bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Nehemiah 10
Nehemiah 10
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 9
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 11 →
1
ಸಹಿಮಾಡಿದವರು - ಹಕಲ್ಯನ ಮಗನಾದ ನೆಹೆಮೀಯನೆಂಬ ದೇಶಾಧಿಪತಿಯೂ
2
ಚಿದ್ಕೀಯ, ಸೆರಾಯ, ಅಜರ್ಯ,
3
ಯೆರೆಮೀಯ, ಪಷ್ಹೂರ್, ಅಮರ್ಯ, ಮಲ್ಕೀಯ,
4
ಹಟ್ಟೂಷ್, ಶೆಬನ್ಯ, ಮಲ್ಲೂಕ್, ಹಾರಿಮ್,
6
ಮೆರೇಮೋತ್, ಓಬದ್ಯ, ದಾನೀಯೇಲ್, ಗಿನ್ನೆತೋನ್,
7
ಬಾರೂಕ್, ಮೆಷುಲ್ಲಾಮ್, ಅಬೀಯ,
8
ವಿುಯ್ಯಾಮೀನ್, ಮಾಜ್ಯ, ಬಿಲ್ಗೈ, ಶೆಮಾಯ ಎಂಬ ಯಾಜಕರೂ.
9
ಲೇವಿಯರಲ್ಲಿ ಅಜನ್ಯನ ಮಗನಾದ ಯೇಷೂವ, ಹೇನಾದಾದ್ ವಂಶದವನಾದ ಬಿನ್ನೂಯ್, ಕದ್ಮೀಯೇಲ್ ಎಂಬವರೂ
10
ಇವರ ಬಂಧುಗಳಾದ ಶೆಬನ್ಯ,
11
ಹೋದೀಯ, ಕೆಲೀಟ, ಪೆಲಾಯ, ಹಾನಾನ್, ಮೀಕ,
12
ರೆಹೋಬ್, ಹಷಬ್ಯ, ಜಕ್ಕೂರ್, ಶೇರೇಬ್ಯ, ಶೆಬನ್ಯ,
13
ಹೋದೀಯ, ಬಾನೀ, ಬೆನೀನೂ ಎಂಬವರೂ.
14
ಜನಪ್ರಧಾನರಲ್ಲಿ ಪರೋಷ್, ಪಹತ್
15
ಮೋವಾಬ್, ಏಲಾಮ್, ಜತ್ತೂ, ಬಾನೀ, ಬುನ್ನೀ,
16
ಅಜ್ಗಾದ್, ಬೇಬೈ, ಅದೋನೀಯ, ಬಿಗ್ವೈ,
18
ಆದೀನ್, ಆಟೇರ್, ಹಿಜ್ಕೀಯ, ಅಜ್ಜೂರ್,
19
ಹೋದೀಯ, ಹಾಷುಮ್, ಬೇಚೈ, ಹಾರೀಫ್,
21
ಅನಾತೋತ್, ನೇಬೈ, ಮಗ್ಪೀಯಾಷ್, ಮೆಷುಲ್ಲಾಮ್,
22
ಹೇಜೀರ್, ಮೆಷೇಜಬೇಲ್, ಚಾದೋಕ್,
23
ಯದ್ದೂವ, ಪೆಲಟ್ಯ, ಹಾನಾನ್, ಆನಾಯ,
24
ಹೋಷೇಯ, ಹನನ್ಯ, ಹಷ್ಷೂಬ್, ಹಲೋಹೇಷ್,
25
ಪಿಲ್ಹ, ಶೋಬೇಕ್, ರೆಹೂಮ್, ಹಷಬ್ನ, ಮಾಸೇಯ,
26
ಅಹೀಯ, ಹಾನಾನ್, ಆನಾನ್, ಮಲ್ಲೂಕ್,
27
ಹಾರಿಮ್, ಬಾನ ಎಂಬವರೂ.
