bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
2 Kings 6
2 Kings 6
Kannada Bible (KNCL) BSI 2016
← Chapter 5
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 7 →
1
ಒಂದು ಸಾರಿ ಪ್ರವಾದಿಮಂಡಲಿಯವರು ಎಲೀಷನಿಗೆ, “ನಾವು ನಿನ್ನ ಜೊತೆಯಲ್ಲಿ ವಾಸಿಸುತ್ತಿರುವ ಈ ಸ್ಥಳ ಬಹಳ ಇಕ್ಕಟ್ಟಾಗಿದೆ.
2
ಆದುದರಿಂದ ನಾವು ಜೋರ್ಡನಿಗೆ ಹೋಗಿ ಅಲ್ಲಿ ಪ್ರತಿಯೊಬ್ಬನೂ ಒಂದೊಂದು ದಿಮ್ಮಿಯನ್ನು ಕಡಿದುಕೊಂಡು ಬಂದು ನಮಗೆ ಇರಲು ಒಂದು ಮನೆಯನ್ನು ಕಟ್ಟಿಕೊಳ್ಳೋಣ,” ಎಂದರು. ಅವನು ಅವರಿಗೆ, “ಹೋಗಬಹುದು,” ಎಂದು ಹೇಳಿದನು.
3
ಅವರಲ್ಲೊಬ್ಬನು, “ದಯವಿಟ್ಟು ತಾವೂ ತಮ್ಮ ಸೇವಕರಾದ ನಮ್ಮ ಜೊತೆಯಲ್ಲಿ ಬರಬೇಕು,” ಎಂದು ಬೇಡಿಕೊಂಡನು. ಎಲೀಷನು, “ಬರುತ್ತೇನೆ,” ಎಂದು ಹೇಳಿ ಅವರೊಡನೆ ಹೊರಟನು.
4
ಅವರು ಜೋರ್ಡನನ್ನು ಮುಟ್ಟಿ ಮರಗಳನ್ನು ಕಡಿಯುತ್ತಿರುವಾಗ ಒಬ್ಬನ ಕೊಡಲಿ, ಕಾವು ತಪ್ಪಿ, ನೀರೊಳಗೆ ಬಿದ್ದಿತು.
5
ಆದುದರಿಂದ ಅವನು, “ಅಯ್ಯೋ! ಗುರುವೇ, ನಾನು ಅದನ್ನು ಸಾಲವಾಗಿ ತಂದಿದ್ದೆ,” ಎಂದು ಸಂತಾಪಿಸಿದನು.
6
ದೈವಪುರುಷನು, “ಅದು ಎಲ್ಲಿ ಬಿದ್ದಿತು?” ಎಂದು ಕೇಳಿದನು; ಅದು ಬಿದ್ದ ಸ್ಥಳವನ್ನು ಅವನು ತೋರಿಸಿದನು. ಆಗ ದೈವಪುರುಷನು ಆ ಮರದಿಂದ ಒಂದು ತುಂಡು ಕಟ್ಟಿಗೆಯನ್ನು ಕಡಿದು ಅಲ್ಲಿ ಹಾಕಿದನು; ಕೂಡಲೆ ಆ ಕೊಡಲಿ ತೇಲಾಡಿತು.
7
ಎಲೀಷನು, “ಅದನ್ನು ತೆಗೆದುಕೋ,” ಎಂದು ಆಜ್ಞಾಪಿಸಲು ಆ ವ್ಯಕ್ತಿ ಕೈಚಾಚಿ ಅದನ್ನು ತೆಗೆದುಕೊಂಡನು.
8
ಸಿರಿಯಾದ ರಾಜನು ಇಸ್ರಯೇಲರಿಗೆ ವಿರುದ್ಧ ಯುದ್ಧಕ್ಕೆ ಬಂದನು. ಅವನು ಯುದ್ಧದಲ್ಲಿ ಹೊಂಚುಹಾಕತಕ್ಕ ಸ್ಥಳವನ್ನು ತನ್ನ ಸೇನಾಪತಿಗಳೊಡನೆ ಗೊತ್ತುಮಾಡುತ್ತಿದ್ದನು.
