bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
2 Kings 7
2 Kings 7
Kannada Bible (KNCL) BSI 2016
← Chapter 6
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 8 →
1
ಆಗ ಎಲೀಷನು, “ಸರ್ವೇಶ್ವರಸ್ವಾಮಿಯ ಈ ವಾಕ್ಯವನ್ನು ಕೇಳು: ‘ನಾಳೆ ಇಷ್ಟೇಹೊತ್ತಿಗೆ ಸಮಾರಿಯಪಟ್ಟಣದ ಬಾಗಿಲಿನಲ್ಲಿ ಗೋದಿಹಿಟ್ಟು ನಾಣ್ಯಕ್ಕೆ ಮೂರು ಕಿಲೋಗ್ರಾಂನಂತೆಯೂ ಜವೆಗೋದಿಯು ನಾಣ್ಯಕ್ಕೆ ಆರು ಕಿಲೋಗ್ರಾಂನಂತೆಯೂ ಮಾರಲಾಗುವುದು’ ಎನ್ನುತ್ತಾರೆ,” ಎಂದು ಹೇಳಿದನು.
2
ಇದನ್ನು ಕೇಳಿ ಅರಸನ ಹಸ್ತಕನಾದ ಸರದಾರನು ದೈವಪುರುಷನಿಗೆ, “ಸರ್ವೇಶ್ವರ ಆಕಾಶದಲ್ಲಿ ದ್ವಾರಗಳನ್ನು ಮಾಡಿದರೂ ಇದು ಸಂಭವಿಸಲಾರದು,” ಎಂದನು. ಅದಕ್ಕೆ ಎಲೀಷನು, “ಅದು ಸಂಭವಿಸುವುದನ್ನು ನೀನು ಕಣ್ಣಾರೆ ಕಾಣುವೆ; ಆದರೆ ಅದನ್ನು ಅನುಭವಿಸಲಾರೆ,” ಎಂದು ಹೇಳಿದನು.
3
ಊರುಬಾಗಿಲಿನ ಹತ್ತಿರ ನಾಲ್ಕುಮಂದಿ ಕುಷ್ಠರೋಗಿಗಳಿದ್ದರು. ಅವರು ತಮ್ಮೊಳಗೇ, “ನಾವು ಸಾಯುವ ತನಕ ಇಲ್ಲೇ ಕುಳಿತಿರಬೇಕೇ?
4
ಪಟ್ಟಣದೊಳಗೆ ಕ್ಷಾಮ ಇರುವುದರಿಂದ ಅಲ್ಲಿಗೆ ಹೋದರೂ ಸಾಯಬೇಕು. ಇಲ್ಲಿಯೇ ಕುಳಿತಿದ್ದರೂ ಸಾಯಬೇಕು. ಆದುದರಿಂದ ಹೊರಟುಹೋಗಿ ಸಿರಿಯಾದವರ ಪಾಳೆಯವನ್ನು ಸೇರೋಣ. ಅವರು ನಮ್ಮನ್ನು ಉಳಿಸುವುದಾದರೆ ಉಳಿಸಲಿ, ಕೊಲ್ಲುವುದಾದರೆ ಕೊಲ್ಲಲಿ,” ಎಂದು ಮಾತಾಡಿಕೊಂಡರು.
5
ಸಾಯಂಕಾಲವಾದಾಗ ಅವರು ಸಿರಿಯಾದವರ ಪಾಳೆಯಕ್ಕೆ ಹೊರಟರು; ಪಾಳೆಯದ ಅಂಚಿಗೆ ಬಂದಾಗ ಅಲ್ಲಿ ಒಬ್ಬನೂ ಕಾಣಿಸಲಿಲ್ಲ.
6
ಸರ್ವೇಶ್ವರ ಸಿರಿಯಾದ ಪಾಳೆಯದವರಿಗೆ ರಥರಥಾಶ್ವಸಹಿತವಾದ ಮಹಾಸೈನ್ಯಘೋಷವು ಕೇಳಿಸುವಂತೆ ಮಾಡಿದ್ದರು. ಆದ್ದರಿಂದ ಅವರು, “ಇಸ್ರಯೇಲರ ಅರಸನು ಹಿತ್ತಿಯ ಹಾಗು ಈಜಿಪ್ಟ್ ಅರಸರಿಗೆ ಹಣಕೊಟ್ಟು ಅವರನ್ನು ನಮಗೆ ವಿರುದ್ಧ ಕರೆದುತಂದಿದ್ದಾನೆ,” ಎಂದುಕೊಂಡು,
7
ತಮ್ಮ ಗುಡಾರಗಳನ್ನೂ ಕತ್ತೆಕುದುರೆಗಳನ್ನೂ ಪಾಳೆಯದಲ್ಲಿದ್ದುದೆಲ್ಲವನ್ನೂ ಬಿಟ್ಟು, ತಮ್ಮ ಪ್ರಾಣರಕ್ಷಣೆಗಾಗಿ, ಅದೇ ಸಾಯಂಕಾಲದಲ್ಲಿ ಓಡಿಹೋಗಿದ್ದರು.