28
ಯಾಜಕರು, ಲೇವಿಯರು, ದ್ವಾರಪಾಲಕರು, ಗಾಯಕರು, ದೇವಸ್ಥಾನದಾಸರು, ಉಳಿದ ಜನರು ಇವರಲ್ಲಿ ದೇವರ ಧರ್ಮೋಪದೇಶದ ನಿವಿುತ್ತವಾಗಿ ಅನ್ಯದೇಶದವರ ಗೊಡವೆಯನ್ನು ತೊರೆದುಬಿಟ್ಟವರು ತಮ್ಮ ತಮ್ಮ ಹೆಂಡತಿಯರು, ಗ್ರಹಿಸಶಕ್ತರಾದ ಗಂಡು ಹೆಣ್ಣು ಮಕ್ಕಳು ಇವರೊಡನೆ ಬಂದು ಮುಖಂಡರಾದ ತಮ್ಮ ಸಹೋದರರನ್ನು ಕೂಡಿಕೊಂಡು
29
ತಾವು ದೇವರ ಸೇವಕನಾದ ಮೋಶೆಯ ಮುಖಾಂತರ ಕೊಡಲ್ಪಟ್ಟ ದೇವರ ಧರ್ಮೋಪದೇಶವನ್ನು ಅನುಸರಿಸಿ ತಮ್ಮ ಕರ್ತನಾದ ಯೆಹೋವನ ಎಲ್ಲಾ ಆಜ್ಞಾನಿಯಮವಿಧಿಗಳನ್ನು ಕೈಕೊಂಡು ನಡೆಯುವದಾಗಿ ಆಣೆಯಿಟ್ಟು ಪ್ರಮಾಣಮಾಡಿದರು. ಹೇಗಂದರೆ -
30
ದೇಶನಿವಾಸಿಗಳಿಗೆ ನಮ್ಮ ಹೆಣ್ಣುಗಳನ್ನು ಕೊಡುವದಿಲ್ಲ. ನಮ್ಮ ಮಕ್ಕಳಿಗೋಸ್ಕರ ಅವರಿಂದ ಹೆಣ್ಣು ತೆಗೆದುಕೊಳ್ಳುವದಿಲ್ಲ;
31
ದೇಶನಿವಾಸಿಗಳು ಮಾರುವದಕ್ಕೋಸ್ಕರ ತರುವ ಯಾವ ಸರಕುಗಳನ್ನೂ ಧಾನ್ಯವನ್ನೂ ಸಬ್ಬತ್ ಮೊದಲಾದ ಪರಿಶುದ್ಧ ದಿನಗಳಲ್ಲಿ ಕೊಂಡುಕೊಳ್ಳುವದಿಲ್ಲ; ಪ್ರತಿಯೊಂದು ಏಳನೆಯ ವರುಷ [ಭೂವಿುಯ ಸಾಗುವಳಿಯನ್ನೂ ] ಹೆರರು ಕೊಡಬೇಕಾದ ಸಾಲವನ್ನೂ ಬಿಟ್ಟು ಬಿಡುತ್ತೇವೆ;
32
ವರುಷಕ್ಕೆ ಒಂದು ಶೆಕೆಲಿನ ಮೂರನೆಯ ಭಾಗವನ್ನು ದೇವಾಲಯ ಸೇವೆಗಾಗಿ ಕೊಡಬೇಕೆಂಬ ಕರ್ತವ್ಯವನ್ನು ವಹಿಸಿಕೊಳ್ಳುತ್ತೇವೆ;
33
ಆ ಹಣವು ದೇವರ ಸನ್ನಿಧಿಯಲ್ಲಿಡತಕ್ಕ ರೊಟ್ಟಿ, ನಿತ್ಯಧಾನ್ಯ ನೈವೇದ್ಯ ಇವುಗಳಿಗೋಸ್ಕರವೂ ನಿತ್ಯಸರ್ವಾಂಗಹೋಮ ಮತ್ತು ಸಬ್ಬತ್ ದಿನ, ಅಮಾವಾಸ್ಯೆ, ಜಾತ್ರೆ ಇವುಗಳಲ್ಲಿ ಮಾಡತಕ್ಕ ಸರ್ವಾಂಗಹೋಮ, ಸಮಾಧಾನಯಜ್ಞ, ಇಸ್ರಾಯೇಲ್ಯರ ದೋಷಪರಿಹಾರಾರ್ಥವಾದ ಯಜ್ಞ ಇವುಗಳಿಗೋಸ್ಕರವೂ ನಮ್ಮ ದೇವಾಲಯ ಸಂಬಂಧವಾದ ಬೇರೆ ಎಲ್ಲಾ ಕೆಲಸಕ್ಕೋಸ್ಕರವೂ ವೆಚ್ಚವಾಗಬೇಕು;
34
ಧರ್ಮಶಾಸ್ತ್ರವಿಧಿಗನುಸಾರವಾಗಿ ನಮ್ಮ ದೇವರಾದ ಯೆಹೋವನ ಯಜ್ಞವೇದಿಯ ಮೇಲೆ ಬೆಂಕಿಯುರಿಸುವದಕ್ಕಾಗಿ ವರುಷ ವರುಷ ನೇವಿುತವಾದ ಕಾಲಗಳಲ್ಲಿ ನಮ್ಮ ದೇವಾಲಯಕ್ಕೆ ಕಟ್ಟಿಗೆ ದೊರಕುವ ಹಾಗೆ ಆಯಾಗೋತ್ರಾನುಸಾರ ಕಾಷ್ಠದಾನ ಮಾಡತಕ್ಕವರು ಇಂಥವರು ಎಂಬದನ್ನು ಯಾಜಕರೂ ಲೇವಿಯರೂ ಸಾಧಾರಣ ಜನರೂ ಆಗಿರುವ ನಮ್ಮಲ್ಲಿ ಚೀಟುಹಾಕಿ ಗೊತ್ತುಮಾಡುತ್ತೇವೆ;