9
ಆದರೆ ದೈವಪುರುಷನು, ಪ್ರತೀಸಾರಿ ಇಸ್ರಯೇಲರ ಅರಸನಿಗೆ, “ಜಾಗರೂಕತೆಯಿಂದಿರಿ! ನೀವು ಇಂಥಿಂಥ ಸ್ಥಳದಲ್ಲಿ ಹಾಯಬಾರದು, ಅಲ್ಲಿ ಸಿರಿಯಾದವರು ಅಡಗಿಕೊಂಡಿದ್ದಾರೆ,” ಎಂದು ತಿಳಿಸುತ್ತಿದ್ದನು.
10
ಹೀಗೆ ಅವನು ಹಲವು ಸಾರಿ ಸಿರಿಯಾದ ಅರಸನ ಕೈಗೆ ಸಿಕ್ಕದಂತೆ ತಪ್ಪಿಸಿಕೊಂಡನು.
11
ಈ ಕಾರಣ ಸಿರಿಯಾದ ಅರಸನು ಕಳವಳಗೊಂಡು, ತನ್ನ ಸೇನಾಪತಿಗಳನ್ನು ಕರೆದು, “ನಮ್ಮವರಲ್ಲಿ ಇಸ್ರಯೇಲರ ಅರಸನ ಪಕ್ಷದವರು ಯಾರೋ ಇದ್ದಾರೆ; ನನಗೆ ನೀವು ಯಾರೂ ತಿಳಿಸುವುದಿಲ್ಲವೇ?’ ಎಂದು ಕೇಳಿದನು.
12
ಆಗ ಅವರಲ್ಲೊಬ್ಬನು, “ನನ್ನ ಒಡೆಯರಾದ ಅರಸೇ, ಹಾಗಲ್ಲ; ಇಸ್ರಯೇಲರಲ್ಲಿ ಎಲೀಷನೆಂಬೊಬ್ಬ ಪ್ರವಾದಿಯಿದ್ದಾನೆ; ನೀವು ನಿಮ್ಮ ಮಲಗುವ ಕೋಣೆಯಲ್ಲಿ ಆಡುವ ಮಾತುಗಳನ್ನು ಸಹ ಅವನು ಅರಿತುಕೊಂಡು ಎಲ್ಲವನ್ನೂ ಇಸ್ರಯೇಲರ ಅರಸನಿಗೆ ತಿಳಿಸುತ್ತಾನೆ,” ಎಂದನು.
13
ಅರಸನು ಇದನ್ನು ಕೇಳಿ, “ಅವನು ಎಲ್ಲಿರುತ್ತಾನೆಂದು ವಿಚಾರಿಸಿರಿ, ನಾನು ಅವನನ್ನು ಹಿಡಿಯುತ್ತೇನೆ,” ಎಂದು ಹೇಳಿದನು.
14
ಆ ಪ್ರವಾದಿ ದೋತಾನಿನಲ್ಲಿರುತ್ತಾನೆಂದು ತಿಳಿದುಕೊಂಡು ರಥರಥಾಶ್ವಸಹಿತವಾದ ಮಹಾಸೈನ್ಯವನ್ನು ಅಲ್ಲಿಗೆ ಕಳುಹಿಸಿದನು. ಸೈನ್ಯದವರು ರಾತ್ರಿಯಲ್ಲೇ ಆ ಪಟ್ಟಣವನ್ನು ಸಮೀಪಿಸಿ, ಅದಕ್ಕೆ ಮುತ್ತಿಗೆ ಹಾಕಿದರು.
15
ದೈವಪುರುಷನ ಸೇವಕನು ಬೆಳಿಗ್ಗೆ ಎದ್ದು ಹೊರಗೆ ಹೋದಾಗ ರಥರಥಾಶ್ವಸಹಿತವಾದ ಮಹಾಸೈನ್ಯವು ಬಂದು, ಪಟ್ಟಣದ ಸುತ್ತಲೂ ನಿಂತಿರುವುದನ್ನು ಕಂಡು, ತನ್ನ ಯಜಮಾನನಿಗೆ, “ಅಯ್ಯೋ! ಗುರುವೇ, ಏನು ಮಾಡೋಣ?” ಎಂದನು.