8
ಆ ಕುಷ್ಠರೋಗಿಗಳು ಪಾಳೆಯದ ಅಂಚಿಗೆ ಬಂದಾಗ ಮೊದಲನೆಯ ಡೇರೆಯನ್ನು ಹೊಕ್ಕು ಉಂಡು, ಕುಡಿದು ಅದರಲ್ಲಿದ್ದ ಬೆಳ್ಳಿ ಬಂಗಾರವನ್ನೂ ಬಟ್ಟೆಗಳನ್ನೂ ತೆಗೆದುಕೊಂಡು ಬಚ್ಚಿಟ್ಟರು. ಇನ್ನೊಂದು ಡೇರೆಯನ್ನು ಹೊಕ್ಕು ಅಲ್ಲಿಂದಲೂ ತೆಗೆದುಕೊಂಡು ಅಡಗಿಸಿ ಇಟ್ಟರು.
9
ಅನಂತರ ಅವರು, “ಇದು ಶುಭವಾರ್ತೆಯ ದಿವಸ; ನಾವು ಇದನ್ನು ಪ್ರಕಟಿಸದಿರುವುದು ಒಳ್ಳೆಯದಲ್ಲ. ಬೆಳಗಾಗುವವರೆಗೆ ತಡಮಾಡಿದರೆ ಶಿಕ್ಷೆಗೆ ಪಾತ್ರರಾಗಬಹುದು. ಆದುದರಿಂದ ಹೋಗಿ ಅರಮನೆಯವರಿಗೆ ಈ ಸಂಗತಿಯನ್ನು ತಿಳಿಸೋಣ,” ಎಂದು ಮಾತಾಡಿಕೊಂಡರು.
10
ಅಲ್ಲಿಂದ ಹೊರಟು ಊರಬಾಗಿಲಿಗೆ ಬಂದು, ಕಾವಲುಗಾರರಿಗೆ, “ನಾವು ಸಿರಿಯಾದವರ ಪಾಳೆಯಕ್ಕೆ ಹೋಗಿದ್ದೆವು; ಅಲ್ಲಿ ನಮಗೆ ಯಾರೂ ಕಾಣಿಸಲಿಲ್ಲ, ಮನುಷ್ಯಶಬ್ದವೇ ಕೇಳಿಸಲಿಲ್ಲ. ಕತ್ತೆಕುದುರೆಗಳನ್ನು ಅಲ್ಲಲ್ಲಿ ಕಟ್ಟಲಾಗಿದೆ. ಡೇರೆಗಳು ಇದ್ದ ಹಾಗೆಯೇ ಇರುತ್ತವೆ,” ಎಂದು ಕೂಗಿ ತಿಳಿಸಿದರು.
11
ದ್ವಾರಪಾಲಕರು ಕೂಡಲೆ ಅರಮನೆಯವರನ್ನು ಕೂಗಿ ಅವರಿಗೆ ಈ ಸಮಾಚಾರವನ್ನು ಮುಟ್ಟಿಸಿದರು.
12
ಅರಸನು ರಾತ್ರಿಯಲ್ಲೇ ಎದ್ದು ತನ್ನ ಪರಿವಾರದವರಿಗೆ, “ಸಿರಿಯಾದವರ ಹಂಚಿಕೆಯನ್ನು ಹೇಳುತ್ತೇನೆ ಕೇಳಿ; ನಾವು ಹಸಿವೆಯಿಂದ ಸಾಯುವವರಾಗಿದ್ದೇವೆ ಎಂಬುದನ್ನು ಅವರು ಬಲ್ಲರು. ಆದುದರಿಂದ ಪಾಳೆಯವನ್ನು ಬಿಟ್ಟುಹೋಗಿ ಅಡವಿಯಲ್ಲಿ ಅಡಗಿಕೊಂಡಿದ್ದಾರೆ; ನಾವು ಪಟ್ಟಣದಿಂದ ಹೊರಗೆ ಹೋದ ಕೂಡಲೆ ನಮ್ಮನ್ನು ಸಜೀವಿಗಳನ್ನಾಗಿಯೇ ಹಿಡಿದು ಪಟ್ಟಣವನ್ನು ಪ್ರವೇಶಿಸಬೇಕೆಂದಿದ್ದಾರೆ,” ಎಂದನು.
13
ಆಗ ಅವರಲ್ಲೊಬ್ಬನು ಅರಸನಿಗೆ, “ರಾಹುತರು ಪಟ್ಟಣದಲ್ಲುಳಿದಿರುವ ಕುದುರೆಗಳಲ್ಲಿ ನಾಲ್ಕೈದು ಕುದುರೆಗಳನ್ನು ತೆಗೆದುಕೊಂಡು ನೋಡುವುದಕ್ಕೆ ಹೋಗಲಿ; ಅವರಿಗೆ ಪಟ್ಟಣದಲ್ಲಿ ಉಳಿದಿರುವ ಇಸ್ರಯೇಲರ ಗತಿಯಾಗಲಿ ಅಥವಾ ಸತ್ತುಹೋದವರ ಗತಿಯಾಗಲಿ ಸಂಬವಿಸುವದಷ್ಟೆ,” ಎಂದು ಹೇಳಿದನು.