35
ನಮ್ಮ ಭೂವಿುಯ ಮತ್ತು ಎಲ್ಲಾ ಹಣ್ಣಿನ ಮರಗಳ ಪ್ರಥಮ ಫಲಗಳನ್ನು ಪ್ರತಿವರುಷವೂ ಯೆಹೋವನ ಆಲಯಕ್ಕೆ ತಂದುಕೊಡುವೆವು;
36
ನಮ್ಮ ಚೊಚ್ಚಲಮಕ್ಕಳ ವಿಷಯದಲ್ಲೂ ನಮ್ಮ ಪಶುಗಳ ಚೊಚ್ಚಲಮರಿಗಳ ವಿಷಯದಲ್ಲೂ ಧರ್ಮಶಾಸ್ತ್ರ ವಿಧಿಗನುಸಾರವಾಗಿ ನಡೆಯುವೆವು; ನಮ್ಮ ಚೊಚ್ಚಲ ಕರುಗಳನ್ನೂ ಚೊಚ್ಚಲ ಆಡುಕುರಿಮರಿಗಳನ್ನೂ ನಮ್ಮ ದೇವಾಲಯಕ್ಕೆ ತಂದು ಅಲ್ಲಿ ಕೆಲಸ ನಡಿಸುತ್ತಿರುವ ಯಾಜಕರಿಗೆ ಕೊಡುವೆವು;
37
ನಾವು ದೇವರಿಗಾಗಿ ಪ್ರತ್ಯೇಕಿಸಿಡತಕ್ಕ ಪ್ರಥಮಫಲದ ಹಿಟ್ಟು, ಹಣ್ಣುಹಂಪಲು, ದ್ರಾಕ್ಷಾರಸ, ಎಣ್ಣೆ ಮೊದಲಾದವುಗಳನ್ನು ಯಾಜಕರಿಗೋಸ್ಕರ ನಮ್ಮ ದೇವರ ಆಲಯದ ಕೊಠಡಿಗಳಲ್ಲಿ ತಂದಿಡುವೆವು; ನಮ್ಮ ಭೂವಿುಯ ಹುಟ್ಟುವಳಿಯ ದಶಮಾಂಶವು ಲೇವಿಯರದಾಗಬೇಕು; ಲೇವಿಯರು ತಾವೇ ಬಂದು ನಮ್ಮ ಸಾಗುವಳಿಯ ಊರುಗಳಲ್ಲಿ ಅದನ್ನು ಕೂಡಿಸಬೇಕು;
38
ಅವರು ದಶಮಾಂಶವನ್ನು ಕೂಡಿಸುವಾಗ ಆರೋನನ ವಂಶದವನಾದ ಯಾಜಕನೊಬ್ಬನು ಅವರ ಸಂಗಡ ಇರಬೇಕು. ಲೇವಿಯರು ತಮಗೆ ದೊರಕಿದ ಭಾಗದ ದಶಮಾಂಶವನ್ನು ದೇವಾಲಯದ ಬಂಡಾರದ ಕೊಠಡಿಗಳಲ್ಲಿಡಬೇಕು,
39
ಇಸ್ರಾಯೇಲ್ಯರೂ ಲೇವಿಯರೂ ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳಲ್ಲಿ ದೇವರಿಗೋಸ್ಕರ ಪ್ರತ್ಯೇಕಿಸತಕ್ಕ ಭಾಗಗಳನ್ನು ತಂದು ಸೇವೆನಡಿಸುತ್ತಿರುವ ಯಾಜಕರು, ದ್ವಾರಪಾಲಕರು, ಗಾಯಕರು ಇವರೂ ಪವಿತ್ರಾಲಯದ ಪಾತ್ರೆಗಳೂ ಇರುವ ಕೊಠಡಿಗಳಲ್ಲಿ ಇಡಬೇಕು. ನಮ್ಮ ದೇವರ ಆಲಯವನ್ನು ಎಂದೂ ಅಲಕ್ಷ್ಯ ಮಾಡುವದಿಲ್ಲ ಎಂದು ಬರೆದುಕೊಟ್ಟರು.
← Chapter 9
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 11 →
All chapters:
1
2
3
4
5
6
7
8
9
10
11
12
13