16
ಆಗ ಎಲೀಷನು, “ಹೆದರಬೇಡ; ಅವರ ಕಡೆ ಇರುವವರಿಗಿಂತಲೂ ನಮ್ಮ ಕಡೆ ಇರುವವರು ಹೆಚ್ಚಾಗಿದ್ದಾರೆ,” ಎಂದು ಹೇಳಿ,
17
“ಹೇ ಸರ್ವೇಶ್ವರಾ, ಇವನು ನೋಡುವಂತೆ ಇವನ ಕಣ್ಣುಗಳನ್ನು ತೆರೆಯಿರಿ,” ಎಂದು ಪ್ರಾರ್ಥಿಸಿದನು. ಸರ್ವೇಶ್ವರ ಅವನ ಕಣ್ಣುಗಳನ್ನು ತೆರೆದರು. ಆಗ ಎಲೀಷನ ರಕ್ಷಣೆಗಾಗಿ ಸುತ್ತಣ ಗುಡ್ಡಗಳಲ್ಲಿ ಬಂದು ನಿಂತಿದ್ದ ಅಗ್ನಿಮಯವಾದ ರಥರಥಾಶ್ವಗಳು ಆ ಸೇವಕನಿಗೆ ಕಂಡವು.
18
ಶತ್ರುಗಳು ಸಮೀಪಕ್ಕೆ ಬಂದಾಗ ಎಲೀಷನು, “ಸ್ವಾಮೀ, ಈ ಜನರನ್ನು ಕುರುಡರನ್ನಾಗಿ ಮಾಡಿ,” ಎಂದು ಸರ್ವೇಶ್ವರನನ್ನು ಪ್ರಾರ್ಥಿಸಿದನು. ಅವರು ಅವನ ಮೊರೆಯನ್ನು ಆಲಿಸಿ ಆ ಜನರನ್ನು ಕುರುಡರನ್ನಾಗಿ ಮಾಡಿದರು.
19
ಆಗ ಎಲೀಷನು, “ನೀವು ಹೋಗಬೇಕೆಂದಿದ್ದ ಪಟ್ಟಣವೂ ದಾರಿಯೂ ಇದಲ್ಲ; ನನ್ನ ಜೊತೆಯಲ್ಲೇ ಬನ್ನಿ, ನೀವು ಹುಡುಕುತ್ತಿರುವ ವ್ಯಕ್ತಿಯ ಬಳಿಗೆ ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ,” ಎಂದು ಹೇಳಿ ಅವರನ್ನು ಸಮಾರಿಯಕ್ಕೆ ಕರೆದುಕೊಂಡು ಹೋದನು.
20
ಅವರು ಸಮಾರಿಯದೊಳಗೆ ಬಂದಾಗ ಎಲೀಷನು, “ಇವರು ನೋಡುವಂತೆ ಇವರ ಕಣ್ಣುಗಳನ್ನು ತೆರೆಯಿರಿ,” ಎಂದು ಸರ್ವೇಶ್ವರನನ್ನು ಬೇಡಿಕೊಂಡನು. ಅಂತೆಯೇ ಸರ್ವೇಶ್ವರ ಅವರ ಕಣ್ಣುಗಳನ್ನು ತೆರೆದರು. ಆಗ ಅವರಿಗೆ ತಾವು ಸಮಾರಿಯದಲ್ಲಿದ್ದೇವೆಂದು ತಿಳಿದುಬಂದಿತು.
21
ಇಸ್ರಯೇಲರ ಅರಸನು ಅವರನ್ನು ಕಂಡು ಎಲೀಷನಿಗೆ, ‘ಅಪ್ಪಾ ಗುರುವೇ, ಇವರನ್ನು ಸಂಹರಿಸಲೇ?, ಸಂಹರಿಸಲೇ?’ ಎಂದು ಕೇಳಿದನು.
22
ಅವನು, “ಬೇಡ; ನೀನು ಸ್ವಾಧೀನಪಡಿಸಿಕೊಂಡು ಸೆರೆಯಾಗಿ ತಂದವರನ್ನು ಕತ್ತಿಬಿಲ್ಲುಗಳಿಂದ ಸಂಹರಿಸುವೆಯೋ? ಅವರಿಗೆ ಅನ್ನಪಾನಗಳನ್ನು ಕೊಡು; ಉಂಡುಕುಡಿದು ತಮ್ಮ ಯಜಮಾನನ ಬಳಿಗೆ ಹಿಂದಿರುಗಿ ಹೋಗಲಿ,” ಎಂದು ಉತ್ತರಕೊಟ್ಟನು.