14
ಕೂಡಲೆ ಅರಸನು ಎರಡು ಜೋಡಿ ಕುದುರೆಗಳನ್ನು ತರಿಸಿ, ಸಿರಿಯಾದವರ ಸೈನ್ಯವೆಲ್ಲಿರುತ್ತದೆಂಬುದನ್ನು ನೋಡಿಬರುವುದಕ್ಕಾಗಿ, ರಾಹುತರನ್ನು ಕಳುಹಿಸಿದನು.
15
ಅವರು ಜೋರ್ಡನ್ ನದಿಯವರೆಗೂ ಹೋಗಿ, ದಾರಿಯಲ್ಲೆಲ್ಲಾ ತಮ್ಮ ಬಟ್ಟೆಬರೆಗಳನ್ನೂ ಸಾಮಾನು ಸರಂಜಾಮುಗಳನ್ನೂ ಬಿಸಾಡಿರುವುದನ್ನು ಕಂಡು, ಹಿಂದಿರುಗಿ ಬಂದು ಅರಸನಿಗೆ ತಿಳಿಸಿದರು.
16
ಆಗ ಜನರು ಹೊರಗೆ ಹೋಗಿ, ಸಿರಿಯಾದವರ ಪಾಳೆಯವನ್ನು ಸೂರೆಮಾಡಿಬಿಟ್ಟರು. ಸರ್ವೇಶ್ವರನ ಮಾತಿನಂತೆ ಗೋದಿಹಿಟ್ಟು ನಾಣ್ಯಕ್ಕೆ ಮೂರು ಕಿಲೋಗ್ರಾಂನಂತೆಯೂ ಜವೆಗೋದಿಯು ನಾಣ್ಯಕ್ಕೆ ಆರು ಕಿಲೋಗ್ರಾಂನಂತೆಯೂ ಮಾರಲಾಗುತ್ತಿತ್ತು.
17
ಅರಸನು ತನ್ನ ಹಸ್ತಕನಾದ ಸರದಾರನನ್ನು ಊರ ದ್ವಾರಪಾಲಕರ ನಾಯಕನನ್ನಾಗಿ ಕಳುಹಿಸಿದ್ದನು. ಅವನು ಜನರ ತುಳಿತಕ್ಕೆ ಸಿಕ್ಕಿ ಸತ್ತನು. ಹೀಗೆ ಆ ದೈವಪುರುಷನು ಅರಸನ ಜೊತೆಯಲ್ಲಿ ತನ್ನ ಬಳಿಗೆ ಬಂದಿದ್ದ ಆ ಸರದಾರನಿಗೆ ಹೇಳಿದ ಮಾತು ನೆರವೇರಿತು.
18
ಅವನು ಅರಸನಿಗೆ, “ನಾಳೆ ಇಷ್ಟು ಹೊತ್ತಿಗೆ ಸಮಾರಿಯ ಪಟ್ಟಣದ ಬಾಗಿಲಿನಲ್ಲಿ ಜವೆಗೋದಿ ನಾಣ್ಯಕ್ಕೆ ಆರು ಕಿಲೋಗ್ರಾಂನಂತೆಯೂ ಗೋದಿಹಿಟ್ಟು ನಾಣ್ಯಕ್ಕೆ ಮೂರು ಕಿಲೋಗ್ರಾಂನಂತೆಯೂ ಮಾರಲಾಗುವುದು,” ಎಂದು ಹೇಳಿದಾಗ
19
ಆ ಸರದಾರನು, “ಸರ್ವೇಶ್ವರ ಆಕಾಶದಲ್ಲಿ ದ್ವಾರಗಳನ್ನು ಮಾಡಿದರೂ ಇದು ಸಂಭವಿಸಲಾರದು,” ಎಂದದ್ದರಿಂದ ದೈವಪುರುಷನು ಅವನಿಗೆ, “ನೀನು ಅದನ್ನು ಕಣ್ಣಾರೆ ಕಾಣುವೆ; ಆದರೆ ಅದನ್ನು ಅನುಭವಿಸಲಾರೆ,” ಎಂದು ನುಡಿದಿದ್ದನು.
20
ಊರು ಬಾಗಿಲಿನಲ್ಲಿ ಜನರಿಂದ ತುಳಿತಕ್ಕೆ ಸಿಕ್ಕಿ ಅವನು ಸತ್ತದ್ದರಿಂದ ಈ ಮಾತು ನೆರವೇರಿತು.
← Chapter 6
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 8 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25