಮಾರಿಯದೊಳಗೆ ಇಸ್ರಯೇಲರ ರಾಜಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. ಅವನಿಗೆ ಬದಲಾಗಿ ಅವನ ಮಗ ಯಾರೊಬ್ಬಾಮನು ಅರಸನಾದನು.
17
ಇಸ್ರಯೇಲರ ಅರಸನೂ ಯೆಹೋವಾಹಾಜನ ಮಗನೂ ಆದ ಯೋವಾಷನು ಸತ್ತನಂತರ, ಜುದೇಯದ ಅರಸನೂ ಯೆಹೋವಾಷನ ಮಗನೂ ಆದ ಅಮಚ್ಯನು ಇನ್ನೂ ಹದಿನೈದು ವರ್ಷ ಬದುಕಿದ್ದನು.
18
ಅವನ ಉಳಿದ ಚರಿತ್ರೆ ಜುದೇಯ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಬರೆದಿರುತ್ತದೆ.
19
ಜೆರುಸಲೇಮಿನವರು ಅವನಿಗೆ ವಿರುದ್ಧ ಒಳಸಂಚು ಮಾಡಿದ್ದರಿಂದ ಅವನು ಲಾಕೀಷಿಗೆ ಓಡಿಹೋದನು; ಆದರೆ ಅವರು ಅಲ್ಲಿಗೆ ಆಳುಗಳನ್ನು ಕಳುಹಿಸಿ ಅವನನ್ನು ಕೊಲ್ಲಿಸಿದರು.
20
ಅವನ ಜನರು ಅವನ ಶವವನ್ನು ಕುದುರೆಗಳ ಮೇಲೆ ಜೆರುಸಲೇಮಿಗೆ ತಂದು ದಾವೀದ ನಗರದೊಳಗೆ ಅವನ ಕುಟುಂಬ ಸ್ಮಶಾನಭೂಮಿಯಲ್ಲಿ ಸಮಾಧಿ ಮಾಡಿದರು.
21
ಅನಂತರ ಎಲ್ಲಾ ಯೆಹೂದ್ಯರು ಕೂಡಿ ಹದಿನಾರು ವರ್ಷದವನಾದ ಅಜರ್ಯನನ್ನು ಅವನ ತಂದೆ ಅಮಚ್ಯನಿಗೆ ಬದಲಾಗಿ ಅರಸನನ್ನಾಗಿ ಮಾಡಿದರು.
22
ಅರಸನು ಮೃತನಾಗಿ ಪಿತೃಗಳ ಬಳಿ ಸೇರಿದ ಮೇಲೆ, ಇವನು ಏಲತ್ ಎಂಬ ಪಟ್ಟಣವನ್ನು ಮತ್ತೆ ಜುದೇಯ ರಾಜ್ಯಕ್ಕೆ ಸೇರಿಸಿ, ಭದ್ರಪಡಿಸಿದನು.
23
ಜುದೇಯದ ಅರಸನೂ ಯೆಹೋವಾಷನ ಮಗನೂ ಆದ ಅಮಚ್ಯನ ಆಳ್ವಿಕೆಯ ಹದಿನೈದನೆಯ ವರ್ಷದಲ್ಲಿ, ಇಸ್ರಯೇಲರ ಅರಸನಾದ ಯೋವಾಷನ ಮಗ ಯಾರೊಬ್ಬಾಮನು, ಅರಸನಾಗಿ ಸಮಾರಿಯದಲ್ಲಿ ನಾಲ್ವತ್ತೊಂದು ವರ್ಷ ಆಳಿದನು.
24
ಇವನು ಇಸ್ರಯೇಲರನ್ನು ಪಾಪಕ್ಕೆ ಪ್ರಚೋದಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ದುರ್ಮಾರ್ಗವನ್ನು ಬಿಡದೆ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾದನು.
25
ಇಸ್ರಯೇಲ್ ದೇವರಾದ ಸರ್ವೇಶ್ವರ, ತನ್ನ ಸೇವಕನೂ ಗತ್ ಹೇಫೆರಿವನಾದ ಅಮಿತ್ತೈಯ ಮಗನೂ ಆದ ಯೋನಾ ಎಂಬ ಪ್ರವಾದಿಯ ಮುಖಾಂತರ ಮುಂತಿಳಿಸಿದಂತೆ, ಹಮಾತಿನ ದಾರಿಯಿಂದ ಅರಾಬಾ ತಗ್ಗಿನ ಸಮುದ್ರದವರೆಗಿದ್ದ ಇಸ್ರಯೇಲರ ಮೇರೆಯನ್ನು ತಿರುಗಿ ತೆಗೆದುಕೊಂಡವನು ಇವನೇ.
26
“ಇಸ್ರಯೇಲರು ಘೋರಕಷ್ಟವನ್ನು ಅನುಭವಿಸುತ್ತಿರುತ್ತಾರೆ. ಅವರಲ್ಲಿದ್ದ ಸ್ವತಂತ್ರರೂ ಪರತಂತ್ರರೂ ನಾಶವಾಗಿದ್ದಾರೆ, ಅವರನ್ನು ರಕ್ಷಿಸುವವನು ಒಬ್ಬನೂ ಇಲ್ಲ,” ಎಂಬುದನ್ನು ಸರ್ವೇಶ್ವರ ನೋಡಿದರು.
27
ಆ ಜನರನ್ನು ಭೂಲೋಕದಿಂದ ನಿರ್ನಾಮಮಾಡುವುದಕ್ಕೆ ಮನಸ್ಸಿಲ್ಲದೆ, ಯೋವಾಷನ ಮಗ ಯಾರೊಬ್ಬಾಮನ ಮುಖಾಂತರ ಅವರನ್ನು ರಕ್ಷಿಸಿದರು.
28
ಯಾರೊಬ್ಬಾಮನ ಉಳಿದ ಚರಿತ್ರೆ, ಅವನು ಯುದ್ಧದಲ್ಲಿ ನಡೆಸಿದ ಶೂರಕಾರ್ಯ ಮತ್ತು ಮೊದಲು ಯೆಹೂದ್ಯರ ಸ್ವಾಧೀನದಲ್ಲಿದ್ದ ದಮಸ್ಕ, ಹಮಾತ್ ಎಂಬ ಪಟ್ಟಣಗಳು ಇವನಿಂದ ಇಸ್ರಯೇಲ್ ರಾಜ್ಯಕ್ಕೆ ವಶವಾದ ವಿವರ, ಇವೆಲ್ಲವು ಇಸ್ರಯೇಲ್ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಬರೆದಿರುತ್ತವೆ.
29
ಅವನು ನಿಧನನಾಗಿ ಇಸ್ರಯೇಲ್ ರಾಜರಾಗಿದ್ದ ತನ್ನ ಪಿತೃಗಳ ಬಳಿ ಸೇರಿದನು. ಅವನ ಸ್ಥಾನದಲ್ಲಿ ಅವನ ಮಗ ಜೆಕರ್ಯನು ಅರಸನಾದನು.
← Chapter 13
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 15 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25