23
ಆಗ ಅರಸನು ಅವರಿಗಾಗಿ ಒಂದು ದೊಡ್ಡ ಔತಣವನ್ನು ಮಾಡಿಸಿ, ಅವರು ಅನ್ನಪಾನಗಳನ್ನು ತೆಗೆದುಕೊಂಡ ಮೇಲೆ, ಅವರನ್ನು ಅವರ ಯಜಮಾನನ ಬಳಿಗೆ ಕಳುಹಿಸಿದನು. ಅಂದಿನಿಂದ ಸುಲಿಗೆಮಾಡುವ ಸಿರಿಯಾದ ಗುಂಪುಗಳು ಇಸ್ರಯೇಲರ ಪ್ರಾಂತದೊಳಗೆ ಮತ್ತೆ ಬರಲಿಲ್ಲ.
24
ಆಮೇಲೆ ಸಿರಿಯಾದ ರಾಜ ಬೆನ್ಹದದನು ತನ್ನ ಸೈನ್ಯವನ್ನೆಲ್ಲಾ ಕೂಡಿಸಿಕೊಂಡು ಬಂದು ಸಮಾರಿಯಕ್ಕೆ ಮುತ್ತಿಗೆ ಹಾಕಿದನು.
25
ಆಗ ಸಮಾರಿಯ ಪಟ್ಟಣದಲ್ಲಿ ಘೋರ ಕ್ಷಾಮವಿತ್ತು. ಮುತ್ತಿಗೆಯ ನಿಮಿತ್ತ ಅದು ಮತ್ತಷ್ಟು ಘೋರವಾಗಿ ಒಂದು ಕತ್ತೆಯ ತಲೆಯನ್ನು ಒಂಬತ್ತು ಬೆಳ್ಳಿ ನಾಣ್ಯಗಳಿಗೂ, ಇನ್ನೂರು ಗ್ರಾಂ ಕಾಡು ಈರುಳ್ಳಿಯನ್ನು ಐದು ಬೆಳ್ಳಿ ನಾಣ್ಯಗಳಿಗೂ ಮಾರಲಾಗುತ್ತಿತ್ತು.
26
ಒಂದು ದಿನ ಇಸ್ರಯೇಲರ ಅರಸನು ಕೋಟೆಯ ಮೇಲೆ ತಿರುಗಾಡುತ್ತಿರುವಾಗ ಒಬ್ಬ ಮಹಿಳೆ, “ಅರಸರೇ, ನಮ್ಮ ಒಡೆಯರೇ, ನನ್ನನ್ನು ಕಾಪಾಡಿ,” ಎಂದು ಮೊರೆಯಿಟ್ಟಳು.
27
ಅರಸನು ಆಕೆಗೆ, “ಸರ್ವೇಶ್ವರಸ್ವಾಮಿ ನಿನ್ನನ್ನು ಕಾಪಾಡದಿದ್ದರೆ ನಾನು ಹೇಗೆ ಕಾಪಾಡಲು ಸಾಧ್ಯ? ಕಣದಲ್ಲಾಗಲಿ, ದ್ರಾಕ್ಷೀ ಆಲೆಯಲ್ಲಾಗಲಿ ಏನಾದರೂ ಇದೆಯೇ?’ ಎಂದು ಕೇಳಿ,
28
“ನಿನಗಿರುವ ದುಃಖ ಯಾವುದು?” ಎಂದನು. ಆಗ ಆಕೆ, “ಈ ಸ್ತ್ರೀ ನನಗೆ, ‘ನಿನ್ನ ಮಗನನ್ನು ತೆಗೆದುಕೊಂಡು ಬಾ; ನಾವು ಈ ದಿನ ಅವನನ್ನು ತಿಂದುಬಿಡೋಣ; ನಾಳೆ ನನ್ನ ಮಗನನ್ನು ತಿನ್ನೋಣ,’ ಎಂದು ಹೇಳಿದ್ದರಿಂದ ನಾವಿಬ್ಬರೂ ನನ್ನ ಮಗನನ್ನು ಕೊಂದು ಬೇಯಿಸಿ ತಿಂದುಬಿಟ್ಟೆವು.
29
ಮರುದಿನ ನಾನು ಈಕೆಗೆ, ‘ಈ ದಿನ ನಿನ್ನ ಮಗನನ್ನು ತೆಗೆದುಕೊಂಡು ಬಾ; ಅವನನ್ನು ಕೊಂದು ತಿನ್ನೋಣ,’ ಎಂದಾಗ ಈಕೆ ಅವನನ್ನು ಎಲ್ಲಿಯೋ ಅಡಗಿಸಿಬಿಟ್ಟಳು,” ಎಂದು ಹೇಳಿದಳು.
30
ಕೋಣೆಯ ಮೇಲೆ ತಿರುಗಾಡುತ್ತಿದ್ದ ಅರಸನು ಆ ಮಹಿಳೆಯ ಮಾತನ್ನು ಕೇಳಿದೊಡನೆ ಸಿಟ್ಟಿನಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡನು. ಆಗ ಅವನ ಮೈಮೇಲೆ ಗೋಣಿತಟ್ಟು ಇರುವುದು ಜನರಿಗೆ ಕಂಡಿತು.
31
ಇದಲ್ಲದೆ ಅವನು, “ನಾನು ಈ ದಿನ ಶಾಫಾಟನ ಮಗ ಎಲೀಷನ ತಲೆಯನ್ನು ಹಾರಿಸದಿದ್ದರೆ ದೇವರು ನನಗೆ ಬೇಕಾದದ್ದನ್ನು ಮಾಡಲಿ!” ಎಂದು ಆಣೆಯಿಟ್ಟುಕೊಂಡನು.
32
ಎಲೀಷನು ಊರಿನ ಹಿರಿಯರೊಡನೆ ತನ್ನ ಮನೆಯಲ್ಲಿ ಕುಳಿತುಕೊಂಡಿದ್ದನು. ಅರಸನು ತನ್ನ ಹತ್ತಿರ ಇದ್ದ ಒಬ್ಬ ಆಳನ್ನು ಕಳುಹಿಸಿದನು. ಅವನು ಇನ್ನೂ ದೂರದಲ್ಲಿರುವಾಗಲೇ ಎಲೀಷನು ಹಿರಿಯರಿಗೆ, “ನೋಡಿ, ಆ ಕೊಲೆಗಾರನ ಮಗನು ನನ್ನ ತಲೆಯನ್ನು ಹಾರಿಸುವುದಕ್ಕೆ ಆಳನ್ನು ಕಳುಹಿಸಿದ್ದಾನೆ. ಆಳು ಇಲ್ಲಿಗೆ ಬಂದ ಕೂಡಲೆ ನೀವು ಬಾಗಿಲನ್ನು ಮುಚ್ಚಿ ಅವನು ಒಳಗೆ ಬಾರದಂತೆ ಅದನ್ನು ಒತ್ತಿಹಿಡಿಯಿರಿ; ಅವನ ಹಿಂದೆಯೇ ಬರುತ್ತಿರುವ ಅವನೊಡೆಯನ ಕಾಲು ಸಪ್ಪಳ ಕೇಳಿಸುತ್ತಿದೆಯಲ್ಲವೆ?” ಎಂದು ಹೇಳಿದನು.
33
ಅವನು ಅವರೊಡನೆ ಮಾತಾಡುತ್ತಿರುವಾಗಲೇ ಆ ಆಳೂ ಅವನ ಹಿಂದಿನಿಂದ ಅರಸನೂ ಅಲ್ಲಿಗೆ ಬಂದರು. ಅರಸನು ಎಲೀಷನಿಗೆ, “ನೋಡು, ಈ ಆಪತ್ತು ಸರ್ವೇಶ್ವರನಿಂದಲೇ ಬಂದದ್ದು. ಇನ್ನು ಮುಂದೆ ನಾನೇಕೆ ಆತನನ್ನು ನಂಬಿ ನಿರೀಕ್ಷಿಸಿಕೊಂಡಿರಬೇಕು?” ಎಂದನು.
← Chapter 5
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 7 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25